Saturday, July 20, 2013

ಅಜ್ಜಯ್ಯ ಅಜ್ಜಯ್ಯ ಅಜ್ಜಯ್ಯ .....

ಸಂಧ್ಯಾವಂದನೆ ಮಾಡಲು ಸಿದ್ಧತೆ  ಮಾಡಿಕೊಳ್ಳುತ್ತಿದ್ದರು.  ಸಂಕಲ್ಪ ಶುರುವಾಯಿತು. ಸಂವತ್ಸರ, ಋತು, ಮಾಸ, ಪಕ್ಷ, ತಿಥಿ ಹೇಳುತ್ತಾ ಹೋದಂತೆ ನೆನಪಾಯಿತು

"... ಅರೆ ಇವತ್ತು  ತಿರುಪತಿಗೆ ಹೋಗಬೇಕೆಂದಿದ್ದೆ. "

ಸಾಂಗೋಪಾಂಗವಾಗಿ ಸಂಧ್ಯಾವಂದನೆ ಮುಗಿಸಿ ಜಪ ತಪಗಳನ್ನು ಮುಗಿಸಿ.. 

"ಎನ್ರೆ.. ನಾ ಇವತ್ತು ತಿರುಪತಿಗೆ ಹೋಗಬೇಕಿತ್ತು.. ನೀನು ನೆನಪಿಸಲಿಲ್ಲ.. "

"ನಿಮಗೆ ಯಾವಾಗಲು ಸುತ್ತೋದೆ ಕೆಲಸ... "ನಸು ನಕ್ಕರು ಅಜ್ಜಿ 

"ಹಾಗೇನು ಇಲ್ಲಾ .. ಯಾಕೋ ಹೋಗಬೇಕೆನ್ನಿಸಿತ್ತು.. " ಅಜ್ಜಯ್ಯ ತಿರುಗುಬಾಣ ಬಿಟ್ಟರು 

"ನೀವು ಊರು, ಲೆಕ್ಕ ಪತ್ರ, ಶಾನುಭೋಗರ ಕೆಲಸ, ಅಮಲ್ದಾರರು.. ಜಮ ಕಟ್ಟುವಿಕೆ, ಹೀಗೆ ಆ ಕೆಲಸ ಈ ಕೆಲಸ ಅಂತ ಊರು  ಸುತ್ತುತ್ತಾ ಇರುತ್ತೀರಿ.. ಇನ್ನೂ ತಿರುಪತಿಗೆ ಯಾವಾಗ ಹೋಗಲು ಸಾಧ್ಯ?"

"ನಾನು ಊರೂರು ಸುತ್ತೋದು ಕೆಲಸದ ಮೇಲೆ ತಾನೇ ಸುಮ್ಮನೆ ಅಲ್ವಲ್ಲ.. " ಹೀಗೆ ಸಾಗಿತ್ತು ಅಜ್ಜಯ್ಯ ಅಜ್ಜಿಯ ಜುಗಲ್-ಬಂಧಿ.. 

"ಸದ್ದು ಸದ್ದು... " ದೇವಲೋಕದ ದೂತ ನಸು ನಗುತ್ತ "ರಂಗಸ್ವಾಮಿಗಳೇ ಇವತ್ತು ನೀವು ತಿರುಪತಿಗೆ ಹೋಗಬೇಕೆಂದು ನಮ್ಮ ಹತ್ತಿರ ಹೇಳಿದ್ದಿರಷ್ಟೇ ಅಗೋ ನೋಡಿ ಅಲ್ಲಿ ವಾಹನ ಸಿದ್ಧವಿದೆ.. ನಿಮ್ಮ ಪ್ರಾತಃ ಕಾಲದ ನಿತ್ಯ ಕರ್ಮಗಳು ಮುಗಿದ್ದಿದ್ದರೆ ಹೊರಡಬಹುದು"

"ಒಹ್ ನಾನು ಸಿದ್ಧ.. ನಡೆಯಿರಿ ಬರುತ್ತೇನೆ.. ಬಾಗಿಲು ಸರಿಯಾಗಿ ಹಾಕಿಕೊಳ್ರೆ.. ಸಂಜೆ ಅಥವಾ ರಾತ್ರಿಗೆ ಬಂದು ಬಿಡ್ತೇನೆ"

ವಾಹನ ಗಾಳಿಯಲ್ಲಿ ತೇಲುತ್ತಾ.. ಈಜುತ್ತಾ ನಿಧಾನವಾಗಿ ಬಂದು ಇಳಿಯಿತು. 

ಅಜ್ಜಯ್ಯ.. "ಕಳೆದ ಸಾರಿ ಇಲ್ಲಿಗೆ ಬಂದಾಗ ಒಂದು ಕಣಗಲೆ ಹೂವಿನ ಗಿಡವಿತ್ತು.... ಅದರ ಪಕ್ಕದಲ್ಲೇ ಇದ್ದದ್ದು.. ಇದೇನು ಹೀಗಾಯಿತು?"

ದೂತ "ಸ್ವಾಮಿಗಳೇ ಆ ಗಿಡವನ್ನು ಕಡಿದು ನೋಡಿ ಸುಂದರವಾದ  ಮನೆಗಳನ್ನು ಕಟ್ಟಿದ್ದಾರೆ... ನೋಡಿ ಅಲ್ಲಿ ಒಂದು ಫಲಕವಿದೆ"

"SAPTHAGIRI RESIDENCY"          "ಸಪ್ತಗಿರಿ ರೆಸಿಡೆನ್ಸಿ"

ಅಜ್ಜಯ್ಯ ನೋಡಿದರು.. ಖುಷಿಯಿಂದ ಹುಬ್ಬು ಮೇಲೆ ಏರಿತು.. "ಸರಿಯಾದ ಸ್ಥಳ ಸರಿಯಾದ ಸ್ಥಳ.. ತಿರುಪತಿಗೆ ಈ ಸಾರಿ ಬೇಡ ಮುಂದಿನ ಸಾರಿ ಹೋಗುವೆ.. ಇವತ್ತು ನನ್ನ ಮಕ್ಕಳು, ಸೊಸೆ, ಮೊಮ್ಮಕ್ಕಳನ್ನು, ಮರಿ ಮೊಮ್ಮಕ್ಕಳನ್ನು ನೋಡಲು ಎಲ್ಲರನ್ನೂ "ಸಪ್ತಗಿರಿ"ಗೆ  ಬರಲು ಹೇಳಿದ್ದೆ. ಸರಿಯಾದ ಜಾಗ ದೂತನೆ.. ಕೋಟಿನ ಜೇಬಿಂದ ಒಂದು ಕಡ್ಲೆ ಬೀಜದ ಮಿಠಾಯಿ, ಕಡಲೆ ಬೀಜ ಎಲ್ಲವನ್ನೂ  ಧೂತನಿಗೆ ಕೊಟ್ಟು ನೀನು ಹೋಗಿ ಬಾ. ಸಂಜೆ ಮತ್ತೆ ಬಾ ನನ್ನನ್ನು ಕರೆದೊಯ್ಯಲು" ಎಂದರು. ಒಳಗೆ ಬಂದಾಗ ಅವರ ಪರಿವಾರವೇ ಅವರನ್ನು ಸ್ವಾಗತಿಸಲು ಕಾಯುತಿತ್ತು... !    
--------------------------
ನನ್ನ ಸಹೋದರ ಜ್ಞಾನೇಶನ ಒಂದು ಚಿಕ್ಕ ಅಂಚೆ ನನ್ನಿಂದ ಈ ಪಾಟಿ ಬರಿಸಿತು., 

"Dear brothers n sisters,
As you all are aware, our beloved ajjaiah is descending tomorrow at g3, sapthagiri residency 4. I know, all of you will not like to see this mail as invitation, as it is our duty to participate. Looking forward to meet you all in full strength."
-----------------------------

ಅಜ್ಜಯ್ಯ ಅಜ್ಜಿ!
ಬನ್ನಿ ಎಲ್ಲರೂ ಸೇರೋಣ.. ಅಜ್ಜಯ್ಯನ ಆಶೀರ್ವಾದ ಪಡೆಯೋಣ.... ನಮ್ಮೆಲ್ಲರಿಗೋಸ್ಕರ  ಸ್ವರ್ಗದಿಂದ ಧರೆಗಿಳಿದು ಬರುವ ಆ ಹೊತ್ತಿನಲ್ಲಿ ನಾವೆಲ್ಲರೂ ಅವರನ್ನು ಸ್ವಾಗತಿಸೋಣ!

12 comments:

  1. Replies
    1. ಧನ್ಯವಾದಗಳು ಪಿ ಎಸ್. ಹಿರಿಯರ ಆಶೀರ್ವಾದ ತಲೆಕಾಯುವ ಸೂರು ಇದ್ದ ಹಾಗೆ ಅಲ್ಲವೇ

      Delete
  2. Itz Different, A complete Srikanth Style - V.Nice...... ಅಜ್ಜಯ್ಯನವರಿಗೊ೦ದು ನಮನ.....

    ReplyDelete
    Replies
    1. ಹಿರಿಯರ ನೆನೆವುದು ಬಾಯಾರಿದಾಗ ಸಿಗುವ ನೀರು ಕೊಡುವಂತೆ ಹಿತ ನೀಡುತ್ತದೆ. ಸದಾ ನೆನಪಲ್ಲೇ ಇದ್ದರೂ ಒಮ್ಮೊಮ್ಮೆ ಆ ಖಜಾನೆಯನ್ನು ಹೊರಗೆ ತೆಗೆಯುವುದರ ಮಜವೇ ಬೇರೆ ಅಲ್ಲವೇ. ಧನ್ಯವಾದಗಳು ರೂಪ

      Delete
  3. ಅವರ ಆಶೀರ್ವಾದವೇ ನಮಗೆ ಶ್ರೀರಕ್ಷೆ.

    ReplyDelete
    Replies
    1. ಹಸಿದಾಗ ಕಣ್ಣಿಗೆ ಕಾಣುವ ಹಣ್ಣುಗಳು ತುಂಬಿದ ಮರವಿದ್ದಂತೆ ಹಿರಿಯರು. ಅವರ ಆಶೀರ್ವಾದದ ಬೆಳಕಿಗೆ ಸಿಗದ ವಸ್ತುಗಳು ಇಲ್ಲವೇ ಇಲ್ಲ ಅಲ್ಲವೇ. ಧನ್ಯವಾದಗಳು ಬದರಿ ಸರ್

      Delete
  4. ನಮ್ಮೆಲ್ಲರಿಗೋಸ್ಕರ ಸ್ವರ್ಗದಿಂದ ಇಳಿದು ಬರುತ್ತಾರೆ .....ಎಂಥಾ ಒಳ್ಳೇ ಕಲ್ಪನೆ.
    ನಿಮ್ಮ ಬರಹಗಳನ್ನು ಓದಿದಾಗ ಸಕತ್ ಪಾಸಿಟಿವ್ಆಗಿ ಫೀಲ್ ಆಗತ್ತೆ .
    ಕುಟುಂಬದ ನಡುವಿನ ಪ್ರೀತಿ ವಿಶ್ವಾಸಗಳು ಹೀಗೆ ಇರಲಿ ಎಂಬ ಪ್ರಾರ್ಥನೆಯೊಂದಿಗೆ

    ReplyDelete
    Replies
    1. ಧನ್ಯವಾದಗಳು ಸಹೋದರಿ. ಹೌದು ನಿಜಕ್ಕೂ ಖುಷಿಯಾಗುತ್ತೆ ಅವರ ಬರುವಿಕೆಯನ್ನು ಮನದಲ್ಲೇ ನೆನೆದಾಗ. ಬರೆಯುವಾಗ ತುಂಬಾ ಹಿತಕರ ವಾತಾವರಣ ಮೂಡಿತ್ತು ಮನದಲ್ಲಿ

      Delete
  5. ಬರ್ಯೋದನ್ನ ಹೇಗೆ ಸೂಪರ್ರಾಗಿ ಬರ್ದು ಬಿಡ್ತೀರಿ ಶ್ರೀಕಾಂತಣ್ಣ .. :-)

    ReplyDelete
    Replies
    1. ಹೆಸರಲ್ಲೇ ಗೌರವ ಮೂಡಿಸುವ ನಿಮ್ಮ ಪ್ರತಿಕ್ರಿಯೆ ಸಂತಸ ನೀಡುತ್ತೆ. ಧನ್ಯವಾದಗಳು ಬ್ರದರ್

      Delete
  6. "ಸಪ್ತಗಿರಿ ರೆಸಿಡೆನ್ಸಿ" ನಿಮ್ಮ ಬರಹ ಕಂಡ ಮೇಲೆ ನಾನೂ ಒಮ್ಮೆ ನೋಡಬೇಕೆನಿಸಿದ್ದು ಹೌದು. :)

    ReplyDelete
    Replies
    1. ಹ ಹ ಹೋಗಿಬನ್ನಿ ಶ್ರೀನಿವಾಸ ಅಜ್ಜಯ್ಯನ ದರುಶನವಾಗಲಿ. ಧನ್ಯವಾದಗಳು ಸತೀಶ್

      Delete