ಒಗಟೆಯೇನೀ ಸೃಷ್ಟಿ? ಬಾಳಿನರ್ಥವದೇನು? |
ಬಗೆದು ಬಿಡಿಸುವರಾರು ಸೋಜಿಗವನಿದನು? ||
ಜಗವ ನಿರವಿಸಿದ ಕೈಯೊಂದಾದೊಡೇಕಿಂತು |
ಬಗೆಬಗೆಯ ಜೀವಗತಿ? – ಮಂಕುತಿಮ್ಮ || ಕಗ್ಗ 6 ||
ಬಗೆದು ಬಿಡಿಸುವರಾರು ಸೋಜಿಗವನಿದನು? ||
ಜಗವ ನಿರವಿಸಿದ ಕೈಯೊಂದಾದೊಡೇಕಿಂತು |
ಬಗೆಬಗೆಯ ಜೀವಗತಿ? – ಮಂಕುತಿಮ್ಮ || ಕಗ್ಗ 6 ||
ಈ ಜಗತ್ತನ್ನು ನಿರ್ಮಿಸಿದ ಕೈಯಲ್ಲಿ ಎಷ್ಟೊದು ಬಗೆ ಬಗೆಯ ಜೀವಿಗಳು.. ಒಂದು ಇನ್ನೊಂದರ ಭಾವವನ್ನು ಹೋಲುವುದಿಲ್ಲ.. ವಿಭಿನ್ನ ಮನಸ್ಥಿತಿ.. ಈ ಕಗ್ಗದ ಆಂತರ್ಯವನ್ನು ಅರ್ಥ ಮಾಡಿಕೊಳ್ಳುತ್ತ ಕೂತಿದ್ದಾಗ ಹೊಳೆದದ್ದು
ರಾಜಕುಮಾರ್ ಅವರ ದಾರಿ ತಪ್ಪಿದ ಮಗ ಚಿತ್ರ.. ಒಂದೇ ತಾಯಿ ಹೆತ್ತ ಇಬ್ಬರು ಮಕ್ಕಳು.. ಪರಿಸ್ಥಿತಿ, ಪಾಲನೆ, ಪೋಷಣೆ, ವಾತಾವರಣ.. ಒಬ್ಬನನ್ನು ಮರೆಗುಳಿಯಾದರೂ ವಿದ್ಯಾವಂತ ಕಾಲೇಜು ಶಿಕ್ಷಕನನ್ನಾಗಿ ಮಾಡಿದರೆ.. ಇನ್ನೊಬ್ಬ ಕಳ್ಳಕಾಕರ ಗುಂಪಿನಲ್ಲಿ ಅವರ ನಾಯಕನಾಗಿ ಸಮಾಜದಲ್ಲಿ ಕಳ್ಳತನ ದಂಧೆಯಲ್ಲಿ ಬಹುದೂರ ಸಾಗಿರುತ್ತಾನೆ.
ಇಲ್ಲಿ ಅಜ್ಜನ ಕಗ್ಗದಂತೆ ನನ್ನ ಮನದಲ್ಲೂ ಪ್ರಶ್ನೆ ಮೊಳಕೆ ಒಡೆಯಿತು.. ಒಂದೇ ತಾಯಿ, ಅದೇ ರಕ್ತ, ಅದೇ ಭಾವ.. ಆದರೆ ಒಂದು ಸಮಾಜವನ್ನು ಉತ್ತಮವಾಗಿ ಮುನ್ನೆಡೆಸುವ ವಿದ್ಯಾರ್ಥಿಗಳನ್ನು ತಯಾರು ಮಾಡುವ ಶಿಕ್ಷಕ.. ಇನ್ನೊಬ್ಬ ಆ ಉತ್ತಮ ಸಮಾಜದಲ್ಲಿನ ಹುಳುಕುಗಳನ್ನು ತನ್ನ ಉಪಯೋಗಕ್ಕೆ ಬಳಸಿಕೊಂಡು ದರೋಡೆ ಮಾಡುವ ನಾಯಕ..
ಅಂತಹ ವೈರುದ್ಯ ವ್ಯಕ್ತಿ ಚಿತ್ರಣ.. ಇಲ್ಲಿ ಭಗವಂತನ ಕೈವಾಡವೇ ಅಂದರೆ ಇಲ್ಲ ಇಲ್ಲ.. ಅದು ಬೆಳೆದ ಅಥವ ಬೆಳೆಸಿದ ವಾತಾವರಣ..
ಕಗ್ಗದಲ್ಲಿ ಹೇಳಿದಂತೆ.. ಇದು ಒಂದು ಒಗಟೇ ಹೌದು.. ಬಾಳಿನ ಅರ್ಥವನ್ನು ಹುಡುಕುವ ಮನಸ್ಸಿದ್ದರೂ, ಸೋಜಿಗ ಅನಿಸಿದರೂ.. ಇದಕ್ಕೆ ಉತ್ತರ ಸಿಗುತ್ತದೆಯೇ ಅಂದರೆ ಮತ್ತೆ ನಮ್ಮ ಮುಂದೆ ನಿಲ್ಲುವುದು ಪ್ರಶ್ನಾರ್ಥಕ ಚಿನ್ಹೆ!
ಅಜ್ಜನ ಕಗ್ಗಗಳು ಮನಸ್ಸಿನ ಒಳ ಹೊಕ್ಕು ಮನವನ್ನು ಮಂಥನ ಮಾಡುವ ಒಂದು ಕಡಗೋಲು.. !
| ದಾರಿ ತಪ್ಪಿದ ಮಗ - ದ್ವಿಪಾತ್ರ |
No comments:
Post a Comment