ಬೆಳ್ಳಿ, ರಜತ ಇವೆಲ್ಲ ಕೆಲವು ಸುಂದರ ಪದಗಳು...
ಬಿಳಿ ಲೋಹದ ಹೆಸರನ್ನು, ೨೫ ವಸಂತಗಳನ್ನು ಸೂಚಿಸುತ್ತದೆ...
ಹಾಗೆಯೇ ನಾಳೆಗೆ (೦೧.೦೭.೨೦೧೨) ನಮ್ಮ ಪ್ರೀತಿಯ ಅಜ್ಜಯ್ಯ ಅವರ ಪತ್ನಿ, ಪಿತ, ಪಿತಾಮಹರನ್ನು ಭೇಟಿ ಮಾಡಲು ನಮ್ಮನ್ನಗಲಿ.....ಇಹಲೋಕವನ್ನು ಬಿಟ್ಟು ೨೫ ವಸಂತಗಳೇ ಕಳೆದವು .
ಇದು ಸಂಭ್ರಮ ಪಡುವ ದಿನವಲ್ಲ...ಆದರೆ ಅಂತಹ ಹಿರಿಯರು, ಮಾರ್ಗದರ್ಶಿಗಳು ಹಾಕಿ ಕೊಟ್ಟ ಮೇಲ್ಪಂಕ್ತಿಯಲ್ಲಿ ನಡೆಯಲು ನಾವು ಮಾಡುವ ಒಂದು ಸಣ್ಣ ಪ್ರಯತ್ನ ಅವರ ಶ್ರಮವನ್ನು ಸಾರ್ಥಕಪಡಿಸುತ್ತೆ....ಅಂತಹ ಒಂದು ಪ್ರಯತ್ನವನ್ನು ನೆನಪು ಮಾಡಿಕೊಳ್ಳುವ ಒಂದು ಚಿಕ್ಕ ಯತ್ನ ಈ ಬರಹ..!!!
ನಮ್ಮ ಅಜ್ಜಯ್ಯ "ಕೋರವಂಗಲದ ವೆಂಕಟಕೃಷ್ಣಯ್ಯ ರಂಗಸ್ವಾಮಿ"ಯವರು (ಕೆ.ವಿ. ರಂಗಸ್ವಾಮಿ) ವೃತ್ತಿಯಲ್ಲಿ ಶಾನುಭೋಗರು.
ಒಂದೇ ಮಾತಲ್ಲಿ ಅವರ ಪ್ರತಿಭೆಯ ಬಗ್ಗೆ ಹೇಳುವುದಾದರೆ
ಆ ದಿನಗಳಲ್ಲಿ ತಾಲೂಕು ಕಛೇರಿಗಳಲ್ಲಿ ಹೇಳುತಿದ್ದ ಮಾತು
"ಓಹ್ ರಂಗಸ್ವಾಮಿಗಳು ತಯಾರು ಮಾಡಿದ ಪತ್ರವೇ...ಅದನ್ನ ಮತ್ತೆ ನೋಡುವ ಪ್ರಶ್ನೆಯೇ ಇಲ್ಲ...ಎಲ್ಲ ಸರಿಯಾಗುತ್ತದೆ..ಅಧಿಕಾರಿಗಳಿಗೆ ಕಳಿಸಿ"
ಅಷ್ಟು ಕರಾರುವಾಕ್ ಭಾಷೆ, ತಪ್ಪಿಲ್ಲದ ಸುಂದರ ಬರವಣಿಗೆ, ನಿಖರ ಮಾಹಿತಿ...ನಮ್ಮ ಅಜ್ಜಯ್ಯನದು..
ಅವರ ಜೀವನದಲ್ಲಿ ಬಲಗಾಲಿಟ್ಟು ಬಂದ ನಮ್ಮ ಅಜ್ಜಿ ಸುಬ್ಬನರಸಮ್ಮ ಪತಿಗೆ ತಕ್ಕ ಪತ್ನಿಯಾಗಿ ಮನೆ ಮನ ತುಂಬಿದವರು.
ಅಜ್ಜಿ-ಅಜ್ಜ್ಯನವರ ಚಿತ್ರ |
ಎಂಟು ಮಕ್ಕಳ ತುಂಬು ಸಂಸಾರವನ್ನು ಹಾಸನ ಜಿಲ್ಲೆಯ ಬಳಿ ಇರುವ ಕೋರವಂಗಲದ ಗ್ರಾಮದಲ್ಲಿ ಜೀವನ ಶುರುಮಾಡಿದರು...
ಕೋರವಂಗಲ ಗ್ರಾಮದ ಹೆಬ್ಬಾಗಿಲು |
ಕೋರವಂಗಲ ಗ್ರಾಮದ ಪ್ರಮುಖರು |
ಅಜ್ಜಯ್ಯನ ಮನೆ ಇದ್ದ ಸ್ಥಳ |
ಸುಂದರ ಬುಚೇಶ್ವರ ದೇವಸ್ಥಾನ...ಒಂದು ಅದ್ಬುತ ಹೊಯ್ಸಳ ಕಲಾಕೃತಿ |
ಸುಂದರ ಬುಚೇಶ್ವರ ದೇವಸ್ಥಾನ...ಒಂದು ಅದ್ಬುತ ಹೊಯ್ಸಳ ಕಲಾಕೃತಿ |
ಗ್ರಾಮಕ್ಕೆ ಹತ್ತಿರ ಹಾ ದು ಹೋಗಿರುವ ರೈಲ್ವೆ ರಸ್ತೆ |
ಕಾಲ ಕ್ರಮೇಣ ಕಾರಣಾಂತರಗಳಿಂದ ಹಾಸನಕ್ಕೆ ವಲಸೆ ಬಂದು ಜೀವನ ಶುರು ಮಾಡಿದರು..
ಅವರ ಹಾರೈಕೆ, ಆಶಿರ್ವಾದಗಳಿಂದ ಮಕ್ಕಳು, ಮೊಮ್ಮಕ್ಕಳು ಎಲ್ಲರೂ ಸುಖ ಸಂತೋಷದಿಂದ ಜೀವನ ನಡೆಸುತ್ತಿದ್ದಾರೆ!!!
ಸುಂದರ ಬುಚೇಶ್ವರ |
ಒಳ್ಳೆಯತನ, ಪ್ರಾಮಾಣಿಕತೆ, ಸತ್ಯ-ಸಂಧತೆ, ಶ್ರಮಜೀವಿ, ಅನುಕಂಪ, ಸ್ನೇಹ ಜೀವಿ ಈ ಗುಣಗಳೆಲ್ಲ ಮೇಳೈಸಿದ ಅಪರೂಪದ ವ್ಯಕ್ತಿ..ನಮ್ಮ ಅಜ್ಜಯ್ಯ
ಸಾಮಾನ್ಯವಾಗಿ ಹೇಳುವ ಮಾತು "ಕಳೆದ ಮೇಲೆ ಅಥವಾ ಕಳಕೊಂಡ ಮೇಲೆ ಬೆಲೆ"
ನಮ್ಮ ಅಜ್ಜಯ್ಯ ನಮ್ಮೆನ್ನೆಲ್ಲ ಭೌತಿಕವಾಗಿ ಬಿಟ್ಟು ಹೋದಾಗ ನಾವು ಮೊಮ್ಮಕ್ಕಳು ಸರಿ ಯಾವುದು ತಪ್ಪು ಯಾವುದು ಎನ್ನುವದನ್ನು ತಿಳಿಯಲು ಗೊಂದಲ ಪಡುತಿದ್ದ ಹದಿ ಹರೆಯ...ಹಾಗಾಗಿ ನಮ್ಮ ಅಜ್ಜಯ್ಯನ ಬಗ್ಗೆ ಅಪ್ಪ, ಅಮ್ಮ, ಚಿಕ್ಕಪ್ಪಂದಿರು, ದೊಡ್ಡಪ್ಪ ಹೇಳಿದ ಮಾತುಗಳಿಂದ ತಿಳಿದ ವಿಷಯಗಳು...
ಅವರ ಕೈ ಬರಹ, ನೆನಪಿನ ಶಕ್ತಿ, ವಿಷಯಗಳ ಆಳ, ಮಾತಾಡುವ ಶೈಲಿ, ಸದಾ ಕಾಲ ದೇವರ ಸ್ತೋತ್ರ ಪಠಣ, ಮಕ್ಕಳ ಹಾಗು ಮೊಮ್ಮಕ್ಕಳ ಮೇಲಿನ ಮಮಕಾರ ಒಂದೇ ಎರಡೇ..ಅವರ ಬಗ್ಗೆ ಹೇಳುತ್ತಾ ಹೋದರೆ ಒಂದು ಪ್ರಬಂಧವನ್ನೇ ಮಂಡಿಸಬಹುದು..
ಕೊನೆಯ ಕ್ಷಣಗಳಲ್ಲೂ ಕೂಡ ಇತಿಹಾಸದ ಪುಟಗಳಲ್ಲಿನ ಘಟನೆಗಳನ್ನು ಹೇಳುತಿದ್ದುದು ಅವರ ಆತ್ಮ ಶಕ್ತಿಗೆ ಒಂದು ಚಿಕ್ಕ ಉದಾಹರಣೆ.
ನಮ್ಮ ಅಜ್ಜಯ್ಯನ ಸುಂದರ ಜೀವನಕ್ಕೆ ನುಡಿ ಬರಹ ಬರೆಯಬೇಕು ಎನ್ನುವುದು, ಅವರ ಜೀವನದ ಯಶೋಗಾಥೆ ನಮ್ಮ ಮುಂದಿನ ಪೀಳಿಗೆಗೂ ಸಿಗಬೇಕು ಎನ್ನುವುದು ನನ್ನ ಹಂಬಲ..ನಮ್ಮ ವ್ಯಾಪ್ತಿ ಬರಿ ಅಪ್ಪ, ಅಮ್ಮ, ಅಕ್ಕ, ತಂಗಿ, ಚಿಕ್ಕಪ್ಪ, ಚಿಕ್ಕಮ್ಮ, ದೊಡ್ಡಪ್ಪ, ದೊಡ್ಡಮ್ಮ, ಅಜ್ಜ, ಅಜ್ಜಿ ಇಷ್ಟಕ್ಕೆ ನಿಲ್ಲಬಾರದು ಇನೊಂದು ಹೆಜ್ಜೆ ಸಾಗಿ ಮುತ್ತಾತ, ಮುತ್ತಜ್ಜಿ ಹೀಗೆ ಕವಲೊಡೆದು ಸಾಗಬೇಕು ಎನ್ನುವುದು ಆಸೆ..!!!!