"ತಂತ್ರಜ್ಞಾನ ಬಂದು ಮೂಲೆ ಮೂಲೆಯ ಧೂಳನ್ನು ಬಡಿದೆಬ್ಬಿಸಿ ಜಗತ್ತನ್ನೇ ಒಂದು ಪುಟ್ಟ ಹಳ್ಳಿಯನ್ನಾಗಿ ಮಾಡಿಬಿಟ್ಟಿದೆ... "
"ಅಪ್ಪಾ ಇದು ಗೊತ್ತು ಏನಾದರೂ ಹೊಸ ಕಥೆ ಹೇಳಪ್ಪಾ... ?"
ಯಾಕೋ ಸಂಯಮ, ತಾಳ್ಮೆಗೆ ಹೆಸರಾಗಿದ್ದ ಮಗಳು ದಿಡೀರ್ ಅಂತ ಹಳೇ ವಿಚಾರವನ್ನು ಬಿಟ್ಟು ಬೇರೆ ಹೊಸ ದಾರಿಗೆ ಹೊರಳಲು ಅಥವಾ ಹೊರಳಿಸಲು ಪ್ರಯತ್ನ ಪಡುತ್ತಿದ್ದಳು...
"ಹೌದಾ ಪಾಪ . ಇದೊಂದು ವಿಚಿತ್ರ ಕಥೆ.. ವಿಕ್ರಮ ಬೇತಾಳನ ಕಥೆ.. ಕೇಳುವೆಯ...."
"ವಾವ್ ನೀವು ಕಥೆ ಹೇಳ್ತೀರಾ ಅಂದ್ರೆ ಬಿಡ್ತೀನಾ... ಹೇಳಿ ಅಪ್ಪಾ"
"ಒಂದೂರಲ್ಲಿ ಒಬ್ಬ ಮಾನವ ಇದ್ದ.. ಬುದ್ದಿವಂತ, ತಕ್ಕ ಮಟ್ಟಿಗೆ ತಿಳುವಳಿಕೆ ಇತ್ತು, ಸಂಘಜೀವಿ.. ಕಾಡಲ್ಲಿ ಮರ ಕಡಿದು ಅದನ್ನ ತುಂಡು ತುಂಡು ಮಾಡಿ.. ತನ್ನ ಯಜಮಾನರಿಗೆ ಲೆಕ್ಕ ಒಪ್ಪಿಸುವ, ಹಾಗೆಯೇ ಅದಕ್ಕೆ ಬೇಕಾದ ಲೆಕ್ಕ ಪತ್ರ ಬರೆಯುವ ಕೆಲಸ ಮಾಡುತ್ತಿದ್ದ.. "
"ಹಾ ಆಮೇಲೆ"
ಕೆಲಸದಲ್ಲಿ ಶ್ರದ್ಧೆ ನಿಷ್ಠೆ ಯಾವಾಗಲೂ ಅವನ ಎರಡು ಕಣ್ಣುಗಳಾಗಿದ್ದವು.. ಸಂತಸದಿಂದ ತನ್ನ ಸುಖಿ ಪರಿವಾರದ ಜೊತೆ ಜೀವನ ನಡೆಸುತ್ತಿದ್ದ.. "
"wow intersting....ಆಮೇಲೆ?"
"ತನ್ನ ಪರಿವಾರವನ್ನು ನಗೆಯ ಕಡಲಲ್ಲಿ ತೇಲಿಸಲು ಎಲ್ಲಾ ರೀತಿಯ ಕಸರತ್ತನ್ನು ತಾಳ್ಮೆಯಿಂದ ಮಾಡುತ್ತಿದ್ದ... ಹೀಗೆ ಸಾಗುತ್ತಿರಲು ಒಂದು ದಿನ.. ಅವನ ಯಜಮಾನ.. ಬಂದು... ನೋಡಪ್ಪ.. ನಾನು ನಡೆಸುತ್ತಿದ್ದ ಈ ಸಣ್ಣ ಕೈಗಾರಿಕೆಯನ್ನು ಇನ್ನೊಬ್ಬರು ಬಂದು ಕೊಂಡುಕೊಂಡಿದ್ದಾರೆ.. ಇನ್ನು ಮುಂದೆ ನಾನೇ ಅವರು ಹೇಳಿದ್ದನ್ನ ಕೇಳಬೇಕು.. ನೀನು ಹಾಗೆಯೇ ಇರಬೇಕು ಆಯಿತೆ.. ?"
"hmmmmmmmmmmmmmmmmm..."
"ಅವನಿಗೆ ಒಂದು ಕ್ಷಣ ಏನೂ ತೋಚದಾಯಿತು.. ಸರಿ ಮನ, ಮನೆಯ ಜವಾಬ್ಧಾರಿ.. ಕಣ್ಣ ಮುಂದೆ ಬಂದು ನಿಂತಿತ್ತು.. ಸುತ್ತ ಮುತ್ತಲ ಕಾಡು ಪ್ರದೇಶ ಕ್ರಮೇಣ ನಗರೀಕರಣವಾಗುತ್ತಿತ್ತು.. ಕಾಡುಗಳು ಇದ್ದರೇ ತನಗೆ ಕೆಲಸ ಇಲ್ಲದೆ ಹೋದರೆ.... ಆ ಆತಂಕ ಬೆನ್ನು ಹುರಿಯಲ್ಲಿ ನಡುಕ ಹುಟ್ಟಿಸುತ್ತಿತ್ತು.. ತನ್ನ ನಗುವನ್ನು ಯಾವುದೇ ಕಾರಣಕ್ಕೂ ಬಿಡಲು ಅವನ ಮನಸ್ಸು ಒಪ್ಪುತ್ತಿರಲಿಲ್ಲ .. ಕಷ್ಟಗಳು ಮನುಜನಿಗಲ್ಲದೆ ಮರಕ್ಕೆ ಬರುತ್ತದೆಯೇ ಎನ್ನುವ ಸಿದ್ಧಾಂತ ಅವನದು.. ಕಣ್ಣಿಗೆ ಕಾಣುವ ದೇವರುಗಳು, ಕಾಣದ ದೇವರುಗಳ ಕೃಪೆ ಆಶೀರ್ವಾದ ತನ್ನ ತಲೆಕಾಯುವ ವಜ್ರ ಕಿರೀಟ ಎಂದು ಬಲವಾಗಿ ನಂಬಿದ್ದ.. "
"ಬೇತಾಳ ಮಧ್ಯೆ ಬಾಯಿ ಹಾಕಿತು.. .. ಅದು ಸರಿ ಗುರು ಕಥೆ ಚೆನ್ನಾಗಿ ಬರ್ತಾ ಇದೆ.. ಮುಂದುವರೆಸು... "
"ಹೀಗೆ ಸಾಗಿತು.. ಅವನ ಜೀವನ.. ಒಂದು ದಿನ ಅಚಾನಕ್ಕಾಗಿ ಹೊಸ ಯಜಮಾನ ಬಂದು.. ನೋಡಪ್ಪ ಇನ್ನು ಮುಂದೆ ಹೀಗೆ ಇರಬೇಕು.. ದಿನಕ್ಕೆ ಇಷ್ಟೇ ಹೊತ್ತು ನಗಬೇಕು.. ಹೆಚ್ಚು ನಗುವ ಹಾಗೆ ಇಲ್ಲ.. ಅಂತೆಲ್ಲ ಕಟ್ಟು ನಿಟ್ಟು ಮಾಡಿದರು.. .."
"ಹೊ.. ಹೊ... closeup tooth paste use ಮಾಡ್ಬೇಕು.. mysore sandal ಸೋಪ್ ಉಪಯೋಗಿಸಬೇಕು ಅನ್ನುವ ಮಟ್ಟಕ್ಕೆ ಕಟ್ಟಿ ಹಾಕಿದರು ಆಲ್ವಾ ಅಂತು ಬೇತಾಳ"
"ಅರೆ ಬೇತಾಳ.. ನಾನು ನಿನ್ನ ಹೊತ್ತು ನೆಡೆಯುತ್ತಿದೇನೆ.. ಕಥೆ ಮುಗಿಯುವ ತನಕ ನೀನು ಮಾತಾಡುವ ಹಾಗಿಲ್ಲ ಓಕೆ ನಾ"
"ಸರಿ ಗುರುವೇ ಮುಂದುವರೆಸು"
"ಯಾಕೋ ಕಟ್ಟು ಪಾಡು, ಅಂಕೆ ಶಂಕೆ ತೀರ ಹೆಚ್ಚಾದಾಗ.. ಸುತ್ತಲ ಮುತ್ತಲ ಕಾಡನ್ನು ನೋಡತೊಡಗಿದ.. ಬೇರೆ ಮರ, ಗಿಡ, ಗಂಟೆಗಳು ಸಿಗುತ್ತವೆಯೋ ಏನೋ ಅಂತಾ.... ನೋಡು ನೋಡುತ್ತಲೇ ದಿನಗಳು ವಾರಗಳಾದವು, ವಾರಗಳು ಸೋಪ್ ಪೌಡರ್ ಹಾಕಿಕೊಂಡು ಮಾಸಗಳಾದವು.. ಮಾಸಗಳು ಅಂಗಿ ಶರಾಯಿ ತೊಟ್ಟು ವರ್ಷವಾಯಿತು.. ಆದರೆ ಅವನ ಮುಖದ ಮೇಲೆ ಜಿನುಗುತಿದ್ದ ಮಂದಹಾಸ ಮರೆಯಾಗಿರಲಿಲ್ಲ.. .. ಹೀಗೆ ಅವನ ಭಗೀರಥ ಪ್ರಯತ್ನದಲ್ಲಿ ಅವನ ಪರಿವಾರದವರು, ಸ್ನೇಹಿತರು ವಿಶ್ವಾಸಿಗಳು ಜೊತೆಯಲ್ಲಿ ನಡೆದಿದ್ದರು.... "
"ಸರಿ ಗುರು ಆಮೇಲೆ"
"ಶ್ರಾವಣ ಮಾಸ ಬಂದಾಗ ಆನಂದ ತಂದಾಗ ವಿರಹ ಗೀತೆ ಇನ್ನಿಲ್ಲಾ ಪ್ರಣಯ ಗೀತೆ ಬಾಳೆಲ್ಲ.. "
"ಏನ್ ಗುರುವೇ ಅಣ್ಣಾವ್ರ ಚಿತ್ರ ಗೀತೆ ಶುರುಮಾಡಿದೆ.. ಏನ್ ಸಮಾಚಾರ"
"ಶ್ರಾವಣ ಮಾಸವು ತಂದ ಉಡುಗೊರೆ ಉಲ್ಲಾಸವ ತರಲಿ ಆ "ಮಂಜುನಾಥ"ನ ಕೃಪಾ ಕಟಾಕ್ಷವೂ ಹಾಗೆಯೇ ಅವನ ಸುತ ಗಣಪತಿಯ ಆಶೀರ್ವಾದವು ಎಂದೆಂದು ನಿನಗಿರಲಿ"
"ಅಯ್ಯೋ ಗುರುವೇ ಏನು ಸಾಹಿತ್ಯವನ್ನೇ ಬದಲಾಯಿಸಿ ಬಿಟ್ಟೆ.. ಇರಲಿ ಇರಲಿ.. ನಿನ್ನದು ಏನೋ ವಿಷಯ ಇದೆ ಇರಲಿ ಕಥೆ ಮುಂದುವರೆಸು"
"ಹೀಗೆ ಮಂಜುನಾಥನ, ಕಾಶಿ ವಿಶಾಲಕ್ಷಿಯ ಅನುಗ್ರಹ.. ಕೃಷ್ಣನ ನೀಳ ಜಡೆ, ಅವನ ಕೊಳಲು, ಪಾಂಚಜನ್ಯದ ವಿಜಯದ ನಾದ ತಣ್ಣಗಿನ ಕೋಮಲತೆ ಬೆಚ್ಚಗಿನ ಶಾಖ.. ಎಲ್ಲವೂ ಅವನಿಗೆ ಹೊಸ ಹುರುಪು ಕೊಟ್ಟಿತು.. ಅವನ ಭಗೀರಥ ಪ್ರಯತ್ನಕ್ಕೆ ಹೊಸ ಹಸಿರಿನ ಚೈತನ್ಯ ಸಿಕ್ಕೆ ಬಿಟ್ಟಿತು.. .. ಅವನ ಸಂತೋಷಕ್ಕೆ ಪಾರವೇ ಇಲ್ಲ..... ಅಚಾನಕ್ಕಾಗಿ ಅವನ ಕಣ್ಣಲ್ಲಿ ದೇವಗಂಗೆ ಧುಮುಕುತ್ತ ಸಾಗಿದಳು.. "
ಬೇತಾಳ ಇದು ಕಥೆ.. ಈಗ ನಾ ಕೇಳುವ ಪ್ರಶ್ನೆಗೆ ಉತ್ತರಿಸು.. ಇಲ್ಲದೆ ಹೋದರೆ ಮತ್ತೆ ನಿನ್ನ ಹೊತ್ತು ನಾ ನಡೆಯೋಲ್ಲ"
"ಹೊ ಇದೊಳ್ಳೆ ಕಥೆ ಆಯ್ತಲ್ಲ.. ಸರಿ ಅದೇನು ಕೇಳ್ತೀಯೋ ಕೇಳು"
"೧. ಬೇತಾಳನಾದ ನೀನು ನನಗೆ ಕಥೆ ಹೇಳಬೇಕಿತ್ತು.. ಉತ್ತರ ನಾ ಹೇಳಬೇಕಿತ್ತು.. ಆದರೆ ಇಲ್ಲಿ ಉಲ್ಟಾ ಪುಲ್ಟಾ
೨. ಕಷ್ಟಗಳು ಕಳೆದು ಸುಖದ ಹಾದಿಯಲ್ಲಿದ್ದ ಅವನಿಗೆ ಯಾಕೆ ಭಗೀರಥ ಪ್ರಯತ್ನ ಮಾಡಿಯೂ ದೇವಗಂಗೆ ಕಣ್ಣಲ್ಲಿ ಉದ್ಭವವಾದಳು..
೩. ಅವನ ಮುಖದಲ್ಲಿನ ನಗೆಯ ಬಗ್ಗೆ ಯಾಕೆ ಅಷ್ಟೊಂದು ಬಾರಿ ನಾ ಹೇಳಿದೆ"
"ಹ ಹ ಏನ್ ಗುರುವೇ ಇಂತಹ ಪ್ರಶ್ನೆ ಕೇಳಿಬಿಟ್ಟೆ.. ಇರಲಿ ಮೊದಲನೇ ಪ್ರಶ್ನೆಗೆ ಕಡೆಯಲ್ಲಿ ಉತ್ತರಿಸುವೆ.. ಈಗ ಎರಡನೇ ಪ್ರಶ್ನೆಗೆ ಉತ್ತರಿಸುವೆ ಕೇಳು... ಅವನ ಕಷ್ಟದ ದಿನಗಳಲ್ಲಿ ಅವನ ಪರಿವಾರದವರೆಲ್ಲ ಒಳ್ಳೆಯ ದಿನ ಬರುತ್ತದೆ ಹೆದರಬೇಡ ಎಂದು ಹೇಳುತ್ತಲೇ ಇದ್ದರು... ಅವನ ಪ್ರಚಂಡ ಆತ್ಮ ವಿಶ್ವಾಸ ಅವನ ಮನಸ್ಸನ್ನು ಕುಗ್ಗದ ಹಾಗೆ ನೋಡಿಕೊಳ್ಳುತ್ತಿತ್ತು.. ಹೊಸ ಹುರುಪು ಚೈತನ್ಯ ಸಿಕ್ಕ ಮೇಲೆ ಅದನ್ನ ತನ್ನ ಪರಿವಾರದವರಿಗೆ ಹೇಳಿದಾಗ ಎಲ್ಲರು ಸಂತಸಪಟ್ಟು ಖುಷಿಯಲ್ಲಿದ್ದಾಗ ಅವನ ವಂಶದ ಕುಡಿ ಬಂದು ತಬ್ಬಿ ಕೊಂಡು.. ಅಪ್ಪಾ... you will win ಅಂತ ಹೇಳಿತು.... ಬಳ್ಳಿಗೆ ಮರ ಆಸರೆ ಸಹಜ .. ಆದರೆ ಇಲ್ಲಿ ಬಳ್ಳಿಯೇ ಮರಕ್ಕೆ ಆಸರೆಯಾಗಿ ನಿಂತು ಹೊಸ ಉಲ್ಲಾಸಭರಿತ ಆ ನಾಲ್ಕು ಪದಗಳನ್ನು ಹೇಳಿದ್ದು ಅವನಿಗೆ ಇನ್ನಷ್ಟು ಸಂತಸ ತಂದಿತು.. ಆ ಸಂತಸ ಕಣ್ಣಲ್ಲೇ ದೇವಗಂಗೆಯಾಗಿ ಹರಿಯಿತು... "
"ಬೇತಾಳ ಸೂಪರ್ "
ಇನ್ನು ಮೂರನೇ ಪ್ರಶ್ನೆಗೆ ಉತ್ತರ... ಮರ ಬೆಳೆಯುವುದು ಮಣ್ಣಿಂದ.. ಆದರೆ ಅದೇ ಮರ ಬೆಳವಣಿಗೆ ನಿಲ್ಲಿಸಿ ಬಿಟ್ಟರೆ.. ಸುತ್ತ ಮುತ್ತಲ ಗೆದ್ದಲು ಮಣ್ಣಿನ ರೂಪ ಮಾಡಿಕೊಂಡು ಮರವನ್ನು ತಿಂದು ಬಿಡುತ್ತದೆ... ಅಲ್ಲಿಗೆ ಮಣ್ಣಿಂದ ಬೆಳೆಯಬೇಕಾದ ಮರ ಮಣ್ಣಿಂದಲೇ ಅಳಿಯುತ್ತದೆ.. ಹಾಗೆಯೇ ಕಷ್ಟ ನಷ್ಟಗಳು ಬಂದಾಗ ನಗುವನ್ನು ಮರೆತು ಬಿಟ್ಟರೆ ನಗುವೇ ನಮ್ಮನ್ನು ಮರೆತು ಬಿಡುತ್ತದೆ.. ಆಗ ಚಿಂತೆ ಚಿತೆಯ ರೂಪದಲ್ಲಿ ನಮ್ಮನ್ನು ಸುಡಲು ಶುರುಮಾಡುತ್ತದೆ.... ಚಿಂತೆಗೆ ಮದ್ದು ಬೇರೆಯೇನೂ ಇಲ್ಲಾ ... ಬರಿ ಒಂದು ಹೂ ನಗೆ ಅಷ್ಟೇ ಸಾಕು...
"ನಿನ್ನ ಬೆನ್ನು ತಟ್ಟೋಣ ಅಂದ್ರೆ.. ನನ್ನ ಬೆನ್ನು ಏರಿ ಕುಳಿತಿದ್ದೀಯ.. Anyway ಬೇತಾಳ you are awesome...."
"ಈಗ ಮೊದಲನೇ ಪ್ರಶ್ನೆಗೆ ಉತ್ತರ... ಬೆನ್ನಿಗೆ ಸಮಸ್ಯೆಯನ್ನು ಕಟ್ಟಿ ಕೊಳ್ಳಬೇಕು ಆಗಲೇ ಛಲ ಮೈಯಲ್ಲಿ ಮೂಡಿಬರುತ್ತದೆ... ಆದರೆ ಆ ಸಮಸ್ಯೆಗೆ ಮಾತನಾಡಲು ಬಿಡಬಾರದು.. ಮೊದಲೇ ನಾವು ಅದನ್ನು ಬೆನ್ನ ಮೇಲೆ ಹೇರಿಕೊಂಡಿರುತ್ತೇವೆ ಇನ್ನು ಅದಕ್ಕೆ ಮಾತಾಡಲು ಬಿಟ್ಟರೆ.. ನಮ್ಮ ತಲೆಯ ಮೇಲೆ ಹತ್ತಿ ಕೂತು ಬಿಡುತ್ತದೆ.. ಹಾಗಾಗಿ ಸಮಸ್ಯೆಗೆ ಸಮಸ್ಯೆ ಕೊಟ್ಟರೆ ಉತ್ತರ ತಾನೇ ತಾನಾಗಿ ಹೊಳೆಯುತ್ತದೆ... ಅದೇ ಕೆಲಸವನ್ನು ನೀನು ಮಾಡಿದ್ದು ವಿಕ್ರಮ ಮಹಾರಾಜ.. ಹಾಗೆಯೇ ಅದನ್ನೇ ಈ ಕಥಾನಾಯಕ ಕೂಡ ಮಾಡಿದ್ದು.. ಎಲ್ಲರಲ್ಲೂ ಉತ್ಸಾಹ, ಪ್ರೋತ್ಸಾಹ ಕಂಡಿದ್ದ ಅವನಿಗೆ ಸಮಸ್ಯೆ ಒಂದು ಸಮಸ್ಯೆ ಆಗಿರಲಿಲ್ಲ.. ಜೊತೆಗೆ "ನಗು ನಗುತ ನಲಿ ನಲಿ ಏನೇ ಆಗಲಿ" ಎನ್ನುವ ಅಣ್ಣಾವ್ರ ಹಾಡಿನಂತೆ ಜೀವನ ನಡೆಸುವ ಅವನಿಗೆ ಸಮಸ್ಯೆ ಕೂಡ ಅವನ ಮುಂದೆ ಮಂಡಿ ಊರಿ ಕೂರದೆ ನಗುತ್ತ ಮುಂದೆ ಸಾಗಿ ಹೋಗುತ್ತದೆ.. "
"ಬೇತಾಳ ನಿಜಕ್ಕೂ ನಿನ್ನ ಹೊತ್ತು ನಡೆದಿದ್ದು ನನಗೆ ಸಮಾಧಾನ ತಂದಿತು ಒಂದು ಒಳ್ಳೆಯ ಕಥೆಗೆ ಅಷ್ಟೇ ಒಳ್ಳೆಯ ಸಂದೇಶ ಕೊಟ್ಟ ನಿನಗೆ ನಾ ಚಿರ ಋಣಿ.. ಹೋಗಿ ಬಾ ಬೇತಾಳ ಮತ್ತೊಮ್ಮೆ ನೀನು ಸಿಕ್ಕರೂ ನಿನ್ನಿಂದ ಒಳ್ಳೆಯ ಉತ್ತರ ಸಿಗುವ ಸಮಸ್ಯೆಯಾಗಿ ಬಾ... bye ಬೇತಾಳ..."
"ಗುರುವೇ.. ಸೂಪರ್ ಸೂಪರ್ .. ನೀನು ಕಥೆ ಹೇಳುವ ಶೈಲಿ.. ಸರಿ ಹೋಗಿ ಬಾ ಸಮಯ ಸಿಕ್ಕರೆ ಮತ್ತೆ ಸುಖವಿಚಾರ ವಿನಿಮಯ ಮಾಡಿಕೊಳ್ಳುವ ಸ್ನೇಹಿತರ ಹಾಗೆ ಸಿಗೋಣ.. " ಎಂದು ಬೇತಾಳ ಹಾರಿ ಹೋಯಿತು..
ಅಪ್ಪಾ ಸೂಪರ್ ಕಥೆ ಅಪ್ಪ ತುಂಬಾ ಇಷ್ಟವಾಯಿತು.. ಸದಾ ನಕ್ಕರೆ... ಅಲ್ಲಿಯೇ ಸಕ್ಕರೆ ಬಂದು ಬೀಳುತ್ತದೆ ಅಲ್ವಾ ಅಪ್ಪ.. ನಾನು ನಗುತ್ತಲೇ ಇರುತ್ತೇನೆ.. ಕಷ್ಟ ಬಂದ್ರೆ ಬರಲಿ ಅಲ್ವಾ.. ಅಪ್ಪಾ ದೂರದ ಬೆಟ್ಟ ಚಿತ್ರದ ಹಾಡು ಹೇಳಪ್ಪಾ... ನಿಮ್ಮ ಬಾಯಲ್ಲಿ ಕೇಳಬೇಕು ಒಮ್ಮೆ...
"ಅಪ್ಪಾ ಇದು ಗೊತ್ತು ಏನಾದರೂ ಹೊಸ ಕಥೆ ಹೇಳಪ್ಪಾ... ?"
ಯಾಕೋ ಸಂಯಮ, ತಾಳ್ಮೆಗೆ ಹೆಸರಾಗಿದ್ದ ಮಗಳು ದಿಡೀರ್ ಅಂತ ಹಳೇ ವಿಚಾರವನ್ನು ಬಿಟ್ಟು ಬೇರೆ ಹೊಸ ದಾರಿಗೆ ಹೊರಳಲು ಅಥವಾ ಹೊರಳಿಸಲು ಪ್ರಯತ್ನ ಪಡುತ್ತಿದ್ದಳು...
"ಹೌದಾ ಪಾಪ . ಇದೊಂದು ವಿಚಿತ್ರ ಕಥೆ.. ವಿಕ್ರಮ ಬೇತಾಳನ ಕಥೆ.. ಕೇಳುವೆಯ...."
"ವಾವ್ ನೀವು ಕಥೆ ಹೇಳ್ತೀರಾ ಅಂದ್ರೆ ಬಿಡ್ತೀನಾ... ಹೇಳಿ ಅಪ್ಪಾ"
---------------------------------------
ಮರದಿಂದ ಬೇತಾಳನನ್ನು ಇಳಿಸಿ ಬೆನ್ನ (ಹೆಗಲ) ಮೇಲೆ ಹಾಕಿಕೊಂಡು ವಿಕ್ರಮ ಖಡ್ಗ ಹಿಡಿದು ಹೊರಟ.. ನೇತಾಡಿ ನೇತಾಡಿ ಸುಸ್ತಾಗಿದ್ದ ಬೇತಾಳಕ್ಕೆ ಬೇಸರವಾಗದಿರಲೆಂದು ಕಥೆ ಹೇಳಲು ಶುರುಮಾಡಿದ.."ಒಂದೂರಲ್ಲಿ ಒಬ್ಬ ಮಾನವ ಇದ್ದ.. ಬುದ್ದಿವಂತ, ತಕ್ಕ ಮಟ್ಟಿಗೆ ತಿಳುವಳಿಕೆ ಇತ್ತು, ಸಂಘಜೀವಿ.. ಕಾಡಲ್ಲಿ ಮರ ಕಡಿದು ಅದನ್ನ ತುಂಡು ತುಂಡು ಮಾಡಿ.. ತನ್ನ ಯಜಮಾನರಿಗೆ ಲೆಕ್ಕ ಒಪ್ಪಿಸುವ, ಹಾಗೆಯೇ ಅದಕ್ಕೆ ಬೇಕಾದ ಲೆಕ್ಕ ಪತ್ರ ಬರೆಯುವ ಕೆಲಸ ಮಾಡುತ್ತಿದ್ದ.. "
"ಹಾ ಆಮೇಲೆ"
ಕೆಲಸದಲ್ಲಿ ಶ್ರದ್ಧೆ ನಿಷ್ಠೆ ಯಾವಾಗಲೂ ಅವನ ಎರಡು ಕಣ್ಣುಗಳಾಗಿದ್ದವು.. ಸಂತಸದಿಂದ ತನ್ನ ಸುಖಿ ಪರಿವಾರದ ಜೊತೆ ಜೀವನ ನಡೆಸುತ್ತಿದ್ದ.. "
"wow intersting....ಆಮೇಲೆ?"
"ತನ್ನ ಪರಿವಾರವನ್ನು ನಗೆಯ ಕಡಲಲ್ಲಿ ತೇಲಿಸಲು ಎಲ್ಲಾ ರೀತಿಯ ಕಸರತ್ತನ್ನು ತಾಳ್ಮೆಯಿಂದ ಮಾಡುತ್ತಿದ್ದ... ಹೀಗೆ ಸಾಗುತ್ತಿರಲು ಒಂದು ದಿನ.. ಅವನ ಯಜಮಾನ.. ಬಂದು... ನೋಡಪ್ಪ.. ನಾನು ನಡೆಸುತ್ತಿದ್ದ ಈ ಸಣ್ಣ ಕೈಗಾರಿಕೆಯನ್ನು ಇನ್ನೊಬ್ಬರು ಬಂದು ಕೊಂಡುಕೊಂಡಿದ್ದಾರೆ.. ಇನ್ನು ಮುಂದೆ ನಾನೇ ಅವರು ಹೇಳಿದ್ದನ್ನ ಕೇಳಬೇಕು.. ನೀನು ಹಾಗೆಯೇ ಇರಬೇಕು ಆಯಿತೆ.. ?"
"hmmmmmmmmmmmmmmmmm..."
"ಅವನಿಗೆ ಒಂದು ಕ್ಷಣ ಏನೂ ತೋಚದಾಯಿತು.. ಸರಿ ಮನ, ಮನೆಯ ಜವಾಬ್ಧಾರಿ.. ಕಣ್ಣ ಮುಂದೆ ಬಂದು ನಿಂತಿತ್ತು.. ಸುತ್ತ ಮುತ್ತಲ ಕಾಡು ಪ್ರದೇಶ ಕ್ರಮೇಣ ನಗರೀಕರಣವಾಗುತ್ತಿತ್ತು.. ಕಾಡುಗಳು ಇದ್ದರೇ ತನಗೆ ಕೆಲಸ ಇಲ್ಲದೆ ಹೋದರೆ.... ಆ ಆತಂಕ ಬೆನ್ನು ಹುರಿಯಲ್ಲಿ ನಡುಕ ಹುಟ್ಟಿಸುತ್ತಿತ್ತು.. ತನ್ನ ನಗುವನ್ನು ಯಾವುದೇ ಕಾರಣಕ್ಕೂ ಬಿಡಲು ಅವನ ಮನಸ್ಸು ಒಪ್ಪುತ್ತಿರಲಿಲ್ಲ .. ಕಷ್ಟಗಳು ಮನುಜನಿಗಲ್ಲದೆ ಮರಕ್ಕೆ ಬರುತ್ತದೆಯೇ ಎನ್ನುವ ಸಿದ್ಧಾಂತ ಅವನದು.. ಕಣ್ಣಿಗೆ ಕಾಣುವ ದೇವರುಗಳು, ಕಾಣದ ದೇವರುಗಳ ಕೃಪೆ ಆಶೀರ್ವಾದ ತನ್ನ ತಲೆಕಾಯುವ ವಜ್ರ ಕಿರೀಟ ಎಂದು ಬಲವಾಗಿ ನಂಬಿದ್ದ.. "
"ಬೇತಾಳ ಮಧ್ಯೆ ಬಾಯಿ ಹಾಕಿತು.. .. ಅದು ಸರಿ ಗುರು ಕಥೆ ಚೆನ್ನಾಗಿ ಬರ್ತಾ ಇದೆ.. ಮುಂದುವರೆಸು... "
"ಹೀಗೆ ಸಾಗಿತು.. ಅವನ ಜೀವನ.. ಒಂದು ದಿನ ಅಚಾನಕ್ಕಾಗಿ ಹೊಸ ಯಜಮಾನ ಬಂದು.. ನೋಡಪ್ಪ ಇನ್ನು ಮುಂದೆ ಹೀಗೆ ಇರಬೇಕು.. ದಿನಕ್ಕೆ ಇಷ್ಟೇ ಹೊತ್ತು ನಗಬೇಕು.. ಹೆಚ್ಚು ನಗುವ ಹಾಗೆ ಇಲ್ಲ.. ಅಂತೆಲ್ಲ ಕಟ್ಟು ನಿಟ್ಟು ಮಾಡಿದರು.. .."
"ಹೊ.. ಹೊ... closeup tooth paste use ಮಾಡ್ಬೇಕು.. mysore sandal ಸೋಪ್ ಉಪಯೋಗಿಸಬೇಕು ಅನ್ನುವ ಮಟ್ಟಕ್ಕೆ ಕಟ್ಟಿ ಹಾಕಿದರು ಆಲ್ವಾ ಅಂತು ಬೇತಾಳ"
"ಅರೆ ಬೇತಾಳ.. ನಾನು ನಿನ್ನ ಹೊತ್ತು ನೆಡೆಯುತ್ತಿದೇನೆ.. ಕಥೆ ಮುಗಿಯುವ ತನಕ ನೀನು ಮಾತಾಡುವ ಹಾಗಿಲ್ಲ ಓಕೆ ನಾ"
"ಸರಿ ಗುರುವೇ ಮುಂದುವರೆಸು"
"ಯಾಕೋ ಕಟ್ಟು ಪಾಡು, ಅಂಕೆ ಶಂಕೆ ತೀರ ಹೆಚ್ಚಾದಾಗ.. ಸುತ್ತಲ ಮುತ್ತಲ ಕಾಡನ್ನು ನೋಡತೊಡಗಿದ.. ಬೇರೆ ಮರ, ಗಿಡ, ಗಂಟೆಗಳು ಸಿಗುತ್ತವೆಯೋ ಏನೋ ಅಂತಾ.... ನೋಡು ನೋಡುತ್ತಲೇ ದಿನಗಳು ವಾರಗಳಾದವು, ವಾರಗಳು ಸೋಪ್ ಪೌಡರ್ ಹಾಕಿಕೊಂಡು ಮಾಸಗಳಾದವು.. ಮಾಸಗಳು ಅಂಗಿ ಶರಾಯಿ ತೊಟ್ಟು ವರ್ಷವಾಯಿತು.. ಆದರೆ ಅವನ ಮುಖದ ಮೇಲೆ ಜಿನುಗುತಿದ್ದ ಮಂದಹಾಸ ಮರೆಯಾಗಿರಲಿಲ್ಲ.. .. ಹೀಗೆ ಅವನ ಭಗೀರಥ ಪ್ರಯತ್ನದಲ್ಲಿ ಅವನ ಪರಿವಾರದವರು, ಸ್ನೇಹಿತರು ವಿಶ್ವಾಸಿಗಳು ಜೊತೆಯಲ್ಲಿ ನಡೆದಿದ್ದರು.... "
"ಸರಿ ಗುರು ಆಮೇಲೆ"
"ಶ್ರಾವಣ ಮಾಸ ಬಂದಾಗ ಆನಂದ ತಂದಾಗ ವಿರಹ ಗೀತೆ ಇನ್ನಿಲ್ಲಾ ಪ್ರಣಯ ಗೀತೆ ಬಾಳೆಲ್ಲ.. "
"ಏನ್ ಗುರುವೇ ಅಣ್ಣಾವ್ರ ಚಿತ್ರ ಗೀತೆ ಶುರುಮಾಡಿದೆ.. ಏನ್ ಸಮಾಚಾರ"
"ಶ್ರಾವಣ ಮಾಸವು ತಂದ ಉಡುಗೊರೆ ಉಲ್ಲಾಸವ ತರಲಿ ಆ "ಮಂಜುನಾಥ"ನ ಕೃಪಾ ಕಟಾಕ್ಷವೂ ಹಾಗೆಯೇ ಅವನ ಸುತ ಗಣಪತಿಯ ಆಶೀರ್ವಾದವು ಎಂದೆಂದು ನಿನಗಿರಲಿ"
"ಅಯ್ಯೋ ಗುರುವೇ ಏನು ಸಾಹಿತ್ಯವನ್ನೇ ಬದಲಾಯಿಸಿ ಬಿಟ್ಟೆ.. ಇರಲಿ ಇರಲಿ.. ನಿನ್ನದು ಏನೋ ವಿಷಯ ಇದೆ ಇರಲಿ ಕಥೆ ಮುಂದುವರೆಸು"
"ಹೀಗೆ ಮಂಜುನಾಥನ, ಕಾಶಿ ವಿಶಾಲಕ್ಷಿಯ ಅನುಗ್ರಹ.. ಕೃಷ್ಣನ ನೀಳ ಜಡೆ, ಅವನ ಕೊಳಲು, ಪಾಂಚಜನ್ಯದ ವಿಜಯದ ನಾದ ತಣ್ಣಗಿನ ಕೋಮಲತೆ ಬೆಚ್ಚಗಿನ ಶಾಖ.. ಎಲ್ಲವೂ ಅವನಿಗೆ ಹೊಸ ಹುರುಪು ಕೊಟ್ಟಿತು.. ಅವನ ಭಗೀರಥ ಪ್ರಯತ್ನಕ್ಕೆ ಹೊಸ ಹಸಿರಿನ ಚೈತನ್ಯ ಸಿಕ್ಕೆ ಬಿಟ್ಟಿತು.. .. ಅವನ ಸಂತೋಷಕ್ಕೆ ಪಾರವೇ ಇಲ್ಲ..... ಅಚಾನಕ್ಕಾಗಿ ಅವನ ಕಣ್ಣಲ್ಲಿ ದೇವಗಂಗೆ ಧುಮುಕುತ್ತ ಸಾಗಿದಳು.. "
ಬೇತಾಳ ಇದು ಕಥೆ.. ಈಗ ನಾ ಕೇಳುವ ಪ್ರಶ್ನೆಗೆ ಉತ್ತರಿಸು.. ಇಲ್ಲದೆ ಹೋದರೆ ಮತ್ತೆ ನಿನ್ನ ಹೊತ್ತು ನಾ ನಡೆಯೋಲ್ಲ"
"ಹೊ ಇದೊಳ್ಳೆ ಕಥೆ ಆಯ್ತಲ್ಲ.. ಸರಿ ಅದೇನು ಕೇಳ್ತೀಯೋ ಕೇಳು"
"೧. ಬೇತಾಳನಾದ ನೀನು ನನಗೆ ಕಥೆ ಹೇಳಬೇಕಿತ್ತು.. ಉತ್ತರ ನಾ ಹೇಳಬೇಕಿತ್ತು.. ಆದರೆ ಇಲ್ಲಿ ಉಲ್ಟಾ ಪುಲ್ಟಾ
೨. ಕಷ್ಟಗಳು ಕಳೆದು ಸುಖದ ಹಾದಿಯಲ್ಲಿದ್ದ ಅವನಿಗೆ ಯಾಕೆ ಭಗೀರಥ ಪ್ರಯತ್ನ ಮಾಡಿಯೂ ದೇವಗಂಗೆ ಕಣ್ಣಲ್ಲಿ ಉದ್ಭವವಾದಳು..
೩. ಅವನ ಮುಖದಲ್ಲಿನ ನಗೆಯ ಬಗ್ಗೆ ಯಾಕೆ ಅಷ್ಟೊಂದು ಬಾರಿ ನಾ ಹೇಳಿದೆ"
"ಹ ಹ ಏನ್ ಗುರುವೇ ಇಂತಹ ಪ್ರಶ್ನೆ ಕೇಳಿಬಿಟ್ಟೆ.. ಇರಲಿ ಮೊದಲನೇ ಪ್ರಶ್ನೆಗೆ ಕಡೆಯಲ್ಲಿ ಉತ್ತರಿಸುವೆ.. ಈಗ ಎರಡನೇ ಪ್ರಶ್ನೆಗೆ ಉತ್ತರಿಸುವೆ ಕೇಳು... ಅವನ ಕಷ್ಟದ ದಿನಗಳಲ್ಲಿ ಅವನ ಪರಿವಾರದವರೆಲ್ಲ ಒಳ್ಳೆಯ ದಿನ ಬರುತ್ತದೆ ಹೆದರಬೇಡ ಎಂದು ಹೇಳುತ್ತಲೇ ಇದ್ದರು... ಅವನ ಪ್ರಚಂಡ ಆತ್ಮ ವಿಶ್ವಾಸ ಅವನ ಮನಸ್ಸನ್ನು ಕುಗ್ಗದ ಹಾಗೆ ನೋಡಿಕೊಳ್ಳುತ್ತಿತ್ತು.. ಹೊಸ ಹುರುಪು ಚೈತನ್ಯ ಸಿಕ್ಕ ಮೇಲೆ ಅದನ್ನ ತನ್ನ ಪರಿವಾರದವರಿಗೆ ಹೇಳಿದಾಗ ಎಲ್ಲರು ಸಂತಸಪಟ್ಟು ಖುಷಿಯಲ್ಲಿದ್ದಾಗ ಅವನ ವಂಶದ ಕುಡಿ ಬಂದು ತಬ್ಬಿ ಕೊಂಡು.. ಅಪ್ಪಾ... you will win ಅಂತ ಹೇಳಿತು.... ಬಳ್ಳಿಗೆ ಮರ ಆಸರೆ ಸಹಜ .. ಆದರೆ ಇಲ್ಲಿ ಬಳ್ಳಿಯೇ ಮರಕ್ಕೆ ಆಸರೆಯಾಗಿ ನಿಂತು ಹೊಸ ಉಲ್ಲಾಸಭರಿತ ಆ ನಾಲ್ಕು ಪದಗಳನ್ನು ಹೇಳಿದ್ದು ಅವನಿಗೆ ಇನ್ನಷ್ಟು ಸಂತಸ ತಂದಿತು.. ಆ ಸಂತಸ ಕಣ್ಣಲ್ಲೇ ದೇವಗಂಗೆಯಾಗಿ ಹರಿಯಿತು... "
"ಬೇತಾಳ ಸೂಪರ್ "
ಇನ್ನು ಮೂರನೇ ಪ್ರಶ್ನೆಗೆ ಉತ್ತರ... ಮರ ಬೆಳೆಯುವುದು ಮಣ್ಣಿಂದ.. ಆದರೆ ಅದೇ ಮರ ಬೆಳವಣಿಗೆ ನಿಲ್ಲಿಸಿ ಬಿಟ್ಟರೆ.. ಸುತ್ತ ಮುತ್ತಲ ಗೆದ್ದಲು ಮಣ್ಣಿನ ರೂಪ ಮಾಡಿಕೊಂಡು ಮರವನ್ನು ತಿಂದು ಬಿಡುತ್ತದೆ... ಅಲ್ಲಿಗೆ ಮಣ್ಣಿಂದ ಬೆಳೆಯಬೇಕಾದ ಮರ ಮಣ್ಣಿಂದಲೇ ಅಳಿಯುತ್ತದೆ.. ಹಾಗೆಯೇ ಕಷ್ಟ ನಷ್ಟಗಳು ಬಂದಾಗ ನಗುವನ್ನು ಮರೆತು ಬಿಟ್ಟರೆ ನಗುವೇ ನಮ್ಮನ್ನು ಮರೆತು ಬಿಡುತ್ತದೆ.. ಆಗ ಚಿಂತೆ ಚಿತೆಯ ರೂಪದಲ್ಲಿ ನಮ್ಮನ್ನು ಸುಡಲು ಶುರುಮಾಡುತ್ತದೆ.... ಚಿಂತೆಗೆ ಮದ್ದು ಬೇರೆಯೇನೂ ಇಲ್ಲಾ ... ಬರಿ ಒಂದು ಹೂ ನಗೆ ಅಷ್ಟೇ ಸಾಕು...
"ನಿನ್ನ ಬೆನ್ನು ತಟ್ಟೋಣ ಅಂದ್ರೆ.. ನನ್ನ ಬೆನ್ನು ಏರಿ ಕುಳಿತಿದ್ದೀಯ.. Anyway ಬೇತಾಳ you are awesome...."
"ಈಗ ಮೊದಲನೇ ಪ್ರಶ್ನೆಗೆ ಉತ್ತರ... ಬೆನ್ನಿಗೆ ಸಮಸ್ಯೆಯನ್ನು ಕಟ್ಟಿ ಕೊಳ್ಳಬೇಕು ಆಗಲೇ ಛಲ ಮೈಯಲ್ಲಿ ಮೂಡಿಬರುತ್ತದೆ... ಆದರೆ ಆ ಸಮಸ್ಯೆಗೆ ಮಾತನಾಡಲು ಬಿಡಬಾರದು.. ಮೊದಲೇ ನಾವು ಅದನ್ನು ಬೆನ್ನ ಮೇಲೆ ಹೇರಿಕೊಂಡಿರುತ್ತೇವೆ ಇನ್ನು ಅದಕ್ಕೆ ಮಾತಾಡಲು ಬಿಟ್ಟರೆ.. ನಮ್ಮ ತಲೆಯ ಮೇಲೆ ಹತ್ತಿ ಕೂತು ಬಿಡುತ್ತದೆ.. ಹಾಗಾಗಿ ಸಮಸ್ಯೆಗೆ ಸಮಸ್ಯೆ ಕೊಟ್ಟರೆ ಉತ್ತರ ತಾನೇ ತಾನಾಗಿ ಹೊಳೆಯುತ್ತದೆ... ಅದೇ ಕೆಲಸವನ್ನು ನೀನು ಮಾಡಿದ್ದು ವಿಕ್ರಮ ಮಹಾರಾಜ.. ಹಾಗೆಯೇ ಅದನ್ನೇ ಈ ಕಥಾನಾಯಕ ಕೂಡ ಮಾಡಿದ್ದು.. ಎಲ್ಲರಲ್ಲೂ ಉತ್ಸಾಹ, ಪ್ರೋತ್ಸಾಹ ಕಂಡಿದ್ದ ಅವನಿಗೆ ಸಮಸ್ಯೆ ಒಂದು ಸಮಸ್ಯೆ ಆಗಿರಲಿಲ್ಲ.. ಜೊತೆಗೆ "ನಗು ನಗುತ ನಲಿ ನಲಿ ಏನೇ ಆಗಲಿ" ಎನ್ನುವ ಅಣ್ಣಾವ್ರ ಹಾಡಿನಂತೆ ಜೀವನ ನಡೆಸುವ ಅವನಿಗೆ ಸಮಸ್ಯೆ ಕೂಡ ಅವನ ಮುಂದೆ ಮಂಡಿ ಊರಿ ಕೂರದೆ ನಗುತ್ತ ಮುಂದೆ ಸಾಗಿ ಹೋಗುತ್ತದೆ.. "
"ಬೇತಾಳ ನಿಜಕ್ಕೂ ನಿನ್ನ ಹೊತ್ತು ನಡೆದಿದ್ದು ನನಗೆ ಸಮಾಧಾನ ತಂದಿತು ಒಂದು ಒಳ್ಳೆಯ ಕಥೆಗೆ ಅಷ್ಟೇ ಒಳ್ಳೆಯ ಸಂದೇಶ ಕೊಟ್ಟ ನಿನಗೆ ನಾ ಚಿರ ಋಣಿ.. ಹೋಗಿ ಬಾ ಬೇತಾಳ ಮತ್ತೊಮ್ಮೆ ನೀನು ಸಿಕ್ಕರೂ ನಿನ್ನಿಂದ ಒಳ್ಳೆಯ ಉತ್ತರ ಸಿಗುವ ಸಮಸ್ಯೆಯಾಗಿ ಬಾ... bye ಬೇತಾಳ..."
"ಗುರುವೇ.. ಸೂಪರ್ ಸೂಪರ್ .. ನೀನು ಕಥೆ ಹೇಳುವ ಶೈಲಿ.. ಸರಿ ಹೋಗಿ ಬಾ ಸಮಯ ಸಿಕ್ಕರೆ ಮತ್ತೆ ಸುಖವಿಚಾರ ವಿನಿಮಯ ಮಾಡಿಕೊಳ್ಳುವ ಸ್ನೇಹಿತರ ಹಾಗೆ ಸಿಗೋಣ.. " ಎಂದು ಬೇತಾಳ ಹಾರಿ ಹೋಯಿತು..
--------------------------------------------
ಅಪ್ಪಾ ಸೂಪರ್ ಕಥೆ ಅಪ್ಪ ತುಂಬಾ ಇಷ್ಟವಾಯಿತು.. ಸದಾ ನಕ್ಕರೆ... ಅಲ್ಲಿಯೇ ಸಕ್ಕರೆ ಬಂದು ಬೀಳುತ್ತದೆ ಅಲ್ವಾ ಅಪ್ಪ.. ನಾನು ನಗುತ್ತಲೇ ಇರುತ್ತೇನೆ.. ಕಷ್ಟ ಬಂದ್ರೆ ಬರಲಿ ಅಲ್ವಾ.. ಅಪ್ಪಾ ದೂರದ ಬೆಟ್ಟ ಚಿತ್ರದ ಹಾಡು ಹೇಳಪ್ಪಾ... ನಿಮ್ಮ ಬಾಯಲ್ಲಿ ಕೇಳಬೇಕು ಒಮ್ಮೆ...
"ನೀ ಪಕ್ಕ ಇದ್ರೆ ಹಿಂಗೆ ಬೆಟ್ಟನೆತ್ತೀನ್ ಬೆಳ್ನಾಗೆ..
ಏಸೇ ಕಷ್ಟ ಬಂದ್ರು ನಂಗೆ ... ನೀಗ್ಸೆ ಬಿಡ್ತೀನಿ ಸುಮ್ಗೆ..
ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳಿಗೆ
ಹಸಿವಿನಲ್ಲೂ ಹಬ್ಬಾನೆ
ದಿನವು ನಿತ್ಯ ಉಗಾದಿನೇ ನನ್ನ ನಿನ್ನ ಪಾಲಿಗೆ"
ಕಣ್ಣಲ್ಲಿ ನೀರು ತುಂಬಿಕೊಂಡು ಮಗಳು ಅಪ್ಪನನ್ನು ತಬ್ಬಿಕೊಂಡು ಹೇಳಿದಳು
"ಅಪ್ಪಾ you must win....and you will win... "
ವಾಹ್ ಶ್ರೀಕಾಂತ್ ಜಿ ಸೂಪರ್ ಕಥೆ, ಕಥೆಯಲ್ಲಿನ ಸಾರ ಬಹಳ ಚೆನ್ನಾಗಿದೆ, ಜೀವನದಲ್ಲಿ ನಗು ಇಲ್ಲ ಬಾಳು ಸೂರ್ಯನಿಲ್ಲದ ಆಗಸದಂತೆ . ಸಮಸ್ಯೆಗಳು ಬಂದಾಗ ಅದನ್ನು ಮೀರಿ ಅವುಗಳಿಗೆ ಸಮಸ್ಯೆ ನೀಡುವ ಉಪಾಯ ಸರಿಯಾದದ್ದೇ . ಬೇತಾಳ ಪ್ರಶ್ನೆ ಕೇಳುವ ಬದಲು ಇಲ್ಲಿ ಉತ್ತರ ನೀಡಿದ್ದು ನಿಮ್ಮ ಕ್ರಿಯಾಶೀಲತೆ ತೋರಿದೆ, ಈ ಕಥೆಯನ್ನು ಪ್ರತಿಯೊಬ್ಬರೂ ಓದಬೇಕಾದದ್ದೇ ಜೈ ಹೊ ಮತ್ತಷ್ಟು ಬರಲಿ ನಿಮ್ಮ ಬತ್ತಳಿಕೆಯಿಂದ .
ReplyDeleteನಿಮ್ಮ ಮಾತು ನಿಜ.. ನಗುವಿದ್ದರೆ ದಿನಕರನೂ ತಂಪಾಗುತ್ತಾನೆ ಅಂತಾರೆ.. ಮನದಾಳದಲ್ಲಿದ್ದ ಕೆಲವು ಭಾವಗಳು ಅಕ್ಷರಗಳ ರೂಪದಲ್ಲಿ ಎದುರಾದಾಗ ಸಿಗುವ ಸಂತಸಕ್ಕೆ ಪಾರವೇ ಇಲ್ಲ... ಸುಂದರ ಅನಿಸಿಕೆ ನಿಮ್ಮದು ಧನ್ಯವಾದಗಳು ಬಾಲೂ ಸರ್
Delete'ಪ್ರೀತಿಯೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳಿಗೆ' ಎನ್ನುವಂತೆ, ಈ ಕಥೆಯ ಮೂಲಸತ್ವವೇ -
ReplyDelete"ಹಾಗೆಯೇ ಕಷ್ಟ ನಷ್ಟಗಳು ಬಂದಾಗ ನಗುವನ್ನು ಮರೆತು ಬಿಟ್ಟರೆ ನಗುವೇ ನಮ್ಮನ್ನು ಮರೆತು ಬಿಡುತ್ತದೆ.."
ಬದುಕಿನಲ್ಲಿ 'ಸಾವಿರ ನದಿಗಳಿಗೆಲ್ಲ ಒಂದೇನೆ ಸಾಗರ' ಎನ್ನುವ ತಾತ್ವಿಕತೆ ರೂಡಿಯಾದ ದಿನ
'ರಮ್ಯ ಚೈತ್ರ ಕಾಲ...'
ಕೆಲಸ ಮಾಡುವ ಸಂಸ್ಥೆ ಅಥವಾ ಮನೆಯ ವಾತಾವರಣ ನಮ್ಮ 'ನಿಜವಾದ ನಗೆಗೆ' ಕಡಿವಾಣ ಹಾಕುತಿದೆ ಅನಿಸಿದಾಗಲೆಲ್ಲ 'ನಗಲಾರದೇ ಅಳಲಾರದೇ ತೊಳಲಾಡಿದೆ ಜೀವ' ಎಂದು ಆಗಿಬಿಡುತ್ತದೆ ನಮಗೆ.
ಒಳ್ಳೆಯ personality development instructor ನಮ್ಮ ಶ್ರೀಮಾನ್.
ಇನ್ನೂ ಮುಂದೆ ನಾನು ''ನಿಜವಾದ ನಗೆ'ಯನ್ನ ಶತ ಪ್ರಯತ್ನ ಮಾಡಿ ಒಲಿಸಿಕೊಳ್ಳುತ್ತೇನೆ. ಯಾವ ಬೇತಾಳದಂತಹ ಅನಾವಶ್ಯಕ ಚಿಂತೆಗಳು ಹೆಗಲು ಅಥವಾ ತಲೆಗೆ ಏರದಂತೆ ಎಚ್ಚರವಹಿಸುತ್ತೇನೆ.
ಆಮೇಲಿನದೆಲ್ಲ, 'ನಕ್ಕರೇ ಸ್ವರ್ಗ..'
ಹೂರಣಕ್ಕೆ 50 ಅಂಕಗಳು + ಶೈಲಿಗೆ ಉಳಿದ 50 ಅಂಕಗಳು.
ಸೂಪರ್ ಬದರಿ ಸರ್... ಹೊಗಳಿಕೆಯಲ್ಲೂ ಎಂತಹ ನಾಜೂಕುತನ ನಿಮ್ಮದು.. ಕಲಿಯುತ್ತಲೇ ಇರುವ ಯುಗ ಇದು.. ಹಾಗೆಯೇ ಕಲಿಯುಗವಾಗಿದೆ.. ಎಲ್ಲರಿಂದಲೂ ಕಲಿತು, ಎಲ್ಲರ ಜೊತೆಯಲ್ಲೂ ಕಲೆತು ಬಾಳುವ ಬಾಳೇ ಸುಂದರ. ಧನ್ಯವಾದಗಳು ಬದರಿ ಸರ್
Deleteಕಥೆ ಚೆನ್ನಾಗಿ ಮೂಡಿ ಬಂದಿದೆ.ಇನ್ನಷ್ಟು ಇಂತಹ ಬದುಕನ್ನು ಉನ್ನತಿಗೆ ಒಯ್ಯುವ ಕಥೆಗಳು ಬರಲಿ. :-)
ReplyDeleteಧನ್ಯವಾದಗಳು ಡಾಕ್ಟರ್.. ನಿಮ್ಮ ಕೊಳಲ ಗಾನದ ಸವಿಗಾನದಲ್ಲಿ ಮೈ ಮರೆತ ಕ್ಷಣ ಮೂಡಿಬಂತು ಈ ಲೇಖನ
Deleteಸೂಪರ್ ಶ್ರೀಕಾಂತಣ್ಣ ...
ReplyDeleteನನ್ನ ಮಟ್ಟಿಗಂತೂ ಬರಿಯ ಕಥೆಯಾಗಿಲ್ಲ ಈ ಕಥೆ :)
ಇಷ್ಟೆ ಹೇಳಬಲ್ಲೆ ನಾನಿಲ್ಲಿ ....
ಜೀವನವೇ ಒಂದು ಕಾನನ ಅದರಲ್ಲಿ ಸಿಗೋದು ಕವನ. ಅದನ್ನ ಹಾಡಿಕೊಂಡು ಸಾಗುವ ಹಾದಿಯಲ್ಲಿ ಸಿಗುವ ನಲಿವಿನ ಜೀವನವೇ ಒಂದು ನಂದನವನ.. ನಕ್ಕರೆ ನಕ್ಕರೆ ಸಕ್ಕರೆ ಅಲ್ಲವೇ.. ಸುಂದರ ಅನಿಸಿಕೆ ಬಿ ಪಿ
Deleteಮಗಳ ಆಶಯ ಈಡೇರಲಿ. ಚಂದದ ಕಥೆ.
ReplyDeleteಸಹೋದರಿ ಸ್ವರ್ಣ ಬಹಳ ದಿನಗಳಾದ ಮೇಲೆ ನನ್ನ ಪರ್ಪಂಚಕ್ಕೆ ಬಂದಿದ್ದೀರಾ ಕುಶಿಯಾಯಿತು.. ಧನ್ಯವಾದಗಳು ನಿಮ್ಮ ಹಾರೈಕೆಗೆ
Deleteನಿಜವಾಗಿಯು ಸುಂದರವಾಗಿ ಹೆಣೆದ ಬೇತಾಳ ಕಥೆ, ನನ್ನನ್ನು ಬಾಲ್ಯದ ದಿನಗಳಿಗೆ ಕೊಂಡೊಯ್ದದ್ದು ಸೂರ್ಯ ಪೂರ್ವದಲ್ಲಿ ಮೂಡಿದಷ್ಟೆ ಸತ್ಯ. ಶಾಲೆಯಲ್ಲಿ ಗುರುಗಳು ಹೇಳಿದ ಕಥೆ ನೆನಪಾಗಿ ಬಾವುಕನಾಗಿ ನನ್ನ ಶಿಕ್ಷಕರಿಗೆ ನಮಿಸಿದ್ದು ನಿಮ್ಮ ಕಥೆಗೆ ನಾನು ತಿಳಿಸುವ ಅಭಿಮಾನ.
ReplyDeleteನಿನಗಿದೊ ನನ್ನ ಧನ್ಯವಾದ.
ವಿಕ್ರಮ ಬೇತಾಳ ಕಥೆ ಕೇಳದ ಜನಗಳು ಇದನ್ನೇನಾದರು ಓದಿದರೆ ಬೇತಾಳ ಕಥೆಯನ್ನು ಉಲ್ಟಾ ಪಲ್ಟಾವಾಗಿ ಅರ್ಥೈಸಿಕೊಳ್ಳುವುದಂತು ಪಕ್ಕ. ಸರಳವಾಗಿ ಅರ್ಥೈಸಿಕೊಳ್ಳಬಹುದಾದ ಕಥೆ, ನಿರೂಪಣೆಯಲ್ಲಿ ವರ್ಣಿಸಲಸಾಧ್ಯವಾದ ನಿಖರತೆ.
ಅದ್ಭುತ.
ಧನ್ಯವಾದಗಳು ವಿನಾಯಕ್ ತಲೆಗೆ ಹೊಳೆಯುತ್ತದೆ ಬರೆಸುತ್ತದೆ ಎಲ್ಲ ದೇವರ ಆಟ!
DeleteVery Inspirational !!! Namma Kannallu ದೇವಗಂಗೆ ಹರಿಯಿತು... "
ReplyDeleteThank you Maguve for reading and appreciating!
Delete....................... naanishtu barediddu arthavaagide andukollutteeni...
ReplyDeleteಬರೆದ ಪದಗಳು ನಾಲ್ಕೇ ಆದರೂ ಅದು ಸಾರುವ ಭಾವನೆ ಸಾವಿರಾರು ಧನ್ಯವಾದಗಳು ಎಸ್ ಪಿ
Deleteಸಖತ್ತಾಗಿದೆ ಬೇತಾಳನ ಕತೆ..
ReplyDeleteನಗು ನಗುತಾ ನಲಿ, ನಲಿ ಏನೇ ಆಗಲಿ.. ಅನ್ನೋ ಹಾಡು ನೆನಪಾಯಿತು.. ಬೇತಾಳನ ಕತೆಯ ಉಲ್ಟಾ ರೂಪ ಇಷ್ಟವಾಯಿತು... ಸದಾ ಏನಾದ್ರೂ ಹೊಸತನ್ನ ಮಾಡ್ತಿರೋ ನಿಮ್ಮೀ ಪ್ರಯತ್ನಗಳೇ ಖುಷಿ ಕೊಡುತ್ವೆ ಶ್ರೀಕಾಂತ್ ಜೀ .. :-)
ಯೋಚನೆಗಳು ಬಂದಾಗ ಅಕ್ಷರ ರೂಪ ತಾಳಿಬಿಡುತ್ತದೆ.. ಹಃ ಸುಂದರ ಪ್ರತಿಕ್ರಿಯೆ ಪ್ರಶಸ್ತಿ ಧನ್ಯವಾದಗಳು
Deleteಅದ್ಭುತ ಕಥನಕ ! ನಗುವೆ ಸ್ವರ್ಗ, ಅಳುವೆ ನರಕ ಎಂಬುದ ಜೀವನ ಸತ್ಯವ ಚೆನ್ನಾಗಿ ಅರ್ಥ ಮಾಡಿಕೊಂಡರೆ ಬಾಳು ಬಂಗಾರವೇ ಸರಿ. ಸಮಸ್ಯೆಗಳ ಇದೂ ಒಂದು ಸಮಸ್ಯೆಯೇ ಎಂದು ತಿಳಿದು ಎದೆಗಾರಿಕೆಯಿಂದ ಹೆದರಿಸಿದಾಗ ತಂತಾನೆ ಸ್ವರ್ಗ ಸುಖ; ಹ್ಯಾಟ್ಸಾಪ್ ಶ್ರೀ.
ReplyDeleteನಿಮ್ಮ ಮಾತು ನಿಜ.. ಸಮಸ್ಯೆಗೆ ಸಮಸ್ಯೆ ಕೊಟ್ಟರೆ ಅದರ ಪಾಡಿಗೆ ಅದು ಇರುತ್ತದೆ. ನಗುವ ಕಳೆದುಕೊಂಡವ ಮೊಗವ ಕಳೆದುಕೊಂಡ ಹಾಗೆ. ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್
Deleteಶ್ರೀಕಾಂತೂ..
ReplyDeleteನಿಮ್ಮ ಕಾಲರ್ ಟ್ಯೂನಿನ ಹಾಡಿನಷ್ಟು ಸೊಗಸಾಗಿದೆ ಈ ಕಥೆ..
ಚಂದದ ಕಥೆ ಹೆಣೆದಿದ್ದೀರಿ..
ತಮಾಷೆಯಾಗಿ ಹೋಗುತ್ತ..
ಕೊನೆಯಲ್ಲಿ ಹೇಳುವ ನೀತಿ ಮನತಟ್ಟಿತು... ಧನ್ಯವಾದಗಳು...
ಧನ್ಯವಾದಗಳು ಪ್ರಕಾಶಣ್ಣ .. ಈ ಸ್ನೇಹ ತಂತುಗಳೇ ಹೀಗೆ ಎಲ್ಲಿಂದಲೋ ಬಂದು ಬೆಸೆದು ಬಿಡುತ್ತದೆ.. ಸುಂದರ ಪ್ರತಿಕ್ರಿಯೆ ಧನ್ಯವಾದಗಳು
Deleteಶ್ರೀಕಾಂತ್ ಸರ್,
ReplyDeleteಕತೆಯನ್ನು ಓದಿದೆ...ಸ್ವಲ್ಪ ವಿಭಿನ್ನವಾಗಿ ಅದರಲ್ಲೂ ಉಲ್ಟಾ ಕಾನ್ಸೆಪ್ಟ್[ಬೇತಾಳನ ಬದಲು ವಿಕ್ರಮ ಕತೆ ಹೇಳುವುದು]ಪ್ರಯತ್ನ ತುಂಬಾ ಚೆನ್ನಾಗಿದೆ. ನಗುವೆನ್ನುವುದು ಬದುಕಿನಲ್ಲಿ ಎಷ್ಟು ಮುಖ್ಯ ಮತ್ತು ಸಮಸ್ಯೆಗಳನ್ನು ಸವಾಲುಗಳಾಗಿ ಸ್ವೀಕರಿಸಿದಾಗ ಸಿಗುವ ಗೆಲುವು, ಪ್ರೀತಿನೋ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳಿಗೆ...ಕೊನೆಯಲ್ಲಿ ಅದು ನಿಜಕ್ಕೂ ಸತ್ಯವೆನಿಸುತ್ತದೆ...
ಮಗುವಿಗೆ ಕತೆಯೇಳುವ ರೀತಿ ಮರೆಯುತ್ತಿರುವ ಈ ಕಾಲದಲ್ಲಿ ಮತ್ತೆ ಈ ಕತೆಯ ಮೂಲಕ ನೆನಪಿಸಿದ್ದೀರಿ...
ಉತ್ತಮ ಪ್ರಯತ್ನಕ್ಕೆ ಅಭಿನಂದನೆಗಳು.
ಮಕ್ಕಳಿಗೆ ನಾವು ಕೊಡುವ ಸಂಸ್ಕಾರ ಮುಂದಿನ ಪೀಳಿಗೆಯನ್ನು ಬೆಳೆಸುತ್ತದೆ ಎನ್ನುವ ಮಾತು ಅಕ್ಷರಶಃ ನಿಜ. ಸುಂದರ ಪ್ರತಿಕ್ರಿಯೆಗೆ ಧನ್ಯೋಸ್ಮಿ ಶಿವೂ ಸರ್
Deletesoooper shrikanth Ji
ReplyDeleteThank you Umesh Sir for reading it and appreciating it.
Delete