Tuesday, November 21, 2023

PSLV-C57/Aditya-L1 - ಆದಿತ್ಯ ಕಶ್ಯಪ್

 ಪೇಪರ್ ಅಂತ ಕೂಗುತ್ತಾ ಟಪ್ ಅಂತ ಮನೆ ಮುಂದೆ ಸದ್ದಾಯಿತು.. 

ಮನೆ ಮುಂದೆ ರಂಗೋಲಿ ಹಾಕಲು ಮನೆ ಬಾಗಿಲು ತೆಗೆದು ಹೊರಗೆ ಬಂದರು.. ಬಗ್ಗಿ ಪೇಪರ್ ತೆಗೆದುಕೊಂಡು ಒಮ್ಮೆಲೇ ಹೆಡ್ ಲೈನ್ ನೋಡಿ.. ಹರುಷದಿಂದ ರೀ ಅಂತ ಕೂಗುತ್ತಾ ಒಳಗೆ ಬಂದರು.. 

ಆಗ ತಾನೇ ಸಂಧ್ಯಾವಂದನೆ ಮುಗಿಸಿದ್ದರು.. ಮಡದಿಯ ಕೂಗಿಗೆ ಏನು ಅಂತ ಕಣ್ಣಲ್ಲೇ ಪ್ರಶ್ನೆ ಕೇಳಿದರು.. 

PSLV-C57/Aditya-L1 Mission launched and it is safe in the orbit...am so happy....  

Bharath is really doing great...under Modi ji!

ಒಂದು ಕ್ಶಣ ಅವಕ್ಕಾದರು ಮಡದಿಯ ಇಂಗ್ಲಿಷ್ ಭಾಷೆ ಕೇಳಿ.. ಕೊಂಚ ಕ್ಷಣದಲ್ಲಿಯೇ ಅರಿವಾಯಿತು.. ಅಕ್ಟೋಬರ್ ೨೦೨೦ ರಲ್ಲಿ ಇಲ್ಲಿಗೆ ಬಂದ ಮೇಲೆ ಓದುವ ಹಂಬಲ ಜಾಸ್ತಿಯಾಗಿ ಸರಸ್ವತಿ ವಿದ್ಯಾಲಯದಲ್ಲಿ ಪದವಿ ಓದುತ್ತಿದ್ದಳು.. ಇದೆ ಅಕ್ಟೋಬರ್  ೨೦೨೩ ರಲ್ಲಿ ಅಂತಿಮ ಪರೀಕ್ಷೆ ಇದ್ದು.. ಯಾವುದೇ ವಿಷಯ ಬಾಕಿ ಉಳಿಸಿಕೊಳ್ಳದೆ ವಿಶಾಲಾಕ್ಷಿ ಬಿ ಎ  ಅಂತ ಬೋರ್ಡ್ ಕೂಡ ಬರೆಸಿಕೊಂಡು ಇಟ್ಟುಕೊಂಡಿದ್ದು ನೆನಪಾಯಿತು.. . ಇಂಗ್ಲೀಷಿನಲ್ಲಿ ನಿರರ್ಗಳವಾಗಿ ಮಾತಾಡುತ್ತಿದ್ದಳು . ದೇಶ, ಭಾಷೆ, ರಾಜಕೀಯ, ಕ್ರೀಡೆ, ಸಿನಿಮಾ ಎಲ್ಲವೂ ಕರತಲಾಮಲಕವಾಗಿತ್ತು..ಯಾವುದೇ ವಿಷಯ ಅವಳಿಗೆ ಎಟುಕುತ್ತಿತ್ತು..  ಪರೀಕ್ಷಾ ಕಾಲ.. ಪದವಿ ಪರೀಕ್ಷೆಗೆ ಬಿಟ್ಟು ಬೇರೆ ಯಾವುದೇ ವಿಷಯವನ್ನು ಗಮನಿಸುತ್ತಿರಲಿಲ್ಲ.. ಅಷ್ಟು ಉತ್ಸಾಹ ಓದಿನಲ್ಲಿ..  ಪರೀಕ್ಷೆ ಮುಗಿದಿತ್ತು.. ಹಾಗಾಗಿ ಹಿಂದಿನ ಮಾಸದ ದಿನಪತ್ರಿಕೆಗಳನ್ನು ಒಂದೊದಾಗಿ ಓದುತ್ತಿದ್ದಳು.. 

ಹೌದು ಕಣೆ.. ನಿಜಕ್ಕೂ ನಮ್ಮ ಭಾರತ ಪುಣ್ಯ ಮಾಡಿದೆ.. ಆದರೆ ನನ್ನ ದುರಾದೃಷ್ಟ ನಾನು ಮೋದಿಗೆ ಮತದಾನ ಮಾಡಲು ಆಗಲಿಲ್ಲ ನೀನೆ ಪುಣ್ಯವಂತೆ ೨೦೧೪ ಮತ್ತು ೨೦೧೯ ರ ಲೋಕಸಭೆ ಚುನಾವಣೆಯಲ್ಲಿ ಮುರುಳಿ ಕರೆದುಕೊಂಡು ಹೋಗಿ ಮತದಾನ ಮಾಡಿಸಿದ್ದ.. ಮೋದಿ ಗೆಲುವಲ್ಲಿ ನಿನ್ನ ಮತದ ಪಾತ್ರವೂ ಇದೆ ಎಂದು ಖುಷಿಯಾಗಿದೆ... 

ಹೌದು ಕಣ್ರೀ ನೀವು ಹೇಳೋದು ಸರಿ.. ಭಾರತ ನಿಜಕ್ಕೂ ಪುಣ್ಯ ಮಾಡಿದೆ.. ಮೋದಿಯಂತಹ ನಾಯಕತ್ವ ದೊರಕಿರುವುದು.. ನಿಮಗೆ ಇನ್ನೊಂದು ವಿಷಯ ಗೊತ್ತೇ.. ?

ಅಪ್ಪ ಮಾತಾಡುತ್ತಿದ್ದದ್ದು ಕಡಿಮೆ ಆದರೆ ಕಿವಿ ಮಂದವಾಗಿದ್ದರೂ ಎಲ್ಲವನ್ನೂ ಅರಿಯುತ್ತಿದ್ದರು.. ಎಲ್ಲಾ ವಿಚಾರಗಳೂ ಗೊತ್ತಾಗುತಿತ್ತು.. 

ಏನು ವಿಚಾರ.. 

ನೀವು ಕಳ್ಳರು ಎಲ್ಲವೂ ಗೊತ್ತಿದೆ ಸುಮ್ಮನೆ ಕತೆ ಬಿಡ್ತಾ ಇದ್ದೀರಾ.. ಕೃಷ್ಣವೇಣಿ ದಿನವೂ ದೇವರ ದೀಪ ಹಚ್ಚಿ ಪೂಜೆ ಮಾಡುವಾಗ ಅವಳ ಪ್ರಾರ್ಥನೆ ಕೇಳಿಸಿಕೊಂಡು ಆಶೀರ್ವಾದ ನೀಡಿದ್ದೀರಾ ಸುಮ್ಮನೆ ಕತೆ ಬಿಡ್ತೀರಾ.. ನೀವೇ ಹೇಳಿ.. 

ಇಲ್ಲ ಕಣೆ ನೀನು ಹೇಳು.. ಆ ಖುಷಿ ನಿನ್ನಿಂದಲೇ ಅರಿವಾಗಲಿ.. ನಿನ್ನ ನಗು ಮೊಗ ನೋಡುವುದು ಒಂದು ಖುಷಿ.. 

ರೀ ನಮ್ಮ ಮೊಮ್ಮಗ ಆದಿತ್ಯ ಹೆಚ್ಚಿನ ಓದಿಗಾಗಿ ಇಂಗ್ಲೆಂಡಿನ ಕಾರ್ಡಿಫ್ ಪ್ರದೇಶದ ಕಾಲೇಜಿಗೆ ಹೋಗಿದ್ದಾನೆ . ನನಗೊಂತು ಬಹಳ ಖುಷಿ.. ಇಂಗ್ಲೆಂಡಿನ ಲಂಡನ್ ಸಮೀಪ ಇರುವ ಊರಿನಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಅವನ ಬದುಕಿಗೆ ಉತ್ತಮ ಅಡಿಪಾಯ ಹಾಕಿಕೊಡುವುದು.. ಕೃಷ್ಣವೇಣಿ ತನ್ನ ಬದುಕನ್ನೇ  ಮಗನಿಗೆ ಮುಡಿಪಾಗಿಟ್ಟಿದ್ದಾಳೆ... ಅದು ನಿಜಕ್ಕೂ ಸಾರ್ಥಕ ಕ್ಷಣ.. 

ಹೌದು ಕಣೆ.. ಪಾಪ ಆ ಮಗು ನಮ್ಮ ಮನೆಗೆ ತನ್ನ ಬದುಕನ್ನೇ ಮೀಸಲಿಟ್ಟಿದೆ.. ವಿಜಯ, ಶ್ರೀಕಾಂತ, ಮುರುಳಿ ಎಲ್ಲರ ವೃತ್ತಿ ಬದುಕಿನ ಆರಂಭಕ್ಕೆ ಅವಳೇ ಕಾರಣಕರ್ತೆ.. ಇಂದು ಎಲ್ಲರೂ ಬದುಕಿನಲ್ಲಿ ಒಂದು ಹಂತ ತಲುಪಿ ಗುರಿ ಸಾಧಿಸಿದ್ದಾರೆ ಎಂದರೆ ಅವಳ ಶ್ರಮ ಬಹಳ ಇದೆ.. 

ಹೌದು ಕಣ್ರೀ.. ಆದಿತ್ಯ ಕೂಡ ತುಂಟ ಹುಡುಗ. ಆದರೆ ವಿಮಾನ ನಿಲ್ದಾಣದಲ್ಲಿ ಬಹಳ ಜವಾಬ್ಧಾರಿಯಿಂದ ನೆಡೆದುಕೊಂಡ.. ತನ್ನ ಅಮ್ಮನನ್ನ ತಬ್ಬಿ ಹಿಡಿದು.. ಅಳಬಾರದು.. ಓದುತ್ತೇನೆ, ಬರುತ್ತೇನೆ... ಒಂದು ಕರೆ ಮಾಡು ಸಾಕು ಏನೇ ಸಮಸ್ಯೆ ಇದ್ದರೂ ನಾನಿದ್ದೇನೆ.. ಎಂದು ಹೇಳಿದಾಗ ನಿಜಕ್ಕೂ ಇಲ್ಲಿಂದ ನನಗೆ ಕಣ್ಣು ತುಂಬಿ ಬಂದಿತ್ತು.. ಕೃಷ್ಣವೇಣಿ ಅಳಲಿಲ್ಲ.. ಆದರೆ ಅವಳ ಕಣ್ಣಲ್ಲಿ ನೀರಿತ್ತು.. ಆದರೆ ಅದು ದುಃಖದ ಕಣ್ಣೀರಲ್ಲ ಬದಲಿಗೆ ಅವಳ ಜೀವನ ಪರಿಶ್ರಮದ ಬೆವರು ಕಣ್ಣುಗಳಲ್ಲಿ ಕಂಡಿತ್ತು. ಸಾಧಿಸಿದ ಮುಖಭಾವ.. ಸಾಧಿಸಿದ ಸಂತೃಪ್ತಿ ....!

ನಿಜಕ್ಕೂ ಅನುಗ್ರಹ ಸದನದ ಅನುಗ್ರಹಿತ ಕ್ಷಣಗಳು ಅಂದ್ರೆ ಇವೆ ಕಣೆ. 

ಪುಟ್ಟ ಮಗುವಾಗಿದ್ದಾಗ ಯಾರಾದರೂ ಎತ್ತಿಕೊಂಡರೆ ಅಮ್ಮನ ಹತ್ತಿರ ಹೋಗಬೇಕು ಎನ್ನುವುದನ್ನು ಮುದ್ದು ಮುದ್ದಾಗಿ ಅಮ್ಮತ್ತಾ ಅಮ್ಮತ್ತಾ ಎಂದು ತೊದಲು ಭಾಷೆಯಲ್ಲಿ ಹೇಳುತ್ತಿದ್ದ ಇಂದು ಅಮ್ಮನಿಂದ ಸಾವಿರಾರು ಮೈಲಿಗಳು ದೂರಕ್ಕೆ ಹೋಗಿ ಅಲ್ಲಿ ಓದಲು ಹೋಗಿದ್ದಾನೆ.. ಅವನೇ ಬಟ್ಟೆ ಒಗೆದುಕೊಂಡು, ಅಡಿಗೆ ಮಾಡಿಕೊಂಡು ಜವಾಬ್ಧಾರಿಯಿಂದ ನೆಡೆದುಕೊಳ್ಳುತ್ತಿದ್ದಾನೆ.. 

ಆದಿತ್ಯ ಮಗು.. ನಮ್ಮ ಮನೆಯಿಂದ ಓದಲು ವಿದೇಶಕ್ಕೆ ಹಾರಿದ್ದೀಯಾ.. ನಿನ್ನ ಗುರಿ ಮುಟ್ಟುವ ಹಾದಿಯಲ್ಲಿ ಯಾವುದೇ ಅಡೆತಡೆಗಳು ಬರಬಾರದು.. ಯಾವುದೇ ಅಡಚಣೆಗಳು ನಿನಗೆ ಅಡ್ಡಿಯಾಗಬಾರದು.. ನಿನ್ನ ಗಮನ ನಿನ್ನ ಅಮ್ಮನ ಗುರಿ ತಲುಪುವುದಷ್ಟೇ ಮುಖ್ಯವಾಗಿರಬೇಕು.. ಇನ್ಯಾವುದೇ ಅಡ್ಡಿ ಆತಂಕಗಳು ಬರಬಾರದು.. ಅದೇನೇ ಬಂದರೂ ನಿನ್ನ ಅಜ್ಜಿ ತಾತನನ್ನು ನೆನೆಸಿಕೋ.. ಆ ಕ್ಷಣದಲ್ಲಿ ಅದನ್ನು ದೂರ ಮಾಡುತ್ತೇವೆ.. 

ಹೌದು ಕಣ್ರೀ ಒಳ್ಳೆಯ ಮಾತು.. ಸೆಪ್ಟೆಂಬರ್ ಮಾಸದಲ್ಲಿ ಆದಿತ್ಯನ ಕಡೆ ಪ್ರಪಂಚವೇ ನೋಡುತ್ತಿತ್ತು.. 

ಒಂದು PSLV-C57/Aditya-L1 

ಇನ್ನೊಂದು ಆದಿತ್ಯ ಕಶ್ಯಪ್ 




ಆದಿತ್ಯ ಎಲ್ ೧ ಉಡಾವಣೆ .. ಪ್ರಪಂಚವೇ ನಮ್ಮ ಭಾರತದ ಕಡೆ ನೋಡುವಂತೆ ಮಾಡಿದೆ.. ಸೂರ್ಯನ ಹತ್ತಿರ ನಿಂತು ಸೂರ್ಯನ ವಲಯದಲ್ಲಿ ಆಗುವ ಬದಲಾವಣೆಗಳನ್ನು ನೋಡುವುದಕ್ಕೆ ಈ ಉಡಾವಣೆ ಉಪಯೋಗಕ್ಕೆ ಬರುತ್ತದೆ.. 

ಆದಿತ್ಯ ಕಶ್ಯಪ್ ಸಾಗರಗಳನ್ನು ದಾಟಿ ಲಂಡನ್ನಿಗೆ ಹೋಗಿದ್ದಾನೆ ..  ತಲುಪಿದ್ದಾನೆ.. ಬೆಳೆಯುತ್ತಿದ್ದಾನೆ. ಅವನ ಬೆಳೆವಣಿಗೆಯನ್ನು ಕೋರವಂಗಲ ಕುಟುಂಬ ಎದುರು ನೋಡುತ್ತಿದೆ.. 

ಎರಡೂ ಯೋಜನೆಗಳಿಗೆ ಯಶಸ್ಸಾಗಲಿ ಎಂದು ನಮ್ಮ ಶುಭಹಾರೈಕೆಗಳು.. 

ಶುಭವಾಗಲಿ ಮಗು ಹೋಗಿ ಬಾ.. ಜಯಶಾಲಿಯಾಗಿ ಹಿಂದಿರುಗು... ಅಮ್ಮನ ಆಶೀರ್ವಾದ ಸದಾ ಇದೆ. !!!

ಜೊತೆಗೆ ಜನುಮದಿನದ ಶುಭ ಹಾರೈಕೆಗಳು ನಿನಗೆ.. !

ಇಂತಿ ನಿನ್ನ ಅಜ್ಜಿ ತಾತಾ!!!

Tuesday, November 14, 2023

ಕುಮಾರ ಸಂಭವ.. !!! ಎಪ್ಪತೈದರ ಸಂಭ್ರಮ!!!

ಅದೊಂದು ಸಣ್ಣ ಹಳ್ಳಿ ...  ಹೊಯ್ಸಳರ ಆಳ್ವಿಕೆಗೆ ಒಳಗಾಗಿದ್ದ ಪ್ರದೇಶ.ನೂರಾರು ಕುಟುಂಬಗಳು ಬಾಳಿ ಬದುಕಿದ್ದ ಹಳ್ಳಿಯದು.. ಹತ್ತಾರು ವಕ್ಕಲುಗಳು ವ್ಯವಸಾಯವನ್ನೇ ದುಡಿಮೆ ಮಾಡಿಕೊಂಡಿತ್ತು.. ಕೆಲವಾರು ಕುಟುಂಬಗಳು ಶಾನುಭೋಗಿಕೆ ಮಾಡಿಕೊಂಡಿದ್ದವು.. 

ಹಾಸನದ ಬಳಿಯ ಕೋರವಂಗಲ 

ಅಂತಹ ಒಂದು ಕುಟುಂಬ ರಂಗಸ್ವಾಮಿ ಅವರದ್ದು.. ಶಾನುಭೋಗರಾಗಿ ಬಹಳ ಹೆಸರುವಾಸಿ .. ಅವರಿಂದ ಲಿಖಿತವಾದ ಅನೇಕ ದಾಖಲೆ ಪತ್ರಗಳು, ಒಕ್ಕಣೆಗಳು, ಅನೇಕಾನೇಕ ಮಾರ್ಗಸೂಚಿಗಳು, ಅಹವಾಲು ಪತ್ರಗಳು ಮರು ತಿದ್ದುಪಡಿ ಕಂಡಿದ್ದ ಉದಾಹರಣೆಗಳೇ ಇರಲಿಲ್ಲ.. ಶಾನುಭೋಗರು ರಂಗಸ್ವಾಮಿಗಳ ಪತ್ರ ಎಂದರೆ ಮರು ಮಾತಿಲ್ಲದೆ ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಬೇಕು ಎನ್ನುವ ಅಲಿಖಿತ ಸಂಪ್ರದಾಯದವಿದ್ದ ಕಾಲವದು ಅಂದರೆ ಅವರ ಬರವಣಿಗೆ, ಅದರ ಸಾರ, ಅದರಲ್ಲಿ ಅಡಕವಾಗಿದ್ದ ಕಾನೂನು ರೀತಿಯ ಪದಗಳು, ಅದರ ತಿರುಳು ಎಲ್ಲವೂ ಅರ್ಥಗರ್ಭಿತವಾಗಿದ್ದು ಸಂದರ್ಭವನ್ನು ವಿವರಿಸುವಂತಾಗಿದ್ದದ್ದು ಅವರ ಶಕ್ತಿಶಾಲಿ ಬರವಣಿಗೆಗೆ ಸಿಕ್ಕಿದ್ದ ಗೌರವ. . 

ಕೋರವಂಗಲದ ಅದ್ಭುತ ಕಲೆ -
ಬುಚೇಶ್ವರಾ ದೇವಾಲಯ 

ಅವರ ಶ್ರೀಮತಿ ಸುಬ್ಬನರಸಮ್ಮನವರು ಬಹಳ ಹೆಸರುವಾಸಿ  ನರಸಮ್ಮ ಅಂತಾನೆ ಅವರು ಎಲ್ಲರಲ್ಲೂ ಜನಜನಿತವಾಗಿದ್ದು.. ಅವರ ಮನೆ ಎಂದರೆ ಹೊಟ್ಟೆ ಹಸಿವಿಗೆ ಜಾಗವಿಲ್ಲ ಆದರೆ ಕರುಣೆಗೆ, ಮಮತೆಗೆ ದೇವಾಲಯವಾಗಿತ್ತು.. ಒಮ್ಮೆ ಆ ಊರಿನ ಒಂದು ಹೆಬ್ಬಾಗಿಲಿನ ಬಳಿಯಲ್ಲಿರುವ ಅರಳಿ ಕಟ್ಟೆಯಲ್ಲಿ ಒಂದು ಮಗುವನ್ನು ಕೂರಿಸಿಕೊಂಡು, ಅರಳಿಯ ಎಲೆಯಲ್ಲಿ ತಟ್ಟಿದ ರೊಟ್ಟಿಯನ್ನು ಒಂದು ಪುಟ್ಟ ಮಗುವಿಗೆ ತಿನಿಸುತ್ತಿದ್ದರು.. ಆ ಊರಿನ ತಿಳುವಳಿಕಸ್ಥರಾಗಿದ್ದವರೊಬ್ಬರು ಲಿಂಗಾಚಾರಿಗಳು.. ಅವರ ಮಾತಿನಂತೆ ಸುಬ್ಬನರಸಮ್ಮನವರು ಆ ಮಗುವಿಗೆ ರೊಟ್ಟಿಯನ್ನು ತಿನಿಸುತ್ತಿದ್ದರು..  

ಆಗ ಅಲ್ಲಿಗೆ ಬಂದ ಜೋಗಿ ಸಿದ್ಧರೊಬ್ಬರು.. ಏನಮ್ಮ ಈ ಮಗು.. ಏನಮ್ಮ ಈ ಮಗುವಿನ ಕತೆ... ಶಾಲೆಗೆ ಹೋಗುತ್ತಿಲ್ಲ.. ಆಡುತ್ತಿಲ್ಲ.. ಮಾತಿಲ್ಲ ಕತೆಯಿಲ್ಲ ಬರಿ ರೋಮಾಂಚನ ಅನಿಸುವಂತೆ ಸುಮ್ಮನೆ ಇರುವ ಈ ಮಗುವಿನ ಭವಿಷ್ಯ ನಿಮಗೆ ಕಾಣಿಸುತ್ತಿದೆಯೇ ಅಂದರು.. 

ಸುಬ್ಬನರಸಮ್ಮನವರು ಪಕ್ಕದಲ್ಲಿಯೇ ಇದ್ದ ಒಂದು ಮಡಕೆಯಲ್ಲಿ ಇದ್ದ ನೀರನ್ನು ಕುಡಿದು.. ಒಮ್ಮೆ ಆಗಸ ನೋಡಿ ಕುಮಾರ ಸಂಭವ ಅಂದರು..

ಏನಮ್ಮ ಕುಮಾರ ಸಂಭವವೇ ಇದು ಕಾಳಿದಾಸ ಬರೆದ ಮಹಾಕಾವ್ಯದ ಹೆಸರು . ಅದನ್ನು ಈಗ ಏತಕ್ಕೆ ಹೇಳುತ್ತಿದ್ದೀರಾ..? 

ಕಾಳಿದಾಸ ಬರೆದದ್ದು ಕುಮಾರ ಸಂಭವ.. ಈಗ ನಾನು ಹೇಳೋದು ಕುಮಾರನಲ್ಲಿ ಸಂಭವಿಸೋದು..ಕುಮಾರನಿಗೆ ಸಂಭವಾಗೋದು ..  ಅಂದರೆ ಕುಮಾರನಿಗೆ ಅಸಂಭವ ಅನ್ನೋದು ಇಲ್ಲ .. ಮಗುವಿಗೆ ಮಾತೆ ಪ್ರಬಲ ಅಸ್ತ್ರವಾಗುತ್ತದೆ.. ಈತನನ್ನು ಕಾಯುವುದೇ ಮಾತು., ಇದು ಅವನ ಮಾತೆಯಾದ ನಾನು ಹೇಳುವ ಮಾತೆ ಇದು .. ! 

ಈ ಮಗು. ಶಾಲೆಗೇ ತಡವಾಗಿ ಸೇರುತ್ತೆ.. ಮಗುವಿಗೆ ಕಣ್ಣಿನ ತೊಂದರೆ..  ಕಿವಿಯ ತೊಂದರೆ.. ಒಂದು ಮಗುವಿಗೆ ಏನು ತೊಂದರೆ ಇರಬಾರದೋ ಅದೆಲ್ಲವೂ ಇತ್ತು.. ಹಳ್ಳಿಯ ಹುಡುಗರ ಹಾಗೆ ಮೂಲೆಗುಂಪಾಗುವ ಎಲ್ಲಾ ಸಾಧ್ಯತೆಗಳಿದ್ದರೂ, ಕುಮಾರನ  ಅಕ್ಕ ನಾಗಲಕ್ಷ್ಮಿಯ ಮಾರ್ಗದರ್ಶನದಲ್ಲಿ ವಿದ್ಯಾವಂತನಾಗುತ್ತಾನೆ.. ನಾಗಲಕ್ಷ್ಮಿ ಒಂದನೇ ಪಾಠ ಹೇಳುತ್ತಿದ್ದರೆ ಈ ಮಗು ಅದರ  ಮುಂದಿನ ಪಾಠಗಳನ್ನು  ಓದಿ ಒಪ್ಪಿಸುವ  ಪರಿಯನ್ನು ಕಂಡು ನನ್ನ  ಮಗಳು ನಾಗಲಕ್ಷಿ ಬೆರಗಾಗುತ್ತಿದ್ದಳು..  ಈ ಮನೆ ಪರಿಸ್ಥಿತಿ ಏನೇ ಇದ್ದರೂ ಈತನ ಓದಿಗೆ ಏನೂ ಧಕ್ಕೆ ಬರುವುದಿಲ್ಲ.. ಇವನ ಒಬ್ಬ ಅನುಜಾಗ್ರ ಓದಿನ ಮುಖ್ಯ ಹಂತಕ್ಗೆ ಸಹಾಯ ಮಾಡುತ್ತಾನೆ..ಬರೆಯಲು ಕಾಗದದ ಕೊರತೆ ಕಂಡಾಗ.. ಶಾಲೆ ಮೈದಾನದಲ್ಲಿ ಸಿಕ್ಕುವ ಸಿಗರೇಟ್ ಬಾಕ್ಸ್ ಉಲ್ಟಾ ಮಾಡಿಕೊಂಡು ಖಾಲಿ ಜಾಗದಲ್ಲಿ  ಬರೆದು ಬರೆದು ಅಭ್ಯಾಸ ಮಾಡುತ್ತಾನೆ.. ಶಾಲಾ ಕಾಲೇಜುಗಳಲ್ಲಿ ಬಿಡುವಿನ ತರಗತಿಗಳಿಗೆ ಹೋಗಿ ಅಲ್ಲಿನ ಕಪ್ಪು ಹಲಗೆಯ ಮೇಲೆ ಸೀಮೆ ಸುಣ್ಣದಿಂದ ಬರೆದು ಲೆಕ್ಕಗಳನ್ನು, ವಿಜ್ಞಾನದ ವಿಷಯಗಳನ್ನು ಸಮೀಕರಣಗಳನ್ನು ಬಿಡಿಸುತ್ತಾ  ಅಭ್ಯಾಸ ಮಾಡುತ್ತಾ   ವಿದ್ಯಾಭ್ಯಾಸದಲ್ಲಿ ಹಂತ ಹಂತವಾಗಿ ಏರುತ್ತಾನೆ.. ವಿದ್ಯಾಭ್ಯಾಸದ ಜೊತೆಯಲ್ಲಿಯೇ ಬಳುವಳಿಯಾಗಿ ಬಂದ ಚಿತ್ರಕಲೆ ಕೈ ಹಿಡಿಯುತ್ತದೆ.. ನೋಡಿದ್ದನ್ನು, ಕಲ್ಪಿಸಿದ್ದನ್ನು, ಹಾಗೆ ಕಾಗದದ ಮೇಲೆ ಮೂಡಿಸುವ ಕಲೆ ಕರಗತವಾಗುತ್ತದೆ.. ಶ್ರೇಷ್ಠ ಕಲಾಕಾರನಾಗುವ ಎಲ್ಲಾ ಅರ್ಹತೆಗಳು ಇದ್ದರೂ, ಕಾರಣಾಂತಗಳಿಂದ.. ಬದುಕಲ್ಲಿ ಗೆಲ್ಲುವ ಛಲದಲ್ಲಿ, ಕಲೆಯನ್ನು ಮುಂದುವರೆಸಲಾಗದಿದ್ದರೂ, ಅವಕಾಶ ಸಿಕ್ಕಿದಾಗೆಲ್ಲ, ಕೋರವಂಗಲದ ಕುಟುಂಬ ಕಾರ್ಯಕ್ರಮದಲ್ಲಿಯೇ ಆಗಲಿ, ಬಂಧು ಮಿತ್ರರ ಮನೆಯ ಸಂಭ್ರಮದಲ್ಲಿಯೇ ಆಗಲಿ ತಮ್ಮ ಚಿತ್ರಕಲೆಯ ಹಸಿವನ್ನು ಬಿಂಬಿಸಿ, ಆ ಸಂಭ್ರಮಕ್ಕೆ ಇನ್ನಷ್ಟು ಹೊಳಪು ನೀಡುತ್ತಾನೆ.. ಹಾಗೆಯೇ ಚಿತ್ರಕಲೆಯಲ್ಲಿ ಬೆಳಕಿಗೆ ಬರುತ್ತಿರುವವರಿಗೆ ಉತ್ಸಾಹ ಹುಮ್ಮಸ್ಸು ಸ್ಪೂರ್ತಿಯ ಸೆಲೆಯಾಗಿದ್ದಾನೆ.. 
ಇದಕ್ಕೆ ನಾ ಮೊದಲೇ ಹೇಳಿದ್ದು ಕುಮಾರ ಸಂಭವ ಅಂತ :-)

ಇದು ಒಂದು ಹಂತದ ಕುಮಾರ ಸಂಭವ..ಇದು ಕುಮಾರನಲ್ಲಿ ಸಂಭವಿಸೋದು.. 

ಮುಂದೆ ಮಾಯಾನಗರಿ ಬೆಂಗಳೂರಿನಲ್ಲಿ ಕೆಲಸ ಸಿಕ್ಕಾಗ ಕೂಡ, ಬರುವ ಅಲ್ಪ ಆದಾಯದಲ್ಲಿ ಹೊಟ್ಟೆ ಬಟ್ಟೆ ಮಾಡಿಕೊಂಡು ತನ್ನ ಬದುಕಿಗೂ ಒಂದು ಗುರಿ ಇಟ್ಟುಕೊಂಡು.. ಮುಂದೆ ಒಂದು ಅತ್ಯುತ್ತಮ ಸಾರ್ವಜನಿಕ ಸಂಸ್ಥೆಯಲ್ಲಿ ಸೇರಿಕೊಂಡು ಉತ್ತಮ ಅವಕಾಶಗಳನ್ನು ಮೇಳೈಸಿಕೊಂಡು ಬೆಳೆದ.. ಇವನ ಮ್ಯಾನೇಜರ್ ಏನಪ್ಪಾ ಕುಮಾರ್ ಆ ಮಾಹಿತಿ ಬೇಕಿತ್ತು ನಾಳೆ ಕೊಡಬೇಕು ಎಂದರೆ.. ಆಗಲೇ ಬರೆದಿಟ್ಟುಕೊಂಡಿದ್ದ ಮಾಹಿತಿಯನ್ನು ರಪ್ಪನೆ ಕೊಟ್ಟು ಶಭಾಷ್ ಗಿರಿ ಗಳಿಸುತ್ತಿದ್ದನು..ಇದೆ ಇವನ ಜಾಣ್ಮೆ.. ಆಫೀಸಿನ ಎಲ್ಲಾ ಟೆಲೆಫೋನಿನ ಸಂಖ್ಯೆಗಳು, ಫ್ಯಾಕ್ಟರಿಯಲ್ಲಿ ಉತ್ಪಾದಿಸಲು ಉಪಯೋಗಿಸುತ್ತಿದ್ದ ವಸ್ತುಗಳ ಪಾರ್ಟ್ ನಂಬರ್ ಎಲ್ಲವೂ ಅಂಗೈ ರೇಖೆಯಷ್ಟೇ ಚಿರಪರಿಚಿತ.. ಹಾಗಾಗಿ ಇವರ ತಂಟೆಗೆ ಮ್ಯಾನೇಜ್ಮೆಂಟ್ ಹೋಗುತ್ತಲೇ ಇರಲಿಲ್ಲ.. 

ತನಗೆ ಬರುವ ಚೂರು ಪಾರು ಸಂಪಾದನೆಯಲ್ಲಿ ಅಲ್ಪ ಸ್ವಲ್ಪ ಉಳಿಸುತ್ತಾ ತನ್ನ ಅಕ್ಕ ಗೌರಿಯ ಮನೆಗೆ ಆಗಾಗಿ ಹೋಗಿ ಬರುತ್ತಾ ತನ್ನ ಕೈಲಾದಷ್ಟು ಸಹಾಯ ಮಾಡುತ್ತಲೇ ಇರುತ್ತಾನೆ.. 

ಇನ್ನು ಮುಂದಿನ ಹಂತ ಸಂಭವ ಆಗಲೇ ಬೇಕು ಎಂದು ಹಠ ತೊಟ್ಟು ಒಂದು ರೀತಿಯಲ್ಲಿ ವಿಧಿಗೆ ಸವಾಲೆಸೆದು ಸಂಭವಿಸಿಕೊಂಡ ಕುಮಾರನ ಸಾಹಸಗಾಥೆಯಿದು .. ಎಲ್ಲವನ್ನೂ ತಿಳಿದವರಿಗೂ ಸವಾಲಸೆದು ಗೆಲ್ಲುವ ಛಲಗಾರ.. 

ಮುಂದೆ ಇನ್ನು ಒಂದು ಹಂತದ ಸಂಭವ ನೆಡೆಯುತ್ತದೆ.. ಇವನ ಬಾಳಿನಲ್ಲಿ ಉಷೋದಯವಾಗುತ್ತದೆ..  ಸರ್ಕಾರಿ ಸ್ವಾಮ್ಯ ಸಂಸ್ಥೆಯಲ್ಲಿ ಲೆಕ್ಕಾಚಾರ ವಿಭಾಗದಲ್ಲಿ ಕೆಲಸ ಮಾಡುವ .. ಚೆಲುವೆ.. ದಕ್ಷಿಣ ಭಾರತದ ಚಿತ್ರ ಪ್ರಪಂಚದ ತಾರೆ ಸರಿತಾ .. ಈ ನಮ್ಮ ಉಷಾಳನ್ನು ಹೋಲುತಿದ್ದದ್ದು ವಿಶೇಷ... ಅವಳ ಅಪ್ಪನ ಮನೆಯಲ್ಲಿ ಅನೇಕ ಮಂದಿ ಇವಳನ್ನು ಸರಿತಾ ಅಂತ ಗುರುತಿಸುತ್ತಿದ್ದದ್ದು ಉಂಟು.. ಆದರೆ ಈ ಮಗಳು ನನ್ನ ಕುಟುಂಬದವಳು.. ಇವಳು ಸರಿತಾಳನ್ನು ಹೋಲುತ್ತಿದ್ದಳು ಎಂದರೆ ನನ್ನ ಮನಸ್ಸಿಗೆ ಕಷ್ಟ.. ಸರಿತಾ ಇವಳನ್ನು ಹೋಲುತಿದ್ದಳು ಎನ್ನುವುದು ನನಗೆ ಸರಿ ಕಾಣುತ್ತೆ.... 

ಅರಳಿ ಕಟ್ಟೆಯ ಸುತ್ತಲೂ ನೆರೆದಿದ್ದ ಹಳ್ಳಿಯ ಮಂದಿ ಒಮ್ಮೆ ನಕ್ಕರೂ .. ಅದ್ಭುತವಾದ ನಾಳಿನ ಬದುಕನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಿದ್ದ ನರಸಮ್ಮನವರ ಮುಂದಿನ ಮಾತುಗಳು ಮಿಸ್ ಆಗಬಾರದೆಂದು ಮತ್ತೆ ಗಮನವಿಟ್ಟು ಕೇಳತೊಡಗಿದರು.. ಜೋಗಿ ಸಿದ್ದರು ಯಾವುದೋ ಮಾಯಾಜಾಲದಲ್ಲಿ ಇರುವವರಂತೆ ಅರಳಿ ಕಟ್ಟೆಯಲ್ಲಿ ಮೈ ಮರೆತು ಕೂತುಬಿಟ್ಟಿದ್ದರು. 

ಕಿರಿಯರ ಜೊತೆ ಕಿರಿಯರಾಗಿ.. ಹಿರಿಯರ ಜೊತೆ ಹಿರಿಯರಾಗಿ.. ಮಕ್ಕಳ ಜೊತೆ ಮಕ್ಕಳಾಗಿ ಜಗತ್ತಿನ ಎಲ್ಲಾ ವಿಷಯಗಳ ಬಗ್ಗೆ ನಿರರ್ಗಳವಾಗಿ ಮಾತಾಡುವ. .ತನ್ನ ಜೊತೆ ಬೆಳೆದ ತಮ್ಮಂದಿರನ್ನು, ತಂಗಿಯರನ್ನು  ತನ್ನ ಮಕ್ಕಳಂತೆ ಪೋಷಿಸಿದ ತಾಯಿ ನನ್ನ ಸೊಸೆ ಉಷಾ. ನೋಡಲು ಸುಂದರಿ.. ನಗುವಾಗ ಅವಳ ಮೊಗವನ್ನು ನೋಡಲು ಚೆನ್ನ.. ಕುಮಾರ ಈ ಚಲುವೆಗೆ ಮನಸೋತಿದ್ದರಲ್ಲಿ ಯಾವುದೇ ಅನುಮಾನವಿಲ್ಲ. ಕೆಲಸ ಮಾಡುತ್ತಿದ್ದರೂ ಓದುವ ಹಸಿವು ಇಂಗಿರಲಿಲ್ಲ.. ಸ್ಪರ್ಧಾತ್ಮಕ ಪರೀಕ್ಷೆಗಳು, ಮತ್ತಿತರ ಪರೀಕ್ಷೆಗಳು ಹೀಗೆ ಯಾವುದೇ ರೀತಿಯಲ್ಲಿ ಓದುವುದು ಪ್ರಶ್ನೆಗಳನ್ನು ಮನೆಯಲ್ಲಿಯೇ ಕೂತು  ಉತ್ತರಿಸುವುದು, .  ಅಂಚೆ ಮೂಲಕ ಕಳಿಸುವುದು.. ಹೀಗೆ ಓದುವುದರ ಹಸಿವು ಸಾಗಿತ್ತು.. ಪದರಂಗ, ಪದಬಂಧ  ನೆಚ್ಚಿನ ಹವ್ಯಾಸ.. ಸಂಗೀತದಲ್ಲಿ ಅಪಾರ ಆಸಕ್ತಿ, ಕಾನಡ, ಹಂಸ, ಶಿವರಂಜಿನಿ, ದರ್ಬಾರಿ ಹೀಗೆ ಅನೇಕಾನೇಕ ರಾಗಗಳನ್ನು ಗುರುತಿಸುವುದು ಈಕೆಯ ವಿಶೇಷತೆ.. 

ಈ ಮುದ್ದು ಕುಟುಂಬ ಮಾಯಾನಗರಿಯಲ್ಲಿ ಇಬ್ಬರೂ ತಮ್ಮತಮ್ಮ ಬದುಕನ್ನು ರೂಪಿಸಿಕೊಳ್ಳಲು ಹೊರಟಾಗ ಸಂಭವಿಸಿದ್ದು ಎರಡು ನಕ್ಷತ್ರಗಳು. ಒಂದು ಮನೋಜವಂ ಮಾರುತ ತುಲ್ಯ ವೇಗಂ ಎನ್ನುವಂತೆ ಹುಟ್ಟಿದ  ಮಗು ಮನೋಜ ಅರ್ಥಾತ್ ದೀಪಕ್.. ಇನ್ನೊಂದು ಮಗು ಹಿಂದೂಗಳ ಹಬ್ಬಗಳಿಗೆ ಬೆಳಕು ನೀಡುವ..ತಮಸ್ಸು ಕಳೆಯುವ ಕಾರ್ತಿಕ ಮಾಸದ ಹೆಸರು ಹೊತ್ತ ಕಾರ್ತಿಕ್.. 

ಎರಡು ಮುದ್ದಾದ ಗೊಂಬೆಗಳ ಜೊತೆಯಲ್ಲಿ ಸಂಸಾರವೂ ಬೆಳೆಯಿತು. .ಹಾಗೆಯೇ ಕಂಡ ಕನಸ್ಸುಗಳು ನನಸಾಯಿತು... ಮಕ್ಕಳ ಜೊತೆಯಲ್ಲಿ ಸಣ್ಣ ಪುಟ್ಟ ಪಿಕ್ಣಿಕ್. ಹೋಗುವುದು .. ಫೋಟೋಗಳನ್ನು ತೆಗೆಯುವುದು.. ಅದನ್ನು ಮುದ್ರಿಸಿ ಖುಷಿ ಪಡುವುದು.. ಊರೂರು ಪ್ರವಾಸ.. ಮನಸ್ಸಿಗೆ ಬಂದಾಗ ತಿಂಡಿಗಳನ್ನು.. ಪಾನೀಯಗಳನ್ನು ಚೀಲಕ್ಕೆ ಹಾಕಿಕೊಂಡು ಹೊರಟರೆ ಮುಗೀತು ವಾಪಸ್ ಬರುವಾಗ ಅದ್ಭುತ ನೆನಪುಗಳನ್ನು ಹೊತ್ತು ತರುತ್ತಿದ್ದರು.. ಇದೆ ಈ ಮುದ್ದು ಕುಟುಂಬದ ಮಂತ್ರವಾಗಿತ್ತು..  ಕುಮಾರನಂತೂ ಹಿಮಾಲಯ ಶ್ರೇಣಿಗಳ ಕಡೆಗೆ ಅನೇಕ ಚಾರಣಗಳನ್ನು ಮಾಡಿ ಅಲ್ಲಿನ ಅನುಭವಗಳನ್ನು ಅವಕಾಶ ಸಿಕ್ಕಿದ ಕಡೆಯೆಲ್ಲಾ ಹೇಳುತ್ತಾನೆ.. 

ಬೆಂದಕಾಳೂರಿನಲ್ಲಿ ಒಂದು ಸೂರು ನಿಲ್ಲಿಸುವುದು ಎಲ್ಲರ ಕನಸ್ಸು ಹೌದು.. ಅದನ್ನು ನನಸ್ಸು ಮಾಡೋದಕ್ಕೆ ಎಲ್ಲರೂ ಪ್ರಯತ್ನಿಸುವುದು ಹೌದು.. ಉಳಿದುಕೊಂಡದ್ದು, ಉಳಿಸಿಕೊಂಡದ್ದು. . ಜೊತೆ ಮಾಡಿದ್ದು ಎಲ್ಲವನ್ನು ಸೇರಿಸಿ ಒಂದು ಸೂರು ಮಾಡಿಕೊಂಡರು ನಮ್ಮ ಕುಮಾರ-ಉಷಾ..ಕುಮಾರ-ಉಷಾರ ಮಕ್ಕಳು ಬೆಳೆದವು ವಿದ್ಯಾವಂತರಾದವು.. 

ಒಬ್ಬ ವೃತ್ತಿಪರತೆಯಿಂದ ಕ್ರೀಡಾಕ್ಷೇತ್ರದಲ್ಲಿ ಬೆಳಗುತ್ತಿದ್ದಾನೆ.. ಅವನೇ ದೀಪಕ್.. ಅವನ ಮುದ್ದಿನ ಮನೋರಮೆ ರಮ್ಯಾ.. ಅವಳು ಬಂದಳು ರಮ್ಯಾ ಚೈತ್ರ ಕಾಲ ಶುರುವಾಯಿತು.. ಆ ಚೈತ್ರಕಾಲದಲ್ಲಿ ಮಾವಿನ ಹೂವು ಹಣ್ಣಾಗಿ ಸಂಭವವಾಗಿದ್ದು ಶಾರ್ವರಿ.. ನನ್ನ ಮಗನ ಸೊಸೆ ತನ್ನ ಎತ್ತರದಷ್ಟೇ ಎತ್ತರ ನಿಂತು  ಹೆಗಲಿಗೆ ಹೆಗಲು ಕೊಟ್ಟು ಜೊತೆ ನಿಂತು ಗಟ್ಟಿಯಾಗಿಸಿದ್ದು ಈ ಜೋಡಿಯ ಮುದ್ದಾದ ಸಂಸಾರ.. 

ಸೈಬರ್ ಯುಗದೊಳ್ ಒಂದು  ಮಧುರ  ಪ್ರೇಮ ಕಾವ್ಯ….ಮಾಹಿತಿ ತಂತ್ರಜ್ಞಾನದಲ್ಲಿ ಬೆಳೆದ ಕಾರ್ತಿಕ್ ಬದುಕನ್ನು ಪ್ರೇಮಮಯಗೊಳಿಸಿದವಳು ಮಧುರ.. ಬ್ಯೂಟಿ ವಿಥ್ ಬ್ರೈನ್ ಎನ್ನುವ ಮಾತು  ಇವಳಿಗೆ ಅನ್ವಯಿಸುತ್ತದೆ ...  ಮಧುರ ತನ್ನ ಮುದ್ದಾದ ಪತಿರಾಯನ ಜೊತೆ ಬದುಕಿನ ಸಮೀಕರಣ ಬಿಡಿಸುತ್ತಾ ಮುದ್ದಾದ ಮಕ್ಕಳು ಪ್ರೀತಿಯ ಸಿಂಚನ.. ಮಧುರ ಮಾತಿನ ಇಂಪನಳಲ್ಲಿ ಬದುಕಿನ ಸಾರ್ಥಕತೆಯನ್ನು ಅನುಭವಿಸುತ್ತಿದ್ದಾರೆ.. .. 





ಇಂತಹ ಅಮರ ಮಧುರ ಪ್ರೇಮ ತುಂಬಿದ ಕುಟುಂಬ ಬೆಂದಕಾಳೂರಿನಲ್ಲಿ ಕಾಲೂರಿ ನಿಂತಿದ್ದು.. ಬೆಳೆದದ್ದು.. ಬೆಳೆಯುವುದು.. ಹರಡುವುದು ನೋಡುವುದೇ ಒಂದು ಭಾಗ್ಯ.. 

ಇದೆಲ್ಲ ಒಂದು ಟ್ರಾಕಿನಲ್ಲಿ ಓಡುತ್ತಿದ್ದರೆ ... ಚಟುವಟಿಕೆಯ ಕುಮಾರ ಇದರ ಜೊತೆಯಲ್ಲಿ ಗ್ರಹಗತಿಗಳ ಬಗ್ಗೆ ಮಾಹಿತಿ ಕಲಿತು.. ಅದರಲ್ಲಿ ಉನ್ನತ ಮಟ್ಟದಲ್ಲಿ ವಿದ್ಯಾರ್ಹತೆ ಸಂಪಾದಿಸಿ. ಅನೇಕ ಕಿರಿ ಹಿರಿಯರಿಗೆ ಮಾರ್ಗದರ್ಶನ ಮಾಡುತ್ತಾ.. ಅನೇಕಾನೇಕ ಬದುಕಿಗೆ ಬೆಳಕಾಗಿದ್ದಾನೆ .. ನನ್ನ ಮಗಳು ನಾಗಲಕ್ಷ್ಮಿಯ  ಮಗ ನಾಗಭೂಷಣ ಮುಂದೆ ಜ್ಯೋತಿಶ್ಯಾಸ್ತ್ರದಲ್ಲಿ ಅದ್ಭುತ ಸಾಧನೆ ಮಾಡುತ್ತಾ ಹಾಗೂ  ಆಧ್ಯಾತ್ಮಿಕ ಜಗತ್ತಿನಲ್ಲಿ ತನ್ನದೇ ಒಂದು ಸ್ಥಾನ ಕಂಡುಕೊಳ್ಳುತ್ತಾ ಇರುವ.. ಅವನ ಜೊತೆಯಲ್ಲಿ ಕುಮಾರನು ನೆಡೆಯುತ್ತಾ ತನಗೆ ತಿಳಿದ ವಿಷಯಗಳನ್ನು ಹರಡುತ್ತ್ತಾ ಬೆಳೆಯುತ್ತಿದ್ದಾನೆ .. ಬೆಳೆಸುತಿದ್ದಾನೆ… 

ಸುಬ್ಬನರಸಮ್ಮನವರು ಆಗಸ ನೋಡುತ್ತಾ "ನೋಡಿ ಚಾರಿಗಳೇ ಮೇರಾ ನಾಮ್ ಜೋಕರ್ ಚಿತ್ರದ ಹಾಡಿನಂತೆ.. ಕಲ್ ಖೇಲ್ ಮೇ ಹಮ್ ಹೊ ನಹೋ  ಗರ್ಧಿಶ್ ಮೇ ತಾರೆ ರಹಂಗೆ ಸದಾ ಎನ್ನುವಂತೆ.. ಕುಮಾರ ಸಂಭವಂ ಲೇಖನದಿ ಹೇಳಿರುವಂತೆ ಕುಮಾರನ ಕುಟುಂಬದ ಅತ್ಯುತ್ತಮ ಮಜಲನ್ನು ನಾವು ಭುವಿಯಿಂದ ನೋಡದೆ ಇರಬಹದು ಆದರೆ ಧ್ರುವ ನಕ್ಷತ್ರದ ಹಾಗೆ ಆಗಸದಿಂದ ಖಂಡಿತ ನೋಡುತ್ತಿರುತ್ತೇವೆ ... ಹರಸುತ್ತಿರುತ್ತೇವೆ.. ಅವನ ಹಠ ಸಾಧನೆಯಂತೆ ಸದಾ ಶುಭವೇ ಆಗುತ್ತದೆ.. ಆಗುತ್ತಿರುತ್ತದೆ.. "

ಕುಮಾರ ಸಂಭವಂ 
ಉಷಾ ಮಾರ್ಗದರ್ಶನಂ 
ರಮ್ಯಾ ಚೈತ್ರ ಕಾಲದಿ ದೀಪಕ ರಾಗ ಹಾಡಿತಂ  
ಸೈಬರ್ ಯುಗದೊಳ್ ಅಮರ ಮಧುರ ಕಾರ್ತಿಕ ಪ್ರೇಮಂ 
ಇವರುಗಳೆಲ್ಲ ಕೈಜೋಡಿಸಿರುವಾಗ ಎಲ್ಲವೂ ಸಂಭವಂ ಸಂಭವಂ ಸಂಭ್ರಮಂ !!!!
ಕುಮಾರನಿಗೆ ಎಪ್ಪತ್ತೈದರ ಸಂಭ್ರಮಂ!!!



ಅಂದು ಕಾಳಿದಾಸ ಬರೆದದ್ದು ಕುಮಾರ ಸಂಭವಂ ,, ನನ್ನ ಕಿರಿಮಗನಿಗೆ ನಾ ಭವಿಷ್ಯ ರೂಪಿಸಿ ಅವನಿಗೆ ಹೇಳಿದ್ದು ಕುಮಾರನಿಗೆ ಎಲ್ಲವೂ ಸಂಭವಂ!!!

ಅಂದದ ಬದುಕಿಗೆ ಚಂದದ ಚೌಕಟ್ಟು  
ಎಪ್ಪತೈದರ ಸಂಭ್ರಮ !!!

(ಮಾತೃ ದೇವೋಭವ ಶ್ರೀಮತಿ ಸುಬ್ಬನರಸಮ್ಮನವರ ನಿರೂಪಣೆಯಾಗಿರುವುದರಿಂದ ಏಕವಚನದ ಉಪಯೋಗವಾಗಿದೆ.. ಮತ್ತೆ ಭೂತ ಭವಿಷ್ಯತ್ ವರ್ತಮಾನದಲ್ಲಿ ಓಡಾಡುತ್ತಾ ನಿರೂಪಣೆ ಮಾಡಿರುವುದರಿಂದ ಎರಡು ಆಯಾಮದಲ್ಲಿ ಈ ಲೇಖನ ಮೂಡಿ ಬಂದಿದೆ.. )

Saturday, October 28, 2023

ಕೆರೆಯ ಹತ್ತಿರ ಕುದುರೆಯೋ .. ಕುದುರೆಯ ಹತ್ತಿರ ಕೆರೆಯೋ

ಮಧುರ ಮಕ್ಕಳೇ.. 

ಇನ್ನೂ ಮುರಳಿ ಓದಲು ಶುರು ಮಾಡಿರಲಿಲ್ಲ.. 

ಒಬ್ಬ ಬಿಳಿವಸ್ತ್ರ ಧಾರಿ ಎದ್ದು ನಿಂತ.. ಕುರುಚಲು ಫ್ರೆಂಚ್ ಗಡ್ಡ .. ಹಣೆಯಲ್ಲಿ ಚಂದನದ ಜೊತೆ ಕುಂಕುಮ.. ನೀಟಾಗಿ ಕ್ರಾಪ್ ತೆಗೆದು ಬಾಚಿದ್ದ ತಲೆಗೂದಲು.. ಎಡಗೈಗೆ ಒಂದು ಬೆಳ್ಳಿಯ ಬಳೆ .. ಬಲಗೈಯಲ್ಲಿ ವಾಚ್.. ಜೊತೆಗೆ ಆತನ ತಂಗಿ ಕಟ್ಟಿದ್ದ ರಕ್ಷಾ ಬಂಧನದ ರಾಖಿ.. 

"ಅಜ್ಜ ಇವತ್ತು ಒಂದು ಪುಟ್ಟ ಕಥೆ ಹೇಳ್ತೀಯ.. ನಿನ್ನ ಬಾಯಲ್ಲಿ ಚಂದದ ಕತೆ ಚೆನ್ನಾಗಿರುತ್ತೆ.. ಮತ್ತು ನೀತಿಯುಳ್ಳ ಕಥೆಯಾಗಿರುತ್ತೆ.. ಹೇಳು ಅಜ್ಜ"

"ಮಧುರ ಮಕ್ಕಳೇ.. ..ನಿಮ್ಮ ನಡುವಿನಿಂದ ಎದ್ದು ಬಂದ ಈ ಹುಡುಗ ಹೇಳಿದಂತೆ ಇಂದು ಜ್ಞಾನ ಕೊಡುವ ಒಂದು ಪುಟ್ಟ ಘಟನೆ ಹೇಳುತ್ತೇನೆ ಕೇಳಿ.. "

ಪ್ರಶ್ನೆ: ಕುದುರೆಯ ಹತ್ತಿರವೇ ಯಾವಾಗ ಕೆರೆ ಬರುತ್ತದೆ?.. ಬರಲು ಸಾಧ್ಯವೇ?

ಉತ್ತರ: ಭಗವಂತನಿಗೆ ಸಂಪೂರ್ಣ ಶರಣಾದಾಗ ಕುದುರೆಯ ಹತ್ತಿರವೇ ಕೆರೆ ಬರುತ್ತದೆ!!!

ಗೀತೆ : ನಾನೂ ನೀನು ನೆಂಟರಯ್ಯ ನಮಗೆ ಭೇದ ಇಲ್ಲವಯ್ಯಾ.. ವಿಠಲ ರಂಗಾ.. 


ಓಂ ಶಾಂತಿ.... ಮಕ್ಕಳೇ ಮಹಾರಾಷ್ಟ್ರದಲ್ಲಿರುವ ಪಂಡರಾಪುರದ ವಿಠಲನ ಪರಮ ಭಕ್ತ ..ಗೋರಾ ಎನ್ನುವ ಕುಂಬಾರ ಅರ್ಥಾತ್ ಮಣ್ಣಿನಿಂದ ಮಡಕೆ ಕುಡಿಕೆ ಮಣ್ಣಿನ ಸಾಮಾನುಗಳನ್ನು ಮಾಡುತ್ತಾ ಸಂತೆಯಲ್ಲಿ ಮಾರಿ ಕುಟುಂಬವನ್ನು ನೆಡೆಸುತ್ತಿದ್ದ ಪರಮ ಭಕ್ತ.. ಸದಾ ಭಾವಂತನ ನಾಮಸ್ಮರಣೆಯಲ್ಲಿಯೇ ಪ್ರತಿ ಕ್ಷಣವನ್ನು ಕಳೆಯುತ್ತಿದ್ದ ಮಹಾನ್ ಭಕ್ತ.. 

ಕತೆಯನ್ನು ಪುಟ್ಟದಾಗ ಮೊಟಕು ಮಾಡಿ ಹೇಳುತ್ತೇನೆ.. ಗೋರನನ್ನು ಪುಟಕ್ಕೆ ಇಟ್ಟ ಚಿನ್ನ ಮಾಡಬೇಕು ಎಂಬ ಸಂಕಲ್ಪದಿಂದ ಭಗವಂತ ಗೋರನಿಗೆ ನಾನಾ ಪರೀಕ್ಷೆ ಒಡ್ಡಿ ಆತನ ಎರಡು ಕೈಗಳನ್ನೂ ಕಳೆದುಕೊಳ್ಳುವ ಹಾಗೆ ಮಾಡುತ್ತಾನೆ.. ನಂತರ ಆತನ ಸೇವೆಗಾಗಿ ಸಾಕ್ಷತ್ ವಿಠಲನೇ ಆತನ ಮನೆಗೆ ರಂಗ ಎಂಬ ಹೆಸರಿನಿಂದ ಸೇವಕನಾಗಿ ಬರುತ್ತಾನೆ.. 

ಸ್ವಲ್ಪ ಸಮಯದ ನಂತರ.. ಗುಡಿಯಲ್ಲಿ ವಿಠಲನನ್ನು ಕಾಣದೆ ಪರಿತಪಿಸುವ ಸಂತ ನಾಮದೇವರು ಅಲ್ಲಿದ್ದ ವಿಠಲನ ಮೂರ್ತಿಯ ಮುಂದೆ ನನ್ನ ವಿಠಲ ಎಲ್ಲಿ ಎಂದು ಪ್ರಶ್ನಿಸಿದಾಗ.. ಮೂರ್ತಿಯಿಂದ ವಿಠಲನ ರಾಣಿ "ನಾಮದೇವ ಭಕ್ತ ವತ್ಸಲ ತನ್ನ ಭಕ್ತರ ಮನೆಯಲ್ಲಿ ಸೇವೆ ಮಾಡಿಕೊಂಡಿದ್ದಾರೆ ಎಂದು ಉತ್ತರ ಬರುತ್ತದೆ.. " ಅಚ್ಚರಿಗೊಂಡ ನಾಮದೇವರು ಎಲ್ಲಿ ಮನೆ ಎಂದು ವಿಚಾರಿಸಿದಾಗ ಗೋರನ ಮನೆ ಎಂದು ಉತ್ತರ ಬರುತ್ತದೆ.. 

ಅಲ್ಲಿಂದ ಕಟ್ ಮಾಡಿ ಗೋರನ ಮನೆಗೆ ಬರುವ ನಾಮದೇವರು.. ಗೋರಣ್ಣ ನನ್ನ ವಿಠಲನನ್ನು ತೋರಿಸು ಎಂದಾಗ... "ಇಲ್ಲೆಲ್ಲಿ ವಿಠಲ ಸ್ವಾಮೀ.. ಪಂಡರಾಪುರದಲ್ಲಿ.. ಎಷ್ಟೋ ವರ್ಷಗಳ ಅಸೆ  .. ಪಂಡರಾಪುರದಲ್ಲಿ ವಿಠಲನ ದರ್ಶನ ಮಾಡಬೇಕು.. "

ನೀನೇಕೆ ಅಲ್ಲಿಗೆ ಹೋಗಬೇಕು ಗೋರಣ್ಣ ವಿಠಲನೇ ನಿನ್ನ ಮನೆಗೆ ಬಂದಿದ್ದಾನೆ.. ಎಲ್ಲಿ ತೋರಿಸು.. ಎಲ್ಲಿ ತೋರಿಸು.. 

"ನನ್ನ ಮನೆಯಲ್ಲಿ ನಾನು, ನನ್ನ ಮಡದಿಯರು ರಂಗಣ್ಣ ಇಷ್ಟೇ" ಅಂತ ಇನ್ನೂ ಪೂರ್ಣ ಮಾಡಿರಲಿಲ್ಲ ಅಷ್ಟಕ್ಕೇ ಸಂತ ನಾಮದೇವರು. ರಂಗಣ್ಣನೇ ನನ್ನ ವಿಠಲ.. ತೋರಿಸು ತೋರಿಸು.. ಎಂಥ ಅಂದಾಗ ಅಚ್ಚರಿ, ಗಾಬರಿ, ಸಂತಸ. .ದುಃಖ ಹತಾಶೆ ಎಲ್ಲವೂ ಒಮ್ಮೆಲೇ ಗೋರನಿಗೆ

ಮಕ್ಕಳೇ.. ನಾನು ಪ್ರಶ್ನೆ ಕೇಳಿದ್ದೆ ಕುದುರೆ ಕೆರೆಯ ಹತ್ತಿರಕ್ಕೆ ಹೋಗಬೇಕು ಇಲ್ಲವೇ ಕೆರೆಯೇ ಕುದುರೆ ಹತ್ತಿರ ಬರಬೇಕು.. ಇಂದು ಕುದುರೆಯೇ ಕೆರೆಯ ಹತ್ತಿರಕ್ಕೆ ಬಂದಿದೆ.. ಇದೆ ಭಕ್ತರ ಪುಣ್ಯ.. 

ಎಲ್ಲರಿಗೂ ಸಂತಸ.. ಮತ್ತೆ ಆ ಹುಡುಗ ಎದ್ದು ನಿಂತು.. "ಅಜ್ಜ ಭಕ್ತರ ಪುಣ್ಯವೇ ಭಗವಂತ ನೀಡುವ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಹಾಗೆಮಾಡುತ್ತದೆ .. ಹಾಗೆಯೇ ಗೋರನ ಅಪರಿಮಿತ ಭಕ್ತಿ. .ಭಗವಂತನನ್ನೇ ಅವನ ಮನೆಗೆ ಕರೆಸಿತು.. ಅಲ್ಲವೇ ಅಜ್ಜ"

"ಹೌದು ಮಗು.. ಇಂದು ಕೂಡ ಹಾಗೆಯೇ ಆಯಿತು ನೋಡು.. ಒಬ್ಬರು ನನ್ನ ಕ್ಷೇತ್ರದಲ್ಲಿ ಸೇವೆ ಮಾಡುತ್ತಾ ಮೂವತ್ತು ವರ್ಷಗಳು ಕಳೆದಿದ್ದಾರೆ.. ಅವರ ಸಂಪರ್ಕಕ್ಕೆ ಬಂದ ಯಾರನ್ನೂ ಸುಮ್ಮನೆ ಕೂರಲು ಬಿಡದೆ ಒಂದಲ್ಲ ಒಂದು ಸೇವೆಯಲ್ಲಿ ಎಲ್ಲರನ್ನೂ ತೊಡಗಿಸುವ ಮುಗ್ಧ ಹೆಣ್ಣು ಮಗು ... ಅವರ ಪತಿರಾಯ ತನ್ನದೇ ಆದ ರೀತಿಯಲ್ಲಿ ತಾನು ನಂಬಿದ ಸರಿ ದಾರಿಯಲ್ಲಿ ನೆಡೆಯುತ್ತಾ ತನ್ನ ಬರವಣಿಗೆಯಿಂದ ಎಲ್ಲರಿಗೂ ಇಷ್ಟವಾಗುವ ಹುಡುಗ.. ಅವರ ಮಗಳು ಗರ್ಭದಲ್ಲಿದ್ದಾಗಲೇ ಈ ಶಕ್ತಿಯನ್ನು ಬಳುವಳಿಯಾಗಿ ಪಡೆದವಳು. ಇನ್ನೊಬ್ಬ ಮಗಳು ತಾವರೆ ಎಲೆಯ ಮೇಲಿನ ನೀರಿನ ಬಿಂದುವಿನ ಹಾಗೆ ಅಂಟಿಕೊಂಡು ಇರದೇ.. ಬಿಟ್ಟು ನಿಲ್ಲದೆ.. ತನ್ನದೇ ರೀತಿಯಲ್ಲಿ ಜ್ಞಾನ ಮಾರ್ಗದಲ್ಲಿ ನೆಡೆಯುವಳು.. ಇಂತಹ ಸುಂದರ ಪರಿವಾರಕ್ಕೆ ನನ್ನ ಮುದ್ದು ಮಕ್ಕಳು ಸೌಭಾಗ್ಯಾ ದೀದಿ, ಇಂದ್ರಾಣಿ ದೀದಿ, ರಾಜ್ ಭಾಯ್, ಆನಂದ್ ಭಾಯ್ ಇವರೆಲ್ಲ ನನ್ನ ನಿಮ್ಮೆಲ್ಲರ ನೆಚ್ಚಿನ ಮಧುವನಕ್ಕೆ ಬಂದು ತಮ್ಮದೇ ರೀತಿಯಲ್ಲಿ ಸೇವೆ ಮಾಡುವ ಮಕ್ಕಳು.. ಇವರೆಲ್ಲ ತಮ್ಮ ಕೆಲಸದ ನಡುವೆ ಕೂಡ ರಾಜರಾಜೇಶ್ವರಿ ನಗರದ ರಾಜ ಯೋಗ ಕೇಂದ್ರದಲ್ಲಿ ಅಪಾರ ಶ್ರಮ ವಹಿಸಿ, ಇಂದು ಈ ಕೇಂದ್ರ ಹೆಸರು ಮಾಡಿದೆ ಎಂದರೆ ಇದಕ್ಕೆ ಇವರು ಕಾರಣ.. ಇವರುಗಳು  ಸಂಪಾದಿಸಿದ ಪುಣ್ಯದ ಒಂದು ದೃಷ್ಟಿಯನ್ನು ಈ ದಂಪತಿಗಳ ಮನೆಗೂ, ಮನೆಯವರಿಗೂ ಕೊಟ್ಟು ಸಕಲವೂ ಅನುಗ್ರಹವಾಗಲಿ ಎಂದು ಆಶೀರ್ವಾದ ಮಾಡಿ ಬಂದ ಸುಂದರ ಕ್ಷಣವದು.. ಈ ಮುದ್ದು ಮಕ್ಕಳಿಗೆ ಆ ಭಗವಂತ ಸದಾ ಒಳ್ಳೆಯದನ್ನೇ ಮಾಡುತ್ತಾನೆ.. ಇವರಿಂದ ರಾಜರಾಜೇಶ್ವರಿ ನಗರದ ರಾಜಯೋಗ ಕೇಂದ್ರ ಇನ್ನಷ್ಟು ಬೆಳೆಯುತ್ತದೆ.. ಇನ್ನಷ್ಟು ಬೆಳಗುತ್ತದೆ.. ಇಡೀ ಪ್ರದೇಶಕ್ಕೆ ಇದು ಒಂದು ಮಾದರಿ ರಾಜಯೋಗ ಕೇಂದ್ರವಾಗುತ್ತದೆ.. ಸೌಭಾಗ್ಯ ಅಕ್ಕನವರ ನೇತೃತ್ವದಲ್ಲಿ ಈ ಕೇಂದ್ರ ಅತ್ಯುತ್ತಮ ಸೇವೆ ಮಾಡುವ ಕೇಂದ್ರವಾಗಿ ಹೆಸರು ಮಾಡುತ್ತದೆ.. ಈ ಕೇಂದ್ರದ ಯಶಸ್ಸಿಗೆ ಇದು ನನ್ನ ಆಶೀರ್ವಾದ .. 

ಆ ಹುಡುಗನಿಗೆ ಮಧುವನ ನೋಡಬೇಕು ಎನ್ನುವ ಆಸೆ ಇದೆ.. ಅದಕ್ಕಿಂತಲೂ ಹೆಚ್ಚು ತನ್ನ ಕ್ಯಾಮೆರಾದಲ್ಲಿ ಅಲ್ಲಿನ ಪ್ರತಿ ದೃಶ್ಯವನ್ನು ಸೆರೆಹಿಡಿಯಬೇಕು ಎನ್ನುವ ಕಾತುರ.. ಜೊತೆಗೆ ಅವನ ಇಷ್ಟದ ನಿರ್ದೇಶಕರ ಒಂದು ಚಿತ್ರ ನಮ್ಮ ತಾಣದಲ್ಲಿಯೇ ಚಿತ್ರೀಕರಣ ವಾಗಿರೋದು.. ಮತ್ತೆ ಅದೇ ಜಾಗದಲ್ಲಿ ತಾನೂ ಕೂತು ಫೋಟೋ ತೆಗೆಯಬೇಕು ಎನ್ನುವ ಆಸೆ.. ಇದೆ ಇವ ಕುದುರೆಯಾದರೆ.. ಮಧುವನದ ಮಂದಿ ಕೆರೆ.. ಇಂದು ಕೆರೆಯೇ ಕುದುರೆಯ ಹತ್ತಿರ ಬಂದಿದೆ.. ಅದೇ ಅಲ್ಲವೇ ಈ ಮನೆಯ ಪುಣ್ಯ.. 

ಸಕಲವೂ ಸಕಾಲಕ್ಕೂ ಒಳೆಯದಾಗಲಿ ಎಂದು ಹಾರೈಸುತ್ತೇನೆ.. ಆಶೀರ್ವದಿಸುತ್ತೇನೆ.. 

ಮಧುರಾತಿ ಮಧುರ ... ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ... ಪ್ರೀತಿಯ ಮಾತಾ-ಪಿತಾ ಅಜ್ಜನ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ಅಜ್ಜನ ನಮಸ್ತೇ!!!

ಧಾರಣೆಗಾಗಿ ಮುಖ್ಯಸಾರ:

೧. ಭಗವಂತನ ಸ್ಮರಣೆ ಸದಾ ಇರಲಿ.. ಭಗವಂತನಿಂದ ಪರೀಕ್ಷೆ ಖಂಡಿತ ಇರುತ್ತದೆ.. ಆದರೆ ಆ ಪರೀಕ್ಷೆಗೆ ಉತ್ತರವನ್ನು, ಪರಿಹಾರವನ್ನು ಆತನೇ ಕೊಡುತ್ತಾನೆ.. 

೨. ನಂಬಿದವರಿಗೆ ಭಗವಂತ ಎಂದಿಗೂ ಕೈ ಬಿಡುವುದಿಲ್ಲ..

ವರದಾನ:
ಭಕ್ತಿ ಎಂಬುದು ಭಗವಂತ ಜನರಿಗೆ ಕೊಟ್ಟಿರುವ ವರದಾನ.. ಅದನ್ನು ನಂಬಿದಾಗ. ಅದನ್ನು ಕೈ ಹಿಡಿದಾಗ ಎಲ್ಲವೂ ಸರಳ.. ಎಲ್ಲವೂ ಸುಂದರ 

ಸ್ಲೋಗನ್:
ನಂಬಿದ ದಾರಿಯನ್ನು ಎಂದಿಗೂ ಮರೆಯಬಾರದು.. ಎಂದಿಗೂ ಬದಲಿಸಬಾರದು.. ಕುದುರೆಯ ಹತ್ತಿರವೇ ಕೆರೆ ಬರಲು ಆಗ ಮಾತ್ರ ಸಾಧ್ಯ.. 

ಆ ಮರೆತಿದ್ದೆ ಕೆರೆಯೇ ಕುದುರೆಯ ಹತ್ತಿರ ಬಂದದ್ದಕ್ಕೆ ಒಂದಷ್ಟು ಚಿತ್ರಗಳಿವೆ ನೋಡಿ "ಆನಂದ" ಪಡಿ.. ನೀವೇ "ರಾಜ" ಎಂದು ಕೊಳ್ಳಿ.. ಸ್ವರ್ಗದ "ಇಂದ್ರ" ನೀವೇ ಅಂದುಕೊಳ್ಳಿ.. ಜೊತೆಗೆ ಇದು ನಿಮಗೆ ನಾನು ಆಶೀರ್ವದಿಸಿದ "ಸೌಭಾಗ್ಯ" 


ಕುದುರೆಗಳು 


ಕುದುರೆಗಳು ಕೆರೆಗಳ ಸಂಗಮ 


Monday, August 28, 2023

ಸ್ವರ್ಗ ಸೀಮೆಯ ಕೌಸ್ತುಭ ಹಾರ ...!

ಸಂತಸ ಲೀಲೆಯ ಹಂಸವಿಹಾರ
ಸ್ವರ್ಗ ಸೀಮೆಯ ಕೌಸ್ತುಭ ಹಾರ
ಸೌಂದರ್ಯ ಲಹರಿಯ...
ಲಹರಿ ಲಹರಿ ಲಹರಿ ಲಹರಿ
ಮಧುರ ಸಂಚಾರ
ವೇದಮಾತೆಯು ನಲಿಯುವ ತೀರ
ಮಾನಸ ಸರೋವರ....
ಈ.....ನಿನ್ನಾ ಮನಸೇ...ಮಾನಸ ಸರೋವರ

ಬೆಳಿಗ್ಗೆಯಿಂದಲೂ ಅಣ್ಣ (ಅಪ್ಪ) ಇದೆ ಹಾಡಿನ ಸಾಲುಗಳನ್ನು ತಮ್ಮ ಇಷ್ಟವಾದ ಟೇಪ್ರೆಕಾರ್ಡರಿನಲ್ಲಿ ಹಾಕಿಕೊಂಡು ಮತ್ತೆ ಮತ್ತೆ ತಿರುಗಿಸಿ ಮುರುಗಿಸಿ ಅದನ್ನೇ ಕೇಳುತ್ತಿದ್ದರು.. 

ಅಮ್ಮನಿಗೆ ಕಾರಣ ಗೊತ್ತಿತ್ತು.. ಸುಮ್ಮನೆ ತಮ್ಮ ಪಾಡಿಗೆ ತಮ್ಮ ದಿನ ನಿತ್ಯದ ಕೆಲಸ ಮಾಡುತ್ತಿದ್ದರು.. 

ಸುಮಾರು ಸಂಜೆ  ಏಳು ಘಂಟೆ .. ಅಣ್ಣ ಶುಭ್ರವಾದ ರೇಷ್ಮೆ ಮಗುಟ ತೊಟ್ಟು ತೊಟ್ಟು.. ಹಣೆಗೆ ವಿಭೂತಿ ಹಚ್ಚಿಕೊಂಡು. ಸಂಧ್ಯಾವಂದನೆ ಮಾಡುತ್ತಾ ಕುಳಿತರು.. 
ಅಮ್ಮನೂ ಕೂಡ ಅದೇ ಮಗುಟದ ರೇಷ್ಮೆ ಸೀರೆಯನ್ನು ಧರಿಸಿದ್ದರು.. ಸಂಭ್ರಮದಿಂದ ಬೀಗುತ್ತಿದ್ದರು.. 

ಗಣಾಧಿಪನನ್ನು ಕರೆಸಿ ಪೂಜೆ ಶುರು ಮಾಡಿದ್ದು.. ನಂತರ ಕುಲದೇವತಾ ಪ್ರಸನ್ನ.. ನಂತರ ನವಗ್ರಹ.. ನಂತರ ರಾಕ್ಷೋಜ್ಞ ಯಜ್ಞ.. ಅಂತಹ ಅಂದವಾದ ಮನೆಯನ್ನು ಧೂಮದಿಂದ ಸಿಂಚನ ಮಾಡಲು ಯಜ್ಞಕ್ಕೆ ಬೇಕಾದ ಆಜ್ಯಗಳಾದ  ಸಮಿತ್ತುಗಳು, ತುಪ್ಪ, ನಾರು ಬೇರುಗಳು ಸಿದ್ಧವಾಗಿದ್ದವು.. 

ಅಚ್ಚುಕಟ್ಟಾದ ಹೋಮ ಹವನಗಳು ಶುರುವಾದವು.. 

ಜೀವನದ ಪ್ರತಿ ಹೆಜ್ಜೆಯಲ್ಲೂ ಅಚ್ಚುಕಟ್ಟಾಗಿ ಬದುಕನ್ನು ನಿಭಾಯಿಸಿದ್ದರಿಂದ ಈ ಪೂಜಾ ಕೈಂಕರ್ಯ ಹೊಸದೇನು ಆಗಿರಲಿಲ್ಲ.. ಹಾ ಹೌದು ಕಾಲುನೋಯುತ್ತಿತ್ತು .. ಆದರೆ ಸಾಧಿಸಿದ ಸಂತಸದ ಮುಂದೆ ಇದ್ಯಾವ ಲೆಕ್ಕ.. ಅದು ಅವರ ಮನಸ್ಥಿತಿಯಾಗಿತ್ತು 

ಮನೆಯೆಲ್ಲ ಧೂಮದಿಂದ ಸಿಂಚನವಾಗಿ.. ಮನೆಗೊಂದು ಶಕ್ತಿ, ರಕ್ಷಣೆ ಸಿಕ್ಕಿದೆ ಎನ್ನುವ ಸಂತಸ.. 

ಬ್ರಾಹ್ಮೀ ಮಹೂರ್ತದಲ್ಲಿ ಮತ್ತೆ ಮುಂದುವರೆದ ಕಾರ್ಯಕ್ರಮ.. ಗೋ ಪ್ರವೇಶದಿಂದ ಮುಂದೆ ಸಾಗಿತು.. ಗೋವು ತನ್ನ ಮುದ್ದಿನ ಕರುವಿನ ಜೊತೆಯಲ್ಲಿ ಮನೆಯೊಳಗೇ ಓಡಾಡಿ ಕೊಟ್ಟ ಆಹಾರವನ್ನು ಸ್ವೀಕರಿಸಿದ ಎಲ್ಲರ ಮನಸ್ಸು ಧನ್ಯತಾಭಾವದಿಂದ ಶರಣಾದವು.. 

ಓಂ ತ್ರಯಂಬಕಂ ಯಜಾಮಹೆ ಸುಗಂಧಿಂ ಪೃಷ್ಟಿವರ್ಧನಂ.... 
ಓಂ ಗಣಾನಾಂತ್ವ ಗಣಪತಿಮ್ ಹವಾಮಹೇ ಕವಿಂಕವೀನಾಂ ಉಪಮ ಶ್ರವಸ್ತಮಂ
ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ | ತನ್ನೋ ರುದ್ರ: ಪ್ರಚೋದಯಾತ್
ಓಂ ನಾರಾಯಣಾಯ ವಿದ್ಮಹೇ ವಾಸುದೇವಾಯ ಧೀಮಹಿ | ತನ್ನೋ ವಿಷ್ಣು: ಪ್ರಚೋದಯಾತ್
ಓಂ ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ | ತನ್ನೋ ದಂತೀ ಪ್ರಚೋದಯಾತ್
ಓಂ ಭಾಸ್ಕರಾಯ ವಿದ್ಮಹೇ ಮಹದ್ಯುತಿಕರಾಯ ಧೀಮಹಿ | ತನ್ನೋ ಆದಿತ್ಯ ಪ್ರಚೋದಯಾತ್
ಓಂ ಮಹಾಲಕ್ಷ್ಮೀಚ ವಿದ್ಮಹೇ ವಿಷ್ಣುಪತ್ನೀಚ ಧೀಮಹಿ | ತನ್ನೋ ಲಕ್ಷ್ಮೀ: ಪ್ರಚೋದಯಾತ್

ಹೀಗೆ ಗಾಯತ್ರಿ  ಮಂತ್ರಗಳು.. ವೇದ ಘೋಷಗಳು.. ವೇದ ಮಂತ್ರಗಳು ಸ್ಪುರಿಸಿದ ಆ ಸಮಯ ಕರ್ಣಾನಂದಕರ.. 

ಮನೆಯಲ್ಲಿ ಈ ರೀತಿಯ ಕಂಪನಗಳು, ತರಂಗಗಳು ಉತ್ಪತ್ತಿಯಾಗುತ್ತಲೇ ಇರಬೇಕು.. ಆಗ ನೋಡು ಮನೆಯ ಬುನಾದಿಯನ್ನು ಯಾವುದೇ ಋಣಾತ್ಮಕ ತರಂಗಗಳು ಮುಟ್ಟಲಾರವು.. 



ಹೌದು.. ನಿಮ್ಮ ಮಾತು ನಿಜ.. ಆರಂಭಿಕ ಜೀವನದಲ್ಲಿ ಎಡರು ತೊಡರುಗಳಿದ್ದರು.. ಅದನ್ನೇ ಮೀಟಿ ಮೆಟ್ಟಿ ನಿಂತ ಮೇಲೆ.. ನಮ್ಮ ಮನೆಯಲ್ಲಿ ಕಡೇಪಕ್ಷ ಎರಡು ವಸಂತಗಳಿಗೊಮ್ಮೆ ಈ ರೀತಿಯ ಮಂತ್ರ ಘೋಷಗಳಿಂದ ಮನೆ ಮನಗಳು ಸಂಭ್ರಮಿಸಿದ್ದು ನಿಜವಲ್ಲವೇ.. 


ಬಂಧು ಮಿತ್ರರು.. ನೆಂಟರಿಷ್ಟರು ಬಂದು ಹರಸಿ ಹಾರೈಸಿ  ಸಂತಸ ಭೂರಿ ಭೂಜನ ಉಂಡ ಮೇಲೆ.. ಇನ್ನೊಂದು ಸಂತಸ ಕಾದಿತ್ತು.. 

ನಮ್ಮ ದೇಶದ ಹೆಮ್ಮೆಯ ಸಂಸ್ಥೆ ಟಾಟಾ.. ನಮ್ಮ ದೇಶದ ಬಗ್ಗೆ ನಮ್ಮ ಹೆಮ್ಮೆಯ ಪ್ರಧಾನಿ ಯುಗ ಪುರುಷ ಶ್ರೀ ನರೇಂದ್ರ ಮೋದಿಯ ಕಾಳಜಿಯ ಹಾಗೆ ಟಾಟಾ ಸಂಸ್ಥೆಯೂ ಕೂಡ.. ಆ ಸಂಸ್ಥೆಯ ಇನ್ನೊಂದು ತಯಾರಿಕೆ ನೆಕ್ಸಾನ್ ಕಾರು ತನ್ನನ್ನು ಸಿಂಗರಿಸಿಕೊಂಡು ಬಂದು ನಿಂತಿತ್ತು.. 

ಮನೆ ಆಯ್ತು.. ಗಾಡಿ ಬಂತು.. ಮಕ್ಕಳು ಸಾಧನೆಯೇ ಹಾದಿಯಲ್ಲಿದ್ದಾರೆ.. ಇನ್ನೇನು ಬೇಕು.. 


ಹೌದು ರೀ.. ಇವತ್ತಿಗೂ ಬಸವಪಟ್ಟಣದ ಉಪನಯನ ಕಾರ್ಯಕ್ರಮದಲ್ಲಿ ನೆಡೆದ ಪವಾಡಗಳನ್ನು ನೆನೆದರೆ ಮೈ ಜುಮ್ ಎನ್ನುತ್ತದೆ.. ಅಂತಹ ಯುಗಕ್ಕೆ ಒಮ್ಮೆ ನೆಡೆಯುವ ಕಾರ್ಯಕ್ರಮದಲ್ಲಿ ನೂರಾರು ಯುಗಪುರುಷರು ಓಡಾಡಿದ ತಪೋ ಭೂಮಿಯಲ್ಲಿ ಮರು ಜನ್ಮ ಪಡೆದ ಕ್ಷಣ ಅಸಾಧಾರಣ ಹಾಗೂ ಅದ್ಭುತ.. ಆ ನೆಲದ ಶಕ್ತಿಯೇ ಇಂದು ಒಂದು ಹೆಮ್ಮರವಾಗಿ ಬೆಳೆಸಿದೆ.. 

ನೀವು ನೆಟ್ಟ ಆಲದ ಮರದ ನೆರಳಲ್ಲಿ ಇಂದು ಎಲ್ಲರೂ ಸಂತಸದಿಂದ ಇದ್ದಾರೆ ಎಂದರೆ ಅದಕ್ಕಿಂತ ಇನ್ನೇನು ಬೇಕು.. 

ಕೃಷ್ಣವೇಣಿಯ ಸಾಧನೆ ಒಂದು ಅದ್ಭುತ 
ವಿಜಯನ ಸಾಧನೆ ಇನ್ನೊಂದು ಅದ್ಭುತ.. 

ನಮ್ಮ ಜೊತೆಯಲ್ಲಿ ಕಷ್ಟದ ಸವಾಲಿನ ದಿನಗಳನ್ನು ಕಂಡು ಬೆಳೆದ ಮಕ್ಕಳು ಇವರು.. ಎಲ್ಲೋ ಓದಿದ್ದು.. ನನ್ನ ಕಡೆ ಕಲ್ಲೇಸಿಯಿರಿ ಅದನ್ನೇ ಮೆಟ್ಟಿಲು ಮಾಡಿಕೊಂಡು ಸುದೃಢ ಕೋಟೆಯನ್ನು ಕಟ್ಟಿಕೊಳ್ಳುತ್ತೇನೆ ಎಂದು.. 

ಅದೇ ರೀತಿ ಇವರಿಬ್ಬರು ತಮ್ಮ ಪಾಲಿಗೆ ಬಂದ ಸವಾಲನ್ನು ಮೆಟ್ಟಿ ನಿಂತು.. ತಮಗೆ ಸಮಾಜದಲ್ಲಿ ಒಂದು ಗುರುತನ್ನು ಮೂಡಿಸಿದ್ದಾರೆ.. ಚಂದ್ರಯಾನ -೨ ತನ್ನ ಗುರಿಯನ್ನು ಸಾಧಿಸುವಲ್ಲಿ ತಕ್ಕ ಮಟ್ಟಿಗೆ ಯಶಸ್ಸುಗಳಿಸಿದರೆ ಹೋದರು ..ಅದರಿಂದ ಕಲಿತ ಅನುಭವವನ್ನು ಚಂದ್ರಯಾನ - ೩ ಗಗನ ನೌಕೆ ಚಂದ್ರನ ದಕ್ಷಿಣ ತುದಿಯನ್ನು ಮುಟ್ಟಿ "ಶಿವ-ಶಕ್ತಿ" ಬಿಂದುವಾದಂತೆ.. ಆರಂಭಿಕ ಜೀವನದ ಸಾಧಾರಣ ಯಶಸ್ಸಿನ ಅನುಭವವನ್ನು ತಮ್ಮ ದೊಡ್ಡ ಮಟ್ಟದ ಯಶಸ್ಸಿಗೆ ಸೋಪಾನ ಮಾಡಿಕೊಂಡದ್ದು ಇವರ ಹೆಗ್ಗಳಿಕೆ.. 

ಹೌದು ಹೌದು.. 
ಸಂತಸ ಲೀಲೆಯ ಹಂಸವಿಹಾರ
ಸ್ವರ್ಗ ಸೀಮೆಯ ಕೌಸ್ತುಭ ಹಾರ
ಸೌಂದರ್ಯ ಲಹರಿಯ...
ಲಹರಿ ಲಹರಿ ಲಹರಿ ಲಹರಿ
ಮಧುರ ಸಂಚಾರ
ವೇದಮಾತೆಯು ನಲಿಯುವ ತೀರ
ಮಾನಸ ಸರೋವರ....
ಈ.....ನಿನ್ನಾ ಮನಸೇ...ಮಾನಸ ಸರೋವರ


ಈ ಹಾಡಿನ ಸಾಲುಗಳಂತೆ ತಮ್ಮ ಜೀವನದ ಅನುಭವ ಮಣಿಗಳನ್ನು ಪೋಣಿಸಿಕೊಂಡು ಕೌಸ್ತುಭ ಹಾರ ಮಾಡಿಕೊಂಡ ಅದ್ಭುತ ಸಮಯವಿದು .. ಅದಕ್ಕಾಗಿಯೇ ನಾ ಈ ಹಾಡನ್ನು ಮತ್ತೆ ಮತ್ತೆ ಕೇಳಿಸಿಕೊಂಡಿದ್ದು.. 

ನನಗೆ ಗೊತ್ತು ನೀವು ಕಾರಣವಿಲ್ಲದೆ ಏನು ಮಾಡೋದಿಲ್ಲ.. ಕಾರಣವಿಲ್ಲದೆ ಏನೂ ಮಾತಾಡುವುದಿಲ್ಲ.. ಎಷ್ಟು ಸುಂದರವಾಗಿ ವರ್ಣಿಸಿದ್ದೀರಿ.. ತುಂಬಾ ಕುಶಿಯಾಯ್ತು.. 

ಎಲ್ಲಾ ನಾ ನೋಡಿದ ಅದ್ಭುತ ಸಿನೆಮಾಗಳ ಅನುಭವ.. ಬಂಗಾರದ ಮನುಷ್ಯ, ಬೂತಯ್ಯನ ಮಗ ಅಯ್ಯು, ದೇವರ ದುಡ್ಡು, ಗಾಂಧಿ ನಗರ.. ಹೀಗೆ ಅನೇಕಾನೇಕ ಚಿತ್ರಗಳು ನನಗೆ ಸ್ಫೂರ್ತಿ ನೀಡಿವೆ ಅದನ್ನೇ ನಾ ಶ್ರೀ ಗೆ ಹೇಳಿದ್ದು.. ಅದನ್ನೇ ಅವನು ಬರೆದದ್ದು.. 

ಮಹಾಭಾರತ ಧಾರವಾಹಿ ಕಡೆಯ ಕಂತು .. ಭೀಷ್ಮ ತನ್ನಿಷ್ಟದ ಹಸ್ತಿನಾವತಿ ಎಲ್ಲಾ ದಿಕ್ಕೂಗಳಿಂದಲೂ ಸುರಕ್ಷಿತವಾಗಿದೆ ಎಂದು ಅರಿವಾದ ಸಮಯ.. ಇಹಲೋಕ ಬಿಟ್ಟು ತನ್ನ ಲೋಕಕ್ಕೆ ಹೊರಡುವ ಸಮಯ.. ಶ್ರೀ ಕೃಷ್ಣನ ಶುಭ ಹಾರೈಕೆ ಪಡೆದು ಓಂಕಾರ ಮಾಡುತ್ತಾ ಸ್ವರ್ಗದ ಹೊರಡುತ್ತಾರೆ.. 

ಎರಡು ದಿನಗಳಿಂದ ವಿಜಯನಿಗೆ ಮತ್ತು ಆತನ ದನಿಗೆ ಒಡತಿಯಾದ ವಾಣಿಗೆ ಸ್ಫೂರ್ತಿ ಶಕ್ತಿ ತುಂಬಿ.. ಶಿವ = ಮಂಜುನಾಥ, ಶಕ್ತಿ - ವಿಶಾಲಾಕ್ಷಿ.. ಶಿವ-ಶಕ್ತಿಯಾಗಿ ಕೌಸ್ತುಭ ಹಾರದಲ್ಲಿ ಮಣಿಯಾಗಲು ಮೆಲ್ಲನೆ ಹೊರಟರು.. 

ಕಾಲುನೋವಿದ್ದರಿಂದ ಅಣ್ಣ ಅರ್ಥಾತ್ ಅಪ್ಪ ಮೆಲ್ಲನೆ ನೆಡೆಯುತ್ತಿದ್ದರು..ಮೆಟ್ಟಿಲುಗಳನ್ನು ಏರುತ್ತ.. ಪಕ್ಕದಲ್ಲಿಯೇ ಇದ್ದ ಮೂರು ದೀಪಗಳನ್ನು ನೋಡುತ್ತಾ.. ಗೋಡೆಯಲ್ಲಿ ಸ್ಥಿರವಾದರು.. .. 


ಅವರ ಆ ನಗು ಮೊಗ ಶುಭಹಾರೈಕೆ ಕೌಸ್ತುಭವನ್ನು ಸಂರಕ್ಷಿಸುತ್ತಿದೆ.. 

Monday, August 14, 2023

ಎಪ್ಪತೈದು ವಸಂತಗಳು.. ಕಾಣುವ ದೇವರಿಗೆ ಶುಭಾಶಯಗಳು

ಎಲ್ಲೆಡೆ ಆಜಾದಿ ಕಿ ಅಮೃತ್ ಮಹೋತ್ಸವ ಅಂತ ದೇಶವಿಡೀ ಫಲಕಗಳು ಹಾರಾಡುತ್ತಿದ್ದವು.. 

ಎಪ್ಪತ್ತೈದು ವರ್ಷಗಳು.. ಅಬ್ಬಬ್ಬಾ ಅನ್ನಿಸುವ ಸಂಭ್ರಮ ಎಲ್ಲೆಡೆ.. ದೇಶಕ್ಕೆ ಅದ್ಭುತ ಸಂಭ್ರಮದ ಸಮಯ 

ಅದೇ ಸಮಯ ಎಪ್ಪತ್ತನಾಲ್ಕು ವರ್ಷಗಳ ಹಿಂದೆ ಕರುನಾಡಿನ ಒಂದು ಹಳ್ಳಿಯಲ್ಲಿ ಬದುಕನ್ನು ಸಂಭ್ರಮಿಸುವ ಒಂದು ಪುಟ್ಟ ಜೀವಿಯ ಉಗಮವಾಗಿತ್ತು.. ದೇವರು ಪುಟ್ಟ ಪೊಟ್ಟಣದಲ್ಲಿ ದೊಡ್ಡ ದೊಡ್ಡ ಕನಸುಗಳನ್ನು, ಪರಿಶ್ರಮವನ್ನು, ಮಾತುಗಾರಿಕೆಯನ್ನು, ಸಂಗೀತವನ್ನು ಆಸ್ವಾದಿಸುವ ದೊಡ್ಡಹೃದಯವನ್ನು ಕೊಟ್ಟಿ ಕಳಿಸಿದ್ದ 

ಆ ಪುಟ್ಟ ಜೀವಿ ಬೆಳದಾಗೆಲ್ಲಾ ದೊಡ್ಡ ದೊಡ್ಡ ಕನಸುಗಳೆಲ್ಲಾ ಇನ್ನಷ್ಟು ಬಲಿಷ್ಠವಾದವು.. ಇನ್ನಷ್ಟು ದೊಡ್ಡದಾದವು.. ಪರಿಶ್ರಮ ಗೌರೀಶಂಕರವಾಯಿತು. 

ದ್ವಾಪರದ ಗೋಪಾಲನ ಕೊಳಲಿನ ಗಾನಕ್ಕೆ ಮನಸೋತ ರಾಧೆಯ ಹಾಗೆ.. ಕಲಿಯುಗದ ಗೋಪಾಲ ಎಂಬ ಇವರಷ್ಟೇ ಸಹೃದಯದ ಜೀವಿಗೆ ಮನಸೋತು ಮಂದಸ್ಮಿತರಾದರು .. ಅದರ ಫಲಿತಾಂಶ ಸೀಮೆಯಿಲ್ಲದ ಸೀಮಾ.. ಸೋಲಿಲ್ಲದ ಅಜಿತ. 

ಒಂದು ಚಹಾದಿಂದ ಶುರುವಾದ ಆಧ್ಯಾತ್ಮಿಕ ಜೀವನ ಇಂದು ಅವರ ಬದುಕಿನ ಮುಖ್ಯ ಭಾಗವಾಗಿದೆ..ಮುಖ್ಯ ಉಸಿರಾಗಿದೆ.. ಮನೆಯ ಮನದ ಬೆಳವಣಿಗೆಗೆ ಸಹಕಾರಿಯಾಗಿದೆ.. ಸ್ಮಿತಾ ಎಂಬಾ ಅಂದಿನ ಪುಟ್ಟ ಬಾಲಕಿ ಇಂದು ಎಪ್ಪತ್ತೈದು ವಸಂತಗಳನ್ನು ಅದರ ಜೊತೆಗೆ ಸಂಸಾರವನ್ನು ಹಿಡಿದಿಟ್ಟು ಅದನ್ನು ಪ್ರಗತಿಯ ಹಾದಿಗೆ ತಂದ ಕೀರ್ತಿ ಈ ದಂಪತಿಗಳಿಗೆ ಸೇರಿದೆ.. 

ಕ್ರಿಕೆಟ್ ನಲ್ಲಿ.. ಒಬ್ಬ ಬ್ಯಾಟ್ಸಮನ್ ರನ್ನುಗಳನ್ನು ಬಾರಿಸುತ್ತಿದ್ದರೆ.. ಆ ಬದಿಯ ಬ್ಯಾಟ್ಸಮನ್ ತಾಳ್ಮೆಯಿಂದ ಆಡುತ್ತಿರುತ್ತಾನೆ.. 

ಸಂಗೀತದಲ್ಲಿ ಒಬ್ಬ ಗಾಯಕ ಜೋರಾಗಿ ಸ್ವರಗಳನ್ನು ಹಾಡುತ್ತಿದ್ದರೆ.. ಇನ್ನೊಬ್ಬ ಆ ಸ್ವರಕ್ಕೆ ಜೊತೆಯಾಗಿ ಮೆಲ್ಲನೆ ದನಿಯಲ್ಲಿ  ಅದಕ್ಕೆ ಪರಿಣಾಮಕಾರಿಯಾದ ಸ್ಪರ್ಶ ಕೊಡುತ್ತಿರುತ್ತಾನೆ.. 

ಕಟ್ಟಡ ಕಟ್ಟುವಾಗ ಮೇಸ್ತ್ರಿ ಜೋರಾಗಿ ಕೂಗಿ ಕೆಲಸಗಾರರನ್ನು ಹುರಿದುಂಬಿಸಿ ಕಟ್ಟಡ ಕಾಮಗಾರಿಗೆ ಯಶಸ್ಸಿನ ತಿರುವು ಕೊಟ್ಟರೆ.. ಆ ಮೇಸ್ತ್ರಿಯ ಜೊತೆಗೆ ಇರುವವ ಎಲ್ಲರನ್ನು ಸಂಭಾಳಿಸಿಕೊಂಡು ಕೆಲಸದ ಪೂರ್ಣತೆಗೆ ಗಮನ ಕೊಡುತ್ತಿರುತ್ತಾನೆ.. 

ಅಡಿಗೆ ಮಾಡುವವ ಮುಖ್ಯನಾಗುತ್ತಾನೆ.. ಆದರೆ ಅದರ ಜೊತೆಯಲ್ಲಿ "ಕೊತ್ತಂಬರಿ" ಸೊಪ್ಪನ್ನು ಹೆಚ್ಚುವ, ತರಕಾರಿಯನ್ನು ಹೆಚ್ಚುವ, ಅಡಿಗೆಗೆ ಸಿದ್ಧಮಾಡಿಕೊಡುವವ ಕೂಡ ಮುಖ್ಯನಾಗುತ್ತಾನೆ.. 

ಇಷ್ಟೆಲ್ಲಾ ಯಾಕೆ ಟಿಪ್ಪಣಿ ಅಂತೀರಾ.. ಯಜಮಾನರು ಮೃದು ಮಾತುಗಾರರು.. ಯಜಮಾನತಿ "ಶೋಲೆ" ಚಿತ್ರದ "ಬಸಂತಿ"ಯ ಹಾಗೆ.. ಅವರದು ಮೃದು ಮಾತು.. ಇವರದ್ದು ಸದಾ ಮಾತು.. ಅದ್ಭುತ ಜೋಡಿಯಿದು.. 

ಇವರ ಬದುಕಿನ ಸಂಪತ್ತನ್ನು ಎಣಿಸಲಾಗದು. ಸಂತೃಪ್ತಿ ಇವರ ಬದುಕಿನ ಮುಖ್ಯ ಭಾಗ.. ಹೊಸದು ವಸ್ತುಗಳು ಬಂದರೆ.. ಆಹಾ ಓಕೆ ಓಕೆ .. ಚಂದ ಇದೆ... ಮಸ್ತ್ ಇದೆ.. ಚಲೋ ಇದೆ.. ಅಷ್ಟೇ.. ಎಲ್ಲವನ್ನು ಒಂದೇ ಒಂದೇ ದೃಶ್ಯದಲ್ಲಿ ನೋಡುವ ಇವರ ಮನಸ್ಥಿತಿಗೆ ಭಗವಂತನೂ ಕೂಡ ಸಲಾಂ ಹೊಡೆದಿದ್ದಾನೆ.. 

ಬರುವ ಸಂಕಷ್ಟದ ಸವಾಲುಗಳು ಮಂಜಿನ ಹಾಗೆ ಕರಗಿ ಹೋಗಿದ್ದನ್ನು ನಾನೇ ನೋಡಿದ್ದೇನೆ.. 

ಕೃಷ್ಣ ಸುಧಾಮ ಅದ್ಭುತ ಸ್ನೇಹಿತರು.. ಸುಧಾಮ ಕೃಷ್ಣನನ್ನು ನೋಡಲು ತನ್ನ ಹರಿದ ಪಂಚೆಯ ಅಂಚಿನಲ್ಲಿ ಒಂದಷ್ಟು ಅವಲಕ್ಕಿ ಕಟ್ಟಿಕೊಂಡು ತಂದಿರುತ್ತಾನೆ.. ಅದನ್ನು ಸುಧಾಮನನ್ನು ಉಪಚರಿಸುವ ಸಮಯದಲ್ಲಿ ನೋಡಿ ಕೃಷ್ಣ ಸಂತೃಪ್ತಿಯಿಂದ ತಿನ್ನುತ್ತಿರುತ್ತಾನೆ.. ಆಗ ಬರುವ ರುಕ್ಮಿಣಿ ಅರೆ ನಿಮ್ಮ ಸ್ನೇಹಿತ ತಂದ ಉಡುಗೊರೆಯನ್ನು ನೀವೊಬ್ಬರೇ ತಿಂದರೆ ಹೇಗೆ ನನಗೂ ಕೊಡಿ, ಅಂತ ಹೇಳಿ ಒಂದಷ್ಟು ಅವಳಕ್ಕೆ ಆಕೆಯೂ ತಿನ್ನುತ್ತಾಳೆ. 

ಸುಧಾಮ ಕೃಷ್ಣನ  ಅರಮನೆಯಿಂದ ಹೊರಡುವಾಗ .. ತನ್ನ ಸಿರಿವಂತ ಸ್ನೇಹಿತ ತಾನು ಕೊಟ್ಟ ಕನಿಷ್ಠವಾದ ಉಡುಗೊರೆಯನ್ನು ಪ್ರೀತಿಯಿಂದ ಸ್ವೀಕರಿಸಿದ ಎಂದು  ಮನಸ್ಸಿಗೆ ಸಂತಸವನ್ನು ಮುಖಭಾವದಲ್ಲಿ ವ್ಯಕ್ತ ಪಡಿಸಿದರೆ.. ಶ್ರೀ ಕೃಷ್ಣನಿಗೆ ತನ್ನ ಗೆಳೆಯ ಸುಧಾಮನನ್ನು ಉಪಚರಿಸಿದ್ದು ಹಾಗೆ ತನ್ನ ಆತ್ಮೀಯ ಗೆಳೆಯ ಏನನ್ನು ಕೇಳದೆ ಇದ್ದರೂ ಅವನಿಗೆ ಹೇಳದೆ ಸುಧಾಮನಿಗೆ ಸೇರಬೇಕಾದ ಎಲ್ಲವನ್ನು ಕರುಣಿಸಿದೆ ಎಂಬ ಸಂತಸ.. 

ಗೋಪಾಲ-ಸ್ಮಿತಾ ಕುಟುಂಬವೂ ಈ ಆದ್ಯಾತ್ಮಿಕ ಪರಪಂಚದಲ್ಲಿ ಭಗವಂತನಿಂದ ಏನನ್ನು ಬೇಡದೆ ನಿತ್ಯ ಅವನ ಧ್ಯಾನದಲ್ಲಿ, ಅವನ ಸಂಯೋಗದಲ್ಲಿ, ಅವನ ನೆನಪಿನಲ್ಲಿ, ಅವನ ಸೇವೆಯಲ್ಲಿ ನಿರತವಾಗಿ.. ಈ ಲೌಕಿಕ ಪ್ರಪಂಚದ ಆಸೆ, ನಿರಾಸೆ, ಕೋಪ, ತಾಪ, ಬೇಗೆಗಳು, ಖುಷಿ, ನಲಿವುಗಳು ಯಾವುದೂ ಅವರನ್ನು ಭಾದಿಸದೆ ತಮ್ಮ ಇತಿಮಿತಿಯಲ್ಲಿ ಬಂದವನ್ನು ಆದರಿಸುತ್ತ, ಅಪರಿಮಿತವಾದ ಪ್ರೀತಿ ವಿಶ್ವಾಸ ತೋರುತ್ತಾ,... ವಿಶ್ವಾಸ ತೋರುತ್ತಿರುವ ಈ ಕುಟುಂಬದ ಶಕ್ತಿಗೆ ಇಪ್ಪತ್ತೈದು ವಸಂತಗಳು.. 

ಹೇ ಶ್ರೀ .. ಇದು ತಪ್ಪಲ್ವಾ. ಆಕಿಗೆ ಎಪ್ಪತ್ತೈದು.. ಈಕಿಗೆ ಐವತ್ತು.. ಸರಿಯಾಗಿ ಹೇಳು.. ತಪ್ಪು ತಪ್ಪು ಬರೀಬೇಡ.. 

ಅರೆ ಅಜ್ಜ.. ನಿನ್ನ ಸಂಪರ್ಕಕ್ಕೆ ಬಂದಿದ್ದು ಒಂದು ಚಹಾದ ಮೂಲಕ.. ಆ ಚಹಾದ ಶಕ್ತಿ ಆಕೆಯನ್ನು ಇಪ್ಪತೈದು ವರ್ಷದವಳನ್ನಾಗಿ ಮಾಡಿದೆ.. 

ಬೇಕಾದರೆ ರಾಜೇಂದ್ರ ಕುಮಾರ್ ಹಾಡುಗಳು ಬರಲಿ.. ಆಕೆ ಇಪ್ಪತ್ತೈದರ ತರುಣಿಯಾಗುತ್ತಾರೆ  

ಲೆಕ್ಕ ಒಪ್ಪಿಸುವಾಗ ಕೊತ್ತಂಬರಿಯನ್ನು ಕೇಳು .. ನಾಚುವ ಇಪ್ಪತ್ತೈದರ ತರುಣಿಯಾಗುತ್ತಾರೆ 

ಟಿವಿಯಲ್ಲಿ ಯಾವುದೇ ಹಾಡು ಬರಲಿ ತನ್ನ ಮಗಳ ನಾಟ್ಯ ಮಾಡುತ್ತಾ  ಇಪ್ಪತ್ತೈದರ ತರುಣಿಯಾಗುತ್ತಾರೆ 

ಟಿವಿ ಧಾರಾವಾಹಿಗಳನ್ನು ನಿರ್ದೇಶಕನಿಗಿಂತ ಹೆಚ್ಚು ನೋಡಿ ಖುಷಿ ಪಡುತ್ತಾರೆ.  

ಯೋಗ ಮಾಡುವಾಗ...  ಹೌದು ಅಡೆ ತಡೆಗಳು ಬರುತ್ತವೆ. ಅದರ ಬಗ್ಗೆ ಕೇಳು ನಸು ನಗುವ ಇಪ್ಪತೈದರ ತರುಣಿಯಾಗುತ್ತಾರೆ 

ಅಜ್ಜನ ಬಗ್ಗೆ ಕೇಳು.. ಇಪ್ಪತ್ತೈದರ ತರುಣಿಯ ಹಾಗೆ ಪ್ರತಿಯೊಂದು ವಿಚಾರವನ್ನು ಹೇಳುತ್ತಾರೆ ..

ಪ್ರವಾಸಕ್ಕೆ ಹೊರಡು ಇಪ್ಪತ್ತೈದರ ತರುಣಿಯಾಗುತ್ತಾರೆ.. 

ಹಾಗಾಗಿಯೇ ಅವರು ಇಪ್ಪತ್ತೈದರ ತರುಣಿ ಅಂತ ಬರೆದಿದ್ದು ಅಜ್ಜ.. 

ಓಹ್ ಹಾಗೆ ಇದು ಸೂಪರ್ ಶ್ರೀ..  ಅಂದರೆ ನೀ ಹೇಳಿದು.. ಇಷ್ಟೆಲ್ಲಾ ಯಾಕೆ ಒಂದೇ ಮಾತಿನಲ್ಲಿ ಹೇಳುವುದಾದರೆ.. 

ಇವರು ಕೊತ್ತಂಬರಿ ಸೊಪ್ಪಿನ ಹಾಗೆ.. 

ತರಕಾರಿ ಅಂಗಡಿಯಲ್ಲಿದ್ದರೂ ಘಮಘಮ.. 

ಕೈ ಚೀಲದಲ್ಲಿದ್ದರೂ ಘಮ ಘಮ 

ಮನೆಯಲ್ಲಿ ರೆಫ್ರಿಜಿರೇಟರ್ ನಲ್ಲಿದ್ದರೂ ಘಮಘಮ 

ಅಡಿಗೆಗೆ ಉಪಯೋಗಿಸಿದಾಗ ಅಡಿಗೆ ಘಮ ಘಮ 

ಅದನ್ನು ಹೆಚ್ಚಿದ ಕೈಗಳು ಕೂಡ ಘಮ ಘಮ 

ಒಮ್ಮೆ ನೀವು ಈಕಿ ಜೊತೆ ಮಾತಾಡಿದರೆ ಸಾಕು ಆಕಿಯ ಅಕ್ಕರೆ ಸದಾ ಹಸಿರಾಗಿರುತ್ತದೆ.. 

ಅರ್ಜುನ ಕುರುಕ್ಷೇತ್ರದಲ್ಲಿ ಗೊಂದಲದಲ್ಲಿದ್ದಾಗ.. ಶ್ರೀ ಕೃಷ್ಣ ಅರ್ಜುನನಿಗೆ ಭಗವಂತ ಉಪದೇಶಿಸಿದ್ದ ಭಗವದ್ಗೀತೆಯನ್ನು ಹೇಳುತ್ತಾನೆ .. ನಂತರ ಗೊಂದಲವನ್ನು ದೂರ ಮಾಡಲು.. ನೋಡು ಈ ಜೀವಿಯನ್ನು ನೋಡು.. ತಾನು ಮಾಡುವ ಕೆಲಸದಲ್ಲಿ, ತಾನು ಆಡುವ ಮಾತಿನಲ್ಲಿ  ಎಂದಿಗೂ ಗೊಂದಲ ಇರೋದೇ ಇಲ್ಲ ... ಹಾಗೆ ನೀನು ಇರಬೇಕು ಅರ್ಜುನ.. 

ನಿಜ ಅಜ್ಜ ಶ್ರೀ ಕೃಷ್ಣ ಹೇಳಿದಂತೆ.. ಪ್ರತಿನಿತ್ಯ ಮುರುಳಿ ನುಡಿಸಿದಂತೆ.. ಇವರ ಮುರುಳಿಗಾನ.. ಅಮೃತ ಪಾನವೇ ಹೌದು.. 

ಅದಕ್ಕೆ ಈಕಿ ಯಾವಾಗಲೂ ಹಾಡೋದು "ತೆರೆ ಯಾದ್ ಕಿ ಅಮೃತ್ ಪೀತೆ ಹೈ" ನಿಜ ಇವರ ಜೊತೆಯಲ್ಲಿ ಒಂದು ಕ್ಷಣ ಮಾತಾಡಿದರೂ ಸರಿ .. ಜೊತೆಯಿದ್ದವರೂ "ಆಪ್ ಕಿ ಸಾತ್ ಬಾತ್ ಕರ್ತೆ ಹೇ.. ಓಹ್ ಸದಾ ಯಾದ್ ಮೇ ರೆಹತೇ ಹೈ "

ನಿಜ ಶ್ರೀ ನಿನ್ನೆ ಇವರ ಮನೆಯನ್ನು ನೋಡಿ ಬಹಳ ಸಂತಸವಾಯಿತು.. ಆಕೆಯ ಎಷ್ಟೊಂದು ಅಭಿಮಾನಿಗಳು, ಬಂಧು ಮಿತ್ರರು ಆಕೆಯನ್ನು ಹಾರೈಸಿದ್ದು, ಶುಭ ಕೋರಿದ್ದು, ಬಗೆ ಬಗೆಯ ಉಡುಗೊರೆಯನ್ನು ನೀಡಿದ್ದು, ಭರ್ಜರಿ ಊಟ, ನೃತ್ಯ.. ಹಾಡುಗಾರಿಕೆ.. ನನ್ನ ಸ್ವೀಟಿ ಮಾಮಿ ಅಂತ ಮುದ್ದು ಮಾಡುವವರು, ನನ್ನ ಸ್ವೀಟ್ ಸಹೋದರಿ, ನನ್ನ ಸ್ವೀಟ್ ಅಮ್ಮ..  ಕಿರಿಯರೆಲ್ಲ ಬಂದು ಆಕೆಯ ಚರಣ ಕಮಲಗಳಿಗೆ ನಮಸ್ಕರಿಸುತ್ತಾ  ಎಲ್ಲರೂ ಅವರ ಮನದಲ್ಲಿ ಕೇಳಿಕೊಂಡಿದ್ದು ಒಂದೇ ಮಾತು.. ಈಕೆಯ ಚಟುವಟಿಕೆಯ ಶಕ್ತಿಯಲ್ಲಿ ಒಂದು ಕಾಲು ಭಾಗ ನಮಗೆ ಸಿಕ್ಕರೂ ಸಾಕು ನಾವು ಅಸಾಧ್ಯವನ್ನು ಸಾಧ್ಯವನ್ನಾಗಿಸುತ್ತೇವೆ ಎಂದು.. 

ಈಕಿಯ ಕಡೆಯ ಸಹೋದರಿಯರು, ಅವರ ಮಕ್ಕಳು, ನಾದಿನಿಯ ಮಕ್ಕಳು, ಅವರ ಪರಿವಾರ.. ಅಜಿತನ ಸಹೋದ್ಯೋಗಿಗಳು.. ಎಲ್ಲರೂ ಸೇರಿ ಒಂದು ಸಣ್ಣ ಜಾತ್ರೆಯೇ ಆಗಿತ್ತು.. 

ಪ್ರತಿಕ್ಷಣವನ್ನೂ ಸಂಭ್ರಮಿಸುವ ಪರಿವಾರಕ್ಕೆ ಇದಕ್ಕಿಂತ ಸಂಭ್ರಮಿಸುವ ಕ್ಷಣಗಳು ಬೇಕೇ.. ಒಂದು ಸಾರ್ಥಕ ಕ್ಷಣವನ್ನು ಕಂಡ ಕ್ಷಣವಿದು.. 

ಹೌದು ಅಜ್ಜ.. ಸದಾ ಚಟುವಟಿಕೆಯಲ್ಲಿ ನಿರತರಾಗಿರುವ ಇವರ ಕೆಲಸದಲ್ಲಿರುವ ಶಿಸ್ತನ್ನು ನೀ ನೋಡಬೇಕಾದರೆ "ಬಟ್ಟೆ ಒಣಗಿ ಹಾಕುವ ಕಾಯಕ ನೋಡು... ಅದೇ ಅವರ ವ್ಯಕ್ತಿತವನ್ನು ತೋರಿಸುತ್ತದೆ.. 

ಅದು ಮಾತು ಅಂದರೆ ಶ್ರೀ.. ಈಕಿಗೆ ನನ್ನ ಕಡೆಯಿಂದ ಶುಭಾಶಯ ತಿಳಿಸೋದಷ್ಟೇ ನನ್ನ ಕೆಲಸ ಉಳಿದಿದೆ... ಅಷ್ಟೇ.. ನನ್ನ ಶುಭ ಹಾರೈಕೆಗಳು ಸದಾ ಈಕಿಗೆ ... ಮತ್ತೆ ಈಕಿಯ ಕುಟುಂಬಕ್ಕೆ.. 



Tuesday, March 21, 2023

Lights...Camera... Reaction.... Golden Moments

 ಒಂದು  ಬಿಂದು.. ಅದರ ಸುತ್ತಲೂ ಅನೇಕ ಕಿರಣಗಳು ... ಬೆಳ್ಳಗಿದ್ದವು...ಈಗ  ಕೆಂಪಗಾಗಿದ್ದವು.. ನಾಚಿ ಕೆಂಪಾಗಿದ್ದವೋ.. ಬೆಳಕನ್ನು ಹರಿಸಿ ಹರಿಸಿ ನೆತ್ತರಿನ ವರ್ಣ ಬಂದಿತ್ತೋ ಗೊತ್ತಿಲ್ಲ.. ಒಟ್ಟಿನಲ್ಲಿ ಎಲ್ಲೆಲ್ಲೂ ಕೆಂಪು ಕೆಂಪು.. ಕಂಪು ಕಂಪು 

ಅದೊಂದು ಅರಳಿ ಕಟ್ಟೆ.. ಸುತ್ತಲೂ ಅನೇಕಾನೇಕ ಜೋಪಡಿಗಳು.. ಎಲ್ಲರಲ್ಲೂ ಶಾಂತಿ "ಶಾಂತಿ" ನೆಲೆಸಿದ್ದ ಪರಿಣಾಮ ಆ ಜಗತ್ತೇ ಶುಭ್ರವಾಗಿತ್ತು... ಹದಿನಾರು ಕಲೆಗಳು ತುಂಬಿದ್ದ ಆ ಜಗತ್ತು ಮನಮೋಹಕವಾಗಿತ್ತು. ಅರಳೀಕಟ್ಟೆಯಲ್ಲಿ ಒಬ್ಬರು ಗುಮಾಸ್ತರ ರೀತಿ ಪತ್ರಗಳನ್ನು ಬರೆದು ಬರೆದು ಒಂದು ಕಡೆ ಇಡುತ್ತಿದ್ದರು..ಅರ್ಧ ಶತಮಾನ ದಾಟಿ ಹತ್ತಾರು ವರ್ಷಗಳೇ ಕಳೆದಿತ್ತು.. ಆದರೆ ಮೊಗದಲ್ಲಿ ಏರು ಪ್ರಾಯದ ಲಕ್ಷಣ... ಅಪಾರ ಸಂಪತ್ತನ್ನು ಸಾಕು ಎಂದು ಆಪತ್ತಿಗೆ ಎಷ್ಟು ಬೇಕು ಅಷ್ಟು ಇಟ್ಟುಕೊಂಡು ಮಿಕ್ಕಿದ್ದನ್ನು ಇದ್ದ, ಇರುವ.. ಮುಂದೂ ಇರುವ ಜಗತ್ತಿಗೆ ಮೀಸಲಾಗಿತ್ತಿದ್ದರು.. ಹಾಗಾಗಿ ನಿನ್ನೆಯ ಯೋಚನೆಯಿಲ್ಲ..  ನಾಳಿನ ಬಗ್ಗೆ ಚಿಂತೆಯಿಲ್ಲ.. ಸುಖ ದುಃಖಗಳು ಸಂಗಮವಾಗಿದ್ದ ಸಮಯವದು.. 


ಅಜ್ಜ ಕೆಲವು ಪ್ರಶ್ನೆಗಳು ನಿಮಗೆ... ?

ಅನೀರೀಕ್ಷಿತವಾಗಿ ಬಂದ ದನಿಯತ್ತ ತಿರುಗಿದರು ಅಜ್ಜ... 

ತಲೆಯ ಮೇಲೊಂದು ಕಿರೀಟ.. ಹಣೆಯಲ್ಲಿ ಕುಂಕುಮ..ಎಡ ಕೈಯಲ್ಲಿ ಕಡಗ.. ಬಲಗೈಯಲ್ಲಿ ಕೈಗಡಿಯಾರ.. ತುಸು ಶ್ಯಾಮಲಾ ವರ್ಣ.. ನೀಟಾಗಿದ್ದ ಕ್ರಾಪಿನ ತಲೆ.. ಒಟ್ಟಿನಲ್ಲಿ ಒಮ್ಮೆ ನೋಡಿದರೆ  ಎಲ್ಲಿ ಸಿಕ್ಕರೂ ಹಲ್ಲು ಬಿಡುವಷ್ಟು ಸುಮಾರಾದ ಗುಣವುಳ್ಳ ಆ ಹುಡುಗ.. ಮೆಲ್ಲನೆ ತನ್ನ ಕೈಲಿದ್ದ ತನ್ನ ಮೂರನೇ ಕಣ್ಣಿನಿಂದ ಒಂದಷ್ಟು ಚಕ ಚಕ ಅಜ್ಜನ  ಫೋಟೋ ತೆಗೆದು.. ಅಜ್ಜನ  ಪಕ್ಕದಲ್ಲಿಯೇ ಕೂತ... 

ಏನಪ್ಪಾ ಶ್ರೀ.. ಎಲ್ಲರೂ ಬಾಬಾ ಅಂದರೆ ನೀನು ಅಜ್ಜ ಅಂತೀಯಲ್ಲ... 

ಅಜ್ಜ ಚಿನ್ನವನ್ನು ಚಿನ್ನ ಎಂದು ಹೇಳಿ ಅಭ್ಯಾಸ.. ಎಲ್ಲರೂ "ಬಾಬಾ" "ಬಾಬಾ" "ಬಾ .... ಬಾ... ಬಾಬಾ ಬಾಬಾ... "  ಅಂದಾಗ ನೀವು ಅಲ್ಲಿಗೆ ಹೋಗಿ ಬಿಡುತ್ತೀರಿ ... ನನ್ನ ಪ್ರಶ್ನೆಗಳು ನನ್ನಲ್ಲಿಯೇ ಉಳಿದು ಬಿಡುತ್ತದೆ.. ಅದಕ್ಕೆ ಅಜ್ಜ ಎಂದರೆ ಏನೋ ಸಂತೋಷ.. ಅಪ್ಪನಿಗಿಂತ ಹೆಚ್ಚು ಕಾಲ ನೋಡಿದವರು ಅಜ್ಜ.. ಹಾಗಾಗಿ ಬಾಬಾ ಎಂದರೆ ಅಪ್ಪ ಆಗುತ್ತಾರೆ.. ಆಗ ಜ್ಞಾನದ ಭಂಡಾರ ಒಂದು ನದಿಯಾದರೆ.. ಅಜ್ಜ ಎಂದಾಗ ಜ್ಞಾನದ ಹರಿವು ಸಮುದ್ರದಷ್ಟು ಹಾಗಾಗಿ ಅಜ್ಜ ಅಂತ ಕರೆದಾಗ ಜ್ಞಾನದ ಸಾಗರವೇ ಬಂದ ಹಾಗೆ  ಅನುಭವ ಆಗುತ್ತದೆ.... 

ಸರಿ ಶ್ರೀ ಮಾತಲ್ಲಿ ನಿನ್ನ ಗೆಲ್ಲೋಕೆ ಆಗುತ್ತಾ.. ಸರಿ ಮುಂದುವರೆಸು.. 

 ಈ ಮಾತಿಗೆ ಅಜ್ಜನ ಕಾಲಿಗೆ ನಮಸ್ಕರಿಸಿ "ಅಜ್ಜ ನಿಮಗೆ ಮೂರು ದೃಶ್ಯಗಳನ್ನು ತೋರಿಸುತ್ತೇನೆ.. ಆ ಮೂರು ದೃಶ್ಯಗಳನ್ನು ಹೆಣೆದು ನನಗೆ ಇದರ ಒಳ ಅರ್ಥ ಹೇಳಬೇಕು.. ಆ ಆ ಅರ್ಥಗಳಲ್ಲಿಯೇ ನನ್ನ ಪ್ರಶ್ನೆಗಳು ಅಡಗಿ ಕೂತಿರುತ್ತವೆ.. ಅದೇ ನನಗೆ ಉತ್ತರವಾಗುತ್ತದೆ.. ಓಕೇ ನಾ ಅಜ್ಜ

ಕಮಾನ್ ಗೋ ಆನ್ ಶ್ರೀ.. 

ಅಜ್ಜ ನನ್ನನ್ನು ಆತ್ಮೀಯ ಅಂತ ಅಂದುಕೊಂಡವರು ನನ್ನನ್ನು ಶ್ರೀ ಅಂತ ಕರೆಯುತ್ತಾರೆ.. ಅದಕ್ಕೆ ನಿಮಗೆ ಧನ್ಯವಾದಗಳು... 

ಶ್ರೀ ಮುಂದುವರೆಸು

******

ದೃಶ್ಯ ೧ : 

ತುಂಬಿದ್ದ ಸಭಾಂಗಣ.. ವೇದಿಕೆಯ ಮೇಲೆ ಕೂತಿದ್ದವರು ಕೆಲವರು.. ಎಲ್ಲರ ಮೊಗದಲ್ಲಿ ಮಂದಹಾಸ... ಏನೋ ಸಾಧಿಸಿದ ಖುಷಿ.. ಏನೋ ಮನದಲ್ಲಿ ನೆಮ್ಮದಿ .. ಓಂ ಶಾಂತಿ ಎನ್ನುತ್ತಿದ್ದ ತುಟಿಗಳು.. ಶ್ರೀ ಅಣ್ಣ ನೀವು ಹಾ ನೀವೇ ನೀವೇ  ಬನ್ನಿ ಬನ್ನಿ.. ಕರುನಾಡ ತಾಯಿ ಭುವನೇಶ್ವರಿಯವರ ಅಶರೀರವಾಣಿ.. ಸುಮ್ಮನೆ ಕೂತಿದ್ದವರನ್ನು ಬಿಡದೆ.. ವೇದಿಕೆಗೆ ಕರೆಸಿ.. ಒಂದು ಶಾಲು.. ಆಶೀರ್ವಾದ ಪೂರಕ ತಿಲಕ.. ಪುಷ್ಪವೃಷ್ಟಿ.. ... ಮನದಲ್ಲಿಯೇ ಕಣ್ಣು ಮುಚ್ಚಿಕೊಂಡು ಎಲ್ಲಾ ನಿನ್ನ ಚರಣಕಮಲಗಳಿಗೆ ಅರ್ಪಿತಾ ಬಾಸ್.. ... ಆ ಸಭಾಂಗಣದಲ್ಲಿದ್ದ ಬಾಸ್ ಚಿತ್ರದಲ್ಲಿದ್ದ ಚಿತ್ರದಿಂದ ಕೊಳಲ ನಾದ ಕೇಳಿ ಬಂತು.. 








ದೃಶ್ಯ ೨

 ರಾತ್ರಿ ಹನ್ನೊಂದು ಐವತ್ತೊಂಭತ್ತು... ಹನ್ಯಾ.. ಹನ್ಯಾ.. ಬನ್ನಿ ಬನ್ನಿ.. ಅಪ್ಪ ಅಪ್ಪ ಬಾರಪ್ಪ.. ಚಿಕ್ಕಮಕ್ಕಳಂತೆ ಕುಣಿಯುತ್ತ ಬಂದು ಪ್ರೀತಿಗೆ ಸೀಮೆಯೆ ಇಲ್ಲಾ ಎಂದು ತೋರಿಸಿದ ಮನೋನಾಯಕಿ.. ನಿಮ್ಮಂತೆ ನಾನು ಯಾವಾಗಲೂ ಶೀತಲ ಎಂದು ಬಂದ ತನುಜಾತೆ ... ಅವರ ಪ್ರೀತಿ ಪೂರ್ವಕವಾಗಿ ತಮಗೆ  ರೀತಿಯಲ್ಲಿ ಸಂಭ್ರಮಾಚರಣೆ ಮಾಡಿದರು .. ಈ ಪ್ರೀತಿಯೇ ಏನು ಹೇಳಲಿ.. ಬಾಸ್ ಇದೆಲ್ಲವೂ ನೀ ಕೊಟ್ಟ ವರ ಎಂದೇ... ದೇವರ ಮನೆಯಲ್ಲಿ ಅರ್ಜುನನಿಗೆ ದಾರಿ ತೋರಿಸುವ ಚಿತ್ರದಿಂದ ನವಿಲು ಗರಿ ಗಾಳಿ ಬೀಸಿತು.. 






ದೃಶ್ಯ ೩ 

ಆಗಲೇ ಎಂಟೂವರೆ  ಆಗಿತ್ತು.. ವಯಸ್ಸು ದೇಹಕ್ಕೆ ಹೌದು.. ಆದರೆ ವಯಸ್ಸನ್ನು ಮೀರಿದ ಉತ್ಸಾಹ.. ಮನೆಯಲ್ಲಿ ಹತ್ತಾರು ಅಡೆತಡೆಗಳು, ತೊಂದರೆಗಳು, ಕಷ್ಟ ಕಾರ್ಪಣ್ಯಗಳಿದ್ದರೂ.. ಒಬ್ಬರಲ್ಲೂ ಕುಂದದ ಉತ್ಸಾಹ.. ತಡವಾದರೇನಂತೆ ಕಾಯುತ್ತೀವಿ ಎನ್ನುವ ಪ್ರೀತಿಯ ಹಠ.. ಮೆಟ್ಟಿಲನ್ನು ದುಡುದುಡು ಹತ್ತುತ್ತ ಬಂದ... ಶ್ರೀಕಾಂತಣ್ಣ ಜನುಮದಿನದ ಶುಭಾಶಯಗಳು... ಶ್ರೀಕಾಂತ್ ಭಾಯ್ ಜನುಮ್ ದಿನ್ ಮುಬಾರಕ್.. ಶ್ರೀ ಭಾಯ್ ಸದಾ ಖುಷಿಯಾಗಿರಿ.. ಶ್ರೀಕಿ ಹ್ಯಾಪಿ ಬರ್ತಡೇ .. ಅಣ್ಣಯ್ಯ ಹ್ಯಾಪಿ ಬರ್ತಡೇ.. ಶ್ರೀಕಾಂತವರೇ ಜನುಮದಿನದ ಶುಭಾಶಯಗಳು.. ಈ ಶುಭಾಶಯಗಳ ಮಳೆ ತುಸು ಹೆಚ್ಚಾಗಿಯೇ ಬಂದಿತ್ತು.. 

ಈಗ ನಾವೆಲ್ಲರೂ ಈ  ಮಹಾನ್ ಆತ್ಮ ಶ್ರೀಕಾಂತಣ್ಣ ಅವರಿಗೆ ಜನುಮದಿನದ ಶುಭಾಶಯಗಳನ್ನು ಕೋರೋಣ.. ನಿಮಗೆ ಭಗವಂತ ಎಲ್ಲಾ ಸುಖ ಸಂತೋಷ ನೆಮ್ಮದಿಗಳನ್ನು ಸದಾ  ಅಂತ ಹಾರೈಸುತ್ತೇವೆ... ಇದು ಶ್ರೀಕಾಂತಣ್ಣ ಅವರ ಐವತ್ತನೇ  ಹುಟ್ಟು ಹಬ್ಬ.. ಇಂತಹ ಸುಂದರ ದಿನವನ್ನು ನಮ್ಮ ಜೊತೆ ಕಳೆಯುತ್ತಾ ಇರುವುದು ನಮಗೆ ಸಂತೋಷ .. ಅಂತ ಹೇಳಿ ತಲೆಗೆ ಒಂದು ಪೇಟಾ ಅರ್ಥಾತ್ ಕಿರೀಟ.. ಕುತ್ತಿಗೆಗೆ ಹಾರ.. ಹೆಗಲುಗಳಿಗೆ ಶಾಲು .. ಹಣೆಗೆ ಪ್ರೀತಿಯ ತಿಲಕ.. ಹೂವಿನ ಮಳೆ... 

ಇಂತಹ ಸುದಿನವನ್ನು ಕಂಡ ಮನಸ್ಸು ಇದು ನನ್ನ ಭಾಗ್ಯವೇ.. "ಸೌಭಾಗ್ಯ"ವೇ  .. ಮನಸ್ಸು ತುಂಬಿ ಬಂದಿತ್ತು.. ಎಲ್ಲರೂ ಒಬ್ಬೊಬ್ಬರಾಗಿ ಬಂದು ಮತ್ತೊಮ್ಮೆ ಶುಭಾಶಯಗಳನ್ನು ಕೋರಿದ್ದು ಮನದಲ್ಲಿ ಪ್ರೀತಿಯ ಸಾಗರವೇ ಹರಿಯುತಿತ್ತು.. ಯಾರಿಗೂ ಶ್ರೀ ತಡವಾಗಿ ಬಂದ ಎಂಬ ಬೇಸರವಿರಲಿಲ್ಲ.. ಇವತ್ತು ತಡವಾದರೂ ಸರಿ ಶ್ರೀಕಾಂತಣ್ಣ ಅವರಿಗೆ ಶುಭ ಕೋರಿಯೇ  ಹೋಗೋದು ಅಂತ  ಹಿರಿಯ ಸಹೃದಯಗಳು,  ಸಹೋದರಿಯರು ಹಠ ಹಿಡಿಡಿದ್ದರು ಎನ್ನುವ ಸುದ್ದಿ ಕೇಳಿದಾಗ ಮನಸ್ಸು ಮೂಕವಾಗಿತ್ತು..  ಬಾಸನ್ನು ನೋಡಬೇಕು ಎಂದು ಸುತ್ತಮುತ್ತಲೂ ನೋಡಿದೆ.. ಮುರುಳಿಧಾರಿಯಾಗಿ ಒಂದು ಟೇಬಲಿನ ಮೇಲೆ ಕಾಲುಗಳನ್ನು ಅಡ್ಡವಾಗಿ  ಹಾಕಿಕೊಂಡು ನಸುನಗುತ್ತಾ ನಿಂತಿದ್ದ ಬಾಸನ್ನು ನೋಡಿ... "ಬಾಸ್ ಏನಿದು ನಿನ್ನ ಲೇಲೆ.. " ಎಂದ.. 

ಬಾಸ್ ಹ್ಯಾಪಿ ಬರ್ತ್ ಡೇ ಶ್ರೀ.. ಅರ್ಜುನ ಆದ ಮೇಲೆ ನನ್ನನ್ನು ಇಷ್ಟು ಹಚ್ಚಿಕೊಂಡ ಕೆಲವರಲ್ಲಿ ನೀನು ಒಬ್ಬ.. ಯೋಚನೆ ಬೇಡ ನಿನ್ನ ಸುವರ್ಣ ವರ್ಷ ಸುವರ್ಣಮಯವಾದ ಸಂತಸಗಳನ್ನು ತಂದು ಕೊಡುತ್ತದೆ.... ಇದು ನನ್ನ ಮಾತು ಹಾಗೂ ಆಶೀರ್ವಾದ 

ಬಾಸ್ ಎಲ್ಲ ನಿನ್ನ ಕೃಪೆ.. 
ಕೊಡೋನು ನೀನೆ.. 
ತಗೋಳ್ಳೋನು ನೀನೆ 
ಕೊಟ್ಟು  ಮತ್ತೆ ಉದ್ಧರಿಸುವವನು ನೀನೆ... !!! 
ನಾ ನಿನ್ನ ಮುಂದೆ ಹುಲುಮಾನವ ... ಧನ್ಯೋಸ್ಮಿ ಬಾಸ್.. 














*******

ಮೈ ಮರೆತಿದ್ದ ಅಜ್ಜನನ್ನು ಅಲುಗಾಡಿಸಿ ಅಜ್ಜ ಅಜ್ಜ ಅಜ್ಜ್ಯೋ... ಏನ್ ಆಯ್ತು.. 


ಏನಪ್ಪಾ ಶ್ರೀ ಇದು.. ದೃಶ್ಯ ತೋರಿಸುತ್ತೀನಿ ಅಂತ ಬ್ರಹ್ಮಾಂಡವನ್ನೇ ತೋರಿಸಿದೆ.. ನೋಡಪ್ಪ ಇದರ ತಾತ್ಪರ್ಯ ಇಷ್ಟೇ.. ಮುರುಳಿಯನ್ನು ಊದಿದಾಗ ಆಕಳು, ದನ.. ಕರುಗಳು ಬರುತ್ತವೆ.. ಮುರುಳಿಯನ್ನು ಓದಿದಾಗ  ಶಾಂತಿ ನೆಮ್ಮದಿ ಸಂತೋಷಗಳು ಮನದೊಳಗೆ ಬರುತ್ತವೆ.. ಜಗತ್ತು ಒಂದು ಕನ್ನಡಿಯಿದ್ದ ಹಾಗೆ.. ನಗುತ್ತಾ ನೋಡು.. ಪ್ರತಿಬಿಂಬ ಕೂಡ ನಗುತ್ತಿರುತ್ತದೆ.. ಬದುಕು ಒಂದು ತಕ್ಕಡಿ.. ಒಂದು ಕಡೆ  ನೀನು ಕೂತಿರುವೆ. ಇನ್ನೊಂದು ಕಡೆ ನೀ ಸಂಪಾದಿಸಿದ ಆಸ್ತಿ ಅರ್ಥಾತ್ ನಿನ್ನನ್ನು ಇಷ್ಟಪಡುವ ಮಂದಿ ಇರುತ್ತಾರೆ.. ಯಾವಾಗ ಅದು ಸಮಬಲವಾಗುತ್ತದೆಯೋ ಆಗ ಬದುಕು ಪ್ರೀತಿ ಸ್ನೇಹಗಳ ಸಂಗಮ.. ಕಲೆಗಳು ಏರುತ್ತಾ ಹೋದ ಹಾಗೆ ಹೇಗೆ ಚಿತ್ರ ಸುಂದರವಾಗುತ್ತದೆಯೋ ಹಾಗೆ ಸ್ನೇಹದ ಮಮತೆಯ ನಿನ್ನನ್ನು ಬಂದಿಸಿದಷ್ಟು ನೀನು ಇನ್ನಷ್ಟು ನೆಮ್ಮದಿ ಕಾಣುತ್ತೀಯೆ... ಮುರುಳಿಯಲ್ಲಿ ಅನೇಕಾನೇಕ ರಂಧ್ರಗಳಿರುತ್ತವೆ.. ಅದು ಮುರುಳಿಯನ್ನು ಇನ್ನಷ್ಟು ಸುಂದರ ಮಾಡುವುದಷ್ಟೇ ಅಲ್ಲದೆ.. ನಾದವನ್ನು ಸೃಷ್ಟಿಸುತ್ತದೆ.. ಬದುಕಲ್ಲಿ ಏರಿಳಿತ ಸಹಜ..  ಅವು ಮುರುಳಿ ಅರ್ಥಾತ್ ಕೊಳಲಿನಲ್ಲಿರುವ ರಂಧ್ರಗಳ ಹಾಗೆ ಬದುಕಿನಲ್ಲಿ ಹಿತವಾದ ಸಂಗೀತವನ್ನು ತುಂಬುತ್ತದೆ.. 


ಅಜ್ಜ ಸೂಪರ್ ಸೂಪರ್.. ಅದಕ್ಕೆ ನಿನ್ನನ್ನು ಅಜ್ಜ ಅನ್ನುವುದು.. ಓ ಕ್ಷಮಿಸಿ  ಏಕವಚನ ಬಂದುಬಿಟ್ಟಿತು.. 

ಹೇ ಶ್ರೀ ಪ್ರೀತಿಯಿದ್ದ ಕಡೆ ಏಕವಚನವೇ ಸರಿ.. ನಿನಗೆ ಶುಭವಾಗಲಿ ಹಾಗೆ ಸುವರ್ಣ ಸಂಭ್ರಮದ ವರ್ಷದಲ್ಲಿ ಹರ್ಷ ಸದಾ ನಿನದಾಗಲಿ.. ನಿನಗೆ ಮತ್ತು ನಿನ್ನ ಸೀಮೆಯಿಲ್ಲದ ಸೀಮೆಗೆ ಶೀತಲವಾದ ಐಶ್ವರ್ಯಕ್ಕೆ ಶುಭವಾಗಲಿ.. ಮತ್ತೆ ನನ್ನ ನೆನಪು ಮತ್ತು ಆಶೀರ್ವಾದ ಸದಾ ಇರಲಿ.. 

ಈ ಸಂಭ್ರಮದಲ್ಲಿ ದೂರದಿಂದ ಬಂದಿದ್ದ ನಿನ್ನ ಆತ್ಮೀಯ ಗೆಳೆಯರು ಶಶಿ, ವೆಂಕಿ ತಂದಿದ್ದ ಕೇಕು ನಿನಗಾಗಿ ಕಾಯುತ್ತಿದೆ.  ಮನೆಯಲ್ಲಿ ಅದನ್ನು ತಿಂದು ಸಂಭ್ರಮಿಸು.. ಅವರು ಮಾಡಬೇಕಿಂದಿದ್ದ ರೀತಿಯಲ್ಲಿ ಆಗಲಿಲ್ಲವಾದರೂ.. ನಿನ್ನ ಸುವರ್ಣ  ಸಂಭ್ರಮ ಇಷ್ಟು ಭರ್ಜರಿಯಾಗಿ ನೆಡೆದದ್ದು ಅವರಿಗೂ ಸಂತೋಷ ತಂದಿದೆ.. ಅವರಿಗೂ ಶುಭ ಹಾರೈಕೆಗಳು.. 



ಧನ್ಯವಾದಗಳು ಅಜ್ಜ.. ನನ್ನ ಬದುಕಿನ ಮುಖ್ಯ ವರ್ಷಗಳನ್ನು ಜೊತೆ  ಜೊತೆಯಲ್ಲಿ ಕಳೆದಿದ್ದೇವೆ.. ಅಂದು ಇದ್ದ ಸ್ನೇಹ ಇಂದಿಗೂ ಎಂದಿಗೂ ಚಿರವಾಗಿ ಸದಾ ಇರುತ್ತದೆ..  

*****

ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾ ಪೂರಾ.. ಐವತ್ತನೆಯ ಸಂಭ್ರಮಾಚರಣೆ ಅರಿವಿಲ್ಲದೆ ತುಸು ದೊಡ್ಡದಾಗಿಯೇ  ನೆರವೇರಲು ಯೋಜನೆ ಹೆಣೆದ ನನ್ನ ಮನೋನಾಯಕಿ ಸೀಮು  ಅದ್ಭುತ ಗೆಳತಿಯಾಗಿ ನನ್ನ ಮಗಳು ಶೀತಲ್.. ದೂರ್ ಗಗನ್ ಕಿ ಚಾವೋ ಮೇ ಇಂದ ಐಶ್ವರ್ಯ..  ಹೆಣ್ಣು ಕೊಟ್ಟು ಕಣ್ಣು ಕೊಟ್ಟ ಅತ್ತೆ ಮಾವ.. ಮಾಯೆಯನ್ನು ಗೆದ್ದ ಅಜಿತ.. ನನ್ನ ಪ್ರೀತಿಯ ಕುಟುಂಬದ ಅಕ್ಕ, ಅಣ್ಣಅತ್ತಿಗೆ ತಮ್ಮ.. ಬಂಧುಗಳು.. ಜೊತೆಗೆ ನನ್ನ ಶಾಲಾದಿನಗಳ ಸಹಪಾಠಿಗಳು ಶಶಿ,  ಜೆಎಂ, ಲೋಕಿ, ಪ್ರತಿಭಾಕ್ಕಯ್ಯ, ಸೌಮ್ಯ, ಸಮತಾ.. ಇವರ ಜೊತೆ ಸುಧಾ, ನಂದಿನಿ, ಶೋಭನ್  ಬಾಬು, ಸತೀಶ, ಪ್ರಕಾಶ.. ಹಾಗೂ ನನ್ನ ಕಾಲೇಜಿನ ಗೆಳೆಯರು, ಸಹೋದ್ಯೋಗಿಗಳು... ಇವರೆಲ್ಲರ ಜೊತೆಯಲ್ಲಿ ತಾಯಿ, ಅಕ್ಕ, ತಂಗಿ, ಗೆಳತೀ ಹೀಗೆ ಯಾವುದೇ ಬಂಧದಲ್ಲೂ ಸಿಗದ ಸಾಕ್ಷತ್ ದೇವಿ ರೂಪ ಸತೀಶ್...  ಶ್ರೀ ನಿಮ್ಮ  ಬರವಣಿಗೆಯ ಅಭಿಮಾನಿ ನಾನು.. ಎಂದು ಬದುಕಿನ ಪ್ರತಿಹಂತದಲ್ಲೂ ಇರುವ ಕೊಟ್ಟ ದೇವರು ವರ ನಿವೇದಿತಾ ಚಿರಂತನ್....  ಸುಮಾರು ಇಪ್ಪತ್ತೈದು ವರ್ಷಗಳಿಂದ ಬದುಕಿನ ಪ್ರತಿ ಹಂತದಲ್ಲೂ ಸ್ಫೂರ್ತಿ ತುಂಬಿರುವ ನನ್ನ ಮುದ್ದು ತಂಗಿ ಗೀತಾ ಕೃಷ್ಣನ್....  ಜನುಮದಿನದಂದು ದೂರದೂರಿನಿಂದ ಕರೆ ಮಾಡಿ ಹರಸಿದ ಅಜಾದ್ ಸರ್, ಬಾಲೂ ಸರ್.. ಇಲ್ಲೇ ಇರುವ ಬದರಿ ಸರ್.. ಅಸಂಖ್ಯಾತ ಪ್ರೀತಿಯ ಸ್ನೇಹಿತರು, ತಂಗಿಯರು ಎಲ್ಲರಿಗೂ ಹೇಳೋದು ಒಂದೇ ಮಾತು.. 

ಎಂದರೋ ಮಹಾನುಭಾವುಲು ಅಂದರೀಕಿ ವಂದನಮೂ... 

ಇಷ್ಟೆಲ್ಲಾ ಸರಿ.. ಇನ್ನೊಬ್ಬರು ಇದ್ದಾರೆ.. ನನ್ನ ಮನವನ್ನು ಅರ್ಥ ಮಾಡಿಕೊಳ್ಳುವುದಷ್ಟೇ ಅಲ್ಲ.. ಹೆಜ್ಜೆಗೆ ಹೆಜ್ಜೆ ಸೇರಿಸುವ.. ಹಾಡಿಗೆ ಹಾಡು ಕೂಡಿಸುವ.. ಹೃದಯದ ಬಡಿತಕ್ಕೆ  ತಾಳ ಸೇರಿಸುವ.. ನೀವು ಹೇಳೋದೇ ಬೇಡ .. ನಾ ಮಾಡುತ್ತೇನೆ ಎಂದು ಹೇಳುವುದಷ್ಟೇ ಅಲ್ಲದೆ.. ಅಂದುಕೊಂಡದ್ದಕ್ಕಿಂತ  ಒಂದು ಕೈ ಮೇಲೆ ಮಾಡಿ ತೋರಿಸುವ ಭಗವಂತ ನೀಡಿರುವ ಅದ್ಭುತ ಗೆಳೆಯ ನೀವು ಎನ್ನುತ್ತಾ ಮನದಲ್ಲಿ ಮನೆಮಾಡಿರುವ ನನ್ನ ಪ್ರೀತಿಯ ಸೀಮು ಈ ಸುವರ್ಣ ವರ್ಷವನ್ನು ಇನ್ನಷ್ಟು ಹೊಳಪಿನ ಸಂಭ್ರವಾಗಿ ಮಾಡಿದ್ದಾಳೆ.. ಅವಳಿಗೆ ಸಹಸ್ರ ಪ್ರಣಾಮ್ ದಂಡವತ್ !!!

Friday, March 17, 2023

ಕಗ್ಗಂಟಿನ ಕರದಂಟು..ಡಿವಿಜಿ ಅಜ್ಜ

 ಬ್ಯುಗಲ್ ರಾಕ್ ಅರ್ಥಾತ್  ಕಹಳೆ ಬಂಡೆಯ ಹತ್ತಿರ ಕೂತಿದ್ದೆ.. ಡಿವಿಜಿ  ಅಜ್ಜ ಒಂದು ಛತ್ರಿಯ ಕೆಳಗೆ ಬಂಗಾರದಂತಹ ರವಿ ಕಿರಣಗಳನ್ನು ಆಸ್ವಾದಿಸುತ್ತಾ ಕುಳಿತಿದ್ದರು.. ಸ್ವಲ್ಪ ಹೊತ್ತಿನ ಮುಂಚೆ ವಿದ್ಯಾರ್ಥಿ ಭವನದ ಘಮ ಘಮ ಮಸಾಲೆ ದೋಸೆಯ ಸ್ವಾಧ ಇನ್ನೂ ನಾಲಿಗೆಯ ಮೇಲೆ ಕುಣಿಯುತಿತ್ತು.. 


ಕ್ಷಣ ಕ್ಷಣಕ್ಕೂ ಕಹಳೆ ಬಂಡೆಯ ದ್ವಾರದತ್ತ ಕಣ್ಣು ಹಾಯಿಸುತ್ತಿದ್ದರು. ಯಾರದೋ ಬರುವಿಕೆಯ ನಿರೀಕ್ಷೆಯಲ್ಲಿದ್ದರು.. 

ಅನತಿ ಕ್ಷಣ..  ಶ್ವೇತ ವಸ್ತ್ರಧಾರಿ... ನಗುಮೊಗದ ಉದ್ದ ನಾಮದವರೊಬ್ಬರು.. ಅರೆ ಇವರು ನಮ್ಮವರು ಅಪ್ಪ ಅಂದರೆ ಹೀಗಿರಬೇಕು ಎನಿಸುವರೊಬ್ಬರು.. ನಾ ಬದುಕಿ ಅಭಿಮಾನದಿಂದ  ಎನ್ನುವರೊಬ್ಬರು ಬಂದರು.. ಆಗ ನೆಡದದ್ದೆ ಈ ಸಂಭಾಷಣೆ.. 

ಅಲ್ರಪ್ಪ.. ಇವ ಮತ್ತೆ ನಮ್ಮನ್ನೆಲ್ಲ ಅಕ್ಷರಗಳಲ್ಲಿ ಬಂದಿಸೋಕೆ ಹೊರಟಿದ್ದಾನೆ.. ನನ್ನ ಬಗ್ಗೆ  ಹೇಳಿ ವರ್ಷಗಳೇ ಆಯ್ತು.. ಅಲ್ಲಿಯೇ ಅದು ಕುಂಟುತ್ತಿದೆ.. ಒಂದೆರಡು ಭಾಗಗಳು ಬಂದವು.. ನಂತರ ಸದ್ದಿಲ್ಲ..  ಈಗ ಮತ್ತೆ ಸಾಹಸ ಅನ್ನುತ್ತಿದ್ದಾನೆ.. ಎನ್ರಪ್ಪ ಮಾಡೋದು.. ಅಂದ ಹಾಗೆ ಅಜ್ಜ ನಿಮಗೆ ಜನುಮದಿನದ ಶುಭಾಶಯಗಳು.. !


ನೋಡಿ ಅವ ಮಾಡೋದು ಮಾಡಲಿ.. ನಮ್ಮ ಆಶೀರ್ವಾದ ಅವನ ಮೇಲೆ ಇರಲಿ ಅಷ್ಟೇ.. ನನ್ನ ಬಗ್ಗೆ ಅಂತಲೂ  ಹೇಳಿದ್ದಾನೆ ಆದರೆ ಶುರು  ಮಾಡಿಯೇ ಇಲ್ಲ... ಆದರೆ ನಂಬಿಕೆಯೇ ದೇವರು.. ಕಾಯೋಣ  ನಾವೆಲ್ಲಾ ಅವನೊಳಗೆ ಅವನ ಬರವಣಿಗೆಯಲ್ಲಿ ಬಂದೆ ಬರುತ್ತೇವೆ.. ಡಿವಿಜಿ ಅಜ್ಜ ನಿಮಗೆ ಜನುಮದಿನದ ಶುಭಾಶಯಗಳು.. !


ಅಭಿಮಾನಿ ದೇವರುಗಳಿಗೆ ನಮಸ್ಕಾರ.. ಎಲ್ಲರೂ ಕ್ಷೇಮವೇ.. ಯೋಚಿಸಬೇಡಿ.. ಅವನಿಗೆ ಐವತ್ತು ಆಯಿತು.. ಆದರೆ ನನ್ನ ಬಗ್ಗೆ ನಲವತ್ತೈದರಲ್ಲಿಯೇ ಅಟಕಾಯಿಸಿಕೊಂಡು ಕೊಂಡು ಕೂತಿದ್ದಾನೆ.. ಆದರೆ ಎಲ್ಲರನ್ನು ಸಲಹುವ ಭಗವಂತ  ಭಗವಂತ ಇದ್ದ ಹಾಗೆ.. ನಮ್ಮೆಲ್ಲರ ಸಿನಿಬದುಕು ಅವನ ಅಕ್ಷರಗಳಲ್ಲಿ ಬಂದೆ ಬರುತ್ತದೆ .. ತಲ್ಲಣಿಸದಿರು ಕಂಡ್ಯ ತಾಳು ಮನವೇ.. ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ ಅಂತ ಕನಕದಾಸರು ಹೇಳಿಲ್ಲವೇ... ಶ್ರೀ ಗುಂಡಪ್ಪನವರಿಗೆ ಜನುಮದಿನದ ಶುಭಾಶಯಗಳು..  

ಎಲ್ಲರಿಗೂ ನಮಸ್ಕಾರ.. ಅಜ್ಜ ಇಲ್ಲಿಯೇ ಇದ್ದಾರೆ ಅಜ್ಜ ನಮಸ್ಕಾರ.. ನಿಮ್ಮ ಜನುಮದಿನಕ್ಕೆ ಶುಭಾಶಯಗಳು.. ಅಜ್ಜ ನಿಮ್ಮಿಂದ ನನಗೆ ಈ ಲೋಕದಲ್ಲಿ ಒಂದು ಹೆಸರಾಯಿತು.. ಅಂದುಕೊಂಡಿದ್ದ  ಮುಗಿಸಿದೆ ಎನ್ನುವ ತೃಪ್ತಿ ನನ್ನದು.. ಯುಗಯುಗಕ್ಕೂ ಸಲ್ಲುವ ನಿಮ್ಮ ಬೆಲೆಕಟ್ಟಲಾಗದ ಅಕ್ಷರಗಳನ್ನು ಉಪಯೋಗಿಸಿಕೊಂಡು ಅದಕ್ಕೊಂದು ಚೌಕಟ್ಟು ಹಾಕಿದೆ ಎನ್ನುವ ನಂಬಿಕೆ ನನ್ನದು.. ನನ್ನ ಪ್ರೀತಿಯ ಹುಡುಗ ಇವನು..  ಖಂಡಿತ ಏನೋ ಮಾಡೋಕೆ ಹೊರಟಿದ್ದಾನೆ.. ನನ್ನ ಸತತ ನಾಲ್ಕು ಜನುಮದಿನಗಳಿಗೆ ನಿಮ್ಮನ್ನು ಅಕ್ಷರ ರೂಪದಲ್ಲಿ ಕರೆದುಕೊಂಡು ಬಂದು ಆಶೀರ್ವಾದ ಕೊಡಿಸಿದ ಹುಡುಗ ಇವನು.. ಇವನ ಪ್ರಯತ್ನಕ್ಕೆ ನಿಮ್ಮ ಆಶೀರ್ವಾದ ಇರಲಿ ಅಜ್ಜ.. 

ಅಲ್ಲಿಯ ತನಕ ಸುಮ್ಮನೆ ಎಲ್ಲರ ಮಾತನ್ನು  ಕೇಳುತಿದ್ದ ಅಜ್ಜ.. ಮೆಲ್ಲನೆ ನಕ್ಕು.. ಇಳಿಯುತ್ತಿದ್ದ ಕನ್ನಡಕವನ್ನು  ಸರಿಮಾಡಿಕೊಂಡು.. ಬಾಲಣ್ಣ (ಅಭಿಮಾನ್ ಸ್ಟುಡಿಯೋದ ಬಾಲಕೃಷ್ಣ), ರಾಜಣ್ಣ (ಕರುನಾಡಿನ ಅಣ್ಣಾವ್ರು ಶ್ವೇತಾ ವಸ್ತ್ರಧಾರಿ), ಅಶ್ವಥ್ (ಅಪ್ಪ ಅಂದರೆ ಹೀಗಿರಬೇಕು ಎಂದು ಬೆಳ್ಳಿ ಪರದೆಯ ಮೇಲೆ ತೋರಿಸಿದ ಅಶ್ವಥ್), ಮಗು ರವಿ (ಕಗ್ಗ ದ ರಸಧಾರೆ ಹರಿಸಿದ ರವಿ ತಿರುಮಲೈ ನಾಮಧಾರಿಯಾಗಿ) ಎಲ್ಲರಿಗೂ ಶುಭ ಆಶೀರ್ವಾದಗಳು.. ನಿಮ್ಮ ಅಭಿಮಾನ.. ನಿಮ್ಮ ಹೆಮ್ಮೆ.. ನಿಮ್ಮ ಆತ್ಮೀಯತೆ..ನಿಮ್ಮ ಪ್ರೀತಿ ನನ್ನನ್ನು ಈ ಲೋಕದಲ್ಲಿ ಜೀವಂತವಾಗಿರಿಸಿದೆ..  ಆಗಲಿ ನೀವೆಲ್ಲ ಹೇಳಿದ ಹಾಗೆ ನನ್ನ ಆಶೀರ್ವಾದಗಳು ಇದ್ದೆ ಇರುತ್ತವೆ.. ಈ ಹುಡುಗನಿಗೆ ಶುಭಕೋರೋಣ.. ಹಾಗೆಯೇ  ನಿಮ್ಮೆಲ್ಲರ ಶುಭಾಶಯಗಳು ನನ್ನ  ಸ್ವರ್ಗದ ಬದುಕಿಗೆ ಸ್ಫೂರ್ತಿ ಕೊಡುತ್ತಿದೆ.. 


ಅಂದ ಹಾಗೆ ಶ್ರೀ ನಿನ್ನ ಯೋಜನೆ ಏನು.. ಇವರೆಲ್ಲರೂ ನಿನ್ನ ಮೇಲಿನ ನಂಬಿಕೆಯನ್ನು ವಿಶ್ವಾಸವನ್ನು ತಮ್ಮ ಮಾತುಗಳಲ್ಲಿ ಹೇಳಿದ್ದಾರೆ.. ನೀ ಏನು ಮಾಡೋಕೆ ಹೊರಟಿದ್ದೀಯ.. ಅದನ್ನು ಕತೆ ಮಾಡದೆ ಚುಟುಕಾಗಿ ಹೇಳುತ್ತೀಯಾ.. ಗಾಂಧಿ  ಸುಬ್ಬಮ್ಮನ ಅಂಗಡಿಯ ಕುರುಕುಲು.. ಆಂಬೊಡೆ .. ತೆಗೆದುಕೊಂಡು ಹೋಗಬೇಕು.. ಪೊಟ್ಟಣ ಕಟ್ಟಿಯಾಗಿದೆ ಅಂತ ಆ ಅಂಗಡಿಯ ಹುಡುಗ ಕೂಗಿ ಹೇಳಿ ಹೋಗಿದ್ದಾನೆ.. ಬೇಗ ಶುರು ಮಾಡು.. 

ಅಜ್ಜ ನಿಮಗೆ ಜನುಮದಿನದ ಶುಭಾಶಯಗಳು.. ನನ್ನೊಳಗೆ ನನ್ನ ಅಪ್ಪ ಕೂತು ಹೇಳುತ್ತಾರೆ ಅದನ್ನು ಬರೆಯೋದಷ್ಟೇ ನನ್ನ ಕೆಲಸ.. ಈ ಮಹನೀಯರೆಲ್ಲ ನನ್ನ ಮೇಲಿನ ನಂಬಿಕೆಯನ್ನು ತಮ್ಮ ಮಾತುಗಳಲ್ಲಿ ಹೇಳಿದ್ದಾರೆ.. ಅದನ್ನು ನಿಭಾಯಿಸೋದಷ್ಟೇ ಕೆಲಸ.. ಬರಹ ನಾಲ್ಕು ಮಂದಿಗೆ ಇಷ್ಟವಾಗಿದೆ ಅಂದರೆ ಆದರೆ ಶ್ರೇಯಸ್ಸು ನನ್ನ ಜನುಮದಾತನಿಗೆ.. 

ಇರಲಿ ಅಜ್ಜ ನಿಮ್ಮ ಪ್ರಶ್ನೆಗೆ ಉತ್ತರ.. ನಿಮ್ಮ ಕಗ್ಗಗಳನ್ನು ಜನಮಾನಸಕ್ಕೆ ತಲುಪಿಸಿದ ಖ್ಯಾತಿ ಅನೇಕರಿಗೆ.. ಆದರೆ ನನಗೆ ಪರಿಚಯವಿರುವ ಒಂದಿಬ್ಬರ ಅತ್ಯುತ್ತಮ ಪ್ರಯತ್ನ ನನ್ನನ್ನು ಈ ಒಂದು ಸಾಹಸಕ್ಕೆ ಕೈಹಾಕುವಂತೆ ಪ್ರೇರೇಪಿಸಿದೆ.. ನಿಮ್ಮ ಅತ್ಯುತ್ತಮ ಕಗ್ಗಗಳ ಲಹರಿಯನ್ನು ನನ್ನಿಷ್ಟದ ಸಿನೆಮಾದೃಶ್ಯಗಳಿಗೆ ಹೊಂದಿಸಿ.. ನಿಮ್ಮ ಕಗ್ಗದ ಹೂರಣವನ್ನು ಸಿನಿಮಾ ದೃಶ್ಯಗಳಲ್ಲಿ, ಹಾಡುಗಳಲ್ಲಿ,, ಸಾಹಸಗಳಲ್ಲಿ.. ಹೊಂದಿಕೊಂಡಿಕೊಂಡಿರುವ ಬಗ್ಗೆ ನನ್ನ ಅರಿವಿಗೆ ಬಂದ ರೀತಿಯಲ್ಲಿ ಹೇಳುವ ಒಂದು ಪ್ರಯತ್ನ  ಮಾಡಬೇಕು ಎನಿಸಿತು.. ಅದಕ್ಕೆ ಸ್ಫೂರ್ತಿ ಕಗ್ಗ ರಸಧಾರೆಯ ನನ್ನ ಗುರು ಸಮಾನರು ಹಾಗೂ ನಿಮ್ಮ ಪ್ರೀತಿಯ ಶ್ರೀ ರವಿ ತಿರುಮಲೈ  ಸರ್.. ಮತ್ತೆ ಪುಟ್ಟ ಪುಟ್ಟ ವಿಡಿಯೋ ತುಣುಕು ಮಾಡಿ ಮೂರು ನಾಲ್ಕು ನಿಮಿಷಗಳ ಮಾತುಗಳಲ್ಲಿ ಕಗ್ಗದ ಮಾರ್ಗವನ್ನು ತೋರಿಸುತ್ತಿರುವ ನಟಿ,  ಬರಹಗಾರ್ತಿಯಾಗಿರುವ ದೀಪ ರವಿಶಂಕರ್ ಮೇಡಂ.. ಅಷ್ಟೇ ಅಜ್ಜ ನನ್ನ ಆಸೆ.. ನಿಮ್ಮ ಆಶೀರ್ವಾದವಿರಲಿ.. 

ಮಗು ಶ್ರೀ ಉತ್ತಮ ಯೋಚನೆ ಯೋಜನೆ.. ಆಗ ನನ್ನ ಮನಸ್ಸಿಗೆ ಬಂದಿದ್ದನ್ನು ನಾಲ್ಕು ಸಾಲುಗಳಲ್ಲಿ ಗೀಚಿದ್ದೇ.... ಅಂದು ವಾಮನರೂಪದಲ್ಲಿದ್ದ ಆ ನನ್ನ ಚುಟುಕು ಬರಹಗಳು ಇಂದು ವಿರಾಟ್ ರೂಪ ಹೊಂದಿ ತ್ರಿವಿಕ್ರಮನ ಹಾಗೆ ನಿಂತಿರುವುದು ಸೋಜಿಗವೇ ಸರಿ.. ಖುಷಿಯ ವಿಚಾರವೆಂದರೆ.. ಅಂದು ಬರೆದ ಈ ಕಗ್ಗಗಳು ಮಂಕುತಿಮ್ಮನ ಜಗತ್ತಿನಲ್ಲಿ ಕೋಟ್ಯಂತರ ಮನಸ್ಸಿಗೆ ದಾರಿ "ದೀಪ"ವಾಗಿದೆ.,  "ರವಿ"ಕಿರಣವಾಗಿದೆ  ಎಂದು ತಿಳಿದು ಬಹಳ ಖುಷಿಯಾಗಿದೆ.. ಆಗಲಿ ನಿನ್ನ ಪ್ರಯತ್ನಕ್ಕೆ ಶುಭವಾಗಲಿ.. ಸರ್ವೇ ಜನ ಸಮಸ್ತ ಸುಖಿನೋಭವಂತು.. ನಾ ಹೊರಟೆ.. ಬಾಲಣ್ಣ, ರಾಜಣ್ಣ, ಅಶ್ವಥ್, ರವಿ ಹೋಗೋಣವೆ .. ನಮ್ಮ ಪುಷ್ಪಕ ವಿಮಾನದಲ್ಲಿ ಸುಬ್ಬಮ್ಮನ ಅಂಗಡಿಯ ತಿನಿಸುಗಳು ಸಿದ್ಧವಾಗಿವೆ.. ಶ್ರೀ ನಿನಗೆ ಶುಭ ಹಾರೈಕೆಗಳು.. 

ನಾ ತಲೆಬಾಗಿಸಿ ನಿಂತಿದ್ದೆ.. ಕಣ್ಣುಗಳು ಮಂಜಾಗಿದ್ದವು .. ಮನದಲ್ಲಿ 

ಜಗವ ನೋಡಿ ಕಲಿಯೋ ಮನುಜ 
ಜಗದಲ್ಲಿ ಇರದೇ ಇರುವುದು ಎಲ್ಲಿದೆಯೋ 
ಜಗದಲ್ಲಿ ಜಾಗವ ಮಾಡಿಕೊಂಡು 
ಕಲಿತು ಸಾರ್ಥಕ ಪಡಿಸಿಕೊ ಬದುಕನ್ನು ಮಂಕುತಿಮ್ಮ!!!

ಪುಷ್ಪಕ ವಿಮಾನ ಹಾರಲು ಶುರುಮಾಡಿತು.. ಹಾರುತ್ತ  ಹಾರುತ್ತಾ ಗಗನದಲ್ಲಿ  ಚುಕ್ಕೆಯಾಯಿತು.. !