ನಮ್ಮ ಜೀವನವೇ ಒಂದು ಕೀಲಿ ಮಣೆ.. ಹೇಗೆ ಅಂತೀರಾ.. ನಡೆಯಿರಿ ಒಂದು ಹೆಜ್ಜೆ ಹೋಗಿ ಬರೋಣ.. !
ಚಿತ್ರ ಕೃಪೆ ಅಂತರ್ಜಾಲ |
ಮೊದಲನೇ ಸಾಲು function ಕೀಲಿಗಳು... ದೇವರಿದ್ದ ಹಾಗೆ.. ಪ್ರತಿ ಕೀಲಿಗಳು ಅದರದೇ ಜವಾಬ್ಧಾರಿಗಳನ್ನು ಹೊತ್ತಿರುತ್ತವೆ
ಅದರ ಕೆಳಗಿನ ಸಾಲು ಸಂಖ್ಯೆಗಳು ಮತ್ತು ಚಿನ್ಹೆಗಳು .. ಮಾಡಿದ ಪಾಪ ಪುಣ್ಯಗಳಿಗೆ ತಕ್ಕ ಹಾಗೆ shift ಒತ್ತಿದರೆ ಪುಣ್ಯದ ಚಿನ್ಹೆಗಳು, ಹಾಗೆಯೇ ಒತ್ತಿದರೆ ಅಂಕೆಗೆ ಒಳಪಡಬೇಕಾದ ಸಂಖ್ಯೆಗಳು
ಇನ್ನು ಜೀವನವನ್ನು ಹೊಂದಿಸಿಕೊಂಡು ಹೋಗಬೇಕು ಎಂಬ ನೀತಿ ಸಾರುವ ಅಕ್ಷರಗಳು ಹೇಗೋ ಹೇಗೋ ಒತ್ತಿಕೊಂಡು ಒತ್ತಿಕೊಂಡು ಕೂತಿರುತ್ತವೆ. ನಮಗೆ ಬೇಕಾದ ಅಕ್ಷರಗಳನ್ನು ಒತ್ತಿ ಒತ್ತಿ ಒಂದು ಸುಂದರ ಪದಗಳನ್ನು ಮಾಡಿಕೊಂಡ ಹಾಗೆ ಸರಿಯಾದ ಭಾವನೆಯನ್ನು, ಭಾವವನ್ನು ಜೋಡಿಸಿಕೊಂಡು ಜೀವನದ ಪದಗಳನ್ನು ಹುಡುಕಿಕೊಳ್ಳಬೇಕು
ಅದರ ಸುತ್ತ ಮುತ್ತಾ ಕ್ಯಾಪ್ಸ್ ಲಾಕ್ ಜೀವನವನ್ನು ದೊಡ್ಡದಾಗಿ ನೋಡಬೇಕು ಎಂದು ತೋರಿದರೆ, ಟ್ಯಾಬ್ ಗಳು ಸಂಕಷ್ಟಗಳು ಬಂದಾಗ ಒಂದು ಕಡೆಯಿಂದ ಇನ್ನೊಂದು ಕಡೆ ನೆಗೆ ಎಂದು ತೋರಿಸುತ್ತೆ. ಶಿಫ್ಟ್ ಕೀಲಿಗಳು ಒತ್ತಡ ಬಂದಾಗ ಸ್ವಲ್ಪ ಹೊತ್ತು ಪಕ್ಕಕ್ಕೆ ಸರಿಸಿ ಮುಂದೆ ಸಾಗು ಎಂದರೆ, ಜೀವನದ ಪಥವನ್ನು ನಿಯಂತ್ರಿಸು ಎಂದು control ಕೀಲಿ ಹೇಳುತ್ತೆ.
ಉಪಾಯಗಳು ಸರಿಯಾಗಿ ಬಾರದೆ.. ಮುಂದೇನು ಎಂದಾಗ.. ಇನ್ನೊಂದು ಬದಲಿ ಉಪಾಯ ಹುಡುಕು ಎನ್ನುವುದನ್ನು alt ಕೀಲಿ ಕೂಗಿಹೇಳುತ್ತೆ, ದುಃಖಗಳನ್ನು delete ಮಾಡು ಅಂತ ಹೇಳುತ್ತಾ ಕೆಲವೊಮ್ಮೆ ಹಿಂದೆ ಕಲಿತ ಪಾಠವನ್ನು ನೆನಪಿಸಿಕೋ ಎಂದು backspace ಕೀಲಿ ಸಾರುತ್ತೆ.
ಆಶಾವಾದಿಯಾಗಿರು ಎಂದು pageup ಹೇಳುತ್ತೆ.. ಏನೇ ಸುಖ ಬಂದರೂ ಅಹಂ ಕೆಳಗಿರಲಿ ಎಂದು pagedown ಹೇಳುತ್ತೆ,
ಮನೆಯೇ ಮೊದಲು ಎಂದು home, ಸ್ನೇಹಿತರನ್ನು ಸೇರಿಸಿಕೊ ಎಂದು insert, ಕೆಟ್ಟ ಘಟನೆಗಳಿಗೆ ಮುಕ್ತಾಯ ಅಂತ end ಹೇಳುತ್ತೆ,
ಕೆಲವೊಮ್ಮೆ ತಲೆ ಕೆಟ್ಟ ಹುಳುವಾದರೆ... ಸ್ವಲ್ಪ ಹೊತ್ತು ಇದರಿಂದ ಹೊರಗೆ ಹೋಗು ಎಂದು esc ಕೀಲಿ ಹೇಳುತ್ತೆ.
ಪ್ರತಿಯೊಂದಕ್ಕು, ಪ್ರತಿಯೊಬ್ಬರ ವಿಷಯದಲ್ಲೂ ಅಂತರ ಇಟ್ಟುಕೊಳ್ಳಬೇಕು ಎನ್ನುವ ಬೇಲಿಯನ್ನು spacebar ಹೇಳುತ್ತೆ.
ಇನ್ನು ಜೀವನ ಬೆಳಗಲು, ಸುತ್ತ ಮುತ್ತ ನೋಡಲು ಎಲ್ಲಾ ದಿಕ್ಕುಗಳಲ್ಲೂ ತಿರುಗುವ ಕೀಲಿಗಳು (arrow).
ಸುಂದರ ಜೀವನಕ್ಕೆ ರಹದಾರಿ ಎಂದು enter ಕೀಲಿ ಹೇಳಿದರೆ.. ಬೇಸರವಾದರೂ ಎಂದಿಗೂ ctrl alt del ಒತ್ತಬೇಡ ಎಂದು restart ಕೀಲಿ ಹೇಳುತ್ತೆ..
ಜೀವನವೇ ಒಂದು ನಾಟ್ಯ ರಂಗ.. ನಾವೆಲ್ಲಾ ಕುಣಿಯಲೇ ಬೇಕು.. ಯಾಕೆಂದರೆ mouse ಹಿಡಿದು ಓಡಾಡಿಸುವ ಸೂತ್ರಧಾರ pointer ಮೂಲಕ ನಮ್ಮನ್ನು ನಿಯಂತ್ರಿಸುತ್ತಿರುತ್ತಾನೆ.
ಜೀವನ laptop ಅಲ್ಲಾ.. ಜೀವನ desktop ಕೂಡ ಅಲ್ಲಾ.. ಜೀವನ ಒಂದು code ಇದ್ದ ಹಾಗೆ ಅದನ್ನು decode ಮಾಡಲು program ಭಾಷೆ ಬೇಕು.. ಅದುವೇ ನಗುವಿನ ಭಾಷೆ.. ಸ್ನೇಹದ ಭಾಷೆ.. ಅಲ್ಲವೇ
ಜೀವನದ ಸುಂದರ ಕ್ಷಣಗಳು ನಮ್ಮನ್ನು ಉಲ್ಲಸಿತವಾಗಿ ಇಡಲು ಪಣ ತೊಟ್ಟಾಗ.. ಬೇಡವಾದ ಚಿಂತೆಗಳನ್ನು, ಕಾಡುವ ಬೇಡದ ವ್ಯಸನಗಳನ್ನು ಹಿಡಿದು ಎಳೆದು ಎಳೆದು ತಂದು ಬಾಡುವ ಹೂವಾಗಿ ಏಕೆ ಮಾಡಿಕೊಳ್ಳಬೇಕು... !!!!
ಕಾಮೆಂಟ್ ಬರೆಯಲು ಕುಳಿತರೆ ಎಲ್ಲಾ ಕೀಗಳೂ ಕಾಣಿಸುತ್ತಿವೆ.. ಎಲ್ಲವುಗಳ ಮೇಲೂ ನೀವು ಹೇಳಿದ ಜೀವನದ ಪಾಠವೇ ಮೂಡಿದಂತಿದೆ..
ReplyDeleteಬೀಗಕ್ಕೆ ಕೀ ಹೇಗೂ ನಮ್ಮ ಜೀವನಕ್ಕೆ ಕೆಲವು ಕೀಲಿಗಳು ಮುಖ್ಯ. ಓದಿದ್ದಕ್ಕೆ ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು ಎಸ್ ಪಿ
Deleteನಿಮ್ಮ favourite ವಿಷಯದ ಬಗ್ಗೆ ಅಂತು ಇಂದು ಬರೆದಿರಿ ನೀವು. ನಮಗೆ ನಿಮಗೆ touch screen ಆಗದು ಶ್ರೀ, ಪದಗಳು ಸರಾಗವಾಗಿ ಹರಿಬೇಕು ಅಂದ್ರೆ ಕೀಲಿಮಣೆನೆ ಬೇಕು, ಹಾಗೆ ಜೀವನ ಸರಾಗವಾಗಿ ನಡಿಬೇಕು ಅಂದರೆ ನೀವು ಹೇಳಿದ ಪಾಠ ತಿಳಿದಿರಲೆ ಬೇಕು ಅಲ್ವೇ.... ಸೊಗಸಾಗಿದೆ :D
ReplyDeleteನಿಮ್ಮ ಮಾತು ನಿಜ ನಿವಿ. ಜೀವನಕ ಬೀಗಕ್ಕೆ ಕೆಲವು ಕೀಲಿಗಳು ಅವಶ್ಯಕ. ಧನ್ಯವಾದಗಳು
DeleteWaw! ಹುಡುಕ್ತಾ ಹೋದ್ರೆ ನಮ್ಮ ಸುತ್ತಲಿನ ಎಲ್ಲಾ ವಸ್ತುಗಳಲ್ಲೂ ಒಂದೊಂದು ತತ್ವ ಅಡಗಿದೆ ಅನ್ಸತ್ತಲ್ವಾ .. ಸಖತ್ ಬರಹ !
ReplyDeleteಧನ್ಯವಾದಗಳು ಪ್ರಶಸ್ತಿ. ಓದಿದ್ದಕ್ಕೆ ಮೆಚ್ಚಿದ್ದಕ್ಕೆ ನಮನಗಳು
Deleteಸಕ್ಕತ್ತಾಗಿದೆ ಸಾರ್. ಇದು ನನಗೆ ಅತ್ಯಂತ ಪ್ರಿಯವಾದ ಶೈಲಿ. ಒಂದು ಸಲ ಕಣ್ಣೂಹಾಯಿಸದೆ ದಿನವೂ ನಾವು ಕುಟ್ಟುವ ಕೀಲಿಮಣೆಯಲ್ಲಿ ಇಷ್ಟೆಲ್ಲಾ ಜೀವನಪಾಠ ಅಡಗಿದೆ ಎಂದು ಯಾರಿಗೂ ಹೊಳೆದಿರಲಿಕ್ಕಿಲ್ಲ. ಇಷ್ಟ ಆಯ್ತು.
ReplyDeleteಪ್ರದೀಪ್.. ಹುಚ್ಚು ಮನಸ್ಸು ಹೆಂಗೋ ಯೋಚಿಸುತ್ತದೆ. ಅದರ ಫಲವೇ ಈ ಹುಚ್ಚು ಬರಹ. ಧನ್ಯವಾಗಳು ನಿಮಗೆ
DeleteSooper..., esp "ಪ್ರತಿಯೊಂದಕ್ಕು, ಪ್ರತಿಯೊಬ್ಬರ ವಿಷಯದಲ್ಲೂ ಅಂತರ ಇಟ್ಟುಕೊಳ್ಳಬೇಕು ಎನ್ನುವ ಬೇಲಿಯನ್ನು spacebar ಹೇಳುತ್ತೆ. "
ReplyDeleteಧನ್ಯವಾದಗಳು DFR.. ಒಂದು ಗೆರೆಯನ್ನು ದಾಟಬಾರದು ಎನ್ನುವ ಅಂಶ ನೆನಪಿಗೆ ಬಂತು ಹಾಗೆ ಬರೆದೆ ಧನ್ಯವಾದಗಳು
Deleteತುಂಬಾ ಒಳ್ಳೆಯ ಬರಹ, ನಿತ್ಯ ಉಪಯೋಗಿಸುವ ಈ ಕೀಲಿ ಮಣೆಯಲ್ಲಿ ಜೀವನ ಪಾಠವೇ ಅಡಗಿದೆ ಎಂಬುದನ್ನು ಎಷ್ಟು ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಿ ಧನ್ಯವಾದಗಳು
ReplyDeleteವಿಧ್ಯಾರ್ಥಿ ಕೇಂದ್ರ ಮೊದಲ ಬಾರಿಗೆ ಕಾಲಿಟ್ಟ ನಿಮಗೆ ಸ್ವಾಗತ ಮತ್ತು ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ
Deleteವಾಹ್ ಸುಂದರ ಮತ್ತು ಸೃಜನಶೀಲ ಲೇಖನ ಶ್ರೀಮನ್...
ReplyDeleteಧನ್ಯವಾದಗಳು ಅಜಾದ್ ಸರ್..
DeleteSoooper Guru...!
ReplyDeleteThank you guru
Deleteಶ್ರೀ ಕಾಂತ್ ಸಾರ್ ಒಳ್ಳೆಯ ಕಲ್ಪನೆ ವಾಸ್ತವಕ್ಕೆ ಕನ್ನಡಿ ಹಿಡಿದಂತೆ ಇದೆ, ಗಣಕ ಯಾಂತ್ರದ ಕೀಲಿ ಮಣೆ ಜೀವನದ ಏರು ಪೇರಿನ ನಿಜ ದರ್ಶನ ಮಾಡಿಸುತ್ತವೆ ಎಂಬ ನಿಮ್ಮ ಕಲ್ಪನೆಗೆ ಜೈ ಹೊ ಅದು ಸತ್ಯ ಕೂಡ . ನಮ್ಮ ಸುತ್ತ ಮುತ್ತ ಇರುವ ಇಂತಹ ವಿಚಾರಗಳ ಬಗ್ಗೆ ಸೂಕ್ಷ್ಮವಾಗಿ ಅವಲೋಕನ ಮಾಡಿದರೆ ಇನತಹ ವಾಸ್ತವ ಸತ್ಯ ಅರ್ಥವಾಗುತ್ತವೆ . ನಿಮ್ಮ ಈ ಸತ್ಯ ದರ್ಶನಕ್ಕೆ ನನ್ನ ಸಲಾಮ್
ReplyDeleteಬಾಲೂ ಸರ್.. ಸುತ್ತ ಮುತ್ತಲ ವಸ್ತುಗಳೇ ನಮಗೆ ಸ್ಫೂರ್ತಿ ಎನ್ನುವ ಅಂಶ ತಲೆಗೆ ಬಂದಾಗ ಮೂಡಿಬಂದ ಲೇಖನ ಇದು.. ನೀವೆಲ್ಲ ಎಷ್ಟು ಸಹಾಯ ಮಾಡಿದ್ದೀರಿ ನನ್ನ ಬರವಣಿಗೆಗಳಿಗೆ ಧನ್ಯವಾದಗಳು
Deleteಮುಟ್ಟಿತು ಶ್ರೀಮಾನ್ ಮುಟ್ಟಿತು...
ReplyDeleteಇನ್ನು ಮನೋ ಚಿಂತೆಗಳಿಗೆ ctrl alt del!!! :)
ನೋವು ನಲಿವು ಇದ್ದದ್ದೇ.. ಅದರ ಮಧ್ಯೆ ಇಣುಕುವ ಜೀವನವನ್ನು ನಗುತ್ತ ಕಲಿಯಬೇಕು.. ಇದು ನನ್ನ ಮಂತ್ರ ಧನ್ಯವಾದಗಳು ಸರ್ಜಿ
Deleteಚಂದದ ಬರಹ ಶ್ರೀಕಾಂತಣ್ಣಾ...ದಿನಪೂರ್ತಿ ಕುಟ್ಟಿಸಿಕೊಳ್ಳುವ ಕೀಬೋರ್ಡೀನಲ್ಲೇ ಜೀವನ ಪಾಠ ಹೇಳ್ಬಿಟ್ರಲ್ಲಾ....ಸೂಪರ್..
ReplyDeleteಹಿತ್ತಲ ಗಿಡ ಮದ್ದಲ್ಲ ಎನ್ನುವಂತೆ ಕೆಲವು ವೇಳೆ ಅರಿವಿಗೆ ಬರದ ಅನೇಕ ಸ್ಪೂರ್ತಿಗಳು ಬೆಟ್ಟದಲ್ಲಿ ಹುಟ್ಟುವ ಝರಿಯಂತೆ ಹುಟ್ಟುತ್ತವೆ. ಧನ್ಯವಾದಗಳು ಚಿನ್ಮಯ್
Deleteಕೀಲಿ ಕೈಯಲ್ಲಿ ಜೀವನವನ್ನು ತಾಳೆ ನೋಡಿರುವ ನಿನ್ನ ಬರಹ ಅದ್ಭುತವಾಗಿದೆ.. ಇದನ್ನು ಸೋಮವಾರದ ಪತ್ರದ ಓದುಗರಿಗೆ ಕಳುಹಿಸುತ್ತಿದ್ದೇನೆ..... ಇದಕ್ಕೆ ನಿನ್ನ ಒಪ್ಪಿಗೆ ಇದೆಯೇ??
ReplyDeleteನಿನ್ನ ಬರಹಕ್ಕೆ ನನ್ನ ಅಭಿಮಾನಪೂರ್ವಕ ಮೆಚ್ಚುಗೆ ...
--
ಧನ್ಯವಾದಗಳು ಚಿಕ್ಕಪ್ಪ.. ಹಂಚಿಕೊಂಡಿರಿ, ಅವರ ಪ್ರತಿಕ್ರಿಯೆಗಳು ಕುಷಿ ಕೊಟ್ಟವು ಧನ್ಯವಾದಗಳು
DeleteThanks to Mr Srikanth for the wonderful innovative way suggested to look at the key board, that we are
ReplyDeleteusing so quite often each hour each day...
MSR
Thank you MSR Sir..thank you for reading and appreciating it.
DeleteReally creative. Congratulations.
ReplyDeleteThank you Prakash sir
DeleteSri superrrrr blog and this is really true when you compare with our real life.
ReplyDeleteThanks for sharing!!!!!
Suma
Thank you Suma...nice of you for your kind words
DeleteWonderfu….
ReplyDeleteEven though we use it every day, istella holede iralilla. Ide alwa namgu nimgu iruva difference……
Regards,
Roopashree
hahahah...thank you roopa...thank you so much
Deletevery well written :)
ReplyDeleteThank you Sreedevi..thank you very much
Delete