Thursday, August 9, 2012

ಕೃಷ್ಣ...ಕೃಷ್ಣ...ಕೃಷ್ಣ...ಶ್ರೀಕೃಷ್ಣ ಜನ್ಮಾಷ್ಟಮಿ...


ಕೃಷ್ಣ...ಕೃಷ್ಣ...ಕೃಷ್ಣ...

ಹೆಸರೇ ಒಂದು ಶಕ್ತಿ ಸಂಚಲನ ತರುವ ಹುಮ್ಮಸ್ಸು ಕೊಡುತ್ತೆ..ಕೃಷ್ಣನಂತ ಇನ್ನೊಬ್ಬ ಮೇಧಾವಿ ನಮ್ಮ ಇತಿಹಾಸದಲ್ಲಿ ದೊರಕದು..ಮಹಾನ್ ಜ್ಞಾನಿ ಚಾಣಕ್ಯ ಕೃಷ್ಣನ ಇನ್ನೊಂದು ನೆರಳು ಅನ್ನಬಹುದು..ಇದನ್ನ ಬಿಟ್ಟರೆ ಬೇರೆಯೆಲ್ಲು ಕಾಣ ಸಿಗೋಲ್ಲ..ಅಂಥಹ ಅದ್ಭುತ ವ್ಯಕ್ತಿತ್ವ...

ಬಾಲ್ಯದಿಂದಲೂ ಇಷ್ಟವಾಗುತಿದ್ದ ಇನ್ನೊಂದು ಚಿತ್ರ...ಕೃಷ್ಣ, ಮತ್ತು ಅರ್ಜುನ ರಥಾರೂಢರಾಗಿ ಕುರುಕ್ಷೇತ್ರದಲ್ಲಿ ಹರಿದಾಡುತಿರುವ ದೃಶ್ಯ..

ಈ ಚಿತ್ರವನ್ನ  ಗಮನಿಸಿದರೆ...  ಇದರಲ್ಲಿ ಪ್ರತಿಯೊಂದು ಕ್ರೀಯಾಶೀಲವಾಗಿದೆ..ಯಾವುದು ನಿಶ್ಚಲವಾಗಿಲ್ಲ..
ಧ್ವಜ ಲಾಂಛನದಲ್ಲಿ ಹನುಮಂತ ಬೆಟ್ಟ ಹೊತ್ತು ಸಾಗುತಿರುವುದು...
ರಥದ ಪರದೆ ಗಾಳಿಯಲ್ಲಿ ಹಾರುತಿದೆ..
ಶ್ವೇತಾಶ್ವಗಳು ಓಡುತ್ತಿವೆ..
ಅರ್ಜುನ ಬಾಣ ಹೂಡಲು ಸಿದ್ದನಾಗುತಿದ್ದಾನೆ..
ಸುತ್ತ ಮುತ್ತಲ ಸೈನಿಕರು ಯುದ್ಧದಲ್ಲಿ ಹೋರಾಡುತಿದ್ದಾರೆ
ಇವಕ್ಕೆಲ್ಲ ಕಳಶಪ್ರಾಯ... ಶ್ರೀ ಕೃಷ್ಣ ರಥವನ್ನು  ಮಂದಹಾಸದಿಂದ ಮುನ್ನಡೆಸುತಿದ್ದಾನೆ..

ಜೀವನದಲ್ಲಿ ಸಕ್ರಿಯರಾಗಿರಬೇಕು...ಕುಶಲತೆ, ಕ್ಷಮತೆ ಜಡವಾಗಿದ್ದಾಗ ಸಿಗುವುದಿಲ್ಲ..
ಹೊಸ ಹೊಸ ಅವಿಷ್ಕಾರ, ಚಿಂತನೆಗಳು ನಾಗಾಲೋಟದಿಂದ ನಮ್ಮಿಂದ ಹೊರಗೆ ಅಶ್ವಗಳ ರೂಪದಲ್ಲಿ ಹೊರ ಹೊಮ್ಮಿ, ಅರ್ಜುನನ ಬಾಣದ ಗುರಿಯ ತೀವ್ರತೆಯಲ್ಲಿ ,  ಹನುಮಂತನಲ್ಲಿ ಸುಪ್ತವಾಗಿ ಅಡಗಿದ ಸಾಮರ್ಥ್ಯದಂತೆ, ಶ್ರೀ ಕೃಷ್ಣನಂತ ಗುರು  ಹಿರಿಯರ ಮಾರ್ಗದರ್ಶನದಲ್ಲಿ ಸಾಗಿದರೆ ಜೀವನದ ಗುರಿ ಸದಾ ಹಣ್ಣಿನ ಮರದಲ್ಲಿ ದೊರಕುವ ರುಚಿಯಾದ ಹಣ್ಣಿನಷ್ಟೇ ಸ್ವಾದಿಷ್ಟ

ಶ್ರೀ ಕೃಷ್ಣ ಜೀವನ, ಸಂದೇಶ, ಕಾರ್ಯ ಸಾಧಿಸುವ ಪರಿ, ಚಾಣಕ್ಷತನ, ಬುದ್ದಿಮತ್ತೆ, ಸಮಯ ಪ್ರಜ್ಞೆ ಸದಾ ಅನುಕರಣೀಯ...

ಶಾಂತಿ, ನೆಮ್ಮದಿ, ಸಂತೋಷ, ಸ್ಪೂರ್ತಿ, ಕೀರ್ತಿ, ಯಶಸ್ಸಿಗೆ ಪ್ರೇರಕ, ಕಾರಕ ಶ್ರೀಕೃಷ್ಣ....

ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು...

10 comments:

 1. ನಿಮಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು...

  ReplyDelete
 2. ಆತ್ಮೀಯ ಶ್ರೀಕಾಂತನಿಗೆ,
  ಶ್ರೀ ಕೃಷ್ಣ ಜೀವನ, ಸಂದೇಶ................. ಶಾಂತಿ, ನೆಮ್ಮದಿ, ಸಂತೋಷ, ಸ್ಪೂರ್ತಿ, ಕೀರ್ತಿ, ಯಶಸ್ಸಿಗೆ ಆತ್ಮ ವಿಶ್ವಾಸ ಬೆಳಿಸಿಕೋ. ನಿನ್ನ ಕೆಲಸ ನೀನು ಮಾಡು, ಉಳಿದುದನ್ನು ನನಗೆ ಬಿಡು ಎನ್ನುತ್ತಾನೆ. ಇಷ್ಟು ಮಾಡುವ ಮನಸು ಮಾಡಿದರೆ ಜೀವನದಲ್ಲಿ ನೆಮ್ಮದಿ ಕಾಣಬಹುದು .
  ಸಮಯೋಚಿತ ಉತ್ತಮ ಲೇಖನ.
  ಪ್ರಕಾಶ್

  ReplyDelete
 3. ಗೋಕುಲಾಷ್ಟಮಿಯ ದಿವಸ ನೀವು ಪ್ರಕಟಿಸಿರುವ ಈ ಬರಹದಲ್ಲಿ ಕನ್ನಯ್ಯನ ರೂಪಗುಣ ಪರಿಚಯ ಮೆಚ್ಚುಗೆಯಾಯಿತು.

  ರಥದ ಕಲ್ಪನೆ ಮತ್ತು ಅದರ ವಿವರಣೆಯೂ ಚೆನ್ನ.

  ReplyDelete
 4. ಶ್ರೀಕಾಂತ್..

  ಪುರಾಣಗಳೆಂದರೆ ಕಥೆ ಎಂದುಕೊಡರೆ..

  ಒಂದು ಪಾತ್ರದ ಚಿತ್ರಣ ಈ "ಕೃಷ್ಣ ಅಂತ ತಿಳಿದುಕೊಂಡರೂ...

  ಎಷ್ಟು ಆಳವಾದ ವ್ಯಕ್ತಿತ್ವ ಇವನದು.. ಅಲ್ವಾ?
  ನಿಜಕ್ಕೂ ಕುತೂಹಲಕರ !!

  ReplyDelete
 5. ಧನ್ಯವಾದಗಳು ಗಿರಿ...ನಿಮಗೂ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು

  ReplyDelete
 6. ಪ್ರಕಾಶ್ ಚಿಕ್ಕಪ್ಪ..
  ಕೃಷ್ಣ ನನ್ನ ಸಾರ್ವಾಕಾಲಿಕ ಪ್ರೇರಣ ಶಕ್ತಿ..ಆ ಪಾತ್ರದಿಂದ ಸಿಗುವ ಪ್ರೇರಕ ಶಕ್ತಿ..ಅವರ್ಣನೀಯ....

  ReplyDelete
 7. ಬದರಿ ಸರ್..ಕೃಷ್ಣ ಪಾತ್ರ ಎಲ್ಲ ತರದಲ್ಲೂ ತರ್ಕಬದ್ಧವಾಗಿದೆ..ಪ್ರತಿಯೊಂದು ಸಮಸ್ಯೆಗೂ ಉತ್ತರ..ಪ್ರತಿ ಉತ್ತರಕ್ಕೂ ಸರಿಯಾದ ತರ್ಕ...ಇವೆಲ್ಲ ಒಬ್ಬನ ಬಳಿಯಲ್ಲಿ ಇರೋದು ಕೃಷ್ಣನಲ್ಲಿ ಮಾತ್ರ...ಧನ್ಯವಾದಗಳು

  ReplyDelete
 8. ಪ್ರಕಾಶಣ್ಣ ಒಂದು ಪಾತ್ರದಾರಿ ಮಹಾಭಾರತ ಶುರುವಾಗಿ ಹಲವಾರು ವರುಷಗಳ ನಂತರ ಹಸ್ತಿನಾವತಿಗೆ ಬರುವ ಕೃಷ್ಣ...ಬಂದ ನಂತರ ಆ ಪಾತ್ರವೇ ಸೂತ್ರಧಾರಿಯಾಗುವುದು ಬಲು ಸುಂದರ..ಆ ಶಕ್ತಿ, ಯುಕ್ತಿ...ಅಬ್ಬ ಕೃಷ್ಣನಿಗೆ ಕೃಷ್ಣನೇ ಸಾಟಿ... ಧನ್ಯವಾದಗಳು...

  ReplyDelete
 9. ಧನ್ಯವಾದಗಳು ದಿನೇಶ್ ಹೆಗ್ಗಡೆ ಸರ್..ನಿಮಗೂ ಶುಭಾಶಯಗಳು..

  ReplyDelete