Tuesday, June 21, 2011

ದೇವರು...ಗೂಡು...ಜೇಡರ ಬಲೆ


ದೇವಸ್ಥಾನದ  ಕಟ್ಟೆಯ ಮೇಲೆ ವೃದ್ದ ದಂಪತಿಗಳು....

ಮಕ್ಕಳಿಗೆ ಕಾದು ಕಾದು ಹಣ್ಣಾದ ಕಣ್ಣುಗಳು.....
ಜೀವನದ ಘಟನೆಗಳನ್ನು ಆಕಳಿನಂತೆ ಮೆಲುಕು ಹಾಕುತ್ತ ಕೂತಾಗ...
ಜೀವನದಲ್ಲಿ ಏನು ಸಾಧಿಸಿದ ಹೆಮ್ಮೆ...

ಆದರೆ ಅದಕ್ಕೆ ತೆತ್ತ ಬೆಲೆ?
ಏನು ಕಂಡೆವು...ಏನು ಪಡೆದೆವು...ಈ ಪ್ರಶ್ನೆಗೆ ಉತ್ತರ ಹುಡುಕುತ್ತ...ದೇವಸ್ಥಾನದ ಗೋಪುರದಲ್ಲಿ ಗೂಡು ಕಟ್ಟಿರುವ ಗುಬ್ಬಚ್ಚಿಗಳನ್ನು ನೋಡುತ್ತಾ 

"ಏನು ಅಂದ್ರೆ...ಗುಬ್ಬಚ್ಚಿಗಳು ಎಷ್ಟು ಸುಂದರವಾಗಿ ಗೂಡು ಕಟ್ಟುತ್ತವೆ..
ಅದರಲ್ಲಿ ಅದರ ಸಂಸಾರ,  ಮಕ್ಕಳು, ಎಲ್ಲರು ನೆಮ್ಮದಿಯಿಂದ ಇರುತ್ತೇವೆ ಎಂಬ ನಂಬಿಕೆ ಇರುತ್ತದೆ..

ಆದ್ರೆ ಗೋಪುರವೇ ಜೇಡರ ಬಲೆಯಿಂದ ತುಂಬಿದಾಗ...
ಗೂಡು ಇಲ್ಲ...ಮಾಡು ಇಲ್ಲ...
ಮರಿಗಳು  ರೆಕ್ಕೆ ಪುಕ್ಕ ಬಲಿತು ಆಗಸಕ್ಕೆ ತಮ್ಮ ಜೀವನ ಹುಡುಕಿಕೊಂಡು ಹೋದಾಗ...ಎಲ್ಲವು ಶೂನ್ಯ...."

"ಅಲ್ಲಾ ಮಾರಾಯ್ತಿ ...ದೇವಸ್ಥಾನಕ್ಕೆ ಹೋದರೆ ಇದೆಲ್ಲ ಯೋಚನೆ ಮಾಡಬೇಕ...."

"ಮಕ್ಕಳು ಮರ ಇದ್ದಹಾಗೆ ನೀರು ಎರೆದರಿಗೆ ಮಾತ್ರ ಅಲ್ಲ 
ಎಲ್ಲರಿಗು ನೆರಳು, ಫಲ ಕೊಡುತ್ತೆ...  
ಅಲ್ವ ಅಂದ್ರೆ"

"ಆದರೆ ನೀರು ಎರೆದವರು  ಮರದ ಹತ್ತಿರ ಸದಾ ಇರಬೇಕು ಅಂದ್ರೂ ಮರ ಮಾತ್ರ ಇನ್ನ್ಯಾರನ್ನೂ ಬಯಸುತ್ತೇ..."

"ದೇವರು ಹಾಗೆ ಅಲ್ವೇ...ಚೆನ್ನಾಗಿ ನೋಡಿ ಕೊಂಡರೆ..ದೇವರು ಹತ್ತಿರ ಇರುತ್ತಾನೆ..
ಇಲ್ಲವಾದರೆ ದೇವರು ಜಾಗ ಖಾಲಿ...ಎಲ್ಲಿ ಆದರ, ಪೂಜೆ, ಪುನಸ್ಕಾರ ಇರುತ್ತೋ ಅಲ್ಲಿ ತನ್ನ ಅಸ್ತಿತ್ವ ಅಲ್ಲವೇ.."

"ಪೂಜಾರಿ ಚೆನ್ನಾಗಿದ್ದರೆ...ದೇವರು ಚೆನ್ನಾಗಿರುತ್ತಾನೆ..."

"ದೇವರೇ ಹಗ್ಗ ಕಡಿಯುತ್ತಿರುವಾಗ ಪೂಜಾರಿ ಶಾವಿಗೆ ಕೇಳಿದರೆ..ಹೆಂಗೆ ಅಂದ್ರೆ?"

"ಪಕ್ಷಿಗಳೇ ತನ್ನ ಭವಿಷ್ಯ ಅರಸಿಕೊಂಡು ಬೇರೆ ಕಡೆ ಹೋಗಲು ತನ್ನ ಮರಿಗಳನ್ನು ಪ್ರೋತ್ಸಾಹಿಸುವಾಗ................ "

ನಾವು ನಮ್ಮ ಮಕ್ಕಳನ್ನು  
ಗೂಡಲ್ಲೇ ಇರಿ ಅಂದ್ರೆ...ತಪ್ಪು ಅದು ತಪ್ಪು!!!!!

"ನಾವು ನಮ್ಮ ಮಕ್ಕಳಿಗೆ ಹಂಬಲಿಸಿದಂಗೆ ಅವರು ಅವರ ಮಕ್ಕಳಿಗೆ ಹಂಬಲಿಸುತ್ತಾರೆ..."

"ನಾವು ತೆತ್ತ ಬೆಲೆ ಅವರು ತೆರುತ್ತಾರೆ...ಇದೆ ಅಲ್ಲವೇ ಜೀವನ.."

"ಇದು ಜೀವನ ಚಕ್ರ..ಮೇಲಿದ್ದವರು ಕೆಳಗೆ..ಕೆಳಗಿದ್ದರು ಮೇಲೆ...
ಆದ್ರೆ ಬರಿ ತಾತ್ಕಾಲಿಕ..ಬರಿ ತಾತ್ಕಾಲಿಕ.."

"ಮುಂಗಾರು ಮಳೆಯಲ್ಲಿ ಹಿಂಗಾರಿನ ಪೈರು ಕೊಚ್ಚಿ ಹೋಗುತ್ತದೆ..
ಹಿಂಗಾರಿನ ಮಳೆಯಲ್ಲಿ ಮುಂಗಾರು ಫಸಲು ತುಂಬಿ ಬರುತ್ತೆ..."

ಎಂಥ ನಿಗೂಡ ಈ ಪ್ರಕೃತಿ.........

No comments:

Post a Comment