ಧಾರ್ಮಿಕ ದೃಷ್ಟಿಯಿಂದ ತ್ರಿಮೂರ್ತಿಗಳ ವಾಸಸ್ಥಾನ ಈ ಅರಳಿ ಮರ..
ಶಿವರೂಪಾಯ ವೃಕ್ಷರಾಜಾಯತೇ ನಮಃ"
ಅದರ ಎಲೆಗಳು ಒಂದಕ್ಕೊಂದು ಅಂಟಿಕೊಂಡಿರುವುದಿಲ್ಲ..ಪ್ರತಿ ಎಲೆಯಲ್ಲೂ ಕೂಡ ಅದರ ಸರಕು ಸಾಗಣೆಯ ದಾರಿಯನ್ನು ನೋಡಬಹುದು...ಎಲ್ಲ ಸಸ್ಯದ ಎಲೆಗಳಲ್ಲು ಇದು ಇರುತ್ತದಾದರೂ ಅರಳಿ ಎಲೆ ತನ್ನದೇ ಒಂದು ವಿಶಿಷ್ಟ ಪಾಠವನ್ನು ಸಾರುತ್ತದೆ..
ಎಲೆಯು ಆರಂಭದಲ್ಲಿ ಹಾಗೂ ಅಂತ್ಯದಲ್ಲಿ ಸಣ್ಣದಾಗಿರುತ್ತದೆ... ಮಧ್ಯೆ ನೇರವಾದ ಸಣ್ಣ ಹಾದಿ ...ಅದರ ಎಡ ಬಲದಲ್ಲಿ ನೂರಾರು ಕವಲುಗಳು..ಆ ಕವಲುಗಳು ಮತ್ತೆ ಮತ್ತೆ ಒಡೆದು ಅನೇಕ ಕವಲುಗಳು..ಹೀಗೆಯೇ ಸಾಗುತ್ತದೆ..ಅಂಚಿಗೆ ಬರುತ್ತಾ ಬರುತ್ತಾ...ಅದರ ಹಾದಿ ಇನ್ನೂ ಕಡಿದಾಗುತ್ತ ಸಾಗುತ್ತದೆ...ಕಡೆಗೆ ಬಿಂದುವಾಗಿ ನಿಲ್ಲುತದೆ..ಅದು ಅದರ ಗುರಿ..
ನಾವು ಕೂಡ ಪ್ರತಿ ದಿನ ಪ್ರತಿ ಕ್ಷಣ ನೂರಾರು ಮಂದಿಯನ್ನು ಭೇಟಿ ಮಾಡುತ್ತೇವೆ, ಪ್ರತಿ ಒಬ್ಬರದು ವಿಭಿನ್ನ ಹಾದಿ, ವಿಭಿನ್ನ ಜೀವನ, ವಿಭಿನ್ನ ಗುರಿ..ಅಡೆತಡೆಗಳನ್ನು ದಾಟಿ ಬಂದ ಮೇಲೆ ಮಾತ್ರ ಗುರಿ ನಮ್ಮನ್ನ ಅಲಂಗಿಸಿಕೊಳ್ಳುತ್ತೆ
ನಾವು ಹಾಗೆಯೇ..ಒಂದು ಸಣ್ಣ ಎಳೆ ಹಿಡಿದು ನಮ್ಮ ಕೆಲಸ ಶುರು ಮಾಡುತ್ತೇವೆ..ನಮ್ಮ ಗುರಿ ಕೂಡ ದೊಡ್ಡದೇ ಇದ್ದರೂ ಕೂಡ ಅದು ದೂರದಿಂದ ಒಂದು ಸಣ್ಣ ಬಿಂದುವಾಗಿರುತ್ತದೆ..ಹಾದಿ ಕಠಿಣ, ದುರ್ಗಮ, ಕಡಿದು ಇರುತ್ತದೆ. ಅದರ ಉದ್ದಕ್ಕೂ..ನೂರಾರು ಅಡ-ತಡೆಗಳು, ಕವಲೊಡೆದ ಭಾವನೆಗಳು, ಸಾಗುವ ಆಸೆ ಆಕಾಂಕ್ಷೆಗಳು..
ಆದರೆ ಇವುಗಳು ನಮ್ಮನ್ನು ಧೃತಿಗೆಡಿಸಬಾರದು..ನಾವು ನಂಬಿರುವ ಮೌಲ್ಯ, ನಂಬಿಕೆ ಹಾಗೂ ಛಲ ಇವನ್ನು ಹಿಡಿದು ಸಾಗಿದಾಗ ಮಾತ್ರ ಗುರಿ ನಮ್ಮ ಕಣ್ಣ ಮುಂದೆಯೇ ಇರುತ್ತದೆ...ಹಾಗು ಕಣ್ಣು ಮಿಟುಕಿಸಿ ಸಂತಸ ಪಡುತ್ತದೆ..
ಅರಳಿ ಎಲೆಯೊಂದಿಗೆ ಶ್ರೀ ಪ್ರಪಂಚದಲ್ಲೊಂದು ಪಾಠ ಅರಳಿದೆ... ಗುರಿಯೊಂದು ಬಿಂದುವಾದರೂ ಅದನ್ನು ಸೇರಲು ಹಲವಾರು ಕವಲು ದಾರಿಗಳು, ಅಡೆ-ತಡೆಗಳು . ಎಲ್ಲವನ್ನು ಮೀರಿ ಒಂದು ಬಿಂದುವಲ್ಲಿ ನಿಲ್ಲಬೇಕು ಮನುಷ್ಯ. ಚೆನ್ನಾಗಿದೆ ಪಾಠ ..
ReplyDeleteಅರಳುವಾಗ ಕಲಿತ ಪಾಠಗಳು ಸದಾ ಮನಸಲ್ಲಿ ಹಾಗು ನೆನಪಲ್ಲಿ ಇರುತ್ತವೆ..ಶಾಲೆಯಲ್ಲಿ ಕಲಿತ ಕಾಗುಣಿತ, ಮಗ್ಗಿ, ವರ್ಣ ಮಾಲೆ..ಇವೆಲ್ಲ ಅಚ್ಚಳಿಯದ ಛಾಪು ಮೂಡಿಸುತ್ತೆ..ಹಾಗೆ ಕೆಲವು ಕಲಿತ, ಕಲಿಯುವ ವಿಷಯಗಳು..
ReplyDeleteಧನ್ಯವಾದಗಳು ಸಂಧ್ಯಾ..
ಆತ್ಮೀಯ ಶ್ರೀಕಾಂತ ,
ReplyDeleteನಡೆದಷ್ಟಿದೆ ನೆಲ, ಕಲಿತಷ್ಟಿದೆ ವಿದ್ಯೆ , ಅರಿತಷ್ಟಿದೆ ಅರಿವು. ಆಲದ ಬೀಜವನ್ನು ಕಂಡಾಗ ಅದರೊಳಗಿರುವ ಬೃಹದಾಕಾರದ ಶಕ್ತಿಯ ಅರಿವು ಸಾಮಾನ್ಯಕ್ಕೆ ತಿಳಿಯಲಾಗುವುದಿಲ್ಲ. ಒಮ್ಮೆ ಅದು ಮಣ್ಣಲ್ಲಿ ಮಣ್ಣಾಗಿ ಬೆರೆತರೆ ಸಾಕು, ತನ್ನ ವಿಶ್ವ ಸ್ವರೂಪವನ್ನು ತೋರುತ್ತದೆ. ಬರಹದ ಹಿಂದಿರುವ ಆಶಯ ಮತ್ತು ತೋರಿಸಿರುವ ಆಲದ ಎಲೆಯಾ ಚಿತ್ರ ಒಂದಕ್ಕೆ ಒಂದು ಪೂರಕವಾಗಿದೆ. ನಿನ್ನ ಬರಹದ ಹಿಂದಿರುವ ಆಳ ನಿಜಕ್ಕೂ ಪ್ರಶಂಸನೀಯ.
ಇನ್ನಷ್ಟು ಹೆಚ್ಚು ಸಮರ್ಥ ಬರವಣಿಗೆಯನ್ನು ನಿರೀಕ್ಷಿಸುತ್ತಾ,
ಪ್ರಕಾಶ್
ಶ್ರೀಕಾಂತ್..
ReplyDeleteಲೇಖನ ತುಂಬಾ ಇಷ್ಟವಾಯಿತು...
ಅಶ್ವತ್ಥ ಎಲೆ ಜಾಸ್ತಿ ಆಕ್ಸಿಜನ್ ಕೊಡುತ್ತದೆ....
ಹಾಗಾಗಿ ನಮ್ಮ ಹಿರಿಯರು ಅಶ್ವತ್ಥ ಮರಕ್ಕೆ ಸುತ್ತು ಹಾಕಿ ಬನ್ನಿ ಅಂತಿದ್ದರಾ?
ನೂರಾರು ವರ್ಷ ಬಾಳುವ ಈ ಮರ ನಮ್ಮ ಮುತ್ತಾತರನ್ನೂ ನೋಡಿರುತ್ತದೆ..
ಚಂದದ ಲೇಖನಕ್ಕೆ ಅಭಿನಂದನೆಗಳು...
ಧನ್ಯವಾದಗಳು ಚಿಕ್ಕಪ್ಪ..
ReplyDeleteನಿಮ್ಮ ಉತ್ಸಾಹ ತೋರುವ..ತೊಡುವ ಪ್ರತಿಕ್ರಿಯೆಯೇ ನನಗೆ ಶ್ರೀ ರಕ್ಷೆ...
ಒಡಲಾಳದಲ್ಲಿರುವ ಶಕ್ತಿಯನ್ನು ಹೊರಸೂಸುವ ತಾಕತ್ ಆ ಸಣ್ಣ ಬೀಜಕ್ಕೆ ಇರುವಾಗ..
ಹುಮ್ಮಸ್ಸು, ತಾಕತ್ ಸಮಾನ ಶಕ್ತಿಯಲ್ಲಿರುವ ಮನುಜನಿಗೆ ಗುರಿ ಸಾಧಿಸಲು ಎಲ್ಲಿಯದು ಕೊನೆ..
ಮರ ಸುತ್ತುವುದು ಒಂದು ಬೇಸರದ ಕಾರ್ಯ ಎಂದು ಕೊಳ್ಳುವರಿಗೆ ಹಿಂದಿನ ತಲೆಮಾರಿನವರ ಉದ್ದೇಶ ಅರ್ಥವಾಗದು..
ReplyDeleteಅವರ ಆಚಾರ ವಿಚಾರಗಳು ಯಾವತ್ತು ವಿಶೇಷಗಳನ್ನು ಹೊಂದಿರುತಿತ್ತು..
ಚೆನ್ನಾದ ಪ್ರತಿಕ್ರಿಯೆಗೆ ಧನ್ಯವಾದಗಳು ಪ್ರಕಾಶಣ್ಣ
ಸು೦ದರವಾಗಿ ವಿವರಿಸಿದ್ದೀರಿ.ಗುರಿ ತಲುಪಲು ಅರಳಿ ಎಲೆ ಉತ್ತಮ ಮಾದರಿ.
ReplyDeleteವ೦ದನೆಗಳು.
ಚಿತ್ತಾರಕ್ಕೆ ಚುಕ್ಕಿ ಬೇಕು...ಚುಕ್ಕಿಗಳಿಗೆ ಚಿತ್ತಾರ... ಬೇಕು...ಲೇಖನಕ್ಕೆ ಪ್ರತಿಕ್ರಿಯೆಗಳು ಬೇಕು..ಪ್ರತಿಕ್ರಿಯೆಗಳಿಗೆ ಲೇಖನಬೇಕು...ಗುರಿ ಸಾಗುವವರೆಗೆ...ಇದುವೇ ಜೀವನ..
ReplyDeleteಪ್ರತಿಕ್ರಿಯೆಗೆ ಧನ್ಯವಾದಗಳು
ಆಲದ ಎಲೆಯ ಉದಾಹರಣೆಯಲ್ಲಿ ಬದುಕಿನ ಪಾಠ ಹೇಳಿಕೊಟ್ಟ ಗೆಳೆಯ ನಿನಗೆ ಸಹಸ್ರ ವಂದನೆಗಳು.
ReplyDeleteಧನ್ಯವಾದಗಳು ಬದರಿ ಸರ್...ನಿಮ್ಮ ಪ್ರತಿಕ್ರಿಯೆ..ನನ್ನ ಕ್ರಿಯೆಗೆ ಮೂಲಭೂತ ಕಾರಣವಾಗುತ್ತದೆ..ಧನ್ಯವಾದಗಳು ನನ್ನ ಲೋಕಕ್ಕೆ ಕಾಲಿಟ್ಟದಕ್ಕೆ
ReplyDelete