Sunday, August 21, 2011

ಅಣ್ಣ - ಅಂದ್ರೆ ನಾನೇ


ಕರ್ನಾಟಕದ ಯಾವ ಮೂಲೆಗೆ ಹೋದರು ಅಣ್ಣ ಅಂದ್ರೆ ಗೊತ್ತಿರೋದು ಒಬ್ಬರೇ...ಅವರೇ ನಮ್ಮ ವರನಟ ರಾಜಣ್ಣ....ಆದ್ರೆ ಆಗಸ್ಟ್ ೨೦ ರಂದು ನಮ್ಮ ಸ್ವಾತಂತ್ರ ಉದ್ಯಾನವನಕ್ಕೆ ಹೋದಾಗ ಅಲ್ಲಿ ಒಬ್ಬರಲ್ಲ ಇಬ್ಬರಲ್ಲ ಸಾವಿರಾರು ಅಣ್ಣ ಇದ್ದರು...

ಅವರೇ ನಮ್ಮ ನಿಮ್ಮ ಅಣ್ಣ ಹಜಾರೆ....ಅಲ್ಲಿದ್ದ ಜನ-ಜಂಗುಳಿ ಬರಿ ವಯಸ್ಸಾದವರು ಮಾತ್ರ ಇರಲಿಲ್ಲ..ಇಡಿ ಪ್ರಾಂಗಣ ಯುವಶಕ್ತಿಯಿಂದ ತುಂಬಿ ತುಳುಕುತ್ತಿತ್ತು....ಸಾಮಾನ್ಯವಾಗಿ ಮಾಲ್, ಪುಬ್ ಸಂಸ್ಕೃತಿಯಿಂದ ಯುವ ಜನ ದಾರಿ ತಪ್ಪುತ್ತಿದ್ದಾರೆ ಅನ್ನುವ ಸಾಮಾನ್ಯ ದೂರು ಅಲ್ಲಿ ಕಾಣುತ್ತಿರಲಿಲ್ಲ...ದಾರಿ ತಪ್ಪಿದ ರಾಜಕಾರಣಿಗಳಿಗೆ ಒಂದು ಸಣ್ಣ ಛಡಿ ಏಟು ಕೊಡುವ ಒಂದು ಸಣ್ಣ ಆದ್ರೆ ಮನಸಿಗೆ ನಾಟುವ ಧರಣಿ ನಡೆಯುತ್ತ ಇತ್ತು...

ಅಲ್ಲಿಗೆ ಹೋಗಿ ಕಳೆದ ಕೆಲವು ಘಂಟೆಗಳು ಚಿರಸ್ಮರಣೀಯ...ಬರಿ ಧರಣಿಯಿಂದ ಏನು ಆಗುತ್ತೆ ಅಂತ ಮೂಗು ಮುರಿಯುವರು ತಿಳಿಯ ಬೇಕಾದ ಒಂದು ಸಣ್ಣ ಸಂಗತಿ ಎಂದರೆ...ದೊಡ್ಡ ದೊಡ್ಡ ಕಾಡು ಸುಟ್ಟು ಕರಕಲಾಗೋದು ಒಂದು  ಸಣ್ಣ ಕಿಡಿಯಿಂದ...ದೊಡ್ಡ ಮರ ಬಿದ್ದು ಹೋಗುವಂತೆ ತೂತಾಗುವುದು ಒಂದು ಗೊದ್ದ ಕಟ್ಟುವ ಗೆದ್ದಲಿನಿಂದ...

ಈ ಸಣ್ಣ ಆದ್ರೆ ಪ್ರಭಾವಶಾಲಿ ಧರಣಿಯಿಂದ ಏನು ಆಗುತ್ತೆ ಅಥವಾ ಏನು ಆಗೋಲ್ಲ ಎನುವುದಕ್ಕಿಂಥ..ನಮ್ಮ ಜನ ನಿಧಾನವಾಗಿಯಾದರೂ ಎಚ್ಚೆತ್ತು ಕೊಳ್ಳುತಿದ್ದಾರೆ ಎನುವುದು ನಿಜಕ್ಕೆ ತೀರ ಹತ್ತಿರ ಇರುವ ಮಾತು...