ದಿನಕರ ದಿನವೂ ಬರುತ್ತಾನೆ..ದಿನವು ಹೊಸತನ್ನೇ ತರುತ್ತಾನೆ..
ಅವನು ಬಂದ ಪ್ರತಿದಿನವೂ ತಾರೀಕು ಬದಲಾಗುತ್ತೆ..
ಕೆಲವು ಹಿರಿಯ ಮಹಾನ್ ಜೀವಗಳು ಭೂಮಿಗೆ ಬಂದ ದಿನವನ್ನು ನೋಡಿರುತ್ತಾನೆ..
ದಿನಕರನ ನಿನ್ನ ಜನುಮ ದಿನ ಯಾವುದು ಎಂದು ಕೇಳಿದರೆ ಅವನು ನಸು ನಗುತ್ತ..ನಾಚಿ ನೀರಾಗಿ ಸುಮುದ್ರದಲ್ಲಿ ಮುಳುಗಿ ಏಳುತ್ತಾನೆ..ಮತ್ತೆ ಬರುತ್ತೇನೆ ಎಂದು..
ಚಂದ್ರನನ್ನ ಕೇಳಿದರೆ ದಿನಕರನ ಜನುಮ ದಿನ ಯಾವುದು ಅಂದ್ರೆ...ಅವನು ಹೇಳುತ್ತಾನೆ..ನಾವಿಬ್ಬರು ಒಂದೇ ನಾಣ್ಯದ ಎರಡು ಮುಖಗಳು...ಅವನಿಂದ ನಾನು ಸಂತಸದಿಂದ ಇದ್ದೀನಿ ..ಹಾಗಾಗಿ ಇಬ್ಬರು ಒಂದೇ ದಿನ ಜನುಮದಿನ ಆಚರಿಸಿಕೊಳ್ಳುತ್ತೇವೆ ಅಂತ ಹೇಳುತ್ತಾನೆ..ಅದು ಬಾಂಧವ್ಯ ಅಂದ್ರೆ...
ನಮ್ಮ ದೊಡ್ಡಪ್ಪ (ರಾಮಸ್ವಾಮಿ) ಹಾಗು ದೊಡ್ಡಮ್ಮ (ಸರಸ್ವತಿ) ಅವರಿಗೆ ಇಂತಹ ಒಂದು ಸುಂದರ ದಿನವನ್ನ ತಮ್ಮ ಜನ್ಮ ದಿನ ಎಂದು ಗುರುತಿಸಿ ಅವರಿಗೆ ಶುಭಾಶಯ ಹೇಳುವಂತಹ ಸದವಕಾಶ ನಮಗೆಲ್ಲರಿಗೂ ಒದಗಿ ಬಂದಿದೆ...
ಕೋರವಂಗಲ ಕುಟುಂಬದ ಮೊದಲ ಸುಪುತ್ರ ಹಾಗು ಅವರ ಮುದ್ದಿನ ಮಡದಿ ಇವರಿಬ್ಬರಿಗೆ ಸಮಸ್ತ ಕುಟುಂಬದವತಿಯಿಂದ
ಶುಭಾಶಯಗಳು, ಹಾಗು ಅವರ ಆಶೀರ್ವಾದ ಬೇಡುವ ಅವರ ಮುಂದಿನ ಪೀಳಿಗೆಯ ಮುದ್ದಿನ ಕೂಸುಗಳು...
No comments:
Post a Comment