Wednesday, August 22, 2012

ಒಂದು ಮಾತು...ಹೇ ನನಗೊತ್ತು...ಅದಲ್ಲ..


ಧರ್ಮಸೆರೆ ಅದ್ಭುತ ಸಿನಿಮಾ..ಹ..ಪುಟ್ಟಣ್ಣ ಅವರ ಸಿನಿಮಾಗಳೇ ಹಾಗೆ..
ಆ ಚಿತ್ರದಲ್ಲಿ ಒಂದು ಹಾಡು.."
ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ...
ಅತಿ ನವ್ಯ ರಸ ಕಾವ್ಯ..ಮಧುರ ಮಧುರ ಮಧುರ..."

ಹೆಚ್ಚು ಕಡಿಮೆ..ಸಂಭಾಷಣೆಯನ್ನೇ ಕೇಂದ್ರ ಬಿಂದು ಮಾಡಿಕೊಂಡು ರಚಿಸಿರುವ ಹಾಡು ಅದು

ಹುಣುಸೂರು ಕೃಷ್ಣಮೂರ್ತಿ, ಕು.ರಾ. ಸೀತಾರಾಮಶಾಸ್ತ್ರಿ, ಚಿ. ಸದಾಶಿವಯ್ಯ, ಚಿ.ಉದಯಶಂಕರ್, ಕಣಗಾಲ್ ಪ್ರಭಾಕರ ಶಾಸ್ತ್ರಿ, ಪುಟ್ಟಣ್ಣ ಕಣಗಾಲ್, ಗೀತಪ್ರಿಯ, ಆರ್. ಎನ್. ಕುಟುಂಬ (ನಾಗೇಂದ್ರ ರಾಯರು, ಜಯಗೋಪಾಲ್), ಜಿ.ವಿ. ಅಯ್ಯರ್, ನನ್ನ ಅಚ್ಚುಮೆಚ್ಚಿನ ಬಾಲಣ್ಣ (ಕೆಲವು ಚಿತ್ರಗಳಿಗೆ) ಹಾಗೆ ಇನ್ನು ಎಷ್ಟು ಹೆಸರಿಸಲಾಗದ ಮಹನೀಯರು ಬರೆದ ಸಂಭಾಷಣೆಗಳು ಇನ್ನು ಮೈ ನವಿರೇಳಿಸುತ್ತದೆ..ಹಾಗೆ ಮೈ ಪುಳಕಗೊಲಿಸುತ್ತದೆ....ಅಂತಹವರ ಸಂಭಾಷಣೆ ಕೇಳಿ, ನೋಡಿ ಬೆಳೆದ ಈ ಕಿವಿಗಳು, ಕಣ್ಣುಗಳು ಇತ್ತೀಚಿನ ಚಲನ ಚಿತ್ರಗಳಲ್ಲಿ, ಧಾರಾವಾಹಿಗಳಲ್ಲಿ ಬರುವ ಸಂಭಾಷಣೆಗಳನ್ನು ನೋಡಿ ಕೇಳಿ ಕಿವಿಗಳು ಪಾವನವಾದವು....

ಕೆಲವು ಉದಾಹರಣೆಗಳು ನಿಮಗಾಗಿ...
ಮುಕ್ತ ಮುಕ್ತ : 
ಚಿದಾನಂದನನ್ನು  ನೋಡಲು ಬರುವ ಡಾಕ್ಟರ್ಗೆ ಶಾರದಮ್ಮ ಕೇಳುವ ಪ್ರಶ್ನೆ..
"ಡಾಕ್ಟ್ರೆ ನಿಮಗೆ ಕಾಫಿ ನ ಅಥವಾ ಟೀ ನ .." 
ಆಗ ಡಾಕ್ಟ್ರು....  
".... ಕುಡಿಯೋಕಾ...?...ಬೇಡ ಬೇಡ"
(ನಗು ಬಂತು...ಇದುವರೆಗೂ ಮನುಜರು ನೀರಲ್ಲಿ, ದೇವರಿಗೆ ಪಂಚಾಮೃತದಲ್ಲಿ ಸ್ನಾನ/ಅಭಿಷೇಕ ಇರುತ್ತೆ...ಇನ್ನು ಕಾಫಿಯಲ್ಲಿ ದೇವರೇ...?)

ನನ್ನ ಜೀವ ನೀನು: 
ತಲೆ ಹರಟೆ ಭೂಮಿಕ ಪಾತ್ರಧಾರಿನ ಸೂರ್ಯ ಎನ್ನುವ ಅಷ್ಟೇ ತಲೆಹರಟೆ ಪಾತ್ರಧಾರಿ ಶೀಲ ಭಂಗ ಮಾಡಿರುತ್ತಾನೆ...ಆ ನೋವಿನಲ್ಲಿ ಭೂಮಿಕ ಅವಳ ತಾತ ಎನ್ನುವ ಪಾತ್ರಧಾರಿಯನ್ನ ಕೇಳುವ ಮಾತು..."ತಾತ ನನಗೆ ಜೀವನ ಸಾಕಾಗಿ ಹೋಗಿದೆ...ಒಂದು ಚೂರು ವಿಷ ತಂದು ಕೊಡಿ ತಾತ?
(ನಗು ಬಂತು...ನೆಂಟರ ಮನೆಗೆ ಹೋಗಿ..ಒಂದು ಲೋಟ ಕಾಫಿ ಕೊಡಿ ಎಂದು ಕೇಳಿದ ಹಾಗೆ)

ಶುಭಮಂಗಳ: ಮಾಯಿ ಪಾತ್ರ ಸತ್ತರೆ ಸಾಕು ಅಂತ ಎಲ್ಲರು ಕೈ ಮುಗಿಯುತ್ತ ಇರ್ತಾರೆ..ಒಂದು ದಿನ ಮಾಯಿ ಮಾಯವಾಗಿ ಬಿಡುತ್ತಾಳೆ..ಆಗ ಕ್ರಾಕ್ ಪಾತ್ರ ದೇವಕಿ ತನಗೆ ತಾನೇ ಹೇಳಿಕೊಳ್ಳುವ ಮಾತು "ಎಲ್ಲಿ ಹೋದರು ಮಾಯಿ, ಹೆಂಗೆ ಇರುತ್ತಾರೋ, ಮನೇಲಿ ಏನು ತೊಂದ್ರೆ ಇರಲಿಲ್ಲ...ಆದರು ಎಲ್ಲಿಗೆ ಹೋದರು..
ಇನ್ನು ಮಾಯಿ ಹೋದ ನಂತರ..ಎಲ್ಲರು ಒಬ್ಬೊಬ್ಬರೇ ಮಾತಾಡುವುದು "ಮಾಯಿ ಎಲ್ಲಿ ಹೋದರು..ಹೋಗುವಾಗ ನಮಗೆ ಹೇಳಬಾರದಿತ್ತೆ..ನಮಗೆ ಏಕೆ ಹೇಳಲಿಲ್ಲ..ಮೊಬೈಲ್ಗಾದರೂ ಫೋನ್ ಮಾಡಿ ನೋಡಿ..."
(ಇದೆ ಮಾತನ್ನು ಶತಕ ಅನ್ನುವ ರೀತಿ ನೂರಾರು ಸಾರಿ ಹೇಳುವ ಪರಿ..ನಗೆ ತರಿಸುತ್ತದೆ) 

ಸುವರ್ಣ ವಾಹಿವಾಹಿನಿಯಲ್ಲಿ ಬರುತಿದ್ದ ಶ್ರೀ ಗುರುರಾಯರ ಧಾರಾವಾಹಿಯಲ್ಲಿ ಕೆಲವು ಪಾತ್ರಗಳು ಆಡುತಿದ್ದ ಗ್ರಾಂಥಿಕ ಸಂಭಾಷಣೆಗಳು..ಕಿವಿಗೆ ಆಹಾ.....ಮಾತೆ ಇಲ್ಲ)
ನನ್ನ ಮಗಳು ಒಂದು ಸಂಭಾಷಣೆ ಕೇಳಿ ನಗಲು ಶುರು ಮಾಡಿದ್ದಳು..ಗುರು ರಾಯರ ಪಾತ್ರದ ಪೂರ್ವಾಶ್ರಮದಲ್ಲಿ ಪತ್ನಿ ಪಾತ್ರ ಸರಸ್ವತಿ ಹೇಳುವ ಮಾತು..."ಇಂದೇಕೋ ಸ್ವಾಮಿ ಎಷ್ಟು ನೋಡಿದರು ಕಣ್ಣುಗಳು ತುಂಬುತ್ತಲೇ ಇಲ್ಲ..." ಅಷ್ಟರಲ್ಲಿ ನನ್ನ ಮಗಳು ಹೇಳಿದಳು "ಅಪ್ಪ ತುಂಬ್ತಾ ಇಲ್ಲ ಅಂತ ಹೇಳ್ತಾ ಇದ್ದಾರಲ್ಲ ಮೋಟೊರ್ ಹಾಕಬಹುದಲ್ವ (ನೀರೆತ್ತುವ ಪಂಪ್ ಮೋಟರ್ ತರಹ ಅಂದು ಕೊಂಡಿದ್ದಳು)  

ಮುಂಗಾರು ಮಳೆ : ಏನಮ್ಮ ಇಷ್ಟು ಖುಷಿಯಾಗಿದ್ದೀಯ ಅಪ್ಪ ಏನಾದರು ಡೈವುರ್ಸ್ ಕೊಡ್ತೀನಿ ಅಂದ್ರ...(ಮಗ ತನ್ನ ಅಮ್ಮನಿಗೆ ಕೇಳುವ ಪ್ರಶ್ನೆ - ದೇವರೇ ಭಟ್ರನ್ನ ಕಾಪಾಡಿ)

ಕರಿ ಚಿರತೆ : ಒಂದು ಹಾಡಿನ ಸಾಲು...ಮನೆ ಅಂದ್ರೆ ಬಾತ್ ರೂಂ ಇರುತ್ತೆ..ನನ್ನ ಹೆಸರು ಕರಿ ಚಿರತೆ...(ಯಪ್ಪಾ...ಎಲ್ಲಿಂದ ಎಲ್ಲಿಗೆ)

ಅದ್ದೂರಿ : ಒಂದು ಹಾಡಿನ ಸಾಲು ...ನೀವು ನಗಲೇ ಬೇಕು ಒಂದು ಸಾರಿ...ಇದು ಅಚ್ಚು ರಚ್ಹು ಲವ್ ಸ್ಟೋರಿ..(ಸಂಬಂಧ...ದೇವರಿಗೆ ಗೊತ್ತು)

ಇವೆಲ್ಲ ಕೆಲವು ಉದಾಹರಣೆಗಳು...ಚಿಂತನೆಗೆ ಆಹಾರ ಕೊಡತಕ್ಕ ಕತೆಗಳು, ಸಂಭಾಷಣೆಗಳು, ಗೀತೆಗಳು ಎಲ್ಲಿವೆ ಎಂದು ಹುಡುಕಬೇಕು...ದೋಸೆ ಹಿಟ್ಟಲ್ಲಿ ಇಡ್ಲಿ ಮಾಡಿ, ಇಡ್ಲಿ ಹಿಟ್ಟಲ್ಲಿ ವಡೆ ಮಾಡಿ..ಹೀಗೆ ಒಂದಕೊಂದು ಅರ್ಥ ಇಲ್ಲದ ಮಾತುಗಳು...ಬರೆಯುವ ಪಿತಮಹರಿಗೆ ತಮ್ಮ ಮಕ್ಕಳ, ಮುಂದಿನ ಪೀಳಿಗೆ ಬಗ್ಗೆ ಯೋಚನೆ ಇಲ್ಲವ ಅಂತ ವಾಕರಿಕೆ ಬರುತ್ತೆ...

ನಮ್ಮ ತಾತ, ಅಪ್ಪ ಅಮ್ಮ...ಇವರೆಲ್ಲ ಒಂದು ಒಳ್ಳೆಯ ಪ್ರಪಂಚವನ್ನ ನಮಗೆ ಬಿಟ್ಟಿದ್ದಾರೆ..ಆದ್ರೆ ನಾವು ನಮ್ಮ ಮಕ್ಕಳಿಗೆ ಬಿಟ್ಟು ಹೋಗುವ ಪ್ರಪಂಚ...ನೆನಸಿಕೊಂಡರೆ.........ಬೇಡ ಬಿಡಿ..

ಕಾಲಾಯ ತಸ್ಮೈ ನಮಃ...

6 comments:

  1. ವಾಹ್ ವಾಹ್ ನಿಜಾ ಸಾರ್ . ಅರ್ಥವಿಲ್ಲದ ಹಾಡುಗಳು, ಕದ್ದುತಂದಾ ಸರುಕಿನಿಂದಾ ಬರೆಯುವ ಕಥೆಗಳು, ಮನೆಯವರೆಲ್ಲಾ ಕುಳಿತು ನೋಡಲು ಆಗದ ಚಿತ್ರಗಳು. ಸಾಹಿತ್ಯದ ಗಂಧವಿಲ್ಲದ ಸಾಹಿತಿಗಳು ಎಲ್ಲರೂ ಸೇರಿ ಕನ್ನಡಿಗರನ್ನು ಗೋಳು ಹುಯ್ದು ಕೊಳ್ಳುತ್ತಿದ್ದಾರೆ
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
  2. ಆತ್ಮೀಯ ಶ್ರೀಕಾಂತ,
    ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿ, ಅದನ್ನು ಪಟ್ಟಿ ಮಾಡಿ ಉಲ್ಲೇಖಿಸಿರುವ ನಿನ್ನ ತಾಳ್ಮೆ ಮೆಚ್ಚಬೇಕಾದ್ದೆ!

    ReplyDelete
  3. ಮುಖ್ಯವಾಗಿ ಈ ಹಾಡು, ನಮ್ಮ ಮಾತು ಹೇಗಿರ ಬೇಕು ಎನ್ನುವುದನ್ನು ಹೇಳಿಕೊಡುತ್ತದೆ ಅಲ್ಲವೇ?

    ಸಂಭಾಷಣೆಗಳು ಮೈ ಪರಚಿಕೊಳ್ಳುವಂತೆ ಮಾಡುವುದೇ ಇಂದಿನ ತಿಕ್ಕಲು ಟ್ರೆಂಡ್.

    ಸಕಾಲಿಕ ಬರಹ.

    ReplyDelete
  4. ಬಾಲು ಸರ್..ನಿಮ್ಮ ಅಭಿಪ್ರಾಯಕ್ಕೆ ನನ್ನ ನಮನಗಳು...ಕನ್ನಡ ನಾಡನ್ನು ಗೋಳು ಹುಯ್ದು ಕೊಲ್ಲುತಿರುವ ಸಾಹಿತಿಗಳು ಕಣ್ಣು ತೆರೆಯಬೇಕಾದ ಸಮಯ...

    ReplyDelete
  5. ಪ್ರಕಾಶ್ ಚಿಕ್ಕಪ್ಪ..ಸಿನಿಮಾಗಳು, ಹಾಡುಗಳು, ಸಂಭಾಷಣೆಗಳು ನನ್ನ ಜೀವನ ರೂಪಿಸುವಲ್ಲಿ ತುಂಬಾ ಸಹಾಯ ಮಾಡಿದೆ ಎಂದು ಎದೆ ತಟ್ಟಿಕೊಂಡು ಹೇಳಬಲ್ಲೆ..ಅಂತಹ ಸಾಹಿತ್ಯ ತುಂಬಿದ ಸಿನಿಮಾಗಳನ್ನು ನೋಡಿ, ನಲಿದು, ಕಲಿತು ಬೆಳೆದ ನನಗೆ ಇತ್ತೀಚಿನ ಗುಣ ಮಟ್ಟ ವಾಕರಿಕೆ ತರಿಸುತ್ತಿದೆ...ಧನ್ಯವಾದಗಳು ನಿಮ್ಮ ಪ್ರಶಂಸೆಗಳಿಗೆ

    ReplyDelete
  6. ಧನ್ಯವಾದಗಳು ಬದರಿ ಸರ್...ಹೌದು ತಲೆ ಕೆಟ್ಟು ಹೋಗುತ್ತದೆ..ಇಂದಿನ ಹಾಡುಗಳನ್ನ, ಸಂಭಾಷಣೆಯನ್ನ ಕೇಳಿದಾಗ..

    ReplyDelete