ಮೊದಲನೇ ಅಂಕ...ಪರದೆಯ ಹಿಂದೆ...
ಒಂದು ಕುಟುಂಬದಲ್ಲಿ ಎಷ್ಟು ಸಹಾಬಾಳ್ವೆ ಇರಬಹುದು ಇರಬೇಕು..ಇದೆಲ್ಲ ಯೋಚನೆ ಮಾಡುವುದೇ ಅಲ್ಲ..ಬನ್ನಿ ಒಮ್ಮೆ ಬ್ಲಾಗ್ ಲೋಕಕ್ಕೆ...ದುಮುಕಿ ಒಂದು ಅಲೆಯ ಜೊತೆ ಈ ಕಡಲಿಗೆ..ಸಿಗುವ ಮಜವೇ ಬೇರೆ..
ಬನ್ನಿ..ಮುತ್ತು ಆಯ್ದುಕೊಳ್ಳುವ ಈ ಸಂಭ್ರಮದ ಅಭೂತಪೂರ್ವ ಕ್ಷಣಗಳಿಂದ.....
 |
| ಅಂದದ ಸಭಾಂಗಣ |
ಜೊತೆ ಜೊತೆಯಲ್ಲಿ ಹೆಜ್ಜೆ ಹಾಕಿ ನಲಿಯುವ ಸಂಭ್ರಮ..
 |
| ಜೊತೆಯಲಿ ಜೊತೆ ಜೊತೆಯಲಿ |
ಹೆಣ್ಣನ್ನು ಸಿಂಗರಿಸಿ...ಮಂಟಪಕ್ಕೆ ಕರೆತರುವ ದೃಶ್ಯ...ಬಹು ಸುಂದರ...
 |
| ಸೋದರಮಾವಯ್ಯ...ಕರೆ ತನ್ನಿರಯ್ಯ ಧಾರೆಗೆ ವಧುವನ್ನು... |
ಅಪ್ಪಿಕೋ ಚಳುವಳಿಯ ಭಾವುಕ ಕ್ಷಣಗಳು..ತಮ್ಮ ಗೆಳೆಯರನ್ನ ಭೇಟಿ ನೀಡಿದ ಮಧುರ ಕ್ಷಣಗಳು
ನಾವೆಲ್ಲಾ ಇರುವಾಗ ಸಭಾಂಗಣ ತುಂಬಲು ಸಾಹಸ ಪಡಬೇಕೆ..ನಾವೇ ಗೆಲುವು..ಗೆಲುವೆ ನಾವು...
 |
| ಯೆಡಿ- ಬಡಿ ಊರಪ್ಪ... |
 |
| ಬ್ಯಾಡ್ರಿ....ಬದರಿ...ಬನ್ನಿ ಇತ್ಲಾಗೆ...ನೀವಿಲ್ಲದೆ ಜನ ಬರರು.... |
ಪುಟಾಣಿಗಳು ಸಂಭ್ರಮದಿಂದ ನಲಿದಾಡಿದ ಆ ಕ್ಷಣಗಳು
 |
| ಮುದ್ದು ಮರಿ... |
 |
| ಶೀತಲ್ ಗಿಂತ ಇರುವುದೇ ತಣ್ಣಗೆ |
ಮಧುರವಾದ ಘಳಿಗೆಗಳಿಗೆ ಫೋಟೋ ಬೇಡವೇ ನಾನಿದ್ದೇನೆ....
 |
| ಬಾಲು ಸರ್..ಅವರ ತುಂಟು ಕಣ್ಣಿನ ಜೊತೆ... |
ಕೆಲಸದ ಒತ್ತಡದ ನಡುವೆ ಕೂಡ ಈ ಮಧುರ ಸಂಗಮಕ್ಕೆ ಸಾಕ್ಷಿಯಾದವರು
ಪ್ರೇಕ್ಷಕರಿಂದ..ಮೊರೆತ ಕೇಳುತಿತ್ತು...ಪುಸ್ತಕದ ಬಿಡುಗಡೆ ಕ್ಷಣ ಹತ್ತಿರ ಬಂತು...
 |
| ಸಭಿಕರು...ಬ್ಲಾಗಿಗರು...ಚಿತ್ರಕೃಪೆ - ದಿಗ್ವಾಸ್ ಹೆಗ್ಗಡೆ.. |
ಪುಸ್ತಕಗಳ ಸರದಾರರು ಸಭೆಯ ಮುಖ್ಯ ಅತಿಥಿಗಳ ಜೊತೆಯಲ್ಲಿ ನಿಂತರು...
 |
| ಲೇಖಕರು, ಅತಿಥಿಗಳು.. ..ಚಿತ್ರಕೃಪೆ - ದಿಗ್ವಾಸ್ ಹೆಗ್ಗಡೆ.. |
ಒಂದೊಂದಾಗಿ ಪುಸ್ತಕಗಳ ಪದರ ಬಿಚ್ಚುತ್ತಾ...ಭಾವನೆಗಳನ್ನ ಹರವಿ ಹಾಕಲು ಶುರು ಮಾಡಿದರು...ಎಲ್ಲ ಪುಸ್ತಕಗಳು ಲೋಕಾರ್ಪಣೆಯಾಯಿತು..
 |
| ಲೇಖಕರು, ಅತಿಥಿಗಳು.. ..ಚಿತ್ರಕೃಪೆ - ದಿಗ್ವಾಸ್ ಹೆಗ್ಗಡೆ.. |
ತಮ್ಮ ತಮ್ಮ ಅನಿಸಿಕೆಗಳು, ಭಾವನೆಗಳು, ಅಂತರಂಗದ ಅಭಿಮಾನಗಳು ಬುಗ್ಗೆಯಾಗಿ ಹರಿಯತೊಡಗಿತು...
ಸಾರ್ಥಕ ಕ್ಷಣಗಳಿಗೆ ಕಾರಣವಾಗಿದ್ದು ನೂರಾರು ಸಾವಿರಾರು ಕಣ್ಣುಗಳು..
 |
| ಸಭಿಕರು...ಬ್ಲಾಗಿಗರು...ಚಿತ್ರಕೃಪೆ - ದಿಗ್ವಾಸ್ ಹೆಗ್ಗಡೆ.. |
 |
| ಸಭಿಕರು...ಬ್ಲಾಗಿಗರು...ಚಿತ್ರಕೃಪೆ - ದಿಗ್ವಾಸ್ ಹೆಗ್ಗಡೆ.. |
ಇಂತಹ ಒಂದು ಅಮೋಘ ಕ್ಷಣಗಳಿಗೆ ಕಾರಣವಾದ ಸಭಾಂಗಣ ಖುಷಿಯಿಂದ ಆನಂದ
ಭಾಷ್ಪ ಸುರಿಸಿತು...
ಧನ್ಯ ಬ್ಲಾಗಿಗರ ಲೋಕ..ಧನ್ಯ ಕವಿಗಳ ನಾಕ...ಇದುವೇ ಅಲ್ಲವೇ ಸುಂದರ ಜಗತ್ತು...
ಗೆಳೆಯರೇ ಮತ್ತೆ ಇನ್ನೊಂದು ಇಂತಹ ಕ್ಷಣಗಳಿಗೆ ಸಾಕ್ಷಿಯಾಗಲು ಮತ್ತೆ ಕಾಯುತ್ತೇನೆ..
ಹೋಗಿ ಬನ್ನಿ ಎಂದಿತು...ವಾಡಿಯಾ ಸಭಾಂಗಣ...
 |
| ಆನಂದ ಭಾಷ್ಪದೊಂದಿಗೆ... ವಾಡಿಯಾ ಸಭಾಂಗಣ..... |