Tuesday, March 21, 2023

Lights...Camera... Reaction.... Golden Moments

 ಒಂದು  ಬಿಂದು.. ಅದರ ಸುತ್ತಲೂ ಅನೇಕ ಕಿರಣಗಳು ... ಬೆಳ್ಳಗಿದ್ದವು...ಈಗ  ಕೆಂಪಗಾಗಿದ್ದವು.. ನಾಚಿ ಕೆಂಪಾಗಿದ್ದವೋ.. ಬೆಳಕನ್ನು ಹರಿಸಿ ಹರಿಸಿ ನೆತ್ತರಿನ ವರ್ಣ ಬಂದಿತ್ತೋ ಗೊತ್ತಿಲ್ಲ.. ಒಟ್ಟಿನಲ್ಲಿ ಎಲ್ಲೆಲ್ಲೂ ಕೆಂಪು ಕೆಂಪು.. ಕಂಪು ಕಂಪು 

ಅದೊಂದು ಅರಳಿ ಕಟ್ಟೆ.. ಸುತ್ತಲೂ ಅನೇಕಾನೇಕ ಜೋಪಡಿಗಳು.. ಎಲ್ಲರಲ್ಲೂ ಶಾಂತಿ "ಶಾಂತಿ" ನೆಲೆಸಿದ್ದ ಪರಿಣಾಮ ಆ ಜಗತ್ತೇ ಶುಭ್ರವಾಗಿತ್ತು... ಹದಿನಾರು ಕಲೆಗಳು ತುಂಬಿದ್ದ ಆ ಜಗತ್ತು ಮನಮೋಹಕವಾಗಿತ್ತು. ಅರಳೀಕಟ್ಟೆಯಲ್ಲಿ ಒಬ್ಬರು ಗುಮಾಸ್ತರ ರೀತಿ ಪತ್ರಗಳನ್ನು ಬರೆದು ಬರೆದು ಒಂದು ಕಡೆ ಇಡುತ್ತಿದ್ದರು..ಅರ್ಧ ಶತಮಾನ ದಾಟಿ ಹತ್ತಾರು ವರ್ಷಗಳೇ ಕಳೆದಿತ್ತು.. ಆದರೆ ಮೊಗದಲ್ಲಿ ಏರು ಪ್ರಾಯದ ಲಕ್ಷಣ... ಅಪಾರ ಸಂಪತ್ತನ್ನು ಸಾಕು ಎಂದು ಆಪತ್ತಿಗೆ ಎಷ್ಟು ಬೇಕು ಅಷ್ಟು ಇಟ್ಟುಕೊಂಡು ಮಿಕ್ಕಿದ್ದನ್ನು ಇದ್ದ, ಇರುವ.. ಮುಂದೂ ಇರುವ ಜಗತ್ತಿಗೆ ಮೀಸಲಾಗಿತ್ತಿದ್ದರು.. ಹಾಗಾಗಿ ನಿನ್ನೆಯ ಯೋಚನೆಯಿಲ್ಲ..  ನಾಳಿನ ಬಗ್ಗೆ ಚಿಂತೆಯಿಲ್ಲ.. ಸುಖ ದುಃಖಗಳು ಸಂಗಮವಾಗಿದ್ದ ಸಮಯವದು.. 


ಅಜ್ಜ ಕೆಲವು ಪ್ರಶ್ನೆಗಳು ನಿಮಗೆ... ?

ಅನೀರೀಕ್ಷಿತವಾಗಿ ಬಂದ ದನಿಯತ್ತ ತಿರುಗಿದರು ಅಜ್ಜ... 

ತಲೆಯ ಮೇಲೊಂದು ಕಿರೀಟ.. ಹಣೆಯಲ್ಲಿ ಕುಂಕುಮ..ಎಡ ಕೈಯಲ್ಲಿ ಕಡಗ.. ಬಲಗೈಯಲ್ಲಿ ಕೈಗಡಿಯಾರ.. ತುಸು ಶ್ಯಾಮಲಾ ವರ್ಣ.. ನೀಟಾಗಿದ್ದ ಕ್ರಾಪಿನ ತಲೆ.. ಒಟ್ಟಿನಲ್ಲಿ ಒಮ್ಮೆ ನೋಡಿದರೆ  ಎಲ್ಲಿ ಸಿಕ್ಕರೂ ಹಲ್ಲು ಬಿಡುವಷ್ಟು ಸುಮಾರಾದ ಗುಣವುಳ್ಳ ಆ ಹುಡುಗ.. ಮೆಲ್ಲನೆ ತನ್ನ ಕೈಲಿದ್ದ ತನ್ನ ಮೂರನೇ ಕಣ್ಣಿನಿಂದ ಒಂದಷ್ಟು ಚಕ ಚಕ ಅಜ್ಜನ  ಫೋಟೋ ತೆಗೆದು.. ಅಜ್ಜನ  ಪಕ್ಕದಲ್ಲಿಯೇ ಕೂತ... 

ಏನಪ್ಪಾ ಶ್ರೀ.. ಎಲ್ಲರೂ ಬಾಬಾ ಅಂದರೆ ನೀನು ಅಜ್ಜ ಅಂತೀಯಲ್ಲ... 

ಅಜ್ಜ ಚಿನ್ನವನ್ನು ಚಿನ್ನ ಎಂದು ಹೇಳಿ ಅಭ್ಯಾಸ.. ಎಲ್ಲರೂ "ಬಾಬಾ" "ಬಾಬಾ" "ಬಾ .... ಬಾ... ಬಾಬಾ ಬಾಬಾ... "  ಅಂದಾಗ ನೀವು ಅಲ್ಲಿಗೆ ಹೋಗಿ ಬಿಡುತ್ತೀರಿ ... ನನ್ನ ಪ್ರಶ್ನೆಗಳು ನನ್ನಲ್ಲಿಯೇ ಉಳಿದು ಬಿಡುತ್ತದೆ.. ಅದಕ್ಕೆ ಅಜ್ಜ ಎಂದರೆ ಏನೋ ಸಂತೋಷ.. ಅಪ್ಪನಿಗಿಂತ ಹೆಚ್ಚು ಕಾಲ ನೋಡಿದವರು ಅಜ್ಜ.. ಹಾಗಾಗಿ ಬಾಬಾ ಎಂದರೆ ಅಪ್ಪ ಆಗುತ್ತಾರೆ.. ಆಗ ಜ್ಞಾನದ ಭಂಡಾರ ಒಂದು ನದಿಯಾದರೆ.. ಅಜ್ಜ ಎಂದಾಗ ಜ್ಞಾನದ ಹರಿವು ಸಮುದ್ರದಷ್ಟು ಹಾಗಾಗಿ ಅಜ್ಜ ಅಂತ ಕರೆದಾಗ ಜ್ಞಾನದ ಸಾಗರವೇ ಬಂದ ಹಾಗೆ  ಅನುಭವ ಆಗುತ್ತದೆ.... 

ಸರಿ ಶ್ರೀ ಮಾತಲ್ಲಿ ನಿನ್ನ ಗೆಲ್ಲೋಕೆ ಆಗುತ್ತಾ.. ಸರಿ ಮುಂದುವರೆಸು.. 

 ಈ ಮಾತಿಗೆ ಅಜ್ಜನ ಕಾಲಿಗೆ ನಮಸ್ಕರಿಸಿ "ಅಜ್ಜ ನಿಮಗೆ ಮೂರು ದೃಶ್ಯಗಳನ್ನು ತೋರಿಸುತ್ತೇನೆ.. ಆ ಮೂರು ದೃಶ್ಯಗಳನ್ನು ಹೆಣೆದು ನನಗೆ ಇದರ ಒಳ ಅರ್ಥ ಹೇಳಬೇಕು.. ಆ ಆ ಅರ್ಥಗಳಲ್ಲಿಯೇ ನನ್ನ ಪ್ರಶ್ನೆಗಳು ಅಡಗಿ ಕೂತಿರುತ್ತವೆ.. ಅದೇ ನನಗೆ ಉತ್ತರವಾಗುತ್ತದೆ.. ಓಕೇ ನಾ ಅಜ್ಜ

ಕಮಾನ್ ಗೋ ಆನ್ ಶ್ರೀ.. 

ಅಜ್ಜ ನನ್ನನ್ನು ಆತ್ಮೀಯ ಅಂತ ಅಂದುಕೊಂಡವರು ನನ್ನನ್ನು ಶ್ರೀ ಅಂತ ಕರೆಯುತ್ತಾರೆ.. ಅದಕ್ಕೆ ನಿಮಗೆ ಧನ್ಯವಾದಗಳು... 

ಶ್ರೀ ಮುಂದುವರೆಸು

******

ದೃಶ್ಯ ೧ : 

ತುಂಬಿದ್ದ ಸಭಾಂಗಣ.. ವೇದಿಕೆಯ ಮೇಲೆ ಕೂತಿದ್ದವರು ಕೆಲವರು.. ಎಲ್ಲರ ಮೊಗದಲ್ಲಿ ಮಂದಹಾಸ... ಏನೋ ಸಾಧಿಸಿದ ಖುಷಿ.. ಏನೋ ಮನದಲ್ಲಿ ನೆಮ್ಮದಿ .. ಓಂ ಶಾಂತಿ ಎನ್ನುತ್ತಿದ್ದ ತುಟಿಗಳು.. ಶ್ರೀ ಅಣ್ಣ ನೀವು ಹಾ ನೀವೇ ನೀವೇ  ಬನ್ನಿ ಬನ್ನಿ.. ಕರುನಾಡ ತಾಯಿ ಭುವನೇಶ್ವರಿಯವರ ಅಶರೀರವಾಣಿ.. ಸುಮ್ಮನೆ ಕೂತಿದ್ದವರನ್ನು ಬಿಡದೆ.. ವೇದಿಕೆಗೆ ಕರೆಸಿ.. ಒಂದು ಶಾಲು.. ಆಶೀರ್ವಾದ ಪೂರಕ ತಿಲಕ.. ಪುಷ್ಪವೃಷ್ಟಿ.. ... ಮನದಲ್ಲಿಯೇ ಕಣ್ಣು ಮುಚ್ಚಿಕೊಂಡು ಎಲ್ಲಾ ನಿನ್ನ ಚರಣಕಮಲಗಳಿಗೆ ಅರ್ಪಿತಾ ಬಾಸ್.. ... ಆ ಸಭಾಂಗಣದಲ್ಲಿದ್ದ ಬಾಸ್ ಚಿತ್ರದಲ್ಲಿದ್ದ ಚಿತ್ರದಿಂದ ಕೊಳಲ ನಾದ ಕೇಳಿ ಬಂತು.. 








ದೃಶ್ಯ ೨

 ರಾತ್ರಿ ಹನ್ನೊಂದು ಐವತ್ತೊಂಭತ್ತು... ಹನ್ಯಾ.. ಹನ್ಯಾ.. ಬನ್ನಿ ಬನ್ನಿ.. ಅಪ್ಪ ಅಪ್ಪ ಬಾರಪ್ಪ.. ಚಿಕ್ಕಮಕ್ಕಳಂತೆ ಕುಣಿಯುತ್ತ ಬಂದು ಪ್ರೀತಿಗೆ ಸೀಮೆಯೆ ಇಲ್ಲಾ ಎಂದು ತೋರಿಸಿದ ಮನೋನಾಯಕಿ.. ನಿಮ್ಮಂತೆ ನಾನು ಯಾವಾಗಲೂ ಶೀತಲ ಎಂದು ಬಂದ ತನುಜಾತೆ ... ಅವರ ಪ್ರೀತಿ ಪೂರ್ವಕವಾಗಿ ತಮಗೆ  ರೀತಿಯಲ್ಲಿ ಸಂಭ್ರಮಾಚರಣೆ ಮಾಡಿದರು .. ಈ ಪ್ರೀತಿಯೇ ಏನು ಹೇಳಲಿ.. ಬಾಸ್ ಇದೆಲ್ಲವೂ ನೀ ಕೊಟ್ಟ ವರ ಎಂದೇ... ದೇವರ ಮನೆಯಲ್ಲಿ ಅರ್ಜುನನಿಗೆ ದಾರಿ ತೋರಿಸುವ ಚಿತ್ರದಿಂದ ನವಿಲು ಗರಿ ಗಾಳಿ ಬೀಸಿತು.. 






ದೃಶ್ಯ ೩ 

ಆಗಲೇ ಎಂಟೂವರೆ  ಆಗಿತ್ತು.. ವಯಸ್ಸು ದೇಹಕ್ಕೆ ಹೌದು.. ಆದರೆ ವಯಸ್ಸನ್ನು ಮೀರಿದ ಉತ್ಸಾಹ.. ಮನೆಯಲ್ಲಿ ಹತ್ತಾರು ಅಡೆತಡೆಗಳು, ತೊಂದರೆಗಳು, ಕಷ್ಟ ಕಾರ್ಪಣ್ಯಗಳಿದ್ದರೂ.. ಒಬ್ಬರಲ್ಲೂ ಕುಂದದ ಉತ್ಸಾಹ.. ತಡವಾದರೇನಂತೆ ಕಾಯುತ್ತೀವಿ ಎನ್ನುವ ಪ್ರೀತಿಯ ಹಠ.. ಮೆಟ್ಟಿಲನ್ನು ದುಡುದುಡು ಹತ್ತುತ್ತ ಬಂದ... ಶ್ರೀಕಾಂತಣ್ಣ ಜನುಮದಿನದ ಶುಭಾಶಯಗಳು... ಶ್ರೀಕಾಂತ್ ಭಾಯ್ ಜನುಮ್ ದಿನ್ ಮುಬಾರಕ್.. ಶ್ರೀ ಭಾಯ್ ಸದಾ ಖುಷಿಯಾಗಿರಿ.. ಶ್ರೀಕಿ ಹ್ಯಾಪಿ ಬರ್ತಡೇ .. ಅಣ್ಣಯ್ಯ ಹ್ಯಾಪಿ ಬರ್ತಡೇ.. ಶ್ರೀಕಾಂತವರೇ ಜನುಮದಿನದ ಶುಭಾಶಯಗಳು.. ಈ ಶುಭಾಶಯಗಳ ಮಳೆ ತುಸು ಹೆಚ್ಚಾಗಿಯೇ ಬಂದಿತ್ತು.. 

ಈಗ ನಾವೆಲ್ಲರೂ ಈ  ಮಹಾನ್ ಆತ್ಮ ಶ್ರೀಕಾಂತಣ್ಣ ಅವರಿಗೆ ಜನುಮದಿನದ ಶುಭಾಶಯಗಳನ್ನು ಕೋರೋಣ.. ನಿಮಗೆ ಭಗವಂತ ಎಲ್ಲಾ ಸುಖ ಸಂತೋಷ ನೆಮ್ಮದಿಗಳನ್ನು ಸದಾ  ಅಂತ ಹಾರೈಸುತ್ತೇವೆ... ಇದು ಶ್ರೀಕಾಂತಣ್ಣ ಅವರ ಐವತ್ತನೇ  ಹುಟ್ಟು ಹಬ್ಬ.. ಇಂತಹ ಸುಂದರ ದಿನವನ್ನು ನಮ್ಮ ಜೊತೆ ಕಳೆಯುತ್ತಾ ಇರುವುದು ನಮಗೆ ಸಂತೋಷ .. ಅಂತ ಹೇಳಿ ತಲೆಗೆ ಒಂದು ಪೇಟಾ ಅರ್ಥಾತ್ ಕಿರೀಟ.. ಕುತ್ತಿಗೆಗೆ ಹಾರ.. ಹೆಗಲುಗಳಿಗೆ ಶಾಲು .. ಹಣೆಗೆ ಪ್ರೀತಿಯ ತಿಲಕ.. ಹೂವಿನ ಮಳೆ... 

ಇಂತಹ ಸುದಿನವನ್ನು ಕಂಡ ಮನಸ್ಸು ಇದು ನನ್ನ ಭಾಗ್ಯವೇ.. "ಸೌಭಾಗ್ಯ"ವೇ  .. ಮನಸ್ಸು ತುಂಬಿ ಬಂದಿತ್ತು.. ಎಲ್ಲರೂ ಒಬ್ಬೊಬ್ಬರಾಗಿ ಬಂದು ಮತ್ತೊಮ್ಮೆ ಶುಭಾಶಯಗಳನ್ನು ಕೋರಿದ್ದು ಮನದಲ್ಲಿ ಪ್ರೀತಿಯ ಸಾಗರವೇ ಹರಿಯುತಿತ್ತು.. ಯಾರಿಗೂ ಶ್ರೀ ತಡವಾಗಿ ಬಂದ ಎಂಬ ಬೇಸರವಿರಲಿಲ್ಲ.. ಇವತ್ತು ತಡವಾದರೂ ಸರಿ ಶ್ರೀಕಾಂತಣ್ಣ ಅವರಿಗೆ ಶುಭ ಕೋರಿಯೇ  ಹೋಗೋದು ಅಂತ  ಹಿರಿಯ ಸಹೃದಯಗಳು,  ಸಹೋದರಿಯರು ಹಠ ಹಿಡಿಡಿದ್ದರು ಎನ್ನುವ ಸುದ್ದಿ ಕೇಳಿದಾಗ ಮನಸ್ಸು ಮೂಕವಾಗಿತ್ತು..  ಬಾಸನ್ನು ನೋಡಬೇಕು ಎಂದು ಸುತ್ತಮುತ್ತಲೂ ನೋಡಿದೆ.. ಮುರುಳಿಧಾರಿಯಾಗಿ ಒಂದು ಟೇಬಲಿನ ಮೇಲೆ ಕಾಲುಗಳನ್ನು ಅಡ್ಡವಾಗಿ  ಹಾಕಿಕೊಂಡು ನಸುನಗುತ್ತಾ ನಿಂತಿದ್ದ ಬಾಸನ್ನು ನೋಡಿ... "ಬಾಸ್ ಏನಿದು ನಿನ್ನ ಲೇಲೆ.. " ಎಂದ.. 

ಬಾಸ್ ಹ್ಯಾಪಿ ಬರ್ತ್ ಡೇ ಶ್ರೀ.. ಅರ್ಜುನ ಆದ ಮೇಲೆ ನನ್ನನ್ನು ಇಷ್ಟು ಹಚ್ಚಿಕೊಂಡ ಕೆಲವರಲ್ಲಿ ನೀನು ಒಬ್ಬ.. ಯೋಚನೆ ಬೇಡ ನಿನ್ನ ಸುವರ್ಣ ವರ್ಷ ಸುವರ್ಣಮಯವಾದ ಸಂತಸಗಳನ್ನು ತಂದು ಕೊಡುತ್ತದೆ.... ಇದು ನನ್ನ ಮಾತು ಹಾಗೂ ಆಶೀರ್ವಾದ 

ಬಾಸ್ ಎಲ್ಲ ನಿನ್ನ ಕೃಪೆ.. 
ಕೊಡೋನು ನೀನೆ.. 
ತಗೋಳ್ಳೋನು ನೀನೆ 
ಕೊಟ್ಟು  ಮತ್ತೆ ಉದ್ಧರಿಸುವವನು ನೀನೆ... !!! 
ನಾ ನಿನ್ನ ಮುಂದೆ ಹುಲುಮಾನವ ... ಧನ್ಯೋಸ್ಮಿ ಬಾಸ್.. 














*******

ಮೈ ಮರೆತಿದ್ದ ಅಜ್ಜನನ್ನು ಅಲುಗಾಡಿಸಿ ಅಜ್ಜ ಅಜ್ಜ ಅಜ್ಜ್ಯೋ... ಏನ್ ಆಯ್ತು.. 


ಏನಪ್ಪಾ ಶ್ರೀ ಇದು.. ದೃಶ್ಯ ತೋರಿಸುತ್ತೀನಿ ಅಂತ ಬ್ರಹ್ಮಾಂಡವನ್ನೇ ತೋರಿಸಿದೆ.. ನೋಡಪ್ಪ ಇದರ ತಾತ್ಪರ್ಯ ಇಷ್ಟೇ.. ಮುರುಳಿಯನ್ನು ಊದಿದಾಗ ಆಕಳು, ದನ.. ಕರುಗಳು ಬರುತ್ತವೆ.. ಮುರುಳಿಯನ್ನು ಓದಿದಾಗ  ಶಾಂತಿ ನೆಮ್ಮದಿ ಸಂತೋಷಗಳು ಮನದೊಳಗೆ ಬರುತ್ತವೆ.. ಜಗತ್ತು ಒಂದು ಕನ್ನಡಿಯಿದ್ದ ಹಾಗೆ.. ನಗುತ್ತಾ ನೋಡು.. ಪ್ರತಿಬಿಂಬ ಕೂಡ ನಗುತ್ತಿರುತ್ತದೆ.. ಬದುಕು ಒಂದು ತಕ್ಕಡಿ.. ಒಂದು ಕಡೆ  ನೀನು ಕೂತಿರುವೆ. ಇನ್ನೊಂದು ಕಡೆ ನೀ ಸಂಪಾದಿಸಿದ ಆಸ್ತಿ ಅರ್ಥಾತ್ ನಿನ್ನನ್ನು ಇಷ್ಟಪಡುವ ಮಂದಿ ಇರುತ್ತಾರೆ.. ಯಾವಾಗ ಅದು ಸಮಬಲವಾಗುತ್ತದೆಯೋ ಆಗ ಬದುಕು ಪ್ರೀತಿ ಸ್ನೇಹಗಳ ಸಂಗಮ.. ಕಲೆಗಳು ಏರುತ್ತಾ ಹೋದ ಹಾಗೆ ಹೇಗೆ ಚಿತ್ರ ಸುಂದರವಾಗುತ್ತದೆಯೋ ಹಾಗೆ ಸ್ನೇಹದ ಮಮತೆಯ ನಿನ್ನನ್ನು ಬಂದಿಸಿದಷ್ಟು ನೀನು ಇನ್ನಷ್ಟು ನೆಮ್ಮದಿ ಕಾಣುತ್ತೀಯೆ... ಮುರುಳಿಯಲ್ಲಿ ಅನೇಕಾನೇಕ ರಂಧ್ರಗಳಿರುತ್ತವೆ.. ಅದು ಮುರುಳಿಯನ್ನು ಇನ್ನಷ್ಟು ಸುಂದರ ಮಾಡುವುದಷ್ಟೇ ಅಲ್ಲದೆ.. ನಾದವನ್ನು ಸೃಷ್ಟಿಸುತ್ತದೆ.. ಬದುಕಲ್ಲಿ ಏರಿಳಿತ ಸಹಜ..  ಅವು ಮುರುಳಿ ಅರ್ಥಾತ್ ಕೊಳಲಿನಲ್ಲಿರುವ ರಂಧ್ರಗಳ ಹಾಗೆ ಬದುಕಿನಲ್ಲಿ ಹಿತವಾದ ಸಂಗೀತವನ್ನು ತುಂಬುತ್ತದೆ.. 


ಅಜ್ಜ ಸೂಪರ್ ಸೂಪರ್.. ಅದಕ್ಕೆ ನಿನ್ನನ್ನು ಅಜ್ಜ ಅನ್ನುವುದು.. ಓ ಕ್ಷಮಿಸಿ  ಏಕವಚನ ಬಂದುಬಿಟ್ಟಿತು.. 

ಹೇ ಶ್ರೀ ಪ್ರೀತಿಯಿದ್ದ ಕಡೆ ಏಕವಚನವೇ ಸರಿ.. ನಿನಗೆ ಶುಭವಾಗಲಿ ಹಾಗೆ ಸುವರ್ಣ ಸಂಭ್ರಮದ ವರ್ಷದಲ್ಲಿ ಹರ್ಷ ಸದಾ ನಿನದಾಗಲಿ.. ನಿನಗೆ ಮತ್ತು ನಿನ್ನ ಸೀಮೆಯಿಲ್ಲದ ಸೀಮೆಗೆ ಶೀತಲವಾದ ಐಶ್ವರ್ಯಕ್ಕೆ ಶುಭವಾಗಲಿ.. ಮತ್ತೆ ನನ್ನ ನೆನಪು ಮತ್ತು ಆಶೀರ್ವಾದ ಸದಾ ಇರಲಿ.. 

ಈ ಸಂಭ್ರಮದಲ್ಲಿ ದೂರದಿಂದ ಬಂದಿದ್ದ ನಿನ್ನ ಆತ್ಮೀಯ ಗೆಳೆಯರು ಶಶಿ, ವೆಂಕಿ ತಂದಿದ್ದ ಕೇಕು ನಿನಗಾಗಿ ಕಾಯುತ್ತಿದೆ.  ಮನೆಯಲ್ಲಿ ಅದನ್ನು ತಿಂದು ಸಂಭ್ರಮಿಸು.. ಅವರು ಮಾಡಬೇಕಿಂದಿದ್ದ ರೀತಿಯಲ್ಲಿ ಆಗಲಿಲ್ಲವಾದರೂ.. ನಿನ್ನ ಸುವರ್ಣ  ಸಂಭ್ರಮ ಇಷ್ಟು ಭರ್ಜರಿಯಾಗಿ ನೆಡೆದದ್ದು ಅವರಿಗೂ ಸಂತೋಷ ತಂದಿದೆ.. ಅವರಿಗೂ ಶುಭ ಹಾರೈಕೆಗಳು.. 



ಧನ್ಯವಾದಗಳು ಅಜ್ಜ.. ನನ್ನ ಬದುಕಿನ ಮುಖ್ಯ ವರ್ಷಗಳನ್ನು ಜೊತೆ  ಜೊತೆಯಲ್ಲಿ ಕಳೆದಿದ್ದೇವೆ.. ಅಂದು ಇದ್ದ ಸ್ನೇಹ ಇಂದಿಗೂ ಎಂದಿಗೂ ಚಿರವಾಗಿ ಸದಾ ಇರುತ್ತದೆ..  

*****

ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾ ಪೂರಾ.. ಐವತ್ತನೆಯ ಸಂಭ್ರಮಾಚರಣೆ ಅರಿವಿಲ್ಲದೆ ತುಸು ದೊಡ್ಡದಾಗಿಯೇ  ನೆರವೇರಲು ಯೋಜನೆ ಹೆಣೆದ ನನ್ನ ಮನೋನಾಯಕಿ ಸೀಮು  ಅದ್ಭುತ ಗೆಳತಿಯಾಗಿ ನನ್ನ ಮಗಳು ಶೀತಲ್.. ದೂರ್ ಗಗನ್ ಕಿ ಚಾವೋ ಮೇ ಇಂದ ಐಶ್ವರ್ಯ..  ಹೆಣ್ಣು ಕೊಟ್ಟು ಕಣ್ಣು ಕೊಟ್ಟ ಅತ್ತೆ ಮಾವ.. ಮಾಯೆಯನ್ನು ಗೆದ್ದ ಅಜಿತ.. ನನ್ನ ಪ್ರೀತಿಯ ಕುಟುಂಬದ ಅಕ್ಕ, ಅಣ್ಣಅತ್ತಿಗೆ ತಮ್ಮ.. ಬಂಧುಗಳು.. ಜೊತೆಗೆ ನನ್ನ ಶಾಲಾದಿನಗಳ ಸಹಪಾಠಿಗಳು ಶಶಿ,  ಜೆಎಂ, ಲೋಕಿ, ಪ್ರತಿಭಾಕ್ಕಯ್ಯ, ಸೌಮ್ಯ, ಸಮತಾ.. ಇವರ ಜೊತೆ ಸುಧಾ, ನಂದಿನಿ, ಶೋಭನ್  ಬಾಬು, ಸತೀಶ, ಪ್ರಕಾಶ.. ಹಾಗೂ ನನ್ನ ಕಾಲೇಜಿನ ಗೆಳೆಯರು, ಸಹೋದ್ಯೋಗಿಗಳು... ಇವರೆಲ್ಲರ ಜೊತೆಯಲ್ಲಿ ತಾಯಿ, ಅಕ್ಕ, ತಂಗಿ, ಗೆಳತೀ ಹೀಗೆ ಯಾವುದೇ ಬಂಧದಲ್ಲೂ ಸಿಗದ ಸಾಕ್ಷತ್ ದೇವಿ ರೂಪ ಸತೀಶ್...  ಶ್ರೀ ನಿಮ್ಮ  ಬರವಣಿಗೆಯ ಅಭಿಮಾನಿ ನಾನು.. ಎಂದು ಬದುಕಿನ ಪ್ರತಿಹಂತದಲ್ಲೂ ಇರುವ ಕೊಟ್ಟ ದೇವರು ವರ ನಿವೇದಿತಾ ಚಿರಂತನ್....  ಸುಮಾರು ಇಪ್ಪತ್ತೈದು ವರ್ಷಗಳಿಂದ ಬದುಕಿನ ಪ್ರತಿ ಹಂತದಲ್ಲೂ ಸ್ಫೂರ್ತಿ ತುಂಬಿರುವ ನನ್ನ ಮುದ್ದು ತಂಗಿ ಗೀತಾ ಕೃಷ್ಣನ್....  ಜನುಮದಿನದಂದು ದೂರದೂರಿನಿಂದ ಕರೆ ಮಾಡಿ ಹರಸಿದ ಅಜಾದ್ ಸರ್, ಬಾಲೂ ಸರ್.. ಇಲ್ಲೇ ಇರುವ ಬದರಿ ಸರ್.. ಅಸಂಖ್ಯಾತ ಪ್ರೀತಿಯ ಸ್ನೇಹಿತರು, ತಂಗಿಯರು ಎಲ್ಲರಿಗೂ ಹೇಳೋದು ಒಂದೇ ಮಾತು.. 

ಎಂದರೋ ಮಹಾನುಭಾವುಲು ಅಂದರೀಕಿ ವಂದನಮೂ... 

ಇಷ್ಟೆಲ್ಲಾ ಸರಿ.. ಇನ್ನೊಬ್ಬರು ಇದ್ದಾರೆ.. ನನ್ನ ಮನವನ್ನು ಅರ್ಥ ಮಾಡಿಕೊಳ್ಳುವುದಷ್ಟೇ ಅಲ್ಲ.. ಹೆಜ್ಜೆಗೆ ಹೆಜ್ಜೆ ಸೇರಿಸುವ.. ಹಾಡಿಗೆ ಹಾಡು ಕೂಡಿಸುವ.. ಹೃದಯದ ಬಡಿತಕ್ಕೆ  ತಾಳ ಸೇರಿಸುವ.. ನೀವು ಹೇಳೋದೇ ಬೇಡ .. ನಾ ಮಾಡುತ್ತೇನೆ ಎಂದು ಹೇಳುವುದಷ್ಟೇ ಅಲ್ಲದೆ.. ಅಂದುಕೊಂಡದ್ದಕ್ಕಿಂತ  ಒಂದು ಕೈ ಮೇಲೆ ಮಾಡಿ ತೋರಿಸುವ ಭಗವಂತ ನೀಡಿರುವ ಅದ್ಭುತ ಗೆಳೆಯ ನೀವು ಎನ್ನುತ್ತಾ ಮನದಲ್ಲಿ ಮನೆಮಾಡಿರುವ ನನ್ನ ಪ್ರೀತಿಯ ಸೀಮು ಈ ಸುವರ್ಣ ವರ್ಷವನ್ನು ಇನ್ನಷ್ಟು ಹೊಳಪಿನ ಸಂಭ್ರವಾಗಿ ಮಾಡಿದ್ದಾಳೆ.. ಅವಳಿಗೆ ಸಹಸ್ರ ಪ್ರಣಾಮ್ ದಂಡವತ್ !!!

Friday, March 17, 2023

ಕಗ್ಗಂಟಿನ ಕರದಂಟು..ಡಿವಿಜಿ ಅಜ್ಜ

 ಬ್ಯುಗಲ್ ರಾಕ್ ಅರ್ಥಾತ್  ಕಹಳೆ ಬಂಡೆಯ ಹತ್ತಿರ ಕೂತಿದ್ದೆ.. ಡಿವಿಜಿ  ಅಜ್ಜ ಒಂದು ಛತ್ರಿಯ ಕೆಳಗೆ ಬಂಗಾರದಂತಹ ರವಿ ಕಿರಣಗಳನ್ನು ಆಸ್ವಾದಿಸುತ್ತಾ ಕುಳಿತಿದ್ದರು.. ಸ್ವಲ್ಪ ಹೊತ್ತಿನ ಮುಂಚೆ ವಿದ್ಯಾರ್ಥಿ ಭವನದ ಘಮ ಘಮ ಮಸಾಲೆ ದೋಸೆಯ ಸ್ವಾಧ ಇನ್ನೂ ನಾಲಿಗೆಯ ಮೇಲೆ ಕುಣಿಯುತಿತ್ತು.. 


ಕ್ಷಣ ಕ್ಷಣಕ್ಕೂ ಕಹಳೆ ಬಂಡೆಯ ದ್ವಾರದತ್ತ ಕಣ್ಣು ಹಾಯಿಸುತ್ತಿದ್ದರು. ಯಾರದೋ ಬರುವಿಕೆಯ ನಿರೀಕ್ಷೆಯಲ್ಲಿದ್ದರು.. 

ಅನತಿ ಕ್ಷಣ..  ಶ್ವೇತ ವಸ್ತ್ರಧಾರಿ... ನಗುಮೊಗದ ಉದ್ದ ನಾಮದವರೊಬ್ಬರು.. ಅರೆ ಇವರು ನಮ್ಮವರು ಅಪ್ಪ ಅಂದರೆ ಹೀಗಿರಬೇಕು ಎನಿಸುವರೊಬ್ಬರು.. ನಾ ಬದುಕಿ ಅಭಿಮಾನದಿಂದ  ಎನ್ನುವರೊಬ್ಬರು ಬಂದರು.. ಆಗ ನೆಡದದ್ದೆ ಈ ಸಂಭಾಷಣೆ.. 

ಅಲ್ರಪ್ಪ.. ಇವ ಮತ್ತೆ ನಮ್ಮನ್ನೆಲ್ಲ ಅಕ್ಷರಗಳಲ್ಲಿ ಬಂದಿಸೋಕೆ ಹೊರಟಿದ್ದಾನೆ.. ನನ್ನ ಬಗ್ಗೆ  ಹೇಳಿ ವರ್ಷಗಳೇ ಆಯ್ತು.. ಅಲ್ಲಿಯೇ ಅದು ಕುಂಟುತ್ತಿದೆ.. ಒಂದೆರಡು ಭಾಗಗಳು ಬಂದವು.. ನಂತರ ಸದ್ದಿಲ್ಲ..  ಈಗ ಮತ್ತೆ ಸಾಹಸ ಅನ್ನುತ್ತಿದ್ದಾನೆ.. ಎನ್ರಪ್ಪ ಮಾಡೋದು.. ಅಂದ ಹಾಗೆ ಅಜ್ಜ ನಿಮಗೆ ಜನುಮದಿನದ ಶುಭಾಶಯಗಳು.. !


ನೋಡಿ ಅವ ಮಾಡೋದು ಮಾಡಲಿ.. ನಮ್ಮ ಆಶೀರ್ವಾದ ಅವನ ಮೇಲೆ ಇರಲಿ ಅಷ್ಟೇ.. ನನ್ನ ಬಗ್ಗೆ ಅಂತಲೂ  ಹೇಳಿದ್ದಾನೆ ಆದರೆ ಶುರು  ಮಾಡಿಯೇ ಇಲ್ಲ... ಆದರೆ ನಂಬಿಕೆಯೇ ದೇವರು.. ಕಾಯೋಣ  ನಾವೆಲ್ಲಾ ಅವನೊಳಗೆ ಅವನ ಬರವಣಿಗೆಯಲ್ಲಿ ಬಂದೆ ಬರುತ್ತೇವೆ.. ಡಿವಿಜಿ ಅಜ್ಜ ನಿಮಗೆ ಜನುಮದಿನದ ಶುಭಾಶಯಗಳು.. !


ಅಭಿಮಾನಿ ದೇವರುಗಳಿಗೆ ನಮಸ್ಕಾರ.. ಎಲ್ಲರೂ ಕ್ಷೇಮವೇ.. ಯೋಚಿಸಬೇಡಿ.. ಅವನಿಗೆ ಐವತ್ತು ಆಯಿತು.. ಆದರೆ ನನ್ನ ಬಗ್ಗೆ ನಲವತ್ತೈದರಲ್ಲಿಯೇ ಅಟಕಾಯಿಸಿಕೊಂಡು ಕೊಂಡು ಕೂತಿದ್ದಾನೆ.. ಆದರೆ ಎಲ್ಲರನ್ನು ಸಲಹುವ ಭಗವಂತ  ಭಗವಂತ ಇದ್ದ ಹಾಗೆ.. ನಮ್ಮೆಲ್ಲರ ಸಿನಿಬದುಕು ಅವನ ಅಕ್ಷರಗಳಲ್ಲಿ ಬಂದೆ ಬರುತ್ತದೆ .. ತಲ್ಲಣಿಸದಿರು ಕಂಡ್ಯ ತಾಳು ಮನವೇ.. ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ ಅಂತ ಕನಕದಾಸರು ಹೇಳಿಲ್ಲವೇ... ಶ್ರೀ ಗುಂಡಪ್ಪನವರಿಗೆ ಜನುಮದಿನದ ಶುಭಾಶಯಗಳು..  

ಎಲ್ಲರಿಗೂ ನಮಸ್ಕಾರ.. ಅಜ್ಜ ಇಲ್ಲಿಯೇ ಇದ್ದಾರೆ ಅಜ್ಜ ನಮಸ್ಕಾರ.. ನಿಮ್ಮ ಜನುಮದಿನಕ್ಕೆ ಶುಭಾಶಯಗಳು.. ಅಜ್ಜ ನಿಮ್ಮಿಂದ ನನಗೆ ಈ ಲೋಕದಲ್ಲಿ ಒಂದು ಹೆಸರಾಯಿತು.. ಅಂದುಕೊಂಡಿದ್ದ  ಮುಗಿಸಿದೆ ಎನ್ನುವ ತೃಪ್ತಿ ನನ್ನದು.. ಯುಗಯುಗಕ್ಕೂ ಸಲ್ಲುವ ನಿಮ್ಮ ಬೆಲೆಕಟ್ಟಲಾಗದ ಅಕ್ಷರಗಳನ್ನು ಉಪಯೋಗಿಸಿಕೊಂಡು ಅದಕ್ಕೊಂದು ಚೌಕಟ್ಟು ಹಾಕಿದೆ ಎನ್ನುವ ನಂಬಿಕೆ ನನ್ನದು.. ನನ್ನ ಪ್ರೀತಿಯ ಹುಡುಗ ಇವನು..  ಖಂಡಿತ ಏನೋ ಮಾಡೋಕೆ ಹೊರಟಿದ್ದಾನೆ.. ನನ್ನ ಸತತ ನಾಲ್ಕು ಜನುಮದಿನಗಳಿಗೆ ನಿಮ್ಮನ್ನು ಅಕ್ಷರ ರೂಪದಲ್ಲಿ ಕರೆದುಕೊಂಡು ಬಂದು ಆಶೀರ್ವಾದ ಕೊಡಿಸಿದ ಹುಡುಗ ಇವನು.. ಇವನ ಪ್ರಯತ್ನಕ್ಕೆ ನಿಮ್ಮ ಆಶೀರ್ವಾದ ಇರಲಿ ಅಜ್ಜ.. 

ಅಲ್ಲಿಯ ತನಕ ಸುಮ್ಮನೆ ಎಲ್ಲರ ಮಾತನ್ನು  ಕೇಳುತಿದ್ದ ಅಜ್ಜ.. ಮೆಲ್ಲನೆ ನಕ್ಕು.. ಇಳಿಯುತ್ತಿದ್ದ ಕನ್ನಡಕವನ್ನು  ಸರಿಮಾಡಿಕೊಂಡು.. ಬಾಲಣ್ಣ (ಅಭಿಮಾನ್ ಸ್ಟುಡಿಯೋದ ಬಾಲಕೃಷ್ಣ), ರಾಜಣ್ಣ (ಕರುನಾಡಿನ ಅಣ್ಣಾವ್ರು ಶ್ವೇತಾ ವಸ್ತ್ರಧಾರಿ), ಅಶ್ವಥ್ (ಅಪ್ಪ ಅಂದರೆ ಹೀಗಿರಬೇಕು ಎಂದು ಬೆಳ್ಳಿ ಪರದೆಯ ಮೇಲೆ ತೋರಿಸಿದ ಅಶ್ವಥ್), ಮಗು ರವಿ (ಕಗ್ಗ ದ ರಸಧಾರೆ ಹರಿಸಿದ ರವಿ ತಿರುಮಲೈ ನಾಮಧಾರಿಯಾಗಿ) ಎಲ್ಲರಿಗೂ ಶುಭ ಆಶೀರ್ವಾದಗಳು.. ನಿಮ್ಮ ಅಭಿಮಾನ.. ನಿಮ್ಮ ಹೆಮ್ಮೆ.. ನಿಮ್ಮ ಆತ್ಮೀಯತೆ..ನಿಮ್ಮ ಪ್ರೀತಿ ನನ್ನನ್ನು ಈ ಲೋಕದಲ್ಲಿ ಜೀವಂತವಾಗಿರಿಸಿದೆ..  ಆಗಲಿ ನೀವೆಲ್ಲ ಹೇಳಿದ ಹಾಗೆ ನನ್ನ ಆಶೀರ್ವಾದಗಳು ಇದ್ದೆ ಇರುತ್ತವೆ.. ಈ ಹುಡುಗನಿಗೆ ಶುಭಕೋರೋಣ.. ಹಾಗೆಯೇ  ನಿಮ್ಮೆಲ್ಲರ ಶುಭಾಶಯಗಳು ನನ್ನ  ಸ್ವರ್ಗದ ಬದುಕಿಗೆ ಸ್ಫೂರ್ತಿ ಕೊಡುತ್ತಿದೆ.. 


ಅಂದ ಹಾಗೆ ಶ್ರೀ ನಿನ್ನ ಯೋಜನೆ ಏನು.. ಇವರೆಲ್ಲರೂ ನಿನ್ನ ಮೇಲಿನ ನಂಬಿಕೆಯನ್ನು ವಿಶ್ವಾಸವನ್ನು ತಮ್ಮ ಮಾತುಗಳಲ್ಲಿ ಹೇಳಿದ್ದಾರೆ.. ನೀ ಏನು ಮಾಡೋಕೆ ಹೊರಟಿದ್ದೀಯ.. ಅದನ್ನು ಕತೆ ಮಾಡದೆ ಚುಟುಕಾಗಿ ಹೇಳುತ್ತೀಯಾ.. ಗಾಂಧಿ  ಸುಬ್ಬಮ್ಮನ ಅಂಗಡಿಯ ಕುರುಕುಲು.. ಆಂಬೊಡೆ .. ತೆಗೆದುಕೊಂಡು ಹೋಗಬೇಕು.. ಪೊಟ್ಟಣ ಕಟ್ಟಿಯಾಗಿದೆ ಅಂತ ಆ ಅಂಗಡಿಯ ಹುಡುಗ ಕೂಗಿ ಹೇಳಿ ಹೋಗಿದ್ದಾನೆ.. ಬೇಗ ಶುರು ಮಾಡು.. 

ಅಜ್ಜ ನಿಮಗೆ ಜನುಮದಿನದ ಶುಭಾಶಯಗಳು.. ನನ್ನೊಳಗೆ ನನ್ನ ಅಪ್ಪ ಕೂತು ಹೇಳುತ್ತಾರೆ ಅದನ್ನು ಬರೆಯೋದಷ್ಟೇ ನನ್ನ ಕೆಲಸ.. ಈ ಮಹನೀಯರೆಲ್ಲ ನನ್ನ ಮೇಲಿನ ನಂಬಿಕೆಯನ್ನು ತಮ್ಮ ಮಾತುಗಳಲ್ಲಿ ಹೇಳಿದ್ದಾರೆ.. ಅದನ್ನು ನಿಭಾಯಿಸೋದಷ್ಟೇ ಕೆಲಸ.. ಬರಹ ನಾಲ್ಕು ಮಂದಿಗೆ ಇಷ್ಟವಾಗಿದೆ ಅಂದರೆ ಆದರೆ ಶ್ರೇಯಸ್ಸು ನನ್ನ ಜನುಮದಾತನಿಗೆ.. 

ಇರಲಿ ಅಜ್ಜ ನಿಮ್ಮ ಪ್ರಶ್ನೆಗೆ ಉತ್ತರ.. ನಿಮ್ಮ ಕಗ್ಗಗಳನ್ನು ಜನಮಾನಸಕ್ಕೆ ತಲುಪಿಸಿದ ಖ್ಯಾತಿ ಅನೇಕರಿಗೆ.. ಆದರೆ ನನಗೆ ಪರಿಚಯವಿರುವ ಒಂದಿಬ್ಬರ ಅತ್ಯುತ್ತಮ ಪ್ರಯತ್ನ ನನ್ನನ್ನು ಈ ಒಂದು ಸಾಹಸಕ್ಕೆ ಕೈಹಾಕುವಂತೆ ಪ್ರೇರೇಪಿಸಿದೆ.. ನಿಮ್ಮ ಅತ್ಯುತ್ತಮ ಕಗ್ಗಗಳ ಲಹರಿಯನ್ನು ನನ್ನಿಷ್ಟದ ಸಿನೆಮಾದೃಶ್ಯಗಳಿಗೆ ಹೊಂದಿಸಿ.. ನಿಮ್ಮ ಕಗ್ಗದ ಹೂರಣವನ್ನು ಸಿನಿಮಾ ದೃಶ್ಯಗಳಲ್ಲಿ, ಹಾಡುಗಳಲ್ಲಿ,, ಸಾಹಸಗಳಲ್ಲಿ.. ಹೊಂದಿಕೊಂಡಿಕೊಂಡಿರುವ ಬಗ್ಗೆ ನನ್ನ ಅರಿವಿಗೆ ಬಂದ ರೀತಿಯಲ್ಲಿ ಹೇಳುವ ಒಂದು ಪ್ರಯತ್ನ  ಮಾಡಬೇಕು ಎನಿಸಿತು.. ಅದಕ್ಕೆ ಸ್ಫೂರ್ತಿ ಕಗ್ಗ ರಸಧಾರೆಯ ನನ್ನ ಗುರು ಸಮಾನರು ಹಾಗೂ ನಿಮ್ಮ ಪ್ರೀತಿಯ ಶ್ರೀ ರವಿ ತಿರುಮಲೈ  ಸರ್.. ಮತ್ತೆ ಪುಟ್ಟ ಪುಟ್ಟ ವಿಡಿಯೋ ತುಣುಕು ಮಾಡಿ ಮೂರು ನಾಲ್ಕು ನಿಮಿಷಗಳ ಮಾತುಗಳಲ್ಲಿ ಕಗ್ಗದ ಮಾರ್ಗವನ್ನು ತೋರಿಸುತ್ತಿರುವ ನಟಿ,  ಬರಹಗಾರ್ತಿಯಾಗಿರುವ ದೀಪ ರವಿಶಂಕರ್ ಮೇಡಂ.. ಅಷ್ಟೇ ಅಜ್ಜ ನನ್ನ ಆಸೆ.. ನಿಮ್ಮ ಆಶೀರ್ವಾದವಿರಲಿ.. 

ಮಗು ಶ್ರೀ ಉತ್ತಮ ಯೋಚನೆ ಯೋಜನೆ.. ಆಗ ನನ್ನ ಮನಸ್ಸಿಗೆ ಬಂದಿದ್ದನ್ನು ನಾಲ್ಕು ಸಾಲುಗಳಲ್ಲಿ ಗೀಚಿದ್ದೇ.... ಅಂದು ವಾಮನರೂಪದಲ್ಲಿದ್ದ ಆ ನನ್ನ ಚುಟುಕು ಬರಹಗಳು ಇಂದು ವಿರಾಟ್ ರೂಪ ಹೊಂದಿ ತ್ರಿವಿಕ್ರಮನ ಹಾಗೆ ನಿಂತಿರುವುದು ಸೋಜಿಗವೇ ಸರಿ.. ಖುಷಿಯ ವಿಚಾರವೆಂದರೆ.. ಅಂದು ಬರೆದ ಈ ಕಗ್ಗಗಳು ಮಂಕುತಿಮ್ಮನ ಜಗತ್ತಿನಲ್ಲಿ ಕೋಟ್ಯಂತರ ಮನಸ್ಸಿಗೆ ದಾರಿ "ದೀಪ"ವಾಗಿದೆ.,  "ರವಿ"ಕಿರಣವಾಗಿದೆ  ಎಂದು ತಿಳಿದು ಬಹಳ ಖುಷಿಯಾಗಿದೆ.. ಆಗಲಿ ನಿನ್ನ ಪ್ರಯತ್ನಕ್ಕೆ ಶುಭವಾಗಲಿ.. ಸರ್ವೇ ಜನ ಸಮಸ್ತ ಸುಖಿನೋಭವಂತು.. ನಾ ಹೊರಟೆ.. ಬಾಲಣ್ಣ, ರಾಜಣ್ಣ, ಅಶ್ವಥ್, ರವಿ ಹೋಗೋಣವೆ .. ನಮ್ಮ ಪುಷ್ಪಕ ವಿಮಾನದಲ್ಲಿ ಸುಬ್ಬಮ್ಮನ ಅಂಗಡಿಯ ತಿನಿಸುಗಳು ಸಿದ್ಧವಾಗಿವೆ.. ಶ್ರೀ ನಿನಗೆ ಶುಭ ಹಾರೈಕೆಗಳು.. 

ನಾ ತಲೆಬಾಗಿಸಿ ನಿಂತಿದ್ದೆ.. ಕಣ್ಣುಗಳು ಮಂಜಾಗಿದ್ದವು .. ಮನದಲ್ಲಿ 

ಜಗವ ನೋಡಿ ಕಲಿಯೋ ಮನುಜ 
ಜಗದಲ್ಲಿ ಇರದೇ ಇರುವುದು ಎಲ್ಲಿದೆಯೋ 
ಜಗದಲ್ಲಿ ಜಾಗವ ಮಾಡಿಕೊಂಡು 
ಕಲಿತು ಸಾರ್ಥಕ ಪಡಿಸಿಕೊ ಬದುಕನ್ನು ಮಂಕುತಿಮ್ಮ!!!

ಪುಷ್ಪಕ ವಿಮಾನ ಹಾರಲು ಶುರುಮಾಡಿತು.. ಹಾರುತ್ತ  ಹಾರುತ್ತಾ ಗಗನದಲ್ಲಿ  ಚುಕ್ಕೆಯಾಯಿತು.. !