ಬದುಕಿಗಾರ್ ನಾಯಕರು; ಏಕನೊ ಅನೇಕರೋ? |
ವಿಧಿಯೊ ಪೌರುಷವೊ ಧರುಮವೊ ಅಂಧಬಲವೋ? ||
ಕುದುರುವುದದೆಂತು ಈಯವ್ಯವಸ್ಥೆಯ ಪಾಡು? |
ಅದಿಗುದಿಯೆ ಗತಿಯೇನೊ? – ಮಂಕುತಿಮ್ಮ || ಕಗ್ಗ 7 ||
ವಿಧಿಯೊ ಪೌರುಷವೊ ಧರುಮವೊ ಅಂಧಬಲವೋ? ||
ಕುದುರುವುದದೆಂತು ಈಯವ್ಯವಸ್ಥೆಯ ಪಾಡು? |
ಅದಿಗುದಿಯೆ ಗತಿಯೇನೊ? – ಮಂಕುತಿಮ್ಮ || ಕಗ್ಗ 7 ||
ಪಟ್ಟಣದಲ್ಲಿ ವಿದ್ಯಾಭ್ಯಾಸ ಮುಗಿಸು ಮರಳಿ ಹಳ್ಳಿಗೆ ಬರುವ ರಾಜೀವ.. ಕಂಡದ್ದು ತನ್ನನ್ನು ಪೋಷಿಸಿ, ಸಾಕಿ ಬೆಳೆಸಿದ ತನ್ನ ಭಾವನ ಕಳೇಬರವನ್ನು.. ಅಲ್ಲಿದ್ದ ಆತನ ಅಕ್ಕ.. "ರಾಜೀವ.. ನನ್ನ ಸೌಭಾಗ್ಯ ಹೊರಟು ಹೋಯಿತು.. " ಅಂತ ಅಳುವಾಗ.. ಆಕೆಯ ಮಕ್ಕಳು ಮಾವ ಅಂತ ರಾಜೇವನನ್ನು ತಬ್ಬಿಕೊಂಡಾಗ.. ರಾಜೀವನ ಮನದಲ್ಲಿ ಬಹುಶಃ ಇದೆ ಪ್ರಶ್ನೆ ಉದ್ಭವಿಸಿರುತ್ತೆ..
ಮುರಿದು ಬಿದ್ದ ತನ್ನ ಅಕ್ಕನ ಸಂಸಾರವನ್ನು ಮತ್ತೆ ಎತ್ತಿ ನಿಲ್ಲಿಸುವ ಛಲ ಹೊತ್ತು ಆ ಹಳ್ಳಿಯ ಪ್ರಮುಖ ರಾಚೂಟಪ್ಪನವರ ಮನೆಗೆ ಬಂದಾಗ.. ರಾಚೂಟಪ್ಪನವರು ಕೂಡ ಈ ಕಗ್ಗದ ತಿರುಳು ಇರುವಂತಹ ಮಾತುಗಳನ್ನೇ ಆಡುತ್ತಾರೆ..
ನಿಜ ಬಂಗಾರದ ಮನುಷ್ಯ ಚಿತ್ರದಲ್ಲಿ ಈ ದೃಶ್ಯ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತಿರುವುದಕ್ಕೆ ಕಾರಣ.. ಆ ನೋಡುಗರ ಮನಸ್ಸಿನಲ್ಲಿಯೂ ಕೂಡ ಹೌದು.. ಈ ವ್ಯವ್ಯಸ್ಥೆಗೆ ಯಾರು ನಾಯಕರು.. ಹೇಗೆ ಈ ಸಂಸಾರ ಎದ್ದು ನಿಲ್ಲುತ್ತದೆ.. ಎನ್ನುವ ಸಂದೇಹ ನಮ್ಮ ಮನದಲ್ಲೂ ಮೂಡುತ್ತದೆ..
ರಾಚೂಟಪ್ಪನವರು "ರಾಜೀವಪ್ಪ... ಮುಂದೇನು ಮಾಡ್ಬೇಕು ಅಂತ ಇದ್ದೀರಾ ರಾಜೇವಪ್ಪ" ಅಂದಾಗ ರಾಜೇವ "ರಾಚೂಟಪ್ಪನವರೇ.. ಮುರಿದು ಬಿದ್ದಿರುವ ನನ್ನ ಅಕ್ಕನ ಸಂಸಾರವನ್ನು ಎತ್ತಿ ನಿಲ್ಲಿಸಬೇಕು.. ಮಕ್ಕಳನ್ನು ಓದಿಸಬೇಕು.. ನನ್ನ ಭಾವನವರ ಕನಸ್ಸನ್ನು ನನಸು ಮಾಡಬೇಕು.. ಇದೆ ನನ್ನ ಗುರಿ " ಎನ್ನುತ್ತಾರೆ..
ಆಗ ರಾಚೂಟಪ್ಪನವರು "ನಿಜ ರಾಜೀವಪ್ಪ .. ನಾವು ನಾಲ್ಕು ಜನಕ್ಕೆ ಸಹಾಯ ಮಾಡಿದರೆ ನಾಲ್ಕು ಮಂದಿ ನಮಗೆ ಸಹಾಯ ಮಾಡುತ್ತಾರೆ ಎನ್ನುವ ಮಾತು ನಿಜ"
ಅಲ್ಲವೇ.. ಬದುಕಿಗೆ ಯಾರು ನಾಯಕರು ಎನ್ನುವ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ.. ಆದರೆ ನಮ್ಮ ಬದುಕಿಗೆ ನಾವೇ ನಾಯಕರು ಎನ್ನುವ ಮಾತು ಎಲ್ಲರೂ ಒಪ್ಪುತ್ತಾರೆ.. ವಿಧಿಲಿಖಿತ ಅದು ಪೂರ್ವ ನಿರ್ಧರಿತ..ಪೌರುಷ ಅದು ಸ್ವಯಾರ್ಜಿತ.. ಧರ್ಮ ಅದು ಸಮಾಜದಲ್ಲಿರುತ್ತದೆ.. ಅಂಧಬಲ .. ಅದು ನಮ್ಮ ಮನೋ ವಿಶ್ವಾಸದ ಮೇಲೆ ನಿಂತಿರುತ್ತದೆ.. ಬದುಕಿಗೆ ಯಾರು ನಾಯಕರು ಎನ್ನುವ ಸಂದೇಹವನ್ನು ಅಳಿಸಿ ಹಾಕಬೇಕಾದವರು ನಾವೇ.. ನಮ್ಮ ಬದುಕಿಗೆ ನಾವೇ ನಾಯಕರು..
ಓದುಗರ ಮನದ ಕಡಲಲ್ಲಿ ಸಂದೇಹ ಎನ್ನುವ ಅಲೆಗಳನ್ನು ತೇಲಿಸಿ, ನಂತರ ಅದಕ್ಕೊಂದು ಪರಿಹಾರವನ್ನು ಕಂಡುಕೊಳ್ಳುವಂಥಹ ನೌಕೆಯನ್ನು ಕೂಡ ಅದರಲ್ಲಿ ತೇಲಿಸುವ ಜಾಣ್ಮೆ ಕಗ್ಗದ ಅಜ್ಜನದು.. !
No comments:
Post a Comment