Tuesday, November 21, 2023

PSLV-C57/Aditya-L1 - ಆದಿತ್ಯ ಕಶ್ಯಪ್

 ಪೇಪರ್ ಅಂತ ಕೂಗುತ್ತಾ ಟಪ್ ಅಂತ ಮನೆ ಮುಂದೆ ಸದ್ದಾಯಿತು.. 

ಮನೆ ಮುಂದೆ ರಂಗೋಲಿ ಹಾಕಲು ಮನೆ ಬಾಗಿಲು ತೆಗೆದು ಹೊರಗೆ ಬಂದರು.. ಬಗ್ಗಿ ಪೇಪರ್ ತೆಗೆದುಕೊಂಡು ಒಮ್ಮೆಲೇ ಹೆಡ್ ಲೈನ್ ನೋಡಿ.. ಹರುಷದಿಂದ ರೀ ಅಂತ ಕೂಗುತ್ತಾ ಒಳಗೆ ಬಂದರು.. 

ಆಗ ತಾನೇ ಸಂಧ್ಯಾವಂದನೆ ಮುಗಿಸಿದ್ದರು.. ಮಡದಿಯ ಕೂಗಿಗೆ ಏನು ಅಂತ ಕಣ್ಣಲ್ಲೇ ಪ್ರಶ್ನೆ ಕೇಳಿದರು.. 

PSLV-C57/Aditya-L1 Mission launched and it is safe in the orbit...am so happy....  

Bharath is really doing great...under Modi ji!

ಒಂದು ಕ್ಶಣ ಅವಕ್ಕಾದರು ಮಡದಿಯ ಇಂಗ್ಲಿಷ್ ಭಾಷೆ ಕೇಳಿ.. ಕೊಂಚ ಕ್ಷಣದಲ್ಲಿಯೇ ಅರಿವಾಯಿತು.. ಅಕ್ಟೋಬರ್ ೨೦೨೦ ರಲ್ಲಿ ಇಲ್ಲಿಗೆ ಬಂದ ಮೇಲೆ ಓದುವ ಹಂಬಲ ಜಾಸ್ತಿಯಾಗಿ ಸರಸ್ವತಿ ವಿದ್ಯಾಲಯದಲ್ಲಿ ಪದವಿ ಓದುತ್ತಿದ್ದಳು.. ಇದೆ ಅಕ್ಟೋಬರ್  ೨೦೨೩ ರಲ್ಲಿ ಅಂತಿಮ ಪರೀಕ್ಷೆ ಇದ್ದು.. ಯಾವುದೇ ವಿಷಯ ಬಾಕಿ ಉಳಿಸಿಕೊಳ್ಳದೆ ವಿಶಾಲಾಕ್ಷಿ ಬಿ ಎ  ಅಂತ ಬೋರ್ಡ್ ಕೂಡ ಬರೆಸಿಕೊಂಡು ಇಟ್ಟುಕೊಂಡಿದ್ದು ನೆನಪಾಯಿತು.. . ಇಂಗ್ಲೀಷಿನಲ್ಲಿ ನಿರರ್ಗಳವಾಗಿ ಮಾತಾಡುತ್ತಿದ್ದಳು . ದೇಶ, ಭಾಷೆ, ರಾಜಕೀಯ, ಕ್ರೀಡೆ, ಸಿನಿಮಾ ಎಲ್ಲವೂ ಕರತಲಾಮಲಕವಾಗಿತ್ತು..ಯಾವುದೇ ವಿಷಯ ಅವಳಿಗೆ ಎಟುಕುತ್ತಿತ್ತು..  ಪರೀಕ್ಷಾ ಕಾಲ.. ಪದವಿ ಪರೀಕ್ಷೆಗೆ ಬಿಟ್ಟು ಬೇರೆ ಯಾವುದೇ ವಿಷಯವನ್ನು ಗಮನಿಸುತ್ತಿರಲಿಲ್ಲ.. ಅಷ್ಟು ಉತ್ಸಾಹ ಓದಿನಲ್ಲಿ..  ಪರೀಕ್ಷೆ ಮುಗಿದಿತ್ತು.. ಹಾಗಾಗಿ ಹಿಂದಿನ ಮಾಸದ ದಿನಪತ್ರಿಕೆಗಳನ್ನು ಒಂದೊದಾಗಿ ಓದುತ್ತಿದ್ದಳು.. 

ಹೌದು ಕಣೆ.. ನಿಜಕ್ಕೂ ನಮ್ಮ ಭಾರತ ಪುಣ್ಯ ಮಾಡಿದೆ.. ಆದರೆ ನನ್ನ ದುರಾದೃಷ್ಟ ನಾನು ಮೋದಿಗೆ ಮತದಾನ ಮಾಡಲು ಆಗಲಿಲ್ಲ ನೀನೆ ಪುಣ್ಯವಂತೆ ೨೦೧೪ ಮತ್ತು ೨೦೧೯ ರ ಲೋಕಸಭೆ ಚುನಾವಣೆಯಲ್ಲಿ ಮುರುಳಿ ಕರೆದುಕೊಂಡು ಹೋಗಿ ಮತದಾನ ಮಾಡಿಸಿದ್ದ.. ಮೋದಿ ಗೆಲುವಲ್ಲಿ ನಿನ್ನ ಮತದ ಪಾತ್ರವೂ ಇದೆ ಎಂದು ಖುಷಿಯಾಗಿದೆ... 

ಹೌದು ಕಣ್ರೀ ನೀವು ಹೇಳೋದು ಸರಿ.. ಭಾರತ ನಿಜಕ್ಕೂ ಪುಣ್ಯ ಮಾಡಿದೆ.. ಮೋದಿಯಂತಹ ನಾಯಕತ್ವ ದೊರಕಿರುವುದು.. ನಿಮಗೆ ಇನ್ನೊಂದು ವಿಷಯ ಗೊತ್ತೇ.. ?

ಅಪ್ಪ ಮಾತಾಡುತ್ತಿದ್ದದ್ದು ಕಡಿಮೆ ಆದರೆ ಕಿವಿ ಮಂದವಾಗಿದ್ದರೂ ಎಲ್ಲವನ್ನೂ ಅರಿಯುತ್ತಿದ್ದರು.. ಎಲ್ಲಾ ವಿಚಾರಗಳೂ ಗೊತ್ತಾಗುತಿತ್ತು.. 

ಏನು ವಿಚಾರ.. 

ನೀವು ಕಳ್ಳರು ಎಲ್ಲವೂ ಗೊತ್ತಿದೆ ಸುಮ್ಮನೆ ಕತೆ ಬಿಡ್ತಾ ಇದ್ದೀರಾ.. ಕೃಷ್ಣವೇಣಿ ದಿನವೂ ದೇವರ ದೀಪ ಹಚ್ಚಿ ಪೂಜೆ ಮಾಡುವಾಗ ಅವಳ ಪ್ರಾರ್ಥನೆ ಕೇಳಿಸಿಕೊಂಡು ಆಶೀರ್ವಾದ ನೀಡಿದ್ದೀರಾ ಸುಮ್ಮನೆ ಕತೆ ಬಿಡ್ತೀರಾ.. ನೀವೇ ಹೇಳಿ.. 

ಇಲ್ಲ ಕಣೆ ನೀನು ಹೇಳು.. ಆ ಖುಷಿ ನಿನ್ನಿಂದಲೇ ಅರಿವಾಗಲಿ.. ನಿನ್ನ ನಗು ಮೊಗ ನೋಡುವುದು ಒಂದು ಖುಷಿ.. 

ರೀ ನಮ್ಮ ಮೊಮ್ಮಗ ಆದಿತ್ಯ ಹೆಚ್ಚಿನ ಓದಿಗಾಗಿ ಇಂಗ್ಲೆಂಡಿನ ಕಾರ್ಡಿಫ್ ಪ್ರದೇಶದ ಕಾಲೇಜಿಗೆ ಹೋಗಿದ್ದಾನೆ . ನನಗೊಂತು ಬಹಳ ಖುಷಿ.. ಇಂಗ್ಲೆಂಡಿನ ಲಂಡನ್ ಸಮೀಪ ಇರುವ ಊರಿನಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಅವನ ಬದುಕಿಗೆ ಉತ್ತಮ ಅಡಿಪಾಯ ಹಾಕಿಕೊಡುವುದು.. ಕೃಷ್ಣವೇಣಿ ತನ್ನ ಬದುಕನ್ನೇ  ಮಗನಿಗೆ ಮುಡಿಪಾಗಿಟ್ಟಿದ್ದಾಳೆ... ಅದು ನಿಜಕ್ಕೂ ಸಾರ್ಥಕ ಕ್ಷಣ.. 

ಹೌದು ಕಣೆ.. ಪಾಪ ಆ ಮಗು ನಮ್ಮ ಮನೆಗೆ ತನ್ನ ಬದುಕನ್ನೇ ಮೀಸಲಿಟ್ಟಿದೆ.. ವಿಜಯ, ಶ್ರೀಕಾಂತ, ಮುರುಳಿ ಎಲ್ಲರ ವೃತ್ತಿ ಬದುಕಿನ ಆರಂಭಕ್ಕೆ ಅವಳೇ ಕಾರಣಕರ್ತೆ.. ಇಂದು ಎಲ್ಲರೂ ಬದುಕಿನಲ್ಲಿ ಒಂದು ಹಂತ ತಲುಪಿ ಗುರಿ ಸಾಧಿಸಿದ್ದಾರೆ ಎಂದರೆ ಅವಳ ಶ್ರಮ ಬಹಳ ಇದೆ.. 

ಹೌದು ಕಣ್ರೀ.. ಆದಿತ್ಯ ಕೂಡ ತುಂಟ ಹುಡುಗ. ಆದರೆ ವಿಮಾನ ನಿಲ್ದಾಣದಲ್ಲಿ ಬಹಳ ಜವಾಬ್ಧಾರಿಯಿಂದ ನೆಡೆದುಕೊಂಡ.. ತನ್ನ ಅಮ್ಮನನ್ನ ತಬ್ಬಿ ಹಿಡಿದು.. ಅಳಬಾರದು.. ಓದುತ್ತೇನೆ, ಬರುತ್ತೇನೆ... ಒಂದು ಕರೆ ಮಾಡು ಸಾಕು ಏನೇ ಸಮಸ್ಯೆ ಇದ್ದರೂ ನಾನಿದ್ದೇನೆ.. ಎಂದು ಹೇಳಿದಾಗ ನಿಜಕ್ಕೂ ಇಲ್ಲಿಂದ ನನಗೆ ಕಣ್ಣು ತುಂಬಿ ಬಂದಿತ್ತು.. ಕೃಷ್ಣವೇಣಿ ಅಳಲಿಲ್ಲ.. ಆದರೆ ಅವಳ ಕಣ್ಣಲ್ಲಿ ನೀರಿತ್ತು.. ಆದರೆ ಅದು ದುಃಖದ ಕಣ್ಣೀರಲ್ಲ ಬದಲಿಗೆ ಅವಳ ಜೀವನ ಪರಿಶ್ರಮದ ಬೆವರು ಕಣ್ಣುಗಳಲ್ಲಿ ಕಂಡಿತ್ತು. ಸಾಧಿಸಿದ ಮುಖಭಾವ.. ಸಾಧಿಸಿದ ಸಂತೃಪ್ತಿ ....!

ನಿಜಕ್ಕೂ ಅನುಗ್ರಹ ಸದನದ ಅನುಗ್ರಹಿತ ಕ್ಷಣಗಳು ಅಂದ್ರೆ ಇವೆ ಕಣೆ. 

ಪುಟ್ಟ ಮಗುವಾಗಿದ್ದಾಗ ಯಾರಾದರೂ ಎತ್ತಿಕೊಂಡರೆ ಅಮ್ಮನ ಹತ್ತಿರ ಹೋಗಬೇಕು ಎನ್ನುವುದನ್ನು ಮುದ್ದು ಮುದ್ದಾಗಿ ಅಮ್ಮತ್ತಾ ಅಮ್ಮತ್ತಾ ಎಂದು ತೊದಲು ಭಾಷೆಯಲ್ಲಿ ಹೇಳುತ್ತಿದ್ದ ಇಂದು ಅಮ್ಮನಿಂದ ಸಾವಿರಾರು ಮೈಲಿಗಳು ದೂರಕ್ಕೆ ಹೋಗಿ ಅಲ್ಲಿ ಓದಲು ಹೋಗಿದ್ದಾನೆ.. ಅವನೇ ಬಟ್ಟೆ ಒಗೆದುಕೊಂಡು, ಅಡಿಗೆ ಮಾಡಿಕೊಂಡು ಜವಾಬ್ಧಾರಿಯಿಂದ ನೆಡೆದುಕೊಳ್ಳುತ್ತಿದ್ದಾನೆ.. 

ಆದಿತ್ಯ ಮಗು.. ನಮ್ಮ ಮನೆಯಿಂದ ಓದಲು ವಿದೇಶಕ್ಕೆ ಹಾರಿದ್ದೀಯಾ.. ನಿನ್ನ ಗುರಿ ಮುಟ್ಟುವ ಹಾದಿಯಲ್ಲಿ ಯಾವುದೇ ಅಡೆತಡೆಗಳು ಬರಬಾರದು.. ಯಾವುದೇ ಅಡಚಣೆಗಳು ನಿನಗೆ ಅಡ್ಡಿಯಾಗಬಾರದು.. ನಿನ್ನ ಗಮನ ನಿನ್ನ ಅಮ್ಮನ ಗುರಿ ತಲುಪುವುದಷ್ಟೇ ಮುಖ್ಯವಾಗಿರಬೇಕು.. ಇನ್ಯಾವುದೇ ಅಡ್ಡಿ ಆತಂಕಗಳು ಬರಬಾರದು.. ಅದೇನೇ ಬಂದರೂ ನಿನ್ನ ಅಜ್ಜಿ ತಾತನನ್ನು ನೆನೆಸಿಕೋ.. ಆ ಕ್ಷಣದಲ್ಲಿ ಅದನ್ನು ದೂರ ಮಾಡುತ್ತೇವೆ.. 

ಹೌದು ಕಣ್ರೀ ಒಳ್ಳೆಯ ಮಾತು.. ಸೆಪ್ಟೆಂಬರ್ ಮಾಸದಲ್ಲಿ ಆದಿತ್ಯನ ಕಡೆ ಪ್ರಪಂಚವೇ ನೋಡುತ್ತಿತ್ತು.. 

ಒಂದು PSLV-C57/Aditya-L1 

ಇನ್ನೊಂದು ಆದಿತ್ಯ ಕಶ್ಯಪ್ 




ಆದಿತ್ಯ ಎಲ್ ೧ ಉಡಾವಣೆ .. ಪ್ರಪಂಚವೇ ನಮ್ಮ ಭಾರತದ ಕಡೆ ನೋಡುವಂತೆ ಮಾಡಿದೆ.. ಸೂರ್ಯನ ಹತ್ತಿರ ನಿಂತು ಸೂರ್ಯನ ವಲಯದಲ್ಲಿ ಆಗುವ ಬದಲಾವಣೆಗಳನ್ನು ನೋಡುವುದಕ್ಕೆ ಈ ಉಡಾವಣೆ ಉಪಯೋಗಕ್ಕೆ ಬರುತ್ತದೆ.. 

ಆದಿತ್ಯ ಕಶ್ಯಪ್ ಸಾಗರಗಳನ್ನು ದಾಟಿ ಲಂಡನ್ನಿಗೆ ಹೋಗಿದ್ದಾನೆ ..  ತಲುಪಿದ್ದಾನೆ.. ಬೆಳೆಯುತ್ತಿದ್ದಾನೆ. ಅವನ ಬೆಳೆವಣಿಗೆಯನ್ನು ಕೋರವಂಗಲ ಕುಟುಂಬ ಎದುರು ನೋಡುತ್ತಿದೆ.. 

ಎರಡೂ ಯೋಜನೆಗಳಿಗೆ ಯಶಸ್ಸಾಗಲಿ ಎಂದು ನಮ್ಮ ಶುಭಹಾರೈಕೆಗಳು.. 

ಶುಭವಾಗಲಿ ಮಗು ಹೋಗಿ ಬಾ.. ಜಯಶಾಲಿಯಾಗಿ ಹಿಂದಿರುಗು... ಅಮ್ಮನ ಆಶೀರ್ವಾದ ಸದಾ ಇದೆ. !!!

ಜೊತೆಗೆ ಜನುಮದಿನದ ಶುಭ ಹಾರೈಕೆಗಳು ನಿನಗೆ.. !

ಇಂತಿ ನಿನ್ನ ಅಜ್ಜಿ ತಾತಾ!!!

1 comment:

  1. very nice... very emotional, very live feeling experience..mother son bonding is really admirable...she is really very caring and loving sister..she sacrificed a lot for every one in family..Lucky to have her as sister in law..

    ReplyDelete