Tuesday, July 31, 2012

ಓಹ್ ಸಾವೇ ನೀನೆಷ್ಟು ಅನಪೇಕ್ಷಿತ ಅತಿಥಿ.


ಓಹ್ ಸಾವೇ ನೀನೆಷ್ಟು ಅನಪೇಕ್ಷಿತ ಅತಿಥಿ..

ಸಂಭ್ರಮ, ಸಂತಸ, ಸುಖ ಎಲಾವನ್ನು ಹೊತ್ತು ತರುವ ತಿರುವಿನಲ್ಲಿ ನೀನು ಬಂದು ನಿಂತಾಗ...ಸಿಗುವ ನೋವು, ತುಮುಲಗಳು ಕೊಡುವ ಆಘಾತ...ಪ್ರಪಾತಕಿಂತಲೂ ಆಳ...

ಕೇವಲ ಎರಡು ಘಂಟೆಗಳು ಒಂದು ಸುಮಧುರ ಹಿರಿಯ ಚೇತನದ ಜೀವನದಲ್ಲಿನ ಎರಡು ಪುಟಗಳು ಸಿಕ್ಕವು..

ನನ್ನ ತಂಗಿ ಅಂದ್ರೆ ತಾಯಿಯ ತಂಗಿಯ ಮಗಳು ನಿಶ್ಚಿತಾರ್ಥ ಆಗಸ್ಟ್ ೧೨ ನೆ ತಾರೀಕು ಅಂತ ಕರೆ ಬಂದಾಗ ಬಹಳ ಖುಷಿ ಆಯಿತು..ಸರಿ ನನ್ನ ತಾಯಿಯ ತವರೂರಿನ ದರುಶನ ಅಂತ ಮನಸು ಹಾರಾಡಿತು..

ಅದರ ಬೆನ್ನಲ್ಲೇ ಬಂದಿತು ಇನ್ನೊಂದು ಆಘಾತಕಾರಿ ಸುದ್ದಿ..ಆ ಹುಡುಗಿಯ ಅಪ್ಪ ಅರ್ಥಾತ್ ನನ್ನ ಚಿಕ್ಕಪ್ಪ ಆಸ್ಪತ್ರೆಯಲ್ಲಿ ವಿಧಿವಶರಾದ ಸುದ್ದಿ ಬಂತು..

ಸರಳ ಸಜ್ಜನಿಕೆಯ ಸಂಕೋಚ ಸ್ವಭಾವದ ನನ್ನ ಚಿಕ್ಕಪ್ಪನ ನಂಟು ನಮಗೆ ಚಿರಪರಿಚಿತ...

ಅವರ ಮಾತುಗಳು, ಹಾಸ್ಯ ಸಂಭಾಷಣೆ ಸೂಜಿ ಮೊನಚಂತೆ ಕಂಡರೂ ಕೂಡ ಅಪಾರ ಅಭಿಮಾನದ ತೀವ್ರತೆ ಅವರಲ್ಲಿ ಕಾಣುತಿತ್ತು..ಪ್ರತಿಸಾರಿ ಸಿಕ್ಕಾಗೂ ಕೂಡ "ಏನಯ್ಯ ನಮ್ಮನೆಗೆ ಬರೋಲ್ವಾ ನೀನು..ಈ ಸಾರಿ ಬರಲೇಬೇಕು"..ಅಂತ ಪ್ರತಿಸಾರಿಯೂ ಬಲವಂತವಾಗಿ ಕರೆಯುತಿದ್ದರು..ಸಮಯದ ಅಭಾವ..ಆಗಿರಲಿಲ್ಲ..

ಕಳೆದ ಅಕ್ಟೋಬರ್ ನಲ್ಲಿ ಬಲವಂತಾಗಿ ನಾನೇ ಸಮಯ ಮಾಡಿಕೊಂಡು ಅವರ ಜೊತೆ ಕೆಲ ಘಂಟೆಗಳು ಕಳೆದ ಸಂತೃಪ್ತಿ ನನಗಿದೆ...

ಪ್ರೀತಿಯ ಚಿಕ್ಕಪ್ಪ..ನನ್ನ ತಾಯಿಯ ತವರನ್ನು ಬೆಳಗಿದವರು...

ನಮ್ಮೆಲ್ಲರ ಕಡೆಯಿಂದ ಒಂದು ನುಡಿ ನಮನ ನಿಮಗೆ...

4 comments:

  1. ಕೆಲವೊಮ್ಮೆ ಸಾವು ಅದೆಷ್ಟು ನುರ್ಧಯಿ ಅನಿಸುತ್ತದೆ ಸಾರ್.

    ನಮ್ಮ ನಡುವೆಯೇ ರಾಕ್ಷಸರು ಮುದಿ ಬಿದ್ದರೂ ಕೆಡುಕನ್ನೇ ಜಗತ್ತಿಗೆ ಬಗೆದರೂ ಅವರು ಸಾಯುವುದೇ ಇಲ್ಲ. ಆದರೆ, ಒಳ್ಳೆಯವರೇ ಅದೇಕೆ ವಿಧಿ ವಶವಾಗುತ್ತಾರೋ, ಕಾಣೆ?

    ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಬೇಡಿಕೊಳ್ಳುತ್ತೇನೆ.

    ReplyDelete
  2. ಸಾವು

    ಸಾವಿರದ ಮನೆಯ ಸಾಸುವೆ ಎಲ್ಲಿಂದ ತರಲೆಂದು
    ಗೌತಮನ ಮುಂದೆ ಗೊಗೆರದು ಕಣ್ಣೇರು ಇಟ್ಟ ಹೆಣ್ಣು ಮಗಳಿಗೆ
    ಕಣ್ಣು ತೆರೆಸಿ, ದುಃಖ ಮರೆಸಿ, ಸಾವು ಸಹಜ ಬಾಳಿನಷ್ಟೇ!
    ಎನ್ದೊರಲಿ ಚಿತೆಯ ಕಡೆಗೆ ಕೈ ತೋರಿದ ಬುದ್ಧ.

    ಹುಟ್ಟಿನ ಹಿಂದೆಯೇ ನೆರಳಿನಾ ಹಾಗೆ ಸಾವು ಹಿಂಬಾಲಕ.
    ಎಂದು ಕರಿನೆರಳು ಭೂತಾಕಾರವಾಗಿ ದೇಹವನು ನುಂಗಿ
    ತಾನು ಬಂದ ಕೆಲಸ ಮುಗಿಸಿ ಕೈಕೊಡವಿ ಹೊರಡುವುದೋ?
    ಅವನ ಬಿಟ್ಟು ಯಾರೂ ಅರಿಯಲಾಗದ ಘೋರ ರಹಸ್ಯ!

    ಯಮನಿಗೆ ಮತ್ತೊಂದು ಹೆಸರು ಕಾಲ, ಈ ಕಾಲವೇ ಎಲ್ಲ,
    ಸುಖದ ತೀರದಿಂದ ಎಲ್ಲೆಂದರಲ್ಲಿಗೆ, ಹೇಗೆಂದರೆ ಹಾಗೆ
    ದುಃಖದಲಿ ನಿಲ್ಲಿಸುವ ಕ್ರಮ ಕಾಲನಿಗೆ ಮಾತ್ರ ಅರಿವು
    ಕೆಲ ಕಾಲ ಮೆರೆಸಿ ಅಳಿಸಿದಾ ಹಾಗೆ ಮರೆಸುವನು ಕೂಡ.

    ಇರುವಷ್ಟು ದಿನ ಇಂದಿಗೆ ಬದುಕುತ್ತ, ಈ ಕ್ಷಣದ ಸವಿ ನೋವುಗಳ
    ಇಂದಿಗೆ ಮುಗಿಸುತ್ತ ಕಹಿ, ರಾಗ ದ್ವೇಷಗಳ ಬದಲಿಗೆ
    ಪ್ರೀತಿ ಪ್ರೇಮಗಳ ಆಲಂಗಿಸುತ್ತ ಸಾವಿನಾ ಸಾಲಿನಲ್ಲಿ ನಿಂತು
    ಅನಾಯಾಸ ಮರಣಕ್ಕೆ ಅನನ್ಯ ಬೇಡುವ ಯಾತ್ರಿಕ ನಾನು .


    ( ನನ್ನ ಆತ್ಮೀಯರೊಬ್ಬರ ಮನೆಯಲ್ಲಿ ಆದ ಸಾವಿನ ಸಮಯದಲ್ಲಿ ಮನಸಿನಾಳದಿಂದ ಬಂದ ಕೆಲವು ಸಾಲುಗಳು )

    ReplyDelete
  3. ಹೌದು ಬದರಿ ಸರ್..... ಸಾವು ನಿಜ ಸ್ವರೂಪದ ಅನಪೇಕ್ಷಿತ ಅತಿಥಿ...ಎಲ್ಲರಿಗೂ ಗೊತ್ತು ಆ ಅತಿಥಿ..ಕರೆಯದೆ ಇದ್ರೂ ಬರ್ತಾನೆ ಅಂತ...ಅವನು ಬರುವ ಹೊತ್ತು...ಅಬ್ಬ...

    ReplyDelete
  4. ಸಾವಿಲ್ಲದ ಸಾಸಿವೆ...ನೀರಿಲ್ಲದ ಹಿಮ ಎರಡು ಇಲ್ಲ..ಧನ್ಯವಾದಗಳು ಚಿಕ್ಕಪ್ಪ..ಸುಂದರವಾದ ಸಾಲುಗಳ ಕವಿತೆ...

    ReplyDelete