ಪಾಪು ಮೊದಲ ಬಾರಿಗೆ ವಿದೇಶದಿಂದ ನಮ್ಮ ಮನೆಗೆ ಬಂದಾಗ.. ಸಾಂಪ್ರದಾಯಿಕವಾಗಿ ಸ್ವಾಗತಿಸಿ ಆರತಿ ಎತ್ತಿ ಹೂ ಕೊಟ್ಟು ಹಣೆಗೆ ತಿಲಕವಿಟ್ಟು ಒಳಗೆ ಬರ ಮಾಡಿಕೊಂಡಿದ್ದೆವು.. ಜೊತೆಯಲ್ಲಿ ಊಟ, ಹರಟೆ.. ಗುಪ್ತಗಾಮಿನಿಯ ಹಾಗಿದ್ದ ಮಾತುಗಳು.. ನಗು.. ಎಲ್ಲವೂ ತುಂಬಿಕೊಂಡಿದ್ದವು.. ಕಾರ್ಪೊರೇಟ್ ಜಗತ್ತಿನಲ್ಲಿ ಐಸ್ ಬ್ರೇಕಿಂಗ್ ಸೆಶನ್ ಅಂತಾರಲ್ಲ ಹಾಗೆ.. ಅಲ್ಲಿಂದ ಮುಂದೆ ಮಾತುಗಳೆ ಮಾತುಗಳು..
ಪಾಪುವಿನದು ಮುದ್ದಾದ ಮೊಗ.. ಆಕರ್ಷಕ ಕಣ್ಣುಗಳು.. ಸುಂದರ ನಗು.. ಇದರ ಜೊತೆ ಅಸಾಧ್ಯ ಬುದ್ದಿ ಮತ್ತೆ.. ಸುಸಜ್ಜಿತವಾಗಿ ಕೆಲಸಗಳನ್ನು ಪಟ್ಟಿ ಮಾಡಿಕೊಂಡು ಅದರ ರೀತಿ ಕೆಲಸ ಮಾಡುವ ಇವಳ ರೀತಿ ಇಷ್ಟ..
ಎತ್ತರದ ನಿಲುವು.. ಸೊಗಸಾದ ಸಿಹಿ ದನಿ.. ನೀಟಾಗಿ ಒನಪು ಮಾಡಿಕೊಂಡ ಮೀಸೆ ಗಡ್ಡ.. ಸದಾ ನಗುವ ಮೊಗ.. ಪ್ರತಿ ಮಾತನ್ನು ಅಳೆದು ತೂಗಿ ಮಾತಾಡುವ ರಿಷಬ್ ಇಷ್ಟ ಆಗೋದು ಇದೆ ಕಾರಣಕ್ಕೆ..
ಇಬ್ಬರ ಸಂಗಮ ದೇವರೇ ಬರೆದಿಟ್ಟಿದ್ದು.. ನಾವು ಬರಿ ನೆಪ ಮಾತ್ರ..
"ಸಂತೋಷಕ್ಕೆ ಹಾಡು ಸಂತೋಷಕ್ಕೆ" ಕರುನಾಡನ್ನೇ ಕುಣಿಸಿದ್ದ ಹಾಡಿದು.. ಬರೆದದ್ದು ಪಂಚೆ ಉಡುವ ಚಿ ಉದಯಶಂಕರ್, ಸಂಗೀತ ಕೊಟ್ಟಿದ್ದು ಪಂಚೆ ಉಡುವ ಇಳಯರಾಜ, ಕುಣಿದದ್ದು ಡಾನ್ಸ್ ಎಂದರೆ ಮಾರು ದೂರ ಓಡುತ್ತಿದ್ದ ಶಂಕರ್ ನಾಗ್.. ಆದರೆ ಈ ತ್ರಿವೇಣಿ ಸಂಗಮ ಸೃಷ್ಟಿಸಿದ್ದು ಈ ಹಾಡು..
ಇಂದಿಗೂ ಈ ಹಾಡೂ ಬಂದರೆ ಎಲ್ಲರ ಕಾಲು ಆಟೋಮ್ಯಾಟಿಕ್ ಆಗಿ ತಾಳ ಹಾಕುತ್ತದೆ..
ಈ ಹಾಡಿಗೆ ಪಾಪು ರಿಷಬ್ ನೃತ್ಯ ಮಾಡಿದಾಗ ನಿಜಕ್ಕೂ ಅಲ್ಲಿದ್ದವರಿಗೆ ಹುಚ್ಚೇ ಹಿಡಿಯಿತು.. ಯಾಕೆಂದರೆ ಅವರಿಬ್ಬರ ಹೊಂದಾಣಿಕೆಯ ನೃತ್ಯ ಆ ಮಟ್ಟಕ್ಕೆ ಇತ್ತು..
ಇಬ್ಬರದೂ ನೃತ್ಯದ madness.. ಆ madness ಸಿಗುವ comfort..
ಹೌದು ನಿಮ್ಮಿಬ್ಬರಲ್ಲಿ ನಿಮ್ಮಿಬ್ಬರಿಗೆ ಇಷ್ಟವಾಗುವ ನಿಮ್ಮಿಬ್ಬರ ಗುಣವೇನು ಎಂದರೆ ಪಾಪು ಹೇಳಿದ್ದು ರಿಷಬ್ ಜೊತೆಯಾಗಿರುವಾ ಸಿಗುವ comfort...
ರಿಷಬ್ ಹೇಳಿದ್ದು ಐಶುವಿನಲ್ಲಿರುವ madness..
ಹೌದು ಜೋಡಿ ಯಾವಾಗಲೂ ice ಮತ್ತು fire ತರಹ ಇರಬೇಕು.. ಕರಗಬೇಕು.. ಹಿಮವಾಗಬೇಕು.. ಕರಗಬೇಕು ಹಿಮವಾಗಬೇಕು..
ಇಂತಹ ಮುದ್ದಾದ ಜೋಡಿ ಒಂದಾಗಿದ್ದು ಕ್ರೌನ್.. ಅಂದರೆ ಕಿರೀಟ.. ಹೌದು ಇವರಿಬ್ಬರ ಗೆಳೆತನಕ್ಕೆ, ಪ್ರೀತಿಗೆ, ವಿಶ್ವಾಸಕ್ಕೆ, ಒಬ್ಬರ ಮೇಲೆ ಒಬ್ಬರ ನಂಬಿಕೆಗೆ ಕಿರೀಟವಿಟ್ಟಂತೆ ಈ ಸಂಭ್ರಮ ಏರ್ಪಾಡಾಗಿತ್ತು..
ಆ ಬೆಳಕು, ಫೋಟೋಗ್ರಫಿ, ಆ ಸುಂದರ ಪರಿಸರ, ಶುಭ್ರ ನೀಲಾಕಾಶ.. ತಣ್ಣನೆಯ ಗಾಳಿ, ಎಲ್ಲೆಡೆ ಹಸಿರು.. ಹೌದು ಸಂಗೀತ ಸಂಜೆಯಲ್ಲಿ ಆ ಗಂಧರ್ವ ಲೋಕವೇ ಕೆಳಗೆ ಇಳಿದಂತಾಗಿತ್ತು..
ಹಾಡುಗಳು, ಹಾಸ್ಯ, ನೃತ್ಯ, ಒಬ್ಬರಿಗೊಬ್ಬರು ಮೀರಿಸುವಂತಹ ಹೆಜ್ಜೆ ಹಾಕುವಿಕೆ.. ಅಬ್ಬಾಬ್ಬಾ ಇದಕ್ಕಿಂತ ಅದ್ಭುತ ಪರಿಸರ ಇನ್ನೇನು ಇದೆ.
ಹತ್ತಿರದವರು ಹತ್ತಿರವಾದವರು.. ಖುಷಿ ಪಟ್ಟು ಸಂಗಮಿಸಿದ್ದರು.. ಪ್ರತಿಯೊಬ್ಬರೂ ಈ ಕಾರ್ಯಕ್ರಮದ ಯಶಸ್ಸಿಗೆ ತಮ್ಮದೇ ರೀತಿಯಲ್ಲಿ ಜೊತೆಯಾಗಿದ್ದರು..
ಭಾಗವಹಿಸುವಿಕೆ ತಾನೇ ಮುಖ್ಯ ಆ ಮಾತನ್ನು ನಿಜ ಮಾಡಲಿಕ್ಕೆ ಬಂಧು ಮಿತ್ರರು ಸೇರಿದ್ದರು..
ಅದ್ಭುತ ನೃತ್ಯಗಳು, ಹಾಡುಗಳು ಜೊತೆಯಲ್ಲಿ ರುಚಿಕರ ತಿಂಡಿ ತಿನಿಸುಗಳು.. ಈ ಸಮಾರಂಭವನ್ನು ಅಚ್ಚುಕಟ್ಟಾಗಿ ಸೆರೆ ಹಿಡಿಯಲು ಬಂದಿದ್ದ ಛಾಯಾಗ್ರಾಹಕರು, ವಿಡಿಯೋಗ್ರಾಫರುಗಳು...
ಸುಂದರ ಹೂಗಳ ಡೋಲಿಯ ಕೆಳಗೆ ಮದುಮಗಳು ನೆಡೆದುಬರಲು ಸಿದ್ಧವಾಗಿದ್ದಳು.. ಆದರೆ ಸಂಗೀತ ಬೇಕಿತ್ತು.. ತಾಂತ್ರಿಕ ಅಡಚಣೆಯಾಗಿ ಒಟ್ಟಿನಲ್ಲಿ ಸಂಗೀತ ಬಂತು.. ಹೂಗಳ ಮಧ್ಯೆ ಸುತ್ತಲೂ ಅಂಗರಕ್ಷಕರು ಜೊತೆಯಾಗಿ ಬರುವ ರಾಣಿಯಂತೆ ನೆಡೆದು ಬರುತ್ತಿರುವಾಗ.. ಪಾಪು ಎಷ್ಟು ಮುದ್ದು ಎನಿಸಿತು..
ಸೂಕ್ತವಾಗಿ ಮದುವೆ ಪದ್ಧತಿ ನೆಡೆಯಿತು.. ಅಂತರಪಟ, ಜೀರಿಗೆ ಬೆಲ್ಲ, ಮಾಂಗಲ್ಯ ಧಾರಣೆ, ವಧುವನ್ನು ವರನಿಗೆ ಧಾರೆ ಎರೆಡು ಕೊಟ್ಟದ್ದು.. ಸಪ್ತಪದಿ.. ಅರುಂಧತಿ ನಕ್ಷತ್ರ ವೀಕ್ಷಣೆ, ಹಿರಿಯ ಜೀವಿಗಳು ರಿಷಬ್ಅ ಕಡೆಯ ಅಜ್ಜಿಗೆ ಹಾಗೂ ಪಾಪುವಿನ ಕಡೆಯ ಅಜ್ಜನಿಗೆ ನಮಸ್ಕರಿಸಿದಾಗ ವಿವಾಹ ಸಂಭ್ರಮ ಮುಗಿದಿತ್ತು..
ಮುಂದೈತೆ ಪೂರ್ತಿ ಚಿತ್ರ ಅನ್ನುವಂತೆ..
ಮೋಡಗಳ ಹಾಗೆ ಕೆಳಗೆ ಹರಿಯುತ್ತಿದ್ದ ದೇವಲೋಕವನ್ನು ನೆನಪಿಸುವ ಹಾಲಿನ ಧಾರೆಯಂತಿದ್ದ ಧೂಮ.. ಅದರ ಅಕ್ಕ ಪಕ್ಕದಲ್ಲಿ ಹೂಬಾಣ ಚೆಲ್ಲುತ್ತಿದ್ದ ಪಟಾಕಿ.. ಅದರ ಮಧ್ಯೆ ಮರೂನ್ ಬಣ್ಣದಲ್ಲಿ ಪಾಪು.. ದಟ್ಟ ವರ್ಣದ ಸೂಟಿನಲ್ಲಿ ರಿಷಬ್.. ಆಹಾ ದೇವಲೋಕದ ಜೋಡಿ ಹೆಜ್ಜೆ ಇಟ್ಟು ಬರುತ್ತಿದ್ದರೆ ಅನಿಸುವಂಥಾ ವಾತಾವರಣ..
ಎರಡು ಕಣ್ಣು ಸಾಲದು ಈ ವಧುವರರನ್ನು ನೋಡಲು..
ಎಷ್ಟು ಬಾರಿ ಫೋಟೋ ತೆಗೆಸಿಕೊಂಡರೂ ಅದೇ ಮುಗ್ಧ ನಗು ಇಬ್ಬರದೂ.. ಹೇಳಿ ಮಾಡಿಸಿದ ಜೋಡಿ..
ಇಬ್ಬರನ್ನೂ ನಾನು ಬೇರೆ ಬೇರೆಯಾಗಿ ಮಾತಾಡಿಸಿ ಅವರಿಗೆ ಮೂರು ಪ್ರಶ್ನೆ ಕೇಳಿದೆ.. ನೋಡೋಣ ಅದಕ್ಕೆ ಒಂದೇ ರೀತಿಯ ಉತ್ತರ ಬರುತ್ತಾ ಇಲ್ವಾ ಎನ್ನುವ ಕುತೂಹಲ (ಉತ್ತರಗಳು ನನಗೆ ಗೊತ್ತಿತ್ತು.. ಆದರೂ ಅಳಿಯ ಮಗಳನ್ನು ಕೊಂಚ ಕಾಡುವ ಉತ್ಸಾಹ.. ಸೋಲು ನನದೇ ಎಂದು ಗೊತ್ತಿತ್ತು.. ಆದರೂ .. ಆದರೇ.. )
ಶಾಲಾ ದಿನಗಳಿಂದ ಹೊರಗೆ ಬಂದ ಮೇಲೆ.. ಒಬ್ಬರನ್ನೊಬ್ಬರು ಭೇಟಿ ಮಾಡೋದು ಅಪರೂಪವಾದ ಮೇಲೆ. ಮತ್ತೆ ಸಾಮಾಜಿಕ ತಾಣದಲ್ಲಿ ಹುಡುಕಿದ್ದು ಏಕೆ..
ಅಂಕಲ್ ಐಸುವನ್ನು ಹುಡುಕಲೇ ಬೇಕಿತ್ತು.. ಯಾಕೆ ಅಂದರೆ.. ರಿಷಬ್ ಉತ್ತರ.. ಅವಳು ನನ್ನ ಜಾನೂ..ಯಾಕೆ ಅಂದರೆ ಐಸು ಅಂತ ಅಂದಾಗ
ಹೌದು ನಾನು ರಿಷಭನ್ನು ಹುಡುಕಬೇಕಿತ್ತು.. ಯಾಕೆ ಗೊತ್ತೇ.. ಅವನು ನನ್ನ ಜಾನೂ.. ರಿಷಬ್ ಎಂದಾಗ
ಇಬ್ಬರ ಮನದಲ್ಲಿ ....
ಓಹ್ ಸೂಪರ್ ಸೂಪರ್ ಉತ್ತರ.. ಯಾಕೆ ಹಾಗೆ
ಫಿಲ್ಮಿ ಉತ್ತರಗಳು.. ಅದೂ ಇಬ್ಬರದೂ ಒಂದೇ ಉತ್ತರ.. ಸೂಪರ್ ಸೂಪರ್.. ಈಗ ನನಗೆ ಹೇಳುವ ಮಾತೇನು
ಮನಸ್ಸು ಹೆಮ್ಮೆಯಿಂದ ತುಂಬಿತ್ತು.. ಅಳಿಯ ಮಗಳು ಅಂದ್ರೆ ಹೀಗಿರಬೇಕು.. ಅಂತ.. ಆ ಆಧುನಿಕ ಸಿನೆಮಾ ಯುಗದಲ್ಲಿ ಅರಳಿದ ಈ ಜೋಡಿಗೆ.. ಸಿನೆಮಾ ಹೆಸರುಗಳೇ ಅವರ ಬದುಕಿಗೆ ಮುನ್ನುಡಿಯಾಯಿತು... ಆ ತೊಂಭತ್ತರ ದಶಕದ ಪ್ರೀತಿ ಉಳ್ಳ ಸಿನೆಮಾಗಳು ಎಂದೇ ಹೆಸರಾಗಿದ್ದ ಈ ಮೂರು ಸಿನೆಮಾಗಳ ಹೆಸರಲ್ಲಿ ಈ ಜೋಡಿಯನ್ನು ಬಂಧಿಸಿದ್ದೇವೆ..
ಹೌದು ಪ್ರೀತಿ ಪ್ರೇಮ ಪ್ರಣಯ ವಿಶ್ವಾಸ ನಂಬಿಕೆ ಜೊತೆ ಜೊತೆ ಹೆಜ್ಜೆ ಇದೆ ಅಲ್ಲವೇ ಸಪ್ತಪದಿಯಲ್ಲಿ ಹೇಳೋದು..
ರಿಷಬ್ ಹಾಗೂ ಪಾಪುವಿಗೆ ಪ್ರತಿ ಹೆಜ್ಜೆಗೂ ಒಂದು ಸಿನಿಮಾ ಹಾಡು ಹೇಳಿ ಎಂದೇ
ಮೊದಲ ಹೆಜ್ಜೆ
ಜೊತೆಯಲಿ ಜೊತೆ ಜೊತೆಯಲಿ ಹೀಗೆ ಎಂದೂ - ಗೀತಾ ಕನ್ನಡ ಚಿತ್ರ
ಎರಡನೆಯ ಹೆಜ್ಜೆ
ನೀನೆಲ್ಲೂ ನಾನಲ್ಲೇ ಈ ಜೀವನ ನಿನ್ನಲ್ಲೇ
ಮೂರನೇ ಹೆಜ್ಜೆ
ಹೃದಯದಲಿ ಇದೇನಿದು.. ನದಿಯೊಂದು ಓಡಿದೆ
ನಾಲ್ಕನೇ ಹೆಜ್ಜೆ
ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ
ಐದನೆಯ ಹೆಜ್ಜೆ
ಹೊಸ ಬಾಳಿಗೆ ನೀ ಜೊತೆಯಾದೆ.. ಹೊಸ ಆನಂದ ನೀನಿಂದು ತಂದೆ
ಆರನೆಯ ಹೆಜ್ಜೆ
ತುಜೆ ದೇಖಾ ತೋ ಹೇ ಜಾನಾ ಸನಮ್
ಏಳನೆಯ ಹೆಜ್ಜೆ
ಹೋಗಯಾ ಹೇ ತುಜೆಕೋ ತೋ ಪ್ಯಾರ್ ಸಜಿನಾ...
ಈ ಸುಂದರ ಜೋಡಿಗೆ.. ಸುಂದರವಾದ ಶುಭಾಶಯ ಹೇಳೋಣ ಅಂದುಕೊಂಡಾಗ ಪ್ರತಿ ಹೆಜ್ಜೆಯಲ್ಲಿಯೂ ಮೂಡಿ ಬಂದದ್ದು ಸಿನೆಮಾ ಗೀತೆಗಳೇ.
1) Ye Shaam Mastani
ಮೊದಲ ಬಾರಿಗೆ ಪ್ರೀತಿ ಮೂಡಿದ ಕ್ಷಣದಲ್ಲಿ ಮೂಡಿದ ಗೀತೆ
2. Aakshave Beelali mele
ಸ್ವಲ್ಪ ಆತಂಕಕ್ಕೆ ಒಳಗಾಗುವ ಹುಡುಗಿಗೆ ಹುಡುಗ ಧೈರ್ಯ ಹೇಳುವ ಗೀತೆ
3) Chinna mani kuyile
ಹುಡುಗಿಯನ್ನು ಕೋಗಿಲೆ, ಚಿನ್ನದ ಹುಡುಗಿ, ನನ್ನ ನನ್ನ ಮನದ ರಾಣಿ ಎಂದು ಹೊಗಳುವ ಹಾಡಿದು
4) Ninnu kori varanam
ನಿನ್ನೆ ಹುಡುಕಿಕೊಂಡು ನಾ ಬಂದೆ ಎಂದು ಹುಡುಗನ ಸುತ್ತಾ ಕುಣಿಯುತ್ತ ಹಾಡುವ ಹಾಡು
5) Akhiyon Ke Jharokhe se
ಇಬ್ಬರೂ ಒಂದು ಲಾಂಗ್ ಡ್ರೈವ್.. ಸಣ್ಣ ಮಳೆ.. ಹುಡುಗಿ ತನ್ನ ಪ್ರಿಯಕರನಿಗೆ ತನ್ನ ಆಸೆಯನ್ನೆಲ್ಲ ಹೇಳಿಕೊಳ್ಳಬೇಕು ಹಾಡಿನ ಮೂಲಕ..
6) Chehra hai yaa chand kilaa hai
ನಿಮ್ಮ ಮಡದಿಯ ಬಗ್ಗೆ ಅವಳ ಸೌಂದರ್ಯದ ಬಗ್ಗೆ.. ನಿಮ್ಮ ಆಸೆಯ ಬಗ್ಗೆ ಹೇಳಿ ಎಂದಾಗ.. ಬಂದ ಹಾಡಿದು
7) Churaliya hai tum ne jo dil ko
ಇಬ್ಬರಿಗೂ ಒಂದೇ ಪ್ರಶ್ನೆ ಕೇಳಿದೆ.. ನಿಮ್ಮಿಬ್ಬರ ಮನದಲಿ ಏನು ಹೇಳುತ್ತಿದೆ.. ಅಂದಾಗ ಮೂಡಿ ಬಂದ ಹಾಡು.. ಇಬ್ಬರ ಮನವನ್ನು ಕೇಳಿಕೊಂಡಾಗ ಇಬ್ಬರೂ ಒಬ್ಬರಿಗೊಬ್ಬರು ಹೇಳಿದ್ದು



No comments:
Post a Comment