ಅಪ್ಪ : ಮಗು ಶ್ರೀಕಾಂತಾ...
ಶ್ರೀಕಾಂತ : ಅಣ್ಣ...ಪ್ರಣಾಮಗಳು...
ಅಪ್ಪ : ಮಗು..ನೀನು ಎಲ್ಲರ ಬಗ್ಗೆ ಬರೆಯುತ್ತ ಇರ್ತೀಯ..ನನ್ನ ಬಗ್ಗೆ ಕೂಡ ಬರೀತಾ ಇದ್ದೀಯ...ನನ್ನ ಮತ್ತು ನನ್ನ ಚಿಕ್ಕಮ್ಮನ ಸಂಭಾಷಣೆ ನಿನ್ನ ಕಿವಿಯಲ್ಲಿ ಹೇಳುತ್ತೇನೆ..ನಮ್ಮ ಕೋರವಂಗಲದ ಕುಟುಂಬಕ್ಕೆ ತಿಳಿಸುತ್ತೀಯ
ಶ್ರೀಕಾಂತಾ: ಅಣ್ಣ..ನೀವು ಇಲ್ಲಿ ನಮ್ಮ ಜೊತೇನೆ ಇದ್ದೀರಾ..ನೀವು ಯಾವತ್ತು ನನಗೆ ಇದು ಬೇಕು ಅಂತ ಕೇಳಿಲ್ಲ...ಇವಾಗ ಕೇಳಿದ್ದೀರಾ ನಾನು ಬಿಡ್ತೀನಾ ಇಂತಹ ಅವಕಾಶ..ಯೋಚನೆ ಮಾಡಬೇಡಿ ಕಳಿಸ್ತೀನಿ ಒಂದು ಸೂಪರ್ ಸಂಭಾಷಣೆ...
ನಾಗರತ್ನ ಅಜ್ಜಿ ಸ್ವರ್ಗಾರೋಹಣ ಮಾಡುತ್ತಿದ್ದ ಸಂಧರ್ಭ...ಮಾರ್ಗ ಮಧ್ಯದಲ್ಲಿ ದೇವತೆಗಳು ಭೂಮಿಯಿಂದ ಬರುತಿದ್ದ ಹಿರಿಯ ಚೇತನವನ್ನು ಬರಮಾಡಿಕೊಳ್ಳಲು ಬರುತಿದ್ದಾಗ...ಅಚಾನಕ್ಕಾಗಿ ಯಾರೋ ಕೂಗಿದಂತಾಗುತ್ತದೆ ಹಿಂದೆ ತಿರುಗಿ ನೋಡುತ್ತಾರೆ
ಅಣ್ಣ : ಚಿಕ್ಕಮ್ಮ ಚಿಕ್ಕಮ್ಮ ಚಿಕ್ಕಮ್ಮ
ನಾಗರತ್ನ ಅಜ್ಜಿ : ಮಂಜಣ್ಣ...ಯಾಕಪ್ಪ ನೀನು ಬಂದು ಬಿಟ್ಟೆ...ನನ್ನ ಅಂತಿಮ ಕ್ಷಣದಲ್ಲಿ ನಿನ್ನ ನೋಡ್ಬೇಕು ಅಂತ ಆಸೆ ಪಟ್ಟಿದ್ದೆ....ಆದ್ರೆ ನೀನು ನಿನ್ನ ಕುಟುಂಬವನ್ನು ಬಿಟ್ಟು ಬರಬಾರದಿತ್ತು
ಅಣ್ಣ : ಇಲ್ಲ ಚಿಕ್ಕಮ್ಮ...ನನ್ನ ಮಕ್ಕಳು, ವೈದ್ಯರು, ಸಿಬ್ಬಂದಿಗಳು ತುಂಬಾ ಕಷ್ಟ ಪಟ್ಟರು ನನ್ನ ಉಳಿಸೋಕೆ ಆದ್ರೆ ಆಗಲಿಲ್ಲ...ನಿಮ್ಮನ್ನ ನೋಡುವ ಹಂಬಲ ಜಾಸ್ತಿ ಆಗಿತ್ತು..
ನಾಗರತ್ನ ಅಜ್ಜಿ: ಮಂಜಣ್ಣ ನಿನ್ನ ನೋಡಿದ್ದು ತುಂಬಾ ಖುಷಿ ಆಯಿತು...ನರಸು ನಮನ್ನೆಲ್ಲ ನೋಡಿ ಎಷ್ಟು ಖುಷಿ ಪಡ್ತಾಳೋ ಅಷ್ಟೇ ದುಖಃ ಕೂಡ ಪಡ್ತಾಳೆ..ಯಾಕೆಂದರೆ ನಾವೆಲ್ಲಾ ನಮ್ಮ ಪ್ರೀತಿ ಮಾಡುವ ಕುಟುಂಬವನ್ನು ಬಿಟ್ಟು ಬಂದಿದ್ದೇವೆ..ಅದು ಅವಳಿಗೆ ಬಹಳ ದುಖಃ ಕೊಡುತ್ತೆ..
ಅಣ್ಣ:ಹೌದು ನೀವು ಹೇಳೋದು ಸರಿ...ಆದ್ರೆ ಏನು ಮಾಡೋದು...ನಮ್ಮ ಜೀವನವೇ ಹಾಗೆ ನಾನು ಇಷ್ಟ ಪಡುವ ಒಂದು ಹಾಡು ಇದೆ ನೋಡಿ...ಅದರಲ್ಲಿ ಹೇಳುತ್ತೆ
"ಕಾಲನು ಬಂದು ಬಾ ಎಂದಾಗ ಎಲ್ಲವು ಶೂನ್ಯ ಚಿತೆ ಏರುವಾಗ
ಎಲ್ಲಾ ಶೂನ್ಯ ಎಲ್ಲವು ಶೂನ್ಯ
ಉಳಿಯುವುದೊಂದೇ ದಾನ ಧರ್ಮ ತಂದ ಪುಣ್ಯ"
ಚಿಕ್ಕಮ್ಮ ನೀವು ನನ್ನ ಬೆಳೆಸಿದ್ದೀರ, ನನಗೆ ಒಂದು ಒಳ್ಳೆ ಮಾರ್ಗ ತೋರಿಸಿದ್ದೀರ...ಅದನ್ನೇ ನಾನು ನನ್ನ ಮಕ್ಕಳಿಗೂ ತೋರಿಸಲು ಪ್ರಯತ್ನ ಪಟ್ಟಿದ್ದೀನಿ...ಇದೆ ನಿಮ್ಮ ಹಾಗು ನನ್ನ ಕುಟುಂಬಕ್ಕೆ ದಾರಿ ದೀಪ ಅಂತ ನನ್ನ ಭಾವನೆ...
ನಾಗರತ್ನ ಅಜ್ಜಿ: ಮಂಜಣ್ಣ ನೀನು ತುಂಬು ಜೀವನ ನೆದೆಸಿದ್ದೀಯ..ನನ್ನ ಮಕ್ಕಳಿಗೂ ನಿನ್ನ ಕಂಡರೆ ಪ್ರಾಣ..ನಿನ್ನ ದೊಡ್ಡಣ್ಣ ಅಂತಾನೆ ನಮ್ಮ ಗೋಪಾಲ, ಶೋಮಿ, ಶಂಕರ ಹೇಳೋದು...ಬಾ ಮಂಜಣ್ಣ ವೈಕುಂಠಕ್ಕೆ ಹೋಗೋಣ..ನಮಗಾಗಿ ಎಲ್ಲರು ಕಾಯುತ್ತ ಇದ್ದಾರೆ..ಭೂಮಿಯಲ್ಲಿರುವ ನಮ್ಮ ಕುಟುಂಬ ಸದಾ ಹಸಿರಾಗಿ ಹೆಸರಾಗಿ ಬಾಳಲಿ ಅನ್ನುವ ಹಾರೈಕೆ ಯಾವಾಗಲು ಇದ್ದೆ ಇರುತ್ತದೆ..
(ನಾಗರತ್ನ ಅಜ್ಜಿ ನಮ್ಮ ಅಪ್ಪನ ಅಮ್ಮನ ತಂಗಿ...ನಮ್ಮ ಅಪ್ಪ ಶಿವಮೊಗ್ಗಕ್ಕೆ ವಲಸೆ ಹೋದಾಗ ತಮ್ಮ ಮಕ್ಕಳಿಗಿಂತಲೂ ಹೆಚ್ಚಿನ ಪ್ರೀತಿ ತೋರಿದ ಕರುಣಾಮಯಿ ತಾಯಿ...ನಮ್ಮ ಅಪ್ಪ ಅವರನ್ನು ಚಿಕ್ಕಮ್ಮ ಅಂತ ಕರೆದರೂ ಅಮ್ಮನಷ್ಟೇ ಪ್ರೀತಿ, ಗೌರವ ತೋರಿದ್ದರು...ಅವರಿಬ್ಬರೂ ಸುಮಾರು ವರ್ಷಗಳಾದ ಮೇಲೆ ಕಳೆದ ವರ್ಷ ಒಬ್ಬರಿಗೊಬ್ಬರು ಭೇಟಿ ಮಾಡಿ ಖುಷಿ ಪಟ್ಟ ಸಂಧರ್ಭ ನಮ್ಮ ಅಪ್ಪನಿಗೆ ನೂರಾನೆ ಬಲ ಬಂದಷ್ಟೇ ಉತ್ಸಾಹ ತೋರಿದ್ದರು....ಇಂತಹ ಇಬ್ಬರು ಸಜ್ಜನಿಕೆಯ ಪ್ರತಿಮೂರ್ತಿಗಳು ನಮ್ಮ ಕುಟುಂಬದ ದಿಕ್ಕನ್ನು ಬದಲಿಸಲು ಸ್ಪೂರ್ತಿದಾಯಕವದದ್ದು ನಮ್ಮ ಸೌಭಾಗ್ಯವೇ ಸರಿ)
Dear Srikant,
ReplyDeleteI loved your writing...It surely shows your love towards your elders and reminds us of the loss.....Its great to hear so much from you.
Thanks to you....continue writing....
ಶ್ರೀಕಾಂತ, ನಿಮ್ಮ ಮನೆಯ ಪ್ರೀತಿಯ ಸಿರಿ, ಕಾಂತಿ ಇಲ್ಲಿ ಪ್ರಕಟವಾಗಿದೆ ಹಾಗು ನಿಮ್ಮ ಮನಸು ಹಾಗು ಮನಸಿನಲ್ಲಿ ಮೂಡಿದ ಕನಸು, ಕನಸಿನಲ್ಲಿ ಕಂಡ ಕುಟುಂಬದ ಹಿರಿಯರ ತಂಡ, ಆ ತಂಡದ ಪರಿಪಕ್ವತೆಯ ಸಂಭಾಷಣೆ ನೋಡಿದರೆ ...ನನ್ನ ಮನಸು ಹೇಳಿತು.... ಈ ಕುಟುಂಬ ಆ ಹಿರಿಯರ ತಂಡ ರಚಿಸಿರುವ ಎಷ್ಟೋ ಸಿಹಿ ತೊಳೆಗಳು ನೆಲಸಿರುವ ಹಲಸು. ಹೇ ಪರಮಾತ್ಮನೇ, ನಮ್ಮ ಶ್ರೀ ತಂದೆ ಇಚ್ಛೆಯ ಸಾಕಾರಗೊಳಿಸಲು, ಶ್ರೀ ಇಟ್ಟಿರುವ ಹೆಜ್ಜೆಗೆ ಎಲ್ಲ ವಿಘ್ನಗಳ ಸರಿಸು,ಹರಸು ಹಾಗು ಆ ಫಲವ ಶೀಘ್ರದಿ ಫಲಿಸು ನಂತರ ಆ ಫಲವನು ಎಲ್ಲೆಡೆ ಪಸರಿಸಿ ಕಲ್ಮಶವ ಅಳಿಸು.
ReplyDeleteHi Srikanth
ReplyDeleteIt's a wonderful dialouge between Ajji and Appa. They must have discussed similer things only. We however could not arrnge them to meet HERE Which must have materialised THERE...!!!