Tuesday, October 1, 2013

ಅಪ್ಪು..... ಎಂಬ ಹೆಸರಿನ ದೊಡ್ಡಪ್ಪ


ಕೋರವಂಗಲ  ಕುಟುಂಬದ ಹಿರಿಯಣ್ಣನಾದರೂ  ಮಗುವಿನಂಥಹ ಮನಸ್ಸಿನಿಂದ ಮನ ಗೆದ್ದ ನಮ್ಮ ದೊಡ್ಡಪ್ಪ.... ರಾಮಸ್ವಾಮಿ ಎನ್ನುವ ನಾಮಾಂಕಿತವಿದ್ದರೂ.... ಎಲ್ಲರಿಂದಲೂ ಅಪ್ಪು  ಎಂದು ಕರೆಸಿಕೊಂಡು ಎಲ್ಲರ  ಎಲ್ಲರನ್ನೂ ಮಮತೆಯ, ಪ್ರೀತಿಯ ಅಪ್ಪುಗೆಯಲ್ಲಿ ಬಂಧಿಸಿದ್ದ ನಮ್ಮ ದೊಡ್ಡಪ್ಪ ಇಂದು ನಮ್ಮನ್ನು ಅಗಲಿದ್ದಾರೆ
ಸತ್ಯ... ಸಹಿಷ್ಣುತೆ... ಇವನ್ನೆಲ್ಲ ತನ್ನ ಬದುಕಿನಲ್ಲಿ ಅಳವಡಿಸಿಕೊಂಡು ಅದೇ ಹಾದಿಯಲ್ಲಿ ನೆಡೆದು.. ಬೆಳೆದು... ಬದುಕಿ... ಬಾಳಿದ ನಮ್ಮ ದೊಡ್ಡಪ್ಪನ ಜೀವನವೇ  ಸುಂದರ ಸತ್ಯ ಕಾಂಡ ಎನ್ನಬಹುದು. 


ತನ್ನ ತಾಯಿಯ ಅಂತ್ಯ ಸಂಸ್ಕಾರ ಮುಗಿದು ಶ್ರಾದ್ಧ ಕಾರ್ಯಗಳು ಅಂತಿಮ ಹಂತ ತಲುಪಿದ್ದಾಗ.... ಉಳ್ಳವರು.... ಉಳ್ಳವರಿಗೆ ಬೇಕಾದ ದಾನ ಧರ್ಮ ಮಾಡುತ್ತಿದ್ದರು.. ಅಂತಹ ಸಮಯದಲ್ಲಿ,  ತನ್ನ ತಾಯಿಯ ಅಂತ್ಯ ಸಂಸ್ಕಾರಕ್ಕೆ,  ಹಾಸನದ ಕೋರವಂಗಲದಿಂದ  ಚಿಕಮಗಳೂರಿನ  ಗ್ರಾಮಕ್ಕೆ  ನೆಡೆದು ಬಂದು,  ಅಂತಿಮ ನಮನ ಸಲ್ಲಿಸಲು ಬಂದಿದ್ದ ಸೀನಪ್ಪ ಎಂಬ ಗ್ರಾಮಸ್ಥನಿಗೆ "ತಗೋ  ಸೀನಪ್ಪ ಕಾಫೀ ಕುಡಿ"   ಎಂದು ಹೇಳಿ ಎರಡು  ರುಪಾಯಿ ಕೊಟ್ಟರು. ಅಂಥಹ ಸಂಧರ್ಭದಲ್ಲಿ ಅಲ್ಲಿದ್ದ ತನ್ನ  ಅನುಜ ಹೇಳಿದ್ದು "ಅಪ್ಪು... ನಿನ್ನ ದಾನ ಅಮ್ಮನಿಗೆ ತಲುಪಿತು" ಎಂದರು.

ಇದು ನಮ್ಮ ದೊಡ್ಡಪ್ಪನ ಹಿರಿಮೆ.   

ಮಗುವಿನಷ್ಟೇ ಮುಗ್ಧ ಮನಸ್ಸುಳ್ಳ ...ಅಪ್ಪು ...ಎನ್ನುವ ದೊಡ್ಡಪ್ಪ ನಮ್ಮನ್ನು ಬಿಟ್ಟು ಹೋಗಿದ್ದರೂ ಅವರ ನೆನಪು  ಅಮರ. ನಮ್ಮ ಅಪ್ಪನಿಗೆ "ಮಂಜು" ಎನ್ನುವ ಸುಂದರ ಹೆಸರಿನಿಂದ ಕರೆಯುತ್ತಿದ್ದು ನಮಗೆ ಆಪ್ತವಾಗಿತ್ತು. 

ದೊಡ್ಡಪ್ಪ ನಿಮ್ಮ ಮಂಜುವನ್ನು ಸೇರಲು ಹೋಗುತ್ತಿದ್ದೀರಾ.. ನಮ್ಮ ಅಪ್ಪನನ್ನು.... ನಿಮ್ಮ ಅಪ್ಪ ಅಮ್ಮ, ಅಕ್ಕ ತಮ್ಮನನ್ನು ಸೇರಿ ನಿಮ್ಮ ಕುಟುಂಬದ ಎಲ್ಲರ ಜೀವನ ಹಸಿರಾಗಿರಲಿ ಎಂದು ಹಾರೈಸುತ್ತಾ ಇರಿ.. 

 ಹೋಗಿ ಬನ್ನಿ ದೊಡ್ಡಪ್ಪ ನಿಮ್ಮ ನೆನಪಿನ ಆಶೀರ್ವಾದದಲ್ಲಿ ನಾವೆಲ್ಲರೂ ಹಸಿರಾಗಿರುತ್ತೇವೆ. 

7 comments:

  1. ದೊಡ್ಡಪ್ಪನಿಗೆ ನಮನ ಸಲ್ಲಿಸಿದ ರೀತಿ ಚೆನ್ನಾಗಿದೆ, ಹಿರಿಯರ ಆತ್ಮಕ್ಕೆ ಶಾಂತಿ ಸಿಗಲಿ , ಹಿರಿಯರ ಉತ್ತಮ ನಡವಳಿಗೆ ಎಲ್ಲರಿಗೂ ದಾರಿ ದೀಪವಾಗಲಿ.

    ReplyDelete
  2. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅಲ್ಲಿ ಕಾಯುತ್ತಿರುವ ಮಂಜುನಾಥರನ್ನು ಇಂದು ಮತ್ತೊಮ್ಮೆ ಸಂಧಿಸಲು ರಂಗಸ್ವಾಮಿಯವರು ಹೊರಟಿದ್ದಾರೆ.

    ReplyDelete
  3. ಅವರ ಆತ್ಮಕ್ಕೆ ಶಾಂತಿ ಸಿಗಲಿ.

    ReplyDelete
  4. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆಶಿಸುವೆ

    ReplyDelete
  5. :-( ಅವರ ಆತ್ಮಕ್ಕೆ ಶಾಂತಿ ಸಿಗಲಿ

    ReplyDelete
  6. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಆ ರಂಗನಲ್ಲಿ ಪ್ರಾರ್ಥಿಸಿ ಅವರ ಮಾರ್ಗದರ್ಶನ ದಾರಿದೀಪವಾಗಲೆಂದು ಆಶಿಸೋಣ.

    ReplyDelete