ಆ ಭರತ ತನ್ನ ಅಣ್ಣನ ಪಾದುಕೆಗಳನ್ನ ಹೊತ್ತು ನೆಡೆದು ರಾಜ್ಯಭಾರ ಮಾಡಿದ
ಮಹಾಭಾರತದ ಭರತ ಸಿಂಹದ ಜೊತೆ ಆಟವಾಡಿ ಮಹಾಕಾವ್ಯಕ್ಕೆ ಆದಿ ಪುರುಷನಾದ
ಇನ್ನೊಬ್ಬ ಭರತ ಗೋಮಟೇಶ್ವರನ ಅಣ್ಣನಾಗಿ ತನ್ನ ದೊಡ್ಡತನ ತೋರಿದ
ಆದ್ರೆ ಕುಮಾರ ಭರತನಾದ ನಾನು ಅವರಾರು ಮಾಡದ ಕಾರ್ಯವನ್ನು ಮಾಡುತಿದ್ದೇನೆ
ಅದು ಏನಪ್ಪಾ ಅಂತಂತಂದ್ರೆ ನಮ್ಮ ಅಪ್ಪ ಅಮ್ಮ ತಾರೀಖಿನ ಪ್ರಕಾರ ಇವತ್ತು ಮದುವೆ ಆದ ದಿನ
ಅಪ್ಪ ನನಗೆ ಸಂಸ್ಕೃತಿ, ಸಂಸ್ಕಾರ ಎಲ್ಲವನ್ನು ಚೆನ್ನಾಗಿ ಹೇಳಿಕೊಡುತ್ತಿದ್ದರೆ
ಅಮ್ಮ ನನ್ನ ಮುದ್ದು ಮಾಡ್ತಾರೆ, ಚೆನ್ನಾಗಿ ಊಟ ಮಾಡಿಸ್ತಾರೆ, ಪಾಠ ಹೇಳಿಕೊಡ್ತಾರೆ
ಇವರಿಬ್ಬರ ಅಶೀರ್ವಾದವೇ ನನಗೆ ಶ್ರೀರಕ್ಷೆ..
ನಮ್ಮ ಅಪ್ಪ ಅಮ್ಮನ ಬಾಳಿನಲ್ಲಿ ಸದಾ ಸಂತೋಷ ನೆಮ್ಮದಿ ಶಾಂತಿ ಸಿಗಲಿ ಎಂದು ಆ ಪಾದುಕೆ ಕೊಟ್ಟ ಶ್ರೀ ರಾಮನಲ್ಲಿ
ಬೇಡಿಕೊಳ್ಳುತ್ತೇನೆ
ಇಂತಿ ನಿಮ್ಮ ಸಾಹಸಿ ಪುತ್ರ
ಕುಮಾರ ಭರತ
No comments:
Post a Comment