Tuesday, February 7, 2012

ಸವಿತಾ ಹುಟ್ಟು ಹಬ್ಬ

ಅಮ್ಮ...ಅಮ್ಮ ಅಮ್ಮ

ಏನೇ..ಸ್ಕೂಲ್ ಗೆ ರೆಡಿ ಆಗ್ತಾ ಇದ್ದೀಯ..

ಹೌದು ಕಣಮ್ಮ..ಬುಕ್ಕೆಲ್ಲ ಜೋಡಿಸಿಕೊಂಡೆ, ಬ್ಯಾಗ್ ರೆಡಿ ಇದೆ..ಆದ್ರೆ ಒಂದು ವಿಷ್ಯ ಮರೆತೇ

ಏನ್ ಚಿಂಟು ಅದು..ಏನ್ ಮರೆತೇ..ಹೋಂ ವರ್ಕ್ ಏನಾದ್ರು ಮಾಡಿಲ್ವ..

ಇಲ್ಲಮ್ಮ ನಿನ್ನೆನೆ ಎಲ್ಲ ಮಾಡಿದೆ..ಒಂದು ನಿಮಿಷ ಬಾ ಇಲ್ಲೀ..

ಹೊತ್ತಾಯ್ತು ಗುಂಡು..ಸ್ಕೂಲ್ ವ್ಯಾನ್ ಬರುತ್ತೆ..ನೋಡು ಆಗಲೇ ಎಂಟು ನಾಲ್ಕು ಆಗಿದೆ ಟೈಮ್

ಇಲ್ಲಮ್ಮ ಬಾ ಇಲ್ಲಿ, ಒಂದು ಗುಟ್ಟು ಹೇಳಬೇಕು..

ಸರಿ ಬಂದೆ ಇರು...ಹಾ ಹೇಳು

ಅಮ್ಮ ನಿನಗೆ ಹುಟ್ಟು ಹಬ್ಬದ ಶುಭಾಶಯಗಳು...ಅಪ್ಪ ಬಂದ ಮೇಲೆ ನಾವೆಲ್ಲಾ ಒಂದು ವಾಕಿಂಗ್ ಹೋಗೋಣ..ಆಯ್ತಾ..

ಥ್ಯಾಂಕ್ ಯು ಶೀತಲ್..ಸ್ಕೂಲ್ ಗೆ ಹೋಗಿಬಾ ಅಪ್ಪ ಆಫೀಸಿಂದ ಬಂದ ಮೇಲೆ ಸುತ್ತಾಡಿಕೊಂಡು ಬರೋಣ...

ಬೈ ಅಮ್ಮ...

ಬೈ ಚಿಂಟು...



ಇಂತಿ ನಿಮ್ಮ

ಶೀತಲ್ ಕೆ ಶ್ರೀಕಾಂತ್

ರಜನೀಶ-ರೂಪ ಮದುವೆ ಆದ ಶುಭ ದಿನ

ಆ ಭರತ ತನ್ನ ಅಣ್ಣನ ಪಾದುಕೆಗಳನ್ನ ಹೊತ್ತು ನೆಡೆದು ರಾಜ್ಯಭಾರ ಮಾಡಿದ



ಮಹಾಭಾರತದ ಭರತ ಸಿಂಹದ ಜೊತೆ ಆಟವಾಡಿ ಮಹಾಕಾವ್ಯಕ್ಕೆ ಆದಿ ಪುರುಷನಾದ



ಇನ್ನೊಬ್ಬ ಭರತ ಗೋಮಟೇಶ್ವರನ ಅಣ್ಣನಾಗಿ ತನ್ನ ದೊಡ್ಡತನ ತೋರಿದ



ಆದ್ರೆ ಕುಮಾರ ಭರತನಾದ ನಾನು ಅವರಾರು ಮಾಡದ ಕಾರ್ಯವನ್ನು ಮಾಡುತಿದ್ದೇನೆ



ಅದು ಏನಪ್ಪಾ ಅಂತಂತಂದ್ರೆ ನಮ್ಮ ಅಪ್ಪ ಅಮ್ಮ ತಾರೀಖಿನ ಪ್ರಕಾರ ಇವತ್ತು ಮದುವೆ ಆದ ದಿನ



ಅಪ್ಪ ನನಗೆ ಸಂಸ್ಕೃತಿ, ಸಂಸ್ಕಾರ ಎಲ್ಲವನ್ನು ಚೆನ್ನಾಗಿ ಹೇಳಿಕೊಡುತ್ತಿದ್ದರೆ



ಅಮ್ಮ ನನ್ನ ಮುದ್ದು ಮಾಡ್ತಾರೆ, ಚೆನ್ನಾಗಿ ಊಟ ಮಾಡಿಸ್ತಾರೆ, ಪಾಠ ಹೇಳಿಕೊಡ್ತಾರೆ



ಇವರಿಬ್ಬರ ಅಶೀರ್ವಾದವೇ ನನಗೆ ಶ್ರೀರಕ್ಷೆ..



ನಮ್ಮ ಅಪ್ಪ ಅಮ್ಮನ ಬಾಳಿನಲ್ಲಿ ಸದಾ ಸಂತೋಷ ನೆಮ್ಮದಿ ಶಾಂತಿ ಸಿಗಲಿ ಎಂದು ಆ ಪಾದುಕೆ ಕೊಟ್ಟ ಶ್ರೀ ರಾಮನಲ್ಲಿ



ಬೇಡಿಕೊಳ್ಳುತ್ತೇನೆ



ಇಂತಿ ನಿಮ್ಮ ಸಾಹಸಿ ಪುತ್ರ

ಕುಮಾರ ಭರತ

ಕೋರವಂಗಲ ಕುಟುಂಬದ ಮಕ್ಕಳು, ಸೊಸೆ , ಹಾಗೂ ಮೊಮ್ಮಕ್ಕಳಿ​ಗೆ ಹುಟ್ಟು ಹಬ್ಬದ ಶುಭಾಶಯಗಳು

ಎಲ್ಲ ಕಿರಿಯರಿಗೂ ನನ್ನ ಆಶಿರ್ವಾದಗಳು..ಹಿರಿಯರಿಗೆ ನನ್ನ ಪ್ರಣಾಮಗಳು
ಶ್ರೀಕಾಂತನ ಬದಲು ನಾನು ಈ ಜನವರಿಯಲ್ಲಿ ಹುಟ್ಟಿದ ನನ್ನ ಕುಟುಂಬದ ಮಕ್ಕಳು, ಸೊಸೆಯಂದಿರು, ಹಾಗು ಮೊಮ್ಮಕ್ಕಳಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಹೇಳಿ ಹರಸುತಿದ್ದೇನೆ..

ಅವನು ಯಾಕೋ ಈ ತಿಂಗಳು ಮಂಕಾಗಿ ಬಿಟ್ಟಿದ್ದಾನೆ..ಇಲ್ಲದಿದ್ದರೆ ತಾನೇ ಹುಟ್ಟು ಹಾಕಿದ ಗುಂಪನ್ನು ತಾನೇ ಮುನ್ನಡೆಸುವ ಕೆಲಸ ಬಿಡುತಿರಲಿಲ್ಲ. ಅವನಿಗಾಗಿ ನಾನು ಈ ತಿಂಗಳು ಅವನ ಕೆಲಸವನ್ನು ಮಾಡುತ್ತೇನೆ.

ರಮ್ಯ ಮಗಳೇ : ನಿನಗೆ ಹುಟ್ಟು ಹಬ್ಬದ ಶುಭಾಶಯಗಳು, ನಿನ್ನ ಕೆಲಸ ಯಶಸ್ಸು ತರಲಿ, ನಿನಗೆ ಅರೋಗ್ಯ, ಧೈರ್ಯ, ಸ್ತೈರ್ಯ, ಐಶ್ವರ್ಯ ಸಿಗಲಿ ಎಂದು ಹಾರೈಸುತ್ತೇನೆ


ಅಖಿಲ: ದಿನಮಣಿ-ನಾಗವೇಣಿ ಅಂತಹ ಅದ್ಭುತ ತಂದೆ-ತಾಯಿಯರಿಗೆ ಹುಟ್ಟಿದ ನೀನು ಬಾಳಲ್ಲಿ ಸುಖ ಶಾಂತಿ, ವಿಧ್ಯಬ್ಯಾಸ ನಿನ್ನದಾಗಲಿ. ಚೆನ್ನಾಗಿ, ಸುಖವಾಗಿರು ಮಗುವೆ..

ಸುಬ್ಬು: ನಿನಗೆ ಹುಟ್ಟು ಹಬ್ಬದ ಶುಭಾಶಯಗಳು, ನಿನ್ನ ಕೆಲಸ, ನಿನ್ನ ಆಸೆ, ನಿನ್ನ ಗುರಿ, ನಿನ್ನ ಸುಖ, ನೆಮ್ಮದಿ ನಿನ್ನದಾಗಲಿ

ರೂಪ: ಶ್ರೀಕಾಂತ ನಿನ್ನ ಆತ್ಮೀಯವಾಗಿ ನಾಗಲಕ್ಷ್ಮಿ ಅಂತ ಕರೀತಾನೆ..ನನ್ನ ಅಕ್ಕನ ಹೆಸರು ಕೂಡ ಅದೇ..ನಿನಗೆ
           ಶುಭವಾಗಲಿ, ಸುಖ, ಶಾಂತಿ, ನೆಮ್ಮದಿ ನಿನ್ನ ಮನೆ ಮನದಲ್ಲಿ ಸದಾ ತುಂಬಿರಲಿ ಎಂದು ಆಶಿರ್ವದಿಸುತ್ತೇನೆ

ವರ್ಷ : ನನ್ನ ಸುಪುತ್ರನ ಸುಪುತ್ರಿ ನೀನು..ಚೆನ್ನಾಗಿ ಓದಿ, ಅಪ್ಪನ ಹೆಸರಿಗೆ ಕೀರ್ತಿ ವರುಷ ವರುಷವು ತರಲಿ..ಹುಟ್ಟು ಹಬ್ಬದ ಶುಭಾಶಯಗಳು

ಶೀತಲ್ : ಮಗುವೆ..ಚೆನ್ನಾಗಿ ಊಟ ಮಾಡಿ ದಪ್ಪಗಾಗು, ಚೆನ್ನಾಗಿ ಓದಿ ಅಪ್ಪನ ಹಾಗೆ ಚೆನ್ನಾಗಿರು..ಹುಟ್ಟು ಹಬ್ಬದ ಶುಭಾಶಯಗಳು

ಕನಕ: ಕಳಸಾಪುರದ ಸುಂದರ ಮಗುವೆ..ನಿನಗೆ ಹುಟ್ಟು ಹಬ್ಬದ ಶುಭಾಶಯಗಳು

ಕುಮಾರ ಭರತ್ : ಮಗು ನಿನ್ನ ದಣಿವರಿಯದ ಮಾತುಗಳು, ಶಕ್ತಿ, ಸಾಮರ್ಥ್ಯ ನನ್ನನು ಕೆಲವು ಕಾಲ ಹುದುಗನನ್ನಾಗಿ ಮಾಡಿತ್ತು..ಮಗುವೆ ನಿನ್ನ ಅಪ್ಪ ಒಳ್ಳೆಯ ಅಪರೂಪದ ಹೆಸರನ್ನು ಇಟ್ಟಿದ್ದಾನೆ..ಭರತನಂತೆ ನೀನು ಕೂಡ ಯಶಸನ್ನು ಹೊಂದು..ಹುಟ್ಟು ಹಬ್ಬದ ಶುಭಾಶಯಗಳು

ಎಲ್ಲರಿಗೂ ನನ್ನ ಆಶಿರ್ವಾದಗಳು...ಮತ್ತೆ ಬರುತ್ತೇನೆ..ಶ್ರೀಕಾಂತ ಬರೆಯುತ್ತಿರುವ ಪುಸ್ತಕ ರೂಪದಲ್ಲಿ!!!!!

ಇಂತಿ ನಿಮ್ಮ

ಮಂಜಣ್ಣ (ದೊಡ್ಡಪ್ಪ, ತಾತ)