Wednesday, July 13, 2011

ಅಜ್ಜಯ್ಯನ ಭೂಲೋಕ ಪ್ರಯಾಣ - ಒಂದು ಸಂಭಾಷಣೆ...

ಅಜ್ಜಿ ನಿನ್ನೆ ಬೆಳಿಗ್ಗೆ ಕಾಫಿ ಮಾಡಿ ಅಜ್ಜಯ್ಯನ ಹುಡುಕ್ತಾ ಇದ್ದರು...

ಅಜ್ಜಯ್ಯನ ಹಾಸಿಗೆ ರವೆ ಉಂಡೆಯ ತರಹ ಸುತ್ತಿ ಇಟ್ಟಿದ್ದರು..ಹಂಗಾಗಿ ಆಗಲೇ ಎದ್ದಿದ್ದಾರೆ ಅಂತ ಅಜ್ಜಿಗೆ ಗೊತ್ತಾಯ್ತು...

ಹುಡುಕ್ತಾ ಹುಡುಕ್ತಾ ಒಂದು ದಿನ ಕಳೆಯಿತು...

ಮಾರನೆ ದಿನ ಬೆಳಿಗ್ಗೆ ಅಜ್ಜಯ್ಯ ಖುಷಿಯಾಗಿ ಸ್ತ್ರೋತ್ರ ಹೇಳುತ್ತಾ ಮನೆಗೆ ಬಂದಾಗ...ಅಜ್ಜಿಗೆ ಸಹಜವಾಗೇ ನಸು ಕೋಪ...

"ಎಲ್ಲಿ ಹೋಗಿದ್ರಿ...ಕಾಫಿ ಕೊಡೋಣ ಅಂದ್ರೆ ನೀವೇ ಇಲ್ಲ..."

"ಹೌದು ಕಣ್ರೆ...ನಿನ್ನೆ ನಾಗರಾಜನ ಮನೆಗೆ ಹೋಗಿದ್ದೆ..."

"ಹೌದೆ ನನಗೆ ಹೇಳಲೇ ಇಲ್ಲ...ಏನು ಸಮಾಚಾರ...?"

"ನಿನ್ನೆಗೆ ನಾನು ನನ್ನ ದೇಹ ಬಿಟ್ಟು ೨೫ ವರ್ಷಗಳು ಕಳೆದವು...ನಾಗರಾಜನ ಮನೆಯಲ್ಲೇ ಅದರ ಕಾರ್ಯಕ್ರಮ ಇತ್ತು......

ದಿನ ಪತ್ರಿಕೆ ತಗೊಂಡು ಬರೋಣ ಅಂತ ಇಲ್ಲೇ,ಕಾಶ್ಯಪ ಋಷಿಗಳ ಮನೆ ಹತ್ತಿರ ಅಂಗಡಿಗೆ ಹೋಗಿದ್ದೆ...

ಅವಾಗ ತಿಳಿಯಿತು...ಹಂಗೆ ಹೊರತು ಬಿಟ್ಟೆ"

"ನನಗು ಒಂದು ಮಾತು ಹೇಳುವುದು ಅಲ್ವೇ...ನಾನು ಬರ್ತಾ ಇದ್ದೆ...ಆರು ತಿಂಗಳಾಯಿತು...ನನ್ನ ಮಕ್ಕಳನ್ನು ನೋಡಿ"

"ಹೋಗಲಿ ಬಿಡ್ರೆ...ಇನ್ನಾರು ತಿಂಗಳಿನಲ್ಲಿ ಹೋಗುವಂತೆ...ಅವಾಗ ನಾನು ಬರ್ತೀನಿ ನಿಮ್ಮ ಜೊತೆ ಕಣ್ರೆ"

"ಹೆಂಗಿದ್ದಾರೆ ನನ್ನ ಮಕ್ಕಳು....ಮೊಮ್ಮಕ್ಕಳು...ಮರಿ ಮೊಮ್ಮಕ್ಕಳು..."

"ಎಲ್ಲ ಖುಷಿ ಆಗಿದ್ದರೆ...ನನ್ನ ಮಕ್ಕಳು ಎಲ್ಲ ಸೇರಿದ ಕಡೆ ಬರಿ ನಮ್ಮ ಕೋರವಂಗಲ ವಿಚಾರನೇ ಮಾತಾಡ್ತಾ ಇರ್ತಾರೆ......

ಅದೇ ನನಗೆ ಇಷ್ಟವಾಗೋದು ...ನಾಗರಾಜ,ಕುಮಾರ ಸೇರಿ ಬಿಟ್ಟರೊಂತು ಮುಗಿಯಿತು...

ನನ್ನ ಬಗ್ಗೆ ಒಂದು ಏಕ-ಪಾತ್ರಾಭಿನಯ ಮಾಡಿ ಬಿಡ್ತಾರೆ...ಮಂಜಣ್ಣನಿಗೆ ಇವರಿಬ್ಬರ ಮಾತು ಕೇಳುವುದೇ ಒಂದು ಸಡಗರ"

ನನ್ನ ಮೊಮ್ಮಕ್ಕಳು,ಸೊಸೆಯಂದಿರು ಏನು ಕಮ್ಮಿ ಇಲ್ಲ..ಒಬ್ಬಬ್ಬರು ಒಂದು ಗ್ರಂಥ ಇದ್ದ ಹಾಗೆ...

ಪುಣ್ಯ ಮಾಡಿದ್ದೆ ಕಣ್ರೆ ಇಂಥ ಪರಿವಾರ ಪಡೆಯೋಕೆ..."

"ಹೌದು ಕಣ್ರೀ...ನನಗು ಖುಷಿ ಆಗುತ್ತೆ...ನನ್ನ ನೂರು ವಸಂತ ದಾಟಿದ ಸಂಭ್ರಮಕ್ಕೆ ಕಾಯುತ್ತ ಇದ್ದೀನಿ...

ಅವಾಗ..ನಮ್ಮ ಸಕಲ ಪರಿವಾರವನ್ನು ಒಂದೇ ಜಾಗದಲ್ಲಿ ನೋಡುವ ತವಕ.."

"ಯೋಚನೆ ಮಾಡಬೇಡ್ರೆ...ನಮ್ಮ ಮೊಮ್ಮಕ್ಕಳು ಛಲದಂಕ ಮಲ್ಲರು...ಮಾಡಿಯೇ ಮಾಡುತ್ತಾರೆ..."

"ಎಲ್ಲರಿಗು ಆಶೀರ್ವಾದ ಮಾಡಿ ಬಂದ್ರಿ ತಾನೇ...ನಮ್ಮ ವಂಶದ ವೃಕ್ಷ ಹೀಗೆ ಫಲ ಕೊಡುತ್ತ ಇರಲಿ ಎಂದು ಆಶೀರ್ವಾದ ಮಾಡೋಣ.............ಬನ್ನಿ ಸ್ನಾನ ಮಾಡಿ ತಿಂಡಿ ತಿನ್ನುವಿರಂತೆ...ದೋಸೆ...ಮತ್ತು ಬೆಣ್ಣೆ..ಹಾಗು ಚಟ್ನಿ ಮಾಡಿದ್ದೇನೆ...."

No comments:

Post a Comment