Thursday, March 21, 2013

ಕಗ್ಗ ರಸಧಾರೆಯಲ್ಲಿ ರವಿ ತಿರುಮಲೈ ಮತ್ತು ಅಜ್ಜ!!!

"ಅಜ್ಜ ಅಜ್ಜ" 

ಗಂಧರ್ವ ಕಿನ್ನರರು ದೇವಪುರುಷರು ಕೂಗುತ್ತ ಓಡಿಬರುತ್ತಿದ್ದರು

"ಯಾರಪ್ಪ...ಯಾಕಪ್ಪ... ಏನಾಯ್ತು?

"ಅಜ್ಜ ಹೊರಟಾಗ ಎಲ್ಲಿಗೆ ಅಂತ ಕೇಳಬಾರದು ನಿಮ್ಮ ಹಿಂದೆಯೇ ಬರುತ್ತೇವೆ.. "

"ಅಲ್ಲಪ್ಪಾ ನಿಮ್ಮ ಜೊತೆಯಲ್ಲಿ ಕಳೆದ ೩೮ ವಸಂತಗಳಿಂದ ನಿಮ್ಮ ಜೊತೆಯಲ್ಲೇ ಇದ್ದೀನಿ.. ಹೀಗೆ ಸುಮ್ಮನೆ ಒಂದು ಸಣ್ಣ ವಾಕಿಂಗ್ ಮಾಡಿ ಬರುತ್ತೇನೆ"

"ಸರಿ ಅಜ್ಜ..ಹೋಗಿ ಬನ್ನಿ ನಾವು ಇಲ್ಲೇ ನಿಮಗಾಗಿ ಕಾಯುತ್ತಿರುತ್ತೇವೆ"

ಹೋಗಿ ಸುಮಾರು ಘಂಟೆಗಳಾದರೂ ಅಜ್ಜ ಬರಲಿಲ್ಲ... ಸ್ವರ್ಗದಲ್ಲಿ ಗಾಬರಿ ಶುರುವಾಯಿತು.. ಎಲ್ಲರೂ ಚಿಂತಾಕ್ರಾಂತರಾಗಿ ಶತಪಥ ತಿರುಗುತಿದ್ದರು

ಕಿನ್ನರ ಪುರುಷನೊಬ್ಬ ಏದುಸಿರು ಬಿಡುತ್ತ.. "ಅಜ್ಜ ಬರುತಿದ್ದಾರೆ ಅಜ್ಜ ಬರುತಿದ್ದಾರೆ" ಎಂದು ಕೂಗುತ್ತ ಒಳಗೆ ಓಡಿ ಬಂದ!

ಎಲ್ಲರೂ ಅಜ್ಜನನ್ನು ಸುತ್ತುವರಿದು "ಅಜ್ಜ ಎಲ್ಲಿ ಹೋಗಿದ್ದಿರಿ... ನಿಮಗೆ ಈಗ ೧೨೬ ವರ್ಷ.... ನೀವು ತುಂಬಾ ದೂರ ನೆಡೆದು ಹೋಗಬೇಕೆಂದಿದ್ದರೆ ನಮ್ಮ ಪುಷ್ಪಕ ವಿಮಾನವನ್ನು ತೆಗೆದುಕೊಂಡು ಹೋಗಬಹುದಿತ್ತಲ್ಲವೇ?.. ನಮಗೆ ಗಾ.... "

ಸುಸ್ತಾಗಿ ಕೂತು..ಕಥೆ ಹೇಳಲು ಶುರುಮಾಡಿದ ಅಜ್ಜ !
ಅಷ್ಟರಲ್ಲಿಯೇ ಅಜ್ಜ ಅವರ ಮಾತನ್ನು ಅರ್ಧಕ್ಕೆ ನಿಲ್ಲಿಸಿ 

"ಏನಿಲ್ಲಪ್ಪ ಹೀಗೆ ನಡೆಯುತ್ತ ಹೋಗುತಿದ್ದೆ.. ಒಂದು ಕಾಗದದ ತುಂಡಿನ ಆಹ್ವಾನ ಪತ್ರಿಕೆ ತೇಲುತ್ತ ಬಂದು ಇಲ್ಲಿ ಬಿದ್ದಿತ್ತು..
ತೇಲುತ್ತಾ ಬಂದ ಆಹ್ವಾನ ಪತ್ರಿಕೆ!
 ನೋಡಿದೆ ಸಂತಸವಾಯಿತು. ಆದರೆ ಅಲ್ಲಿಗೆ ಹೋಗುವಷ್ಟರಲ್ಲಿ ಸಮಾರಂಭ ಮುಗಿದುಹೋಗಿತ್ತು. 
ಸಮಾರಂಭದ ಒಂದು ಝಲಕ್ !

ಸುಂದರ ಪುಸ್ತಕಗಳ ಸಂಕಲನವೇ ಅಲ್ಲಿತ್ತು. ನೋಡಿದೆ ಖುಷಿಯಾಯಿತು. ಅದನ್ನು ಓದುತ್ತ ಕುಳಿತೆ ಸಮಯ ಹೋದದ್ದು ಅರಿವಿಗೆ ಬರಲಿಲ್ಲ.  
ಹರಿದ ರಸಧಾರೆ 
ನಂತರ  ಆ ಸಮಾರಂಭದ ಕತೃವಿನ ಮನೆಗೆ ಹೋದರೆ ಆಶ್ಚರ್ಯ.. ಅಲ್ಲಿ ಎಲ್ಲರೂ ನನ್ನ ಬಗ್ಗೆಯೇ ಮಾತಾಡುತ್ತಿದ್ದರು. ಅವರ ಜೊತೆ ನಾನು ಸ್ವಲ್ಪ ಮಾತನಾಡುತ್ತ ಕುಳಿತೆ..  ಆ ಪುಸ್ತಕದ ಕತೃವಿಗೆ ಆಶೀರ್ವಾದ ಮಾಡೋಣ ಎಂದು ಬಳಿಗೆ ಕರೆದೆ. 
ಆಶ್ಚರ್ಯಭರಿತ ನೋಟದಿಂದ ನನ್ನನ್ನು ಕಂಡ ರವಿ ನನ್ನ ಬಳಿಗೆ ಓಡಿ ಬಂದು.... 
ಅರೆ ಅಜ್ಜ ಬಂದಿದ್ದಾರೆ! (ಆಶ್ಚರ್ಯ ಚಕಿತರಾದ ರವಿ ಸರ್ )
(ಚಿತ್ರಕೃಪೆ  - ಪ್ರವರ ಕೊಟ್ಟುರ್ )
 "ಅಜ್ಜ ನಿಮ್ಮ ಪಾದಧೂಳಿಯಿಂದ ನಮ್ಮ ಜೀವನ ಪಾವನವಾಯಿತು." ಎಂದು ಕಾಲಿಗೆರಗಿದ ರವಿಯನ್ನು ಮೈತಡವಿ ಎಬ್ಬಿಸಿ "ಮಗು ರವಿ.. ಏಳಿ .. ಇಂದು ನಿಮ್ಮ ಜನುಮದಿನ ಎಂದು ನನ್ನ ಕ್ಯಾಲೆಂಡರ್ ನಲ್ಲಿ ಗುರುತು ಮಾಡಿಕೊಂಡಿದ್ದೆ.  ನಾನು ದಶಕಗಳ ಹಿಂದೆ ಬರೆದ ನಾಲ್ಕು ಸಾಲುಗಳ ಪದ ಪುಂಜಗಳಿಗೆ ಎಷ್ಟು  ಚೆನ್ನಾಗಿ ಅರ್ಥ ವಿಸ್ತಾರ ಕೊಡುತಿದ್ದೀರಾ ತುಂಬಾ ಸಂತಸವಾಗುತ್ತಿದೆ. ನನ್ನ ಕಗ್ಗಗಳನ್ನು ಅನೇಕರು ವಿಶ್ಲೇಷಣೆ ಮಾಡಿದ್ದಾರೆ. ಅನೇಕರು ಸಾಗಿದ ಹಾದಿಯಲ್ಲಿ ನೀವು ಸಾಗಿದರೂ ಅದಕ್ಕೆ ನಿಮ್ಮದೇ ಆದ ವಿಶಿಷ್ಟ ವಿಶ್ಲೇಷಣೆಯನ್ನೂ, ಅನುಭವದ ಮೂಸೆಯಲ್ಲಿ ಅರಳಿದ ಪಾಠಗಳನ್ನೂ , ಓದಿದ ವಿಷಯಗಳನ್ನೂ,  ಪ್ರತಿಯೊಂದಕ್ಕೂ ಹೊಂದಿಸಿ ಬರೆದಿರುವ ಪರಿ ಸೊಗಸಾಗಿದೆ. ಬರೆದ ಸಾಲುಗಳು ಇನ್ನಷ್ಟು ಮಂದಿಗೆ ತಲುಪುವುದರಲ್ಲಿ ಸಂದೇಹವೇ ಇಲ್ಲ. ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೀರಾ... "

"ಅಜ್ಜ ಅಜ್ಜ ನಿಮ್ಮ ಆಶೀರ್ವಾದ ನನಗೆ ಶ್ರೀರಕ್ಷೆ.    ನನ್ನ ಜನುಮದಿನಕ್ಕೆ ನೀವೇ ಬಂದಿರುವುದು ನನಗೆ ಬಹಳ ಖುಷಿಯಾಯಿತು. ನನ್ನ ಜನ್ಮ ಸಾರ್ಥಕವಾಯಿತು.. ನಿಮ್ಮ ಆಶೀರ್ವಾದದ ಬಲದಿಂದ ನಿಮ್ಮ ನೂರಾ  ಇಪ್ಪತ್ತಾರನೇ ಜನುಮದ ದಿನದಂದು "ಕಗ್ಗ ರಸಧಾರೆ ಸಂಪುಟ - ೧" ಶ್ರೀ ಮಾಸ್ಟರ್ ಹಿರಣ್ಣಯ್ಯ ಅವರ ಮಾರ್ಗದರ್ಶನದಲ್ಲಿ ಲೋಕಾರ್ಪಣಗೊಂಡಿತು" 
ಕಗ್ಗ ರಸಧಾರೆ ಲೋಕಾರ್ಪಣಗೊಂಡ ಸಂತಸದ ಘಳಿಗೆ 
"ಅವರ ಮಾತುಗಳಲ್ಲಿ   ನಿಮ್ಮ ಜೊತೆಯಲ್ಲಿನ ಒಡನಾಟವನ್ನು, ಮಾರ್ಗದರ್ಶಿ ಸಂದೇಶಗಳನ್ನು ತಿಳಿದುಕೊಂಡೆವು . ನಿಮ್ಮ ಕುಟುಂಬದ ಕುಡಿ ಶ್ರೀ ಚಂದ್ರಮೌಳಿ ಅವರು ನಿಮ್ಮ ಕಾಲದ ದಿನಗಳನ್ನು ನೆನೆಸಿಕೊಂಡರು. ಶ್ರೀ ರಾಜಗೋಪಾಲ್ ಅವರು ಕಗ್ಗಕ್ಕೆ ನೊಬೆಲ್ ಪ್ರಶಸ್ತಿ ಕೊಟ್ಟಿದ್ದರೇ ಆ ಪ್ರಶಸ್ತಿಗೆ ಗೌರವ ಸಿಕ್ಕುತ್ತಿತ್ತು ಎಂದರು. ಶ್ರೀ ಸುಬ್ಬುಕೃಷ್ಣ ಅವರು ಕಗ್ಗದ ಬಗ್ಗೆ ಆಡಿದ ಕಿರು ಮಾತುಗಳು ಮುದ ಕೊಟ್ಟವು. ಇನ್ನೂ ಸರಕಾರದ ಶ್ರೀ ವಿಶು ಕುಮಾರ್ ಅವರು ಎಲ್ಲರ ಸಹಕಾರ ಕೋರಿ ಈ ರೀತಿಯಲ್ಲಿ ಹಿರಿಯ ಸಾಹಿತಿಗಳನ್ನು ನೆನೆಸಿಕೊಂಡು ಅವರು ಮಾಡಿರುವ ಸೇವೆಯನ್ನು ವಿಶ್ವದ ಮೂಲೆ ಮೂಲೆಗೂ ಪಸರಿಸುವ ಪರಿಚಯಿಸುವ ಕಾರ್ಯಕ್ರಮದಲ್ಲಿ ಪಾಲುಗೊಳ್ಳಲು ಇಚ್ಚಿಸುತ್ತೇನೆ ಎಂದರು. ಕಗ್ಗದ ಭಟ್ಟರೆಂದೇ ಹೆಸರಾದ ಶ್ರೀ ಲಕ್ಷ್ಮಿನಾರಾಯಣ ಭಟ್ಟರು ಕಗ್ಗದ ಬಗ್ಗೆ ವಿವರಿಸುತ್ತ ಹೋದಂತೆ ಮೂಕ ವಿಸ್ಮಿತರಾಗಿ ಕುಳಿತಿದ್ದೆವು. ನನ್ನ ಬಂಧುಗಳು ಮಿತ್ರರು ಎಲ್ಲರೂ ಸೇರಿ ಈ ಸಮಾರಂಭವನ್ನು ವ್ಯವಸ್ಥಿತವಾಗಿ ಏರ್ಪಡಿಸಿ ಅದರ ಗೆಲುವಿಗೆ ಕಾರಣರಾದರು" 
"ಹೌದೆ ಕಂದ. ಬಹಳ ಸಂತೋಷವಾಯಿತು.  ನಿಮ್ಮ ಕಗ್ಗ ರಸಧಾರೆ ಎರಡನೇ ಸಂಪುಟದ ಬಿಡುಗಡೆಗೆ ಸಮಯ ಮಾಡಿಕೊಂಡು ಬರುತ್ತೇನೆ. ಮಗು ರವಿ ನಿಮ್ಮ ಜನುಮದಿನಕ್ಕೆ ನನ್ನ ಆಶೀರ್ವಾದಗಳು. ಕಗ್ಗವನ್ನು ಇನ್ನಷ್ಟು ಜನರಿಗೆ ತಲುಪಿಸಲು ಮಾಡುತ್ತಿರುವ ಕೆಲಸದಲ್ಲಿ ಇನ್ನಷ್ಟು ಯಶಸ್ಸು, ಕೀರ್ತಿ ನಿಮ್ಮದಾಗಲಿ.  ಹೋಗಿ ಬರುವೆ ಮಗು. ಶುಭವಾಗಲಿ"

"ಸರಿ ಅಜ್ಜ ನಿಮ್ಮೊಡನೆ ಇನ್ನಷ್ಟು ಮಾತಾಡುವ ಆಸೆ ಇತ್ತು... ನಿಮ್ಮ ಆಶೀರ್ವಾದ ಸದಾ ಇರಲಿ " ಎನ್ನುವಷ್ಟರಲ್ಲಿ ಅಲಾರಂ ಕಿರುಚಿಕೊಳ್ಳುತ್ತಾ ಬೆಳಗಾಯಿತು ಎಂದು ಎಚ್ಚರಿಸಿತು. ಕಣ್ಣು ಉಜ್ಜಿಕೊಂಡು "ಕರಾಗ್ರೆ ವಸತೇ ಲಕ್ಷ್ಮಿ......" ಹೇಳಿಕೊಂಡು ಪ್ರಾತಃ ಕರ್ಮಗಳನ್ನು ಮುಗಿಸಿ ನುಡಿಮುತ್ತುಗಳನ್ನು ಹಾಗೂ ಕಗ್ಗದ ರಸಧಾರೆಯ ಮುಕ್ತಕ - ೩೬೧ ಫೇಸ್ ಬುಕ್ಕಿಗೆ ಹಾಕಲು ಕಂಪ್ಯೂಟರ್ ಚಾಲನೆ ಮಾಡಿದರು. ಅಷ್ಟರಲ್ಲಿಯೇ ಹಲವಾರು ಬಂಧು ಮಿತ್ರರಿಂದ ಜನುಮದಿನಕ್ಕೆ ಶುಭಾಶಯಗಳನ್ನು ಹೊತ್ತ ಸಂದೇಶ ಕಾಯುತ್ತಿತ್ತು. ಜೊತೆಯಲ್ಲಿ ಈ ಬ್ಲಾಗ್ ಲೇಖನ ಕೂಡ.
ಸುಂದರ ಹುಲ್ಲು ಹಾಸಿನ ಮೇಲೆ ವಿಶ್ರಮಿಸುತ್ತಿರುವ ಅಜ್ಜ!
"ವಾಹ್ ಅಜ್ಜನೊಡನೆ ಮಾತು, ಅವರ ಆಶೀರ್ವಾದ, ಮೈತಡವಿದ ಅವರ ಸ್ಪರ್ಶ ಅನುಭವಿಸಿದ ನಾನೇ ಧನ್ಯ ಎಂದಿತು ರವಿ ಅವರ ಮನಸ್ಸು... ಶುಭಾಶಯಗಳನ್ನು ಕೋರಿದ ಎಲ್ಲಾ ಬಂಧು ಮಿತ್ರರಿಗೆ ಧನ್ಯವಾದಗಳನ್ನು ಹೇಳುತ್ತಾ ನಿತ್ಯ ದಿನಚರಿಯ ಕಡೆ ಗಮನ ಕೊಡಲು ಮಗು ರವಿ ಹೊರಟರು ನಂತರ ನಾನು ಇಲ್ಲಿಗೆ ಬಂದೆ ಹಾಗಾಗಿ ತಡವಾಯಿತು ಕಣ್ರಪ್ಪ...ನಾನು ಸ್ವಲ್ಪ ಹೊತ್ತು ಇಲ್ಲೇ ಕೂತಿದ್ದು ನಂತರ ಬರುವೆ... "


"ಸರಿ ಅಜ್ಜ ಒಳ್ಳೆ ಕೆಲಸವನ್ನೇ ಮಾಡಿದ್ದೀರಾ. ಓಹ್ ನಮಗಾಗಿ ಕಗ್ಗ ರಸಧಾರೆ ಸಂಪುಟ - ೧ ತಂದಿದ್ದೀರ. ಓದೋಣ ಬಿಡಿ ಅಜ್ಜ. ಬನ್ನಿ ನಿಮಗಾಗಿ ಬೋಂಡ, ಆಂಬೋಡೆ, ಕಾಫಿ ಎಲ್ಲವೂ ಸಿದ್ಧವಾಗಿದೆ. ಅಲ್ಲಿಯೇ ಪೆನ್ನು ಪೇಪರ್ ಕೂಡ ಇಟ್ಟಿದ್ದೇವೆ.. ಇನ್ನಷ್ಟು ಬರೆಯಿರಿ.. ಹಸಿರ ಹಾಸಿನಮೇಲೆ ಕುಳಿತು ಕೊಂಚ ಘಳಿಗೆ ವಿಶ್ರಮಿಸಿಕೊಳ್ಳಿ" ಎಂದು ಹೇಳಿ ಎಲ್ಲಾ ಗಣದೇವತೆಗಳು "ಪುಷ್ಪ"ವೃಷ್ಟಿಮಾಡುತ್ತಾ, ಆಶೀರ್ವಾದದ "ಪ್ರಸಾದ" ನೀಡುತ್ತಾ ಮಧುರ ಮಧುರವೀ "ಮಂಜುಳಾ" ಗಾನ ಹೇಳುತ್ತಾ ರವಿಯವರಿಗೆ ಜನುಮದ ದಿನದ ಶುಭಾಶಯಗಳನ್ನು ಕೋರಿದರು!!!

32 comments:

  1. ಅಂದು ನಾನು ಪುನೀತನಾದ ಭಾವ, ಮಹಾ ಕಾವ್ಯಗಳ ನಿಜಾರ್ಥ ತಿಳಿದ ದಿನ, ನನ್ನೆಲ್ಲ ಒಲುಮೆಯ ಗೆಳೆಯ ಗೆಳತಿಯರ ಸಂಧಿಸಿದ ಸಾರ್ಥಕ್ಯ ಮತ್ತು ಒಂದು ಚಿರ ಕಾಲ ಉಳಿವ ಸಂಗ್ರಹ ಯೋಗ್ಯ ಗ್ರಂಥಕ್ಕೆ ಬಿಡುಗಡೆಗೆ ಸಾಕ್ಷಿಯಾದ ಸಂಭ್ರಮ. ಎಲ್ಲವೂ ಒಟ್ಟಿಗೆ.....

    ReplyDelete
    Replies
    1. ಕೆಲವು ಘಟನೆಗಳು, ಸಮಾರಂಭಗಳು ನೆನಪಲ್ಲಿ ಉಳಿದುಬಿಡುತ್ತವೆ. ಅಂತಹ ಒಂದು ಸುಮಧುರ ಕಾರ್ಯಕ್ರಮ ಇದಾಗಿತ್ತು. ಧನ್ಯವಾದಗಳು ಬದರಿ ಸರ್ ಸುಂದರ ಪ್ರತಿಕ್ರಿಯೆಗಳಿಗೆ

      Delete
  2. ರವಿ ಸರ್ ಗೆ ಹುಟ್ಟು ಹಬ್ಬದ ಶುಭಾಶಯಗಳು..

    ಯಾವಾಗಲೂ ಡಿಫರೆಂಟ್ ಆಗಿ ಯೋಚನೆ ಮಾಡೋ, ಅಷ್ಟೇ ಬಿನ್ನವಾಗಿ ಚಂದವಾಗಿ ಲೇಖನ ಕಟ್ಟಿ ಕೊಡೋ ಅಣ್ಣನಿಗೊಂದು ಸಲಾಂ :)

    ReplyDelete
    Replies
    1. ಅಭಿಮಾನವಿದ್ದಾಗ ಓದಿದ್ದು ಬರೆದದ್ದೂ ಎಲ್ಲವು ಸೊಗಸಾಗಿರುತ್ತೆ ಪಿ ಎಸ್. ಖುಷಿಯಾಗುತ್ತಿದೆ ನಿನ್ನ ಪ್ರತಿಕ್ರಿಯೆ ನೋಡಿ. ಧನ್ಯವಾದಗಳು

      Delete
  3. ಅಬ್ಬಾ... ಕಾರ್ಯಕ್ರಮದ ಪೂರ್ಣ ವಿವರದೊಂದಿಗೆ ರಸದೌತಣ ನೀಡಿದ್ದೀರಿ ಧನ್ಯವಾದಗಳು ಶ್ರೀಕಾಂತ್

    ReplyDelete
    Replies
    1. ಅಕ್ಕಯ್ಯ ಓದಿ ಮೆಚ್ಚಿ ಹರಸುವ ನಿಮ್ಮ ಸು"ಗುಣ"ಕ್ಕೆ ಧನ್ಯವಾದಗಳು

      Delete
  4. ಬೆಳಿಗ್ಗೆ ಇದನ್ನು ಓದಿ ನನ್ನ ಮುಖದಲ್ಲೊಂದು ಮಂದಹಾಸ ಮೂಡಿಸಿದ್ದಕ್ಕೆ ಧನ್ಯವಾದಗಳು ಶ್ರೀಕಾಂತ್... :))

    ReplyDelete
    Replies
    1. ಮಂದಹಾಸ ಮೂಡಿಸಲು ಶಕ್ತವಾದ ಲೇಖನ ಬರೆಸಿದ ಕಾಣದ ಶಕ್ತಿಗೆ ಹಾಗು ಅದನ್ನು ನೆನಸಿದ ನಿಮಗೆ ಧನ್ಯವಾದಗಳು ಸಹೋದರಿ

      Delete
  5. ಪೌರಾಣಿಕವಾಗಿ ಬ್ಲಾಗ್ ಲೋಕದ ಪುರಾಣಗಳನ್ನು ಹೇಳುವ ಶುಕಮುನಿಗೆ ವಂದನೆಗಳು.
    ಸೊಗಸಾದ ವಿವರಣೆ,ಇನ್ನೂ ಕೆಲ ಚಿತ್ರಗಳನ್ನು ಹಾಕಬಹುದೇ ? ಧನ್ಯವಾದಗಳು

    ReplyDelete
    Replies
    1. ಹ ಹ ಹ ಹ ಇದಪ್ಪ ಮಾತು. ನಿಮ್ಮ ಅಭಿಮಾನದ ಮಾತುಗಳಿಗೆ ನನ್ನ ಬಳಿ ಮಾತಿಲ್ಲ. ಧನ್ಯವಾದಗಳು ಸ್ವರ್ಣ

      Delete
  6. ರವಿ ತಿರುಮಲೈರವರಿಗೆ ಹುಟ್ಟುಹಬ್ಬದ ಶುಭಾಶಯಗಳು

    ReplyDelete
    Replies
    1. ನಂಜುಂಡ ಭಟ್ ಅವರಿಗೆ ನನ್ನ ಲೋಕಕ್ಕೆ ಸ್ವಾಗತ!

      Delete
  7. ವಾಹ್ !!!.... ನಿಜಕ್ಕೂ ರಸದೌತಣ ಉಣಬಡಿಸಿದ ಕಗ್ಗ ರಸಧಾರೆ :)....
    ಸುಂದರವಾಗಿ ಕಟ್ಟಿ ಕೊಟ್ಟಿದ್ದೀರಿ ....
    ರವಿ ಸರ್ ಗೆ ಜನುಮ ದಿನದ ಶುಭಾಶಯಗಳನ್ನ ತಿಳಿಸಿ ಬಿಡಿ

    ReplyDelete
    Replies
    1. ನಿನ್ನಂತಹ ಸುಮಧುರ ಓದುಗರ ಮೆಚ್ಚುಗೆಗೆ ಪಾತ್ರನಾದ ಈ ಲೇಖನಕ್ಕೆ ನನ್ನ ಧನ್ಯವಾದಗಳು.,ಸುಂದರ ಕಾಮೆಂಟ್ ಬಿ ಪಿ

      Delete
  8. ವಿಶಿಷ್ಟ ರೀತಿಯ ಹುಟ್ಟುಹಬ್ಬದ ಕೊಡುಗೆ ಈ ಮಂಜುಳಾ ಗಾನ..... ಬಹಳ ಚೆನ್ನಾಗಿದೆ ಸರ್... ಹೊಸ ಬಗೆಯ ಯಾರು ಬರೆಯದಂತಹ ಲೇಖನಗಳೇ ನಿಮ್ಮ ಶೈಲಿ ಬಹಳ ಇಷ್ಟವಾಯಿತು......

    "ರವಿ ತಿರುಮಲೈ" ಸರ್ ರವರಿಗೆ ಜನುಮದಿನದ ಹಾರ್ದಿಕ ಶುಭಾಶಯಗಳು.... ನಿಮ್ಮಂತಹ ಹಿರಿಯರ, ಬುದ್ದಿಜೀವಿಗಳ ಮಾರ್ಗದರ್ಶನ ನಮಗೆಲ್ಲರಿಗೂ ಸಿಗಲಿ....

    ReplyDelete
    Replies
    1. ಫ್ರೆಂಡ್ ಎಷ್ಟು ಸುಂದರವಾಗಿ ಬರೆದಿದ್ದೀರಿ. ಪ್ರತಿಕ್ರಿಯೆಗಳು ಕ್ರಿಯೆಗೆ ಹುಮ್ಮಸ್ಸು ನೀಡುತ್ತದೆ. ಧನ್ಯವಾದಗಳು ನಿಮಗೆ

      Delete
  9. :)
    ಕಣ್ಣೆದುರು ಕಟ್ಟಿಕೊಡೂವ ಚಿತ್ರ ಬರಹ!
    ಶೈಲಿ ಹಿಡಿಸಿತು!
    ಶ್ರೀಯುತ ರವಿಯವರ ಕಗ್ಗ ರಸಧಾರೆಯ ಉಳಿದ ಸಂಪುಟಗಳೂ ಆದಷ್ಟು ಬೇಗ ಲೋಕಾರ್ಪಣೆಗೊಳ್ಳಲಿ!

    ReplyDelete
    Replies
    1. ಸುರೇಶ ಸರ್ ಧನ್ಯವಾದಗಳು ನಿಮ್ಮ ಮೆಚ್ಚುಗೆಯ ನುಡಿಗಳಿಗೆ

      Delete
  10. hi Srikanth....
    I started imagining. So well written, karyakramada bagge, ravi sir bagge, ajjana bagge ellavoo sooper! pustaka oduva tavakavide!
    Roopa

    ReplyDelete
    Replies
    1. ರೂಪ. ಅದು ನಿಮ್ಮ ಅಭಿಮಾನ. ಓದುಗರಿಗೆ ಇಷ್ಟವಾಗಿದೆ ಎಂದರೆ ನನಗೆ ಸಂತೋಷ. ಕಾರ್ಯಕ್ರಮ ಚೆನ್ನಾಗಿತ್ತು ಹಾಗಾಗಿ ಅದಕ್ಕೆ ಪೋಷಾಕು ಹಾಕುವುದು ಅಷ್ಟೇ ನನ್ನ ಕೆಲಸವಾಗಿತ್ತು. ಧನ್ಯವಾದಗಳು

      Delete
  11. " ಕಗ್ಗ ರಸಧಾರೆ " ಯ ಪುಸ್ತಕ ಬಿಡುಗಡೆಯ ಕಾರ್ಯಕ್ರಮದ ರಸಮಯ ಕ್ಷಣಗಳ ಮೆಲುಕಿನಲ್ಲಿರುವಾಗಲೇ, ದೇವ ಲೋಕದಿಂದ ಅಜ್ಜರ ಭೂಮಿಗೆ ಕರೆತಂದು 126 ವರ್ಷಗಳ ಹುಟ್ಟು ಹಬ್ಬದಂದು ಅವರಿಗೆ ಸಮರ್ಪಿಸಿದ ರೀತಿ ಅತ್ಯಮೋಘ.ಶ್ರೀಕಾಂತರಿಗೆ ಅಭಿನಂದನೆಗಳು.

    ReplyDelete
    Replies
    1. ಶಿವ ಅವರಿಗೆ ನನ್ನ ಲೋಕಕ್ಕೆ ಸ್ವಾಗತ. ಸುಂದರ ಅನಿಸಿಕೆ ನಿಮ್ಮದು ಧನ್ಯವಾದಗಳು. ನಿಮ್ಮ ಬ್ಲಾಗ್ ಓದುವೆ.

      Delete

  12. ನನಗೆ ಮತ್ತೊಂದು ಭಾನುವಾರವನ್ನ ಸಾರ್ಥಕ ರೀತಿಯಲ್ಲಿ ಕಳೆದ ಸಮಾಧಾನ ಶ್ರೀ ಸಾರ್.. ಕಾರ್ಯದೊತ್ತಡ ಅದರ ಕುರಿತು ಸಾವಕಾಶವಾಗಿ ಬರೆಯಲಾಗಲಿಲ್ಲ. ಚಿಂತೆ ಇಲ್ಲ ನಿಮ್ಮೀ ಬರಹ ಅದರ ಕೊರಗನ್ನು ನೀಗಿಸಿತು. ಬರಹ ಯಾರದ್ದಾದರೇನು.. ಜೀಕುವ ಭಾವ ಗಳಲ್ಲವೇ ಮುಖ್ಯ.. ವೇದಿಕೆ ಮೇಲಿದ್ದ ಅನೇಕ ಗಣ್ಯರಿಂದ ಡೀ ವೀ ಜಿ ಯವರ ಅಲ್ಪ ಪರಿಚಯವಾದದ್ದು ನನ್ನ ಸುಯೋಗವೇ ಸರಿ. ಮಾಸ್ಟರ್ ಹಿರಣ್ಣಯ್ಯ ಅವರಿಂದ ಭಾರತೀಯ ಸಂಸ್ಕೃತಿಯ ಹಿರಿಮೆ.. ಮಹಾಕಾವ್ಯಗಳ ಅರ್ಥ ಮತ್ತು ಬೆಲೆ ಮೊದಲ ಬಾರಿಗೆ ಕಲ್ಪನೆಗೆ ನಿಲುಕಿದ್ದು. ಆ ಭಾನುವಾರ ಮತ್ತೊಂದಿಷ್ಟು ಮರೆಯಲಾಗದ ಕ್ಷಣಗಳನ್ನ ಕಟ್ಟಿ ಕೊಟ್ಟದ್ದು ಸುಳ್ಳಲ್ಲ. ಜೊತೆಗೆ ನಿಮ್ಮೆಲ್ಲರನ್ನೂ ಮತ್ತೊಂದು ವೇದಿಕೆಯಲ್ಲಿ ಒಟ್ಟಿಗೆ ಕೂಡುವ ಅವಕಾಶವೂ ಕೂಡ.. ಹಾಗೆ ಕನ್ನಡ ಬ್ಲಾಗಿನ ಒಂದಿಷ್ಟು ಹೊಸ ಮುಖಗಳ ಪರಿಚಯವೂ ಕೂಡಾ..

    ಎಂದಿನಂತೆ ನಿಮ್ಮ ಲೇಖನ ಬಹುವಾಗಿ ಇಷ್ಟವಾಯ್ತು..

    ReplyDelete
    Replies
    1. ಧನ್ಯವಾದಗಳು ಸತೀಶ್. ಅಂದು ಎಲ್ಲರೊಡನೆ ಕಳೆದ ಹೊತ್ತು ಮರೆಯಲಾಗದ ಮುತ್ತಿನ ಘಳಿಗೆಗಳು.

      Delete
  13. ಎಂದಿನಂತೆ ಸುಂದರ ಬರಹ ಶ್ರೀ...ಓದಿದದವರನ್ನೆಲ್ಲಾ ಅಲ್ಲಿಗೆ ಕರೆದೊಯ್ಯುತ್ತೀರಿ...
    ಧನ್ಯವಾದಗಳು...ಬರೆಯುತ್ತಿರಿ ಅಷ್ಟೇ...
    ಸಾಹಿತ್ಯದ ಬಗ್ಗೆ ನಿಮ್ಮ ಕಳಕಳಿ,ಪ್ರೋತ್ಸಾಹಕ್ಕೊಂದು ಸಲಾಮ್..

    ReplyDelete
    Replies
    1. ಧನ್ಯವಾದಗಳು ಚಿನ್ಮಯ್.ನಿಮ್ಮ ಅಭಿಮಾನಕ್ಕೆ ನನ್ನ ನಮನಗಳು

      Delete
  14. ವಿಶಿಷ್ಟ ನಿರೂಪಣೆಯ ಚಿತ್ರಬರಹ. ವಂದನೆಗಳು

    ReplyDelete
  15. Replies
    1. ನಿಮ್ಮ ಪ್ರತಿಕ್ರಿಯೆ ಬಂದಾಗ ನಮಗೆ ಸಿಗುವುದು ನಿಮ್ಮ ಹೆಸರು. ಧನ್ಯವಾದಗಳು.

      Delete