Saturday, June 22, 2024

ಕಗ್ಗಂಟಿನ ಕರದಂಟು - ಡಿವಿಜಿ ಅಜ್ಜ - ೩

ಇಹುದು ಇಲ್ಲವೊ ತಿಳಿಯ ಗೊಡದೊಂದು ವಸ್ತು ನಿಜ ।
ಮಹಿಮೆಯಿಂ ಜಗವಾಗಿ ಜೀವವೇಷದಲಿ ।।
ವಿಹರಿಪುದದೊಳ್ಳಿತೆಂಬುದು ನಿಸದವಾದೊಡಾ ।
ಗಹನ ತುತ್ತ್ವಕೆ ಶರಣೊ — ಮಂಕುತಿಮ್ಮ ।।


ಅಹಂ ತಲೆಗೇರಿದ್ದ ಸಂತ ನಾಮದೇವ ಕುಂಬಾರನಿಂದ ತಾನು ಅರ್ಧ ಬೆಂದ ಮಡಿಕೆ.. ತಾನು ತನ್ನದು ಎನ್ನುವ ಅಹಂ ಇಂದ ಅರ್ಧ ಹಸಿಯಾಗಿದೆ ಎನ್ನುವ ಮಾತನ್ನು ಕೇಳಿ ಅಪಮಾನಿತನಾಗಿ ವಿಠಲನ ಮುಂದೆ ಬಂದು ನಿಲ್ಲುತ್ತಾನೆ.. ತನ್ನ ಗೋಳನ್ನು ತೋಡಿಕೊಳ್ಳುತ್ತಾನೆ.. ಆಗ ಅಶರೀರವಾಣಿಯಾಗಿ ವಿಠಲನು ಯೋಗ್ಯ ಗುರುವನ್ನು ಅರಸು.. ಜ್ಞಾನೋದಯವಾಗುತ್ತದೆ ಎಂದು ಹೇಳುತ್ತಾನೆ 

ದೈವಾಜ್ಞೆಯೆಂದು ಗುರುವನ್ನು ಅರಸುತ್ತಾ ಹೊರಟವನಿಗೆ....  ಶಿವಾಲಯದಲ್ಲಿ ಒಬ್ಬ ವೃದ್ಧ ಋಷಿ ಕಾಲು ನೋವೆಂದು ಶಿವಲಿಂಗದ ಮೇಲೆ ತನ್ನ ಕಾಲನ್ನು ಇಟ್ಟುಕೊಂಡು ವಿಶ್ರಮಿಸುತ್ತಾ ಇರುತ್ತಾನೆ. . 

ಅದನ್ನು ಕಂಡ ಜ್ಞಾನದೇವ ಸಿಟ್ಟಿನಿಂದ ಸಿಡಿಮಿಡಿಗೊಂದು.. ಆ ವೃದ್ಧನಿಗೆ ಹೀನಾಮಾನವಾಗಿ ನಿಂದಿಸುತ್ತಾನೆ.. ಆ ವೃದ್ಧನು ವಯೋಸಹಜತೆಯಿಂದ ನನ್ನ ಕಾಲನ್ನು ಎತ್ತಲು ಆಗುತ್ತಿಲ್ಲ.. ನೀನೆ ಶಿವನಿಲ್ಲದ ಜಾಗದಲ್ಲಿ ನನ್ನ ಕಾಲನ್ನು ಇಡು ಎನ್ನುತ್ತಾನೆ.. 


ಅಹಂ ಇಂದ ವೃದ್ಧನ ಕಾಲನ್ನು ಎಲ್ಲಿ ಇಡಲು ಹೋದರೂ ಅಲ್ಲಿ ಶಿವಲಿಂಗದ ಸಾಕ್ಷಾತ್ಕಾರವಾಗುತ್ತಿರುತ್ತದೆ.. ಅನತಿ ಸಮಯದಲ್ಲಿ ಆತ ನಿಂತ ಸ್ಥಳದ ಸುತ್ತಾ.. ಬರೀ ಶಿವಲಿಂಗಗಳೇ ತುಂಬಿ ಹೋಗುತ್ತದೆ.. ಆಗ ಅವನಿಗೆ ಅರಿವಾಗುತ್ತದೆ.. ಅಹಂ ಇಂದ ತುಂಬಿರುವ ನನ್ನ ತಲೆಯೇ ಶಿವನಿಲ್ಲದ ಸ್ಥಳ ಎಂದು ಹೇಳುತ್ತಾ ಆ ವೃದ್ಧನ ಕಾಲನ್ನು ತನ್ನ ತಲೆಯ ಮೇಲೆ ಇಟ್ಟುಕೊಳ್ಳುತ್ತಾನೆ.. 

ಆಗ ಆ ವೃದ್ಧನು "ಪಾಂಡುರಂಗನ ಪರಮ ಭಕ್ತನಾದ ನಿನಗೆ ಸ್ವಲ್ಪ ಅಹಂಕಾರವಿತ್ತು.. ಈಗ ಅದು ಹೋದ ಹಾಗೆ ಕಾಣ್ತಾ ಇದೆ.. ಸಕಾಲದಲ್ಲಿ ಒಂದು ಶುಭ ಮುಹೂರ್ತದಲ್ಲಿ ಉಪದೇಶ ಮಾಡುತ್ತೇನೆ.. " 

ಇದು ಭಕ್ತ ಕುಂಬಾರ ಚಿತ್ರದ ಒಂದು ದೃಶ್ಯ.. 

ಶಿವ ಅನ್ನುವ ಅದೊಂದು ಶಕ್ತಿ ಈ ಜಗತ್ತಿನಲ್ಲಿ ವಿಹಾರ ಮಾಡುತ್ತಲೇ ಇರುತ್ತದೆ.. ಶಿವನಿಲ್ಲದ ತಾಣವಿಲ್ಲ.. ಶಿವನಿಲ್ಲದೆ ಏನೂ ಇಲ್ಲ.. ಆ ಗಹನವಾದ ಶಕ್ತಿಗೆ ನಮಿಸು.. ಶರಣಾಗು ಎನ್ನುತ್ತಾರೆ ಕಗ್ಗದ ಅಜ್ಜ.. ಇಲ್ಲಿ ನಾಮದೇವರಿಗೆ ಶಿವನಿದ್ದಾನೆ ಅನ್ನುವ ನಿಜದ ಅರಿವಿರುತ್ತದೆ.. ಆದರೆ ಅವನಿಲ್ಲದ ತಾಣವಿಲ್ಲ ಎನ್ನುವ ಅನುಭವ ಹೊರಬರಲು ಅಹಂ ಅಡ್ಡಪಡಿಸುತ್ತಿರುತ್ತದೆ.. ಒಮ್ಮೆ ಅಹಂ ಕಳಚಿ ಆ ತತ್ವಕ್ಕೆ ಶರಣಾದಾಗ ನಾಮದೇವ ಪುಟಕ್ಕಿಟ್ಟ ಚಿನ್ನವಾಗುತ್ತಾನೆ. . . 

ಅಜ್ಜನ ಇನ್ನೊಂದು ಅದ್ಭುತವಾದ ಕಗ್ಗದೊಂದಿಗೆ ಮತ್ತೆ ಸಿಗೋಣ!
  

No comments:

Post a Comment