ಬಸವನಗುಡಿ ಸುತ್ತಿ ಬಂದರು.. ಕಹಳೆ ಬಂಡೆಯಿಂದ ಜಾರಿಯಾಯಿತು... ಊಹುಂ.. ಏನೋ ತಪ್ಪಿಸಿಕೊಳ್ಳುತ್ತಿದೆ.. ಯಾಕೆ ಏನಾಗುತ್ತಿದೆ..
ಕಗ್ಗ ರಸಧಾರೆಯ ಮೊದಲ ಸಂಪುಟದ ಲೇಖನ ಓದಿ ಓದಿ ಇಟ್ಟಾಯಿತು.. ಪ್ರತಿ ಪದ, ಪ್ರತಿ ಚಿನ್ಹೆಗಳು ಮನಸ್ಸಲ್ಲಿ ಕೂತು ಬಿಟ್ಟಿವೆ.. ಎರಡನೇ ಸಂಪುಟ ಯಾವಾಗ ಬಿಡುಗಡೆಯಾಗುತ್ತದೆ.. ಯೋಚಿಸಿ ಯೋಚಿಸಿ ಹಣ್ಣಾಗಿತ್ತು ಮನಸ್ಸು..
ಟಕು ಟಕು.. ಟಾಂಗಾ ಸದ್ದಾಗುತ್ತಿತ್ತು.. ಜೊತೆಯಲ್ಲಿಯೇ..
"ಮಹನೀಯರೇ ಮತ್ತು ಮಹಿಳೆಯರೇ.. "
"ಥೋ ಮತ್ತೆ ಶುರುವಾಯಿತು ಈ ಚುನಾವಣಾ ಭರಾಟೆ.. "
ಒಂದು ಚಿಳ್ಳೆ ಓಡಿ ಬಂದು.. "ಅಜ್ಜಾ ಅಜ್ಜ... ತಗೋ ತಗೋ ನಿನ್ನ ಚಿತ್ರ ಬಂದಿದೆ.. "
"ಏನಪ್ಪಾ ಅದು ನನ್ನ ಚಿತ್ರ.. ಚುನಾವಣೆಗೂ ನನಗೂ ದೂರ ಕಣಪ್ಪ"
"ಅಜ್ಜಾ.. ಚುನಾವಣಾ ಮುಗಿದು ಹೋಗಿದೆ.. ಅಬ್ಕಿ ಬಾರ್ ಮೋದಿ ಸರ್ಕಾರ್ ಅಂತ ಇಡಿ ಭಾರತ ದೇಶದಲ್ಲಿ ಮಾತಾಡುತ್ತಿದ್ದಾರೆ.. ನೀವು ಇನ್ನು ಅಲ್ಲಿಯೇ ಇದ್ದೀರಾ.. ಇದೆ ತಿಂಗಳ ಮೂರನೇ ವಾರದಲ್ಲಿ ಭಾರತ ಹಿಂದಕ್ಕೆ ಓಡುತ್ತದೆಯೋ ಅಥವಾ ಮುಂದಕ್ಕೆ ಓಡುತ್ತದೆಯೋ ಎಂದು ತಿಳಿಯುತ್ತದೆ.."
ಮತ್ತೆ ಇದೇನಪ್ಪ ಟುಕು ಟುಕು ಶಬ್ದ.. ಟಾಂಗದವ ಕಿರುಚುತ್ತಾ ಇದ್ದಾನೆ..
"ಅಜ್ಜಾ ನಿಮ್ಮ ಕಗ್ಗದ ಎರಡನೇ ಸಂಪುಟ ಶ್ರೀ ರವಿ ತಿರುಮಲೈ ಅವರು ಪ್ರಕಟಗೊಳಿಸುತ್ತಿದ್ದಾರೆ... "
"ಓಹ್ ಹೌದಾ.. ನನಗೊಂದು ಸಹಾಯ ಮಾಡುತ್ತೀಯ.. "
"ಹೇಳಿ ಅಜ್ಜಾ"
"ನಾನೇ ಸೃಷ್ಟಿಸಿದ ಪಾತ್ರ ನೀನು ಮಂಕುತಿಮ್ಮ... ದಯಮಾಡಿ ಆ ಕಾರ್ಯಕ್ರಮದ ವಿವರಣೆಯನ್ನು ನನಗಾಗಿ ಹೇಳುವೆಯ"
"ಅಜ್ಜಾ. ಬರಿ ಬೈಗುಳವಾಗಿದ್ದ ನನ್ನ ಪಾತ್ರದ ಹೆಸರನ್ನು ಲೋಕದಲ್ಲೇ ಮನ್ನಣೆ ಕೊಟ್ಟಿದ್ದು ನಿಮ್ಮ ಕಗ್ಗಗಳು.. ಆ ಕಾರ್ಯಕ್ರಮದ ವೀಕ್ಷಕ ವಿವರಣೆ ನಾನೇ ಕೊಡಬೇಕು ಅಂದರೆ.. ನಿಮಗೆ ಎಷ್ಟು ಕೃತಜ್ಞತೆ ಹೇಳಿದರು ಸಾಲದು ಅಜ್ಜಾ.. ಇಗೋ ಈಗಲೇ ಬಂದೆ.. "
****************
"ಅಜ್ಜ ಮಂಕುತಿಮ್ಮ ಉವಾಚಾ"
"ಅಜ್ಜಾ ಶ್ರೀ ರವಿ ತಿರುಮಲೈ ಅವರ ಬಂಧು ವರ್ಗ, ಮಿತ್ರ ಮಂಡಳಿ, ಫೇಸ್ ಬುಕ್ ಗೆಳೆಯರು, ಬ್ಲಾಗ್ ಲೋಕದ ಕೆಲವು ಮಣಿಗಳು ಎಲ್ಲಾರೂ ನಿಧಾನವಾಗಿ ಅಂಗಣಕ್ಕೆ ಬರುತ್ತಿದ್ದಾರೆ.. ಪ್ರತಿಯೊಬ್ಬರನ್ನು ತಪ್ಪದೆ ಸ್ವಾಗತ ಮಾಡಿ.. ಅವರ ಉ. ಕು. ಸಾಂ. ವಿಚಾರಿಸಿ, ತಿಂಡಿ ಕಾಫಿ ಟೀ ಬಗ್ಗೆ ಕೇಳುತ್ತಿದ್ದಾರೆ.. ಎಲ್ಲರೂ ಇದೊಂದು ನಮ್ಮದೇ ಸಮಾರಂಭ ಎನ್ನುತ್ತಾ ಭಾಗವಹಿಸುತ್ತಿದ್ದಾರೆ.. "
"ಶ್ರೀ ಗುಂಡಪ್ಪ ಉವಾಚ.. ಹಾ ಮುಂದೆ"
"ನಿಲ್ದಾಣದಿಂದ ಹೊರಡುವ ಬಸ್ ತನ್ನ ಪ್ರಯಾಣಿಕರೆಲ್ಲ ಹತ್ತಿದ್ದಾರ ಇಲ್ಲಾವ ಎಂದು ಪರೀಕ್ಷೆ ಮಾಡುವ ಹಾಗೆ ಶ್ರೀ ರವಿಯವರು ಬಂದ ಎಲ್ಲರನ್ನು ಗಮನಿಸುತ್ತಾ.. ಯಾರೂ ಇನ್ನು ಬಂದಿರಲಾರರು ಎಂದು ಯೋಚಿಸುತ್ತಾ ಸಂಬಂಧಪಟ್ಟವರಿಗೆ ಕರೆಗಳನ್ನು ಮಾಡುತ್ತಾ.. ಅಲ್ಲಿಯೇ ಇದ್ದ ತಮ್ಮ ಗೆಳೆಯರಿಗೆ ಅವರಿಗೆ ಕರೆ ಮಾಡಿ.. ಅವರು ಬಂದ್ರಾ.. ಇವರು ಬಂದ್ರಾ ಎಂದು ಹೇಳುತ್ತಿದ್ದರು.. "
|
ಎಲ್ಲರೂ ಬಂದಿದ್ದಾರ.. ಓಹ್ ಅವರು ಬರಬೇಕಿತ್ತು ತಾಳಿ ಕರೆ ಮಾಡುವೆ!!! |
"ಶ್ರೀ ಗುಂಡಪ್ಪ ಉವಾಚ.. ಅದು ಹೇಳಿ ಇದು ಹೇಳಿ ದಾರಿ ತಪ್ಪಿಸದಿರು
ಬರುವವರು ಬರದೆ ಇರಲಾರರು
ಬರದಿರುವವರು ಕೂಗಿದರು ಬರಲಾರರು
ಎಲ್ಲರೂ ಬಂದಿದ್ದಾರೆ ಎಂದು ನೋಡೋ ಮಂಕುತಿಮ್ಮ!!"
"ಮಂಕುತಿಮ್ಮ ಉವಾಚ.. ಅಜ್ಜ ಈ ಸಂಪುಟ ಮೊದಲ ಸಂಪುಟಕ್ಕಿಂತ ಐವತ್ತು ಕಗ್ಗಗಳು ಹೆಚ್ಚು.. ಮೊದಲ ಸಂಪುಟ ೧ - ೨೦೦ ಕಗ್ಗಗಳ ಬಗ್ಗೆ ವಿವರಣೆ ಇದ್ದರೇ.. ಎರಡನೇ ಸಂಪುಟ ೨೦೧ - ೪೫೦ ತನಕ ಇದೆ.."
"ಶ್ರೀ ಗುಂಡಪ್ಪ ಉವಾಚ .... ಸಂಖ್ಯೆಗಳು ಅಂಕೆಗಳೇ... ಅಂಕೆಗಳು ಲೆಕ್ಕಕ್ಕೆ ಸಿಕ್ಕುವವೇ
ಸಿಕ್ಕ ಲೆಕ್ಕಕ್ಕೆ ಜಗತ್ತಿನ ಅಂಕೆಗಳು ನಿಲುಕುವವೇ
ಅಂಕೆ ಇದ್ಡೋಡೇ ಜಗತ್ತಿಗೆ ಮಂಕೆ ಇರಲಾರದು
ಈ ಸಂಪುಟದ ಬಗ್ಗೆ ಮತ್ತಷ್ಟು ಹೇಳು ಮಂಕುತಿಮ್ಮ!!"
"ಮಂಕುತಿಮ್ಮ ಉವಾಚ.. ಅಜ್ಜ ಈ ಸಂಪುಟದ ಪ್ರಕಟದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಎಸ್ ದಿವಾಕರ್ ಆಸೀನರಾಗಿದ್ದಾರೆ.. ಸರಳ ವಿರಳ ವ್ಯಕ್ತಿತ್ವದ ಶ್ರೀ ಗೋಪಾಲ ವಾಜಪೇಯಿ ಉತ್ಸುಕತೆಯಿಂದ ಕುಳಿತಿದ್ದಾರೆ .. ಮತ್ತು ಕಗ್ಗದ ತಾತ್ಪರ್ಯವನ್ನು ಹಂಚಲು ಮೊದಲ ಸಾಹಸ ಮಾಡಿ ಯಶಸ್ವಿಯಾದ ಶ್ರೀ ಶ್ರೀಕಾಂತನ್ ಬಂದಿದ್ದಾರೆ.. ಅಧ್ಯಕ್ಷತೆ ವಹಿಸಿಕೊಂಡಿರುವ ಸುಂದರ ನಗುಮೊಗದ ಶ್ರೀ ರಾಜಗೋಪಾಲ್ ಎಲ್ಲಾ ಆಸೀನರಾದ ಸಭಿಕರನ್ನು ನೋಡುತ್ತಾ ಅರೆ ಬೆಂಗಳೂರಿನಲ್ಲಿ ಭಾನುವಾರ ಬೆಳಗಿನ ಹೊತ್ತಿನಲ್ಲಿ ಇಷ್ಟೊಂದು ಮಂದಿ ಎಂದು ಆಶ್ಚರ್ಯ ಚಕಿತರಾಗಿದ್ದಾರೆ.. "
|
ಭಾನುವಾರದಂದು ಕೂಡ ಜಮಾಯಿಸಿದ್ದ ಆಸಕ್ತರು! |
"ಶ್ರೀ ಗುಂಡಪ್ಪ ಉವಾಚ... ಮುಂದೆ"
"ಮಂಕುತಿಮ್ಮ ಉವಾಚ.. ಪ್ರತಿ ಕಾರ್ಯಕ್ರಮಕ್ಕೆ ಒಂದು ಆರಂಭ ಬೇಕು.. ಅದನ್ನ ಒದಗಿಸಿದವರು ಶಕುಂತಲ ಮೇಡಂ.. ಅದನ್ನ ಮುಂದುವರೆಸಿದರು ಶ್ರೀ ಪ್ರಸಾದ್"
|
ಕಾರ್ಯಕ್ರಮ ಶುರು ಮಾಡಿದ್ದು ಹೀಗೆ!!! |
"ಶ್ರೀ ಗುಂಡಪ್ಪ ಉವಾಚ.. ಆಹಾ ಎಷ್ಟು ಸೊಗಸಾಗಿದೆ ಮಂಕುತಿಮ್ಮ ನಿನ್ನ ವಿವರಣೆ.. ಅಲ್ಲಿಯೇ ಹೋಗಿ ನೋಡುತ್ತಿದ್ದೇನೆ ಅನ್ನಿಸುತ್ತಿದೆ.. ಮುಂದೆ"
"ಮಂಕುತಿಮ್ಮ ಉವಾಚ.. ಅಜ್ಜಾ ಗಣಪನಿಲ್ಲದೆ ಪೂಜೆ ಇಲ್ಲಾ.. ನಮ್ಮ ದೇಶದ ಕಾರ್ಯಕ್ರಮದಲ್ಲಿ ಹಾಡಿಲ್ಲದೆ ಗಣಪನ ಸ್ತುತಿಯಿಲ್ಲದೆ ಮುಂದೆ ಸಾಗಲು ಸಾಧ್ಯವೇ ಇಲ್ಲ.. ನಮಗಾಗಿ ವೈದ್ಯೋ ನಾರಾಯಣೋ ಹರಿಃ.. ಎನ್ನುತ್ತಲೇ ಸುಂದರವಾಗಿ ತಮ್ಮ ಸುಮಧುರ ಕಂಠದಲ್ಲಿ ಪ್ರಾರ್ಥನಾ ಗೀತೆ ಆರಂಭಿಸಿದರು ಶ್ರೀಮತಿ ಲತಾ ದಾಮ್ಲೆ ಮೇಡಂ.. ಆ ಗಾನಕ್ಕೆ ಗಾಯನಕ್ಕೆ ಮನಸೋಲದವರೇ ಇಲ್ಲಾ.. ಆ ಧ್ವನಿಯಲ್ಲಿನ ಏರಿಳಿತ.. ಪದಗಳ ಉಚ್ಚಾರ.. ಆಹಾ "
|
ಪ್ರಾರ್ಥನಾ ಗೀತೆ.. ಆಹಾ ಎಷ್ಟು ಇಂಪು! |
"ಶ್ರೀ ಗುಂಡಪ್ಪ ಉವಾಚ.. ಹೌದು ಮಂಕುತಿಮ್ಮ.. ಗಾನ ಸುಧೆ ನನಗೂ ಕೇಳಿಸುತ್ತಿದೆ.. ಆಹಾ ನನ್ನ ಕಗ್ಗಗಳಿಗೆ ಗಾನದ ಹೊನ್ನಿನ ಹೊದಿಕೆ.. ಸುಂದರ ಅತಿ ಸುಂದರ.. ಹಾ ಮುಂದೆ"
"ಮಂಕುತಿಮ್ಮ ಉವಾಚ... ಮುಂದೆ ಒಬ್ಬೊಬ್ಬರೇ ಮಹನೀಯರು ತಮ್ಮ ತಮ್ಮ ಅನುಭವಗಳನ್ನು ಮತ್ತು ಕಗ್ಗಗಳು ತಮ್ಮ ಮೇಲೆ ಬೀರಿರುವ ಪರಿಣಾಮವನ್ನು ವಿವರಿಸುತ್ತಾ ಹೋದರು..
|
ಲೋಕಾರ್ಪಣಗೊಂಡ ಸುಸುಮಯ! |
|
ಶ್ರೀ ಗೋಪಾಲ್ ವಾಜಪೇಯಿ |
|
ಶ್ರೀ ಶ್ರೀಕಾಂತನ್ |
|
ಶ್ರೀ ದಿವಾಕರ್ ಎಸ್ |
|
ಶ್ರೀ ರಾಜಗೋಪಾಲ್ |
ಇದರ ನಡುವೆ..ಇನ್ನೊಂದು ಸಿರಿ ಕಂಠ ಇನ್ನೊಂದು ಗೀತೆಯನ್ನು ಉಲಿಯಿತು ಆ ಧ್ವನಿಯ ಒಡತಿ ಶ್ರೀಮತಿ ಅಂಜಲಿ ಹಲಿಯಾಲ್.. ಎಂಥಹ ಸುಂದರ ಧ್ವನಿ.. ಮಧುರ ಕಂಠ.. ಗೀತೆಗಳಿಗೆ ಬೇಕಾದ ಧ್ವನಿ.. ಅದರ ಕಂಪನ.. ಒಂದು ಧನ್ಯತಾ ಭಾವದ ಹಾಡನ್ನು ಎಷ್ಟು ಸುಮಧುರವಾಗಿ ಹೊರಹೊಮ್ಮಿಸಿದರು.. ಸುಂದರವಾಗಿದೆ ಅಜ್ಜಾ"
|
ಸುಶ್ರಾವ್ಯ ಹಾಡುಗಾರಿಕೆ.. |
"ಶ್ರೀ ಗುಂಡಪ್ಪ ಉವಾಚ..
ರಾಗಗಳಲ್ಲಿ ಹಲವಾರು ಅಕ್ಷರಗಳು
ಅಕ್ಷರಗಳಲ್ಲಿ ಹಲವಾರು ಸ್ವರಗಳು
ಸ್ವರಗಳಲ್ಲಿ ಏಳು ಕೋಣೆಗಳು
ಆ ಏಳು ಕೋಣೆಗಳನ್ನು ಗ್ರಹಿಸಿರುವ ಇಬ್ಬರು... ಅವರೇ ಲತಾ ಮತ್ತು ಅಂಜಲಿ ಮಂಕುತಿಮ್ಮ!!!
|
ಗಾನ ಸರಸ್ವತಿಯರು ..
ಲತಾ ಮೇಡಂ & ಅಂಜಲಿ ಮೇಡಂ |
"ಮಂಕುತಿಮ್ಮ ಉವಾಚ .. ಅಜ್ಜಾ ಎಷ್ಟು ಸೊಗಸಾಗಿ ಹೇಳಿದಿರಿ.. ಹೌದು ಅವರಿಬ್ಬರ ಗಾಯನ.. ಮತ್ತು ಚಂದನ ವಾಹಿನಿಯ ಶ್ರೀಮತಿ ಆಶಾ ಜಗದೀಶ್ ಅವರ ಕೆಲವು ಕಗ್ಗಗಳ ಗಾಯನ ಮನಕ್ಕೆ ಮುದನೀಡಿತು"
"ಶ್ರೀ ಗುಂಡಪ್ಪ ಉವಾಚ ಹೌದು ಕಂದಾ.. ನೀ ಹೇಳಿದ ಮಾತುಗಳು ನಿಜಕ್ಕೂ ಸರಿಯಾಗಿದೆ.. ನಾನೇ ಅಲ್ಲಿ ಇದ್ದೇನೆ ಅನ್ನುವಷ್ಟು ಚಂದದ ವಿವರಣೆ ಕೊಡುತ್ತಿದ್ದೀಯ.. ಹಾ ಈ ಎರಡನೇ ಸಂಪುಟದ ಕತೃ ಶ್ರೀ ರವಿ ತಿರುಮಲೈ ಬಗ್ಗೆ ಸ್ವಲ್ಪ ಹೇಳು"
|
ಸಾರ್ಥಕ ಭಾವದಲ್ಲಿ ಶ್ರೀ ರವಿ ತಿರುಮಲೈ |
"ಮಂಕುತಿಮ್ಮ ಉವಾಚ ಇಡಿ ಕಾರ್ಯಕ್ರಮವನ್ನು ತಮ್ಮ ಗೆಳೆಯರ ಮುಂದಾಳತ್ವದಲ್ಲಿ ನಡೆಸಿಕೊಡಲು ಹೇಳಿ ತಾವು ಇಡಿ ಕಾರ್ಯಕ್ರಮದ ಚಂದ ಅಂದವನ್ನು ಸವಿಯುತ್ತಾ ಗಣ್ಯವ್ಯಕ್ತಿಗಳ ಜೊತೆ ಕೂತು ಅವರ ಆನಂದದ ಶರದಿಯಲ್ಲಿ ತಾನು ಮೀಯುತ್ತಾ.. ಆ ಅಭಿಮಾನ ವಿಶ್ವಾಸ ಪ್ರೀತಿ ಅಲೆಗಳ ಮೇಲೆ ತೇಲುತ್ತಾ ಸಾರ್ಥಕತೆಯ ಭಾವನೆಯನ್ನು ಅನುಭವಿಸಿದವರು ಶ್ರೀರವಿ ತಿರುಮಲೈ. ತಮ್ಮ ಚುಟುಕು ಮಾತುಗಳಲ್ಲಿ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತಾ ಗುರು ಹಿರಿಯರಿಗೆ ನಮಿಸಿ.. ಕಿರಿಯರಿಗೆ ಆಶೀರ್ವಚನಗಳನ್ನು ಕೊಡುತ್ತಾ.. ಅವರು ತಾವು ಪ್ರಕಟಿಸಿದ್ದಾ ಪುಸ್ತಕಗಳಿಗೆ ತಮ್ಮ ಅಭಿಮಾನ ಪೂರಿತ ಹಸ್ತಾಕ್ಷರ ಕೊಡುವ ದೃಶ್ಯ ನಿಜಕ್ಕೂ ಹೆಮ್ಮೆ ಎನಿಸಿತು ಅಜ್ಜಾ..."
"ಅಜ್ಜ ಒಂದು ಮಾತು.. ನೀವು ಬರೆದ ಅಷ್ಟೊಂದು ಕಗ್ಗಗಳ ಜೊತೆಯಲ್ಲಿ ಇಂದು ಕೆಲವು ಚಿಕ್ಕ ಚೊಕ್ಕ ಕಗ್ಗಗಳನ್ನು ನನ್ನ ಬಾಯಲ್ಲಿ ಹೇಳಿಸಿದ್ದೀರಲ್ಲ ಅದು ನ್ಯಾಯ ಸಮ್ಮತವೇ.. "
"ಮಂಕುತಿಮ್ಮ.. ಒಂದನ್ನು ನೋಡಿ ಇನ್ನೊಂದು ಕಲಿಯುವುದು ಈ ಕಲಿಯುಗದ ರೂಡಿ.. ನಾ ಬರೆದದ್ದು ಅನ್ನುವುದಕ್ಕಿಂತ ಆ ಬೊಮ್ಮ ಬರೆಸಿದ್ದು.. ನಾ ಬರೆದದ್ದು ಹಾಗೆಯೇ.. ಅದನ್ನ ನೋಡಿ ಇನ್ನೊಬ್ಬ ಬರೆದದ್ದು.. ತಪ್ಪಲ್ಲ.. ಸರಿಯಾಗಿದೆ.. ಮಂಕುತಿಮ್ಮ ನೀ ಬರೆದದ್ದು ನಾ ಬರೆಸಿದ್ದು ಎರಡು ಸರಿ.. "
ಅಜ್ಜ ಮತ್ತು ಮಂಕುತಿಮ್ಮ ಇಬ್ಬರೂ ಸ್ವಲ್ಪ ಹೊತ್ತು ಮೌನ .. ಆ ಮೌನದ ಕಡಲಲ್ಲಿ ಬಡಿಯುತ್ತಿದ್ದ ಅಲೆಗಳಲ್ಲಿ ಇಬ್ಬರೂ ಮೀಯುತ್ತಿದರು.. ಸ್ವಲ್ಪ ಹೊತ್ತಾದ ನಂತರ.. ಕಣ್ಣು ಬಿಟ್ಟು ನೋಡಿದರೆ.. ಸಭಾಂಗಣ ಖಾಲಿ.. ಅಲ್ಲಿ ಯಾರೂ ಇಲ್ಲ.. ಆದರೆ ಕಗ್ಗಗಳ ಶಭ್ದಗಳ ಪ್ರತಿಧ್ವನಿ ಮಾರ್ಧನಿಯಿಡುತ್ತಿತ್ತು..
ಮಂಕುತಿಮ್ಮ ಲಗುಬಗನೆ ಆ ಅಂಗಣದಲ್ಲಿ ಕಾಲಿಟ್ಟ.. ಒಂದು ಕಟ್ಟು ಹೊಸಪುಸ್ತಕಗಳು.. ಕಾಯುತ್ತಿದ್ದವು ಅಜ್ಜನ ಚಿತ್ರದೊಂದಿಗೆ.. ಅದನ್ನು ತೆಗೆದುಕೊಂಡು ಹೊರಟ ಅಜ್ಜನ ಜೊತೆಯಲ್ಲಿ ಮತ್ತೆ ತಮ್ಮ ಸುಂದರ ಲೋಕಕ್ಕೆ..
ಅಜ್ಜ ಒಮ್ಮೆ ಹಿಂದೆ ತಿರುಗಿ ನೋಡಿದರು.. "ಮತ್ತೆ ಬರುವೆ ಕಂದಾ ಮೂರನೇ ಸಂಪುಟಕ್ಕೆ" ಎಂದು ತಮ್ಮ ಕೋಲನ್ನು ಕುಟ್ಟುತ್ತಾ ಕುಟ್ಟುತ್ತಾ ಕೂಗಿದರು.....
ಇಡಿ ಜಗತ್ತು ಕಗ್ಗ ಎಂದರೆ ಬಡವನ್ಗೀತೆ.. ಭಗವದ್ಗೀತೆ ಎಂದರೆ ಕಗ್ಗದ ಜೊತೆಯಲ್ಲಿ ನಿಲ್ಲಲು ತಾಕತ್ ಇರುವ ಇನ್ನೊಂದು ಗೀತೆ ಎಂದು ಜಗತ್ತು ಸಂಭ್ರಮಿಸಿತು!!!!
|
ಹೃದಯವಂತ ಮಣಿಕಾಂತ್ ಸರ್ ಅವರ ಪೋಸ್ಟರ್ನಲ್ಲಿನ ಮಕ್ಕಳು |
ಮಕ್ಕಳಿಗೆ ಅರ್ಥವಾಗುವ ಹಾಗೆ ಇದನ್ನು ಓದಿ ಮಕ್ಕಳು ನಕ್ಕು ನಲಿಯುವ ಹಾಗೆ ಮಾಡುವ ಈ ಕಾಯಕವನ್ನು ಹಮ್ಮಿಕೊಂಡದ್ದು ಕನ್ನಡ ಕಹಳೆಯನ್ನು ಮುಗಿಲಿನೆತ್ತರಕ್ಕೆ ಹಾರಿಸುವ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ!!!
|
ಕನ್ನಡ ಭಾಷೆ ಮುಗಿಲೆತ್ತರಕ್ಕೆ |
ಇಂತಹ ಒಂದು ಸುಂದರ ಸಂಪುಟವನ್ನು ಲೋಕಕ್ಕೆ ಅರ್ಪಿಸಿದ ಅಜ್ಜ ಶ್ರೀ ಗುಂಡಪ್ಪನವರಿಗೆ ನಮನಗಳನ್ನು ಹೇಳುತ್ತಾ ಇನ್ನೊಂದು ಸಂಪುಟಕ್ಕೆ ನಮ್ಮನ್ನು ಕಾಯುವಂತೆ ಮಾಡುತ್ತಿದ್ದಾರೆ ಸುಮಧುರ ಮನಸ್ಸಿನ ಶ್ರೀ ರವಿ ತಿರುಮಲೈ ಸರ್..
ಸರ್ ನಾವು ಕಾಯುತ್ತಿದ್ದೇವೆ ಅಜ್ಜನ ಜೊತೆಯಲ್ಲಿ!!!