Saturday, September 1, 2012

ನನ್ನ ಎರಡನೇ ಕೂಸಿಗೆ ವರ್ಷದ ಸಂಭ್ರಮ...


ಎಲ್ಲರ ಮನೆಯಲ್ಲೂ ಎರಡು ಮೂರು ಇರುತ್ತೆ..ನಿನಗೂ ಬೇಡವೇ...ನೀನು ಯೋಚಿಸು ನೋಡು..ನನ್ನ ಮನಸು ಸದಾ ಹೇಳುತಿತ್ತು....ಆದ್ರೆ ಈಗ ಬೇಕೇ ಬೇಡವೇ...ಮನಸು ದ್ವಂದ್ವದ ಗೂಡಾಗಿತ್ತು...ಅಪ್ಪ ಅಮ್ಮನಿಗೆ ಖುಷಿ ಕೊಡುವ ಸಂಗತಿಗಿಂತ ಬೇರೆ ಏನು ಸಾಧನೆ ಎನ್ನಿಸಿತು...!

ಮನೆಯಲ್ಲಿ ಮಡದಿ ಯೋಚನೆ ಮಾಡಿ..ಸುಮ್ಮನೆ ದುಡುಕುವುದು ಬೇಡ...ಅಂತ ಹೇಳುತಿದ್ದಳು...ಆಗಲೇ ಮೊದಲನೆಯ ಕೂಸಿಗೆ ಹತ್ತಿರ ಹತ್ತಿರ ಒಂಭತ್ತು ವರುಷಗಳು ಆಗುತ್ತಾ ಬಂದಿದೆ...ನಮ್ಮ ಜೊತೆ ಒಂದು ನಿಮಿಷವೂ ಬಿಟ್ಟು ಇರುವುದಿಲ್ಲ..ನಮ್ಮನ್ನು ಅಷ್ಟು ಪ್ರೀತಿ ಮಾಡುತ್ತದೆ..ಹೀಗೆ ಸಾಗಿತ್ತು ಮಾತಿನ ಲಹರಿ...

ತುತ್ತಾ ಮುತ್ತಾ...ಈ ಪ್ರಶ್ನೆ ಅಚಾನಕ್ಕಾಗಿ ವಿಚಿತ್ರ ರೀತಿಯಲ್ಲಿ ಕಾಡತೊಡಗಿತ್ತು..ನನಗು ಅನ್ನಿಸಿತ್ತು ಹೌದು ನನ್ನ ಮೊದಲ ಕೂಸು ನಮ್ಮನ್ನು ಎಂದು ನೋಯಿಸಿಲ್ಲ...ನಮ್ಮ ಕಷ್ಟ ಸುಖ ಎಲ್ಲದರಲ್ಲೂ ಹೆಜ್ಜೆ ಹಾಕುತ್ತ ಬಂದಿದೆ..ಈ ಸಮಯದಲ್ಲಿ ಏನು ಮಾಡೋದು ಅನ್ನಿಸಿತು..

ನೆಂಟರಿಷ್ಟರ ಕೆಲವು ಸಮಾರಂಭಗಳಲ್ಲಿ ನನ್ನ ಅಪ್ಪ ಅಮ್ಮ ಪಡುತಿದ್ದ ಗೋಜಲನ್ನು.....ಸಂಬಂಧಿಕರ ಪ್ರಶ್ನೆ ಭರಿತ ನೋಟಕ್ಕೆ ಎಷ್ಟೋ ಸಲ ಮಾತಾ ಪಿತೃಗಳು ಮೌನಕ್ಕೆ ಶರಣು ಹೋಗಿದ್ದನ್ನು ಕಂಡಿದ್ದೆ.....

ಇದನ್ನೆಲ್ಲಾ ನೋಡಿ ಒಂದು ದಿನ ನಿರ್ಧರಿಸಿಯೇ ಬಿಟ್ಟೆ...ಆ ನಿರ್ಧಾರದ ಫಲ ಕಳೆದ ವರ್ಷ ಸೆಪ್ಟೆಂಬರ್ ೨ ೨೦೧೧ ರಂದು ಬಹು ವರ್ಷಗಳ ತಪಸ್ಸು..ಅಪ್ಪ ಅಮ್ಮನ ಹಾರೈಕೆ ಎಲ್ಲವು ಕೂಡಿಬಂತು...ಮನೆಯಲ್ಲಿ ಎಲ್ಲರಿಗು ಸಂತೋಷ..ಅವಾಗ ನನ್ನ ಮನಸಿಗೆ ಗೌರಿಶಂಕರ ಏರಿದಷ್ಟು ಖುಷಿ...ಅಪ್ಪ ಅಮ್ಮನ ಮುಖದಲ್ಲಿ ಒಂದು ಹೆಮ್ಮೆಯ ಸಂತಸ ಕಂಡಾಗ ಪಟ್ಟ ಕಷ್ಟವೆಲ್ಲ ಉಫ್ ಅಂತ ಗಾಳಿಯಲ್ಲಿ ಕರಗಿ ಹೋಯಿತು..

ಬನ್ನಿ ಗೆಳೆಯರೇ, ಗೆಳತಿಯರೆ, ಸೋದರ ಸೋದರಿಯರೆ..ನಮ್ಮ ಸಂತಸದಲ್ಲಿ ನೀವು ಪಾಲ್ಗೊಳ್ಳಿ...ನಾಳೆ ವರುಷದ ಹೆಚ್ಚು,  ನಾಮಕರಣ...ನಿಮಗೆಲ್ಲ ಮೊದಲೇ ಹೆಸರನ್ನು ಹೇಳಿಬಿಡುತ್ತೇನೆ..ಕಾರಣ ಕೆಲಸದ ಒತ್ತಡ ಕೆಲವೊಮ್ಮೆ ಕಾರ್ಯಕ್ರಮಗಳಿಗೆ ಬರಲಾಗುವುದಿಲ್ಲ..ಅಲ್ಲವೇ...
....
....
....
....
....
....
....
....
....
....
....
....
....
....
....
....
....
ಮೊದಲ ಕೂಸು -ಟಿ.ವಿ.ಎಸ್ ವಿಕ್ಟರ್ - ಬರೋಬ್ಬರಿ ಹತ್ತು ವರುಷ

....
....
....
....
....
....
....
....
ಕೂಸು ಪ್ರಸೂತಿ ಕೋಣೆಯಿಂದ..   ಜನಿಸಿದ ಸಂದರ್ಭದ ಲೇಖನ

ಎರಡನೇ ಕೂಸು...ಮಾರುತಿ ಸುಜುಕಿ ರಿಟ್ಜ್..ಒಂದು ವರುಷದ ಹೊಸ್ತಿಲಿನಲ್ಲಿ..

....
....
....
....
....
....
....
....ನನ್ನ ಅಪ್ಪ ಅಮ್ಮನ ಪ್ರೀತಿಯಿಂದ ಇಟ್ಟ ಹೆಸರು "ಶ್ರೀವಿತಲ್"      
ಶುಭ ಹಾರೈಸಿ..ಸುದೀರ್ಘ ವರುಷಗಳ ಕಾಲ ಆರೋಗ್ಯವಂತನಾಗಿ, ಯಶೋವಂತನಾಗಿ.ಸುಂದರ ಬದುಕು ಸಾಗಿಸಲಿ..
ನಿಮ್ಮ ಹಾರೈಕೆ ನನ್ನಿಬ್ಬರ ಕೂಸುಗಳಿಗೆ ಭದ್ರ ವಜ್ರ ಕೋಟೆ..!!!!.

18 comments:

 1. ಚೆನ್ನಾಗಿದೆ ಶ್ರೀಕಾಂತ್...ನಿಮ್ಮ ಎರಡನೆಯ ಮಗುವಿಗೆ ಶುಭ ಹಾರೈಕೆಗಳು..ನಿಮ್ಮ ಇಬ್ಬರು ಮಕ್ಕಳು ಆರೋಗ್ಯವಂತರಾಗಿ ಬಾಳಲಿ.. :)

  ReplyDelete
 2. ಹೀಗಾ ಕಾಲು ಎಳೆಯೋದು ಶ್ರೀ?

  ಯಪ್ಪಾ ಮೊದಲ ಫೋಟೋ ಬರೋ ವರೆಗೂ ಗೊತ್ತೇ ಆಗ್ಲಿಲ್ಲ!

  ಶುಭಾಶಯಗಳು ಗೆಳೆಯ.

  ReplyDelete
 3. ಶುಭಾಶಯಗಳು... ಕೂಸು ಚೆನ್ನಾಗಿ ಬಾಳಿ ಬದುಕಲಿ :))

  ReplyDelete
 4. Congrats..ನಮಗಂತೂ ಪಾರ್ಟಿ ಬೇಕು ಸರ್....

  ReplyDelete
 5. Santosha, Kivi chucchuva shaastra maadirteera, anna shaastra maadirteera, naamakarana saha maadirteera, kone ondu varshadalli yaavudakku namanna karedu outana haakilla.... eega varusha tumbi harushada hoLeyalli iddaaga bare photo haaki maguvina mukha nodikondu hogi anteeralla Srikanth. Ondu saavirada notu nimma jebininda tegedu, mooru baari kandana sutta tirugisi nivaalisi yaarigaadru kotbidi.... drushti taakutte. :)

  Roopa

  ReplyDelete
 6. ಸುದೀಪ..ಧನ್ಯವಾದಗಳು...ನಿಮ್ಮ ಹಾರೈಕೆ ನನ್ನ ಕೂಸುಗಳಿಗೆ ಶ್ರೀರಕ್ಷೆ..

  ReplyDelete
 7. ಬದರಿ ಸರ್...ನಿಮ್ಮ ಅಭಿಮಾನ..ಎಲ್ಲರ ಮನೆಯಲ್ಲೂ ಇರುವ ವಸ್ತು ನನ್ನ ಮನೆಗೂ ಬಂತು ಅಷ್ಟೇ..ಅದನ್ನು ಸ್ವಲ್ಪ ನನ್ನ ತಲೆಹರಟೆ ರೀತಿಯಲ್ಲಿ ಹೇಳೋಣ ಅನ್ನುವ ಒಂದು ಸಣ್ಣ ಪ್ರಯತ್ನ ಅಷ್ಟೇ..ಧನ್ಯವಾದಗಳು ನಿಮ್ಮ ಅಭಿಮಾನದ ಹಾರೈಕೆಗೆ..!!

  ReplyDelete
 8. ಮನಸೇ ಒಹ್ ಮನಸೇ ಎಂಥ ಮನಸೆ..ಮನಸೇ ನಿಮ್ಮ ಶುಭಾಶಯದ ಪತ್ರ ತಲುಪಿದೆ..ಧನ್ಯವಾದಗಳು..

  ReplyDelete
 9. ಶಿಖರದಲ್ಲಿರುವ ಗಿರೀಶ್..ಧನ್ಯವಾದಗಳು...ಭೇಟಿ ಮಾಡಿದಾಗ ಮಾಡೋಣ..ಹಬ್ಬ..

  ReplyDelete
 10. ರೂಪ...ಸುಂದರ ಅತಿ ಸುಂದರ ವಿವರಣೆ..ಹೌದು ಎಲ್ಲ ಶಾಸ್ತ್ರಗಳು ಮಂಗಳಮಯವಾಗಿ ನೆರವೇರಿತು...ಖಂಡಿತ ಒಮ್ಮೆ ನೀವಿಲ್ದ ಹಾಗೆ ಮಾಡ್ತೀನಿ ನಮ್ಮ ಬ್ಲಾಗರ್ಸ್ ಪ್ರವಾಸದಲ್ಲಿ...ಧನ್ಯವಾದಗಳು ನಿಮ್ಮ ಶುಭಾಶಯಗಳಿಗೆ..

  ReplyDelete
 11. ಹಾಯ್ ಶ್ರೀಕಾಂತ್ ಸರ್....

  ಹಹಹ ....ನಿಜವಾಗ್ಲೂ ಬೈಕ್ ಫೋಟೋ ನೋಡೋವರೆಗೂ ನಿಮ್ಮ ಮಕ್ಕಳ ಬಗ್ಗೆ ಮಾತಾಡ್ತಾ ಇದ್ದೀರಾ ಅನ್ಕೊಂಡಿದ್ದೆ....ಸಸ್ಪೆನ್ಸ್ ಚೆನ್ನಾಗಿತ್ತು.....ನಿಮ್ಮ ಇಬ್ಬರೂ ಮಕ್ಕಳಿಗೂ ಶುಭವಾಗಲಿ....ಮಕ್ಕಳನ್ನು ಜಾಗ್ರತೆ ಮಾಡಿ.....ದಾರಿ ಮೇಲೆ ಓಡಾಡಿಸುವಾಗ ಎಚ್ಚರಿಕೆಯಿಂದ ಓಡಾಡಿಸಿ.....ಶುಭವಾಗಲಿ...

  ReplyDelete
 12. ಅಶೋಕ್ ಸರ್...ಧನ್ಯವಾದಗಳು..ಪ್ರೀತಿಯಿಂದ, ಪ್ರೀತಿಗೋಸ್ಕರ..ಇವೆಲ್ಲ ಈ ರೀತಿಯಲ್ಲಿ ಬರೆಸುತ್ತೆ...ಖಂಡಿತವಾಗಿ ನಿಮ್ಮ ಸಲಹೆಗಳನ್ನು ಮಕ್ಕಳ ಶುಶ್ರುಷೆಯಲ್ಲಿ ನೆನಪಿಟ್ಟುಕೊಳ್ಳುವೆ

  ReplyDelete
 13. super maga!!! moorane koosige advance wishes:-)

  ReplyDelete
 14. Thank you Venki..thank you for wishes as well.

  ReplyDelete
 15. ಶ್ರೀಕಾಂತ್, ನಿಮ್ಮೆಲ್ಲರಿಗೂ ವಿಶೇಷತಃ ನಿಮ್ಮ ಗೌರಿಶಂಕರ ಏರಿ ಸಫಲರಾದ ಫಲಕ್ಕೆ ಶುಭಾಶೀರ್ವಾದ ಹಾರೈಕೆಗಳು.

  ReplyDelete
 16. ದೀಪಕ್ಕೆ ಎಣ್ಣೆ ಹಾಕಿದರೆ ಬೆಳಗುತ್ತೆ..ಹೊಲಕ್ಕೆ ಗೊಬ್ಬರ ಹಾಕಿದರೆ ಬೆಲೆ ಬೆಳೆಯುತ್ತೆ..
  ನಿಮ್ಮಂಥ ಸಾಧಕರ ಆಶೀರ್ವಾದ, ಹಾರೈಕೆಗಳು ಸದಾ ಶುಭಪ್ರದವಾಗಿರುತ್ತದೆ
  ಧನ್ಯವಾದಗಳು ಅಜಾದ್ ಸರ್..

  ReplyDelete
 17. ಸಾಮಾನ್ಯವಾಗಿ ಕಡೆಯ ಪುಟದಿ೦ದ ಪ್ರಾರ೦ಭಿಸುವುದರಿ೦ದ ಕುತೂಹಲಕ್ಕೆ ಎಡೆಯಿರಲಿಲ್ಲ! ಅಭಿನ೦ದನೆಗಳು. ನನ್ನ ಬ್ಲಾಗ್ ಗೆ ಭೇಟಿ ನೀಡಿ.

  ReplyDelete
 18. ಧನ್ಯವಾದಗಳು ಪ್ರಭ ಮೇಡಂ..ಹೌದು ಕೆಲವು ಸಲ ಕುತೂಹಲ...ಚೀಲದಿಂದ ಹೊರಗೋಡಿದ ಬೆಕ್ಕಿನಹಾಗೆ ಇರುತ್ತೆ..ನಿಮ್ಮ ಬ್ಲಾಗಿಗೆ ಭೇಟಿ ನೀಡುವೆ..

  ReplyDelete