ಕಳೆದ ವರ್ಷ ಬಿಡುಗಡೆಯಾದ "ರಾಜಕುಮಾರ" ಚಿತ್ರಕ್ಕೆ ನಾನು, ಸವಿತಾ ಮತ್ತು ಶೀತಲ್ ಹೋಗಿದ್ದೆವು.. ಚಿತ್ರ ಭರ್ಜರಿಯಾರಿ ಓಡಿ ದುಡ್ಡು ಮಾಡಿದ್ದು ಇತಿಹಾಸ.. ಕಸ್ತೂರಿ ನಿವಾಸದ ಜನಪ್ರಿಯ "ಆಡಿಸಿ ನೋಡು ಬೀಳಿಸಿ ನೋಡು" ಹಾಡನ್ನು ಇಂದಿನ ಬೀಟಿಗೆ ಒಗ್ಗಿಸಿ ಸಾಹಿತ್ಯ ತುಸು ಬದಲಾಯಿಸಿ ಮಾಡಿದ ಹಾಡು ಜನಪ್ರಿಯವಾಗಿ.. ಚಿತ್ರದ ಯಶಸ್ಸಿನಲ್ಲಿ ಒಂದು ಮಹತ್ತರ ಪಾತ್ರವಹಿಸಿತ್ತು..
ಹೋಲ್ಡ್ ಆನ್.. ನೀವು ತಕ್ಷಣ ಬ್ಲಾಗ್ ಟೈಟಲ್ ನೋಡ ಬೇಡಿ.. ಇದು ಶ್ರೀ ಪರಪಂಚಾನೇ.. ಮೂವ್ಡ್ ಮೂವೀಸ್ ಅಲ್ಲ.. ರಾಜಕುಮಾರ ಚಿತ್ರದ ವಿಮರ್ಶೆ ಬರೆಯುತ್ತಿಲ್ಲ..
ಇಡೀ ಚಿತ್ರದಲ್ಲಿ ನನಗೆ ಕಾಡಿದ್ದು ನಾಯಕಿಯ ದಟ್ಟವಾದ ಹುಬ್ಬು.. ಇಂದಿನ ಪೀಳಿಗೆಯ ಅನೇಕ ಚಿತ್ರಗಳ ನಾಯಕಿಯರನ್ನು ನಾ ಇಷ್ಟ ಪಡುವುದು ಗೊತ್ತಿರುವ ವಿಚಾರ.. ನವ್ಯ ನಾಯರ್, ಪ್ರಿಯ ಮಣಿ, ನಿತ್ಯಾ ಮೆನನ್.. ಪಾರ್ವತೀ ಮೆನನ್... ಹೀಗೆ ಇರಲಿ ಮುಂದಿನ ವಿಷಯ..
ರಾಜಕುಮಾರ ಸಿನೆಮಾ ಬಂತು ಹೋಯ್ತು.. ನನ್ನ ಬಾಳಿನಲ್ಲೂ ತುಂಬಾ ಬದಲಾಯಿತು...
ಮನೆ ಬದಲಾಯಿತು.. ಮನ ಗಟ್ಟಿಯಾಯಿತು.. ಹೊಸ ಬೆಳಕೊಂದು ಮೂಡುವ ದಿಕ್ಕಿನಲ್ಲಿ ಪಯಣ ಸಾಗುತ್ತಿದೆ..
*****
ಆಫೀಸಿಗೆ ಕ್ಯಾಬ್ ಹತ್ತುವ ಸ್ಥಳಕ್ಕೆ ಬೈಕಿನಲ್ಲಿ ದಿನವೂ ಪಯಣ.. ಬೆಳಗಿನ ಚುಮು ಚುಮು ಚಳಿಯಲ್ಲಿ ಹೋಗುವುದೇ ಒಂದು ಮಜಾ.. ರಸ್ತೆಯ ಇಕ್ಕೆಲಗಳಲ್ಲೂ ನೋಡುತ್ತಾ ಹೋಗುವ ನನ್ನ ಅಭ್ಯಾಸ.. ಖುಷಿಯಾಗುತ್ತಿತ್ತು..
ಹೀಗೆ ಒಂದು ದಿನ.. ಹೊರಡುವ ಸಮಯವಾಗಿತ್ತು.. ತುಸು ತಡವಾಗಿದ್ದ ಕಾರಣ.. ಬರದಿಂದ ಸಾಗುತ್ತಿದ್ದೆ.. ಒಂದು ತಿರುವಿನಲ್ಲಿ ಬೈಕ್ ಹೋಗುತ್ತಿತ್ತು.. ಎಡಗಡೆ ಫುಟ್ ಪಾತಿನಲ್ಲಿ ಒಂದು ಹುಡುಗಿನಿಂತಿದ್ದಳು .. ತಣ್ಣನೆಯ ಗಾಳಿ ತುಸು ಜೋರಾಗಿಯೇ ಬೀಸುತ್ತಿತ್ತು.. ತಲೆಗೆ ಸ್ನಾನ ಮಾಡಿದ್ದಳು ಅನ್ನಿಸುತ್ತೆ.. ತಲೆಗೂದಲನ್ನು ಹಾಗೆಯೇ ಬಿಟ್ಟಿದ್ದಳು ..ಆ ಗಾಳಿಗೆ ಅವಳ ಕೂದಲು ಅವಳ ಮುಖವನ್ನು ಮುಚ್ಚಿತ್ತು . ಮೆಲ್ಲಗೆ ಕೂದಲನ್ನು ಸರಿಸಿ ತಾನು ಕಾಯುತ್ತಿದ್ದ ವಾಹನ ಬಂದಿದೆಯೇ ಎಂದು ನೋಡಿದಳು..
ಒಂದು ಕ್ಷಣ ಅವಾಕ್ಕಾದೆ.. ತುಸು ದಪ್ಪ ಕಣ್ಣ ಹುಬ್ಬು.. ಕಾಡುವ ಕಣ್ಣುಗಳು.. ಪುಟ್ಟದು ಅಲ್ಲ ನೀಳವೂ ಅಲ್ಲದ ತಿದ್ದಿ ತೀಡಿದ ನಾಸಿಕ .. ಭುಜದಿಂದ ತುಸುವೇ ಕೆಳಗೆ ಇಳಿದಿದ್ದ ತಲೆಗೂದಲು.. .. ತನ್ನ ಪಕ್ಕದಲ್ಲಿದ್ದ ಸಹಪಾಠಿ/ಸಹೋದ್ಯೋಗಿಯ ಕಂಡು ಒಂದು ನಗೆ ನಕ್ಕಾಗ.. ಗುಳಿ ಬಿದ್ದ ಕೆನ್ನೆ..ಸುಮಾರು ಐದೂವರೆ ಅಡಿ ಎತ್ತರ ಇರಬಹುದು.. ಬೆನ್ನಿಗೆ ಬ್ಯಾಗ್ ಇತ್ತು.. ಎಡಗೈಯಲ್ಲಿದ್ದ ವಾಚನ್ನು ಪದೇ ಪದೇ ನೋಡುತ್ತಿದ್ದಳು.. ಕಾಲುಂಗುರ ಇರಲಿಲ್ಲ.. ಮದುವೆಯಾಗಿಲ್ಲ ಅನ್ನೋ ಖಾತ್ರಿ ಇತ್ತು.. ಆ ತಿರುವಿನ ಸುಮಾರು ಹದಿನೈದು ಇಪ್ಪತ್ತು ಸೆಕೆಂಡುಗಳಲ್ಲಿ ಮನಸ್ಸಲ್ಲಿ ಕೂತು ಬಿಟ್ಟಳು.. ಈ ಹುಡುಗಿಯನ್ನು ಎಲ್ಲೊ ನೋಡಿದ್ದೇನೆ (ಇದು ಮಾಮೂಲು ಎಲ್ಲಾ ಹುಡುಗರ.. ಎಲ್ಲಾ ಹುಡುಗಿಯರ ಕಿವಿಗೆ ಬೀಳುವ ಮೊದಲ ಮಾತು!)... ಹಾಗೆ ಮುಂದಕ್ಕೆ ಹೋದೆ.. ಆಫೀಸ್ ಕ್ಯಾಬ್ ನನಗಾಗಿ ಕಾದಿತ್ತು..
ಯಥಾ ಪ್ರಕಾರ... ಕ್ಯಾಬಿನಲ್ಲಿ ಹಾಡುಗಳು ಬರುತ್ತಿದ್ದವು.. ಬೆಳಗಿನ ಚಳಿ.. ಹಿಂದಿನ ರಾತ್ರಿಯ ಪಯಣದ ಸುಸ್ತು.. ಹಾಗೆ ಕಣ್ಣು ಮುಚ್ಚಿ ಮಲಗಿದ್ದೆ.. ತಣ್ಣನೆಯ ಗಾಳಿ ಹಾಗೆ ಮುದ ನೀಡಿತ್ತು..
ಗಕ್ ಅಂತ ಕ್ಯಾಬ್ ನಿಂತಿತು.. ಅಚಾನಕ್ ಬ್ರೇಕ್ ಹಾಕಿದ್ದಕ್ಕೆ ಎಚ್ಚರವಾಯಿತು.. "ಬೊಂಬೆ ಹೇಳುತ್ತೈತೆ" ಹಾಡು ಬರುತ್ತಿತ್ತು.. ತಕ್ಷಣ ಏನೋ ಹೊಳೆಯಿತು.. ಅರೆ.. ರಾಜಕುಮಾರ ಚಿತ್ರದ ನಾಯಕಿಯ "ಪ್ರಿಯ ಆನಂದ್" ಮೊಗ ನೆನಪಿಗೆ ಬಂತು.. ಅದೇ ಹೋಲಿಕೆ.. ನಗು.. ತಲೆಗೂದಲು.. ನಾಸಿಕ.. ಕಣ್ಣುಗಳು.. ಹುಬ್ಬು.. ಅದೇ ಚಹರೆ..
ಅವತ್ತಿಂದ.. ಆಫೀಸ್ ಕ್ಯಾಬಿಗೆ ತಲುಪುವುದು ಸ್ವಲ್ಪ ಲೇಟ್ ಆದರೆ ಆತಂಕ ಪಡುವ ಬದಲು ಖುಷಿಯಾಗುತ್ತಿತ್ತು.. ಈಕೆಯನ್ನು ನೋಡಬಹುದು ಎಂದು.. ಲವ್ವು ಪವ್ವು ಎನ್ನುವ ವಯೋಮಾನ ದಾಟಿತ್ತು.. ಅದು ಬೇಕಾಗೂ ಇರಲಿಲ್ಲ.. ಆ ಮುದ್ದು ಮೊಗವನ್ನು ನೋಡುವುದೇ ಒಂದು ಸಂತಸ ತರುತ್ತಿತ್ತು.. ಆ ತಿರುವಿನಲ್ಲಿ ಹೋಗುವುದು ಕೇವಲ ಹತ್ತು ಸೆಕೆಂಡುಗಳು.. ಆದರೂ ಸ್ಫೂರ್ತಿ ಸಿಗುತ್ತಿತ್ತು..
ತಿಂಗಳಲ್ಲಿ ಒಂದು ಐದಾರು ದಿನ ಆ ರಾಜಕುಮಾರ ಚಿತ್ರದ ಸುಂದರಿಯ ನಕಲನ್ನು ನೋಡುವ ಭಾಗ್ಯ ಸಿಗುತ್ತಿತ್ತು .. ಅವಳ ನಗು ಮೊಗವನ್ನು ಕಂಡ ದಿನವೆಲ್ಲಾ ಉಲ್ಲಸಿತವಾಗಿ ಕಳೆಯುತ್ತಿತ್ತು.. ನನ್ನ ಅನೇಕ ತಂಗಿಯರಲ್ಲಿ ಅವಳು ಒಬ್ಬಳು ಎನ್ನುವ ಭಾವ ತುಂಬತೊಡಗಿತ್ತು..
ಇವಿಷ್ಟು ಪೀಠಿಕೆ ಆಯಿತು.. ಕಥೆ ಮುಂದೆ...
ಆಫೀಸಿಗೆ ರಜೆ ಇತ್ತು.. ಮನೆಯಲ್ಲಿನ ಕಾರ್ಯಕ್ಕೆ ಹೂವು, ಬಾಳೆಎಲೆ .. ಹಾಗೂ ಇತರೆ ಪದಾರ್ಥ ಕೊಳ್ಳಲು ಹೋಗುತ್ತಿದ್ದೆ... ಅವತ್ತು ಪುರುಸುತ್ತಾಗಿದ್ದೆ.. ಸರಿ ಈ ಪುಟ್ಟ ಹೊಸ ತಂಗಿಯನ್ನು ಸ್ವಲ್ಪ ಹೊತ್ತು ನೋಡುವ ಅಂತ ಬೈಕ್ ಪಕ್ಕಕ್ಕೆ ನಿಲ್ಲಿಸಿ ಆಕೆ ನಿಂತಿದ್ದ ರಸ್ತೆಯ ವಿರುದ್ಧ ದಿಕ್ಕಿಗೆ ಹೋಗಿ ನಿಂತೇ...
ಥೇಟ್ ಪ್ರಿಯ ಆನಂದ್ ನಕಲು.. ಅದೇ ಮೊಗ.. ಅದೇ ನಗು.. ಅದೇ ರೀತಿಯಲ್ಲಿ ಮಾತಾಡುವ ಭಂಗಿ ..ತುಂಬಾ ಇಷ್ಟವಾಗಿತ್ತು.. ಕತ್ತನ್ನು ಅತ್ತಿತ್ತ ಆಡಿಸುತ್ತಾ ಮಾತಾಡುವ ಪರಿ ..ಬೆರಗುಗೊಳಿಸುವ ಆಕೆಯ ಕಣ್ಣ ಭಾಷೆ . ವಾಹ್ ಎನ್ನಿಸುತ್ತಿತ್ತು..
ಸರಿ ಇವತ್ತು ಆಗಿದ್ದಾಗಲಿ.. ಮಾತಾಡಿಸುವ.. ಅಂತ ಬೈಕನ್ನು ಸರಿಯಾಗಿ ನಿಲ್ಲಿಸಿ.. ಕೈಲಿದ್ದ ಬ್ಯಾಗು.. ಹೆಲ್ಮೆಟ್ಟು.. ಎಲ್ಲವನ್ನು ಬೈಕಿಗೆ ಸಿಗಿಸಿ.. ಮೊಬೈಲ್ ಜೋಬಿನಲ್ಲಿಟ್ಟುಕೊಂಡು... ಹಾರಾಡುತ್ತಿದ್ದ ತಲೆಗೂದಲನ್ನು ಸರಿಪಡಿಸಿಕೊಂಡು... ಕನ್ನಡಕವನ್ನು ಸರಿ ಮಾಡಿಕೊಂಡು ರಸ್ತೆ ದಾಟಲು ಹೆಜ್ಜೆಹಾಕಿದೆ ..
ಆಕೆಯೂ ತನ್ನ ಸ್ಥಳದಿಂದ ರಸ್ತೆ ದಾಟಿ ಬರಲು ಹೆಜ್ಜೆ ಹಾಕಲು ಶುರು ಮಾಡಿದಳು..
ಢಮಾರ್.. ದಬಕ್.. .. ಜನರೆಲ್ಲಾ ಕೂಗುತ್ತಾ ಓಡಿ ಬರುವ ಸದ್ದು ಕೇಳಿಸಿತು ..