ಕೃಷ್ಣಕಾಂತ್ ತುಂಬಾ ಸರಳ ಜೀವಿ. ಅವನಲ್ಲಿ ಅದೇನೋ ಅಪರಿಮಿತ ಧನಾತ್ಮಕ ಗುಣ.. ಕಾರಣವಿಲ್ಲದೆ ಎಲ್ಲರನ್ನೂ ಪ್ರೀತಿಸುವ ಮನುಷ್ಯ, ಆದರೆ ಸಕಾರಣವಿದ್ದರೆ ಮಾತ್ರ ಯಾರನ್ನೇ ಆದರೂ ದೂರ ಇಡಬಲ್ಲ ವ್ಯಕ್ತಿತ್ವ.. ಒಮ್ಮೆ ಕೃಷ್ಣಕಾಂತ್ ದೂರ ಇಟ್ಟರೆ ಮುಗೀತು... ಭಗವಂತನೇ ಕಷ್ಟ ಪಡಬೇಕು :-)
ಪ್ರತಿದಿನ ಸಂಧ್ಯಾವಂದನೆ ಮಾಡಿ, ದೇವರಿಗೆ, ತನ್ನ ದೇವರಿಗೆ ನಮಿಸಿ ಆಫೀಸ್ ಗೆ ಹೋರಡುವ ಇವನಿಗೆ.. ಪ್ರತಿ ಕ್ಷಣಕ್ಕೂ ಕಣ್ಣಿಗೆ ಕಾಣುವ ದೃಶ್ಯವನ್ನು ಆರಾಧಿಸುವುದು, ಇಷ್ಟಪಡುವುದು, ಅದರ ಬಗ್ಗೆ ಯೋಚಿಸುವುದು, ಅದರಿಂದ ಧನಾತ್ಮಕವಾಗಿ ಯೋಚಿಸಿ ಪ್ರೇರೇಪಣೆ ಪಡೆಯುವುದು.. ಇದು ಅವನ ನಿತ್ಯದ ದಿನಚರಿ. ಕಣ್ಣಿಗೆ ಕಾಣುವ ಯಾವುದೇ ಸ್ಫೂರ್ತಿ ಉಕ್ಕುವ ವಿಷಯವನ್ನು ಬಿಡದ ಅವನಿಗೆ ಒಂದು ಅಚ್ಚರಿ ಸಂಗತಿ ನೆಡೆಯುತ್ತಿದ್ದದು ಅರಿವಿಗೆ ಬರುತ್ತಲೇ ಇರಲಿಲ್ಲ.
ಪ್ರತಿದಿನ ಬೆಳಿಗ್ಗೆ ತನ್ನ ಆಫೀಸ್ ಗಾಡಿಗೆ ಹತ್ತುವ ಜಾಗಕ್ಕೆ ಸುಮಾರು ಒಂದು ಕಿ.ಮೀ. ಗಳು.. ನೆಡೆಯುತ್ತಾ ಹೋಗುವಾಗ.. ಹಾದಿಯಲ್ಲಿ ಒಂದು ಉದ್ಯಾನವನ.. ಅಲ್ಲಿ ವ್ಯಾಯಾಮ ಸಲುವಾಗಿ ನೆಡೆದಾಡುವ ಮಂದಿ ಹಲವರು.. ಒಮ್ಮೆ ಹೀಗೆ ಹೋಗುತ್ತಿರುವಾಗ, ಒಂದು ಹುಡುಗಿ ಕಣ್ಣಿಗೆ ಬೀಳುತ್ತಾರೆ ವಾಕಿಂಗ್ ಅಂತ ಬರುವವರಲ್ಲಿ ಅನೇಕರು ಕಿವಿಗೆ ಸಿಕ್ಕಿಸಿಕೊಂಡು ಹಾಡು, ಸಂಗೀತ ಕೇಳುತ್ತಾ ಹೋಗುವವರು ಕೆಲವರು, ಎಲ್ಲರೂ ನೋಡಲಿ ಅಂತ ಚಿತ್ರ ವಿಚಿತ್ರ ವೇಷ ಹಾಕಿಕೊಂಡು ಬರುವ ಮಂದಿ ಕೆಲವರು, ಇನ್ನೂ ಕೆಲವರು ಜೋರಾಗಿ ಕಸರತ್ತು ಮಾಡುತ್ತಾ ಎಲ್ಲರ ಗಮನವನ್ನು ಸೆಳೆಯಲು ಹೊಂಚು ಹಾಕುವವರು ಇದ್ದರು.. ಆದರೆ ಇದರ ಮಧ್ಯದಲ್ಲಿ ನಿಯತ್ತಾಗಿ ತಮ್ಮ ದೇಹವನ್ನು ದಂಡಿಸುತ್ತಾ, ತಮ್ಮ ಆರೋಗ್ಯದ ಬಗ್ಗೆ ಮಾತ್ರ ಗಮನ ಹರಿಸಿ, ಸುತ್ತಾ ಮುತ್ತಾ ಏನು ನೆಡೆಯುತ್ತಿದೆ ಎಂಬ ಚಿಂತೆಗೆ ತಲೆ ಕೊಡದೆ, ತಮ್ಮ ಪಾಡಿಗೆ ತಮ್ಮ ಕಾಯಕ ಮಾಡುವವರಲ್ಲಿ ಈ ಹುಡುಗಿ ಕೂಡ ಒಂದು.
ಸುಂದರ ಮೊಗ, ತುಸು ಪುಟ್ಟ ಮೂಗಿಗೆ ಮುದ್ದಾದ ಹೊಳೆಯುವ ಮೂಗುತಿ, ನಿದ್ದೆಯಿಂದ ಎದ್ದು ಬೆಳಿಗ್ಗೆ ವಾಕಿಂಗ್ ಬರೋದರಿಂದ, ಬೈತಲೆ ಮೈಸೂರು ರಸ್ತೆಯ ರೀತಿ ಅಂಕು ಡೊಂಕಾದ ರೀತಿಯಲ್ಲಿದ್ದರೂ ನೀಳ ಕಪ್ಪು ಜಡೆ ಆಕರ್ಷಕವಾಗಿ ಕಾಣುತ್ತಿತ್ತು .. ಸಿಂಗಾರವಿಲ್ಲದಿದ್ದರೂ, ಒಮ್ಮೆ ನೋಡಿದರೆ ಮತ್ತೊಮ್ಮೆ ಆಹಾ ಈ ರೀತಿಯ ಹುಡುಗಿ ಎಲ್ಲರ ಮನೆಯಲ್ಲಿ ಇರಬಾರದೇ ಎನ್ನುವಷ್ಟು ಮುದ್ದಾದ ಮೊಗವುಳ್ಳ ಹುಡುಗಿ ಇವರು..ಕಾಲಿಗೆ ಕಟ್ಟಿದ್ದ ಗೆಜ್ಜೆ ಝಲ್ ಝಲ್ ಎಂದು ಸದ್ದು ಮಾಡುತ್ತಿದ್ದರೆ ಕೃಷ್ಣಕಾಂತ್ ಮನಸ್ಸಲ್ಲಿ ಏನೋ ಒಂದು ರೀತಿಯ ಸಂತಸ.
ಪಾಪ ಕೆಟ್ಟ ದೃಷ್ಟಿಯಲ್ಲಿ ಎಂದೂ ಆ ಹುಡುಗಿಯನ್ನು ನೋಡಿರಲಿಲ್ಲ.. ಕೆಲವರು ಹಾಗೆ.. ಒಂದು ಹುಡುಗಿ ತಂಗಿಯಾಗಬಹುದು, ಅಕ್ಕನಾಗಬಹುದು, ಗೆಳತಿಯಾಗಬಹುದು.. ಆದರೆ ಯಾವುದೇ ಭಾವವಿರದ, ಯಾವುದೇ ಬಂಧನವಿರದ ಒಂದು ರೀತಿಯ ದೈವಿಕ ಬಾಂಧವ್ಯ ಕೆಲವು ಬಂಧನಗಳಿಗೆ ಇರುತ್ತದೆ. ಅಂತಹ ಒಂದು ಬಂಧ ಈ ಹುಡುಗಿ ಮತ್ತು ಕೃಷ್ಣಕಾಂತ್ ಮಧ್ಯೆ ಇತ್ತು.
ದಿನ ನಿತ್ಯವೂ ನೋಡುತ್ತಿದ್ದರಿಂದ, ಓರೇಗಣ್ಣುಗಳಲ್ಲಿ ಮಾತು ಇಲ್ಲದೆ ಬರಿ ನೋಟಕ್ಕೆ ಮಾತ್ರ ಮೀಸಲಾಗಿತ್ತು. ಆಕೆಯೂ ಕೂಡ ವಾಕಿಂಗ್ ಮಾಡುತ್ತಿದ್ದರೂ, ಇವ ಹೋಗುವಾಗ ಹಾಗೆ ಒಂದು ಎದೆ ಝಲ್ ಎನ್ನಿಸುವಂತಹ ನೋಟ ಬೀರಿ ತನ್ನ ಪಾಡಿಗೆ ಹೋಗುತ್ತಿದ್ದರು.
ಕೃಪೆ : ಅಂತರ್ಜಾಲದಲ್ಲಿ ಒರೆಗಣ್ಣಿನಲ್ಲಿ ತೆಗೆದದ್ದು |
ಈ ನೋಟದ ಸಲುಗೆ, ಆ ಹುಡುಗಿಯ ಬಗ್ಗೆ ಯೋಚಿಸುವಾಗ ಬಹುವಚನ ಮಾಯವಾಗಿ ಏಕವಚನ ರೂಪುಗೊಂಡಿತ್ತು.
ಕೃಷ್ಣಕಾಂತನಿಗೆ ಒಂದು ರೀತಿಯಲ್ಲಿ ಈ ಹುಡುಗಿ ಶುಭದ ಸಂಕೇತವಾಗಿದ್ದಳು. ಅವಳನ್ನು ನೋಡಿ, ಅವಳ ಮುದ್ದಾದ ಮೊಗವನ್ನು ಕಣ್ಣು ತುಂಬಾ ತುಂಬಿಕೊಂಡು, ಆವ ಇಷ್ಟಪಡುವ ಮುದ್ದಾದ ಮೂಗುತಿ ಹೊತ್ತ ನಾಸಿಕದ ಕೆಳಗಿನ ತುಟಿಯಂಚಿನ ಮಂದಹಾಸವನ್ನು ಕಂಡರೆ, ಅಂದಿನ ದಿನ ಎಂಥಹ ಕ್ಲಿಷ್ಟ ಪರಿಸ್ಥಿತಿಯನ್ನು ಕೂಡ ಎದುರಿಸುತ್ತೇನೆ ಎನ್ನುವಂತಹ ಆತ್ಮ ವಿಶ್ವಾಸ ಅವನಲ್ಲಿ ಮೂಡುತ್ತಿತ್ತು.
ಅದು ನಿಜವೂ ಆಗಿತ್ತು, ಬೆಳಿಗ್ಗೆಯೇ ಆಕೆಯನ್ನು ನೋಡಿದರೆ, ಏನೋ ಸಂತೋಷ, ಉಲ್ಲಾಸ ಪುಟಿಯುತ್ತಿತ್ತು. ಇಬ್ಬರದೂ ಮೌನ ಗೆಳೆತನ.. ಆದರೆ ಇಬ್ಬರ ನಡುವೆ ಮಾತಿಲ್ಲ ಕಥೆಯಿಲ್ಲ ಬರಿ ಮೌನ ಮೌನ ಮೌನ ಮತ್ತು ಉಲ್ಲಾಸ ಪುಟಿಯುವ ಮಂದಹಾಸ ಮಾತ್ರ.
ಬೆಳಿಗ್ಗೆ ಮಾತ್ರ ಕಾಣ ಸಿಗುವ ಆಕೆ ಅವನ ಹೃದಯದ ಹೂವಾಗಿದ್ದಳು. ದಿನ ಬೆಳಿಗ್ಗೆ ಆಕೆಯ ವೇಷಭೂಷಣಗಳಲ್ಲಿಯೇ ಕಾಣ ಸಿಗುತ್ತಿದ್ದ ಆಕೆ, ಒಮ್ಮೆ ಸಂಜೆ ಇವ ಆಫೀಸ್ ಗಾಡಿಯಿಂದ ಇಳಿದು ನೆಡೆದು ಬರುವಾಗ, ಅಚಾನಕ್ ಒಂದು ಒಡವೆ ಅಂಗಡಿಯಿಂದ ಹೊರಬಂದಳು. ಇವನನ್ನು ನೋಡಿದ ಆಕೆಯ ಕಣ್ಣಲ್ಲಿನ ಕಾಂತಿಯನ್ನು ನೋಡಿ ಕೃಷ್ಣಕಾಂತ್ ಉಲ್ಲಸಿತನಾಗಿದ್ದ.
ಅದಕ್ಕೆ ಕಾರಣ, ಬೆಳಿಗ್ಗೆ ಹೊಳೆಯುವಂತೆ ಸಿದ್ಧಗೊಂಡು ಆಫೀಸ್ ಗೆ ಹೋಗುತ್ತಿದ್ದ ಕೃಷ್ಣಕಾಂತ್ ಒಂದು ಕಡೆ, ಹಾಸಿಗೆಯಿಂದ ಎದ್ದು, ಸಿಂಗಾರವಿಲ್ಲದ ಮೊಗ ಹೊತ್ತು, ವಾಕಿಂಗ್ ಮಾಡಲು ಬರುವ ಹುಡುಗಿ ಇನ್ನೊಂದು ಕಡೆ.. ಈ ಸನ್ನಿವೇಶ ಪೂರ್ತಿ ತಿರುಗು ಮುರುಗಾಗಿತ್ತು.
ಆಫೀಸಿನಿಂದ ಬಸವಳಿದು ಬರುತ್ತಿದ್ದ ಕೃಷ್ಣಕಾಂತ್, ಆಗ ತಾನೇ ಸಿಂಗರಿಸಿಕೊಂಡು ಬಂದು, ಒಡವೆ ಅಂಗಡಿಯಲ್ಲಿ ತನಗಿಷ್ಟವಾದ ಒಡವೆ ಕೊಂಡು, ಹೊರಬರುತ್ತಿದ್ದ ಪೂರ್ಣ ಚಂದ್ರನಂತಹ ಹುಡುಗಿ ಇನ್ನೊಂದು ಕಡೆ. ಇಬ್ಬರ ಸಮಾಗಮ ರಸ್ತೆಯಲ್ಲಿ, ಎಂದಿನಂತೆ ಮಾತಿಲ್ಲ.. ಆದರೆ ಇವನನ್ನು ಸಂಜೆ ನೋಡಿ ಹೊಳೆಯುತ್ತಿದ್ದ ಆಕೆಯ ಕಂಗಳ ಕಾಂತಿ ಕಂಡು, ಆಗಸದ ಚಂದಿರನು ಕೂಡ ಒಂದು ಕ್ಷಣ ದಂಗಾಗಿ ಹೋಗಿದ್ದು ಮಾತ್ರ ಸುಳ್ಳಲ್ಲ.
ಹಾಗೆ ಒಂದು ಬೆಳದಿಂಗಳಿನ ನಗೆಯನ್ನು ಕೃಷ್ಣಕಾಂತ್ ಮೇಲೆ ಬೀರಿ ತನ್ನ ಗೆಳತಿಯ ಜೊತೆ ಗಾಡಿಯನ್ನು ಏರಿ ಹೋಗಿಯೇ ಬಿಟ್ಟಳು. ಬೆಳಿಗ್ಗೆ ಅವಳನ್ನು ಮತ್ತೆ ಪಾರ್ಕ್ ನಲ್ಲಿ ನೋಡುವ ತನಕ ಅವನಿಗೆ ನೆಮ್ಮದಿ ಇರಲಿಲ್ಲ. ಇದು ಲವ್, ಪ್ಯಾರ್, ಇಷ್ಕ್, ಮೊಹಬ್ಬತ್ ಯಾವುದೂ ಅಲ್ಲ.. ಸ್ಪೂರ್ತಿಗಾಗಿ ಕಾಡು ಮೇಡು ಅಲೆಯುವ ಕವಿಯ ಮನಸ್ಸು ಹಂಬಲಿಸುವ ಸ್ಪೂರ್ತಿಯ ಹುಡುಕಾಟ ಅಷ್ಟೇ.
ಹೀಗೆ ದಿನವೂ ಸಾಗುತ್ತಿತ್ತು.. "ನೋಟದಾಗೆ ನಗೆಯ ಮೀಟಿ" ಎನ್ನುವ ತರಂಗ ಅವನ ಹೃದಯದಲ್ಲಿ ಸದಾ ಮೀಟುತ್ತಿತ್ತು. ಇಂತಹ ಮುದ್ದಾದ ಹುಡುಗಿಯ ಹೆಸರು ವೀಣಾ ಇರಬೇಕು ಎನ್ನಿಸಿತು ಕೃಷ್ಣಕಾಂತನಿಗೆ.. ಯಾರಿಗೆ ಗೊತ್ತು.. ಏನು ಹೆಸರೋ ಏನೂ ಕಥೆಯೋ..
ಹೀಗೆ ಸಾಗುತ್ತಿರಲು, ಅಚಾನಕ್ ಆ ಹುಡುಗಿ ಕಾಣದೆ ಹೋದಳು.. ಪಾರ್ಕ್ ನಲ್ಲಿ ಬಿಟ್ಟ ಕಣ್ಣು ಬಿಟ್ಟ ಹಾಗೆ ದಿನವೂ ಹುಡುಕುತಿತ್ತು ಆಕೆಯನ್ನು ಇವನ ಕಂಗಳು. ಆದರೆ ಇಲ್ಲ.. ಅದೃಷ್ಟ ಇಲ್ಲ.. ಹತಾಶೆಗೊಳ್ಳಲಿಲ್ಲ, ಆದರೆ ಆಕೆಯನ್ನು ಒಮ್ಮೆಯಾದರೂ ನೋಡಲೇ ಬೇಕು ಅನ್ನಿಸುತ್ತಿತ್ತು.. ಮನದೊಳಗೆ ನೂರಾರು ಯೋಚನೆ..
೧) ಆಕೆ ಮನೆ ಖಾಲಿ ಮಾಡಿ ಹೋಗಿರಬಹುದೇ
೨) ಕೆಲಸ ಬದಲಾವಣೆಯಾಗಿ, ಸಮಯ ಸಾಲದೇ ವಾಕಿಂಗ್ ಬಿಟ್ಟಿರಬಹುದೇ
೩) ವಾಕಿಂಗ್ ಸಮಯ ಬದಲಾವಣೆ ಮಾಡಿರಬಹುದೇ
೪) ತಾನು ಆಕೆಯನ್ನು ನೋಡುತ್ತಿರುವ ಬಗ್ಗೆ ಆಕೆಗೆ ಬೇಸರವಾಗಿ, ವಾಕಿಂಗ್ ಬೇಡವೇ ಬೇಡ ಅಂತ ನಿರ್ಧರಿಸಿರಬಹುದೇ
ಹೀಗೆ ತಾಳಮೇಳವಿಲ್ಲದ ಪ್ರಶ್ನೆಗಳು ಸಾಗಿದ್ದವು..
ಆದರೆ ದಿನವೂ ಆಕೆಯ ಮುಗ್ಧ ಮೊಗವನ್ನು ಹುಡುಕುವ ಕಣ್ಣುಗಳು ಮಾತ್ರ ತಮ್ಮ ಕೆಲಸ ನಿಲ್ಲಿಸಿರಲಿಲ್ಲ.. ಭೂಮಿ ಗುಂಡಾಗಿದೆ.. ಎಂದಾದರೂ ಒಮ್ಮೆ ಸಿಕ್ಕಿಯೇ ಸಿಗುತ್ತಾಳೆ.. ಆಗ ಮಾತಾಡಿಸಲೇಬೇಕು ಎನ್ನುವ ಬಯಕೆ ಮಾತ್ರ ಮನದಲ್ಲಿ ನಿಂತಿತ್ತು. ಆನಂದ್ ಚಿತ್ರದಲ್ಲಿ ಹೇಳುವಂತೆ "ಪ್ರತಿಯೊಬ್ಬರ ದೇಹದಲ್ಲಿ ಟ್ರಾನ್ಸ್ಮೀಟರ್, ರಿಸೀವರ್ ಇರುತ್ತೆ.. ಸರಿಯಾದ ಸ್ನೇಹದ ಸಿಗ್ನಲ್ ವೈಬ್ರೆಷನ್ ಬಂದಾಗ ಸ್ನೇಹದ ಬಂಧ ಅರಳುತ್ತದೆ".
ಎಷ್ಟು ನಿಜ ಅಲ್ವೇ.. ಒಂದು ನಿರ್ಮಲ ಸ್ನೇಹಕ್ಕೆ ಕೈಚಾಚುತ್ತಿತ್ತು ಅವನ ಮನಸ್ಸು.
ಹೀಗೆ ಯಾವುದೋ ಯೋಚನೆ ಮಾಡುತ್ತಾ, ಕಚೇರಿಯಲ್ಲಿ ಸುಸ್ತಾಗುವಂಥ ಕೆಲಸ ಮುಗಿಸಿ, ಗಾಡಿಯಲ್ಲಿ ಚೆನ್ನಾಗಿ ನಿದ್ದೆ ಮಾಡಿಕೊಂಡು, ತನ್ನ ಜಾಗಕ್ಕೆ ಬಂದರೂ ನಿದ್ದೆ ಹರಿಯದೇ ಮಲಗಿದ್ದ ಕೃಷ್ಣಕಾಂತನನ್ನು ತಟ್ಟಿ ಎಬ್ಬಿಸಿದ ಡ್ರೈವರ್.. "ಸಾರ್ ನಿಮ್ಮ ಸ್ಟಾಪ್ ಬಂತು ಮನೆಗೆ ಹೋಗಲ್ವಾ.. ಅಕ್ಕ ಅವರು ಕಾಯುತ್ತಾ ಇರ್ತಾರೆ.. ಏಳಿ ಸಾರ್" ಎಂದಾಗಲೇ ಎಚ್ಚರ ಇವನಿಗೆ.
ಒಂಥರಾ ಟ್ರಾನ್ಸ್ ನಲ್ಲಿಯೇ ನೆಡೆಯುತ್ತಾ ಬರುತ್ತಿದ್ದ ಕೃಷ್ಣಕಾಂತ್.. ಅಚಾನಕ್ ಒಂದು ಗಾಡಿ ಅಡ್ಡ ಬಂತು.. ತಕ್ಷಣ ಕಣ್ಣನ್ನು ಇನ್ನೊಮ್ಮೆ ಉಜ್ಜಿಕೊಂಡು, ತಲೆಗೂದಲನ್ನು ಸರಿಮಾಡಿಕೊಂಡು, ಗಾಡಿಯವನಿಗೆ ಸಾರಿ ಹೇಳಿ ಮುಂದೆ ಬಂದ. ಯಾವುದೋ ಒಂದು ಸೆಳೆತ ಅವನನ್ನು ಕೈಚಾಚಿ ಕರೆದಂತಾಯಿತು.. ಅರೆ ಚಿರಪರಿಚಿತ ಜರ್ಕಿನ್.. ಆ ಮಂದ ಬೆಳಕಿನಲ್ಲಿಯೂ, ಚಂದಿರನ ಬೆಳದಿಂಗಳಲ್ಲಿ , ಅಂಗಡಿಯ ಮುಂದೆ ಹಾಕಿದ್ದ ಸಣ್ಣ ದೀಪದ ಬೆಳಕಿನಲ್ಲಿ ಫಳ್ ಎಂದು ಹೊಳೆದ ಮೂಗುತಿ. ಕೃಷ್ಣಕಾಂತನ ಹೃದಯದಲ್ಲಿ ಜೋಗದ ಜಲಪಾತ. ಅರೆ "ಇವಳೇ ಇವಳೇ ಚಂದನದ ಗೊಂಬೆ ಚೆಲುವಾದ ಗೊಂಬೆ ಚಂದನದಾ ಗೊಂಬೆ" ಹಾಡು ಹೃದಯದಲ್ಲಿ ಹಾಡತೊಡಗಿತು.
ಕೃಪೆ : ಮನದ ಮಡಿಲಲ್ಲಿ ಅರಳಿದ ಹೂಗಳು.. ಅಂತರ್ಜಾಲದ ಉದ್ಯಾನವನದಲ್ಲಿ ಕಿತ್ತದ್ದು |
ಇನ್ನೊಮ್ಮೆ ನೋಡೋಣ ಅನ್ನಿಸಿತು.. ಮಾತಾಡಲೇಬೇಕು ಎನ್ನಿಸಿತು.. ಆ ಮುದ್ದಾದ ಮೊಗವನ್ನು ನೋಡಿ, ಆಕೆಯ ಹೊಳೆಯುವ ಕಂಗಳನ್ನು ಒಮ್ಮೆ ಕಣ್ಣ ತುಂಬಾ ತುಂಬಿಕೊಂಡು, ಸದಾ ಅರಳುತ್ತಿದ್ದ ಆಕೆಯ ಮಲ್ಲಿಗೆ ನಗೆಯನ್ನು ಮತ್ತು ಆ ನಗೆಯು ಕೊಡುತ್ತಿದ್ದ ಉತ್ಸಾಹದ ಬಗ್ಗೆ, ಆಕೆಯ ಬೆಳಗಿನ ಮಂದಹಾಸದ ದರುಶನದಿಂದ ತನಗೆ ಸಿಗುತ್ತಿದ್ದ ಉತ್ಸಾಹ, ಉಲ್ಲಾಸ ಇದರ ಬಗ್ಗೆ ಹೇಳಲೇಬೇಕು.. ಇವಿಷ್ಟು ಆ ಎರಡು ಕ್ಷಣಗಳಲ್ಲಿ ಅನ್ನಿಸಿತು.. ಆದರೆ ಆ ಮಂದ ಬೆಳಕಿನಲ್ಲಿ ಮತ್ತೆ ತಿರುಗಿ ಮಾತಾಡಿಸಲೇ, ಅಥವಾ ಆಕೆಯಲ್ಲದೆ ಬೇರೆ ಯಾರೋ ಆಗಿದ್ದರೆ ಎಷ್ಟು ಅಭಾಸವಾಗುತ್ತದೆ.. ಎನ್ನಿಸಿತು ಮನಸು..
ಆಕೆ ತನ್ನ ಗಾಡಿಯನ್ನು ಸ್ಟಾರ್ಟ್ ಮಾಡಿಕೊಂಡು ಆ ಕತ್ತಲಲ್ಲಿ ಮರೆಯಾದಳು.. ಹಣ್ಣಿನ ಅಂಗಡಿಯಿಂದ ಎಫ್ ಎಂ ನಲ್ಲಿ ಹಾಡು ಬರುತ್ತಿತ್ತು
"ಕಣ್ಣಂಚಿನ ಈ ಮಾತಲಿ ಏನೇನೋ ತುಂಬಿದೆ.. "
ಆಹಾ ಎಂಥ ನೋಟ... ಮತ್ತೊಮ್ಮೆ ಅವರಿಗೆ ಅವಳ ನೋಟ ಸಿಗಬಾರದೇ ಅಂತ ಹಾತೊರೆಯುವಂತೆ ಮಾಡಿತು ಕಥೆ. ಸೂಪರ್ ಶ್ರೀ. ಕೃಷ್ಣಕಾಂತ್ ಅಷ್ಟೇ ಅವಳಾರಿರಬಹುದು ಎನ್ನುವ ಕುತೂಹಲ ನಮಗೂ ಮೂಡುತ್ತೆ... ಮಧ್ಯ ಮಧ್ಯ ನಿಮ್ಮ ಟ್ರೇಡ್ ಮಾರ್ಕ್ ಹಾಡುಗಳು. ತುಂಬಾ ಚೆನ್ನಾಗಿ ಬರೆದಿದ್ದೀರಿ.
ReplyDeleteಧನ್ಯವಾದಗಳು ಸಿಬಿ
Deleteಒಂದು ಮಿಂಚು ಹರಿಸುವ ಆ ನೋಟ, ಆ ಕ್ಷಣ.. ಆಹಾ ಅನ್ನಿಸುವಂತೆ ಮಾಡುತ್ತದೆ. ಸುಂದರ ಪ್ರತಿಕ್ರಿಯೆ
ಧನ್ಯವಾದಗಳು ಮತ್ತೊಮ್ಮೆ
ಮುಂದೇನಾಯ್ತು ಸರ್.. ಬೇಗ ಹೇಳಿ.. ಛೆ.. ಒಳ್ಳೆ ಟೈಮಲ್ಲಿ ಕೈ ಕೊಟ್ರಲ್ಲ.. :)
ReplyDeleteಹಹಹ ಸೂಪರ್ ಸರ್
Deleteಹಾಗೆ ಒಂದು ಎಳೆ ಮನದಲ್ಲಿ ಮೂಡಿತು.. ಬರೆದೆ. ಇದಕ್ಕೆ ಮುಂದುವರೆಸುವ ಸ್ಫೂರ್ತಿ ಬಂದಾಗ ಖಂಡಿತ ಮುಂದಿನ ಭಾಗ ದೊರೆಯಬಹುದು.. ಸ್ಪೂರ್ತಿಯ ಆ ಕಣ್ಣಂಚಿನ ನೋಟಕ್ಕೆ ಕಾಯೋಣ ಅಲವೇ
ಧನ್ಯವಾದಗಳು ಸರ್
ಯಾವುದೇ ವಿಷಯವನ್ನು ವಸ್ತುವನ್ನಾಗಿಟ್ಟುಕೊಂಡು ಅದರಾಳಕ್ಕೆ ಇಳಿದು ಎಳೆ ಎಳೆಯಾಗಿ ಬಿಡಿಸಿ ಹೇಳುವ ರೀತಿ ವಾಹ್ ನಿನಗೆ ನೀನೆ ಸಾಟಿ ಎಂದೆನಿಸುತ್ತದೆ
ReplyDeleteನೀನು ವರ್ಣಿಸುವ ಪ್ರತೀ ಪದವೂ ನಮಗೆ ಹೊಸದಾಗಿ ಕಾಣುವುದಂತೂ ಸತ್ಯ
ಅಯ್ಯೋ ಮುಗಿದೇ ಹೋಯ್ತಾ ಅನ್ನಿಸಿದ್ದಂತೂ ಹೌದು
ವಾಹ್ ಇಂತಹ ಪ್ರತಿಕ್ರಿಯೆ
Deleteಧನ್ಯವಾದಗಳು ಅತ್ತಿಗೆ ನಿಮ್ಮ ಪ್ರೋತ್ಸಾಹ ನನಗೆ ಶಕ್ತಿ.
ಧನ್ಯೋಸ್ಮಿ
Idu Nijavaglu nadeda kathe na? ila....
ReplyDeleteIdu preeti,prema, love, mohabbat... alla andralla... avellaa hinge iratte antha idu oduvarige gottaagutte
Mundenaaytu antha next part ge waiting...olle movie noddangaayathu neevu bardirodu odi :-)
ಆಶಾ ದೇವಿ ತುಂಬಾ ಖುಷಿ ಆಯಿತು ನಿಮ್ಮ ಪ್ರತಿಕ್ರಿಯೆ ಓದಿ
Deleteಇದು ಕಾಲ್ಪನಿಕ ಕಥೆ ಅಷ್ಟೇ.. ಹೀಗೆ ಎಳೆ ಸಿಕ್ಕಿತು ಬೆಳೆಸಿದೆ. ನಿಮಗೆ ಖುಷಿ ಆಯಿತು ಅಂದರೆ ಬರೆದದ್ದು ಸಾರ್ಥಕ
ಬಹಳ ಸೊಗಸಾಗಿ ಮೂಡಿ ಬಂದಿದೆ, ಶ್ರೀಕಾಂತ್... ಕಾಲೇಜಿನ ದಿನಗಳಲ್ಲಿ ಓದುತ್ತಿದ್ದ ಕಾದಂಬರಿಗಳ ನೆನಪು... ಮತ್ತೊಂದು ಹಾಡಿನ ಮೆಲಕು... ನಗುವ ನಯನ ಮಧುರ ಮೌನ...
ReplyDeleteಧನ್ಯವಾದಗಳು ಲೀಲಾ.. ಹಳೆಯ ಚಿತ್ರ ಕಾದಂಬರಿಗಳಂತೆಯೇ ಇದೆಯೇ ಧನ್ಯವಾದಗಳು
Deleteರೋಮ್ಯಾಂಟಿಕ್ ಕತೆಯನ್ನು ಸಮಂಜಸವಾದ ಶೈಲಿಯಲ್ಲಿ ಬರೆದಿದ್ದೀರಿ. ಓದುವಾಗ ಏನೋ ಪುಳಕ!
ReplyDeleteಗುರುಗಳೇ ನಮೋನಮಃ ನಿಮ್ಮ ಬೆನ್ನು ತಟ್ಟುವಿಕೆಯ ಈ ಪ್ರತಿಕ್ರಿಯೆಗೆ ನಾ ಶರಣು
Deleteಧನ್ಯವಾದಗಳು ಗುರುಗಳೇ
ಗಾಡಿ ಸ್ಟಾರ್ಟ್ ಮಾಡಿಕೊಂಡು ಹೋದವಳು ಅವಳೇ ಆದರೆ ಮತ್ತೊಮ್ಮೆ ನೋಟ ಬೆಸೆಯಲು ಮರುದಿನದ ಬೆಳಗಲ್ಲಿ ಹೊಳೆಯುತ್ತಾಳೆ... ಕುತೂಹಲದ ತಿರುವಲ್ಲಿ ನಿಲ್ಲಿಸಿದ್ದೀರಿ.ಒಂದು ಯೂ ಟರ್ನ್ ತಗೋಳಿಪಾ....
ReplyDeleteಅರೆ ಎಸ್ಪಿ ಎಷ್ಟು ದಿನ ಆಯ್ತು ನಿನ್ನ ನೋಡಿ.. ಸೂಪರ್ ಕಣೋ
Deleteಧನ್ಯವಾದಗಳು.. ನೋಡೋಣ ಆಕೆಯ ಗಾಡಿಯಲ್ಲಿ ಪೆಟ್ರೋಲ್ ಇದ್ದರೇ ಯು ಟರ್ನ್ ಮಾಡಬಹುದು :-)
ಸಾರ್ ಇದು ಕಥೆ ಇರುವುದು, ಆದರೆ ನಮಗೆ ಸ್ಪೂರ್ತಿಯಾದ ಆ ಮೂಗುತಿ ಮತ್ತು ಕಣ್ಣು ಇವೆರಡೂ ನಿಜವೆ. ನಿಮ್ಮ ಕಥೆಯನ್ನೂದಿದ ನನ್ನ ಮನಸು ಮತ್ತು ಕಣ್ಣು ಕಿಟಕಿಯಾಚೆ ಆ ಸ್ಪೂರ್ತಿಯ ಹುಡುಕುತ್ತಿದೆ.
ReplyDeleteಹಹಹಃ ಸಿಕ್ಕಿದರೇ ನಾನೂ ಆ ಸ್ಪೂರ್ತಿಗೆ ಕಾಯುವೆ ಧನ್ಯವಾದಗಳು ಗೆಳೆಯ ಸುಂದರ ಪ್ರತಿಕ್ರಿಯೆಗೆ
Deleteಆಹಾ...!! ಸೊಗಸಾದ ನಿರೂಪಣೆ ... ಮತ್ತೆ ಮುಂದೇನಾಯ್ತು ಹಹಹ
ReplyDeleteಅಕ್ಕಯ್ಯ ಧನ್ಯವಾದಗಳು
Deleteಮುಂದೆ ಏನಾಗುತ್ತೆ ನನಗೂ ಗೊತ್ತಿಲ್ಲ.. ಎಳೆ ಸಿಕ್ಕಿತು ಬಿಡಿಸಿಟ್ಟೆ.. ಮುಂದೆ ಏನೂ ನೋಡೋಣ
Superb Anna
ReplyDeleteDhanyavadagalu Magale
DeleteMundenaitu anno prashne kadta ide ..... Trailer matra nodange aitu ;)
ReplyDeletePicture abhi bhakhi hai ;P
Looking fwd for the next part
Dhanyavadagalu maate..nodona.. parts baruttaa antha.. :-)
Deleteವಾವ್ ಶ್ರೀಮನ್...
ReplyDeleteಕುತೂಹಲ ಕೆದಕು ಇದೇನೇನೋ.. !!!����
ಹಹಹ ಧನ್ಯೋಸ್ಮಿ ಸರ್ಜಿ
Deleteaa mooguthi, aa kannu :) <3 like it, like it..... Sree, barali mattondu baraha.
ReplyDeleteಧನ್ಯವಾದಗಳು DFR
Deleteನೋಡೋಣ ಆ ರೀತಿಯ ಸ್ಪೂರ್ತಿಯ ಚಿಲುಮೆ ಹೊಳೆದಾಗ ಮತ್ತೊಂದು ಬರಹ ಬರುತ್ತದೆ :-)
Too good Srikanth….I just liked this concept of pure friendship else this will be just one more love story.
ReplyDeleteEagerly waiting for the next episode.
Regards,
Roopashree
Super thanks Roopashree...thank you so much..yeah let us see how the next parts comes in
Delete