"ಬೊಂಬೆಯಾಟವಯ್ಯ.. ಇದು ಬೊಂಬೆಯಾಟವಯ್ಯ.. ನೀ ಸೂತ್ರಧಾರಿ ನಾ ಪಾತ್ರಧಾರಿ ದಡವ ಸೇರಿಸಯ್ಯ" ಅಂದು ಬೆಳಿಗ್ಗೆಯಿಂದ ಅಣ್ಣಾವ್ರ ಈ ಹಾಡು ಬೇಡವೆಂದರೂ ಪದೇ ಪದೇ ತುಟಿಯ ಮೇಲೆ ಬರುತ್ತಲೇ ಇತ್ತು. ಕಾರಣ ಆಗ ಗೊತ್ತಿರಲಿಲ್ಲ, ಆದರೆ ಅದು ಗೊತ್ತಾದ ಹೊತ್ತು.. ವಾಹ್ ಸುಂದರ ಅನುಭವ...
"ನೀ ನನ್ನ ಗೆಲ್ಲಲಾರೆ" ಚಿತ್ರದಲ್ಲಿ ಕ್ಲೈಮಾಕ್ಸ್ ದೃಶ್ಯದಲ್ಲಿ ಪ್ರಖ್ಯಾತ ಖಳನಟ ತೂಗುದೀಪ ಶ್ರೀನಿವಾಸ್ ರಾಜ್ ಅವರಿಗೆ ಸವಾಲು ಹಾಕುತ್ತಾ, "ನೋಡಿದೆಯಾ ಹೇಗಿದೆ ನನ್ನ ಮಾಸ್ಟರ್ ಪ್ಲಾನ್" ಎಂದಾಗ, ಅಣ್ಣಾವ್ರು ತಮ್ಮದೇ ಶೈಲಿಯಲ್ಲಿ "ತಿಪ್ಪೆ ಮೇಲಿರುವ ಹುಳಾನಾ ನುಂಗೋಕೆ ಕಪ್ಪೆ ಬಾಯಿ ಬಿಟ್ಟುಕೊಂಡಿರುತ್ತಂತೆ, ಕಪ್ಪೆನಾ ನುಂಗೋಕೆ ಹಾವು ಕಾಯ್ತಾ ಇರುತ್ತಂತೆ, ಹಾವನ್ನ ಹಿಡಿಯೋಕೆ ಗರುಡ ಹಾರಾಡ್ತಾ ಇರುತ್ತಂತೆ, ಗರುಡನ ಮೇಲೊಬ್ಬ ಕೂತಿರ್ತಾನಂತೆ... ಮಾಸ್ಟರ್ ಪ್ಲಾನ್ ಅವನ್ದು ಕಣೋ.. " ಹಾಗೆ ನಮ್ಮದು ಏನೇ ಪ್ಲಾನ್ ಇದ್ದರೂ, ಕಡೆಯಲ್ಲಿ ನೆಡೆಯುವುದು ಆ ಪರಮಾತ್ಮನ ಪುಸ್ತಕದ ಚಿತ್ರಕಥೆ ಹೇಗಿದೆಯೋ ಹಾಗೆ..
ಈ ಪೀಠಿಕೆಗೆ ಕಾರಣ, ೩ಕೆ ತಂಡ ಆಯೋಜಿಸಿದ್ದ ಕರುನಾಡ ರಾಜ್ಯೋತ್ಸವ ಸಮಾರಂಭಕ್ಕೆ ಸರಿಯಾಗಿ ಮೂರು ಘಂಟೆಗೆ ಅಲ್ಲಿರಬೇಕಿದ್ದ ನಾನು, ಸಮಯ ೨. ೧೫ ಆಗಿದ್ದರೂ ನಾ ಇದ್ದದ್ದು ಅಲ್ಲಿಂದ ಸರಿ ಸುಮಾರು ಐವತ್ತು ಕಿಮಿ ದೂರದಲ್ಲಿರುವ ನನ್ನ ಆಫೀಸ್ನಲ್ಲಿ.. ಹೇಗೋ ತರಾತುರಿಯಲ್ಲಿ ಕೆಲಸ ಮುಗಿಸಿ ನನ್ನ ಬಾಸ್ ಕಾರಿನಲ್ಲಿ ಯಶವಂತಪುರಕ್ಕೆ ಬಂದು ನನ್ನ ಕಾರನ್ನು ತೆಗೆದು ಹೊರಟೆ.. "ಶ್ರೀಕಾಂತಣ್ಣ ನಾ ವಿಜಯನಗರದ ಹತ್ತಿರ ಇದ್ದೇನೆ.. ಈಗ ಹೆಂಗೆ ಹೋಗಬೇಕು".. ತಕ್ಷಣ ಹೇಳಿದೆ "ಒಂದು ಹತ್ತೈದು ನಿಮಿಷ ನೀವು ಇರುವ ಕಡೆಯೇ ಇರಿ ನಾ ಬರುತ್ತಿದ್ದೇನೆ, ಜೊತೆಯಲ್ಲಿಯೇ ಹೋಗೋಣ"..
ಮೊದಲೇ ಹೆದರಿದ್ದವನಿಗೆ ಜೊತೆಗಾರ ಸಿಕ್ಕಿದ್ದು ಸ್ವಲ್ಪ ಸಮಾಧಾನ ತಂದಿತು. ಹೇಳಿದ ಸ್ಥಳದಲ್ಲಿ ಕಾಯುತ್ತಿದ್ದ ಕಡೆ ಹೋಗಿ ಅವರ ಜೊತೆಯಲ್ಲಿ ಸಭಾಂಗಣಕ್ಕೆ ಬಂದಾಗ.. ಆಗಲೇ ಕಾರ್ಯಕ್ರಮ ಶುರವಾಗಿತ್ತು.. ಇತ್ತ ಕಡೆ ಮಗಳು ಆಗಲೇ ಒಂದೆರಡು ಕರೆ, ಸಂದೇಶಗಳನ್ನು ಮಾಡಿ ನನ್ನಲ್ಲಿನ ಎದೆಬಡಿತವನ್ನು ಇನ್ನಷ್ಟು ಹೆಚ್ಚಿಸಿದ್ದಳು.
ಕಾರು ನಿಲ್ಲಿಸಿ, ಅಂಗಣಕ್ಕೆ ಹೋಗಿ, ಯಾರು ಇದ್ದಾರೆ, ಯಾರೂ ಇಲ್ಲ, ಯಾವುದನ್ನು ಗಮನಿಸದೆ, ಸದ್ದಿಲ್ಲದೇ ನನ್ನ ಕ್ಯಾಮೆರಾ ಹಿಡಿದು ಹಿಂದಿನ ಸಾಲಿಗೆ ಹೋಗಿ ತಣ್ಣಗೆ ಕೂತು ಬಿಡುವ ಪ್ಲಾನ್ ಮಾಸ್ಟರ್ ಪ್ಲಾನ್ ನನ್ನದಾಗಿತ್ತು. ಆದರೆ ಅಣ್ಣಾವ್ರು ಹೇಳುವ ಮಾಸ್ಟರ್ ಪ್ಲಾನ್ ಕತೃ.. ತನ್ನದೇ ಒಂದು ಪ್ಲಾನ್ ಮಾಡಿದ್ದ..
"ಕವನ ವಾಚಿಸಿದ ಕವಿಗೆ ಧನ್ಯವಾದ ಹೇಳುತ್ತಾ.. ಈಗ ಮುಂದಿನ ಕವಿತೆಯನ್ನು ಓದಲು ಬರುತ್ತಿದ್ದರೆ ಶ್ರೀಕಾಂತ್ ಮಂಜುನಾಥ್" ನನ್ನ ಗೆಳೆಯ ಅರುಣ್ ಶೃಂಗೇರಿ ಹಿಡಿದಿದ್ದ ಮೈಕಿಂದ ಹೊರಗೆ ಬಂದ ಮಾತುಗಳನ್ನು ಕೇಳಿ, ಒಮ್ಮೆಲೇ ಗಾಬರಿಯಾಗಿ, ಸ್ವಲ್ಪ ಹೊತ್ತು ಆಮೇಲೆ ಹೇಳುತ್ತೇನೆ ಅಂದೇ. ಆವಾಗ ಅರಿವಾಯಿತು, ನನ್ನ ಸರದಿ ಇನ್ನೂ ಮುಗಿದಿಲ್ಲ, ಹಾಗೆ ಮಾಸ್ಟರ್ ಪ್ಲಾನ್ ನಲ್ಲಿ ನನ್ನ ಸೀನ್ ಇನ್ನೂ ಬಂದಿಲ್ಲ ಅಂತ :-(
ಬಂದಿದ್ದ ಒಂದಷ್ಟು ಗೆಳೆಯರನ್ನು ಮಾತಾಡಿಸಿ, ಒಂದೆರಡು ಫೋಟೋಗಳನ್ನು ಕ್ಲಿಕ್ಕಿಸಿ, ಹೇಗೋ ಕೆಲ ಕ್ಷಣಗಳನ್ನು ತಳ್ಳಿದೆ.. "ಶ್ರೀಕಾಂತ್ ಮಂಜುನಾಥ್ ರವರು ಈಗ ತಮ್ಮ ಕವಿತೆಯನ್ನು ವಾಚಿಸಲಿದ್ದಾರೆ" ಬೇರೆ ಏನೂ ದಾರಿಯಿರಲಿಲ್ಲ, ಈಗ ಮತ್ತೆ ನಖರ ಮಾಡಿದರೆ, ಅಹಂಕಾರವಾಗುತ್ತದೆ.. ಜೊತೆಯಲ್ಲಿ ಅಲ್ಲಿದ್ದ ಮಹಾನ್ ದೈತ್ಯ ಪ್ರತಿಭೆಗಳ ಮುಂದೆ ನಾನು ಏನೂ ಅಲ್ಲಾ.. ಬಭೃವಾಹನದಲ್ಲಿ ಹೇಳುವ ರೀತಿಯಲ್ಲಿ "ತೃಣಕ್ಕೆ ಸಮಾನ" ಆಗಿ ಬಿಡುತ್ತೇನೆ ಎಂದು, ಢವ ಢವ ಗುಟ್ಟುತ್ತಿದ್ದ ಎದೆಯನ್ನು ಒಮ್ಮೆ ಹಾಗೆ ಸವರಿ "ಆಲ್ ವಿಲ್ ಬಿ ವೆಲ್" ಅಂತ ಸಮಾಧಾನ ಹೇಳಿ, ಹೊತ್ತು ತಂದಿದ್ದ ಕವಿತೆಯ ಪ್ರತಿಯನ್ನು ತೆಗೆದುಕೊಳ್ಳಲು ಹೋದೆ.. ಆಗ ಗೆಳೆಯ ಅರುಣ್ "ಶ್ರೀ ನಿಮ್ಮ ಕವಿತೆ ಇಲ್ಲಿದೆ ತೆಗೆದುಕೊಳ್ಳಿ" ಆಗ ಶುರುವಾಯಿತು..
ಹಾಗೆ ಮೇಲೆ ಒಮ್ಮೆ ನೋಡಿದೆ.. ಮಾಸ್ಟರ್ ಪ್ಲಾನ್ ಕತೃ ಹೇಳಿದ "ಲೈಟ್ಸ್, ಕ್ಯಾಮೆರಾ.. ಆಕ್ಷನ್"
"ಎಲ್ಲರಿಗೂ ನಮಸ್ಕಾರ" ಧ್ವನಿ ನನಗೆ ಕೇಳಲಿಲ್ಲ
"ಶ್ರೀ ಮೈಕ್ ಆನ್ ಮಾಡಿಕೊಳ್ಳಿ".. ಪಕ್ಕದಿಂದ ಅಶರೀರವಾಣಿ ಬಂತು
"ನೋಡಿ ಪ್ರಾಬ್ಲಮ್ ಇಲ್ಲಿಂದ ಶುರುವಾಗಿದೆ.. " ಎಲ್ಲರೂ ಗೊಳ್ ಎಂದು ನಕ್ಕರು..
ಎದೆ ಬಡಿತದ ಒಂದೆರಡು ತಾಳಗಳು ಕಮ್ಮಿಯಾದವು.. ದೀರ್ಘ ಉಸಿರು ಎಳೆದುಕೊಂಡು..
"ನಾ ಮದುವೆ ಆಗುವಾಗಲೂ ಇಷ್ಟು ಹೆದರಿಕೆ ಆಗಿರಲಿಲ್ಲ" ಮತ್ತೆ ಸಭಿಕರು ನಕ್ಕರು..
ಇನ್ನೊಂದೆರಡು ತಾಳಗಳು ಕಮ್ಮಿಯಾದವು..
"ಇದನ್ನು ಓದುವಾಗ.. ನಾ ತೊದಲಿದರೆ, ಗಂಟಲು ಗಟ್ಟಿ ಬಂದರೆ. ಇದು ನನ್ನ ಹೆದರಿಕೆಗಿಂತ.. ನಾ ಆಯ್ದುಕೊಂಡ ವಸ್ತುವಿನ ಭಾರವೇ ಕಾರಣ"
ಮತ್ತೆ ಸಭೆಯಲ್ಲಿ ಲೈಟ್ ಆಗಿ ನಗು ಜೊತೆಯಲ್ಲಿ ಕೆಲವರ ಹುಬ್ಬು ಎರಡನೇ ಮಹಡಿ ಹತ್ತಿತ್ತು .. "ಈ ಪ್ರಾಣಿ ಬ್ಲಾಗ್ ನಲ್ಲಿ ಮಾತ್ರ ಪೀಠಿಕೆ ಅಲ್ಲಾ .. ಮಾತಾಡುವಾಗಲೂ ಹೀಗೆನಾ.. "
ಮುಂದುವರಿಸಿದೆ ....
"ಆಯ್ದುಕೊಂಡ ವಸ್ತು ಮಹಾಭಾರತ.. ಈ ಮಹಾಭಾರತದಲ್ಲಿ ಗಂಗೆ, ಜಲ ಎಷ್ಟು ಪ್ರಾಮುಖ್ಯತೆ ಪಡೆದಿದೆ ಎಂದು ಹೇಳುವ ಒಂದು ಪ್ರಯತ್ನ ನನ್ನದು"
"ಕಮಾನ್ ಶ್ರೀ" ನನಗೆ ದೇವರು ಕೊಟ್ಟ ಸ್ನೇಹಿತೆ ರೂಪ ಸತೀಶ್ ಅವರ ಪ್ರೋತ್ಸಾಹದ ಮಾತುಗಳು, ಸ್ಟೇಜ್ ಇಂದ ನಾನು ಯಾರನ್ನು ನೋಡದೆ ಇದ್ದರೂ, ನನ್ನ ಅದ್ಭುತ ಸ್ನೇಹಿತೆ ನಿವೇದಿತಾ ಚಿರಂತನ ಅವರ ಪ್ರೋತ್ಸಾಹ.. ಇದಕ್ಕಿಂತ ಮಿಗಿಲಾಗಿ ನನ್ನ ಮಡದಿ ಸವಿತಾ.. (ಹೊರಗಡೆ ಒಂದು ಮಣ ಮಾತಾಡುವ ಇವರು.. ಹೇಗೆ ಮಾತಾಡುತ್ತಾರೆ ಎಂಬ ಆತಂಕ ಒಂದು ಕಡೆ, ಇನ್ನೊಂದು ಕಡೆ.. ಈ ಪ್ರಾಣಿ ಏನಾದರೂ ಮಾತಾಡುತ್ತೆ.. ಸರಿಯಾಗುತ್ತೆ ಎನ್ನುವ ವಿಶ್ವಾಸ).. ಜೊತೆಯಲ್ಲಿ "ಅಪ್ಪ ನನ್ನ ಹೀರೋ.. ಯು ಕ್ಯಾನ್ ಡು ಇಟ್.. ಯು ವಿಲ್ ಡು ಇಟ್" ಎಂದು ಸದಾ ನನಗೆ ಎನರ್ಜಿ ಕೊಡುವ ನನ್ನ ಮಗಳು ಅರ್ಥಾತ್ ನನ್ನ ಸ್ನೇಹಿತೆ ಶೀತಲ್ ಮುಂದಿನ ಸಾಲಿನಲ್ಲಿ ಕೂತಿದ್ದು ನನಗೆ ಆನೆ ಬಲ ಬಂದಷ್ಟು ಆಯಿತು.. ಅಶರೀರವಾಣಿಯಾಗಿ "ಶ್ರೀ ನಾನಿದ್ದೇನೆ ಜೊತೆಯಲ್ಲಿ ಯು ಗೋ ಅಂಡ್ ಹ್ಯಾವ್ ಏ ಬ್ಲಾಸ್ಟ್" ಎಂದ ಅರ್ಪಿತಾ.... ಜೊತೆಯಲ್ಲಿ ನನ್ನ ಕುಟುಂಬ ಸದಸ್ಯರು.. ಇವರ ಜೊತೆಯಲ್ಲಿ ಬಲಗೈನಲ್ಲಿ ಕೈ ಗಡಿಯಾರದ ರೂಪದಲ್ಲಿ ವಿರಾಜಿಸಿದ್ದ ನನ್ನ ಸ್ಫೂರ್ತಿ, ಒಳಗಿನ ಪರಮಾತ್ಮ ನನ್ನ ಅಪ್ಪ..
ಧೈರ್ಯ ಮಾಡಿ ಶುರುಮಾಡಿಯೇ ಬಿಟ್ಟೆ
"ಗಂಗಾಜಲಭಾರತ"
ಕಾಯುತ್ತಿದ್ದ ಶಂತನು
ಒಂದಾಯಿತು ಎರಡಾಯಿತು
ಸಿಗಲೇ ಇಲ್ಲ ಕಂದಮ್ಮನ ಮುದ್ದು ಅಪ್ಪುಗೆ
ತಡೆಯಲಾಗದ ಶಂತನು
ಧರೆಗಿಳಿದನು ದೇವವ್ರತ
ಭಾರತ ಮಹಾಭಾರತವಾಗಲು ಒಂದು ಕುರುಹಾದ
ಗಂಗೆಯ ಕಂದನಾದ ದೇವವ್ರತ
ಅವನ ಮಡಿಲಲ್ಲಿ ಅರಳಿತು ಮಹಾಭಾರತದ ಸಂಸ್ಕೃತಿ!
ಕೊಟ್ಟ ವರವನ್ನು ಮರ್ಕಟ ಮನದ ಕುಂತಿ
ಇಟ್ಟೆ ಬಿಟ್ಟಳು ಪರೀಕ್ಷೆಗೆ
ನಿಗಿ ನಿಗಿ ಹೊಳೆಯುವ ಕಂದಮ್ಮ
ದಿನಕರನ ಕೊಡುಗೆಯಾಗಿ
ಮರದ ತೊಟ್ಟಿಲಿನಲ್ಲಿ ಗಂಗೆಯಲ್ಲಿ ಹೊರಟೇ ಬಿಟ್ಟಿತು
ರಾಧೇಯನಾದ ಕರ್ಣ
ಭಾರತಕ್ಕೆ ಇನ್ನಷ್ಟು ತೂಕ ಸಿಗುವಂತೆ ಮಾಡಿದ
ಅವನ ಜನ್ಮದಿಂದ ತೂಗಿತು ಮಹಾಭಾರತದ ಸಂಸ್ಕೃತಿ!
ಪಾಪಿ ಗಂಗೆ ಎಂದು ಕೂಗಿದಳು ಜ್ವಾಲೆ
(ಅಣ್ಣಾವ್ರ ಬಭೃವಾಹನ ಚಿತ್ರ ನೋಡಿದವರಿಗೆ ಇದು ಗೊತ್ತಿರುತ್ತದೆ.. ಎಂದೇ ಉಪ ಪೀಠಿಕೆ ಹಾಕಿದೆ.. ಮತ್ತೊಮ್ಮೆ ಎಲ್ಲರೂ ನಕ್ಕರು)
ಕುಪಿತಗೊಂಡಳು ಗಂಗೆ
ಕಾರಣ ಕೇಳಲು ಗಂಗೆ
ಜ್ವಾಲೆ ಇಟ್ಟಳು ಗಂಗೆಯ ಒಡಲಿಗೆ ಮತ್ಸರದ ಬೆಂಕಿ
ಒಡನೆ ಮೂಡಿತು ಮತ್ತೊಂದು ಅಸ್ತ್ರ
ಬಭೃವಾಹನನಿಂದ ಹರಿಯಿತು ಕಿರೀಟಿ ಅಭಿಮಾನದ ವಸ್ತ್ರ
ಭರತನ ಕಥೆಗೆ ಇನ್ನೊಂದು ಗರಿ ಮೂಡಿತು ಗಂಗೆಯ ಮುನಿಸಿನಿಂದ
ಆ ಜ್ವಾಲೆಯಿಂದ ನುಗ್ಗಿತು ಮಹಾಭಾರತದ ಸಂಸ್ಕೃತಿ!
ಮಹಾಭಾರತದಲ್ಲಿ ತಮಗರಿವಿಲ್ಲದೆ ಭುವಿಗಳಿದ
ಜೀವಿಗಳು ಭರತ ವಂಶದ ಕಥೆಗೆ
ಬಲವಾದ ತಿರುವು ಕೊಡಲು ಕಾರಣವಾಗಿದ್ದು ಜಲ ಸಂಸ್ಕೃತಿ
ತನ್ನ ಒಡಲಿಗೆ ಬಿಟ್ಟ ಯಾವುದೇ ವಸ್ತುವನ್ನು
ಜತನದಿಂದ ಕಾಪಾಡಿ ಅದಕ್ಕೊಂದು
ತಿರುವು ನೀಡಿ ಕಥೆಗೆ ಮಹತ್ ಪಾತ್ರ ಕೊಡುವ ಗಂಗೆ
ಗಂಗಾಜಲ ಸಂಸ್ಕೃತಿ ಕೊಟ್ಟ ತಿರುವು ಭಾರತಕ್ಕೆ ಭಾರವಾಯಿತು!!!
ಉಪಸಂಹಾರ : "ಭೀಷ್ಮ, ಕರ್ಣ, ಬಭೃವಾಹನ ಮಹಾಭಾರತದ ಕತೆಗೆ ಕೊಟ್ಟ ತಿರುವುದು ಬಲು ದೊಡ್ಡದು..
ಈ ಪದ್ಯದ ರೂಪದ ಕವಿತೆಯನ್ನು ಗದ್ಯದ ರೂಪದಲ್ಲಿ ನಾ ಓದಿದ್ದರೆ.. ನನ್ನ ಅನುಭವ ಎಷ್ಟು ದೊಡ್ಡದು ಎಂದು ನೀವೇ ಊಹಿಸಿಕೊಳ್ಳಿ.. ಎಲ್ಲರಿಗೂ ನಮಸ್ಕಾರ"
ಚಪ್ಪಾಳೆಗಳು ಬಿತ್ತು . ಖುಷಿಯಾಯಿತು..
ಕೂತಿದ್ದವರು "ಅಣ್ಣ ಸೂಪರ್ ಅಣ್ಣ ಚೆನ್ನಾಗಿದೆ.. ಚೆನ್ನಾಗಿತ್ತು ಅಂದರು"
ಇನ್ನಷ್ಟು ಖುಷಿಯಾಯಿತು.. ಭಾರವಾಗಿದ್ದ ಮನಸ್ಸು ಹಕ್ಕಿಯ ಹಾಗೆ ಹಾರಾಡ ತೊಡಗಿತು..
(ಕವಿತೆಯನ್ನು ವಾಚನ ಮಾಡುವಾಗ ಅಲ್ಪ ಪ್ರಾಣಗಳು ಮಹಾ ಪ್ರಾಣಗಳು ಬಹಳ ತೊಂದರೆ ಕೊಟ್ಟವು.. ಭಾರತ "ಬಾರತ" ವಾಯಿತು, ಭಾರ "ಬಾರಾ" ವಾಯಿತು, ಭರತ "ಬರತ"ವಾಯಿತು.. ಯಾಕೆ ಗೊತ್ತೇ.. ಅಲ್ಲಿ ನಿಂತು ಓದುವಾಗ, ನನ್ನ ಮಹಾಪ್ರಾಣವೇ ಸ್ವಲ್ಪ ಅಲ್ಪವಾಗಿ ಹೋಗಿತ್ತು :-)
ಈ ಒಂದು ಸುಂದರ ಅವಕಾಶಕ್ಕೆ ಅನುವು ಮಾಡಿಕೊಟ್ಟ ೩ಕೆ ತಂಡಕ್ಕೆ ಮತ್ತೆ ನನ್ನನ್ನು ಪ್ರೋತ್ಸಾಹಿಸಿದ ಮೇಲೆ ಹೆಸರು ಕಾಣಿಸಿದ ಸುಂದರ ಮನದ ಜೀವಿಗಳಿಗೂ.. ಅಣ್ಣಾವ್ರ ಸ್ಟೈಲ್ ನಲ್ಲಿ "ಧನ್ಯವಾದಗಳು"
ಕವಿಗಳಿಗೆ ಅಭಿನಂದನಾ ಪತ್ರ ಕೊಡುವಾಗ ನಾ ಎಲ್ಲರ ಚಿತ್ರ ತೆಗೆಯುತ್ತಿದ್ದೆ, ನನ್ನ ಸರದಿ ಬಂದಾಗ, ನನ್ನ ಕ್ಯಾಮೆರಾ ಅಲ್ಲಿಯೇ ಕೂತಿದ್ದವರಿಗೆ ಕೊಟ್ಟು ನಾ ವೇದಿಕೆಗೆ ಜಂಪ್ ಹೊಡೆದೆ.. ಎದುರಿಗೆ ಪ್ರಖರವಾದ ದೀಪ.. ನನ್ನ ಭ್ರಮೆ, ಯಾರೋ ಫೋಟೋ ತೆಗೆಯುತ್ತಾರೆ ಎಂದು.. ವೇದಿಕೆ ಮೇಲಿದ್ದ ಗಣ್ಯ ವ್ಯಕ್ತಿಗಳು ನನಗೆ ಹಸ್ತ ಲಾಘವ ಕೊಡಲು ಕೈ ಚಾಚಿದರೆ, ಗಾಬರಿಯಾಗಿದ್ದ ನಾನು ಅವರ ಕೈ ನೋಡದೆ, ಫೋಟೋಗೆ ಪೋಸ್ ಕೊಡ್ತಾ ಇದ್ದೆ, ಅಲ್ಲಿ ಫೋಟೋ ತೆಗೆದರೋ ಇಲ್ಲವೋ ಗೊತ್ತಿಲ್ಲ.. ಕ್ಷಣ ಕಾಲ.. ಕವಿ ಬದಲು ಕಪಿಯಾಗಿದ್ದೆ.. .... :-)
ವೇದಿಕೆಯಿಂದ ಇಳಿದಾಗ.. ಅಲ್ಲಿದ್ದವರು.. ಅಣ್ಣಾ ಅವರು ಶೇಕ್ ಹ್ಯಾಂಡ್ ಮಾಡಲು ಕೈ ಕೊಟ್ಟರೆ.. ನೀವು ಫೋಟೋಗೆ ಪೋಸ್ ಕೊಡ್ತಾ ಇದ್ದೀರಾ. ಅಂತ ಜೋರಾಗಿ ನಗುತ್ತಿದ್ದರು.. ನಾ ನನ್ನ ಹಲ್ಲನ್ನು ಬಿಟ್ಟು ಬಿಡದೆ ಬೇರೆ ದಾರಿಯಿರಲಿಲ್ಲ :-)
ಈ ಕಾರ್ಯಕ್ರಮಕ್ಕೆ ನನ್ನ ಜೊತೆಯಲ್ಲಿ ಒಬ್ಬರು ಬಂದರು ಅಂದೆನಲ್ಲ ಅವರ ಹೆಸರು "ಪ್ರಶಸ್ತಿ ಪ್ರಭಾಕರ್" .. ಈ ಕಾರ್ಯಕ್ರಮ ಮುಗಿದ ಮೇಲೆ ಅನುಭವಕ್ಕೆ ಬಂತು "ಅರೆ ಪ್ರಶಸ್ತಿ ಜೊತೆಯಲ್ಲಿ ನಾ ಬಂದಿದ್ದೇನೆ.. ನನ್ನ ಜೊತೆಯಲ್ಲಿ ಪ್ರಶಸ್ತಿ ಬಂದ ಮೇಲೆ ಅದೇ ನನಗೆ ಸಿಕ್ಕ ಮೊದಲ ಪ್ರಶಸ್ತಿ ಎಂದು ಅರಿವಾಯಿತು... ಈ ಸುಂದರ ಮೊಗದ ನನ್ನ ಲೇಖನದ ಮೂಲಕ ಸರದಾರನಿಗೆ ಧನ್ಯವಾದಗಳು!!!

ಅಭಿನಂದನಾ ಪಾತ್ರ |