ಸುರಾಸುರರು ಅಮೃತಕ್ಕಾಗಿ ಕ್ಷೀರಸಾಗರ ಕಡೆಯಲು ಅನುವಾದಾಗ ಮಂಧರ ಪರ್ವತ, ಹಾಗು ವಾಸುಕಿಗೆ ಅಹಂ ಶುರುವಾಗುತ್ತೆ...!!!
"ನಾವಿಬ್ಬರು ಇಲ್ಲದಿದ್ದರೆ ಮಂಥನ ಆಗೋಲ್ಲ...ನಾವೇ ಪರಮಶ್ರೇಷ್ಟರು"..ಈ ಹುಮ್ಮಿನಲ್ಲಿ ಮಂಥನ ಕಾರ್ಯ ಶುರುವಾಗುತ್ತದೆ..
ಪರ್ವತ ಹಾಗು ವಾಸುಕಿಯಾ ಹುಮ್ಮಿನಿಂದಾಗಿ ಮಂಥನ ಕಾರ್ಯ ಅಂದುಕೊಂಡಂತೆ ಕ್ಷಿಪ್ರಗತಿಯಲ್ಲಿ ಸಾಗುತ್ತಿರಲಿಲ್ಲ..
ದೇವತೆಗಳಿಗೆಲ್ಲ ಚಿಂತೆಶುರುವಾಗುತ್ತದೆ..ವಿಷ್ಣುವಿನ ಮೊರೆ ಹೋಗುತ್ತಾರೆ...
"ಮಹಾ ವಿಷ್ಣು..ನಿನಗೆ ತಿಳಿಯದ್ದು ಏನಿದೆ...ಕಾರ್ಯ ಆಗುತ್ತಿಲ್ಲ..ಪರ್ವತ, ಹಾಗು ವಾಸುಕಿಯ ಗರ್ವ ಭಂಗವಾಗಬೇಕು ಏನು ಮಾಡೋದು"
"ದೇವತೆಗಳೇ ಯೋಚಿಸಬೇಡಿ..ಕಲಿಯುಗದಲ್ಲಿ, ಹಾಸನದ ಕೋರವಂಗಲದಲ್ಲಿ ರಂಗಸ್ವಾಮಿ ಹಾಗು ಸುಬ್ಬನರಸಮ್ಮನವರಿಗೆ ಜನಿಸುವ ಪುತ್ರರತ್ನನ ಬಗ್ಗೆ ಹೇಳುತ್ತೇನೆ ಆಗ ಇವರ ಹಮ್ಮು ಬಿಮ್ಮು ಕಡಲಲ್ಲಿ ಕರಗಿಹೋಗುತ್ತದೆ..."
"ಅದು ಹೇಗೆ?"
"ಆ ಪುತ್ರ ರತ್ನ..ಯಾವುದೇ ವಿಷಯವಾಗಲಿ, ಚರ್ಚೆಯಾಗಲಿ, ಅದರ ಆಳಕ್ಕೆ ಹೋಗಿ ವಿಷಯದ ಭಾವಾರ್ಥ, ಗೂಡಾರ್ಥ, ತಿರುಳನ್ನು ಹೊರಗೆ ತೆಗೆಯುವ ಪರಿ..ಅದನ್ನು ಕೇಳಿಯೇ ತಿಳಿಯಬೇಕು....ಅಂತಹ ಪ್ರತಿಭಾಶಾಲಿ ಆ ಪುತ್ರರತ್ನ..."
ಮಹಾವಿಷ್ಣು ಪರ್ವತ, ಹಾಗು ವಾಸುಕಿಗೆ ಈ ಪುತ್ರರತ್ನ ಬಗ್ಗೆ ಹೇಳುತ್ತಾ ಹೋದಂತೆ..ಅವರಿಬ್ಬರು
"ಮಹಾವಿಷ್ಣು ನಮ್ಮದು ಮಹಾಪರಾಧವಾಯಿತು..ನಾವೇ ಮಥಿಸುವುದರಲ್ಲಿ ಶ್ರೇಷ್ಟರು ಎಂದುಕೊಂಡಿದ್ದೆವು..ಆದ್ರೆ ಈ ಪುತ್ರರತ್ನನಿಂದ ಕಲಿಯಬೇಕಾದು ಬಹಳ ಇದೆ...ಕ್ಷಮೆ ಇರಲಿ..ನೀನು ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತೇವೆ.."
ಇಂತಹ ಮಹಾನುಭಾವರು ನಮ್ಮ ಕುಟುಂಬದಲ್ಲಿ ಇರುವುದು ನಮ್ಮ ಪುಣ್ಯವೇ ಸರಿ..
ನಾಗರಾಜ ಚಿಕ್ಕಪ್ಪ ನಿಮ್ಮ ಮಾತುಗಳು, ನೀವು ವಿಶ್ಲೇಷಿಸುವ ಪರಿ, ನಗುನಗುತ ಜೀವನ ಮಾಡುವ ವೈಕರಿ...ನಮಗೆಲ್ಲ ದಾರಿ ದೀಪ..ನಿಮ್ಮ ಹುಟ್ಟು ಹಬ್ಬಕ್ಕೆ ಶುಭಾಶಯಕೋರುವ ಯೋಗ ನಮಗೆ ಬಂದಿರುವುದು ನಮ್ಮ ಪುಣ್ಯವೇ ಸರಿ..
ನಾಗರಾಜ ಚಿಕ್ಕಪ್ಪ ನಿಮಗೆ ಹುಟ್ಟುಹಬ್ಬದ ಶುಭಾಶಯಗಳು!!!
No comments:
Post a Comment