Monday, June 10, 2013

ಹಳ್ಳಿಯಾವ "ಕಳಿಸಿ"ಕೊಟ್ಟ ಪಾಠ

(ಈ  ಲೇಖನವನ್ನು ಪ್ರಕಟಿಸಿದ ಪಂಜು ತಂಡಕ್ಕೆ ಧನ್ಯವಾದಗಳು ಪಂಜುವಿನಲ್ಲಿ)

ಹಾಗೆಯೇ ಈ ಲೇಖನವನ್ನು ಓದಿ ಮೆಚ್ಚಿ ಪತ್ರಿಕೆಗೆ ಕಳಿಸಿ ಎಂದು ಹುರಿದುಂಬಿಸಿದ ಶ್ರೀ ಪ್ರಕಾಶ್ ಹೆಗಡೆ ಅವರಿಗೆ ಧನ್ಯವಾದಗಳು)

ನಾಗರೀಕ ಸಮಾಜ ಎಂದು ಬೀಗುವ ಪಟ್ಟಣದಲ್ಲಿ ಸಂಸ್ಕೃತಿ ಮರೆತು ಹೇಗೆ ಆಡುತ್ತೇವೆ ಅನ್ನುವ ಭಾವ ಇರುವ ಒಂದು ಕಿರು ಲೇಖನ.

ಗುಡ್ಡ-ಗಾಡುಗಳನ್ನು ಸುತ್ತಿ ಬಸವಳಿದಿದ್ದ ಒಂದು ಗುಂಪು, ತುಂಬಾ ದಿನಗಳಾದ ಮೇಲೆ, ಒಂದೇ ಛಾವಣಿಯಡಿಯಲ್ಲಿ ಸೇರಿದ್ದವು. ಹೊರಗಡೆ ಬಿಸಿಲು ಚೆನ್ನಾಗಿ ಕಾದಿತ್ತು, ಒಳಗೆ ಹೊಟ್ಟೆ ಹಸಿವಿನಿಂದ ಕುದಿಯುತ್ತಿತ್ತು. ಏನು ಸಿಕ್ಕಿದರು ತಿಂದು ತೇಗಿಬಿಡುವ ಧಾವಂತದಲ್ಲಿದ್ದರು.

ಸುಮಾರು ಎಂಟು ಮಂದಿಯಿದ್ದ ಗುಂಪಾದ್ದರಿಂದ ಹೋಟೆಲ್ನಲ್ಲಿ ಒಂದೇ ಟೇಬಲ್ ನಲ್ಲಿ ಜಾಗ ಸಿಗುವುದು ಕಷ್ಟವಾಗಿತ್ತು. ಅಲ್ಲಿದ್ದ ಮೇಲ್ವಿಚಾರಕರು "ಸರ್ ಸ್ವಲ್ಪ ಹೊತ್ತು ಕೂತುಕೊಳ್ಳಿ.. ಆ ಟೇಬಲ್ ಖಾಲಿಯಾಗುತ್ತೆ" ಅಂತ ಒಂದು ಟೇಬಲ್ ಕಡೆ ಕೈತೋರಿಸಿ ಹೇಳಿದರು.

ನಾವೆಲ್ಲರೂ, ಅರ್ಜುನ ಮತ್ಸ್ಯ ಯಂತ್ರ ಭೇದಿಸುವಾಗ, ಆತ ನೀರಿನಲ್ಲಿ ಬರಿ ಮೀನಿನ ಕಣ್ಣನ್ನೇ ನೋಡುತ್ತಾ ಪ್ರಪಂಚದಲ್ಲಿ ಬೇರೇನೂ ಇಲ್ಲವೇನೋ ಅನ್ನುವಷ್ಟು ತಾದ್ಯಾತ್ಮನಾಗಿ ನೋಡುವವನಂತೆ,  ಆ ಟೇಬಲ್ಲಿನ ಮೇಲೆ ಕಣ್ಣಿಟ್ಟುಕೊಂದು ಕೂತಿದ್ದೆವು.

ಮಧ್ಯೆ ಮಧ್ಯೆ ಹಾಸ್ಯ ಚಟಾಕಿಗಳು ಹಾರಾಡುತಿದ್ದವು. ಅವರಲ್ಲಿ ಒಬ್ಬ ಹೇಳುತಿದ್ದ ಈ ತರಹದ ಭೇಟಿಗಳು ನನ್ನೊಳಗಿರುವ ಅನೇಕ ಬೀಗಗಳನ್ನೆಲ್ಲ ತೆಗೆದುಬಿಡುತ್ತದೆ!

ಕೆಲ ಸಮಯದ ನಂತರ ಮೇಲ್ವಿಚಾರಕರು ನಮ್ಮನ್ನು ಕರೆದು "ಸಾರ್ ಈಗ ಖಾಲಿಯಾಗಿದೆ, ನೀವು ಅಲ್ಲಿ ಕೂರಬಹುದು" ಎಂದರು.

"ಹೊಟ್ಟೆ ಚುರುಗುಟ್ತೈತೆ…… ರಾಗಿ ಮುದ್ದೆ ತಿನ್ನೋ ಹೊತ್ತು!" ಅಂತ ಅಣ್ಣಾವ್ರು ಹಾಡಿದ ಹಾಡು ನೆನಪಿಗೆ ಬಂತು. ಸರಿ ಊಟಕ್ಕೆ ದೈಹಿಕವಾಗಿ ಮಾನಸಿಕವಾಗಿ ಸಿದ್ಧವಾದೆವು. ಬಾಳೇ ಎಲೆ ಬಂತು. ಎಲೆಯ ಮೇಲೆ ಬಗೆ ಬಗೆಯ ಭಕ್ಷ್ಯಗಳು ಬಂದು ನೆಲೆಸುತ್ತಿದ್ದವು. ಇನ್ನೇನು ತಿನ್ನಬೇಕು ಅಷ್ಟರಲ್ಲಿ,

"@#@$# ಡಬ್ಲ್ಯೂ#ಡಬ್ಲ್ಯೂ$ @#$@#ಆ#@$ @#$@!!#$" ಯಾರೋ ವಿದೇಶೀಯ ದೊಡ್ಡ ಧ್ವನಿ ಆ ಮಹಡಿಯಲ್ಲಿದ್ದ ಎಲ್ಲರನ್ನು ಚಕಿತಗೊಳಿಸಿತು!. ಯಾರಪ್ಪಾ ಇದು ಎಂದು ಎಲ್ಲರೂ ಧ್ವನಿ ಬಂದತ್ತ ಕತ್ತನ್ನು ತಿರುಗಿಸಿದರು.

ಅಂದು ಶ್ರೀ ಭಗತ್ ಸಿಂಗ್, ಶ್ರೀ ರಾಜಗುರು, ಶ್ರೀ ಸುಖದೇವ್ ತಾಯಿನಾಡಿನ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ಮಾತೆಗೆ ಅರ್ಪಣೆ ಮಾಡಿದ "ನಿಜ ಹುತಾತ್ಮರ" ದಿನವಾಗಿತ್ತು …. ಇಂತಹ ಸುದಿನದಲ್ಲಿ ಇವರಾರಪ್ಪ ಇಷ್ಟು ದೊಡ್ಡ ಧ್ವನಿಯಲ್ಲಿ ಮಾತಾಡುತ್ತಿರುವವರು (ಕಿರುಚುತ್ತಿರುವವರು) ಅಂತ ಆಶ್ಚರ್ಯವಾಯಿತು!

ಎಲ್ಲರೂ ಅ ಧ್ವನಿ ಬಂದತ್ತ ತಿರುಗಿ ನೋಡಿದರೆ ಅರ್ಧ ಚಣ್ಣ ಹಾಕಿಕೊಂಡು, ಇಳಿ ಬೀಳುತ್ತಿದ್ದ ಅಂಗಿ ಹಾಕಿಕೊಂಡು, ತಲೆಕೂದಲನ್ನು ಕರೆಂಟ್ ಹೊಡೆಸಿಕೊಂಡವನಂತೆ ನೆಟ್ಟಗೆ ನಿಲ್ಲಿಸಿಕೊಂಡಿದ್ದ, ಕಣ್ಣಿಗೆ ಹಾಕಿಕೊಳ್ಳುವ ಕಪ್ಪು ಕನ್ನಡಕವನ್ನು ತಲೆಗೆ ಏರಿಸಿಕೊಂಡಿದ್ದ… ಒಂಥರಾ ವಿಚಿತ್ರ ಪ್ರಾಣಿಯ ಹಾಗಿದ್ದ   ಒಂದು ಜೀವಿ ಕಂಡಿತು! ಜೊತೆಯಲ್ಲಿ ಒಂದಷ್ಟು ವಿಚಿತ್ರ ಧಿರುಸಿನಲ್ಲಿದ್ದ ಹೆಣ್ಣು ಹೈಕಳು. ಇವನ ಮಂಗಾಟಕ್ಕೆ ಇನ್ನಷ್ಟು ತುಪ್ಪವನ್ನು ಹುಯ್ಯುತ್ತಿದ್ದವು!

ಅಲ್ಲಿದ್ದ ನಾಗರೀಕರು "ಏನೋ…  ಮಂಗಗಳು" ಎಂದು ಮನದಲ್ಲೇ ಬಯ್ದುಕೊಳ್ಳುತ್ತಾ..ಛೆ ಕಾಲ ಕೆಟ್ಟು ಹೋಗಿದೆ ಅಂತ ಏನು ಮಾಡಲಾಗದೆ ಬಾಯಲ್ಲಿ ತ್ಸ್ಚು ತ್ಸ್ಚು ಎಂದು ಸದ್ದು ಮಾಡುತ್ತಾ ಸುಮ್ಮನೆ ಕೂತಿದ್ದರು!

ಅಷ್ಟರಲ್ಲಿ…. ಅಲ್ಲೇ ಊಟ ಮಾಡುತಿದ್ದ ಒಬ್ಬ ಹಳ್ಳಿಯವ ಊಟವನ್ನು ಅರ್ಧಕ್ಕೆ ನಿಲ್ಲಿಸಿ ನಿಧಾನವಾಗಿ ಹೆಜ್ಜೆ ಹಾಕುತ್ತ ಆ ವಿಚಿತ್ರಜೀವಿಯ ಹತ್ತಿರ ಹೋಗಿ,

"ಯಾರಪ್ಪ ನೀನು?"

ಆಗ ಆ ವಿಚಿತ್ರ ಪ್ರಾಣಿ "who are you dude? what do you want?"

"ಯಾಕಪ್ಪ ಈಟು ಜೋರಾಗಿ ಮಾತಾಡುತ್ತಿದ್ದೀಯ.. ಸಾನೆ ವೊಟ್ಟೆ ಅಸೀತ ಇದ್ಯಾ"

"oye!…  what you are talking? get lost from here. you country brute!"

ಹಳ್ಳಿಯವನಿಗೆ ಅವನೇನಂದ ಎಂದು ಪೂರ್ತಿ ತಿಳಿಯಲಿಲ್ಲ.  ಆದರೆ ಕೋಪ ನೆತ್ತಿಗೆ ಏರಿತು  "ಕಂತ್ರಿ ಗಿಂತ್ರಿ ಅಂದ್ರೆ ಸಂದಾಗಿರಕ್ಕಿಲ್ಲ.  ಮೈ ಮ್ಯಾಗೆ ನಿಗಾ ಮಡಕ್ಕಂಡು ಮಾತಾಡು"

"who the hell are you? how dare you to shout at me?"

ಹಳ್ಳಿಯವನಿಗೆ ಅರ್ಥವಾಯಿತು.  ತಾನು ಮುಂದೆ ಏನು ಮಾಡಬೇಕೆಂದು. ಸೀದಾ ಅವನ ತಲೆಯ ಹಿಂಬದಿಗೆ ತನ್ನ ಎಡಗೈಯಿಂದ ಪಟಾರ್ ಅಂತ ಬಲವಾಗಿ ಹೊಡೆದ!

ವಿಚಿತ್ರ ಜೀವಿ "ಅಮ್ಮಾ" ಎಂದು ಚೀರಿ ಕೆಳಕ್ಕೆ ಬಿದ್ದ.. ಹಳ್ಳಿಯವ ಅವನ ಹತ್ತಿರ ಹೋಗಿ

"ಓಹ್ ಕನ್ನಡ ಬತ್ತೈತೆ"

"ಹೂಂ ಬತ್ತದೆ" ಅಂತು ಆ ವಿಚಿತ್ರ ಜೀವಿ!

"ಏನ್ಲಾ ಬಡ್ದತ್ತದೆ… ಯಾವ್ದು ಊರೂ?

"ತ್ಯಾಮಗೊಂಡ್ಲು"

"ಎಲ್ಲಿ ಓದಿದ್ದು"

"ಅಲ್ಲೇ ಒಂದು ಸರ್ಕಾರಿ ಸ್ಕೂಲ್ನಲ್ಲಿ"

"ಓಹ್ ನಮ್ಮೂರಿನವನೇ … ಮತ್ತೆ ಯಾಕಲಾ…. ಇಂಗ್ಯಾಕೆ ಮಂಗನ ತರಹ ಇದ್ದೀಯ… ಏನ್ಲಾ ನಿನ್ನವತಾರ… ಯಾಕಲೇ ಹಿಂಗ್ ಮಾತಾಡ್ತೀಯಾ?"

"ಏನಿಲ್ಲ ಕಣಣ್ಣ.. ಆಫೀಸಿಂದ ಅಮೆರಿಕಾಕ್ಕೆ ಒಂದೀಟು ದಿನ ಕಳಿಸಿದ್ರು.. ಬಂದ್ ಮ್ಯಾಕೆ ಹಿಂಗಾಡಿದ್ರೆ… ಹಿಂಗಿದ್ರೆ… ಚನ್ನ ಅಂತ ಅನ್ನಿಸ್ತು ..ಅಲ್ಲೆಲ್ಲ ಇಂಗೇಯ ಕಣಣ್ಣ .ಅದ್ಕೆ ಅಂಗೆ ಆಗ್ಬುಟ್ಟೆ"

"ಅಲ್ಲಾ ಕಣಲೇ.. ಹಸೂನ ಪರಂಗಿ ದೇಶಕ್ಕೆ ತಗೊಂಡೋಗ್ಬಿಟ್ರೇ…. ಅದು ಹುಲ್ಲು ತಿನ್ನದ್ ಬಿಟ್ಟು ಅದೇನೋ ಕುಟು ಕುಟು ಅಂತ ಕುಟ್ಟತೀರಲ್ಲ ಕಂಪೂಟರ್ ಅಂತ..... ಅದನ್ನ ತಿಂದಾತ !!! .. ಆಟು ಬುದ್ದಿ ಬ್ಯಾಡ್ವ ನಿಂಗೆ?.ಅದು ಸರಿ…  ಅಪ್ಪ ಅಮ್ಮ ಏನು ಯೋಳ್ಳಿಲ್ವಾ ನಿಂಗೆ?"

"ಯೋಳಿದ್ರು… ಆ ಮುದಿಗೊಡ್ಡುಗಳ ಮಾತೇನೂ ಕೇಳಾದು ಅಂತ ಅವ್ರ್ಗೆ ಸಂದಾಕೆ ಬಯ್ದು ಕೂರ್ಸಿದ್ದೀನಿ"

"ಅಯ್ಯೋ ಮಂಗ್ಯಾ.. ನಮ್ಮ ಸಂಸ್ಕಾರ ಕಣ್ಲಾ…  ನಮ್ಮನ್ನ ಕಾಪಾಡೋದು… ಯಾರೋ ಕುಣುದ್ರು ಅಂತ ನೀನು ಕುಣಿಯಾಕೆ ಹೊಂಟೀಯಾ! ಮಂಗ ಮುಂಡೇದೆ ಎಂಗ್ ಲಾಗ ಹಾಕಿದ್ರೂ ಕಾಲ್ ಕೆಳ್ಗೆ ಇರ್ಬೇಕು…ತಿಳ್ಕಾ … ಇಲ್ಲಾಂದ್ರೆ ಪಲ್ಟಿ ಹೊಡೀತೀಯ"

"ಸರಿ ಕಣಣ್ಣ.. ಅರ್ಥವಾಯಿತು.. ಇನ್ನು ಹೀಗೆಲ್ಲ ಆಡಕ್ಕಿಲ್ಲ… ತುಂಬಾ ಉಪಕಾರವಾಯಿತು ಕಣಣ್ಣ… ಮುಚ್ಚಿದ್ದ ಕಣ್ಣು ತೆರೆಸಿದೆ ನೀನು"

"ಅಯ್ಯೋ ಮಂಗ್ಯಾ  .. ಅಪ್ಪ ಅಮ್ಮ ಹೇಳೋದಿಕ್ಕಿಂತಾನ ನನ್ನ ಮಾತು….. ಅವ್ರ ಮಾತು ಕೇಳು ಜೀವನದಲ್ಲಿ ಉದ್ದಾರವಾಯ್ತೀಯ.. ಸರಿ ಹೋಗ್ಬಾ ಅಪ್ಪ ಅಮ್ಮನ್ನ ಮಾತು ಕೇಳು….  ಸಂದಾಗಿ ನೋಡ್ಕೋ ಅವ್ರನ್ನಾ… ಸರಿ ನನ್ನ ಊಟ ಅಲ್ಲೇ ಅಯ್ತೆ… ನಾ ಉಣ್ಣಾಕೆ ಹೊಯ್ತೀನಿ"

ಅಲ್ಲಿದ್ದ ಎಲ್ಲರ ಕಣ್ಣಲ್ಲೂ ಕಣ್ಣೀರು… ಹಾಗೆ ಅವರಿಗಿಲ್ಲದೆ ಎಂಜಲು ಕೈ ಅಂತ ಕೂಡ ನೋಡದೆ ಕೈ ನೋಯುವ ತನಕ ಚಪ್ಪಾಳೆ ತಟ್ಟಿದರು ..ಸುಂದರವಾದ ಮಾತುಗಳನ್ನು ಹೇಳಿ ಹುಲ್ಲನ್ನು ಹಿಡಿದು ಆಕಾಶದಲ್ಲಿದ್ದೀನಿ ಎನ್ನುವ ಭ್ರಮೆಯಲ್ಲಿದ್ದ ಹುಡುಗನಿಗೆ ಸರಿಯಾದ ಮಾರ್ಗ ತೋರಿದ, ಹಳ್ಳಿಯವನಿಗೆ ತಮ್ಮ ಅಭಿನಂದನೆಯನ್ನು ಸಲ್ಲಿಸಿದರು.

ಆಗ ವಿಚಿತ್ರ ಜೀವಿ ಅಲ್ಲಿದ್ದ ಮೇಲ್ವಿಚಾರಕರನ್ನು ಕರೆದು "ಅಣ್ಣ ಬನ್ನಿ ಅಣ್ಣ… ನನ್ನ ಕಣ್ಣ ತೆರೆಸಿದ ಈ ಅಣ್ಣನಿಗೆ ಇವತ್ತು ನನ್ನ ಕಡೆಯಿಂದ ಊಟ.  ಇವರ ಬಿಲ್ಲನ್ನು ನಾನು ಕೊಡುವೆ"

ಮೇಲ್ವಿಚಾರಕರು ಹೇಳಿದರು "ಸರ್ ಈಗ ನೀವು ಮನುಜರಾದಿರಿ!!!"

34 comments:

  1. ಒಳ್ಳೆಯ ಲೇಖನ ಶ್ರೀಕಾಂತ್... ಯಾವ ಊರಲ್ಲಿದ್ದರೇನು ಮಾತೃಭಾಷೆ ಮರೆತವರುಂಟೆ.... ನಿಮ್ಮ ಲೇಖನದಲ್ಲಿ ನಮ್ಮೂರು ತ್ಯಾಮಗೊಂಡ್ಲು ಹೆಸರು ಕೇಳಿಯೇ ಖುಷಿ ಆಯ್ತು... ಹಹ

    ReplyDelete
    Replies
    1. ಒಹ್ ನಿಮ್ಮೂರು ಅರಿವಿಲ್ಲದೆ ನನ್ನ ಲೇಖನದೊಳಗೆ ನುಸುಳಿತು. ಸೂಪರ್. ಸುಂದರ ಪ್ರತಿಕ್ರಿಯೆ ನಿಮ್ಮದು ಅಕ್ಕಯ್ಯ. ಹೌದು ಯಾವ ಊರದರೇನು ನಮ್ಮ ತನ ನಮ್ಮ ಬಳಿ ಇರಲೇಬೇಕಲ್ಲವೇ!

      Delete
  2. Replies
    1. ಧನ್ಯವಾದಗಳು ವಿನಾಯಕ್ . ಕಣ್ಣಿಗೆ ಕಂಡದ್ದು.. ಸ್ವಲ್ಪ ಬೆರೆಸಿದ್ದು ಎಲ್ಲವು ಸೇರಿ ಆದ ಹೂರಣ ಈ ಲೇಖನ

      Delete
  3. ಅಮೇರಿಕ ಹೋಗಿ ಬರಲಿ.. ಹೋಗಿ ಬಂದಿದ್ದು ಬಲ್ಲವರ ಬಳಿ ಹೋಗಿ ಬಂದದ್ದನ ಪ್ರದರ್ಶನ ಕೂಡಾ ಮಾಡಲಿ ತಪ್ಪಿಲ್ಲ.. ಹಾಗಂತ ಕನ್ನಡ ಬಿಟ್ಟು ಬೇರೇನೂ ಗೊತ್ತಿಲ್ಲದ ಜನಗಳ ಹತ್ತಿರ ಮಾತೃಭಾಷೆ ಗೊತ್ತಿದ್ದೂ ಮಾತಾಡದ ಇಂತೋರಿಗೆ, ತನ್ನ ವರ್ಚಸ್ಸು ಪ್ರದರ್ಶನ ಮಾಡೋ ಇಂತೋರಿಗೆ, ನಾಡು ನುಡಿ, ಸಂಸ್ಕೃತಿಯ ಅವಹೇಳನ ಮಾಡೋ ಇಂತೋರಿಗೆ ಹಿಂಗೆ ಬುದ್ಧಿ ಕಲಿಸಬೇಕು. ಸಾರ್ವಕಾಲಿಕ ಬರಹ ಶ್ರೀ ಸಾರ್.. :)

    ReplyDelete
    Replies
    1. ಎಲ್ಲಿದ್ದರು ಬೇರನ್ನು ಬಿಟ್ಟು ಹಿಡಿಯ ಹೋದರೆ ಬೇರು ಇಲ್ಲ ಬೇರೆಯೂ ಇಲ್ಲ ಹಾಗೆ ಆಗುತ್ತದೆ. ಪ್ರತಿಕ್ರಿಯೆ ನಿಮ್ಮದು ಸತೀಶ್

      Delete
  4. ಲೇಖನ ಓದಿಸಿ ಕೊಂಡು ಹೋಯಿತು .ಪ್ರಪಂಚವೆಲ್ಲ ಸುತ್ತಾಡಿದರೂ ತಮ್ಮ ತಾಯಿನಾಡು , ಭಾಷೆ .ನೆಲ ಇವುಗಳತ್ತ ಗೌರವ .ಒಲವು ಸದಾ ಹೃದಯದಲ್ಲಿ ನೆಲೆ ನಿಂತಿರಬೇಕು ಅನ್ನುವ ಸಂದೇಶ ಮುಟ್ಟಿಸುವ ಲೇಖನ .

    ReplyDelete
    Replies
    1. ನನ್ನ ಲೋಕಕ್ಕೆ ಸ್ವಾಗತ ಆರತಿ ಮೇಡಂ.. ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ

      Delete
  5. ತುಂಬಾ ಚೆನ್ನಾಗಿದೆ ಶ್ರೀಕಾಂತಣ್ಣ ...
    ವಿದೇಶಿ ವ್ಯಾಮೋಹಕ್ಕೆ ಮಾರುಹೋಗಿ ದೇಶೀ ಸೊಗಡು ಮರೆಯೋ,ಕನ್ನಡ ಮಾತಾಡೋದು ಘನತೆಯಲ್ಲ ಅನ್ನೋ ಅದೆಷ್ಟೋ ಜನಗಳಿಗೆ ತಾಗೋ ಬರಹ :)
    ಇಷ್ಟವಾಯ್ತು

    ReplyDelete
    Replies
    1. ಧನ್ಯವಾದಗಳು ಬಿ ಪಿ. ನಾವಿರುವ ನೆಲ ಜಲ ಭಾಷೆಯ ಬಗ್ಗೆ ಅಭಿಮಾನವಿರಬೇಕು ಜೊತೆಯಲ್ಲಿ ಸಾಕಿ ಸಲುಹಿಯ ಮಾತಾ ಪಿತರನ್ನು ಸದಾ ನೆನೆಯಬೇಕು. ಸುಂದರ ಪ್ರತಿಕ್ರಿಯೆ ನಿನ್ನದು

      Delete
  6. ಸಖತ್ತಾಗಿದೆ ಶ್ರೀಕಾಂತಣ್ಣ .. ಎಲ್ಲೇ ಹೋದ್ರೂ ನಮ್ಮತನ ಬಿಡ್ಬಾರ್ದು ಅನ್ನೋದನ್ನ ಚೆನ್ನಾಗಿ ನಿರೂಪಿಸಿದ್ರಿ ಸರ್..

    ReplyDelete
    Replies
    1. ಮೇಯರ್ ಮುತ್ತಣ್ಣ ಚಿತ್ರದ ಹಾಡಿನಂತೆ " ಕನ್ನಡತನವೆಂಬ ಛಲವಿರಲಿ ಮನದಲ್ಲಿ" ಇರಬೇಕು ಮನಸ್ಸು. ಸುಂದರ ಪ್ರತಿಕ್ರಿಯೆ ನಿಮ್ಮದು ಪ್ರಶಸ್ತಿ

      Delete
  7. ಒಳ್ಳೇ ಕಥೆ ಶ್ರೀಕಾಂತ್ ಸಾರ್... ಓದಿಸಿಕೊಂಡು ಹೋಯಿತು... ನಿಜವಾಗಿ ನಡೆದಿದ್ದೇ ಅನ್ನಿಸಿತು...

    ReplyDelete
    Replies
    1. ಧನ್ಯವಾದಗಳು ಪ್ರದೀಪ್ ನಿಮ್ಮ ಉತ್ತಮ ಪ್ರತಿಕ್ರಿಯೆಗಾಗಿ

      Delete
  8. modala baari bartaa idene nimma blogge, first time odid poste ishtaa aytu. nammatanana bittu yaavdo bere thanakke maaru hogi, allo serde illo serde naduvalli kaldu hogteve :) chennaagi heliddeera! :)

    ReplyDelete
    Replies
    1. ನನ್ನ ಪರಪಂಚಕ್ಕೆ ಸ್ವಾಗತ. ಹೌದು ಸಾಸಿವೆ ತನ್ನ ಗುಣ ಮರೆತರೆ ಸಿಡಿಯುವುದನ್ನು ಬಿಡಬೇಕಾಗುತ್ತದೆ. ಸುಂದರ ಪ್ರತಿಕ್ರಿಯೆ ಸುಬ್ರಮಣ್ಯ ಅವರೇ ಇಷ್ಟವಾಯಿತು .

      Delete
  9. ಹೀಗೆ ಕಪಾಳಕ್ಕೆ ಬಿಗಿದು ಬುದ್ಧಿ ಕಲಿಸೋ ಜನ ಊರಿಗೊಬ್ಬರು ಸಿಕ್ಕರೂ ಸಾಕು, ಮಂಗನಾತಾಡುವ ಕಂತ್ರಿಗಳು ರಿಪೇರಿಯಾಗುವರು.

    ವಿದೇಶಕ್ಕೆ ಹೋಗಿ ನೆಲೆಸಿ ಕೋಟಿಗಟ್ಟಲೆ ಆಸ್ತಿ ಮಾಡಿದ ಹಲವು ಮಂದಿ, ತಮ್ಮ ಅಪ್ಪ ಅಮ್ಮಗಳ ಬೀದಿ ಪಾಲು ಮಾಡಿರುವ ಘಟನೆಗಳು ತುಂಬಾ ಕಂಡಿದ್ದೇನೆ.

    ಸಾವಿರಕ್ಕೆ ಒಂದು ಲೇಖನ ಇದು.

    ReplyDelete
    Replies
    1. ಬಿಟ್ಟ ಬೇರನ್ನು ಮರೆಯುವ.. ಸಿಕ್ಕ ಬಳ್ಳಿಯನ್ನು ತಬ್ಬುವ ಮಂದಿ ತಿಳಿಯಬೇಕಾದ್ದು ಬೇರು ಶಾಶ್ವತ.. ಬಳ್ಳಿಯ ಬೆಳವಣಿಗೆಗೆ ಸಹಾಯ ಮಾಡುವುದು ತಬ್ಬಿ ಹಿಡಿಯಲು ನೆರವಾದ ಮರ ಮತ್ತು ಬೆಳೆಯಕ್ಕೆ ಅನುಕೂಲ ಮಾಡಿಕೊಡುವ ಬೇರು. ಸುಂದರ ಪ್ರತಿಕ್ರಿಯೆ ಬದರಿ ಸರ್ ಧನ್ಯವಾದಗಳು

      Delete
  10. ಪರಭಾಷಾ ಮೋಹಕರ ಮುಂದೆ ಒಮ್ಮೆ ಈ ಲೇಖನ ಹಿಡಿಯಲೇ ಅಣ್ಣಯ್ಯ..?ಚೆನ್ನಾಗಿದೆ.. :)

    ReplyDelete
    Replies
    1. ಹೌದು ಪರದೇಶಿ ಮೋಹ ಸರಿ ಆದರೆ ಆ ಮೋಹದ ಜೊತೆಗೆ ಹುಟ್ಟಿದ ನಾಡಿನ ಮೇಲಿನ ಅಭಿಮಾನ ಸೇರಿದಾಗ ಮಾನವನಾಗುತ್ತಾನೆ ಅಲ್ಲವೇ. ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು ಪಿ ಎಸ್.

      Delete
  11. ನನಗೂ ಒಮ್ಮೆ ಹೀಗೆ ಆಗಿತ್ತು... ಏನು ಕನ್ನಡದಲ್ಲಿ ಬಯ್ಯಲಾ ಎಂದಿದ್ದಕ್ಕೆ , ಕನ್ನಡದಲ್ಲಿ ಮಾತಾಡಿದ... ನೀವು ಬರೆದ ರೀತಿ ಸುಪರ್... ಚೆನ್ನಾಗಿದೆ ಸರ್..

    ReplyDelete
    Replies
    1. ಧನ್ಯವಾದಗಳು ದಿನಕರ್ ಸರ್. ಗೊತ್ತು ಗುರಿಯಿಲ್ಲದೆ ಆಡುವ ಇಂತಹ ಮಂಗಗಳು ತಮ್ಮ ಮನದ ಜ್ಯೋತಿಯನ್ನು ಬೆಳಗಿಸದೆ ಉದ್ಧಾರವಾಗಲಾರವು. ಇಂತಹ ಪ್ರಸಂಗಗಳು ಇರುತ್ತವೆ.

      Delete
  12. Replies
    1. ಓದಿದಕ್ಕೆ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು

      Delete
  13. Balasubrahmanya Nimmolagobba Balu ಶ್ರೀಕಾಂತ್ ನಿಮ್ಮ ಅನುಭವದ ಈ ಲೇಖನ ಬಹಳ ಚೆನ್ನಾಗಿದೆ,ಕೆಲವು ದಿನ, ಅಥವಾ ಕೆಲವು ವರ್ಷಗಳು ವಿದೇಶಕ್ಕೆ ಹೋಗಿಬಂದರೆ ಕಲಿತ ಮಾತೃಭಾಷೆ ಖಂಡಿತ ಮರೆತು ಹೋಗುವುದಿಲ್ಲ ಇದೆಲ್ಲಾ ನಾಟಕ ಅಷ್ಟೇ , , ತಾನು ವಿದೇಶದಲ್ಲಿದ್ದು ಬಂದವನೂ ಎಂಬ ಅಹಂ ಅಥವಾ ತೋರಿಕೆಗೆ ಇದೆಲ್ಲಾ ಮಾಡುತ್ತಾರೆ, ಇಂತಹ ವಿಚಾರದಲ್ಲಿ ವಿದೇಶಿಯರು ನಮಗೆ ಮಾದರಿ ಯಾಗಬೆಕು. ಅವರು ಮೊದಲು ಪ್ರಾಮುಖ್ಯತೆ ನೀಡಿವುದು ಮಾತೃ ಭಾಷೆಗೆ, ಇಂತಹವರಿಗೆ ನಿಮ್ಮ ಲೇಖನದಲ್ಲಿ ಆದಂತೆ ಘಟನೆ ಆದರೆ ಬುದ್ದಿ ಬರುತ್ತದೆ. ಒಳ್ಳೆಯ ಲೇಖನ ಧನ್ಯವಾದಗಳು

    ReplyDelete
    Replies
    1. ಕಾಗೆಯ ಗೂಡಿನಲ್ಲಿ ಬೆಳೆದರೂ ಕೋಗಿಲೆ ತನ್ನ ಮಧುರ ಧ್ವನಿಯ ಮರೆಯುವುದಿಲ್ಲ. ಆ ಗುಣ ಇಂತಹ ಕೆಲ ಹುಲುಮಾನವರಿಗೇಕೆ ಇರುವುದಿಲ್ಲ ಎನ್ನುವುದೇ ಅಚ್ಚರಿ. ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು ಬಾಲು ಸರ್

      Delete
  14. ಶ್ರೀಕಾಂತ್ ಸರ್,
    ನಮ್ಮತನವನ್ನು ಬಿಟ್ಟುಕೊಡಬಾರದು...ಹುಟ್ಟಿಸಿದ ಬೇರನ್ನು ಮರೆಯಬಾರದು ಎನ್ನುವುದಕ್ಕೆ ತುಂಬಾ ಉತ್ತಮ ಉದಾಹರಣೆ ಈ ಲೇಖನ...ಹಳ್ಳಿಯ ಸುಸಂಸ್ಕೃತವಂತ ಎಡಬಿಡಂಗಿಗೆ ಪಾಠ ಕಲಿಸಿದ್ದು ಸರಿಯಾಗಿದೆ..

    ReplyDelete
    Replies
    1. ನಿಮ್ಮ ಮಾತು ನಿಜ ಶಿವೂ ಸರ್.. ಹೆಂಗೆ ಲಾಗ ಹಾಕಿದರೂ ಕಾಲು ಕೆಳಗೆ ಅನ್ನುಅವ ಹಾಗೆ ನಮ್ಮ ತಾಣವನ್ನು ಮರೆಯಬಾರದು. ಸುಂದರ ಪ್ರತಿಕ್ರಿಯೆ ನಿಮ್ಮದು ಧನ್ಯವಾದಗಳು

      Delete
  15. ಇದೇನಾ ಸಂಸ್ಕೃತಿ,, ಇದೇನಾ ಸಭ್ಯತೆ.. ಇದೇನಾ ನಮ್ಮ ಜಾಗೃತಿ ಎಂಬ ಹಳೆ ಕನ್ನಡ ಹಾಡೊಂದು ನೆನಪಿಗೆ ಬಂತು. ವಿದೇಶಿ ವ್ಯಾಮೋಹಕ್ಕೆ ಬಲಿಯಾಗಿ ನಮ್ಮತನವನ್ನು ಮಾರಿಕೊಳ್ಳುವವರಿಗೆ ಹಳ್ಳಿಗ ನ ಮಾತು ಒಳ್ಳೆ ಪಾಠವಾಗುತ್ತೆ. ಊರಿಗೆ ಅರಸನಾದರೂ ನೀ ತಾಯಿಗೆ ಮಗನೆಂಬ ಗಾದೆ ಮರಿಬಾರದು ಅಲ್ಲವಾ ??

    ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ ...

    ReplyDelete
    Replies
    1. ಒಳ್ಳೆಯ ಹಾಡನ್ನು ನೆನಪಿಗೆ ತಂದೆ ಎಸ್ ಪಿ. ಎಲ್ಲಿದ್ದರೂ ತಲೆಯ ಆಗಸ ಎನ್ನುವ ತತ್ವ ಮರೆಯಬಾರದು ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು

      Delete