ಏನು ಮಾಡ್ತಾ ಇದ್ದೀಯ...ತಿಂಡಿ ತಿಂದೆಯ
ನಿಮ್ಮ ನೆನಪು ನನ್ನ ಗಟ್ಟಿ ಮಾಡ್ತಾ ಇದೆ..
ಮಕ್ಕಳೆಲ್ಲರೂ ನಿನ್ನ ಚೆನ್ನಾಗಿ ನೋಡ್ಕೋತಾರೆ..ಏನೋ ಯೋಚನೆ ಮಾಡಬೇಡ..
ಆ ನಂಬಿಕೆ ನನಗೆ ಇದೆ..ನಾನು ಶಿವಮೊಗ್ಗದ ದಿನಗಳನ್ನ ಮರೆತಿಲ್ಲ...ಎಷ್ಟೇ ಕಷ್ಟ ಪಟ್ಟರು ನಾವು ಮಕ್ಕಳನ್ನ ಕೈ ಬಿಡಲಿಲ್ಲ..ಹಾಗೆ ನಮ್ಮ ಮಕ್ಕಳು ಕೂಡ ನಮ್ಮನ್ನ ಚೆನ್ನಾಗಿ ನೋಡ್ಕೋತಾರೆ ..
ಇವತ್ತು ಹತ್ತನೇ ದಿನ..ನಾನು ನಿನಗೆ ಕೊಟ್ಟ ಸಿಂಧೂರ, ಮಾಂಗಲ್ಯ, ಮೂಗುತಿ, ಓಲೆ, ಕಾಲುಂಗುರ ದ್ರವ್ಯಗಳನ್ನ ನೀನು ತೆಗೆಯಬೇಕಾದ ಸಂಧರ್ಭ ...ನೆನಸಿಕೊಂಡರೆ ಬೇಜಾರಾಗುತ್ತೆ
ಏನು ಬೇಜಾರಿಲ್ಲ..ನೀವು ಕೊಟ್ಟ ೪ ಮುತ್ತುಗಳು ನನ್ನ ಬಳಿ ಇವೆ..ಮತ್ತು ನಿಮ್ಮ ನೆನಪು..ಇದೆ ನನ್ನ ಮುತ್ತೈದೆ ಮಾಡುತ್ತವೆ...ಮಕ್ಕಳೂ ಕೂಡ ನಿನ್ನೆ ತುಂಬಾ ಕಷ್ಟ ಪಟ್ಟು ಈ ವಿಷಯವನ್ನ ಹೇಳಿದರು..ನೀವು ನನ್ನೊಳಗೆ ಇರುವಾಗ ಇದೆಲ್ಲ ನನಗೆ ಅಷ್ಟು ಮುಖ್ಯವಲ್ಲ..ಮಕ್ಕಳು ಶ್ರದ್ದ-ಭಕ್ತಿಯಿಂದ ಕಾರ್ಯಗಳನ್ನ ಮಾಡುವಾಗ..ನಾನು ಮಾತ್ರ ಹೇಗೆ ಸುಮ್ಮನಿರಲಿ..ಇವೆಲ್ಲ ಒಂದು ಅರ್ಥಗರ್ಭಿತವಾದ ಶಾಸ್ತ್ರ-ಸಂಪ್ರದಾಯಗಳು ನಾವು ನಡೆಸಬೇಕಾದ ಪದ್ದತಿಗಳು..ನೀವು ಯಾವಾಗಲು ಧರ್ಮ ಮಾರ್ಗದಲ್ಲಿ ನೆಡೆದಿದ್ದೀರ ನಿಮ್ಮ ಮಾರ್ಗ ಅನುಸರಿಸುವುದು ನನ್ನ ಹಾಗು ಮಕ್ಕಳ ಧರ್ಮ
ನಿಮ್ಮನ್ನೆಲ್ಲ ಬಿಟ್ಟು ಬಂದಿರುವುದು ನನಗೂ ದುಖಃವೆ ಆದ್ರೆ ಏನು ಮಾಡೋದು ನನ್ನ ಒಳಗಿರುವ ಜೀವಾತ್ಮ ಹೇಳಿದಾ ಪರಮಾತ್ಮ ಕರೀತಾ ಇದ್ದಾನೆ ಹೋಗ್ತಿನಿ ಅಂತ ಹೇಳಿದ..ಬೇರೆ ದಾರಿ ಇಲ್ಲ..ಹೋಗಲೇ ಬೇಕಾಗಿದೆ..ನನ್ನ ಕಾರ್ಯಗಳನ್ನ ಮಕ್ಕಳು ಚೆನ್ನಾಗಿ ಮಾಡುತ್ತಾ ಇದ್ದಾರೆ...ಅದಕ್ಕೆ ಪ್ರತಿ ದಿನ ಅವರು ಇತ್ತ ಆಹಾರವನ್ನ ಮೊದಲು ತೆಗುದುಕೊಳ್ತಾ ಇದ್ದೀನಿ...ನನ್ನ ಮಕ್ಕಳು ನಿನ್ನ ಚೆನ್ನಾಗಿ ನೋಡ್ಕೋತಾರೆ..ಪ್ರತಿ ದಿನ ನನಗೆ ನಮಸ್ಕಾರ ಮಾಡುವಾಗ ಇದನ್ನೇ ಹೇಳುತ್ತಾ ಕೈಮುಗಿಯುತ್ತಾರೆ. ಶ್ರೀಕಾಂತ ಬರೆಯುತ್ತಿರುವ ಪುಸ್ತಕದ ಬಿಡುಗಡೆಗೆ ಕಾಯುತ್ತ ಇದ್ದೇನೆ..ನೀನು ಹೇಳಿದ, ನಾನು ಹೇಳಿದ ಎಲ್ಲ ಸಂಧರ್ಭವನ್ನು ಅವನು ಚೆನ್ನಾಗಿ ವರ್ಣಿಸಲಿ ಹಾಗು ಎಲ್ಲರಿಗೂ ಮುಟ್ಟಲಿ ಎಂದು ಆಶಿರ್ವದಿಸುತ್ತೇನೆ...
ಹೌದು ಅವನು ಯಾವಾಗಲು ಹೇಳ್ತಾ ಇದ್ದ..ಈಗ ಬರೆದೆ ಬಿಡುತ್ತಾನೆ...ನೀವು ಎಲ್ಲೇ ಇರಿ ಹೇಗೆ ಇರಿ..ಅನುಗ್ರಹ ಸದನವನ್ನು ಯಾವಾಗಲು ಹರಸುತ್ತ ಇರಿ..ನಿಮ್ಮ ಆಶೀರ್ವಾದ ಯಾವಾಗಲು ನಮ್ಮನ್ನ ತಂಪಾಗಿ ಇಟ್ಟಿರುತ್ತೆ
ನನ್ನ ಮುದ್ದು ಮಕ್ಕಳೇ ನಿಮಗೆ ಶುಭವಾಗಲಿ..ಸದಾ ನಿಮ್ಮಲ್ಲೇ ಇರುತ್ತೇನೆ...
ಸರಿ ನಾನು ಮತ್ತೆ ಬರ್ತೀನಿ..ಹೊರಟೆ..ಹೋಗಿ ಬರಲೇ...
ಇಂತಹ, ಎಂತಹ, ಅಂತಹ ಶಕ್ತಿ, ಸ್ಥೈರ್ಯ, ಸ್ಫೂರ್ತಿ ನಿಮ್ಮದು ಶ್ರೀ .... ನಮ್ಮೆಲ್ಲರಿಗೆ ನಾಂದಿ, ಮಾದರಿ ... ಬಲು ಅಪರೂಪದ, ಅವರ್ಣನೀಯ ಸ್ನೇಹಿತ ...ಓದುತ್ತ ಇದ್ದಾಗ ನನಗೆ ...ಹೇಳಲಿಕ್ಕೆ ಆಗೋಲ್ಲ ಶ್ರೀ ... ಶತಪ್ರತಿಷತ್ ನಿಮ್ಮ ತಂದೆಯವರು ನಿಮ್ಮೊಂದಿಗೆ, ನಿಮ್ಮೊಳಗೆ ಇದ್ದಾರೆ ....
ReplyDeleteಕಣ್ಣು ತೇವಗೊಂಡಿದ್ದು ನಿಜ ಅಣ್ಣಯ್ಯ.. ಓದುವ ನಮಗೇ ನಿಮ್ಮ ತಂದೆಯವರ ಮಾತುಗಳು, ಅಮ್ಮನ ಧೈರ್ಯ ಇಷ್ಟು ಸ್ಪೂರ್ತಿಯಾಗಿ, ಒಮ್ಮೆ ಅವರಿಲ್ಲವೆಂಬ ನೋವು ತೀವ್ರವಾಗಿ ಕಾಡಿರಬೇಕಾದರೆ ನಿಮ್ಮ ಮನಸ್ಸು ಅದೆಷ್ಟು ಬಿಕ್ಕಳಿಸಿದ್ದಿರಬೇಕು...? ಏನೂ ಹೇಳಲು ತೋಚುತ್ತಿಲ್ಲ...ಹಾಟ್ಸ್ ಆಫ್...
ReplyDelete