ಕ್ರಮವೊಂದು ಲಕ್ಷ್ಯವೊಂದುಂಟೇನು ಸೃಷ್ಟಿಯಲಿ? |
ಭ್ರಮಿಪುದೇನಾಗಾಗ ಕರ್ತೃವಿನ ಮನಸು? ||
ಮಮತೆಯುಳ್ಳವನಾತನಾದೊಡೀ ಜೀವಗಳು |
ಶ್ರಮಪಡುವುವೇಕಿಂತು? – ಮಂಕುತಿಮ್ಮ || ಕಗ್ಗ 8 ||
ಭ್ರಮಿಪುದೇನಾಗಾಗ ಕರ್ತೃವಿನ ಮನಸು? ||
ಮಮತೆಯುಳ್ಳವನಾತನಾದೊಡೀ ಜೀವಗಳು |
ಶ್ರಮಪಡುವುವೇಕಿಂತು? – ಮಂಕುತಿಮ್ಮ || ಕಗ್ಗ 8 ||
ಭಗವಂತನ ಲೀಲೆಗೆ ಏನಾಸ್ದರೂ ಕ್ರಮವಿದೆಯೇ.. ಒಂದು ಲಕ್ಶ್ಯವಿದೆಯೇ.. ಏನಾದರೂ ಭ್ರಮೆಯಲ್ಲಿದ್ದಾಗ ಈ ರೀತಿಯ ರಚನೆ ಸಾಧ್ಯವೇ.. ಅವನ ಸೃಷ್ಟಿಯ ಈ ಜೀವಿಗಳು ಏಕೆ ಈ ರೀತಿ ಶ್ರಮ ಪಡುತ್ತವೆ ಎಂಬ ಭಾವಕ್ಕೆ ಬೆಳಕು ಚೆಲ್ಲುವ ಕಗ್ಗವನ್ನು ಓದುತ್ತಿದ್ದಾಗ ಮನಸ್ಸು ಪರಿಪರಿಯಾಗಿ ಯೋಚಿಸಿತು.. ಇದೆ ರೀತಿಯ ಭಾವಪೂರಿತ ಪ್ರಸಂಗ ಭಕ್ತ ಕುಂಬಾರ ಚಿತ್ರದಲ್ಲಿ ನೋಡಿದ್ದೇನೆ ಅನಿಸಿತು..
ಭಕ್ತಿಯ ರಸದಲ್ಲಿ ಮೈಮರೆತಿದ್ದ ಗೋರ... ತನಗೆ ಅರಿವಿಲ್ಲದೆ ತನ್ನ ಮಗುವನ್ನು ಮಣ್ಣಿನಲ್ಲಿ ತುಳಿದು ಅದರ ಅಂತ್ಯಕ್ಕೆ ಕಾರಣನಾಗುತ್ತಾನೆ.. ಈತನ ಪಾಂಡುರಂಗನ ಮೇಲಿನ ಭಕ್ತಿಯ ಪರಾಕಾಷ್ಠೆಯಿಂದ ಕುಪಿತಳಾಗಿದ್ದ ಮಡದಿ.. ಈ ಮನೆಯಲ್ಲಿ ಪಾಂಡುರಂಗನ ಪೂಜೆ ಸಲ್ಲದು ಅಂತ ದೇವರಕೋಣೆಯಿಂದ ಪಾಂಡುರಂಗನ ಮೂರ್ತಿಯನ್ನು ತೆಗೆಯಲು ಹೋದಾಗ ವ್ಯಗ್ರನಾದ ಗೋರನ ಅವತಾರ ಕಂಡು.. ನನ್ನ ಮುಟ್ಟಿದರೆ ಪಾಂಡುರಂಗನ ಮೇಲೆ ಆಣೆ ಎನ್ನುತ್ತಾಳೆ.. ಆ ಆಣೆಯಿಂದ ಆತ ತನ್ನ ಮಡದಿಯಿಂದ ದೂರವಿರುತ್ತಾನೆ.. ಮುಂದೆ ತನ್ನ ಸಂಸಾರಕ್ಕೆ ವಾರಸುದಾರ ಬೇಕು ಎನ್ನುವ ಆಸೆಯಿಂದ ತನ್ನ ತಂಗಿಯನ್ನೇ ತನ್ನ ಗಂಡನಿಗೆ ಮದುವೆ ಮಾಡಿಸಿದರೂ ಕೂಡ.. ಆತ ತನ್ನ ಮೊದಲ ಮಡದಿಯನ್ನು ಹೇಗೆ ನೋಡಿಕೊಂಡಿದ್ದಾನೋ ಅದೇ ರೀತಿ ಎರಡನೇ ಹೆಂಡತಿಯನ್ನು ನೋಡಿಕೊಳಬೇಕು ಎನ್ನುವ ಆತನ ಹೆಣ್ಣು ಕೊಟ್ಟ ಮಾವ ಹೇಳಿದ ಮಾತಿನಿಂದ ಆಕೆಯನ್ನು ಕೂಡ ದೂರವಿಡುತ್ತಾನೆ..
ಒಂದು ವಿಷಾದನೀಯ ಸನ್ನಿವೇಶದಲ್ಲಿ ಇಬ್ಬರೂ ಮಡದಿಯರ ಸ್ಪರ್ಶದಿಂದ ಕುಪಿತನಾಗಿ ತನ್ನ ಕೈಯನ್ನು ಕಡಿದುಕೊಳ್ಳುತ್ತಾನೆ.. ಆ ಸಂದರ್ಭದಲ್ಲಿ ವಿಠಲನೇ ಗೋರನ ಮನೆಗೆ ಮನೆಯಾಳಾಗಿ ಬಂದು ಸೇವೆ ಮಾಡಲು ಶುರು ಮಾಡುತ್ತಾನೆ..
ಇಷ್ಟೆಲ್ಲಾ ಸೇವೆ ಮಾಡಿದರು ತಮ್ಮ ಜೀವನದಲ್ಲಿ ಕಷ್ಟಗಳ ಮಳೆಯನ್ನು ಸುರಿಸುತ್ತಿರುವ ಆ ಪಾಂಡುರಂಗನ ಮೇಲೆ ಕೋಪಗೊಂಡು "ಅತಿಥಿಯಾಗಿರುವ ನಿನ್ನಿಂದ ದುಡಿಸಿಕೊಂಡು ತಿನ್ನುತ್ತಿರುವೆವು.. ಇದಕ್ಕೆಲ್ಲ ಕಾರಣ ಅವನೇ..ಯಾಕೆ ಹೀಗೆಲ್ಲ ನಮ್ಮನ್ನು ಗೋಳು ಹುಯ್ಕೋತಾ ಇದ್ದಾನೆ.. " ಎಂದಾಗ ಆತ "ಇಲ್ಲ ಅಕ್ಕ.. ಕರ್ಮ ಅನ್ನೊದು ಒಂದು ಇರುತ್ತಲ್ಲ ಅದರಿಂದ ಹೀಗೆ ಆಗುತ್ತದೆ" ಎನ್ನುತ್ತಾನೆ..
| ಭಕ್ತ ಕುಂಬಾರ |
ಅಜ್ಜನ ಕಗ್ಗದ ಬರವಣಿಗೆ ಬಲು ತೀಕ್ಷ್ಣ ಮತ್ತು ಆಳ.. ಇಲ್ಲಿ ಮೇಲ್ನೋಟಕ್ಕೆ ಕಗ್ಗ ಪ್ರಶ್ನೆಯಾಗಿ ಅಥವ ಇದೊಂದು ಒಗಟಾಗಿ ಕಂಡು ಬಂದರು.. ಅದರ ಒಳಾರ್ಥವನ್ನು ಅರ್ಥೈಸಿಕೊಂಡು, ಅದಕ್ಕೆ ಒಂದು ಅರ್ಥವನ್ನು ಕಂಡುಕೊಂಡಾಗ ಹೊಳೆಯುವಂಥಹ ಚಕ್ರವ್ಯೂಹದಂತಹ ಕಗ್ಗವಿದು.. ಅದರೊಳಗೆ ಉತ್ತರವಿದು.. ಅಂದರೆ ಪ್ರಶ್ನೆಯನ್ನು ಹೊದ್ದುಕೊಂಡು ಕೂತಿರುವ ಉತ್ತರದ ಕಗ್ಗವಿದು.. !
No comments:
Post a Comment