ಸಿಬಿ.. ಒಂದು ವಿಷ್ಯ ಗೊತ್ತಾ.. ಈಗ ಸ್ಕೋರ್ ೪೩೬ ಆಗಿದೆ..
"ವಾಹ್ ಶ್ರೀ..you should go for 500 in 2016"
"ಅದೇನು ಅಷ್ಟು ಕಷ್ಟವಲ್ಲ.. ಎಂಟು ಬ್ಲಾಗ್ ಇದೆ.. ಎಂಟು ತಿಂಗಳಿವೆ.. ತಿಂಗಳಿಗೆ ಎಂಟು ಲೇಖನ ಬರೆದರೆ.. ಸಾಕು... " ಸ್ವಲ್ಪ ಅಹಂನಲ್ಲಿ ಮಾತಾಡಿದ್ದೆ..
"Then you do it.. all the best sri"
ದೇವರು ಯು ಟರ್ನ್ ಮಾಡಿಸಿದ.. ೫೦೦ ಇರಲಿ. ಮುಂದಿನ ಎಂಟು ತಿಂಗಳಲ್ಲಿ ೪೫೦ ಕೂಡ ಮುಟ್ಟಲಿಲ್ಲ.. ಸುಸ್ತಾಗಿತ್ತು.. ಕೈ ಬಿಟ್ಟೆ ..೨೦೧೬ ಮುಗಿದು ೨೦೧೭ ಬಂತು..
"ಶ್ರೀ ಈ ವರ್ಷ ಯಾವುದೇ ಮಿತಿ ಹಾಕಿಕೊಳ್ಳದೆ ಸುಮ್ಮನೆ ಬರೆಯುತ್ತಾ ಹೋಗಿ " ಸಿಬಿ ಹೇಳಿದಾಗ.. ಅದರ ಜಾಡಿನಲ್ಲಿಯೇ ನೆಡೆದೆ..
ಇದು ೫೦೦ನೇ ಲೇಖನ.. ಇದನ್ನೆಲ್ಲಾ ನಾ ಬರೆದಿದ್ದಲ್ಲ.. ನನ್ನೊಳಗೆ ಕೂತಿರುವ ನನ್ನ ಆತ್ಮದ ಒಡೆಯ ಹೇಳಿದ್ದು.. ನಾ ಆ ವಾಣಿ ಕೇಳಿದ್ದನ್ನ ಅಲ್ಪ ಸ್ವಲ್ಪ ಕೇಳಿಸಿಕೊಂಡು ಬರೆದ ಲೇಖನಗಳು ಇವು.. ಇವು ನನ್ನ ಪ್ರೀತಿಯ ಓದುಗರಿಗೆ ಇಷ್ಟವಾಗಿದೆ ಅಂದರೆ ಅದರ ಶ್ರೇಯಸ್ಸು ಆ ವಾಣಿಗೆ.. ತಪ್ಪಿದ್ದರೆ.. ಆ ವಾಣಿಯ ಧ್ವನಿಯನ್ನು ಸರಿಯಾಗಿ ಕೇಳಿಸಿಕೊಳ್ಳದೆ ಬರೆದ ತಪ್ಪು ನನ್ನದು..
ಸ್ನೇಹಿತರು ತಮಗೆ ಅರಿವಿಲ್ಲದೆ ಸ್ಫೂರ್ತಿ ತುಂಬುವ ಪರಿ ಇದು.. ಶ್ರೀ ನೀವು ಮಾಡಬಲ್ಲಿರಿ, ನೀವು ಬರೆಯಬಲ್ಲಿರಿ ಎನ್ನುವ ಮನೋಸ್ಥೈರ್ಯ ತುಂಬಿದ.. ನನಗೆ ದೇವರು ಕೊಟ್ಟ ಅದ್ಭುತ ಗೆಳತೀ.. ನಿವೇದಿತಾ ಚಿರಂತನ್ ಅಲಿಯಾಸ್ ಸಿಬಿ.. ನನ್ನ ಎಲ್ಲಾ ಗೊಂದಲಗಳನ್ನು ಪರಿಹರಿಸುವ ದೇವತಾ ಸ್ನೇಹಿತೆ ಇವರು.
ನಾನು ಕಳಿಸುವ ಸಂದೇಶಗಳ ಅಲ್ಪ ವಿರಾಮ, ಪೂರ್ಣ ವಿರಾಮಗಳಲ್ಲಿ ನನ್ನ ಯೋಚನಾ ಲಹರಿಯನ್ನು ಕಂಡು ಹಿಡಿದು, ಏನಾಯಿತು ಶ್ರೀ ಎಂದು ಅದನ್ನು ನಿವಾರಣೆ ಮಾಡುವ ಈ ಗೆಳತಿಗೆ ಈ ಲೇಖನ ಅರ್ಪಣೆ..
ಐನೂರು ಮುಟ್ಟಿ ಎನ್ನುವ ಒತ್ತಾಯವಿರಲಿಲ್ಲ, ಅದನ್ನು ನೀವು ಮಾಡಲೇ ಬೇಕು ಎನ್ನುವ ಧೋರಣೆಯನ್ನು ನನ್ನಲ್ಲಿ ಒತ್ತಡ ಹೇರುವ ಬದಲು.. ಶ್ರೀ ನೀವು ಮಾಡಬಲ್ಲಿರಿ.. ಆರಾಮಾಗಿ ಬರೆಯುತ್ತಾ ಹೋಗಿ.. ನಾ ಓದಲಿಕ್ಕೆ ಎನ್ನುತ್ತಾ ಸ್ಫೂರ್ತಿ ತುಂಬಿದ ಇವರಿಗೆ ನಾ ಎಷ್ಟು ಕೃತಜ್ಞತೆ ಹೇಳಿದರೂ ಕಡಿಮೆ ..
ವಾಹ್ ನಿವ್ಸ್.. ಸೂಪರ್ ಹೀಗಿರಬೇಕು ಸ್ಫೂರ್ತಿ ತುಂಬುವ ರೀತಿ .. ಕಮಾನ್ ಶ್ರೀ ಬರೆಯಿರಿ.. ನಾವು ಇದ್ದೀವಿ ಓದಲಿಕ್ಕೆ ಎನ್ನುವ ದೇವ್ರು ಕಳಿಸಿದ ಸ್ಫೂರ್ತಿ ತುಂಬುವ ರೂಪ ಸತೀಶ್ ಅಲಿಯಾಸ್ DFR.. ಇವರಿಗೆ ನನ್ನ ಧನ್ಯವಾದಗಳು..
********
ಬ್ಲಾಗ್ ಲೋಕಕ್ಕೆ ನನ್ನ ಪರಿಚಯಿಸಿದ ಸಂದೀಪ್ ಕೆ ಬಿ, ಶ್ರೀಕಾಂತೂ ಎನ್ನುತ್ತಾ ಲೇಖನಗಳನ್ನು ಓದುವ ಪ್ರಕಾಶ್ ಹೆಗಡೆ, ನೀವು ಬರೆಯಿರಿ ಸರ್ ಆನೆ ನೆಡೆದದ್ದೇ ದಾರಿ ಎನ್ನುವ ಬಾಲೂ ಸರ್, ಶ್ರೀಮನ್ ನಿಮ್ಮ ಭಾವ ಪೂರ್ಣ ಲೇಖನಗಳು ಸೊಗಸು ಎನ್ನುವ ಅಜಾದ್ ಸರ್, ಬ್ಲಾಗೋತ್ತಮ ಬ್ರದರ್ ಎನ್ನುವ ಬದರಿ ಸರ್ ಇವರ ಪ್ರೋತ್ಸಾಹಗಳಿಗೆ ನಾ ಚಿರಋಣಿ..
ನನ್ನ ಕನ್ನಡಿಯೆಂದೇ ಹೆಸರಾದ.. ನನ್ನ ಯೋಚನೆಗಳಿಗೆ ಯಥಾವತ್ ಪ್ರತಿಕ್ರಿಯೆ ಕೊಡುತ್ತಾ ಅಣ್ಣ ಅಂದರೆ ನಮ್ಮಣ್ಣ ಎನ್ನುವ ಸಂಧ್ಯಾ ಭಟ್, ಜನುಮದಿನಕ್ಕೆ ನಾ ಬ್ಲಾಗ್ ಬರೆಯುತ್ತಿದ್ದಾಗ ಅದನ್ನು ಓದಲೆಂದೇ ಮಧ್ಯ ರಾತ್ರಿಯ ತನಕ ಕಾದು ಓದುವ ಭಾಗ್ಯ ಭಟ್, ನಿಮ್ಮ ಕಾಮೆಂಟ್ಗಳನ್ನೇ ಒಂದು ಪುಸ್ತಕ ಮಾಡಬೇಕು ಎನ್ನುವ ಸುಷ್ಮಾ ಮೂಡಬಿದ್ರಿ, ಕಾಮೆಂಟಿಗ ಎನ್ನುವ ಅಶೋಕ್ ಶೆಟ್ಟಿ, ಶ್ರೀ ಅಣ್ಣ ನಿಮ್ಮ ಬ್ಲಾಗ್ ಓದೋಕೆ ಒಂದು ಖುಷಿ ಎನ್ನುವ ಶುಭ ಹೆಗಡೆ, ನನ್ನ ಎಲ್ಲಾ ಲೇಖನಗಳನ್ನು ಇಷ್ಟ ಪಟ್ಟು ಓದುವ ನನ್ನ ಪ್ರಾಥಮಿಕ ಶಾಲಾ ದಿನಗಳ ಸುಧಾ ರಂಗರಾಜ್, ನೀನೆ ನನಗೆ ಬರೆಯಲು ಸ್ಫೂರ್ತಿ ಎನ್ನುವ ಪ್ರಕಾಶ್ ನಾಯಕ್, ನಾ ಲೇಖನ ಪ್ರಕಟಿಸಿದ ಕೂಡಲೇ ಸಮಯ ಮಾಡಿಕೊಂಡು ಓದಿ ಪ್ರತಿಕ್ರಿಯೆ ಕೊಡುವ ಸತೀಶ್ ಕೆವಿ, ನಿಶ್ಯಬ್ಧ ಕೂಡ ಒಂದು ಮೆಸೇಜ್ ಎನ್ನುವ ಶೋಭನ್ ಬಾಬು, ಗೆಳೆಯ ನಿನ್ನ ಬರಹಗಳನ್ನು ತಡವಾದರೂ ಓದುವೆ ಎನ್ನುವ ನಂದಿನಿ, ಶ್ರೀ ನಿನ್ನ ಬರಹಗಳಿಗೆ ಮಾತಿಲ್ಲ .. ಎನ್ನುವ ಶ್ರೀ ಲಕ್ಷ್ಮಿ.. ಹೇಳುತ್ತಾ ಹೋದರೆ ಪಟ್ಟಿ ಹನುಮಂತನ ಬಾಲದ ತರಹ ಬೆಳೆಯುತ್ತೆ.. ನನ್ನ ಎಲ್ಲಾ ಸ್ನೇಹಿತರು, ನನ್ನ ಬಂಧು ಬಳಗ, ನನ್ನ ಆತ್ಮೀಯರಿಗೆ ಈ ಬ್ಲಾಗಿನ ಮೂಲಕ ಧನ್ಯವಾಗಳನ್ನು ಹೇಳಬಯಸುತ್ತೇನೆ..
ನನ್ನ ಎಲ್ಲಾ ಪ್ರೀತಿಯ ಓದುಗರಿಗೂ ನನ್ನ ಧನ್ಯವಾದಗಳು..
**************
ಮರಿ ಬರಿ ಮರಿ.. ಬರೀಬೇಕು ಮರಿ.. ಎನ್ನುತ್ತಾ ನನ್ನ ಬ್ಲಾಗ್ ಲೋಕಕ್ಕೆ ಧುಮುಕಲು ಸ್ಫೂರ್ತಿ ನೀಡಿದ ರೋಹಿತ್ ಚೂಡಾನಾಥ್.. ಇವನು ನನ್ನ ಟ್ರೆಕ್ಕಿಂಗ್ ಗುರು.. ಇವನ ಜೊತೆ ಮಾಡಿದ ಚಾರಣಗಳು ಅದ್ಭುತ..
ಬ್ಲಾಗಿನ ಆರಂಭದ ದಿನಗಳಲ್ಲಿ ಆಂಗ್ಲ ಭಾಷೆಯಲ್ಲಿ ಬರೆಯುತ್ತಿದ್ದೆ.. ಅದನ್ನು ಓದಿ ಪ್ರೋತ್ಸಾಹಿಸಿ.. ಶ್ರೀ ಎಲ್ಲರೂ ಇಂಗ್ಲಿಷಿನಲ್ಲಿ ಬರೆಯುತ್ತಾರೆ.. ಕನ್ನಡದಲ್ಲಿ ಬರೆಯುವವರು ಕಡಿಮೆ.. ನೀವು ಬರೆಯಿರಿ ಅಂದಾಗ.. ಅದನ್ನೇ ಹಿಡಿದು ಸಾಗಿದೆ ..ಹಾಗೆ ಬರೆಯಲು ಸ್ಫೂರ್ತಿ ನೀಡಿದ್ದು ಮಂಜು ಶಂಕರ್..
*************
ಕಾರ್ಪೊರೇಟ್ ಸಂಸ್ಥೆಗಳಲ್ಲಿ ಕಸವನ್ನು ಹಾಕಲು ವಿವಿಧ ಬಣ್ಣದ ಬುಟ್ಟಿಗಳನ್ನುಇಟ್ಟಿರುತ್ತಾರೆ.. ವಿವಿಧ ರೀತಿಯ ಕಸಗಳನ್ನು ತುಂಬಲು ವಿವಿಧ ಬಣ್ಣದ ಬುಟ್ಟಿಗಳು.. ನನ್ನ ಮನದಲ್ಲಿ ಮೂಡುವ ಯೋಚನೆಗಳನ್ನು ಒಂದೇ ಬುಟ್ಟಿಯಲ್ಲಿ ಹಾಕಲು ಇಷ್ಟಪಡದೆ ಅದಕ್ಕೊಂದು ತರಹಾವರಿ ಹೆಸರುಗಳನ್ನಿಟ್ಟು ಇಷ್ಟ ಪಟ್ಟವರು ತಮಗೆ ಇಷ್ಟಪಟ್ಟ ವಿಷಯಗಳನ್ನು ಓದಲಿ, ಅಥವಾ ನನ್ನ ಯೋಚನೆಗಳು ಆ ಬುಟ್ಟಿಯಲ್ಲಿ ಹೋಗಿ ಕೂರಲಿ ಎಂದು ಆಶಿಸುತ್ತಾ ಶುರುಮಾಡಿದ್ದು ಒಂದೆರಡು ಬ್ಲಾಗ್ ಅಂಗಣಗಳು.. ಆದರೆ ಬರುತ್ತಾ ಅದು ಎರಡಾಯಿತು,ಮೂರಾಯಿತು .. ಈಗ ಎಂಟಕ್ಕೆ ಬಂದು ನಿಂತಿದೆ..
ಮೊದಲು ಜನ್ಮ ತಾಳಿದ್ದು ಚಾರಣದ ಲೇಖನಗಳು.. ನನ್ನ ಅಲೆಮಾರಿಗಳು ತಂಡ ಮಾಡಿದ ದಾಖಲಿಸುವ ಬ್ಲಾಗ್ Tripping ಲೈಫ್..
ಶ್ರೀ ನಿನ್ನ ಈ ಬರೆಯುವ ಶೈಲಿ ಸೊಗಸಾಗಿದೆ,. ನಮ್ಮ ಶಾಲೆಯ ದಿನಗಳು, ನಮ್ಮ ಸ್ನೇಹ ಇದರ ಬಗ್ಗೆ ಬರೆಯುತ್ತ ಹೋಗು ಎಂದು ಬೆನ್ನು ತಟ್ಟಿದ ನನ್ನ ಜೀವದ ಗೆಳೆಯರಾದ ಜೆಎಂ ಸತೀಶ್, ಶಶಿ, ವೆಂಕಿ, ಲೋಕಿ ಮತ್ತು ಪ್ರತಿಭಾ, ಸಮತಾ ಇವರ ಪ್ರೋತ್ಸಾಹದ ಫಲ ಹುಟ್ಟಿದ್ದು Kantha the magnet of friendship.
ನನ್ನ ಜೀವನವನ್ನು ಹಲವಾರು ರೀತಿಯಲ್ಲಿ ತಿದ್ದಿ ತೀಡಿದ್ದರ ಪಾಲಲ್ಲಿ ಚಲನ ಚಿತ್ರಗಳುಪಾತ್ರವೂ ಇದೆ .. ನಾ ನೋಡಿದ, ಸ್ಫೂರ್ತಿ ನೀಡಿದ, ಸಂದೇಶಗಳನ್ನು ಅಳವಡಿಸಿಕೊಳ್ಳುವ ಚಿತ್ರಗಳ ಬಗ್ಗೆ, ಸಂಭಾಷಣೆಗಳ ಬಗ್ಗೆ, ಹಾಡುಗಳು, ಛಾಯಾಗ್ರಹಣ, ತಂತ್ರಜ್ಞಾನ ಇದನ್ನೆಲ್ಲಾ ಬರೆಯಲು ಒಂದು ವೇದಿಕೆ ಬೇಕು ಎಂದು ಅನಿಸಿದಾಗ ಮೂಡಿದ್ದು moved movies.. ಇದಕ್ಕೆ ಬೆಂಬಲವಾಗಿ ನಿಂತದ್ದು ಆತ್ಮೀಯ ಗೆಳೆಯ, ಮಾರ್ಗದರ್ಶಿ ವಿಕ್ರಮಾದಿತ್ಯ ಅರಸ್..
ಶ್ರೀ.. ನೀವು ಬರೆಯುವ ಕೆಲವು ಪಂಚಿಂಗ್ ಸಂಭಾಷಣೆ, ಮಾತುಗಳು ಸೂಪರ್ ಇರುತ್ತವೆ, ಅದನ್ನು ಒಂದು ಬ್ಲಾಗ್ ನಲ್ಲಿ ಬರೆಯಿರಿ.. ಸೊಗಸಾಗಿರುತ್ತೆ ಎಂದು ಹುರಿದುಂಬಿಸಿದ್ದು ಸಂದೀಪ್ ಕೆಬಿ.. ಅದಕ್ಕೆ ನಾ point pancharangi ಎಂದು ಹೆಸರಿಟ್ಟಾಗ ಚಪ್ಪಾಳೆ ತಟ್ಟಿ ಖುಷಿ ಪಟ್ಟರು..
ಜಗತ್ತನ್ನು ನೋಡಲು ಕಳಿಸಿದ್ದು, ಕಲಿಸಿದ್ದು ನನ್ನ ಕುಟುಂಬ.. ನನ್ನ ಕುಟುಂಬದ ಸದಸ್ಯರು, ನೋವು ನಲಿವು, ನನ್ನ ಪರಿವಾರ, ನನ್ನ ಆಲೋಚನೆಗಳು, ಮನದ ಇಂಗಿತಗಳು, ಹುಚ್ಚು ಮನಸ್ಸಿನ ಯೋಚನೆಗಳು ಇವಕ್ಕೆಲ್ಲಾ ಸೆರಗೊಡ್ಡಿ ನಿಂತದ್ದು Sri Parapancha.. ಇದಕ್ಕೆ ಲಕ್ಷ ವರ್ಷ ಅಂತ ಯಾಕೆ ಹೆಸರು ಬಂತು ಗೊತ್ತೇ.. ಕಾಲೇಜು ದಿನಗಳಲ್ಲಿ ಸಂಚಲನ ಮೂಡಿಸಿದ್ದ ಆಶಿಕಿ ಚಿತ್ರದ ಗೀತೆಗಳು.. ಹುಚ್ಚೆಬ್ಬಿಸಿದ್ದವು.. ಹಾಗೆ ಮಾತಾಡುತ್ತಿದ್ದಾಗ.. ನಾ ಹೇಳಿದ್ದೆ.. ಈ ಚಿತ್ರದ ಹಾಡುಗಳಿಂದಲೇ ಈ ಚಿತ್ರ ಲಕ್ಷವರ್ಷ ಓಡುತ್ತೆ ಅಂತ. .. ಆಗ ನನ್ನ ಗೆಳೆಯ.. ಶಶಿ ಹೇಳಿದ.. ಇವನಿಗೆ ಎಲ್ಲೋ ಹುಚ್ಚು. ಲಕ್ಷ ವರ್ಷ ಅಂತೇ.. ಅಂತ ಹೇಳಿ ನಕ್ಕಿದ್ದ.. ನಾವು ಸೇರಿ ನಕ್ಕು ಅದನ್ನೇ ಒಂದು ಜೋಕ್ ಮಾಡುತ್ತಾ ನಕ್ಕಿದ್ದೆವು..
ಓದಿಗಾಗಲಿ, ಆಟಕ್ಕಾಗಲಿ, ಆಫೀಸಿನ ಕೆಲಸಗಳಾಗಲಿ ಚೆನ್ನಾಗಿ ಆಗಬೇಕು ಎಂದರೆ.. ಅದಕ್ಕೆ ಒಂದು ಉತ್ತಮ ಮನಸ್ಸಿನ ತಂಡ ಬೇಕು.. ಅಂತಹ ತಂಡವೂ ನನ್ನ ಕೆಲಸದ ಆರಂಭದ ದಿನಗಳಿಂದಲೂ ಸಿಕ್ಕಿದ್ದು ನನ್ನ ಪುಣ್ಯ.. ಅವರ ಅದ್ಭುತ ಒಡನಾಟವೂ ಚಿತ್ರಿಸುವ ಬಯಕೆಯಿಂದ ಅರಳಿದ್ದು The Team of Invincibles..
ಹೆಸರು ಒಂದೇ. ಮನೋಭಾವ ಒಂದೇ.. ಅಭಿರುಚಿ ಒಂದೇ.. ಹೀಗೆ ಇರುವುದು ಬಲು ಅಪರೂಪ ನನ್ನ ಸೋದರ ಮಾವ.. ಅಂದರೆ ನನ್ನ ತಾಯಿಯ ತಮ್ಮ ರಾಜ ಅಲಿಯಾಸ್ ಶ್ರೀಕಾಂತ.. ಇವನು ನಾನು ಮಾಡಿದ ಸಾಹಸಗಳ ಬಗ್ಗೆ ಬರೆಯುತ್ತಾ ಹೋದರೆ ಅದೇ ಒಂದು ಪುಸ್ತಕವಾಗುತ್ತದೆ.. ಜಗತ್ತು ಇವನನ್ನು ಒಂದು ತಮಾಷೆ ವಸ್ತುವಾಗಿ ನೋಡಿದ್ದೇ ಹೆಚ್ಚು.. ಆದರೆ ಇವನ ನಿಷ್ಕಲ್ಮಶ ಮನಸ್ಸಿನಲ್ಲಿ ಅರಳಿದ ಸ್ನೇಹಲೋಕ ತುಂಬಾ ದೊಡ್ಡದು.. ಇವನ ಜೊತೆಗಿನ ಒಡನಾಟದ ಬಗ್ಗೆ ಬರೆಯಲು ಹುಚ್ಚು ಹತ್ತಿದಾಗ ಎಟುಕಿದ್ದು raja-srikanth-htnakirs
ಜನುಮ ನೀಡಿದಾತ ಹೇಳಿಕೊಡದೆ ಕಲಿಸಿದ ಪಾಠ ಅನಂತ. . ತಾನು ಹೇಳಿ ಅದನ್ನೇ ಪಾಲಿಸು ಎನ್ನುವವರು ಕೆಲವರಾದರೆ.. ತಾನು ನೆಡೆದು ಅದನ್ನು ಪಾಲಿಸು ಎನ್ನುವವರು ಇನ್ನೊಂದು ತರಹ.. ಆದರೆ ನಮಗೆ ಹೀಗೆ ಏನೂ ಹೇಳದೆ ತನ್ನ ಆದರ್ಶವನ್ನು ಕಾಯ್ದುಕೊಂಡು ತನ್ನ ಪಾಡಿಗೆ ಹೆಜ್ಜೆ ಹಾಕಿ.. ನಾವು ಅವರ ಹೆಜ್ಜೆಯಲ್ಲಿ ನೆಡೆಯುವ ಹಾಗೆ ಸ್ಫೂರ್ತಿ ತುಂಬಿದವರು ನನ್ನ ಅಪ್ಪ.. ಅವರ ಜೀವನ ಕಥಾನಕವನ್ನು ಹೊರಗೆ ತರಬೇಕು ಎನ್ನುವುದು ನನ್ನ ಕನಸು ಆ ಕನಸ್ಸಿನ ಒಂದು ಹೆಜ್ಜೆ ಮಂಜಲ್ಲಿ ಮಂಜಾದ ಮಂಜು
**********
ಈ ಬರಹಕ್ಕೆ ಕಳಶವಿಟ್ಟಂತೆ ಬ್ಲಾಗ್ ಲೋಕದ ಗುರುಗಳು ಎಂದು ನಾ ಹೇಳುವ ಶ್ರೀ ಸುನಾಥ ಕಾಕಾ ಅರ್ಥಾತ್ ಶ್ರೀ ಸುಧೀಂದ್ರ ದೇಶಪಾಂಡೆ ನನ್ನ ಶ್ರೀ ಪರಪಂಚದ ಲೇಖನಗಳನ್ನು ಓದಿ ಮೆಚ್ಚಿ, ಪ್ರತಿಕ್ರಿಯೆ ನನಗೆ ದೊಡ್ಡ ಬಹುಮಾನ ಎನ್ನಿಸಿತು.. ಅವರ ಪ್ರತಿಕ್ರಿಯೆಗಳಿಗೆ ಶಿರಬಾಗಿ ನಮಿಸುವೆ..
**********
ಇದು ನನ್ನ ಬರಹದ ಲೋಕದ ಐದು ನೂರನೇ ಬರಹ.. ಬರೆದದ್ದು ಬೇಕಾದಷ್ಟು.. ಅದರಲ್ಲಿ ಜೊಳ್ಳು, ಕಾಳು ಎಲ್ಲವೂ ಇವೆ.. ನೀವು ಓದಿ ಇಷ್ಟಪಟ್ಟಿದ್ದೀರಿ, ಬೆನ್ನು ತಟ್ಟಿದ್ದೀರಿ, ಮತ್ತಷ್ಟು ಬರೆಯಲು ಪ್ರೋತ್ಸಾಹ ನೀಡಿದ್ದೀರಿ ಇದಕ್ಕಿಂತ ನಾ ಕೇಳೋದು ಇನ್ನೇನು ಇದೆ.. ತಪ್ಪುಗಳು ಬೇಕಾದಷ್ಟಿದ್ದರೂ, ಶ್ರೀ ನಿಮ್ಮ ಬರಹ ಅದ್ಭುತ ಎನ್ನುವ ನನ್ನ ಬ್ಲಾಗ್ ಲೋಕದ ಗೆಳೆಯರಿಗೆ ಶಿರಬಾಗಿ ನಮಿಸುವೆ..
ನಿಮ್ಮ ಪ್ರೀತಿಯ ಅಭಿಮಾನ ನನಗೆ ಶ್ರೀ ರಕ್ಷೆ.. ಅದಕ್ಕೆ ದಾಸರ ಪದವನ್ನು ಹೇಳೋಣ ಅನ್ನಿಸಿತು ..
ಎಂದರೋ ಮಹಾನುಭಾವುಲು ಅಂದರೀಕಿ ವಂದನಮು..
ಚಿತ್ರಕೃಪೆ - ಗೂಗಲೇಶ್ವರ |