Sunday, July 15, 2012

ನನ್ನ ಸೋದರತ್ತೆ ಗೌರಿ ಅತ್ತೆಯಾ ಒಂದು ವರ್ಷದ ನೆನಪು


ಶ್ರೀಕಾಂತ...ಈಗ ನೀನು ನೋಡಬಹುದು...!!!!

ಯಾರದು ಈ ಧ್ವನಿ ಎಂದು ತಿರುಗಿ ನೋಡಿದಾಗ..ನಾಗರಾಜ ಚಿಕ್ಕಪ್ಪ..ಹೇಳಿದ ಮಾತಿದು...

ಹಾಗೆ ತಲೆ ಎತ್ತಿ ಗೌರಿ ಅತ್ತೆ ಫೋಟೋ ನೋಡಿದೆ...ಚಿಕ್ಕಪ್ಪ ಹೇಳಿದ್ದು ನಿಜ ಎನ್ನಿಸಿತು..

ಗೌರಿ ಅತ್ತೆ ಅವರ ಭಾವ ಚಿತ್ರದ ಮುಖೇನ ಹೇಳಿದ ಮಾತು ಹಾಗೆ ತೇಲಿ ಬಂತು...

ಕೋರವಂಗಲದ ಎಲ್ಲ ಸದಸ್ಯರಿಗೂ ನನ್ನ ಆಶೀರ್ವಾದಗಳು...
ನಾನು ಇಂದು ನಿಮ್ಮನ್ನು ಅಗಲಿ ಸರಿ ಸುಮಾರು ಒಂದು ವರುಷ ಆಯಿತು...
ನನ್ನನ್ನು ಪ್ರೀತಿಸುವ ಕೆಲ ಹೃದಯಗಳಿಂದ..ನನ್ನ ಕಾರ್ಯಗಳು ನಿರ್ವಿಘ್ನವಾಗಿ ನೆರವೇರಿತು...
ನನ್ನ ಅಪ್ಪ, ಅಮ್ಮ, ನನ್ನ ಯಜಮಾನರು, ನನ್ನ ಮಗಳು, ಅಳಿಯ, ತಂಗಿಯ ಗಂಡ, ಇಬ್ಬರು ತಮ್ಮಂದಿರು ಇವರೆನಲ್ಲ ಸೇರುತಿದ್ದೇನೆ ಎಂದು ಒಂದು ಕಡೆ ಸಂತೋಷ..

ಇನ್ನೊಂದು ಕಡೆ ನಿಮ್ಮನೆಲ್ಲ ಬಿಟ್ಟು ಬಂದೆನಲ್ಲ ಇನ್ನು ಭಾರವಾದ ಮನಸು..ಏನು ಮಾಡುವುದು..
ಜಾತಸ್ಯ ಮರಣ ಧ್ರುವಂ...
ಹುಟ್ಟಿದವರು ಒಂದು ದಿನ ಹೋಗಲೇಬೇಕು..ಹೋದವರು ತಿರುಗಿ ಬರಲೇ ಬೇಕು...

ಕಾರ್ಯಕರಮವು ಅಚ್ಚುಕಟ್ಟಾಗಿ ನೆರವೇರಿತು...
ನನ್ನ ತಮ್ಮಂದಿರು, ಅವರ ಪತ್ನಿಯರು, ಅವರ ಮಕ್ಕಳು ಬಂದಿದ್ದು ಬಹಳ ಖುಷಿಯಾಯಿತು...
ನಿಮ್ಮೆಲ್ಲರ ಅಭಿಮಾನಕ್ಕೆ ನನ್ನ ಆಶೀರ್ವಾದಗಳು...
ಇನ್ನೇನು ಕೆಲ ತಿಂಗಳಲ್ಲಿ ಮಂಜಣ್ಣ ಬರುತ್ತಿದ್ದಾನೆ ಎನ್ನುವ ವಿಷಯ ತಿಳಿದು ದುಃಖವಾಯಿತು..

ನಿಮ್ಮೆಲ್ಲರಿಗೂ ನನ್ನ ಆಶೀರ್ವಾದಗಳು..ಜೀವನದಲ್ಲಿ ನೀವು ಕಾಣುವ ಕನಸುಗಳು, ಇಟ್ಟುಕೊಂಡಿರುವ ಗುರಿ ಎಲ್ಲವು ನೆರವೇರಲಿ ಎಂದು ಆಶಿಸುತ್ತೇನೆ..ಹಾಗು ಹಾರೈಸುತ್ತೇನೆ...ಮತ್ತೆ ಬರುತ್ತೇನೆ...

ಇಂತಿ ನಿಮ್ಮ ಗೌರಿ ಅಕ್ಕ (ಅತ್ತೆ, ಅಜ್ಜಿ, ಅತ್ತಿಗೆ, ಹೀಗೆ ನೂರಾರು ಭಾವನೆ ಬೆಸೆಯುವ ಬಾಂಧವ್ಯಗಳು)

3 comments:

  1. ಯಾಕೋ ಮನಸ್ಸು ಆರ್ಧ್ರವಾಯಿತು. ಗೌರಿ ಅಕ್ಕನ ಫೋಟೋ ಮತ್ತು ಅವರ ಮಾತುಗಳ ಹಿಂದಿನ ಕಾಳಜಿ ಆಕೆಯ ದೊಡ್ಡತನದ ಧ್ಯೋತಕ.

    ReplyDelete
  2. ಧನ್ಯವಾದಗಳು ಬದರಿ ಸರ್...ಹಿರಿಯ ಚೇತನಗಳ ಬಗ್ಗೆ ಒಂದೆರಡು ಮಾತುಗಳು, ನೆನಪು, ಒಡನಾಟ..ಮನಸಿಗೆ, ಜೀವಕ್ಕೆ ಎಷ್ಟೋ ಹುರುಪು ತಂದು ಕೊಡುತ್ತೆ...

    ReplyDelete