"ಅರೆ ಅರ್ಜುನ ಇದೇನು ನಾರುಮುಡಿಯುಟ್ಟು ಸ್ವಾಗತಿಸುತ್ತಿದ್ದೀಯ.. ? ರಾಜೋಚಿತ ಉಡುಪುಗಳು ಎಲ್ಲಿ? ಅರೆ ಕರ್ಣನು ಕೂಡ ಸಿದ್ಧವಾಗಿದ್ದಾನೆ.. ಏನು ಸಮಾಚಾರ ಪಾರ್ಥ.. ನೀನು ಎಲ್ಲಿಗೆ ಹೋಗುತ್ತಿದ್ದೀಯ ದಾನ ಶೂರ ಕರ್ಣ?" ಪ್ರಶ್ನೆಗಳ ಮಳೆಯನ್ನೇ ಸುರಿಸಿದ ಕೃಷ್ಣ ಪರಮಾತ್ಮ..!
ಅರ್ಜುನ ಹೇಳಿದ "ವಾಸುದೇವ.. ನಾನು ತೀರ್ಥ ಯಾತ್ರೆಗೆ ಹೊರಟಿದ್ದೆ.. ಏತಕ್ಕೆ ಎನ್ನುವುದು ನಿನಗೆ ಚೆನ್ನಾಗಿ ಗೊತ್ತು.. ಹೊರಟು ನಿಂತಿದ್ದೆ.. ಕರ್ಣನ ಹಾಗೆ ಇನ್ನೊಬ್ಬರಿಗೆ ಸಹಾಯ ಮಾಡುವ ಒಂದು ಸುಂದರ ಕಾರ್ಯಕ್ರಮ ನಡೆಯುತ್ತಿದೆ ಎಂಬ ಒಂದು ವಿಷಯ ತಿಳಿಯಿತು.. ಕರ್ಣನಿಗೆ ಹೇಳಿದೆ.. ಅವಶ್ಯವಾಗಿ ನಾನು ಅದನ್ನು ನೋಡಿ ಬರುತ್ತೇನೆ ಹಾಗೆಯೇ ನಿನಗೆ ತೀರ್ಥಯಾತ್ರೆಗೆ ಸ್ವಲ್ಪ ದಾರಿ ಜೊತೆಯಾಗಿ ಬರುತ್ತೇನೆ ಎಂದು ಇಬ್ಬರು ಹೊರಟೆವು!"
"ಸರಿ ಹಾಗಾದರೆ.. ಹೋಗಿ ಬನ್ನಿ... ಅಲ್ಲಿನ ಕಾರ್ಯಕ್ರಮದ ಕೊಂಡಿಯನ್ನು ನನಗೆ ಮೇಲ್ ಮಾಡಿ" ಎಂದು ಕೃಷ್ಣ ಹೇಳಿ ಪಾರ್ಥನಿಗೆ ಆಶೀರ್ವದಿಸುತ್ತಾ
"ಕಲ್ಯಾಣವಾಗಲಿ"
ಕಲ್ಯಾಣ ಬರಲಿ
ಕಲ್ಯಾಣ ಸಿಗಲಿ" ಎಂದ!
ಪಾರ್ಥನಿಗೆ ಆಶ್ಚರ್ಯ... "ಅರೆ ಕಲ್ಯಾಣಮಸ್ತು ಕಲ್ಯಾಣಮಸ್ತು ಕಲ್ಯಾಣಮಸ್ತು ಅಂತ ಮೂರು ಸಲ ಆಶೀರ್ವದಿಸುತ್ತೀಯ ಎಂದು ತಿಳಿದಿದ್ದೆ.. ಇದೇನು ಪರಮಾತ್ಮ ಈ ಪರಿ ಆಶೀರ್ವಾದ" ಎಂದ.
ನೀನು ಆ ಕಾರ್ಯಕ್ರಮಕ್ಕೆ ಹೋಗು ಪಾರ್ಥ.. ! ನಿನಗೆ ತಿಳಿಯುತ್ತೆ ಅಂತ ಕೊಳಲು ನುಡಿಸುತ್ತಾ ಹೊರಟೆ ಬಿಟ್ಟಾ ಪರಮಾತ್ಮ!
ಸರಿ ಇನ್ನೇನು ಮಾಡುವುದು ಎಂದು ಕರ್ಣಾರ್ಜುನರು ಕೃಷ್ಣನ ಅಣತಿಯಂತೆ ಹೊರಟರು!
------------------------------------------------------------------------------------------------------------
ಮೈಸೂರು ರಸ್ತೆಯಲ್ಲಿ ನಿಧಾನವಾಗಿ ಚಲಿಸುತ್ತಿದ್ದ ಕಾರಿನಲ್ಲಿ "ಅರರರೆ ತುಂತುರು ತಂತು ಋತು... ಅರರರೆ ತುಂತುರು ತಂತು ಋತು... " ಹಾಡು ಬರುತಿತ್ತು.. "ತುಂತುರು ಅಲ್ಲಿ ನೀರ ಹಾಡು" ಎಂದು ಶುರುವಾಯಿತು.
ಮೈಮನ ಪುಳಕಗೊಳ್ಳುತಿತ್ತು. ಆ ನಾದಕ್ಕೆ ಮೈಮರೆಯುತ್ತಿದ್ದಂತೆ "ಮನಸೇ ಮನಸೇ ಎಂಥಾ ಮನಸೇ" ಸುಮಧುರ ಗಾನ.. ಕರ್ಣಾರ್ಜುನರಿಗೆ ಆಶ್ಚರ್ಯ... ಕೇಳುತ್ತಾ ಮೈಮರೆತಿದ್ದರು..
"ಸಿಹಿಗಾಳಿ ಸಿಹಿಗಾಳಿ ಸಹಿ ಹಾಕಿದೆ ಮನಸ್ಸಿನಲ್ಲಿ
ಒಂದು ತುತ್ತು ಒಂದು ತುತ್ತು
ಎತ್ತಿಟ್ಟರೆ ಸಾಕು.. ಹಸಿದ ಹೊಟ್ಟೆಯನ್ನು ತುಂಬುವುದು ..... "
ಅಚಾನಕ್ಕಾಗಿ ಕಣ್ಣು ಬಿಟ್ಟ ಅರ್ಜುನ.. "ಕರ್ಣ ಈ ಹಾಡಿನಲ್ಲಿ ಏನೋ ವ್ಯತ್ಯಾಸ ಇದೆ.. ನಾ ಕೇಳಿದ ಹಾಡು ಬೇರೆ.. " ಎಂದ
ಕರ್ಣ "ಅರ್ಜುನನ ಭುಜ ತಟ್ಟಿ ಅಲ್ಲಿ ನೋಡು" ಎಂದ... ಅರ್ಜುನ ಕಣ್ಣರಳಿಸಿ ನೋಡಿ ಹೂವಿನ ನಗೆಬಾಣವನ್ನು ಬಿಟ್ಟಾ!
------------------------------------------------------------------------------------------------------------
ಕರುನಾಡಿನಲ್ಲಿ ಪ್ರೇಮಕವಿ ಎಂದೇ ಹೆಸರಾದ ಶ್ರೀ ಕಲ್ಯಾಣ್ ಅವರು ಪಕ್ಕದ ಕಾರಿನಿಂದ ಇಳಿದು ಸೀದಾ "ಹಂಸ" ನಡಿಗೆಯಲ್ಲಿ, ಮೈಸೂರು ರಸ್ತೆಯ ಕುಂಬಳಗೋಡು ಗ್ರಾಮದ ಸರಹದ್ದಿನಲ್ಲಿರುವ ಒಂದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಡೆ ಹೆಜ್ಜೆ ಹಾಕಿ, ಮುಖ್ಯ ಅತಿಥಿಯಾಗಿ ತಮ್ಮ ಆಸನ ಸ್ವೀಕರಿಸಿದರು.
ಅಂದು ಕೆಲವು ಆಯ್ದ ಶಾಲೆಗಳ ಮಕ್ಕಳಿಗೆ ಪಾದರಕ್ಷೆಗಳನ್ನು, ನೋಟ್ ಬುಕ್ ಗಳನ್ನೂ, ಟೈ, ಬೆಲ್ಟ್ ಗಳನ್ನು ವಿತರಿಸುವ ಸತೀಶ್ ಬಿ ಕನ್ನಡಿಗ ಅವರ ಒಂದು ಸುಂದರ ಪರಿಶ್ರಮಕ್ಕೆ ಯಶಸ್ಸಿನ ಹಂತ ಮುಟ್ಟುವ ಕಾರ್ಯಕ್ರಮ ನಡೆಯಲು ವೇದಿಕೆ ಸಜ್ಜುಗೊಂಡಿತ್ತು, ಅದಕ್ಕೆ ಹೆಗಲು ಕೊಟ್ಟು 3K ತಂಡದ ನಾಯಕಿ ರೂಪ ಸತೀಶ್, ಎಲ್ಲರ ನೆಚ್ಚಿನ ವಿಜ್ಞಾನಿ, ಹೃದಯವಂತ ಗೆಳೆಯ ಆಜಾದ್ ಸರ್, ನಮ್ಮೆಲ್ಲರ ನಗೆ ಬುಗ್ಗೆ ಪ್ರಕಾಶಣ್ಣ , ಮತ್ತು ಮುಖ್ಯೋಪಾಧ್ಯಾಯಿನಿ ಆಸೀನರಾದರು.
ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಶುರುವಾಯಿತು, ಯಕ್ಷಗಾನದ ತುಣುಕು, ವೀರಾವೇಶದ ಹಾಡಿಗೆ ನೃತ್ಯ, ಜಾನಪದ ಗೀತೆಗಳಿಗೆ ನೃತ್ಯ, ಅರಳುತಿದ್ದ ಮಕ್ಕಳ ಕಡೆಯಿಂದ ಶ್ಲೋಕಗಳು, ಹಾಡುಗಳು, ನೃತ್ಯ, ಸಾಧನೆಯ ಹಂಬಲ ಹೊತ್ತ ಸಾಹಸಿಯ ಯೋಗಾಸನ ಒಂದೇ ಎರಡೇ ಸಾಲು ಸಾಲು ಕಾರ್ಯಕ್ರಮಗಳು ಮನಸನ್ನು ಸೂರೆಗೊಂಡವು. ಇದರ ನಡುವೆ ಮಕ್ಕಳಿಗೆ ವೇದಿಕೆಯಲ್ಲಿ ಆಸೀನರಾಗಿದ್ದ ಮಹಾನೀಯರಿಂದ ಮಕ್ಕಳಿಗೆ ನೋಟ್ ಬುಕ್ ವಿತರಣೆಯಾಯಿತು. ಮಿಕ್ಕ ಪುಸ್ತಕಗಳನ್ನು, ಟೈ ಬೆಲ್ಟ್, ಪಾದರಕ್ಷೆಗಳನ್ನು ಆಯಾ ಶಾಲೆಯ ಉಪಾಧ್ಯಾಯರಿಗೆ ವಿತರಿಸಿದರು. ಮುಖ್ಯ ಅತಿಥಿ ಶ್ರೀ ಕಲ್ಯಾಣ್ ಅವರು ಮಕ್ಕಳಿಗೆ ಹಿತನುಡಿ ನುಡಿದು ಆಶೀರ್ವದಿಸಿದರು.
ಅಪೂರ್ವ ಸಾಧನೆ ಮಾಡಿದರೂ ನಾವು ಕಂಡ ಅತ್ಯಂತ ಸರಳ ಜೀವಿ, ಹಮ್ಮು ಬಿಮ್ಮು ಇಲ್ಲದೆ ಎಲ್ಲರ ಜೊತೆಯಲ್ಲಿ ಬೆರೆಯುವ ಸರಳ ಗುಣ ನಮ್ಮೆಲ್ಲರ ಮೆಚ್ಚಿನ ಪ್ರೇಮಕವಿ ಶ್ರೀ ಕಲ್ಯಾಣ್ ಅವರದ್ದು. ಅವರ ಜೊತೆಯಲ್ಲಿ ಆಡಿದ ಕೆಲ ಮಾತುಗಳು, ಕಳೆದ ಕೆಲ ಸಮಯ ಜೀವನದ ಉತ್ತಮ ಕ್ಷಣಗಳಲ್ಲಿ ಒಂದು ಎನ್ನಬಹುದು. ಈ ಕ್ಷಣಗಳು ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆ ಕೊಟ್ಟಿತು.
ಮಕ್ಕಳ ಜೊತೆಯಲ್ಲಿ ಕಾರ್ಯಕ್ರಮಕ್ಕೆ ಬಂದವರು ಮಕ್ಕಳಾಗಿ ಒಬ್ಬರನ್ನೊಬ್ಬರು ತಮಾಷೆಮಾಡುತ್ತಾ, ನಗುತ್ತಾ, ನಗಿಸುತ್ತಾ ಸುಂದರ ಕ್ಷಣಗಳನ್ನು ಕಳೆದರು. ತಿಂಡಿ ಕೊಡುವ ಸಮಯ, ಊಟ ಮಾಡುವ ಸಮಯ ಎಲ್ಲವಕ್ಕೂ ನಗೆಯೇ ಸಿಹಿ ತಿಂಡಿಯಾಗಿತ್ತು. ತಿಂದದ್ದು, ನಕ್ಕಿದ್ದು ಎಲ್ಲವೂ ಸೇರಿ ಎಲ್ಲರ ಹೊಟ್ಟೆ ಉಬ್ಬಿದ್ದಂತು ನಿಜ.
ನಗಲು ಇನ್ನಷ್ಟು ಹೂರಣ ಸಿಕ್ಕಿದ್ದು ಸತೀಶ್ ನಾಯಕ್ ಅವರ ಸುಮಧುರ ನಿರೂಪಣೆ, ಪ್ರಕಾಶ ಹೆಗಡೆಯವರ ಶಾಲೆಯಲ್ಲಿ ಕಲಿತಿದ್ದ "ಒಂದು ಎರಡು ಬಾಳೆಲೆ ಹರಡು" ಪದ್ಯ, ಬಾಲೂ ಸರ್ ಅವರ ಹಾಸ್ಯ, ನಡುವೆ ಉತ್ತಮ ಸಂದೇಶ ಕೊಟ್ಟ ಅಜಾದ್ ಸರ್ ಅವರ ಕಿವಿ ಮಾತುಗಳು, ಸ್ನೇಹಲೋಕ ತಂಡದ ನೃತ್ಯ, ಜೊತೆಗೆ ಕಾರ್ಯಕ್ರಮದ ಅಂತಿಮ ಹಂತದಲ್ಲಿ ಎಲ್ಲರ ಜೊತೆಯಲ್ಲಿ ಒಂದು ಚೆಂದದ ಫೋಟೋ ಕಾರ್ಯಕ್ರಮದ ಯಶಸನ್ನು ಸಾರಿ ಸಾರಿ ಹೇಳುತಿತ್ತು.
ಈ ಕಾರ್ಯಕ್ರಮದ ರೂವಾರಿ ಸತೀಶ್ ಬಿ ಕನ್ನಡಿಗ ಅವರ ಪರಿಶ್ರಮ ಈ ಸುಂದರ ಕಾರ್ಯಕ್ರಮ. ನಾನು ನನ್ನ ಕುಟುಂಬ ಅನ್ನುವ ಈ ಕಾಲದಲ್ಲಿ ತತ್ವ, ಆದರ್ಶಗಳನ್ನೂ ಪಾಲಿಸುತ್ತಾ, ಜನರಿಂದ ಜನರಿಗಾಗಿ ಎನ್ನುವ ತಮ್ಮ ತತ್ವವನ್ನು ಆಚರಣೆಗೆ ತಂದು, ತಮ್ಮ ಸುತ್ತಮುತ್ತಲ ಪರಿಸರ, ಕುಟುಂಬಗಳ ಕಾಳಜಿವಹಿಸುವ ಇವರ ವ್ಯಕ್ತಿತ್ವಕ್ಕೆ ಒಂದು ಸಲಾಂ ಹೇಳಬೇಕು. ಧಣಿವರಿಯದ ಇವರ ಕೆಲಸ ಸಾಧನೆಗಳ ಬಗ್ಗೆ ಹೆಮ್ಮೆಯಾಗುತ್ತದೆ. ತಮ್ಮ ಪಾಡಿಗೆ ತಾವು ನಂಬಿರುವ ಆದರ್ಶಗಳನ್ನು ಪಾಲಿಸುತ್ತಾ ತೆರೆಮರೆಯಲ್ಲೇ ಇವರು ಮಾಡುತ್ತಿರುವ ಕೆಲಸಗಳು ನಿಜಕ್ಕೂ ಶ್ಲಾಘನೀಯ.
ಸತೀಶ್ ಅವರು ಒಂದು ಸುಂದರ ತಂಡ ಕಟ್ಟಿ ತಮ್ಮ ತಲೆಯಲ್ಲಿ ಬಂದ ಆಲೋಚನೆ ಎನ್ನುವ ಬಂಡೆಗೆ ಒಂದು ಸುಂದರ ಮೂರ್ತಿಯ ರೂಪ ಕೊಟ್ಟು, ತಾವು ಸಕ್ರಿಯರಾಗಿರುವ ಗುಂಪುಗಳಾದ ಹತ್ತು ಜನರಿಂದ ಒಂದೊಂದು ತುತ್ತು, ವಾತ್ಸಲ್ಯ ಕುಟುಂಬ, ಸ್ನೇಹಲೋಕ, 3K-ಕನ್ನಡ ಕವಿತೆ ಕವನ, ಶ್ರೀ ಸಾಯಿ ಕಾಮಧೇನು ಫೌಂಡೇಶನ್, ಶಂಕರ್ ನಾಗ್ ಭಕ್ತರು ಮುಂತಾದ ತಂಡಗಳ ಸಹ ಪ್ರಾಯೋಜತ್ವದಲ್ಲಿ ಒಂದು ಸರಳ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿಭಾಯಿಸಿ ನಡೆಸಿಕೊಟ್ಟರು. ಸತೀಶ್ ಅವರಿಗೆ ಹೆಗಲು ಕೊಟ್ಟು ಈ ಕಾರ್ಯಕ್ರಮವನ್ನು ಯಶಸ್ಸಿನ ಹಾದಿಯಲ್ಲಿ ಕೊಂಡೊಯ್ದ ಎಲ್ಲರಿಗೂ ಅಭಿನಂದನೆಗಳು.
-----------------------------------------------------------------------------------------------------------
"ಅರ್ಜುನ... ಪಾರ್ಥ... ಮಧ್ಯಮ ಪಾಂಡವ... "
"ಆ ಹಾ ಆಅ ಆಅ... ಹಾ ಕರ್ಣ.. ಒಂದು ಕ್ಷಣ ರೋಮಾಂಚನವಾಗುತ್ತೆ ಈ ಕಾರ್ಯಕ್ರಮವನ್ನು ನೋಡಿದಾಗ.. ಇರು ಕೃಷ್ಣನಿಗೆ ಈ ಕಾರ್ಯಕ್ರಮದ ಬಗ್ಗೆ ಒಂದು ಮೇಲ್ ಕಳಿಸಿ ಬಿಡ್ತೀನಿ.. "
"ಸರಿ ಅರ್ಜುನ.. ನೀನು ಹೊರಡು ತೀರ್ಥಯಾತ್ರೆಗೆ.. ಶುಭವಾಗಲಿ ... ಹಾಗೆಯೇ ಈ ಕಾರ್ಯಕ್ರಮದ ಒಂದು ಪ್ರತಿಯನ್ನು ನನಗೂ ಕಳಿಸಿಬಿಡು"
"ಆಗಲಿ ಕರ್ಣ... ಶುಭವಾಗಲಿ ನಿನ್ನ ಯಾತ್ರೆ .."
ಅರ್ಜುನ ವಾಯುದೇವನನ್ನು ಸ್ಮರಿಸಿ ಒಂದು ಬಾಣ ಹೂಡಿದನು.. ಆ ಬಾಣಕ್ಕೆ
srikrishna@mathura.com,
daanaveerakarna@angaraja.com
ಮೇಲ್ ಅಡ್ರೆಸ್ ಹಾಕಿ ಬಿಲ್ಲನ್ನು ಹೆದೆಗೆರಿಸಿ ಅದಕ್ಕೆ ಒಂದು ಕೊಂಡಿಯನ್ನು ತಾಕಿಸಿ ಬಾಣ ಬಿಟ್ಟನು... !
ಸರ್ವಂ ಕೃಷ್ಣಾರ್ಪಣಮಸ್ತು!
------------------------------------------------------------------------------------------------------------
ಕೊಳಲು ಹಿಡಿದ ಪರಮಾತ್ಮ |
"ಸರಿ ಹಾಗಾದರೆ.. ಹೋಗಿ ಬನ್ನಿ... ಅಲ್ಲಿನ ಕಾರ್ಯಕ್ರಮದ ಕೊಂಡಿಯನ್ನು ನನಗೆ ಮೇಲ್ ಮಾಡಿ" ಎಂದು ಕೃಷ್ಣ ಹೇಳಿ ಪಾರ್ಥನಿಗೆ ಆಶೀರ್ವದಿಸುತ್ತಾ
"ಕಲ್ಯಾಣವಾಗಲಿ"
ಕಲ್ಯಾಣ ಬರಲಿ
ಕಲ್ಯಾಣ ಸಿಗಲಿ" ಎಂದ!
ಪಾರ್ಥನಿಗೆ ಆಶ್ಚರ್ಯ... "ಅರೆ ಕಲ್ಯಾಣಮಸ್ತು ಕಲ್ಯಾಣಮಸ್ತು ಕಲ್ಯಾಣಮಸ್ತು ಅಂತ ಮೂರು ಸಲ ಆಶೀರ್ವದಿಸುತ್ತೀಯ ಎಂದು ತಿಳಿದಿದ್ದೆ.. ಇದೇನು ಪರಮಾತ್ಮ ಈ ಪರಿ ಆಶೀರ್ವಾದ" ಎಂದ.
ನೀನು ಆ ಕಾರ್ಯಕ್ರಮಕ್ಕೆ ಹೋಗು ಪಾರ್ಥ.. ! ನಿನಗೆ ತಿಳಿಯುತ್ತೆ ಅಂತ ಕೊಳಲು ನುಡಿಸುತ್ತಾ ಹೊರಟೆ ಬಿಟ್ಟಾ ಪರಮಾತ್ಮ!
ಸರಿ ಇನ್ನೇನು ಮಾಡುವುದು ಎಂದು ಕರ್ಣಾರ್ಜುನರು ಕೃಷ್ಣನ ಅಣತಿಯಂತೆ ಹೊರಟರು!
------------------------------------------------------------------------------------------------------------
ಮೈಸೂರು ರಸ್ತೆಯಲ್ಲಿ ನಿಧಾನವಾಗಿ ಚಲಿಸುತ್ತಿದ್ದ ಕಾರಿನಲ್ಲಿ "ಅರರರೆ ತುಂತುರು ತಂತು ಋತು... ಅರರರೆ ತುಂತುರು ತಂತು ಋತು... " ಹಾಡು ಬರುತಿತ್ತು.. "ತುಂತುರು ಅಲ್ಲಿ ನೀರ ಹಾಡು" ಎಂದು ಶುರುವಾಯಿತು.
ಮೈಮನ ಪುಳಕಗೊಳ್ಳುತಿತ್ತು. ಆ ನಾದಕ್ಕೆ ಮೈಮರೆಯುತ್ತಿದ್ದಂತೆ "ಮನಸೇ ಮನಸೇ ಎಂಥಾ ಮನಸೇ" ಸುಮಧುರ ಗಾನ.. ಕರ್ಣಾರ್ಜುನರಿಗೆ ಆಶ್ಚರ್ಯ... ಕೇಳುತ್ತಾ ಮೈಮರೆತಿದ್ದರು..
"ಸಿಹಿಗಾಳಿ ಸಿಹಿಗಾಳಿ ಸಹಿ ಹಾಕಿದೆ ಮನಸ್ಸಿನಲ್ಲಿ
ಒಂದು ತುತ್ತು ಒಂದು ತುತ್ತು
ಎತ್ತಿಟ್ಟರೆ ಸಾಕು.. ಹಸಿದ ಹೊಟ್ಟೆಯನ್ನು ತುಂಬುವುದು ..... "
ಅಚಾನಕ್ಕಾಗಿ ಕಣ್ಣು ಬಿಟ್ಟ ಅರ್ಜುನ.. "ಕರ್ಣ ಈ ಹಾಡಿನಲ್ಲಿ ಏನೋ ವ್ಯತ್ಯಾಸ ಇದೆ.. ನಾ ಕೇಳಿದ ಹಾಡು ಬೇರೆ.. " ಎಂದ
ಕರ್ಣ "ಅರ್ಜುನನ ಭುಜ ತಟ್ಟಿ ಅಲ್ಲಿ ನೋಡು" ಎಂದ... ಅರ್ಜುನ ಕಣ್ಣರಳಿಸಿ ನೋಡಿ ಹೂವಿನ ನಗೆಬಾಣವನ್ನು ಬಿಟ್ಟಾ!
------------------------------------------------------------------------------------------------------------
ಕರುನಾಡಿನಲ್ಲಿ ಪ್ರೇಮಕವಿ ಎಂದೇ ಹೆಸರಾದ ಶ್ರೀ ಕಲ್ಯಾಣ್ ಅವರು ಪಕ್ಕದ ಕಾರಿನಿಂದ ಇಳಿದು ಸೀದಾ "ಹಂಸ" ನಡಿಗೆಯಲ್ಲಿ, ಮೈಸೂರು ರಸ್ತೆಯ ಕುಂಬಳಗೋಡು ಗ್ರಾಮದ ಸರಹದ್ದಿನಲ್ಲಿರುವ ಒಂದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಡೆ ಹೆಜ್ಜೆ ಹಾಕಿ, ಮುಖ್ಯ ಅತಿಥಿಯಾಗಿ ತಮ್ಮ ಆಸನ ಸ್ವೀಕರಿಸಿದರು.
ಹಂಸ ನಡಿಗೆ ಇಡುತ್ತಾ ಬಂದರು ಸರಳ ಪ್ರೇಮ ಕವಿ ಶ್ರೀ ಕಲ್ಯಾಣ್ |
ಪ್ರತಿಭಾವಂತರ ದಂದು ವೇದಿಕೆಯಲ್ಲಿ |
ದೊಡ್ಡವರು ಮಾತ್ರ ಜಾಣರಲ್ಲ ! |
ಹೃದಯ ಸಮುದ್ರದ ಸುಂದರ ನೃತ್ಯ ಶೈಲಿ |
ಸುಂದರ ನೃತ್ಯ ಮಾಡಿದ ಬಾಲಕಿ |
ಸಾಧನೆಗೆ ಪರಿಶ್ರಮ ಅಗತ್ಯ ಎಂದು ನಿರೂಪಿಸಿದ ಸಾಹಸಿ |
ವೇದಿಗೆಕೆ ಹೆಜ್ಜೆ ಇಡಲು ಬೇಕಾದ್ದು ಆತ್ಮಸ್ಥೈರ್ಯ ಎಂದು ತೋರಿಸಿದ ಪುಟಾಣಿ |
ಸಕ್ಕರೆಯಂತ ಅಕ್ಕರ ಪದ್ಯ ಉಳಿದ ಪ್ರಕಾಶಣ್ಣ |
ಹಮ್ಮು ಬಿಮ್ಮು ಇಲ್ಲದೆ ಮಕ್ಕಳಿಗೆ ಹಿತ ನುಡಿ ಹೇಳಿದ ಅಜಾದ್ ಸರ್ |
ಅಪೂರ್ವ ಸಾಧನೆ ಮಾಡಿದರೂ ನಾವು ಕಂಡ ಅತ್ಯಂತ ಸರಳ ಜೀವಿ, ಹಮ್ಮು ಬಿಮ್ಮು ಇಲ್ಲದೆ ಎಲ್ಲರ ಜೊತೆಯಲ್ಲಿ ಬೆರೆಯುವ ಸರಳ ಗುಣ ನಮ್ಮೆಲ್ಲರ ಮೆಚ್ಚಿನ ಪ್ರೇಮಕವಿ ಶ್ರೀ ಕಲ್ಯಾಣ್ ಅವರದ್ದು. ಅವರ ಜೊತೆಯಲ್ಲಿ ಆಡಿದ ಕೆಲ ಮಾತುಗಳು, ಕಳೆದ ಕೆಲ ಸಮಯ ಜೀವನದ ಉತ್ತಮ ಕ್ಷಣಗಳಲ್ಲಿ ಒಂದು ಎನ್ನಬಹುದು. ಈ ಕ್ಷಣಗಳು ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆ ಕೊಟ್ಟಿತು.
ಪ್ರೇಮಕವಿಗೆ ಪ್ರೀತಿಯ ಕಾಣಿಕೆ |
ಮಕ್ಕಳ ಜೊತೆಯಲ್ಲಿ ಕಾರ್ಯಕ್ರಮಕ್ಕೆ ಬಂದವರು ಮಕ್ಕಳಾಗಿ ಒಬ್ಬರನ್ನೊಬ್ಬರು ತಮಾಷೆಮಾಡುತ್ತಾ, ನಗುತ್ತಾ, ನಗಿಸುತ್ತಾ ಸುಂದರ ಕ್ಷಣಗಳನ್ನು ಕಳೆದರು. ತಿಂಡಿ ಕೊಡುವ ಸಮಯ, ಊಟ ಮಾಡುವ ಸಮಯ ಎಲ್ಲವಕ್ಕೂ ನಗೆಯೇ ಸಿಹಿ ತಿಂಡಿಯಾಗಿತ್ತು. ತಿಂದದ್ದು, ನಕ್ಕಿದ್ದು ಎಲ್ಲವೂ ಸೇರಿ ಎಲ್ಲರ ಹೊಟ್ಟೆ ಉಬ್ಬಿದ್ದಂತು ನಿಜ.
ನಗಲು ಇನ್ನಷ್ಟು ಹೂರಣ ಸಿಕ್ಕಿದ್ದು ಸತೀಶ್ ನಾಯಕ್ ಅವರ ಸುಮಧುರ ನಿರೂಪಣೆ, ಪ್ರಕಾಶ ಹೆಗಡೆಯವರ ಶಾಲೆಯಲ್ಲಿ ಕಲಿತಿದ್ದ "ಒಂದು ಎರಡು ಬಾಳೆಲೆ ಹರಡು" ಪದ್ಯ, ಬಾಲೂ ಸರ್ ಅವರ ಹಾಸ್ಯ, ನಡುವೆ ಉತ್ತಮ ಸಂದೇಶ ಕೊಟ್ಟ ಅಜಾದ್ ಸರ್ ಅವರ ಕಿವಿ ಮಾತುಗಳು, ಸ್ನೇಹಲೋಕ ತಂಡದ ನೃತ್ಯ, ಜೊತೆಗೆ ಕಾರ್ಯಕ್ರಮದ ಅಂತಿಮ ಹಂತದಲ್ಲಿ ಎಲ್ಲರ ಜೊತೆಯಲ್ಲಿ ಒಂದು ಚೆಂದದ ಫೋಟೋ ಕಾರ್ಯಕ್ರಮದ ಯಶಸನ್ನು ಸಾರಿ ಸಾರಿ ಹೇಳುತಿತ್ತು.
ಸುಂದರ ಲೋಕ ಈ ನಮ್ಮೆಲ್ಲರ ಸ್ನೇಹಲೋಕ |
ಪ್ರಕಾಶಣ್ಣನಿಂದ ಅಭಿಮಾನದ ಅಪ್ಪುಗೆ! |
ಹುರ್ರಾ ಕಾರ್ಯಕ್ರಮ ಯಶಸ್ವೀ ಆಯಿತು! |
"ಅರ್ಜುನ... ಪಾರ್ಥ... ಮಧ್ಯಮ ಪಾಂಡವ... "
"ಆ ಹಾ ಆಅ ಆಅ... ಹಾ ಕರ್ಣ.. ಒಂದು ಕ್ಷಣ ರೋಮಾಂಚನವಾಗುತ್ತೆ ಈ ಕಾರ್ಯಕ್ರಮವನ್ನು ನೋಡಿದಾಗ.. ಇರು ಕೃಷ್ಣನಿಗೆ ಈ ಕಾರ್ಯಕ್ರಮದ ಬಗ್ಗೆ ಒಂದು ಮೇಲ್ ಕಳಿಸಿ ಬಿಡ್ತೀನಿ.. "
"ಸರಿ ಅರ್ಜುನ.. ನೀನು ಹೊರಡು ತೀರ್ಥಯಾತ್ರೆಗೆ.. ಶುಭವಾಗಲಿ ... ಹಾಗೆಯೇ ಈ ಕಾರ್ಯಕ್ರಮದ ಒಂದು ಪ್ರತಿಯನ್ನು ನನಗೂ ಕಳಿಸಿಬಿಡು"
"ಆಗಲಿ ಕರ್ಣ... ಶುಭವಾಗಲಿ ನಿನ್ನ ಯಾತ್ರೆ .."
ಅರ್ಜುನ ವಾಯುದೇವನನ್ನು ಸ್ಮರಿಸಿ ಒಂದು ಬಾಣ ಹೂಡಿದನು.. ಆ ಬಾಣಕ್ಕೆ
srikrishna@mathura.com,
daanaveerakarna@angaraja.com
ಮೇಲ್ ಅಡ್ರೆಸ್ ಹಾಕಿ ಬಿಲ್ಲನ್ನು ಹೆದೆಗೆರಿಸಿ ಅದಕ್ಕೆ ಒಂದು ಕೊಂಡಿಯನ್ನು ತಾಕಿಸಿ ಬಾಣ ಬಿಟ್ಟನು... !
ಸರ್ವಂ ಕೃಷ್ಣಾರ್ಪಣಮಸ್ತು!
------------------------------------------------------------------------------------------------------------
ಇನ್ನಷ್ಟು ಇಂಥ ಕಾರ್ಯಕ್ರಮಗಳು ನಡೆಯಲಿ. ನಿಮ್ಮೆಲ್ಲರ ಈ ನಡೆಯಲಿ ಯಶಸ್ಸಿರಲಿ!
ReplyDeleteಧನ್ಯವಾದಗಳು ಪುಷ್ಪರಾಜ್ ಸರ್.. ಇದರ ಹಿಂದಿನ ಶ್ರಮ ಸತೀಶ್ ಅವರದ್ದು. ಅವರಿಗೆ ನಿಮ್ಮ ಶುಭಾಶಯಗಳನ್ನು ತಲುಪಿಸುತ್ತೇನೆ
Deletereally superb i felt really missed dis awesome program due to my personal reasons really :(
ReplyDeleteWelcome to my world Reshma madam.. and thank for reading my blog!
Deleteಸೂಪರ್ ನಿರೂಪಣೆ ... ಚಂದದ ಕಾರ್ಯಕ್ರಮ...
ReplyDeleteಧನ್ಯವಾದಗಳು ಸಹೋದರಿ. ಇಷ್ಟವಾಗಿದ್ದಕ್ಕೆ ಸಂತಸವಾಗುತ್ತಿದೆ
Deleteಸುಂದರ ನಿರೂಪಣೆ ಶ್ರೀಕಾಂತಣ್ಣ:)
ReplyDeleteಎಸ್ ಎಸ್ ಧನ್ಯವಾದಗಳು ನಿಮ್ಮ ನಗುಮೊಗದ ಪ್ರತಿಕ್ರಿಯೆಗಾಗಿ
Deleteಕೃಷ್ಣಾರ್ಜುನ ಕರ್ಣರ ಕಥೆಯ ನಿರೂಪಣೆ ಬಹಳ ಸಂತೋಷ ತಂದಿತು... ತುಂಬಾ ಚೆನ್ನಾಗಿದೆ ಇಂಥ ಉತ್ತಮ ಕಾರ್ಯಕ್ರಮದಲ್ಲಿ ಎಷ್ಟೋ ಗೆಳೆಯರೊಡಗೂಡಿ ಮೈಮರೆತ ಕ್ಷಣಗಳು... ನಮ್ಮ ಭಾಗ್ಯ! ಸತೀಶ್‍ರವರ ಕಾರ್ಯ ಶ್ಲಾಘನೀಯವಾದದ್ದು... ನೆನಪುಗಳ ಸೆರೆ ಹಿಡಿದ ನಿಮ್ಮ ಕ್ಯಾಮೆರಾಗೆ ನಮೋ ನಮಃ
ReplyDeleteಸತೀಶ್ ಅವರ ಕನಸು ನನಸಾಗಿ ಕಂಗೊಳಿಸುತ್ತಿದೆ. ಅವರ ಸಾಹಸಕ್ಕೆ ಕಣ್ಣಾಗಿ ನಿಲ್ಲುವುದು ಒಂದು ಸಮಾಧಾನದ ಸಂಗತಿ. ನಿಮ್ಮೆಲ್ಲರನ್ನು ನೋಡಿದ್ದು, ಜೊತೆ ನಲಿದಿದ್ದು ಒಂದು ಉತ್ತಮ ಕ್ಷಣಗಳಲ್ಲಿ ಒಂದು. ಧನ್ಯವಾದಗಳು ಪ್ರದೀಪ್ ಸುಂದರ ಪ್ರತಿಕ್ರಿಯೆಗಾಗಿ
DeleteBalasubrahmanya Nimmolagobba Balu ಶ್ರೀಕಾಂತ್ ನೀವು ಯಾವುದೇ ವಿಚಾರವನ್ನು ಬಹಳ ಚೆನ್ನಾಗಿ ನಿರೂಪಣೆ ಮಾಡುತ್ತೀರಾ, ಅದೆಲ್ಲಿಂದ ಇಂತಹ ಯೋಚನೆಗಳು ನಿಮಗೆ ಬರುತ್ತದೆಯೋ ಗೊತ್ತಿಲ್ಲ. ಓದುಗರು ಊಹಿಸಲಾರದಂತಹ ದೃಶ್ಯಗಳನ್ನು ಕಣ್ಮುಂದೆ ತಂದು ವಾಹ್ ಎನ್ನುವಂತೆ ಮಾದುತ್ತೀರ . ಇಲ್ಲಿಯೂ ಅಷ್ಟೇ ನಿನ್ನೆಯ ಕಾರ್ಯಕ್ರಮದ ಬಗ್ಗೆ ಕಣ್ಣಿಗೆ ಕಟ್ಟುವಂತೆ ನಿಮ್ಮದೇ ವಿಶಿಷ್ಟ ಶೈಲಿಯಲ್ಲಿ ಪ್ರಸ್ತುತ ಪದಿಸಿದ್ದೇರ. ಜೈ ಹೊ ಶ್ರೀಕಾಂತ್ . ನಿಮ್ಮೆಲ್ಲರ ಜೊತೆ ಕಳೆದ ಸುಂದರ ದಿನವಾಗಿತ್ತು , ಮರೆಯಲಾರದ ದಿನ .
ReplyDeleteಬಾಲೂ ಸರ್ ಎಂತಹ ಮಾತುಗಳು ಅದ್ಭುತ ಬರಹಗಾರರಾದ ನಿಮ್ಮಿಂದ ಸಿಗುವ ಇಂತಹ ಪ್ರೋತ್ಸಾಹ ಪೂರಕ ಮಾತುಗಳು ನಿಜಕ್ಕೂ ಖುಷಿ ಕೊಡುತ್ತದೆ. ಮಕ್ಕಳ ಜೊತೆಯಲ್ಲಿ, ನಿಮ್ಮೆಲ್ಲರ ಜೊತೆಯಲ್ಲಿ ಕಳೆದ ಕ್ಷಣಗಳು ಅನುಪಮ. ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು
Deleteಅನಿವಾರ್ಯ ಕಾರಣಗಳಿಂದ ನಾವು ಎಷ್ಟೋ ಒಳ್ಳೆಯ ಕಾರ್ಯಕ್ರಮಗಳನ್ನು ತಪ್ಪಿಸಿಕೊಳ್ಳುತ್ತೇವೆ. ನಾನು ತಪ್ಪಿಸಿಕೊಳ್ಳಬೇಕಾಗಿ ಬಂದ ಈ ಕಾರ್ಯಕ್ರಮದ ವರದಿಯು ನನಗೆ ನಾನು ಕಳೆದುಕೊಂಡದ್ದೇನು ಎನ್ನುವುದನ್ನು ಸಚಿತ್ರ ಸಮೇತ ನಿರೂಪಿಸಿತು.
ReplyDeleteಒಳ್ಳೆಯ ಕೆಲಸಕ್ಕೆ ಸಾಥ್ ಕೊಟ್ಟ ಪ್ರಕಾಶಣ್ಣ, ಆಜಾದಣ್ಣ, ಶ್ರೀಮಾನ್, ಬಾಲಣ್ಣ ಮತ್ತು ರೂಪಾಜೀ ಅವರಿಗೆ ಅಭಿನಂದನೆಗಳು.
ಬದರಿ ಸರ್ ನಿಮ್ಮ ಪುಟ್ಟ ಪುಟ್ಟ ನಗೆಯನ್ನು ನಾವು ಮಿಸ್ ಮಾಡಿಕೊಂಡೆವು. ಇರಲಿ ಒಂದು ದೊಡ್ಡ ಅವಕಾಶ ಸಿಕ್ಕೆ ಸಿಗುತ್ತದೆ ನಾವೆಲ್ಲಾ ನಿಮ್ಮ ಜೊತೆಯಲ್ಲಿ ಕಾಲ ಕಳೆಯೋದಕ್ಕೆ. ಸುಂದರ ಪ್ರತಿಕ್ರಿಯೆ ಕೊಡುತ್ತಲೇ ಶ್ರಮ ವಹಿಸಿದ ಮಹನೀಯರ ಜೊತೆಯಲ್ಲಿ ನನ್ನನ್ನು ಸೇರಿಸಿದ್ದು ಕೊಂಚ ಮುಜುಗರ ತಂದಿತು :-). ಧನ್ಯವಾದಗಳು ಬದರಿ ಸರ್
Deleteಕಾರ್ಯಕ್ರಮ ತುಂಬಾ ಸೊಗಸಾಗಿತ್ತು...
ReplyDeleteಬಾಲ್ಯದ ದಿನಗಳ ಹೂದೋಟಕ್ಕೆ ನಾವೆಲ್ಲ ಹೋಗಿಬಿಟ್ಟಿದ್ದೆವು..
ಈ ಕಾರ್ಯಕ್ರಮ ಆಯೋಜಿಸಿಸ ಸತೀಶ್ ಮತ್ತು ಆತನ ಗೆಳೆಯರ ಬಳಗಕ್ಕೆ ಹೃದಯಪೂರ್ವಕ ಕೃತಜ್ಞತೆಗಳು.. Thank you Shreekantu...
ಮಕ್ಕಳನ್ನು ನೋಡಿ ಬಾಲ್ಯದ ಹೂದೋಟಕ್ಕೆ ಹೋದೆವು. ಆದ್ರೆ ನೀವು ನಿಜವಾಗಿಯೂ ನಮ್ಮ ಬಾಲ್ಯದ ದಿನಕ್ಕೆ ಕರೆದೊಯ್ದಿರಿ. ಸುಂದರ ದಿನ ಅದಾಗಿತ್ತು. ಧನ್ಯವಾದಗಳು ಪ್ರಕಾಶಣ್ಣ
DeleteSrikanth, tumbaa chennaagi niroopisiddeeri.....
ReplyDeleteJeevanada Saarthakathe Hudukikondu HogabEkilla.... namma dainithyada kelasagaLalli naavu maaDabekaada aneka kelasagaLive..... ondoLLe saduddesha ittukondu Ottaagi seridda ella "sneha"jeevigaLigu nannadondu namana.......... Very Proud of you all :)............. Intha sandarbha odagisi koTTa namma Satish Kannadiga, nimage namana.
ರೂಪ ನಿಮ್ಮ ಮಾತು ಪ್ರತಿ ಅಕ್ಷರ ಅಕ್ಷರವು ನಿಜ, ಮಾಡೋ ಕೆಲಸದ ಮಧ್ಯೆ ಇಂತಹ ಒಂದು ಸುಮಧುರ ಕಾರ್ಯಗಳು ಮನಸಿನ ಮೇಲೆ ಬೀರುವ ಪ್ರಭಾವ ಅದನ್ನು ಹೇಳಲು ಸಾಧ್ಯವಿಲ್ಲ. ಸತೀಶ್ ನಿಜಕ್ಕೂ ಅಭಿನಂದನೆಗೆ ಅರ್ಹರು. ಧನ್ಯವಾದಗಳು
DeletePrograme thumbaa changithu makaluu karkarma thumbaa changi karkarma madi kotru ee programenalli namaguu swlpa seve madilikee avakasha madikota satish avarige nana hrudayapraka Danyavadagaluu..
ReplyDeleteರಾಧ ಮೇಡಂ ಧನ್ಯವಾದಗಳು ನನ್ನ ಲೋಕಕ್ಕೆ ಬಂದದ್ದಕ್ಕೆ. ಹೌದು ಸುಂದರ ಕಾರ್ಯಕ್ರಮ.. ಸುಂದರ ಮನಸ್ಸಿನ ಗೆಳೆಯರನ್ನು ಭೇಟಿ ಮಾಡಿದ ಸಂತಸ.
Deleteಎಂದಿನಂತೆ ನಿರೂಪಣೆ ಸೊಗಸಾಗಿದೆ... ನಿಮ್ಮೆಲ್ಲ ಇಂತಹ ಕಾರ್ಯಗಳು ಹೀಗೆ ಮುಂದುವರಿಯಲೆಂದು ಆಶಿಸುತ್ತೇನೆ.
ReplyDeleteಅಕ್ಕಯ್ಯ ಸುಂದರ ಮನಸ್ಸಿಗೆ ಕಾಣುವುದೆಲ್ಲ ಸುಂದರ. ಧನ್ಯವಾದಗಳು
DeleteGreat program and great narration !!!! Keep it going
ReplyDeleteThank you Guru for reading and giving your comment.
Deleteಎಂದಿನಂತೆ ಸುಂದರ ನಿರೂಪಣೆ..
ReplyDeleteಕಾರ್ಯಕ್ರಮಕ್ಕೆ ಹೋಗದೆ ದೃತರಾಷ್ಟ್ರ (?) ಅಲ್ಲ (ಗಾಂಧಾರಿ ಅಂದುಕೊಳ್ಳೋಣ ) ನಂತೆ ಕುಳಿತವಳಿಗೆ ಸಂಜಯ ನಂತೆ ಎಲ್ಲವನ್ನೂ ಕಣ್ಣ ಮುಂದೆ ತಂದು ಕೊಟ್ಟ ಲೇಖನ ..:)
ಹತ್ತು ಜನರಿಂದ ಒಂದೊಂದು ತುತ್ತು ,... ಕಾರ್ಯಕ್ರಮದ ತುತ್ತು ತುತ್ತುನ್ನು ಚೆನ್ನಾಗಿ ತೋರಿಸಿಕೊಡುತ್ತಿವೆ ಎಲ್ಲರ ಫೋಟೋಗಳು ... ಲೇಖನಗಳು ...
ಹೊಟ್ಟೆ ಉರಿತಿದೆ ... --
ಎಸ್ ಪಿ ಸೂಪರ್.. ಸುಂದರ ಪ್ರತಿಕ್ರಿಯೆ. ಹೊಟ್ಟೆ ಉರಿಯೋದು ಬೇಡ ಫೋಟೋಗಳನ್ನೆಲ್ಲ ನೋಡು ಖುಷಿ ಪಡು ಇನ್ನೊಮ್ಮೆ ಅವಕಾಶ ಸಿಕ್ಕೆ ಸಿಗುತ್ತದೆ
Deleteprogram superb agittu.. naav antu enjoy madidvi.. yakshagaana nu chennagittu and doddavarella janaralla song ge aadida dance superb... :)
ReplyDeleteಸುಧಾ ಮೇಡಂ ನನ್ನ ಲೋಕಕ್ಕೆ ಸ್ವಾಗತ. ಸುಂದರ ಕಾರ್ಯಕ್ರಮದ ಬಗ್ಗೆ ಸುಂದರ ಮಾತುಗಳಿಗೆ ಧನ್ಯವಾದಗಳು
Deleteಸೂಪರ್ ಶ್ರೀಕಾಂತಣ್ಣಾ ...
ReplyDeleteಸುಂದರ ಕಾರ್ಯಕ್ರಮವೊಂದ ಇನ್ನೂ ಸುಂದರವಾಗಿ ತೋರಿಸಿದ್ದಕ್ಕೆ ಶರಣು .
ಇಷ್ಟವಾಯ್ತು
ಧನ್ಯವಾದಗಳು ಬಿ ಪಿ
Deleteಶ್ರೀ ಸಾರ್.. ಚೆಂದದ ಫೋಟೋಗಳೊಂದಿಗೆ ಕಾರ್ಯಕ್ರಮದ ಸಮಗ್ರ ವಿಚಾರಗಳನ್ನ ಸಮರ್ಥವಾಗಿ ನಿರೂಪಿಸಿದ್ದೀರಿ.. ಖುಷಿ ಆಯ್ತು. :) ಇಷ್ಟ ಆಯ್ತು.. ಕಾರ್ಯಕ್ರಮದ ನೆನಪುಗಲಿಗಿನ್ನು ಚಿರಾಯಸ್ಸು.. :)
ReplyDeleteಧನ್ಯವಾದಗಳು ಸತೀಶ್
Deleteತಡವಾಗಿ ಪ್ರತಿಕ್ರಿಯಿಸುತ್ತಿರುವುದಕ್ಕಾಗಿ ಕ್ಷಮೆ ಯಾಚಿಸುತ್ತಾ...........
ReplyDeleteಶ್ರೀಕಾಂತಣ್ಣ ಕಾರ್ಯಕ್ರಮದ ಓಡಾಟದಲ್ಲಿ ಹೇಗೆ ಮೂಡಿ ಬಂದಿತು ಅನ್ನೋದನ್ನು ನಾನು ಅನುಭವಿಸಲು ಆಗಲಿಲ್ಲ ಆದರೆ ನಿಮ್ಮ ನಿರೂಪಣೆಯನ್ನು ಓದಿದ ಮೇಲೆ ಎಲ್ಲವೂ ಮನಸಿನ ಪಾತಾಳದ ಮೇಲೆ ಕಾರ್ಯಕ್ರಮ ಹಾಗೆಯೇ ಮಿಂಚಿ ಮರೆಯಾಯಿತು........... ನಿಮ್ಮ ಪ್ರೀತಿಯ ಅಭಿಮಾನದ ಬರವಣೆಗೆ ನನ್ನ ನೂರು ನಮನಗಳು...... ಒಟ್ಟಿನಲ್ಲಿ ಇದು ನನ್ನೊಬ್ಬನ ಪ್ರಯತ್ನವಲ್ಲ ನಿಮ್ಮೆಲ್ಲರ ಸಹಕಾರದಿಂದ ಯಶಸ್ವಿಯಾದ ಕಾರ್ಯಕ್ರಮ,ಈ ಕಾರ್ಯಕ್ರಮದಲ್ಲಿ ಬೆನ್ನ ಹಿಂದೆ ನಿಂತು ಯಶಸ್ವಿಯಾಗುವಂತೆ ಸಹಕರಿಸಿದ ನಿಮಗೆಲ್ಲಾ ನಾ ಚಿರಋಣಿ............
*ನನಗೆ ಹೆಚ್ಚಾಗಿ ಸುಂದರ ಪದಗಳಿಂದ ಪ್ರತಿಕ್ರಿಯಿಸಿ ತಿಳಿದಿಲ್ಲ ಈ ಬರಹದಲ್ಲಿ ತಪ್ಪಿದ್ದರೆ ತಿದ್ದಿಕೊಂಡು ಓದಿಕೊಳ್ಳಬೇಕಾಗಿ ವಿನಂತಿ
*ಎಲ್ಲವೂ ಮನಸಿನ *ಪಟಲದ ಮೇಲೆ ಕಾರ್ಯಕ್ರಮ ಹಾಗೆಯೇ ಮಿಂಚಿ ಮರೆಯಾಯಿತು..
ReplyDelete