ಅಮ್ಮ...ಅಮ್ಮ ಅಮ್ಮ
ಏನೇ..ಸ್ಕೂಲ್ ಗೆ ರೆಡಿ ಆಗ್ತಾ ಇದ್ದೀಯ..
ಹೌದು ಕಣಮ್ಮ..ಬುಕ್ಕೆಲ್ಲ ಜೋಡಿಸಿಕೊಂಡೆ, ಬ್ಯಾಗ್ ರೆಡಿ ಇದೆ..ಆದ್ರೆ ಒಂದು ವಿಷ್ಯ ಮರೆತೇ
ಏನ್ ಚಿಂಟು ಅದು..ಏನ್ ಮರೆತೇ..ಹೋಂ ವರ್ಕ್ ಏನಾದ್ರು ಮಾಡಿಲ್ವ..
ಇಲ್ಲಮ್ಮ ನಿನ್ನೆನೆ ಎಲ್ಲ ಮಾಡಿದೆ..ಒಂದು ನಿಮಿಷ ಬಾ ಇಲ್ಲೀ..
ಹೊತ್ತಾಯ್ತು ಗುಂಡು..ಸ್ಕೂಲ್ ವ್ಯಾನ್ ಬರುತ್ತೆ..ನೋಡು ಆಗಲೇ ಎಂಟು ನಾಲ್ಕು ಆಗಿದೆ ಟೈಮ್
ಇಲ್ಲಮ್ಮ ಬಾ ಇಲ್ಲಿ, ಒಂದು ಗುಟ್ಟು ಹೇಳಬೇಕು..
ಸರಿ ಬಂದೆ ಇರು...ಹಾ ಹೇಳು
ಅಮ್ಮ ನಿನಗೆ ಹುಟ್ಟು ಹಬ್ಬದ ಶುಭಾಶಯಗಳು...ಅಪ್ಪ ಬಂದ ಮೇಲೆ ನಾವೆಲ್ಲಾ ಒಂದು ವಾಕಿಂಗ್ ಹೋಗೋಣ..ಆಯ್ತಾ..
ಥ್ಯಾಂಕ್ ಯು ಶೀತಲ್..ಸ್ಕೂಲ್ ಗೆ ಹೋಗಿಬಾ ಅಪ್ಪ ಆಫೀಸಿಂದ ಬಂದ ಮೇಲೆ ಸುತ್ತಾಡಿಕೊಂಡು ಬರೋಣ...
ಬೈ ಅಮ್ಮ...
ಬೈ ಚಿಂಟು...
ಇಂತಿ ನಿಮ್ಮ
ಶೀತಲ್ ಕೆ ಶ್ರೀಕಾಂತ್
No comments:
Post a Comment