Sunday, August 26, 2012

ಐದು ಮುತ್ತುಗಳು...ಆಯ್ದುಕೊಂಡು ಹೋಗೋಣ ಬನ್ನಿ.. - Part II

ಮೊದಲನೇ ಅಂಕ...ಪರದೆಯ ಹಿಂದೆ...

ಒಂದು ಕುಟುಂಬದಲ್ಲಿ ಎಷ್ಟು ಸಹಾಬಾಳ್ವೆ ಇರಬಹುದು ಇರಬೇಕು..ಇದೆಲ್ಲ ಯೋಚನೆ ಮಾಡುವುದೇ ಅಲ್ಲ..ಬನ್ನಿ ಒಮ್ಮೆ ಬ್ಲಾಗ್ ಲೋಕಕ್ಕೆ...ದುಮುಕಿ ಒಂದು ಅಲೆಯ ಜೊತೆ ಈ ಕಡಲಿಗೆ..ಸಿಗುವ ಮಜವೇ ಬೇರೆ..

ಬನ್ನಿ..ಮುತ್ತು ಆಯ್ದುಕೊಳ್ಳುವ ಈ ಸಂಭ್ರಮದ ಅಭೂತಪೂರ್ವ ಕ್ಷಣಗಳಿಂದ.....
ಅಂದದ ಸಭಾಂಗಣ
ಜೊತೆ ಜೊತೆಯಲ್ಲಿ ಹೆಜ್ಜೆ ಹಾಕಿ ನಲಿಯುವ ಸಂಭ್ರಮ..
ಜೊತೆಯಲಿ ಜೊತೆ ಜೊತೆಯಲಿ
ಹೆಣ್ಣನ್ನು ಸಿಂಗರಿಸಿ...ಮಂಟಪಕ್ಕೆ ಕರೆತರುವ ದೃಶ್ಯ...ಬಹು ಸುಂದರ...
ಸೋದರಮಾವಯ್ಯ...ಕರೆ ತನ್ನಿರಯ್ಯ ಧಾರೆಗೆ ವಧುವನ್ನು...

ಅಪ್ಪಿಕೋ ಚಳುವಳಿಯ ಭಾವುಕ ಕ್ಷಣಗಳು..ತಮ್ಮ ಗೆಳೆಯರನ್ನ ಭೇಟಿ ನೀಡಿದ ಮಧುರ ಕ್ಷಣಗಳು


ನಾವೆಲ್ಲಾ ಇರುವಾಗ ಸಭಾಂಗಣ ತುಂಬಲು ಸಾಹಸ ಪಡಬೇಕೆ..ನಾವೇ ಗೆಲುವು..ಗೆಲುವೆ ನಾವು...
ಯೆಡಿ- ಬಡಿ ಊರಪ್ಪ...

ಬ್ಯಾಡ್ರಿ....ಬದರಿ...ಬನ್ನಿ ಇತ್ಲಾಗೆ...ನೀವಿಲ್ಲದೆ ಜನ ಬರರು....

ಪುಟಾಣಿಗಳು ಸಂಭ್ರಮದಿಂದ ನಲಿದಾಡಿದ ಆ ಕ್ಷಣಗಳು
ಮುದ್ದು ಮರಿ...

ಶೀತಲ್ ಗಿಂತ ಇರುವುದೇ ತಣ್ಣಗೆ
ಮಧುರವಾದ ಘಳಿಗೆಗಳಿಗೆ ಫೋಟೋ ಬೇಡವೇ ನಾನಿದ್ದೇನೆ....
ಬಾಲು ಸರ್..ಅವರ ತುಂಟು ಕಣ್ಣಿನ ಜೊತೆ...
ಕೆಲಸದ ಒತ್ತಡದ ನಡುವೆ ಕೂಡ ಈ ಮಧುರ ಸಂಗಮಕ್ಕೆ ಸಾಕ್ಷಿಯಾದವರು

ಪ್ರೇಕ್ಷಕರಿಂದ..ಮೊರೆತ ಕೇಳುತಿತ್ತು...ಪುಸ್ತಕದ ಬಿಡುಗಡೆ ಕ್ಷಣ ಹತ್ತಿರ ಬಂತು...
ಸಭಿಕರು...ಬ್ಲಾಗಿಗರು...ಚಿತ್ರಕೃಪೆ - ದಿಗ್ವಾಸ್ ಹೆಗ್ಗಡೆ..
ಪುಸ್ತಕಗಳ ಸರದಾರರು ಸಭೆಯ ಮುಖ್ಯ ಅತಿಥಿಗಳ ಜೊತೆಯಲ್ಲಿ ನಿಂತರು...
ಲೇಖಕರು, ಅತಿಥಿಗಳು.. ..ಚಿತ್ರಕೃಪೆ - ದಿಗ್ವಾಸ್ ಹೆಗ್ಗಡೆ..        
ಒಂದೊಂದಾಗಿ ಪುಸ್ತಕಗಳ ಪದರ ಬಿಚ್ಚುತ್ತಾ...ಭಾವನೆಗಳನ್ನ ಹರವಿ ಹಾಕಲು ಶುರು ಮಾಡಿದರು...ಎಲ್ಲ ಪುಸ್ತಕಗಳು ಲೋಕಾರ್ಪಣೆಯಾಯಿತು..
ಲೇಖಕರು, ಅತಿಥಿಗಳು.. ..ಚಿತ್ರಕೃಪೆ - ದಿಗ್ವಾಸ್ ಹೆಗ್ಗಡೆ..       
ತಮ್ಮ ತಮ್ಮ ಅನಿಸಿಕೆಗಳು, ಭಾವನೆಗಳು, ಅಂತರಂಗದ ಅಭಿಮಾನಗಳು ಬುಗ್ಗೆಯಾಗಿ ಹರಿಯತೊಡಗಿತು...
ಸಾರ್ಥಕ ಕ್ಷಣಗಳಿಗೆ ಕಾರಣವಾಗಿದ್ದು ನೂರಾರು ಸಾವಿರಾರು ಕಣ್ಣುಗಳು..
ಸಭಿಕರು...ಬ್ಲಾಗಿಗರು...ಚಿತ್ರಕೃಪೆ - ದಿಗ್ವಾಸ್ ಹೆಗ್ಗಡೆ..

ಸಭಿಕರು...ಬ್ಲಾಗಿಗರು...ಚಿತ್ರಕೃಪೆ - ದಿಗ್ವಾಸ್ ಹೆಗ್ಗಡೆ..
ಇಂತಹ ಒಂದು ಅಮೋಘ ಕ್ಷಣಗಳಿಗೆ ಕಾರಣವಾದ ಸಭಾಂಗಣ ಖುಷಿಯಿಂದ ಆನಂದಭಾಷ್ಪ ಸುರಿಸಿತು...
ಧನ್ಯ ಬ್ಲಾಗಿಗರ ಲೋಕ..ಧನ್ಯ ಕವಿಗಳ ನಾಕ...ಇದುವೇ ಅಲ್ಲವೇ ಸುಂದರ ಜಗತ್ತು...
ಗೆಳೆಯರೇ ಮತ್ತೆ ಇನ್ನೊಂದು ಇಂತಹ ಕ್ಷಣಗಳಿಗೆ ಸಾಕ್ಷಿಯಾಗಲು ಮತ್ತೆ ಕಾಯುತ್ತೇನೆ..
ಹೋಗಿ ಬನ್ನಿ ಎಂದಿತು...ವಾಡಿಯಾ ಸಭಾಂಗಣ...
ಆನಂದ ಭಾಷ್ಪದೊಂದಿಗೆ... ವಾಡಿಯಾ ಸಭಾಂಗಣ.....

Saturday, August 25, 2012

ಐದು ಮುತ್ತುಗಳು...ಆಯ್ದುಕೊಂಡು ಹೋಗೋಣ ಬನ್ನಿ..

ವಾಡಿಯಾ ಸಭಾಂಗಣ...ಸಜ್ಜಾಗುತ್ತ ನಿಂತಿತ್ತು...ಮೈಕ್ ಸೆಟ್, ಕುರ್ಚಿಗಳು, ಪರದೆಗಳು, ಅದರ ಮೇಲೆ ಅಂಟಿಸಿದ್ದ ಪಟ..ಎಲ್ಲವು  ಸುಮ್ಮನೆ ತಮ್ಮಲ್ಲೇ ಮಾತಾಡುತ್ತಿದ್ದವು...
ತೆರೆಗಳು ಅಪ್ಪಳಿಸಲು ಸಿದ್ಧವಾದ ಅಂಗಣ
ಮೈಕ್ ಒನ್ ಟು, ಒನ್ ಟು ಎಂದು ಹೇಳಿ ಗಂಟಲು ಸರಿ ಮಾಡಿಕೊಂಡಿತು....ಕುರ್ಚಿಗಳು ಕೈ ಕಾಲು ಸಡಿಲ ಮಾಡಿಕೊಂಡು..ಶಿಸ್ತಿನ ಸಿಪಾಯಿಗಳ ಹಾಗೆ ನಿಂತವು...ಪರದೆ ತನ್ನ ನೆರಿಗೆಯನ್ನು ಒಮ್ಮೆ ಸರಿ ಮಾಡಿಕೊಂಡಿತು..ಲೈಟ್ ಗಳು ತಮ್ಮ ಹಲ್ಲನ್ನು ಒಮ್ಮೆ ತಿಕ್ಕಿ ತೀಡಿದವು..ಫಳ ಫಳನೆ ಹೊಳೆಯಲಾರಂಭಿಸಿತು ....ಶುರುವಾಯ್ತಪ್ಪ ಹಬ್ಬ...ಅಂದವು...ಎಲ್ಲರು ಒಮ್ಮೆಲೇ...
ತಾರೆಗಳ ನಿರೀಕ್ಷೆಯಲ್ಲಿ 

ತೆರೆಗಳು ಬರುವ ಮುಂಚೆ...ತಾರೆಗಳ ಕಾಯುವಿಕೆಯಲ್ಲಿ 

ಸಂಭ್ರಮದ ದಿನ..ಎಂತ ಮಹನೀಯರು ನನ್ನ ಮುತ್ತುತ್ತಾರೆ...
ಒಬ್ಬರಾಗಿ ಒಬ್ಬರು ನಲಿಯುತ ಹೃದಯ ಹಾಡನು ಹಾಡಿದೆ ಎಂದು ಹೇಳುತ ಬಂದರು..
ಕೆಲವರು..ಅಣ್ಣ, ತಮ್ಮಯ್ಯ, ಅಣ್ಣಯ್ಯ, ಗೆಳೆಯ, ಅಕ್ಕಯ್ಯ, ತಂಗ್ಯವ್ವ ..ಬುದ್ಧಿ, ಗುರುಗಳೇ, ಅತ್ತಿಗೆ..ಹೀಗೆ ದೊಡ್ಡವರು, ಚಿಕ್ಕವರು ತಮಗೆ ತಿಳಿದ, ಗೊತ್ತಾದ ಭಾಂದವ್ಯದ ಕರೆಯನ್ನು ತೋರುತ್ತ...ಒಬ್ಬರಿಗೊಬ್ಬರು ತಮ್ಮ ಗೆಳೆತನದ ಸಂಕೋಲೆಯಲ್ಲಿ ಬಂಧಿತರಾಗುತಿದ್ದ ದೃಶ್ಯ ನೋಡಿ..ಮೇಲಿದ್ದ ಮೇಘರಾಜ..ಒಮ್ಮೆ ತನ್ನ ಕಣ್ಣನ್ನು ಒರೆಸಿಕೊಂಡ...ಮತ್ತು .."ಮೋಡದ ಒಳಗೆ ಹನಿಗಳ ಬಳಗ..ಕೂಡ ಒಂಟಿ ಕಾಲಲಿ ಕಾದು ನಿಂತೆಹೆ ಭೂಮಿಗೆ ಬರಲು.....ಐದು ಮುತ್ತುಗಳನ್ನ ಹೆಕ್ಕಿ ತರುವ ಸಭಾಂಗಣದ  ಕಾರ್ಯಕ್ರಮಕ್ಕೆ ಯಾವುದೇ ಅಡೆ ತಡೆ ಮಾಡುವುದಿಲ್ಲ " ಎಂದು ಶಪಥ ಮಾಡಿದ...

ನೋಡಿ ಮುಂದೆ ನೀವೇ..ಅಮೋಘ ಸಂಕಲನದ ಮಮತೆಯ ಮಡಿಲಲ್ಲಿ ಮಿಂದು ತೇಲುತಿರುವ ನಾವಿಕರನ್ನ...ಬ್ಲಾಗ್ ಲೋಕದ ಮಾಣಿಕ್ಯಗಳನ್ನ...ಒಬ್ಬರ ಹೆಸರು ಉಳಿದರೆ..ಇನ್ನೊಂದು ತೆರೆಗೆ ಅಪ್ಪಳಿಸುತ್ತದೆ..ಹೀಗೆ ಸಾಗಿತ್ತು ಸ್ನೇಹದ ಕಲರವ...ನೀವೇ ನೋಡಿ ಆನಂದಿಸಿ...
ಹಿರಿಯರ ಆಶೀರ್ವಾದ ಸದಾ ಕಾಯುವ ನೆರಳು 

ಬಂದರು ಕವಿಗಳ ರಾಜ ಶ್ರೀ ಬಿ. ಆರ್. ಲಕ್ಷ್ಮಣರಾಯರು

ಪ್ರಕಾಶ ಮಾನವಾದ ಲಕ್ಷ್ಮಣ ರಾಯರು ನಾನು ಅಜಾದ್ ಎಂದರು

ಬ್ಲಾಗ್ ಲೋಕದ ತಾರೆಗಳು "ಬದರಿ, ಬಾಲು, ಪ್ರಕಾಶ್, ಉಮೇಶ್, ದಿನಕರ್ ಮುಂತಾದ ಅನೇಕ ನಕ್ಷತ್ರಗಳು 

ಸುಂದರ ಕಥಾ ನಾಯಕಿ...!!!
ಸುಂದರ ಬ್ಲಾಗ್ ಲೋಕದ ಪರಿವಾರ!!
ಉಮೇಶ್ ದೇಸಾಯಿ ಮತ್ತು ಅಭಿಮಾನಿಗಳ ಬಳಗ...

Wednesday, August 22, 2012

ಒಂದು ಮಾತು...ಹೇ ನನಗೊತ್ತು...ಅದಲ್ಲ..


ಧರ್ಮಸೆರೆ ಅದ್ಭುತ ಸಿನಿಮಾ..ಹ..ಪುಟ್ಟಣ್ಣ ಅವರ ಸಿನಿಮಾಗಳೇ ಹಾಗೆ..
ಆ ಚಿತ್ರದಲ್ಲಿ ಒಂದು ಹಾಡು.."
ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ...
ಅತಿ ನವ್ಯ ರಸ ಕಾವ್ಯ..ಮಧುರ ಮಧುರ ಮಧುರ..."

ಹೆಚ್ಚು ಕಡಿಮೆ..ಸಂಭಾಷಣೆಯನ್ನೇ ಕೇಂದ್ರ ಬಿಂದು ಮಾಡಿಕೊಂಡು ರಚಿಸಿರುವ ಹಾಡು ಅದು

ಹುಣುಸೂರು ಕೃಷ್ಣಮೂರ್ತಿ, ಕು.ರಾ. ಸೀತಾರಾಮಶಾಸ್ತ್ರಿ, ಚಿ. ಸದಾಶಿವಯ್ಯ, ಚಿ.ಉದಯಶಂಕರ್, ಕಣಗಾಲ್ ಪ್ರಭಾಕರ ಶಾಸ್ತ್ರಿ, ಪುಟ್ಟಣ್ಣ ಕಣಗಾಲ್, ಗೀತಪ್ರಿಯ, ಆರ್. ಎನ್. ಕುಟುಂಬ (ನಾಗೇಂದ್ರ ರಾಯರು, ಜಯಗೋಪಾಲ್), ಜಿ.ವಿ. ಅಯ್ಯರ್, ನನ್ನ ಅಚ್ಚುಮೆಚ್ಚಿನ ಬಾಲಣ್ಣ (ಕೆಲವು ಚಿತ್ರಗಳಿಗೆ) ಹಾಗೆ ಇನ್ನು ಎಷ್ಟು ಹೆಸರಿಸಲಾಗದ ಮಹನೀಯರು ಬರೆದ ಸಂಭಾಷಣೆಗಳು ಇನ್ನು ಮೈ ನವಿರೇಳಿಸುತ್ತದೆ..ಹಾಗೆ ಮೈ ಪುಳಕಗೊಲಿಸುತ್ತದೆ....ಅಂತಹವರ ಸಂಭಾಷಣೆ ಕೇಳಿ, ನೋಡಿ ಬೆಳೆದ ಈ ಕಿವಿಗಳು, ಕಣ್ಣುಗಳು ಇತ್ತೀಚಿನ ಚಲನ ಚಿತ್ರಗಳಲ್ಲಿ, ಧಾರಾವಾಹಿಗಳಲ್ಲಿ ಬರುವ ಸಂಭಾಷಣೆಗಳನ್ನು ನೋಡಿ ಕೇಳಿ ಕಿವಿಗಳು ಪಾವನವಾದವು....

ಕೆಲವು ಉದಾಹರಣೆಗಳು ನಿಮಗಾಗಿ...
ಮುಕ್ತ ಮುಕ್ತ : 
ಚಿದಾನಂದನನ್ನು  ನೋಡಲು ಬರುವ ಡಾಕ್ಟರ್ಗೆ ಶಾರದಮ್ಮ ಕೇಳುವ ಪ್ರಶ್ನೆ..
"ಡಾಕ್ಟ್ರೆ ನಿಮಗೆ ಕಾಫಿ ನ ಅಥವಾ ಟೀ ನ .." 
ಆಗ ಡಾಕ್ಟ್ರು....  
".... ಕುಡಿಯೋಕಾ...?...ಬೇಡ ಬೇಡ"
(ನಗು ಬಂತು...ಇದುವರೆಗೂ ಮನುಜರು ನೀರಲ್ಲಿ, ದೇವರಿಗೆ ಪಂಚಾಮೃತದಲ್ಲಿ ಸ್ನಾನ/ಅಭಿಷೇಕ ಇರುತ್ತೆ...ಇನ್ನು ಕಾಫಿಯಲ್ಲಿ ದೇವರೇ...?)

ನನ್ನ ಜೀವ ನೀನು: 
ತಲೆ ಹರಟೆ ಭೂಮಿಕ ಪಾತ್ರಧಾರಿನ ಸೂರ್ಯ ಎನ್ನುವ ಅಷ್ಟೇ ತಲೆಹರಟೆ ಪಾತ್ರಧಾರಿ ಶೀಲ ಭಂಗ ಮಾಡಿರುತ್ತಾನೆ...ಆ ನೋವಿನಲ್ಲಿ ಭೂಮಿಕ ಅವಳ ತಾತ ಎನ್ನುವ ಪಾತ್ರಧಾರಿಯನ್ನ ಕೇಳುವ ಮಾತು..."ತಾತ ನನಗೆ ಜೀವನ ಸಾಕಾಗಿ ಹೋಗಿದೆ...ಒಂದು ಚೂರು ವಿಷ ತಂದು ಕೊಡಿ ತಾತ?
(ನಗು ಬಂತು...ನೆಂಟರ ಮನೆಗೆ ಹೋಗಿ..ಒಂದು ಲೋಟ ಕಾಫಿ ಕೊಡಿ ಎಂದು ಕೇಳಿದ ಹಾಗೆ)

ಶುಭಮಂಗಳ: ಮಾಯಿ ಪಾತ್ರ ಸತ್ತರೆ ಸಾಕು ಅಂತ ಎಲ್ಲರು ಕೈ ಮುಗಿಯುತ್ತ ಇರ್ತಾರೆ..ಒಂದು ದಿನ ಮಾಯಿ ಮಾಯವಾಗಿ ಬಿಡುತ್ತಾಳೆ..ಆಗ ಕ್ರಾಕ್ ಪಾತ್ರ ದೇವಕಿ ತನಗೆ ತಾನೇ ಹೇಳಿಕೊಳ್ಳುವ ಮಾತು "ಎಲ್ಲಿ ಹೋದರು ಮಾಯಿ, ಹೆಂಗೆ ಇರುತ್ತಾರೋ, ಮನೇಲಿ ಏನು ತೊಂದ್ರೆ ಇರಲಿಲ್ಲ...ಆದರು ಎಲ್ಲಿಗೆ ಹೋದರು..
ಇನ್ನು ಮಾಯಿ ಹೋದ ನಂತರ..ಎಲ್ಲರು ಒಬ್ಬೊಬ್ಬರೇ ಮಾತಾಡುವುದು "ಮಾಯಿ ಎಲ್ಲಿ ಹೋದರು..ಹೋಗುವಾಗ ನಮಗೆ ಹೇಳಬಾರದಿತ್ತೆ..ನಮಗೆ ಏಕೆ ಹೇಳಲಿಲ್ಲ..ಮೊಬೈಲ್ಗಾದರೂ ಫೋನ್ ಮಾಡಿ ನೋಡಿ..."
(ಇದೆ ಮಾತನ್ನು ಶತಕ ಅನ್ನುವ ರೀತಿ ನೂರಾರು ಸಾರಿ ಹೇಳುವ ಪರಿ..ನಗೆ ತರಿಸುತ್ತದೆ) 

ಸುವರ್ಣ ವಾಹಿವಾಹಿನಿಯಲ್ಲಿ ಬರುತಿದ್ದ ಶ್ರೀ ಗುರುರಾಯರ ಧಾರಾವಾಹಿಯಲ್ಲಿ ಕೆಲವು ಪಾತ್ರಗಳು ಆಡುತಿದ್ದ ಗ್ರಾಂಥಿಕ ಸಂಭಾಷಣೆಗಳು..ಕಿವಿಗೆ ಆಹಾ.....ಮಾತೆ ಇಲ್ಲ)
ನನ್ನ ಮಗಳು ಒಂದು ಸಂಭಾಷಣೆ ಕೇಳಿ ನಗಲು ಶುರು ಮಾಡಿದ್ದಳು..ಗುರು ರಾಯರ ಪಾತ್ರದ ಪೂರ್ವಾಶ್ರಮದಲ್ಲಿ ಪತ್ನಿ ಪಾತ್ರ ಸರಸ್ವತಿ ಹೇಳುವ ಮಾತು..."ಇಂದೇಕೋ ಸ್ವಾಮಿ ಎಷ್ಟು ನೋಡಿದರು ಕಣ್ಣುಗಳು ತುಂಬುತ್ತಲೇ ಇಲ್ಲ..." ಅಷ್ಟರಲ್ಲಿ ನನ್ನ ಮಗಳು ಹೇಳಿದಳು "ಅಪ್ಪ ತುಂಬ್ತಾ ಇಲ್ಲ ಅಂತ ಹೇಳ್ತಾ ಇದ್ದಾರಲ್ಲ ಮೋಟೊರ್ ಹಾಕಬಹುದಲ್ವ (ನೀರೆತ್ತುವ ಪಂಪ್ ಮೋಟರ್ ತರಹ ಅಂದು ಕೊಂಡಿದ್ದಳು)  

ಮುಂಗಾರು ಮಳೆ : ಏನಮ್ಮ ಇಷ್ಟು ಖುಷಿಯಾಗಿದ್ದೀಯ ಅಪ್ಪ ಏನಾದರು ಡೈವುರ್ಸ್ ಕೊಡ್ತೀನಿ ಅಂದ್ರ...(ಮಗ ತನ್ನ ಅಮ್ಮನಿಗೆ ಕೇಳುವ ಪ್ರಶ್ನೆ - ದೇವರೇ ಭಟ್ರನ್ನ ಕಾಪಾಡಿ)

ಕರಿ ಚಿರತೆ : ಒಂದು ಹಾಡಿನ ಸಾಲು...ಮನೆ ಅಂದ್ರೆ ಬಾತ್ ರೂಂ ಇರುತ್ತೆ..ನನ್ನ ಹೆಸರು ಕರಿ ಚಿರತೆ...(ಯಪ್ಪಾ...ಎಲ್ಲಿಂದ ಎಲ್ಲಿಗೆ)

ಅದ್ದೂರಿ : ಒಂದು ಹಾಡಿನ ಸಾಲು ...ನೀವು ನಗಲೇ ಬೇಕು ಒಂದು ಸಾರಿ...ಇದು ಅಚ್ಚು ರಚ್ಹು ಲವ್ ಸ್ಟೋರಿ..(ಸಂಬಂಧ...ದೇವರಿಗೆ ಗೊತ್ತು)

ಇವೆಲ್ಲ ಕೆಲವು ಉದಾಹರಣೆಗಳು...ಚಿಂತನೆಗೆ ಆಹಾರ ಕೊಡತಕ್ಕ ಕತೆಗಳು, ಸಂಭಾಷಣೆಗಳು, ಗೀತೆಗಳು ಎಲ್ಲಿವೆ ಎಂದು ಹುಡುಕಬೇಕು...ದೋಸೆ ಹಿಟ್ಟಲ್ಲಿ ಇಡ್ಲಿ ಮಾಡಿ, ಇಡ್ಲಿ ಹಿಟ್ಟಲ್ಲಿ ವಡೆ ಮಾಡಿ..ಹೀಗೆ ಒಂದಕೊಂದು ಅರ್ಥ ಇಲ್ಲದ ಮಾತುಗಳು...ಬರೆಯುವ ಪಿತಮಹರಿಗೆ ತಮ್ಮ ಮಕ್ಕಳ, ಮುಂದಿನ ಪೀಳಿಗೆ ಬಗ್ಗೆ ಯೋಚನೆ ಇಲ್ಲವ ಅಂತ ವಾಕರಿಕೆ ಬರುತ್ತೆ...

ನಮ್ಮ ತಾತ, ಅಪ್ಪ ಅಮ್ಮ...ಇವರೆಲ್ಲ ಒಂದು ಒಳ್ಳೆಯ ಪ್ರಪಂಚವನ್ನ ನಮಗೆ ಬಿಟ್ಟಿದ್ದಾರೆ..ಆದ್ರೆ ನಾವು ನಮ್ಮ ಮಕ್ಕಳಿಗೆ ಬಿಟ್ಟು ಹೋಗುವ ಪ್ರಪಂಚ...ನೆನಸಿಕೊಂಡರೆ.........ಬೇಡ ಬಿಡಿ..

ಕಾಲಾಯ ತಸ್ಮೈ ನಮಃ...

Thursday, August 9, 2012

ಕೃಷ್ಣ...ಕೃಷ್ಣ...ಕೃಷ್ಣ...ಶ್ರೀಕೃಷ್ಣ ಜನ್ಮಾಷ್ಟಮಿ...


ಕೃಷ್ಣ...ಕೃಷ್ಣ...ಕೃಷ್ಣ...

ಹೆಸರೇ ಒಂದು ಶಕ್ತಿ ಸಂಚಲನ ತರುವ ಹುಮ್ಮಸ್ಸು ಕೊಡುತ್ತೆ..ಕೃಷ್ಣನಂತ ಇನ್ನೊಬ್ಬ ಮೇಧಾವಿ ನಮ್ಮ ಇತಿಹಾಸದಲ್ಲಿ ದೊರಕದು..ಮಹಾನ್ ಜ್ಞಾನಿ ಚಾಣಕ್ಯ ಕೃಷ್ಣನ ಇನ್ನೊಂದು ನೆರಳು ಅನ್ನಬಹುದು..ಇದನ್ನ ಬಿಟ್ಟರೆ ಬೇರೆಯೆಲ್ಲು ಕಾಣ ಸಿಗೋಲ್ಲ..ಅಂಥಹ ಅದ್ಭುತ ವ್ಯಕ್ತಿತ್ವ...

ಬಾಲ್ಯದಿಂದಲೂ ಇಷ್ಟವಾಗುತಿದ್ದ ಇನ್ನೊಂದು ಚಿತ್ರ...ಕೃಷ್ಣ, ಮತ್ತು ಅರ್ಜುನ ರಥಾರೂಢರಾಗಿ ಕುರುಕ್ಷೇತ್ರದಲ್ಲಿ ಹರಿದಾಡುತಿರುವ ದೃಶ್ಯ..

ಈ ಚಿತ್ರವನ್ನ  ಗಮನಿಸಿದರೆ...  ಇದರಲ್ಲಿ ಪ್ರತಿಯೊಂದು ಕ್ರೀಯಾಶೀಲವಾಗಿದೆ..ಯಾವುದು ನಿಶ್ಚಲವಾಗಿಲ್ಲ..
ಧ್ವಜ ಲಾಂಛನದಲ್ಲಿ ಹನುಮಂತ ಬೆಟ್ಟ ಹೊತ್ತು ಸಾಗುತಿರುವುದು...
ರಥದ ಪರದೆ ಗಾಳಿಯಲ್ಲಿ ಹಾರುತಿದೆ..
ಶ್ವೇತಾಶ್ವಗಳು ಓಡುತ್ತಿವೆ..
ಅರ್ಜುನ ಬಾಣ ಹೂಡಲು ಸಿದ್ದನಾಗುತಿದ್ದಾನೆ..
ಸುತ್ತ ಮುತ್ತಲ ಸೈನಿಕರು ಯುದ್ಧದಲ್ಲಿ ಹೋರಾಡುತಿದ್ದಾರೆ
ಇವಕ್ಕೆಲ್ಲ ಕಳಶಪ್ರಾಯ... ಶ್ರೀ ಕೃಷ್ಣ ರಥವನ್ನು  ಮಂದಹಾಸದಿಂದ ಮುನ್ನಡೆಸುತಿದ್ದಾನೆ..

ಜೀವನದಲ್ಲಿ ಸಕ್ರಿಯರಾಗಿರಬೇಕು...ಕುಶಲತೆ, ಕ್ಷಮತೆ ಜಡವಾಗಿದ್ದಾಗ ಸಿಗುವುದಿಲ್ಲ..
ಹೊಸ ಹೊಸ ಅವಿಷ್ಕಾರ, ಚಿಂತನೆಗಳು ನಾಗಾಲೋಟದಿಂದ ನಮ್ಮಿಂದ ಹೊರಗೆ ಅಶ್ವಗಳ ರೂಪದಲ್ಲಿ ಹೊರ ಹೊಮ್ಮಿ, ಅರ್ಜುನನ ಬಾಣದ ಗುರಿಯ ತೀವ್ರತೆಯಲ್ಲಿ ,  ಹನುಮಂತನಲ್ಲಿ ಸುಪ್ತವಾಗಿ ಅಡಗಿದ ಸಾಮರ್ಥ್ಯದಂತೆ, ಶ್ರೀ ಕೃಷ್ಣನಂತ ಗುರು  ಹಿರಿಯರ ಮಾರ್ಗದರ್ಶನದಲ್ಲಿ ಸಾಗಿದರೆ ಜೀವನದ ಗುರಿ ಸದಾ ಹಣ್ಣಿನ ಮರದಲ್ಲಿ ದೊರಕುವ ರುಚಿಯಾದ ಹಣ್ಣಿನಷ್ಟೇ ಸ್ವಾದಿಷ್ಟ

ಶ್ರೀ ಕೃಷ್ಣ ಜೀವನ, ಸಂದೇಶ, ಕಾರ್ಯ ಸಾಧಿಸುವ ಪರಿ, ಚಾಣಕ್ಷತನ, ಬುದ್ದಿಮತ್ತೆ, ಸಮಯ ಪ್ರಜ್ಞೆ ಸದಾ ಅನುಕರಣೀಯ...

ಶಾಂತಿ, ನೆಮ್ಮದಿ, ಸಂತೋಷ, ಸ್ಪೂರ್ತಿ, ಕೀರ್ತಿ, ಯಶಸ್ಸಿಗೆ ಪ್ರೇರಕ, ಕಾರಕ ಶ್ರೀಕೃಷ್ಣ....

ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು...