ಗಂಧರ್ವ ಲೋಕದಲ್ಲಿ ಮೆಲ್ಲನೆ ಕಲರವ ಏಳುತಿತ್ತು .. ಬದುಕಿನ ಕ್ಷಣಗಳು ಒಂದು ರೀತಿಯಲ್ಲಿ ತಕ್ಕಡಿಯಿದ್ದಂತೆ.. ಒಂದು ಕಡೆ ಭಾರವಾದರೆ ಇನ್ನೊಂದು ಕಡೆ ಹಗುರವಾಗಿ ತಕ್ಕಡಿ ಮೇಲೇರುತ್ತದೆ.
ನಿಜ. ಜಾನಕಿಯಮ್ಮ, ಜಾನಕೀ, ಜಾನಕಿಗಾರು, ಎಸ್ ಜಾನಕೀ, ಜಾನಕೀ ಮೇಡಂ, ದಕ್ಷಿಣಭಾರತದ ಕೋಗಿಲೆ ಅಂತೆಲ್ಲಾ ಎಸ್ ಜಾನಕಿ ಕರುನಾಡಿನ ಸರಕಾರದ ಬಗ್ಗೆ ಅಸಮಾಧಾನ ಹೊಂದಿದ್ದರು ಹಾಗೆ ಕರುನಾಡಿನ ಸಂಗೀತ ಪ್ರೇಮಿಗಳ ಬಗ್ಗೆ ಸಂತೋಷ ಹೊಂದಿದ್ದರು..
ನಲವತ್ತು ಸಾವಿರಕ್ಕೂ ಹೆಚ್ಚಿನ ಹಾಡುಗಳ ಅರಸಿಯಾಗಿದ್ದ ಜಾನಕಿಯಮ್ಮ ಅನೇಕಾನೇಕ ಸಂದರ್ಶನದಲ್ಲಿ ಅವರು ಹೇಳುತ್ತಿದ್ದ ಒಂದು ಪ್ರಶ್ನೆಗೆ ಉತ್ತರ
"ಶಿವ ಶಿವ ಎನ್ನದ ನಾಲಿಗೆ ಏಕೆ
ಶಿವನನು ಸ್ಮರಿಸದ ಜೀವವು ಏಕೆ"
ಶಿವನನು ಸ್ಮರಿಸದ ಜೀವವು ಏಕೆ"
ಹೇಮಾವತಿ ಚಿತ್ರದ ಈ ಹಾಡು ಅತಿ ಕ್ಲಿಷ್ಟಕರ ಹಾಡು ಅಂತ ಹೇಳಿದ್ದು ಕರುನಾಡ ಚಿತ್ರ ಸಂಗೀತ ಪ್ರೇಮಿಗಳಿಗೆ ಒಂದು ಸನ್ಮಾನ ಹೌದು..
ಅನೇಕ ಮಹನೀಯ ಸಂಗೀತ ನಿರ್ದೇಶಕರ ಸಂಗೀತ ಸಂಯೋಜನೆಯಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದ ಜಾನಕಿಯಮ್ಮನವರಿಗೆ ಕಷ್ಟ ಅನಿಸಿದ ಹಾಡಿನ ಸಂಗೀತ ನಿರ್ದೇಶಕರು ಬೇರೆ ಯಾರೂ ಅಲ್ಲ
ಮಾಲ್ಗುಡಿ ಡೇಸ್ ಧಾರಾವಾಹಿಯ ತ ನಾ ನ ತ ನ ನಾ ಎಂಬ ಕೊಳಲಿನ ಹಿನ್ನೆಲೆ ಸಂಗೀತ ನೀಡಿದ್ದ ಶ್ರೀ ಎಲ್ ವೈದ್ಯನಾಥನ್ ಅವರು..
ಇದು ಕರುನಾಡಿನ ಚಿತ್ರಪ್ರೇಮಿಗಳಿಗೆ ಸಂದ ದೊಡ್ಡ ಗೌರವ..
ಕರುನಾಡಿನ ಚಿತ್ರಪ್ರೇಮಿಗಳು ಜಾನಕಿಯಮ್ಮನವರನ್ನು ತಮ್ಮ ಎದೆಯ ಸಿಂಹಾಸನದಲ್ಲಿ ಮಹಾರಾಣಿಯನ್ನಾಗಿಯೇ ಮೆರೆಸಿದ್ದಾರೆ.. ಮತ್ತು ಆ ಜಾಗದಲ್ಲಿ ಅವರು ಸದಾ ಇರುತ್ತಾರೆ..
ಬೆಳಿಗ್ಗೆ "ಗಜಮುಖನೆ ಗಣಪತಿಯೇ ನಿನಗೆ ವಂದನೆ" ಎಂದು ಶುರುವಾಗುವ ಗೀತೆಯಿಂದ ಶುರುವಾದರೆ...ಮೂಡಲ ಮನೆಯ ಮುತ್ತಿನ ನೀರನು ಎರಕವಾ ಹೊಯ್ದ" ಅಂತ ಸೂರ್ಯನನ್ನು ಎಬ್ಬಿಸಿ "ಪೂಜಿಸಲೆಂದೇ ಹೂಗಳ ತಂದೆ ದರುಶನ ಕೋರಿ ನಾ ನಿಂದೆ ತೆರೆಯೋ ಬಾಗಿಲನು ರಾಮ" ಎನ್ನುತ್ತಲೇ "ನನ್ನ ಆಸೆ ಹಣ್ಣಾಗಿ ನನ್ನ ಬಾಳ ಕಣ್ಣಾಗಿ" ಎಂದು ರಮಿಸುವ ಹಾಡುಗಳಿಂದ ಹಿಡಿದು "ತಂಗಾಳಿಯಲ್ಲಿ ನಾನು ತೇಲಿ ಬಂದೆ" ಎಂದು ಬೆದರಿಸುವ ಹಾಡಿಗೂ ಸಲ್ಲುತ್ತಾರೆ.. "ಭೂಮಿಯೇ ಬಿರಿಯಲಿ ಗಗನವೇ ನಡುಗಲಿ.. ಬಿಡೆನು ನಿನ್ನ ಪಾದ" ಎಂದು ದೇವರಿಗೆ ಸವಾಲೆಸೆಯುವ ಹಾಡಿಗೂ ಸೈ..
ಇಂತಹ ಅಮರಗಾಯಕಿ ಅನೇಕಾನೇಕ ಹಾಡುಗಳಿಗೆ ದನಿಯಾಗಿದ್ದಾರೆ.. ಅದರಲ್ಲೂ ಎಸ್ ಜಾನಕೀ, ಎಸ್ ಪಿ ಬಾಲಸುಬ್ರಮಣ್ಯಂ, ಚಿ ಉದಯಶಂಕರ್, ರಾಜನ್ ನಾಗೇಂದ್ರ .. ಈ ಅದ್ಭುತ ಜೋಡಿ ಕೊಟ್ಟ ನೂರಾರು ಹಾಡುಗಳು ಎಂದಿಗೂ ಎಂದೆದಿಗೂ ಜೀವಂತ..
ಜಾನಕಿಯಮ್ಮ ದನಿ ನೀಡಿದ ಹಾಡುಗಳನ್ನು ಸುಮ್ಮನೆ ಹಾಗೆ ಪಟ್ಟಿ ಮಾಡಿದರೆ
ಜೀವ ವೀಣೆ ನೀಡು ಮಿಡಿತದ ಸಂಗೀತ - ಹೊಂಬಿಸಿಲು
ಹೂವಿಂದ ಹೂವಿಗೆ ಹಾರುವ ದುಂಬಿ - ಹೊಂಬಿಸಿಲು
ಒಲವಿನ ಗೆಳಯನೆ ನಿನಗೆ ಕೈ ಮುಗಿವೆ ನಾ ಬರೆವೆ - ನಾನಿರುವುದೇ ನಿನಗಾಗಿ
ನಿನ್ನ ರೂಪು ಎದೆಯ ಕಲಕಿ - ಪರಸಂಗದ ಗೆಂಡೆತಿಮ್ಮ
ಆಸೆಯ ಭಾವ ಒಲವಿನ ಜೀವ - ಮಾಂಗಲ್ಯ ಭಾಗ್ಯ (ಜಾನಕಿಯಮ್ಮನ ದನಿ)
ನಿನ್ನ ಸವಿ ನೆನಪೇ ಮನದಲ್ಲಿ ಆರಾಧನೆ - ಅನುರಾಗ ಬಂಧನ
ಮನೆಯನ್ನು ಬೆಳಗಿದೆ ಇಂದು - ಚಂದನದ ಗೊಂಬೆ
ಪೂಜಿಸಲೆಂದೇ ಹೂಗಳ ತಂದೆ - ಎರಡು ಕನಸು
ಬಂದೆಯ ಬಾಳಿನ ಬೆಳಕಾಗಿ - ಅವಳ ಹೆಜ್ಜೆ
ನನ್ನ ಅಸೆ ಹಣ್ಣಾಗಿ ನನ್ನ ಬಾಳ ಕಣ್ಣಾದೆ - ಆಟೋರಾಜ
ಹೊಸ ಬಾಳು ನಿನ್ನಿಂದ ನೀ ತಂದೆ ಆನಂದ - ಆಟೋರಾಜ
ನಾನು ನೀನು ಒಂದಾದ ಮೇಲೆ - ನಾ ನಿನ್ನ ಬಿಡಲಾರೆ
ಒಲಿದ ಜೀವ ಜೊತೆಯಲಿರಲು - ಬೆಂಕಿಯ ಬಲೆ
ಬಿಸಿಲಾದರೇನು ಮಳೆಯಾದರೇನು - ಬೆಂಕಿಯ ಬಲೆ
ನನ್ನೆದೆ ಕೋಗಿಲೆಯ - ಒಲವು ಗೆಲುವು
ಕನಸಲ್ಲಿ ಬಂದವನ್ಯಾರೆ ಮನದಲ್ಲಿ ನಿಂದವನ್ಯಾರೆ - ಶ್ರುತಿ ಸೇರಿದಾಗ
ಭಾರತ ಭೂಶಿರ ಮಂದಿರ - ಉಪಾಸನೆ (ಎರಡೂ ಆವೃತ್ತಿ)
ಆಚಾರವಿಲ್ಲದ ನಾಲಿಗೆ - ಉಪಾಸನೆ
ನಂಬಿದೆ ನಿನ್ನ ನಾದ ದೇವತೆಯೇ - ಸಂಧ್ಯಾರಾಗ
ಮೂಡಲ ಮನೆಯ ಮುತ್ತಿನ ನೀರನು - ಬೆಳ್ಳಿ ಮೋಡ
ಗಗನವು ಎಲ್ಲೋ ಭೂಮಿಯು ಎಲ್ಲೋ - ಗೆಜ್ಜೆ ಪೂಜೆ
ಪಂಚಮ ವೇದ ಪ್ರೇಮದ ನಾದ - ಗೆಜ್ಜೆ ಪೂಜೆ
ಬಾನಲ್ಲುನೀನೆ ಭುವಿಯಲ್ಲೂ ನೀನು * ಬಯಲುದಾರಿ
ಒಮ್ಮೆನಿನ್ನನ್ನು ಕಣ್ತುಂಬ - ಗಾಳಿ ಮಾತು
ದೇವರ ಆಟ ಬಲ್ಲವರಾರು - ಅವಳ ಹೆಜ್ಜೆ
ನಗಿಸಲು ನೀನು ನಗುವೆನು ನಾನು - ಗಾಳಿಮಾತು
ನನ್ನ ಜೊತೆಗೆ ನೀನಿರಲು - ಶಿಖಾರಿ
ಆಸೆಗಳು ಕೆಣಕುತಿವೆ - ನಾನೆ ರಾಜ
ಅರಳಿದೆ ತನು ಮನ - ಅಪೂರ್ವ ಸಂಗಮ
ನಾ ಹೇಗೆ ಬಣ್ಣಿಸಲಿ - ಭಕ್ತ ಪ್ರಹ್ಲಾದ
ಮಧುಮಾಸ ಚಂದ್ರಮ - ವಿಜಯ ವಾಣಿ
ತಾಯಿಯ ತಂದೆಯ ಮಮತೆ ವಾತ್ಸಲ್ಯ - ಮಧುರ ಸಂಗಮ
ಏಕೋ ಈ ಕೋಪ ಶಂಕರ - ಭಕ್ತ ಸಿರಿಯಾಳ
ಮಹಾಲಕ್ಷ್ಮಿ ಮನೆಗೆ ಬಾರಮ್ಮ - ಲಕ್ಷ್ಮಿ ಕಟಾಕ್ಷ
ಎಲ್ಲೂ ಹೋಗಲ್ಲ ಮಾಮ - ಗಂಧದ ಗುಡಿ
ಹೀಗೆ ಪಟ್ಟಿ ಮಾಡುತ್ತಲೇ ಇದ್ದೆ ... ಆಗ ಮಹೇಶ್ ಮತ್ತು ಶ್ರುತಿ ಇಬ್ಬರೂ ... ಜಾನಕಿಯಮ್ಮನವರ ಈ ಸಂಗೀತ ಸಂಜೆಗೆ ನಿಮಗೆಲ್ಲ ಸ್ವಾಗತ.. ಅದ್ಭುತ ಗೀತೆಗಳನ್ನು ಹಾದಿ ನಮ್ಮನ್ನು ರಂಜಿಸಿದ ಜಾನಕಿಯಮ್ಮನವರಿಗೆ ಇದು ಒಂದು ಅವರದೇ ಹಾಡುಗಳಿಂದ ಪುಷ್ಪಾರ್ಚನೆ ಎಂದಾಗ ಮತ್ತೆ ಧರೆಗಿಳಿದು ಬಂದೆ..
ಗಂಧರ್ವ ಲೋಕದಲ್ಲಿ ಮೆಲ್ಲನೆ ಕಲರವ ಏಳುತಿತ್ತು ..ಎಲ್ಲರೂ ಜಾನಕಿಯಮ್ಮನವರನ್ನು ಸ್ವಾಗತಿಸಲು "ತೆರೆದಿದೆ ಮನೆ ಓ ಬಾ ಅತಿಥಿ" ಎನ್ನುತ್ತಾ ಹಾಡತೊಡಗಿದರು ಅವರನ್ನು ನೋಡಿರದ ಆದರೆ ಅವರ ಗಾಯನದ ಮಾಧುರ್ಯವನ್ನು ಸವಿದಿದ್ದ ಕೆಲ ಗಂಧರ್ವರು "ಒಮ್ಮೆ ನಿನ್ನನ್ನು ಕಣ್ ತುಂಬಾ ಕಾಣುವ ಆಸೆ" ಅಂತ ತಮ್ಮ ಮನದಾಳದ ಆಸೆಯನ್ನು..ಹಾಡಿನ ಮೂಲಕ ತೆಗೆದಿಟ್ಟರು..
ಆಗ ಗಂಧರ್ವ ಲೋಕದ ದೊರೆ ಜಾನಕಿಯಮ್ಮನವರನ್ನು ಪರಿಚಯಿಸುತ್ತಾ "ಯಾವ ಶಿಲ್ಪಿ ಕಂಡ ಕನಸು" ಅಂತ ಪರಿಚಯ ಮಾಡಿಕೊಡುತ್ತ್ತಾ "ಒರು ಸನಮ್ ತೂಂಗಿರುಚ್ಚೆ" ಅಂತ ಅದ್ಭುತ ಶಕ್ತಿ ನಿಮ್ಮ ಗಾಯನದಲ್ಲಿ ಇದೆ ಎಂದರು..
ನಲವತ್ತು ಸಾವಿರಕ್ಕೂ ಹೆಚ್ಚಿನ ಹಾಡುಗಳಲ್ಲಿ "ಬರೆದೆ ನೀನು ನಿನ್ನ ಹೆಸರು" ಅಂದರು.. ಗಾನ ಸರಸ್ವತಿ ನೀವು "ಸುಂದರಿ ಕಣ್ಣಾ..." ಎಂದರೆ ನಿಮ್ಮ ಹಾಡುಗಳನ್ನು ಕೇಳುತ್ತಾ ಗಂಧರ್ವ ಲೋಕವು "ನಗು ಎಂದಿದೆ",,, ಅಂದರೆ ಮಾತಾಡುವ ಪ್ರತಿ ಮಾತು "ಈ ಸಂಭಾಷಣೆ"ಯಂತೆ.. ಸುಮಧುರವಾಗಿದೆ ಎಂದರು
ಇಂಥ ಅದ್ಭುತ ಗಾನ ಸುಧೆಯನ್ನು ಕೇಳುತ್ತಾ ಕೇಳುತ್ತ "ಗಗನವು ಎಲ್ಲೋ .. ಭೂಮಿಯು ಎಲ್ಲೋ ಒಂದು ಅರಿಯೆನಾ" ಅನಿಸಿತು.. ಆದರೂ "ಒಂದೇ ಒಂದು ಆಸೆಯು" ಅಂತ ಕೇಳಬೇಕೆನಿಸಿದಾಗ ಮನದಲ್ಲಿ ಮೂಡಿದ್ದು "ಆಕಾಶ ದೀಪವು ನೀನು.. ನಿನ್ನ ಕಂಡಾಗ ಸಂತೋಷವೇನು".. ಅನಿಸಿತು.. ಜೊತೆಗೆ ನಿಮ್ಮ ಹಾಡುಗಳನ್ನು ಕೇಳುತ್ತ ಕೇಳುತ್ತ ಕಣ್ಣು ಮುಚ್ಚಿಕೊಂಡರೆ ಆಗ ಭಾವದಲ್ಲಿ ಮೂಡುವುದು "ನಗುವ ನಯನ ಮಧುರ ಮೌನ"... ಜೊತೆಯಲ್ಲಿ ಮನದೊಳಗೆ ಜೋರಾಗಿ ನಿಮ್ಮ ಬಗ್ಗೆ ಹೇಳುವುದು "ಸಿರಿಮಲ್ಲೇ ಪೂವಾ"...
ಆ ನಾದಕ್ಕೆ ಸಾಟಿಯಾಗಿರೋದು ಯಾವುದು ಅದಕ್ಕೆಆ ಅಲ್ವೇ ನೀವು ಹಾಡಿದ್ದು "ಪಂಚಮವೇದ ಪ್ರೇಮದ ನಾದ" ಮತ್ತು ಆ ಸಂಗೀತ ಮೌನದಲ್ಲಿ ಮೂಡುವ ರಾಗ ಹಾಡೋದು "ಮೌನಮೇ .." ಅದನ್ನು ಕೇಳುತ್ತಾ ಕೇಳುತ್ತಾ ಕೇಳುತ್ತಾ ಸೂರ್ಯೋದಯವನ್ನು ನೋಡುತ್ತಿದ್ದರೆ :"ಮೂಡಲ ಮನೆಯ ಮುತ್ತಿನ ನೀರಿನ ಎರಕ" ಹೊಯ್ದದ್ದು ಕಾಣುತ್ತದೆ ಮತ್ತು ನಮ್ಮೆಲ್ಲರ "ಜೀವ ಹೂವಾಗಿದೆ" ಅನಿಸುತ್ತದೆ
ನಿಮ್ಮೊಳಗಿನ ಗಾಯನದ ತಾಯಿಯನ್ನು ನೆನೆಯುತ್ತಾ "ಚಿನ್ನ ತಾಯ್" ಎನ್ನುತ್ತಾ ತಾಯಿಯ ಗುಣಗಾನವನ್ನು "ಜೊತೆಯಲಿ ಜೊತೆ ಜೊತೆಯಲಿ".. ಮಾಡಬೇಕೆನಿಸುತ್ತದೆ .. ಏಕೆಂದರೆ "ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ" ಅಂದರೆ ನಿಮ್ಮ ಸಂಗೀತದ ಪ್ರಭಾವವೇ ಕಾಣುತ್ತದೆ..
"ದೀಪವು ನಿನ್ನದೆ ಗಾಳಿಯು ನಿನ್ನದೇ ಆರದಿರಲಿ ಬೆಳಕು" ಎಂಬ.. ಹಾಡಿನಂತೆ .. ಗಾಯನ ನಿಮ್ಮದು.. ದನಿಯೂ ನಿಮ್ಮದು ಸಾಗುತ್ತಿರಲಿ ಈ ಸಂಗೀತದ ಬದುಕು .. ಇದು ಮುಂದುವರಿಯುತ್ತಲೇ.. ಇರುತ್ತದೆ..
ಸಪ್ತಸ್ವರಗಳು ಇರುವ ತನಕ .. ಜಾನಕಿಯಮ್ಮ ಎಂದಿಗೂ ಜೀವಂತ..
ಈ ಅದ್ಭುತ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿದ COUPLE RAAGA ಸರದಾರರಾದ ಮಹೇಶ್ ಮತ್ತು ಶೃತಿ ಹಾಗೂ ಈ ಕಾರ್ಯಕ್ರಮಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಸಹೃದಯ ಸಂಗೀತ ಪ್ರೇಮಿಗಳಿಗೆ ಮತ್ತು ARTISAM ಸಭಾಂಗಣದ ರೂವಾರಿಗಳಿಗೆ ಧನ್ಯವಾದಗಳು..
ಇದರ ಜೊತೆಯಲ್ಲಿ ಮಹೇಶ್ ಮತ್ತು ಶೃತಿಯವರ ಗಾಯನದ ಬದುಕಿಗೆ ಭದ್ರ ಬುನಾದಿ ಹಾಕಿಕೊಟ್ಟು ತೀರಾ ಇತ್ತೀಚಿಗಷ್ಟೇ ಗಂಧರ್ವಲೋಕಕ್ಕೆ ಪಯಣಿಸಿದ ಶ್ರೀ ಮ್ಯಾಂಡೊಲಿನ್ ಪ್ರಸಾದ್ ಅವರಿಗೆ ಸಂಗೀತ ಸ್ವರಗಳಿಂದ ಅರ್ಚನೆ ಮಾಡಿದ್ದು.. ಈ ಕಾರ್ಯಕ್ರಮಕ್ಕೆ ಪರಿಶುದ್ಧವಾದ ಚೌಕಟ್ಟು ಹಾಕಿಕೊಟ್ಟಿತ್ತು..



No comments:
Post a Comment