ವಾಡಿಯಾ ಸಭಾಂಗಣ...ಸಜ್ಜಾಗುತ್ತ ನಿಂತಿತ್ತು...ಮೈಕ್ ಸೆಟ್, ಕುರ್ಚಿಗಳು, ಪರದೆಗಳು, ಅದರ ಮೇಲೆ ಅಂಟಿಸಿದ್ದ ಪಟ..ಎಲ್ಲವು ಸುಮ್ಮನೆ ತಮ್ಮಲ್ಲೇ ಮಾತಾಡುತ್ತಿದ್ದವು...
|
ತೆರೆಗಳು ಅಪ್ಪಳಿಸಲು ಸಿದ್ಧವಾದ ಅಂಗಣ |
ಮೈಕ್ ಒನ್ ಟು, ಒನ್ ಟು ಎಂದು ಹೇಳಿ ಗಂಟಲು ಸರಿ ಮಾಡಿಕೊಂಡಿತು....ಕುರ್ಚಿಗಳು ಕೈ ಕಾಲು ಸಡಿಲ ಮಾಡಿಕೊಂಡು..ಶಿಸ್ತಿನ ಸಿಪಾಯಿಗಳ ಹಾಗೆ ನಿಂತವು...ಪರದೆ ತನ್ನ ನೆರಿಗೆಯನ್ನು ಒಮ್ಮೆ ಸರಿ ಮಾಡಿಕೊಂಡಿತು..ಲೈಟ್ ಗಳು ತಮ್ಮ ಹಲ್ಲನ್ನು ಒಮ್ಮೆ ತಿಕ್ಕಿ ತೀಡಿದವು..ಫಳ ಫಳನೆ ಹೊಳೆಯಲಾರಂಭಿಸಿತು ....ಶುರುವಾಯ್ತಪ್ಪ ಹಬ್ಬ...ಅಂದವು...ಎಲ್ಲರು ಒಮ್ಮೆಲೇ...
|
ತಾರೆಗಳ ನಿರೀಕ್ಷೆಯಲ್ಲಿ |
|
ತೆರೆಗಳು ಬರುವ ಮುಂಚೆ...ತಾರೆಗಳ ಕಾಯುವಿಕೆಯಲ್ಲಿ |
|
ಸಂಭ್ರಮದ ದಿನ..ಎಂತ ಮಹನೀಯರು ನನ್ನ ಮುತ್ತುತ್ತಾರೆ... |
ಒಬ್ಬರಾಗಿ ಒಬ್ಬರು ನಲಿಯುತ ಹೃದಯ ಹಾಡನು ಹಾಡಿದೆ ಎಂದು ಹೇಳುತ ಬಂದರು..
ಕೆಲವರು..ಅಣ್ಣ, ತಮ್ಮಯ್ಯ, ಅಣ್ಣಯ್ಯ, ಗೆಳೆಯ, ಅಕ್ಕಯ್ಯ, ತಂಗ್ಯವ್ವ ..ಬುದ್ಧಿ, ಗುರುಗಳೇ, ಅತ್ತಿಗೆ..ಹೀಗೆ ದೊಡ್ಡವರು, ಚಿಕ್ಕವರು ತಮಗೆ ತಿಳಿದ, ಗೊತ್ತಾದ ಭಾಂದವ್ಯದ ಕರೆಯನ್ನು ತೋರುತ್ತ...ಒಬ್ಬರಿಗೊಬ್ಬರು ತಮ್ಮ ಗೆಳೆತನದ ಸಂಕೋಲೆಯಲ್ಲಿ ಬಂಧಿತರಾಗುತಿದ್ದ ದೃಶ್ಯ ನೋಡಿ..ಮೇಲಿದ್ದ ಮೇಘರಾಜ..ಒಮ್ಮೆ ತನ್ನ ಕಣ್ಣನ್ನು ಒರೆಸಿಕೊಂಡ...ಮತ್ತು .."ಮೋಡದ ಒಳಗೆ ಹನಿಗಳ ಬಳಗ..ಕೂಡ ಒಂಟಿ ಕಾಲಲಿ ಕಾದು ನಿಂತೆಹೆ ಭೂಮಿಗೆ ಬರಲು.....ಐದು ಮುತ್ತುಗಳನ್ನ ಹೆಕ್ಕಿ ತರುವ ಸಭಾಂಗಣದ ಕಾರ್ಯಕ್ರಮಕ್ಕೆ ಯಾವುದೇ ಅಡೆ ತಡೆ ಮಾಡುವುದಿಲ್ಲ " ಎಂದು ಶಪಥ ಮಾಡಿದ...
ನೋಡಿ ಮುಂದೆ ನೀವೇ..ಅಮೋಘ ಸಂಕಲನದ ಮಮತೆಯ ಮಡಿಲಲ್ಲಿ ಮಿಂದು ತೇಲುತಿರುವ ನಾವಿಕರನ್ನ...ಬ್ಲಾಗ್ ಲೋಕದ ಮಾಣಿಕ್ಯಗಳನ್ನ...ಒಬ್ಬರ ಹೆಸರು ಉಳಿದರೆ..ಇನ್ನೊಂದು ತೆರೆಗೆ ಅಪ್ಪಳಿಸುತ್ತದೆ..ಹೀಗೆ ಸಾಗಿತ್ತು ಸ್ನೇಹದ ಕಲರವ...ನೀವೇ ನೋಡಿ ಆನಂದಿಸಿ...
|
ಹಿರಿಯರ ಆಶೀರ್ವಾದ ಸದಾ ಕಾಯುವ ನೆರಳು |
|
ಬಂದರು ಕವಿಗಳ ರಾಜ ಶ್ರೀ ಬಿ. ಆರ್. ಲಕ್ಷ್ಮಣರಾಯರು |
|
ಪ್ರಕಾಶ ಮಾನವಾದ ಲಕ್ಷ್ಮಣ ರಾಯರು ನಾನು ಅಜಾದ್ ಎಂದರು
|
|
ಬ್ಲಾಗ್ ಲೋಕದ ತಾರೆಗಳು "ಬದರಿ, ಬಾಲು, ಪ್ರಕಾಶ್, ಉಮೇಶ್, ದಿನಕರ್ ಮುಂತಾದ ಅನೇಕ ನಕ್ಷತ್ರಗಳು |
|
ಸುಂದರ ಕಥಾ ನಾಯಕಿ...!!! |
|
ಸುಂದರ ಬ್ಲಾಗ್ ಲೋಕದ ಪರಿವಾರ!! |
|
ಉಮೇಶ್ ದೇಸಾಯಿ ಮತ್ತು ಅಭಿಮಾನಿಗಳ ಬಳಗ... |
trailer bahala chennagide...... filmgaagi kadu nodabeku
ReplyDeleteWe are in half way. complete the report.
ReplyDeleteನಿಜವಾಗಲೂ ಮನಸ್ಸು ಪ್ರಫುಲ್ಲವಾಯಿತು. ಎಷ್ಟೊಂದು ಜನ ದೇವಾನು ದೇವತೆಗಳ ಮುಖತಹ ಭೇಟಿಯಾದೆ ಸಾರ್.
ReplyDeleteಸಾಹಿತ್ಯ ಪರಿಷತ್ತು ಬ್ಲಾಗ್ ಲೋಕವನ್ನು ಗಮನಿಸಬೇಕು ಅಲ್ಲವೇ?
ನಿಮ್ಮ ಬರುವಿಕೆಯು ಮತ್ತು ಫೋಟೋಗಳೂ ಅಮೋಘ.
Nice Photos anna..:)
ReplyDeleteಸಂದೀಪ್ ಆ ಕ್ರೆಡಿಟ್ ನಿಮಗೆ ಸೇರಬೇಕು..ನೀವು ಈ ಲೋಕಕ್ಕೆ ನನ್ನ ಪರಿಚಯಿಸಿದ್ದು...ಪೂರ ಸಿನೆಮಾವನ್ನು ತೋರಿಸುತ್ತೀನಿ...
ReplyDeleteಪ್ರಕಾಶ್ ಚಿಕ್ಕಪ್ಪ..ಧನ್ಯವಾದಗಳು..ಸಿನೆಮಾವನ್ನು ಪೂರ್ತಿ ಚಿತ್ರೀಕರಿಸಿ ಬರುತ್ತದೆ ತೆರೆಯಮೇಲೆ..ಸಧ್ಯದಲ್ಲೇ..
ReplyDeleteಗೆಳೆತನದ ಲೋಕ...ದೇವಲೋಕದ ಸಮಾನ..ನಿಮ್ಮಂತೆ ನನಗು ಬಹಳ ಖುಷಿ ಆಯಿತು ನಿಮ್ಮನ್ನೆಲ್ಲ ನೋಡಿ..ಧನ್ಯವಾದಗಳು ಬದರಿ ಸರ್..
ReplyDeleteಎಸ್.ಪಿ..ಧನ್ಯವಾದಗಳು...
ReplyDelete