ಗರಿಗೆದರಿದ ಉತ್ಸಾಹ.. ಹಲವಾರು ವಾರಗಳಿಂದ ಪಡುತ್ತಿದ್ದ ಪರಿಶ್ರಮಕ್ಕೆ ಒಂದು ಪ್ರತಿಫಲ ಸಿಕ್ಕಿದ ಸಂತೋಷಕ್ಕೆ ವೀಣಾಳ ಮನಸ್ಸು ಹತ್ತಿಯ ಹಾಗೆ ಹಗುರವಾಗಿತ್ತು..
ಗಾಡಿಯ ಹತ್ತಿರ ಬಂದು.. ಕವರನ್ನು ಬ್ಯಾಗಿನಿಂದ ಹೊರಗೆ ತೆಗೆದು.. ಅದಕ್ಕೊಂದು ಮುತ್ತು ಕೊಟ್ಟು.. ಆಗಸವನ್ನು ನೋಡುತ್ತಾ " "ಥ್ಯಾಂಕ್ ಯು" ಎಂದು ತನ್ನ ಮುಂದಿನ ಗುರಿಯತ್ತ ಹೊರಟಳು..
ಮೊದಲ ಭಾಗ
ಎರಡನೇ ಭಾಗ

ಅವಳ ಸಂತೋಷಕ್ಕೆ ಪಾರವೇ ಇರಲಿಲ್ಲ.. ಹಾರುವ ಹಕ್ಕಿಯಾಗಿದ್ದಳು.. ತಾನು ಬಂದ ದಾರಿಯನ್ನು ಒಮ್ಮೆ ನೆನೆದಳು..
ಗೀತಾ ವೀಣಾ ಇಬ್ಬರೂ ಸುತ್ತಾಡಿಕೊಂಡು ಬರುವಾಗ ಅವರ ಮಾತುಗಳು ಕಾಲೇಜು, ಮದುವೆ, ಮನೆ. ಮುಂದಿನ ಜೀವನ ಇದರ ಬಗ್ಗೆ ಬಹು ವಿಸ್ತೃತವಾಗಿ ಚರ್ಚಿಸಿದ್ದರು.. ಗೀತಾಳನ್ನು ಸಮಾಧಾನ ಮಾಡುತ್ತಾ.. "ಏನೂ ಯೋಚನೇ ಮಾಡಬೇಡ ಕಣೆ.. ನಾಳೆ ರಾಕೇಶ ಬರುತ್ತಾರೆ . ನಿಮ್ಮ ಮನೆಯಲ್ಲಿ ಅಪ್ಪ ಅಮ್ಮನ ಹತ್ತಿರ ಮಾತಾಡುತ್ತಾರೆ .. ಜೊತೆಯಲ್ಲಿ ನಾನು ಇರುತ್ತೇನೆ ಅಲ್ಲವೇ.. "
ವೀಣಾಳ ಮಾತು ಗೀತಾಳಿಗೆ ಧೈರ್ಯ ತಂದಿತ್ತು.. ಇಡೀ ದಿನ ಊರಿನ ಸುತ್ತಾ ಮುತ್ತಾ ಅಲೆದಾಡುತ್ತಾ .. ಪೊಗದಸ್ತಾದ ಊಟ.. ಸಂಜೆಗೆ ಕರಿದ ತಿಂಡಿ.. ಜೊತೆಯಲ್ಲಿ ಮಾತು ಮಾತು ಮಾತು.. ಗೀತಾಳಲ್ಲಿ ಲವಲವಿಕೆ ತಂದಿತ್ತು.. ಗೀತಾಳ ಅಪ್ಪ ಅಮ್ಮ ಇವಳ ನಗುಮೊಗ ನೋಡಿ ತಿಂಗಳುಗಳೇ ಕಳೆದಿದ್ದವು.. ಇವಳ ಹೊಸತನ ಕಂಡು ಅವರಿಗೆ ಖುಷಿಯಾಗಿತ್ತು...
"ಅಮ್ಮ ನಾನು ರಾತ್ರಿ ಮಹಡಿಯ ಮೇಲೆ ಮಲಗುತ್ತೇವೆ.. " ಎಂದು ಗೀತಾ ಹೇಳಿದಾಗ ಅಡ್ಡಿ ಮಾಡಿರಲಿಲ್ಲ..
ಇಡೀ ರಾತ್ರಿ ಮುಗಿಯದ ಮಾತು.. ಬೆಳಗಿನ ಜಾವ ಕಣ್ಣಿಗೆ ಒಂದಷ್ಟು ನಿದ್ದೆ ಬಂದಿತ್ತು..
ರಾಕೇಶನಿಂದ ಕರೆಬಂತು.. "ಚಿನ್ನಿ.. ಎಲ್ಲಿದೀಯ.. ಎಷ್ಟು ಹೊತ್ತಿಗೆ ಮನೆಗೆ ಬರ್ತೀಯ" ಆ ಕರೆ ಮತ್ತೆ ಭುವಿಗೆ ಕರೆತಂದಿತು..
"ಹೊರಟಿದ್ದೀನಿ. ಇಲ್ಲೇ ಬೇರೆ ಕೆಲಸವಿತ್ತು.. ಬರ್ತಾ ಇದ್ದೀನಿ .. "
"ಬೇಗಾ ಒಂದು ಒಂದುವಿಷಯವಿದೆ.. .. ಹೇಳಬೇಕು"
ಕುತೂಹಲ ಎನ್ನುವುದು ವೀಣಾಳ ಜೀವನದಲ್ಲಿ ಇರಲೇ ಇಲ್ಲ.. ಬಂದದ್ದು ಬರಲಿ ಎನ್ನುವ ತತ್ವದವಳು "ಸರಿ ಅರ್ಧ ಘಂಟೆ ಬಂದು ಬಿಡುತ್ತೇನೆ.. "
ರಾಕೇಶನಿಗೂ ವೀಣಾಳ ಕುತೂಹಲ ಫ್ಯಾಕ್ಟರ್ ಗೊತ್ತಿದ್ದರಿಂದ.. "ಸರಿ ಚಿನ್ನಿ ಬೇಗಾ ಬಾ" ಎಂದ..
ಮನೆಗೆ ಬಂದ ವೀಣಾ.. ಕೈಕಾಲು ಮೊಗ ತೊಳೆದು.. ದೇವರಿಗೆ ಒಂದು ನಮಸ್ಕಾರ ಹಾಕಿ.. ಉಸ್ಸಪ್ಪ ಅಂತ ಕೂತಳು..
ಮೆಲ್ಲಗೆ ಹಿಂದಿನಿಂದ ಬಂದ ರಾಕೇಶ ವೀಣಾಳ ತಲೆ ಸವರಿ .. "ಅರಾಮಿದ್ದೀಯ ಚಿನ್ನಿ.. ಸುಸ್ತಾಗಿ ಬಿಟ್ಟಿದ್ದೀಯಾ.. ಏನಾದರೂ ಸ್ವಲ್ಪ ತಿನ್ನು.. ಆಮೇಲೆ ವಿಷಯ ಹೇಳ್ತೀನಿ.. ಅಮ್ಮ ವೀಣಾ ಬಂದಳು.. ಏನಾದರೂ ತಿನ್ನೋಕೆ ಕೊಡು.. ಹಾಗೆ ನನಗೂ ಕೊಡು"
ಅಡಿಗೆಮನೆಯಿಂದ ಅಮ್ಮ "ಸರಿ ಕಣೋ... ಸ್ವಲ್ಪ ಹೊತ್ತು ತರುತ್ತೇನೆ"
ಅಮ್ಮ ತಂದಿದ್ದ ತಿಂಡಿ ತಿಂದು ಸುಧಾರಿಸಿಕೊಂಡ ಮೇಲೆ "ಚಿನ್ನಿ ಒಂದು ಮುಖ್ಯವಾದ ವಿಷಯ ಅಂದೇ.. ನಿನಗೆ ಕುತೂಹಲ ಬರಲೇ ಇಲ್ಲ... ಸರಿ ಬರ್ತೀನಿ ಅಂದೇ.. ನಿನಗೆ ಅನೇಕ ಬಾರಿ ಕೇಳಬೇಕೆಂದು ಅನ್ನಿಸಿತು.. ಯಾಕೆ ಹೀಗೆ ನೀನು?"
"ಏನೂ ಮಾಡೋದು ನನ್ನ ಸ್ವಭಾವವೇ ಹಾಗೆ.. ನನಗೆ ಅರಿಯಬೇಕಾದ ವಿಷಯ.. ಹೇಗಿದ್ದರೂ ನನ್ನ ಬಳಿ ಬಂದೆ ಬರುತ್ತದೆ.. ಸುಮ್ಮನೆ ತಲೆ ಬಿಸಿಮಾಡಿಕೊಂಡು ಮಾಡೋದೇನು.. ಬಂದಿದ್ದೆಲ್ಲಾ ಬರಲಿ.. ಆ ದೇವನಿದ್ದಾನೆ ಜೊತೆಯಲ್ಲಿ ಅನ್ನೋ ಜಾಯಮಾನ ನನ್ನದು.. "
"ಸರಿ ಸರಿ.. ಒಳ್ಳೆಯದೇ.. ನೋಡು ಅಲ್ಲೊಂದು ಲೆಟರ್ ಬಂದಿದೆ.. ನೋಡು ಒಮ್ಮೆ"
ಎದ್ದು ಆ ಕಾಗದ ತೆಗೆದುಕೊಂಡು ಓದುತ್ತಲೇ ಕಣ್ಣು ನೀರಿನ ಕಡಲಾಯಿತು.. ಓಡಿ ಬಂದು ರಾಕೇಶನ ತಬ್ಬಿಕೊಂಡು "ಏನ್ರಿ ಇದು.. ನಾ ಬರೋಲ್ಲ.. ನಾ ಹೋಗೋಲ್ಲ.. "
"ಹಾಗೆಲ್ಲ ಅನ್ನಬಾರದು ಅಲ್ವ... ನಾನು ಇರುತ್ತೇನೆ ಜೊತೆಯಲ್ಲಿ.. ಯೋಚಿಸಬೇಡ.. ಬಂದದ್ದು ಬರಲಿ ಎದುರಿಸೋಣ ಅನ್ನುವ ನೀನೆ ಹೀಗೆ ಅಳುತ್ತಾ ಕೂತರೆ.. ಹೇಗೆ.. ನಾ ಇರುವೆ ಜೊತೆಯಲ್ಲಿ.. " ಮೈತಡವಿದ.. ಒಂದು ಹೂ ಮುತ್ತನ್ನು ವೀಣಾಳ ಹಣೆಗೆ ಒತ್ತಿದ..
ಸುಮ್ಮನೆ ತಲೆಯಾಡಿಸಿ ವೀಣಾ ತನ್ನ ಕೋಣೆಯನ್ನು ಸೇರಿಕೊಂಡಳು.. ಒಂದು ಕಡೆಯಲ್ಲಿ ತನಗೆ ಬೇಕಾದ ಮಾಹಿತಿ ಸಿಕ್ಕ ಸಂತೋಷ .. ಇನ್ನೊಂದು ಕಡೆ.. ಆ ಲೆಟರಿನಲ್ಲಿದ್ದ ವಿಷಯ ಕೊಂಚ ಹೊತ್ತು ಮನಸ್ಸನ್ನು ಅಲುಗಾಡಿಸಿತ್ತು..
ಆ ಲೆಟರಿನಲ್ಲಿದ್ದ ವಿಷಯ ಅವಳನ್ನು ಅಲುಗಾಡಿಸಿತ್ತು.. ಕೋಣೆಗೆ ಬಂದ ರಾಕೇಶ ಮತ್ತೊಮ್ಮೆ ವೀಣಾಳಿಗೆ ಬೆಳಿಗ್ಗೆ ಬೇಗ ಏಳು ಹೋಗೋಣ ಅಲ್ಲಿಗೆ.. ನಾ ಇರುವೆ ಜೊತೆಯಲ್ಲಿ ಎಂದು ಹೇಳಿ.. ಸರಿ ನೀ ಮಲಗು.. ಬೆಳಿಗ್ಗೆ ಮತ್ತೆ ಮಾತಾಡೋಣ ಅಂದು ತಾನು ಹೊರಗೆ ಸ್ನೇಹಿತರನ್ನು ನೋಡಲು ಹೋದ..
ಇಡೀ ದಿನ ಬಿಸಿಲಲ್ಲಿ ಧೂಳಲ್ಲಿ ಸುತ್ತಿದ್ದು.. ವೀಣಾಳ ಕಣ್ಣಾಲಿಗಳು ಹಾಗೆ ಕೆಳಗೆ ಬಂದವು... ಕಣ್ಣು ಮುಚ್ಚಿದೊಡನೆ ಚೆನ್ನಾಗಿ ನಿದ್ದೆ ಬಂದಿತು....
ಬೆಳಿಗ್ಗೆ ಎದ್ದೊಡನೆ ಒಂದು ಪುಟ್ಟ ವಾಕಿಂಗ್ ಹೋಗುವ ಅಭ್ಯಾಸವಿದ್ದ ಕಾರಣ ಮಾಮೂಲಿ ಸಮಯಕ್ಕೆ ಎದ್ದಳು.. ಕೈಕಾಲು ಮೊರೆ ತೊಳೆದು ಚಪ್ಪಲಿ ಮೆಟ್ಟಿಕೊಂಡು ಹೊರಗೆ ಹೋದಳು...
ಪಾರ್ಕಿನಲ್ಲಿ ಓಡಾಡುತ್ತಾ.. ಹಿಂದಕ್ಕೆ ಜಾರಿತು ನೆನಪುಗಳು
ಗೀತಾಳ ಮನೆಯಲ್ಲಿ ರಾಕೇಶ ಮತ್ತು ವೀಣಾ.. ಮಾತಾಡುತ್ತಾ ಕೂತರು . .. ಗೀತಾಳ ಅಪ್ಪ ಅಮ್ಮನಿಗೆ ರಾಕೇಶ ಹೇಳಿದ "ನೋಡಿ ಗೀತಾ ನಮ್ಮ ಹತ್ತಿರ ಹೇಳಿದ್ದಾಳೆ.. ನನ್ನದೊಂದು ಸಲಹೆ ಇದೆ.. ನೋಡಿದ ಹುಡುಗ ನಿಮಗೆ ಒಪ್ಪಿಗೆಯಾಗಿರಬಹುದು.. ಅದು ನಿಮಗೆ ಬಿಟ್ಟ ವಿಷಯ.. ಆದರೆ ಗೀತಾಳಿಗೆ ಇದು ಇಷ್ಟವಿಲ್ಲ..ಅವಳ ಜಾತಕದ ದೋಷವೋ ಅಥವಾ ಅವಳ ಹಣೆಬರಹವೋ ಏನೇ ಇರಬಹುದು .. ಅದು ನನಗೆ ಅರಿವಾಗದ ವಿಷಯ.. ನನ್ನ ಸ್ನೇಹಿತನೊಬ್ಬ ಇದ್ದಾನೆ... ಒಳ್ಳೆಯ ಹುಡುಗ.. ಒಳ್ಳೆಯ ಕೆಲಸ.. ಕೈತುಂಬಾ ಸಂಬಳವಿದೆ.. ಹುಡುಗಿಯನ್ನು ನೋಡುತ್ತಿದ್ದಾರೆ... ನಮಗೆ ತೋಚಿದಂತೆ ಗೀತಾಳಿಗೆ ಒಳ್ಳೆಯ ಜೋಡಿಯಾಗುತ್ತದೆ.. ನೀವು ಒಪ್ಪಿಕೊಂಡರೇ ನಮಗೂ ಸಂತೋಷ.. ಗೀತಾಳ ಕಣ್ಣೀರು ಕೂಡ ನಿಲ್ಲುತ್ತದೆ.."
ಇದರ ಬಗ್ಗೆ ಬಿಸಿ ಬಿಸಿ ಚರ್ಚೆಯಾಯಿತು .. ಆ ಹುಡುಗನ ಫೋಟೋ, ಕೆಲಸ ಮಾಡುತ್ತಿದ್ದ ಕಂಪನಿಯ ವಿವರವನ್ನು ತನ್ನ ಲ್ಯಾಪ್ಟಾಪಿನಲ್ಲಿ ತೋರಿಸಿದ.. ತುಂಬಾ ಹೊತ್ತಿನ ಚರ್ಚೆಯ ನಂತರ "ಸರಿ ಕಣಪ್ಪ ನೀನು ಹೇಳಿದ ಹಾಗೆ ಆಗಲಿ" ಎಂದು ಗೀತಾಳ ಅಪ್ಪ ಅಮ್ಮ ಒಪ್ಪಿದ್ದು ವೀಣಾಳಿಗೆ ಜಗತ್ತನ್ನೇ ಗೆದ್ದ ಸಂತೋಷ..
ಎಲ್ಲರೂ ಸುಲಭವಾಗಿ ಒಪ್ಪಿದ್ದು.. ಅದಕ್ಕೆ ಗೀತಾಳ ಸಮ್ಮತ್ತಿ ಇದ್ದದ್ದು.. ವೀಣಾಳ ಮನೆಯಲ್ಲೂ ... ರಾಕೇಶನ ಮನೆಯಲ್ಲೂ ಎಲ್ಲರೂ ಒಪ್ಪಿದ್ದು.. ಎಲ್ಲವೂ ಹೂವಿನ ಸರವಾಗಿತ್ತು .. ದಿನಗಳು ವಾಯುವೇಗದಲ್ಲಿ ಓಡುತ್ತಿತ್ತು.. ಇತ್ತ ಮದುವೆಯಾಗುವ ಹುಡುಗ ರಾಕೇಶನ ಸ್ನೇಹಿತ ರೇವಂತನ ಮನೆಯಲ್ಲೂ ಸಡಗರ..
ರಾಕೇಶನ ಬಾಲ್ಯ ಗೆಳೆಯನಾಗಿದ್ದ ರೇವಂತನಿಗೆ, ರಾಕೇಶ ಹೇಳುವ ಮಾತು ವೇದವಾಕ್ಯವಾಗಿತ್ತು.. ಗೀತಾಳ ಬಗ್ಗೆ ವೀಣಾಳಿಂದ ತಿಳಿದಿದ್ದ ರೇವಂತನಿಗೆ ಗೀತಾಳ ಜೊತೆಯಲ್ಲಿ ತನ್ನ ಜೀವನದ ಕ್ಷಣಗಳ ಬಗ್ಗೆ ಕುತೂಹಲ ತುಂಬಿಕೊಂಡಿದ್ದ..
ಕಾಲಚಕ್ರ ಉರುಳಿತು.. ಗೀತಾ ಮತ್ತು ರೇವಂತನ ವಿವಾಹ ಸರಳವಾಗಿ ನೆರವೇರಿತು... ರೇವಂತ ಬರಿ ಗೀತಾಳಿಗೆ ಮಾತ್ರ ದೇವರಾಗಿರಲಿಲ್ಲ.. ಜೊತೆಯಲ್ಲಿ ಗೀತಾಳ ಮನೆಯವರಿಗೂ ಅಚ್ಚುಮೆಚ್ಚಿನವನಾಗಿದ್ದ.. ಗೀತಾಳ ಒಡಲು ತುಂಬಿದ ವಿಷಯ ವೀಣಾಳಿಗೆ ಗೊತ್ತಾದಾಗ ಅತ್ಯಂತ ಖುಷಿಪಟ್ಟಿದ್ದಳು.. ರೇವಂತ ರಾಕೇಶನಿಗೆ ಸಿಹಿಯನ್ನು ಕೊಟ್ಟು ನೀ ಮಾಡಿದ ಉಪಕಾರವನ್ನು ಮರೆಯಲಿಕ್ಕೆ ಆಗೋಲ್ಲ ಕಣೋ.. ಎಂದು ಖುಷಿಪಟ್ಟಿದ್ದ ..
ಕೈಯಲ್ಲಿದ್ದ ಮೊಬೈಲು ಕಿರುಚಲು ಶುರುಮಾಡಿತು.. ನೆನಪಿನ ಲೋಕದಲ್ಲಿ ಸಂಚರಿಸುತ್ತಿದ್ದ ವೀಣಾ ಮತ್ತೆ ಭುವಿಗೆ ಇಳಿದಳು.. "ಬಂದೆ ಕಣ್ರೀ ನೀವು ಸಿದ್ಧವಾಗಿರಿ ಬರುತ್ತೇನೆ"
ಮನೆಗೆ ಬಂದು ಲಘುಬಗೆಯಿಂದ ಸಿದ್ಧವಾದಳು.. ಕಣ್ಣಲ್ಲಿ ನೀರು ತುಂಬಿಕೊಂಡಿತ್ತು.. ಕನ್ನಡಿಯನ್ನೊಮ್ಮೆ ನೋಡಿಕೊಂಡಳು.. ಅನುಪಮಾ ಸೌಂದರ್ಯದ ಗಣಿಯಾಗಿದ್ದ ಮೊಗ ಇಂದು ಬಾಡಿತ್ತು.. ಆದರೂ ನಗುವಿನ ಒಂದು ಲೇಪನ ಮಾಡಿಕೊಂಡು ರಾಕೇಶನನ್ನು ಒಮ್ಮೆ ತಬ್ಬಿಕೊಂಡು "ರೀ ನೀವು ನನ್ನ ಜೊತೆಯಲ್ಲಿ ಇರುತ್ತೀರಾ ತಾನೇ.. " ಎಂದು ಮತ್ತೊಮ್ಮೆ ಅವನ ಮಾತನ್ನು ನೆನಪಿಸಿದಳು..
ಇಬ್ಬರೂ ಕಾರಿನಲ್ಲಿ ಬಂದರು.. ಎಲ್ಲರಿಗೂ ಸ್ವಾಗತ ಎನ್ನುವ ಫಲಕ ಸ್ವಾಗತಿಸಿತ್ತು.. ಆಗಲೇ ಜನಸಮೂದಾಯ ಜಮಾಯಿಸಿತ್ತು..
ಸ್ವಾಗತಕಾರಿಣಿ ಇವರನ್ನು ಸ್ವಾಗತಿಸಿ ಇವರ ವಿವರಗಳನ್ನು ಬರೆದುಕೊಂಡು.. ಬ್ಯಾಡ್ಜ್ ಕೊಟ್ಟು.. ಒಂದು ಫಾರಂ ಕೊಟ್ಟು ಸಹಿ ಹಾಕಿಸಿಕೊಂಡರು...
ವೀಣಾಳ ಕಣ್ಣುಗಳು ಒದ್ದೆಯಾಗ ತೊಡಗಿದ್ದವು.. ರಾಕೇಶ ವೀಣಾಳ ಭುಜವನ್ನು ಒಮ್ಮೆ ಗಟ್ಟಿಯಾಗಿ ಒತ್ತಿ ಅವಳ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು ಒಳಗೆ ನೆಡೆದ...
ಮುಂದೆ.. .. ಶೀಘ್ರದಲ್ಲಿ!!!

Sri Super Suspense nalle ittideeya
ReplyDeleteThank you Satishaa :-)
Deleteಯಾವ ಡಿಟೆಕ್ಟಿವ್ ಕಥೆಯೂ ನನ್ನನ್ನು ಇಷ್ಟು ಗೋಳಾಡಿಸಿರಲಿಲ್ಲ. ಅಥವಾ, ಓ ಹೆನ್ರಿಯ ಕಥೆಗಳ ಹಾಗೆ, ಅಂತ್ಯದಲ್ಲಿ ಅನೂಹ್ಯ ತಿರುವನ್ನು ಕೊಡುವವರಿದ್ದೀರಿಯೊ, ಇಬ್ಬರಿಗೇ ಗೊತ್ತು: (೧) ಭಗವಂತ , (೨) ಶ್ರೀಕಾಂತ!
ReplyDeleteಗುರುಗಳೇ.. ಶರಣು
Deleteಕಥೆ ಹಾಗೆ ಬರೆಸುತ್ತಿದೆ.. ಸಧ್ಯದಲ್ಲಿಯೇ ಮಂಗಳ ಹಾಡುವ ಅಂತ ಯೋಚನೆ ಇದೆ.. ನೋಡೋಣ.. ಕಥೆಗೆ ಆ ತಿರುವು ಭಗವಂತ ಹೇಗೆ ದಯಪಾಲಿಸುತ್ತಾನೆ ಎಂದು..
ನಿಮ್ಮ ಓದುವಿಕೆಗೆ ಬೆನ್ನುತಟ್ಟುವಿಕೆಗೆ ಧನ್ಯವಾದಗಳು ಗುರುಗಳೇ