Saturday, January 21, 2012

ನಾಲ್ಕು ತಲೆಮಾರಿನ ಹಿರಿಯರ ಒಂದು ಸಂಭಾಷಣೆ!!!

ಮಗ, ಪಿತ, ಪಿತಾಮಹ, ಪ್ರಪಿತಾಮಹ ಎಲ್ಲರು ಇಹಲೋಕದಿಂದ ನಿರ್ಗಮನವಾದ ಮೇಲೆ ನಡೆಸಿದ  ಸಂಭಾಷಣೆ

ಮಗ: ಮಂಜುನಾಥ  (ನಮ್ಮ ಅಪ್ಪ)
ಪಿತ: ರಂಗಸ್ವಾಮಿ (ನಮ್ಮ ಅಜ್ಜಯ್ಯ)
ಪಿತಾಮಹ : ವೆಂಕಟಕೃಷ್ಣಯ್ಯ (ನಮ್ಮ ಮುತ್ತಜ್ಜ)
ಪ್ರಪಿತಾಮಹ: ಲಿಂಗಪ್ಪಯ್ಯ(ನಮ್ಮ ಮುತ್ತಜ್ಜನ ತಂದೆ)
  
ನಮ್ಮ ಪ್ರಪಿತಾಮಹ ದೇವಲೋಕದ ಉದ್ಯಾನವನದಲ್ಲಿ ವಿಹರಿಸುತ್ತಿದ್ದ ಸಂಧರ್ಭ 
ದೇವದೂತರು : ಎಲೈ ಪುಣ್ಯ ಜೀವಿಯೇ ನಿಮ್ಮನ್ನು  ಅನಂದಲೋಕಕ್ಕೆ ಕರೆದೊಯ್ಯಲು ಬಂದಿದ್ದೇವೆ..ನಮ್ಮ ಜೊತೆ ನಡೆಯಿರಿ! 

ಪ್ರಪಿತಾಮಹ: ದೇವದೂತರೆ..ಏಕೆ ಏನಾಯಿತು?..ನಮ್ಮ ಕುಟುಂಬದವರೆಲ್ಲ ಭೂಲೋಕದಲ್ಲಿ ಕ್ಷೇಮವಾಗಿದ್ದರೆ ತಾನೇ? 

ದೇವದೂತರು: ಚೆನ್ನಾಗಿ ಇದ್ದಾರೆ!...ನಿಮ್ಮ ಮರಿ ಮೊಮ್ಮಗ ಮಂಜಣ್ಣ ತನ್ನ ವೈಕುಂಟಯಾತ್ರೆ  ಮುಗಿಸಿ ಬರುತ್ತಾ ಇದ್ದಾರೆ..ಅವರ  ಮಕ್ಕಳು ಶ್ರಾದ್ಧ ಕಾರ್ಯದಲ್ಲಿ ಸಪಿಂಡಿಕರಣ ಮಾಡಿ ನಿಮ್ಮನ್ನ ಆನಂದಲೋಕಕ್ಕೆ ತೆರಳಲು ದಾರಿ ಮಾಡಿ ಕೊಟ್ಟಿದ್ದಾರೆ.ಆನಂದ ಲೋಕಕ್ಕೆ ತಲುಪಲು ಇನ್ನು ಹನ್ನೆರಡು ಮಾಸಗಳು ಬೇಕು..ಅದಕ್ಕೆ ಈಗಿನಿಂದಲೇ ತಯಾರಿ ಮಾಡಿಕೊಳ್ಳಿ....

ಪ್ರಪಿತಾಮಹ: ಇರಿ ಹಾಗಾದರೆ ನನ್ನ ಮಗ, ಮೂಮ್ಮಗನನ್ನು ನೋಡಿ ಮಾತಾಡಿಸಿ ಬರುತ್ತೇನೆ

ದೇವದೂತರು : ಸರಿ ಬೇಗ ಬಂದು ಬಿಡಿ

ಪ್ರಪಿತಾಮಹ: ಮಗು ವೆಂಕಟಕೃಷ್ಣಯ್ಯ, ನನ್ನ ಮೊಮ್ಮಗ ರಂಗಸ್ವಾಮಿಯ ಎರಡನೇ ಕುಲಪುತ್ರ ಮಂಜಣ್ಣ ಇಲ್ಲಿಗೆ ಬರುತ್ತಾ ಇದ್ದಾನಂತೆ ಇದು ನಿಜವೇ.?.

ಪಿತಾಮಹ: ಹೌದು ಅಣ್ಣ  ನನ್ನ ಮೊಮ್ಮಗ ಮಂಜಣ್ಣ ಇಹಲೋಕ ಯಾತ್ರೆ ಮುಗಿಸಿ ಬರುತ್ತಾ ಇದ್ದಾನೆ..

ಪಿತ : ಅಯ್ಯೋ ಮಂಜಣ್ಣ ಯಾಕೆ ಏನಾಯ್ತು, ನನ್ನ ಮೊದಲ ಮಗಳು ಇಲ್ಲಿಗೆ ಬಂದಾಗಲೇ ದುಖಃವಾಗಿತ್ತು. ಅದು ಕಳೆದು ಇನ್ನೂ ಆರೇಳು ತಿಂಗಳು ಕಳೆದಿಲ್ಲ ಆಗಲೇ ನನ್ನ ಕುಟುಂಬದ ಇನ್ನೊಂದು ಕುಡಿ ಇಲ್ಲಿಗೆ ಬರುತ್ತಿದೆ..ಏನು ಮಾಡಲಿ..ನರಸುಗೆ ಹೇಗೆ ಹೇಳಲಿ..(ಇವರಿಬ್ಬರ ಸಂಭಾಷಣೆ ಇನ್ನೊಂದು ಬ್ಲಾಗ್ನಲ್ಲಿ ಬರುತ್ತೆ) 

ಪ್ರಪಿತಾಮಹ : ಮಗು ರಂಗ..ದುಃಖ ಪಡಬೇಡ..ನಿಮ್ಮನ್ನೆಲ್ಲ ಬಿಟ್ಟು ಆನಂದಲೋಕಕ್ಕೆ ಹೋಗುವುದು ನನಗೂ ಕಷ್ಟ

ಅಷ್ಟರಲ್ಲಿ ದೇವದೂತರು ಬರುತ್ತಾರೆ...

ಪ್ರಪಿತಾಮಹ: ದೇವದೂತರೆ..ನನ್ನ ಮಗ ವೆಂಕಟ ಭೂಮಿ ಬಿಟ್ಟು ಬಂದಾಗ ಮಂಜುವಿಗೆ ಕೇವಲ ಎರಡು ತಿಂಗಳು, ನಾನು ನೋಡೇ ಇಲ್ಲ...ಒಮ್ಮೆ ಅವನ ಧ್ವನಿ ಕೇಳಬೇಕು ಅಂತ ಅನ್ನಿಸುತ್ತಿದೆ..ಮಾತಾಡಬಹುದೇ..

ದೇವದೂತರು: ಆಗಲಿ..ನೀವೆಲ್ಲರೂ ಜೋರಾಗಿ ಕೂಗಿ ಮಾತಾಡಿ..ಅವರಿಗೆ ಕೇಳುತ್ತದೆ...ಮಾತಾಡಿ

ಎಲ್ಲರೂ ಕೂಗುತ್ತಾರೆ : ಮಂಜು ಎಲ್ಲಿದ್ದಿಯ, ಹೇಗೆ ಬರುತ್ತಾ ಇದ್ದೀಯ...ದಾರಿಯಲ್ಲಿ ಕಷ್ಟವೆನಿಲ್ಲವಷ್ಟೇ?

ಮಂಜಣ್ಣ(ಜೋರಾಗಿ ಕೂಗುತ್ತ ದೊಡ್ಡ ದ್ವನಿಯಲ್ಲಿ ಅಲ್ಲಿಂದಲೇ ಮಾತಾಡುತ್ತಾರೆ) : ಯಾರು ಅದು ..ಓಹ್ ಅಣ್ಣ, ತಾತ, ಪ್ರಪಿತಾಮಹ ಎಲ್ಲರು ಕೂಗುತಿದ್ದಾರೆ...ನಿಮ್ಮೆಲ್ಲರಿಗೂ ನಮಸ್ಕಾರ..ಹೌದು ನನ್ನ ಯಾತ್ರೆ ಪುಷ್ಯ ಮಾಸದ ಒಂಭತ್ತನೇ ದಿನ ದಿನ ಶುರುವಾಯ್ತು...ಇನ್ನೊಂದು ವರ್ಷದಲ್ಲಿ ನೀವಿರುವಲ್ಲಿಗೆ ಬರುತ್ತೇನೆ..ನಾನು ಚೆನ್ನಾಗಿದ್ದೀನಿ..ನನ್ನ ಅರೋಗ್ಯ ಕೂಡ ಚೆನ್ನಾಗಿದೆ..ಇಲ್ಲಿ ಯಮ ಕಿಂಕರರು ನನಗೆ ತೊಂದರೆ ಮಾಡುತ್ತಿಲ್ಲ..ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ..

ಪ್ರಪಿತಾಮಹ : ಮಂಜು..ನೀನು ಇಲ್ಲಿಗೆ ಬರುವ ಸುದ್ದಿ ಕೇಳಿ ದುಃಖವಾಯಿತು..ಆದ್ರೆ ಏನೋ ಮಾಡೋದು ನೀನು ಬರುವ ಕಾರಣ ನನಗೆ ಅನಂದಲೋಕಕ್ಕೆ ರಹದಾರಿ ಸಿಗುತ್ತಿದೆ..ಒಂದು ಕಡೆ ಮುಕ್ತಿ ಸಿಕ್ಕಿತಲ್ಲ ಅನ್ನುವ ಸಂತೋಷ..ಇನ್ನೊಂದು ಕಡೆ ನನ್ನ ಮಗ, ಮೊಮ್ಮಗನನ್ನು ಬಿಟ್ಟು ಹೋಗಬೇಕಲ್ಲ ಅನ್ನುವ ದುಃಖ..

ಮಂಜು: ಅಜ್ಜಯ್ಯ, ಪ್ರಪಿತಾಮಹ  ನಿಮ್ಮನ್ನ ನಾನು ನೋಡಿದ ನೆನಪೇ ಇಲ್ಲ..ಯಾಕೆಂದರೆ ನಾನು ಕೇವಲ ಎರಡು ತಿಂಗಳ ಮಗುವಾಗಿದ್ದೆ..ಅಲ್ಲಿಗೆ ಬಂದು ನೋಡುತ್ತೇನೆ..ಅಣ್ಣ ತಾತನನ್ನು ಚೆನ್ನಾಗಿ ನೋಡಿಕೊಳ್ಳಿ ನಾನು ಅಲ್ಲಿಗೆ ಬಂದು ನಿಮಗೆ ಸಹಾಯ ಮಾಡುತ್ತೇನೆ 

ಪಿತ: ಮಂಜಣ್ಣ ಅದು ನನಗೆ ಗೊತ್ತು..ನೀನೇನೂ ಯೋಚನೆ ಮಾಡಬೇಡ ಇಲ್ಲಿ ನರಸು ಇದ್ದಾಳೆ, ಗೌರಿ ಇದ್ದಾಳೆ, ಗೋಪಾಲ ಇದ್ದಾನೆ ..ನೀನು ಬಂದ ಮೇಲೆ ನನಗೆ ಇನ್ನೂ ಬಲ ಬರುತ್ತದೆ..

ದೇವದೂತರು : ಸರಿ ಹೊರಡಿ..ನಾವು ಇನ್ನೂ ಒಂದು ವರುಷ ನಡೆಯುತ್ತಾ ಅನಂದಲೋಕಕ್ಕೆ ಸಾಗಬೇಕು..

ಪ್ರಪಿತಾಮಹ : ಮಕ್ಕಳೇ  ನಾನು ಹೊರಟೆ...ನನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಿ..ಎಲ್ಲರಿಗೂ ಶುಭವಾಗಲಿ!!!

ಪಿತ, ಪಿತಾಮಹ: ಹೋಗಿ ಬನ್ನಿ..ನಿಮ್ಮ ಆಶಿರ್ವಾದ ನಮ್ಮ ಮೇಲೆ ಇದೆ..ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ ನಿಮಗೆ ಶುಭವಾಗಲಿ!!!!

Wednesday, January 11, 2012

ಅಪ್ಪ-ಅಮ್ಮನ ಹತ್ತನೇ ದಿನದ ಸಂಭಾಷಣೆ

ಏನು ಮಾಡ್ತಾ ಇದ್ದೀಯ...ತಿಂಡಿ ತಿಂದೆಯ

ನಿಮ್ಮ ನೆನಪು ನನ್ನ ಗಟ್ಟಿ ಮಾಡ್ತಾ ಇದೆ..

ಮಕ್ಕಳೆಲ್ಲರೂ ನಿನ್ನ ಚೆನ್ನಾಗಿ ನೋಡ್ಕೋತಾರೆ..ಏನೋ ಯೋಚನೆ ಮಾಡಬೇಡ..

ಆ ನಂಬಿಕೆ ನನಗೆ ಇದೆ..ನಾನು ಶಿವಮೊಗ್ಗದ ದಿನಗಳನ್ನ ಮರೆತಿಲ್ಲ...ಎಷ್ಟೇ  ಕಷ್ಟ ಪಟ್ಟರು ನಾವು ಮಕ್ಕಳನ್ನ ಕೈ ಬಿಡಲಿಲ್ಲ..ಹಾಗೆ ನಮ್ಮ ಮಕ್ಕಳು ಕೂಡ ನಮ್ಮನ್ನ ಚೆನ್ನಾಗಿ ನೋಡ್ಕೋತಾರೆ ..

ಇವತ್ತು ಹತ್ತನೇ ದಿನ..ನಾನು ನಿನಗೆ ಕೊಟ್ಟ ಸಿಂಧೂರ, ಮಾಂಗಲ್ಯ, ಮೂಗುತಿ, ಓಲೆ, ಕಾಲುಂಗುರ  ದ್ರವ್ಯಗಳನ್ನ ನೀನು ತೆಗೆಯಬೇಕಾದ ಸಂಧರ್ಭ ...ನೆನಸಿಕೊಂಡರೆ ಬೇಜಾರಾಗುತ್ತೆ

ಏನು ಬೇಜಾರಿಲ್ಲ..ನೀವು ಕೊಟ್ಟ ೪ ಮುತ್ತುಗಳು ನನ್ನ ಬಳಿ ಇವೆ..ಮತ್ತು ನಿಮ್ಮ ನೆನಪು..ಇದೆ ನನ್ನ ಮುತ್ತೈದೆ ಮಾಡುತ್ತವೆ...ಮಕ್ಕಳೂ ಕೂಡ ನಿನ್ನೆ ತುಂಬಾ ಕಷ್ಟ ಪಟ್ಟು ಈ ವಿಷಯವನ್ನ ಹೇಳಿದರು..ನೀವು ನನ್ನೊಳಗೆ ಇರುವಾಗ ಇದೆಲ್ಲ ನನಗೆ ಅಷ್ಟು ಮುಖ್ಯವಲ್ಲ..ಮಕ್ಕಳು ಶ್ರದ್ದ-ಭಕ್ತಿಯಿಂದ ಕಾರ್ಯಗಳನ್ನ ಮಾಡುವಾಗ..ನಾನು ಮಾತ್ರ ಹೇಗೆ ಸುಮ್ಮನಿರಲಿ..ಇವೆಲ್ಲ ಒಂದು ಅರ್ಥಗರ್ಭಿತವಾದ ಶಾಸ್ತ್ರ-ಸಂಪ್ರದಾಯಗಳು ನಾವು ನಡೆಸಬೇಕಾದ ಪದ್ದತಿಗಳು..ನೀವು ಯಾವಾಗಲು ಧರ್ಮ ಮಾರ್ಗದಲ್ಲಿ ನೆಡೆದಿದ್ದೀರ ನಿಮ್ಮ ಮಾರ್ಗ ಅನುಸರಿಸುವುದು ನನ್ನ ಹಾಗು ಮಕ್ಕಳ ಧರ್ಮ

ನಿಮ್ಮನ್ನೆಲ್ಲ ಬಿಟ್ಟು ಬಂದಿರುವುದು ನನಗೂ ದುಖಃವೆ ಆದ್ರೆ ಏನು ಮಾಡೋದು ನನ್ನ ಒಳಗಿರುವ ಜೀವಾತ್ಮ ಹೇಳಿದಾ ಪರಮಾತ್ಮ ಕರೀತಾ ಇದ್ದಾನೆ ಹೋಗ್ತಿನಿ ಅಂತ ಹೇಳಿದ..ಬೇರೆ ದಾರಿ ಇಲ್ಲ..ಹೋಗಲೇ ಬೇಕಾಗಿದೆ..ನನ್ನ ಕಾರ್ಯಗಳನ್ನ ಮಕ್ಕಳು ಚೆನ್ನಾಗಿ ಮಾಡುತ್ತಾ ಇದ್ದಾರೆ...ಅದಕ್ಕೆ ಪ್ರತಿ ದಿನ ಅವರು ಇತ್ತ ಆಹಾರವನ್ನ ಮೊದಲು ತೆಗುದುಕೊಳ್ತಾ ಇದ್ದೀನಿ...ನನ್ನ ಮಕ್ಕಳು ನಿನ್ನ ಚೆನ್ನಾಗಿ ನೋಡ್ಕೋತಾರೆ..ಪ್ರತಿ ದಿನ ನನಗೆ ನಮಸ್ಕಾರ ಮಾಡುವಾಗ ಇದನ್ನೇ ಹೇಳುತ್ತಾ ಕೈಮುಗಿಯುತ್ತಾರೆ. ಶ್ರೀಕಾಂತ ಬರೆಯುತ್ತಿರುವ ಪುಸ್ತಕದ ಬಿಡುಗಡೆಗೆ ಕಾಯುತ್ತ ಇದ್ದೇನೆ..ನೀನು ಹೇಳಿದ, ನಾನು ಹೇಳಿದ ಎಲ್ಲ ಸಂಧರ್ಭವನ್ನು ಅವನು ಚೆನ್ನಾಗಿ ವರ್ಣಿಸಲಿ ಹಾಗು ಎಲ್ಲರಿಗೂ ಮುಟ್ಟಲಿ ಎಂದು ಆಶಿರ್ವದಿಸುತ್ತೇನೆ...

ಹೌದು ಅವನು ಯಾವಾಗಲು ಹೇಳ್ತಾ ಇದ್ದ..ಈಗ ಬರೆದೆ ಬಿಡುತ್ತಾನೆ...ನೀವು ಎಲ್ಲೇ ಇರಿ ಹೇಗೆ ಇರಿ..ಅನುಗ್ರಹ ಸದನವನ್ನು ಯಾವಾಗಲು ಹರಸುತ್ತ ಇರಿ..ನಿಮ್ಮ ಆಶೀರ್ವಾದ ಯಾವಾಗಲು ನಮ್ಮನ್ನ ತಂಪಾಗಿ ಇಟ್ಟಿರುತ್ತೆ

ನನ್ನ ಮುದ್ದು ಮಕ್ಕಳೇ ನಿಮಗೆ ಶುಭವಾಗಲಿ..ಸದಾ ನಿಮ್ಮಲ್ಲೇ ಇರುತ್ತೇನೆ...
ಸರಿ ನಾನು ಮತ್ತೆ ಬರ್ತೀನಿ..ಹೊರಟೆ..ಹೋಗಿ ಬರಲೇ...  

Wednesday, January 4, 2012

ಅಪ್ಪ ಕನಸಲ್ಲಿ ಬಂದು ಹೇಳಿದ ಮಾತುಗಳು

ಅಪ್ಪ : ಮಗು ಶ್ರೀಕಾಂತಾ...

ಶ್ರೀಕಾಂತ : ಅಣ್ಣ...ಪ್ರಣಾಮಗಳು...

ಅಪ್ಪ : ಮಗು..ನೀನು ಎಲ್ಲರ ಬಗ್ಗೆ ಬರೆಯುತ್ತ ಇರ್ತೀಯ..ನನ್ನ ಬಗ್ಗೆ ಕೂಡ ಬರೀತಾ ಇದ್ದೀಯ...ನನ್ನ ಮತ್ತು ನನ್ನ ಚಿಕ್ಕಮ್ಮನ ಸಂಭಾಷಣೆ ನಿನ್ನ ಕಿವಿಯಲ್ಲಿ ಹೇಳುತ್ತೇನೆ..ನಮ್ಮ ಕೋರವಂಗಲದ ಕುಟುಂಬಕ್ಕೆ ತಿಳಿಸುತ್ತೀಯ

ಶ್ರೀಕಾಂತಾ: ಅಣ್ಣ..ನೀವು ಇಲ್ಲಿ ನಮ್ಮ ಜೊತೇನೆ ಇದ್ದೀರಾ..ನೀವು ಯಾವತ್ತು ನನಗೆ ಇದು ಬೇಕು ಅಂತ ಕೇಳಿಲ್ಲ...ಇವಾಗ ಕೇಳಿದ್ದೀರಾ ನಾನು ಬಿಡ್ತೀನಾ  ಇಂತಹ ಅವಕಾಶ..ಯೋಚನೆ ಮಾಡಬೇಡಿ ಕಳಿಸ್ತೀನಿ ಒಂದು ಸೂಪರ್ ಸಂಭಾಷಣೆ...

ನಾಗರತ್ನ  ಅಜ್ಜಿ ಸ್ವರ್ಗಾರೋಹಣ ಮಾಡುತ್ತಿದ್ದ ಸಂಧರ್ಭ...ಮಾರ್ಗ ಮಧ್ಯದಲ್ಲಿ ದೇವತೆಗಳು ಭೂಮಿಯಿಂದ ಬರುತಿದ್ದ ಹಿರಿಯ ಚೇತನವನ್ನು ಬರಮಾಡಿಕೊಳ್ಳಲು ಬರುತಿದ್ದಾಗ...ಅಚಾನಕ್ಕಾಗಿ ಯಾರೋ ಕೂಗಿದಂತಾಗುತ್ತದೆ ಹಿಂದೆ ತಿರುಗಿ ನೋಡುತ್ತಾರೆ

ಅಣ್ಣ : ಚಿಕ್ಕಮ್ಮ ಚಿಕ್ಕಮ್ಮ ಚಿಕ್ಕಮ್ಮ

ನಾಗರತ್ನ ಅಜ್ಜಿ : ಮಂಜಣ್ಣ...ಯಾಕಪ್ಪ ನೀನು ಬಂದು ಬಿಟ್ಟೆ...ನನ್ನ ಅಂತಿಮ ಕ್ಷಣದಲ್ಲಿ ನಿನ್ನ ನೋಡ್ಬೇಕು ಅಂತ ಆಸೆ ಪಟ್ಟಿದ್ದೆ....ಆದ್ರೆ ನೀನು ನಿನ್ನ ಕುಟುಂಬವನ್ನು ಬಿಟ್ಟು ಬರಬಾರದಿತ್ತು

ಅಣ್ಣ : ಇಲ್ಲ ಚಿಕ್ಕಮ್ಮ...ನನ್ನ ಮಕ್ಕಳು, ವೈದ್ಯರು, ಸಿಬ್ಬಂದಿಗಳು ತುಂಬಾ ಕಷ್ಟ ಪಟ್ಟರು ನನ್ನ ಉಳಿಸೋಕೆ ಆದ್ರೆ ಆಗಲಿಲ್ಲ...ನಿಮ್ಮನ್ನ ನೋಡುವ ಹಂಬಲ ಜಾಸ್ತಿ ಆಗಿತ್ತು..

ನಾಗರತ್ನ ಅಜ್ಜಿ: ಮಂಜಣ್ಣ ನಿನ್ನ ನೋಡಿದ್ದು ತುಂಬಾ ಖುಷಿ ಆಯಿತು...ನರಸು ನಮನ್ನೆಲ್ಲ ನೋಡಿ ಎಷ್ಟು ಖುಷಿ ಪಡ್ತಾಳೋ ಅಷ್ಟೇ ದುಖಃ ಕೂಡ ಪಡ್ತಾಳೆ..ಯಾಕೆಂದರೆ ನಾವೆಲ್ಲಾ ನಮ್ಮ ಪ್ರೀತಿ ಮಾಡುವ ಕುಟುಂಬವನ್ನು ಬಿಟ್ಟು ಬಂದಿದ್ದೇವೆ..ಅದು ಅವಳಿಗೆ ಬಹಳ ದುಖಃ ಕೊಡುತ್ತೆ..

ಅಣ್ಣ:ಹೌದು ನೀವು ಹೇಳೋದು ಸರಿ...ಆದ್ರೆ ಏನು ಮಾಡೋದು...ನಮ್ಮ ಜೀವನವೇ  ಹಾಗೆ ನಾನು ಇಷ್ಟ ಪಡುವ ಒಂದು ಹಾಡು ಇದೆ ನೋಡಿ...ಅದರಲ್ಲಿ ಹೇಳುತ್ತೆ

"ಕಾಲನು ಬಂದು ಬಾ ಎಂದಾಗ ಎಲ್ಲವು ಶೂನ್ಯ ಚಿತೆ ಏರುವಾಗ
ಎಲ್ಲಾ ಶೂನ್ಯ ಎಲ್ಲವು ಶೂನ್ಯ
ಉಳಿಯುವುದೊಂದೇ  ದಾನ ಧರ್ಮ ತಂದ ಪುಣ್ಯ"

ಚಿಕ್ಕಮ್ಮ ನೀವು ನನ್ನ ಬೆಳೆಸಿದ್ದೀರ, ನನಗೆ ಒಂದು ಒಳ್ಳೆ ಮಾರ್ಗ ತೋರಿಸಿದ್ದೀರ...ಅದನ್ನೇ ನಾನು ನನ್ನ ಮಕ್ಕಳಿಗೂ ತೋರಿಸಲು ಪ್ರಯತ್ನ ಪಟ್ಟಿದ್ದೀನಿ...ಇದೆ ನಿಮ್ಮ ಹಾಗು ನನ್ನ ಕುಟುಂಬಕ್ಕೆ ದಾರಿ ದೀಪ ಅಂತ ನನ್ನ ಭಾವನೆ...

ನಾಗರತ್ನ ಅಜ್ಜಿ: ಮಂಜಣ್ಣ ನೀನು ತುಂಬು ಜೀವನ ನೆದೆಸಿದ್ದೀಯ..ನನ್ನ ಮಕ್ಕಳಿಗೂ ನಿನ್ನ ಕಂಡರೆ ಪ್ರಾಣ..ನಿನ್ನ ದೊಡ್ಡಣ್ಣ ಅಂತಾನೆ ನಮ್ಮ ಗೋಪಾಲ, ಶೋಮಿ, ಶಂಕರ ಹೇಳೋದು...ಬಾ ಮಂಜಣ್ಣ ವೈಕುಂಠಕ್ಕೆ ಹೋಗೋಣ..ನಮಗಾಗಿ ಎಲ್ಲರು ಕಾಯುತ್ತ ಇದ್ದಾರೆ..ಭೂಮಿಯಲ್ಲಿರುವ ನಮ್ಮ ಕುಟುಂಬ ಸದಾ ಹಸಿರಾಗಿ ಹೆಸರಾಗಿ ಬಾಳಲಿ ಅನ್ನುವ ಹಾರೈಕೆ ಯಾವಾಗಲು ಇದ್ದೆ ಇರುತ್ತದೆ..


(ನಾಗರತ್ನ ಅಜ್ಜಿ ನಮ್ಮ ಅಪ್ಪನ ಅಮ್ಮನ ತಂಗಿ...ನಮ್ಮ ಅಪ್ಪ ಶಿವಮೊಗ್ಗಕ್ಕೆ ವಲಸೆ ಹೋದಾಗ ತಮ್ಮ ಮಕ್ಕಳಿಗಿಂತಲೂ ಹೆಚ್ಚಿನ ಪ್ರೀತಿ ತೋರಿದ ಕರುಣಾಮಯಿ ತಾಯಿ...ನಮ್ಮ ಅಪ್ಪ ಅವರನ್ನು ಚಿಕ್ಕಮ್ಮ ಅಂತ ಕರೆದರೂ ಅಮ್ಮನಷ್ಟೇ ಪ್ರೀತಿ, ಗೌರವ  ತೋರಿದ್ದರು...ಅವರಿಬ್ಬರೂ ಸುಮಾರು ವರ್ಷಗಳಾದ ಮೇಲೆ ಕಳೆದ ವರ್ಷ ಒಬ್ಬರಿಗೊಬ್ಬರು ಭೇಟಿ ಮಾಡಿ ಖುಷಿ ಪಟ್ಟ ಸಂಧರ್ಭ ನಮ್ಮ ಅಪ್ಪನಿಗೆ ನೂರಾನೆ ಬಲ ಬಂದಷ್ಟೇ ಉತ್ಸಾಹ ತೋರಿದ್ದರು....ಇಂತಹ ಇಬ್ಬರು ಸಜ್ಜನಿಕೆಯ ಪ್ರತಿಮೂರ್ತಿಗಳು ನಮ್ಮ ಕುಟುಂಬದ ದಿಕ್ಕನ್ನು ಬದಲಿಸಲು ಸ್ಪೂರ್ತಿದಾಯಕವದದ್ದು ನಮ್ಮ ಸೌಭಾಗ್ಯವೇ ಸರಿ)

Tuesday, January 3, 2012

My father - Decided to leave us

"First i lost hearing, then eyes....now only my soul is there..".

This is the last words he uttered when I spoke to him for the last time...

Still it is booming in my ears..


He breathed his last today (2nd Jan 2012 at 17.35 Hours)

He was instrumental in helping us to reach the safe shore to live a better life.   All the four children of him owe a big gratitude to our father known for patience, grit, and determination.  

I have read somewhere..it is difficult to play in our own funeral...but his guidance, his living style all made us more strong, and act more mature

He lived up to his life, he was happy to see his dreams are full filled in our eyes..


As aptly my cousin brother Jnaanesha's condolence SMS to us "Nobody can fill the vaccum created by him.  He will be missed by all of us. For all practical purpose, he was the eldest in our family.  He will always be remembered for his simple life style n descipline.  It was a hell to be in hospital with all struggle n pains.  All of us should take this in our stride and help doddamma overcome the grief.  he has been a fantastic father n wonderful loving grand father to all kids.  May his soul rest in peace..."


Tears started trickling down...am stopping it here...
Anna, you are our spirit, energy, enthusiasm...you are with us..and you will be with us all the time...

Monday, January 2, 2012

ನಮ್ಮ ಅಪ್ಪನ ಬಗ್ಗೆ ಏನೇ ಬರೆದರೂ ಅದು ಕಮ್ಮಿ ಎನ್ನುವುದು ನನ್ನ ಭಾವನೆ..

"ಮೊದಲು ಕಿವಿ ಹೋಯ್ತು....ಆಮೇಲೆ ಕಣ್ಣು ಹೋಯ್ತು..ಪ್ರಾಣ ಒಂದು ಉಳಿದಿದೆ"

ನನಗೆ ನಮ್ಮ ಅಪ್ಪ ಹೇಳಿದ ಕಡೆ ಸ್ಪಷ್ಟ ಮಾತುಗಳು...ಇನ್ನೂ ಕಿವಿಯಲ್ಲಿ ಗುಯ್ಯ್ಗಗುಟ್ಟುತ್ತ ಇದೆ...


ತಮ್ಮ ಇಡಿ ಜೀವನದಲ್ಲಿ ಛಲ ಹಾಗು ಆತ್ಮ ವಿಶ್ವಾಸದಿಂದ ಬೆಳೆದು ನಮ್ಮನ್ನು ಹಾಗೆ ಬೆಳಸಿದ ನಮ್ಮ ಅಪ್ಪ ಇಂದು ಸಂಜೆ ಸುಮಾರು ೫.೩೫ಕ್ಕೆ ನಮ್ಮನ್ನು ಹರಸಿ ಹೊರಟರು ...ಕಾಲನ ಕರೆ ಬಂದಾಗ ಯಾರು ನಿಲ್ಲುವುದಿಲ್ಲ ಎನ್ನುವ ಸತ್ಯ ನಮಗೆ ಅರಿವಾದ ಆ ಕ್ಷಣ ನಿಜಕ್ಕೂ ಯಾತನಮಯ .


ಬೇರೆಯವರ ಹುಟ್ಟು- ಸಾವಿನ  ಬಗ್ಗೆ  ಬರೆಯೋದು  ತುಂಬಾ  ಸುಲಭ..ತಮ್ಮ ಬಂಧು-ಮಿತ್ರರ ಬಗ್ಗೆ ಬರೆಯುವುದು ಕಷ್ಟ ಅಂತ ಪ್ರತೀತಿ..ಆದ್ರೆ ನಮ್ಮ ಅಪ್ಪ ನಮ್ಮ ಒಳಗೆ ಇದ್ದು ನನಗೆ ಬರೆಯೋದಕ್ಕೆ ಚೈತನ್ಯ ತುಂಬಿದ್ದರೆ ಅಂತ ನನ್ನ ಬಲವಾದ ನಂಬಿಕೆ...


ಜೀವನದ ಪ್ರತಿಯೊಂದು ಕ್ಷಣದಲ್ಲೂ  ತಾಳ್ಮೆ, ಮೃದು ಮನಸಿಗೆ ಹೆಸರಾಗಿದ್ದ ನಮ್ಮ ಅಪ್ಪ..ಅವರ ಅಂತಿಮ ಕ್ಷಣಗಳು ಯಾತನಮಯವಾಗಿದ್ದು ವಿಧಿ ವಿಪರ್ಯಾಸ.  ಪ್ರಾಯಶಃ ಆ ತಾಳ್ಮೆಯೇ ನಮ್ಮ ಮನಸನ್ನು ಹಿಡಿತದಲ್ಲಿರಿಸಿದೆ ಅಂದರೆ ತಪ್ಪಿಲ್ಲ..


ಸುಮಾರು ಎಪ್ಪತೊಂಬತ್ತು ಹುಟ್ಟು ಹಬ್ಬಗಳನ್ನ ಆಚರಿಸಿದ ಹಿರಿಯ ಜೀವ..ತನ್ನ ಎಂಬತ್ತನೇ ವರುಷಕ್ಕೆ ಕಾಲು ಇರಿಸಿದ ಸುಮಾರು ಮೂರು  ತಿಂಗಳ ತರುವಾಯ ತನ್ನ ನೆನಪನ್ನು ನಮಗೆ ನೀಡಿ ಹೋಗಿದ್ದಾರೆ...


ನಮ್ಮ ಅಪ್ಪನ ಬಗ್ಗೆ ಏನೇ ಬರೆದರೂ ಅದು ಕಮ್ಮಿ ಎನ್ನುವುದು ನನ್ನ ಭಾವನೆ...


ಅವರ ತಾಳ್ಮೆ, ಎಂತಹ ಸಮಯದಲ್ಲೂ ಅಸಹನೆಗೊಳ್ಳದ ಸ್ವಭಾವ ತನ್ನ ಎಲ್ಲ ಮಕ್ಕಳನ್ನು ಒಂದು ನೆಲೆಗಟ್ಟಿಗೆ ಮುಟ್ಟಿಸಲು ಪಟ್ಟ ಶ್ರಮ ಎಲ್ಲದಕ್ಕೂ ನಾವು ಚಿರಋಣಿ...


ಅಣ್ಣ ನೀವೆಲ್ಲೂ ಹೋಗಿಲ್ಲ...ನಮ್ಮೆಲ್ಲೆ ಇದ್ದೀರಾ...ನಮಗೆ ಮಾರ್ಗದರ್ಶನ ನೀಡುತ್ತ ಇರಿ...


ಹೋಗಿ ಬನ್ನಿ ಅಣ್ಣ...ನಿಮ್ಮ ಅಪ್ಪ, ಅಮ್ಮ, ಚಿಕ್ಕಮ್ಮ ಎಲ್ಲರೂ  ನಿಮಗಾಗಿ ಕಾಯುತ್ತ ಇದ್ದಾರೆ...


ನಿಮ್ಮ ಶ್ರಮ ಸಾರ್ಥಕವಾಗುವುದು ನಮ್ಮ ಸಾರ್ಥಕ ಜೀವನದಲ್ಲಿ...ಅದೇ ನಿಮಗೆ ನಾವು ತೋರುವ ಶ್ರದ್ದಾಂಜಲಿ...