Monday, July 30, 2012

ಬಾಳೆ ಎಲೆ ಊಟ


ಶಾಲೆಯಲಿದ್ದಾಗ ಹೇಳಿಕೊಟ್ಟ ಹಾಡಿನ ಊಟದ ಪಾಠ...
  
ಒಂದು ಎರಡು.... ಬಾಳೆಲೆ ಹರಡು
ಮೂರು ನಾಕು.... ಅನ್ನ ಹಾಕು 
ಐದು ಆರು.... ಬೇಳೆ ಸಾರು
ಏಳು ಎಂಟು.... ಪಲ್ಯಕೆ ದಂಟು
ಒಂಭತ್ತು  ಹತ್ತು... ಎಲೆ ಮುದುರೆತ್ತು
ಒಂದರಿಂದ ಹತ್ತು.... ಹೀಗಿತ್ತು..
ಊಟದ ಆಟವು ....ಮುಗಿದಿತ್ತು..

ಎಷ್ಟು ಸೊಗಸಾಗಿ ಆಟ, ಪಾಠ, ಊಟ ಕಲೆಸಿದ್ದರು ಒಂದು ಚಿಕ್ಕ ಹಾಡಿನ ಕವಿತೆಯಲ್ಲಿ..

ಬಾಳೆ ಎಲೆಯಲ್ಲಿ ಊಟ ಮಾಡುವಾಗೆಲ್ಲ..ಬಗೆ ಬಗೆಯ ತಿನಿಸುಗಳನ್ನು ಬಡಿಸುವ ವಿಧಾನ, ಒಂದೊಂದಾಗಿ ಬಡಿಸಿ, ಕಡೆಗೆ ತುಪ್ಪ, ತೊವ್ವೆ  ಹಾಕುವ ತನಕ ಕಾದಿದ್ದು..ನಂತರ ಒಂದೊಂದಾಗಿ ತಿಂದು ಮುಗಿಸಿ, ಮುಂದಿನ ಅಡಿಗೆ ಪದಾರ್ಥಗಳಿಗೆ ಕಾಯುತ್ತ, ಎಲೆಯಲ್ಲಿ ಜಾಗ ಮಾಡಿಕೊಂಡು ಕಾಯುತ್ತಿದ್ದುದು ಎಷ್ಟು ಚಂದ..... 


ಎಲ್ಲ 31 ಬಗೆಯಾ ಅಡಿಗೆ ಬಡಿಸಿದ ಎಲೆಯಾ ಚಿತ್ರ ಸಿಗಲಿಲ್ಲ.ಹಾಗಾಗಿ ಸಿಕ್ಕ ಚಿತ್ರವನ್ನು ಮಾತ್ರ ಹಾಕಿದ್ದೀನಿ..ಬೇಸರ ಬೇಡ..ಹ. ಹ. ಹ 

ಅದನ್ನೆಲ್ಲ ಗಮನಿಸುತ್ತ..ಕಳೆದ ವರುಷಗಳು ಹತ್ತಿರ ಹತ್ತಿರ ನಾಲ್ಕು ದಶಕಗಳು ...

ಎಂತಹ ಸುಲಭ ಸಮೀಕರಣವನ್ನು ನಮ್ಮ ಹಿರಿಯರು, ಪೂರ್ವಜರು ನಮಗೆ ಬಿಟ್ಟು ಹೋಗಿದ್ದಾರೆ ಅಂತ ಆಲೋಚಿಸುತ್ತ ಇದ್ದಾಗ ಯಾಕೆ ಇದರ ಬಗ್ಗೆ ಒಂದಷ್ಟು ಪದಗಳನ್ನು ಬರೆಯಬಾರದು ಎನ್ನಿಸಿತು..ಇಗೋ.....ತಗೊಳ್ಳಿ..ನಿಮ್ಮ ಮುಂದೆ...

ಅನ್ನ, ಸಾರು ಬರುವಷ್ಟರಲ್ಲಿ ಹೊಟ್ಟೆಯೊಳಗೆ..ಇಲಿಗಳು ಕಬಡ್ಡಿ ಆಡುತಿದ್ದವು..ನಂತರ ತೊವ್ವೆ..ಕಡೆಗೆ ತುಪ್ಪ, ..ಸುತ್ತ ಮುತ್ತಲು ನೋಡಿ... ಉಪನಯನ ಆದವರು ಪರಿಷಿಂಚನ ಮಾಡಿ ತಲೆ ಆಡಿಸಿದಾಗ..ಓಹ್ ಬ್ಯಾಟಿಂಗ್ ಗೆ ಅನುಮತಿ ಸಿಕ್ಕಿತು ಅಂತ ಬಾರಿಸೋಕೆ ಶುರು ಮಾಡುತಿದ್ದೆವು... 

ಅನ್ನ ಸಾರು ನಮ್ಮ ಗುರಿ ಇದ್ದರು ಕೂಡ, ಅದರ ಸುತ್ತಲು ಪರಿವಾರ ದೇವತೆಗಳಂತೆ ಕುಳಿತಿದ್ದ ಅನೇಕ ಭಕ್ಷ್ಯಗಳು ಹೊಟ್ಟೆ ಸೇರಲು ತವಗುಡುತಿದ್ದದ್ದು ಗೊತ್ತಾಗುತ್ತಿತ್ತು..ನಂತರ ಬರುವ, ಸಿಹಿ, ಖಾರ, ಬೋಂಡ, ಬಜ್ಜಿ,ಹಪ್ಪಳ, ಎಲ್ಲವನ್ನು ತಿಂದು..ಕಡೆಗೆ ಮಜ್ಜಿಗೆ ಅನ್ನ ತಿನ್ನುವಷ್ಟರಲ್ಲಿ ಹೊಟ್ಟೆ ಕನ್ನಂಬಾಡಿ ಕಟ್ಟೆ ಆಗಿರುತಿತ್ತು..

ಎಷ್ಟು ನಿಯಮ ಬದ್ದವಾಗಿ ಎಲ್ಲ ತರಹದ ಪದಾರ್ಥಗಳನ್ನು ಬಡಿಸಿ, ತಿನ್ನಿಸಿ, ಹೊಟ್ಟೆಗೆ ಏನು ಅಡಚಣೆಯಾಗದಂತೆ ಕಡೆಗೆ ಮಜ್ಜಿಗೆ ಅನ್ನ..ಎಲ್ಲವನ್ನು ಎಷ್ಟು ಚಂದೊಬದ್ದವಾಗಿ ಜೋಡಿಸಿ ಬಡಿಸುತ್ತಾರೆ..ಇದನ್ನ ನೋಡಿದಾಗ ನನಗನಿಸಿದ್ದು...

ಅನ್ನ ಪರಮ ಭಕ್ಷ್ಯವಾದರು ಕೂಡ ಅದಕ್ಕೆ ಸಹಕಾರಿಯಾಗಿ ಬರುವ ಉಪ್ಪಿನಕಾಯಿ, ಕೋಸಂಬರಿ, ಪಲ್ಯ, ಚಿತ್ರಾನ್ನ, ಪಾಯಸ, ಬೋಂಡ, ಸಿಹಿ, ಹುಳಿ, ಮಜ್ಜಿಗೆ, ಗೊಜ್ಜು ಮುಂತಾದ ಪದಾರ್ಥಗಳು  ...ಅನ್ನವನ್ನು ಸರಿಯಾದ ಪ್ರಮಾಣದಲ್ಲಿ, ಮತ್ತು ಸರಿಯಾದ ಕ್ರಮದಲ್ಲಿ ಭುಂಜಿಸಲು ಅನುವು ಮಾಡಿಕೊಡುತ್ತದೆ..

ಹಾಗೆಯೇ ನಾನೊಬ್ಬನೇ ಪ್ರಪಂಚದಲ್ಲಿ ಈಜಲು ಆಗುವುದಿಲ್ಲ..ಅಪ್ಪ-ಅಮ್ಮಂದಿರಿಂದ ಹಿಡಿದು ಅನೇಕ ಗೆಳಯರು, ಗೆಳತಿಯರು, ಸಹೋದ್ಯೋಗಿಗಳು, ಬಂಧು-ಬಳಗ, ಎಷ್ಟೋ ಅನಾಮಿಕರು, ಅನಾಮಧೇಯರು ಬಾಳಿನಲ್ಲಿ ಬಂದು ಸಹಾಯ ಮಾಡುತ್ತಾರೆ..

ಮಾನವ ಸಂಘ ಜೀವಿ ಎನ್ನುವದಕ್ಕೆ ಉತ್ತಮ ಉದಾಹರಣೆ..ಬಾಳೆ ಎಲೆ ಊಟ...!!!!

9 comments:

  1. ನಿಮ್ಮ ಕಡೆ ಅಂದ್ರೆ ಹಳೆ ಮೈಸೂರು ಕಡೆ ಬಡಿಸುವ ಪದ್ದತಿ ಬೇರೆ
    ನಮ್ಮ ಕಡೆದು ಬೇರೆ..ಯಾಕೋ ಇಲ್ಲಿಯ ಬಡಿಸುವಿಕೆ ಸೇರೊಲ್ಲ

    ReplyDelete
  2. ಇದು ಈ ದಿನ ನನಗೆ ಬಲು ಮೆಚ್ಚಿಗೆಯಾದ ಬರಹ.

    ಬಾಳೆ ಎಲೆ ಊಟದ ಅರ್ಥವನ್ನು ಸವಿವರವಾಗಿ ಕೊಟ್ಟಿದ್ದೀರ. ಇದು ಸಂಗ್ರಹ ಯೋಗ್ಯ ಬರಹ.

    ಬಡಿಸುವುದೂ ಒಂದು ಕಲೆ ಅಂತೆಯೇ ಬ್ಯಾಟಿಂಗ್ ಮಾಡುವುದೂ ಒಂದು ಕಲೆಯೇ.

    ಅಂದಹಾಗೆ, ನಡೀರಿ ಎಲ್ಲಾದರೂ ಬಾಳೆ ಎಲೆ ಊಟ ಮಾಡಿಕೊಂಡು ಬರೋಣ...

    ReplyDelete
  3. ಚೆನ್ನಾಗಿದೆ.ಬಡಿಸಿದ ಬಾಲೆಗೆ 'ಸಾಲಂಕಾರ' ಅಂತ ಏನೋ ಒಂದು ಹೆಸರಿದೆ.
    ಈಗ ಹಬ್ಬಗಳಲ್ಲಿ ಇಷ್ಟೊಂದು ಬಗೆ ಮಾಡೋದು ಕಡಿಮೆ ಆದರೂ ಫುಲ್ ಆಸೆ ತೋರಿಸಿದ್ರಿ ನೀವು :)
    ಸ್ವರ್ಣಾ

    ReplyDelete
  4. ದೇಸಾಯಿ ಸರ್..ಹೌದು ..ಆ ಪ್ರಾಂತ್ಯದ ಭೋಜನ ಪರಂಪರೆ ಅಲ್ಲೇ ಚೆನ್ನ...ಧನ್ಯವಾದಗಳು ನಿಮ್ಮ ಅನಿಸಿಕೆಗೆ...

    ReplyDelete
  5. ಬದರಿ ಸರ್..ಮಾಡುವ ಊಟ ಮಾಡುವ..ಒಳ್ಳೆ ಬಾಲೆ ಎಲೆ ಊಟ ಮಾಡುವ..
    ಎಲ್ಲರನ್ನು ಸೇರಿಸಿ ಹಬ್ಬ ಮಾಡುವ!!!

    ReplyDelete
  6. ಸ್ವರ್ಣ ಮೇಡಂ..ಧನ್ಯವಾದಗಳು...ಊಟವೇ ಚೆನ್ನ ಊಟದ ನೋಟವು ಇನ್ನು ಚೆನ್ನ....ಅಲ್ಲವೇ..

    ReplyDelete
  7. ಒಳ್ಳೆ ಬ್ಯಾಟಿಂಗ್..ಚಿಕ್ಕಪ್ಪ...ಹೊಟ್ಟೆ ತುಂಬಾ ತುಂಬಾ ತುಂಬಾ ತುಂಬುವುದು..

    ReplyDelete
  8. ಎಲೆ ಇಡುವ ಕ್ರಮ ತಿಳಿಸಿ

    ReplyDelete