ಸರಿತಾ.. ಅಥ್ಲೆಟಿಕ್ಸ್ ಮೈದಾನದಲ್ಲಿ ಅಭ್ಯಾಸ ಮಾಡುತ್ತಿದ್ದಳು.. ಅವಳ ತರಬೇತುದಾರ ಒಂದು ವಿಚಿತ್ರ ಫೀಲ್ಡ್ ಸೆಟ್ ಮಾಡಿದ್ದ.. ಅವಳಿಗಿಂತ ಒಂದು ಹನ್ನೊಂದು ಅಡಿ ಮುಂದೆ ಇದ್ದು.. ಒಂದೊಂದೇ ಹರ್ಡಲ್ಸ್ ಸಿದ್ಧ ಮಾಡುತ್ತಿದ್ದ.. ಕೆಲವೊಮ್ಮೆ ಚಿಕ್ಕದು.. ಕೆಲವೊಮ್ಮೆ ದೊಡ್ಡದು.. ಕೆಲವೊಮ್ಮೆ ಹಾವಿನ ರೀತಿಯ ಹಗ್ಗ.. ಕೋಲು.. ಕೆಲವೊಮ್ಮೆ ಒಂದು ದೊಡ್ಡ ತೊಟ್ಟಿಯಾಕಾರದ ಆಯತದಲ್ಲಿ ತುಂಬಿದ ನೀರಿಗೆ ಧುಮುಕಿ ಹೋಗಬೇಕಿತ್ತು..
ಛಲ ಬಿಡದ ಸರಿತಾ.. ತರಬೇತುದಾರ ಒಡ್ಡುವ ಸವಾಲುಗಳನ್ನು ಯಶಸ್ವಿಯಾಗಿ ದಾಟುತ್ತಾ ಹೋಗುತ್ತಿದ್ದಳು.. ಸುಮಾರು ಒಂದೂವರೆ ಘಂಟೆ ಪ್ರತಿದಿನವೂ ಈ ಪರೀಕ್ಷೆ ನೆಡೆಯುತ್ತಲೇ ಇತ್ತು..
ಅಂತಾರಾಷ್ಟ್ರೀಯ, ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಹೆಸರಾಗಿದ್ದಳು.. ೨೦ ಸಾವಿರಕ್ಕೂ ಹೆಚ್ಚು ಅಂತರರಾಷ್ಟ್ರೀಯ ಆಟಗಾರರು ಅವಳ ಅಭ್ಯಾಸದ ವಿಚಿತ್ರ ರೀತಿಗೆ ಮರುಳಾಗಿದ್ದರು.. ಒಂದು ರೀತಿಯಲ್ಲಿ ಮಾದರಿ ವ್ಯಕ್ತಿಯಾಗಿದ್ದಳು..
ಕೋಚ್ ಈ ರೀತಿಯ ಅಭ್ಯಾಸದ ವಿಧಾನದ ಗುಟ್ಟನ್ನು ಯಾರಿಗೂ ಹೇಳಿರಲಿಲ್ಲ.. !
ಪೀ ಪೀ.. ಅಂತ ತರುಬೇತುದಾರ ಊದಿದ ಶೀಟಿಯ ಸದ್ದಿಗೆ ಏನೋ ಯೋಚನೆ ಮಾಡುತ್ತಲೇ ಓಡುತ್ತಿದ್ದ ಸರಿತಾಳ ಗಮನ ಅತ್ತ ಕಡೆ ತಿರುಗಿತು.. ಇಂದಿನ ಅಭ್ಯಾಸ ಮುಗಿಯಿತು ಎನ್ನುವ ಸೂಚನೆಯದು..
ಹಾಗೆ ಓಡುತ್ತಲೇ.. ಓಡುತ್ತಲೇ ತನ್ನ ಬ್ಯಾಗ್ ಇಟ್ಟಿದ್ದ ಜಾಗಕ್ಕೆ ಬಂದು ಕುಳಿತಳು.. ತರಬೇತುದಾರ ಹತ್ತು ನಿಮಿಷ ಬರುವೆ ಎಂದು ಸನ್ನೆ ಮಾಡಿ ಹೋಗಿದ್ದು ಕಂಡು.. ತನಗೆ ಹತ್ತು ನಿಮಿಷ ಸುಧಾರಿಸಿಕೊಳ್ಳಲು ಸಮಯವಿದೆ ಎಂದು ಗೊತ್ತಾಯಿತು..
ರೆಸ್ಟ್ ರೂಮಿಗೆ ಹೋಗಿ ಫ್ರೆಶ್ ಆಗಲು ಹೋದಳು.. ಮೊಗ ತೊಳೆದುಕೊಂಡು.. ಪೆರ್ಸನಲ್ಲಿದ್ದ ಪುಟ್ಟ ಕಪ್ಪು ಬಿಂದಿಯನ್ನು ಹಣೆಗೆ ಇಟ್ಟುಕೊಂಡಳು.. ತನ್ನನ್ನೊಮ್ಮೆ ನೋಡಿಕೊಂಡಳು.. ನೀಳವಾಗಿಲ್ಲದ್ದಿದ್ದರೂ ಲಕ್ಷಣವಾಗಿದ್ದ ತುಸು ಕಂದು ಬಣ್ಣದ ತಲೆಗೂದಲನ್ನೂಮ್ಮೆ ಬಿಚ್ಚಿಕೊಂಡಳು.... ಟವಲಿನಿಂದ ಚೆನ್ನಾಗಿ ತಲೆಗೂದಲನ್ನೊಮ್ಮೆ ಒರೆಸಿಕೊಂಡು .ಅಲ್ಲಿಯೇ ಇದ್ದ ಫ್ಯಾನಿಗೆ ತಲೆಗೂದಲನ್ನು ಒಡ್ಡಿ ಒಣಗಿಸಿಕೊಂಡು.. ಬಾಚಣಿಗೆಯಿಂದ ನೀಟಾಗಿ ತಲೆಗೂದಲನ್ನು ಬಾಚಿ ಬಲಬದಿಗೆ ತುಸು ಬೈತಲೆ ತೆಗೆದುಕೊಂಡು.. ಕ್ಲಿಪ್ ಹಾಕಿ ಮತ್ತೊಮ್ಮೆ ತಲೆಗೂದಲನ್ನು ಸರಿಮಾಡಿಕೊಂಡಳು.
ಹಣೆಯಲ್ಲಿದ್ದ ಬಿಂದಿ ಕಿಸಕ್ ಅಂತ ನಕ್ಕ ಅನುಭವ..
ತನ್ನನ್ನು ಮತ್ತೊಮ್ಮೆ ನೋಡಿಕೊಂಡಳು.. ಶ್ವೇತ ವರ್ಣವಲ್ಲದಿದ್ದರೂ ಶಾಮಲಾ ವರ್ಣವಲ್ಲ.. ಕಾಡಿಗೆ ಹಚ್ಚಿದ್ದ ದಟ್ಟವಾದ ಆಳವಾದ ಕಣ್ಣುಗಳು ಅವಳ ಸೊಬಗಿಗೆ ಕಾಂತಿ ನೀಡಿದ್ದವು.. ಪುಟ್ಟದಾಗಿದ್ದರೂ ಸಂಪಿಗೆ ಮೂಗು.. ಅದಕ್ಕೆ ತಿಲಕವಿಟ್ಟಂತೆ ಹೊಳೆಯುವ ಮೂಗುತಿ.. ನಕ್ಕಾಗ. ತುಸು ದೊಡ್ಡದು ಅನಿಸುವ ಮುಂದಿನ ಎರಡು ಹಲ್ಲುಗಳು.. ಅವಳ ನಗುವಿಗೆ ಸಾವಿರ ವ್ಯಾಟ್ ಬೆಳಕು ನೀಡುತ್ತಿತ್ತು.. ತುಸುವೇ ದಪ್ಪ ಎನಿಸಬಹುದಾದ ಶರೀರ ತನ್ನದು ಎನಿಸಿದರೂ.. ಅವಳ ತರುಬೇತುದಾರ ಯಾವಾಗಲೂ ಹೇಳುತ್ತಿದ್ದ .."ಮನೆಗೆ ಮನಕ್ಕೆ ಆಧಾರ ನೀಡುವುದು ದಪ್ಪವಾದ ಕಂಬಗಳು .. ಅದಕ್ಕೆ ತಲೆ ಕೆಡಿಸಿಕೊಳ್ಳಬೇಡ.. ನಿನ್ನ ಅಭ್ಯಾಸ ನೀನು ಮಾಡು"
ಆ ಮಾತುಗಳನ್ನೇ ಮತ್ತೊಮ್ಮೆ ಹೇಳಿಕೊಂಡು ತುಸು ನಕ್ಕಳು.. ಕನ್ನಡಿಯೊಳಗಿನ ಅವಳ ಪ್ರತಿಬಿಂಬ "ಸರಿತಾ ಸಲಾಂ ಕಣೆ ನಿನಗೆ.. ನಿನ್ನ ಮನೋಧೈರ್ಯವೇ ನಿನ್ನ ಕಾಪಾಡೋದು.. ನಿನಗೆ ಸಿಕ್ಕಿರುವ ಹೊಸ ಕೋಚ್ ನಿನ್ನ ಬದುಕನ್ನು ಬದಲಿಸುತ್ತಾನೆ.. ಹಸನಾಗಿಸುತ್ತಾನೆ.. ನೀ ತೆಗೆದುಕೊಂಡಿರುವ ನಿರ್ಧಾರ ಸರಿ ಇದೆ ಕಣೆ" ಎಂದ ಅನುಭವ..
ಇಷ್ಟೆಲ್ಲಾ ಸ್ವಗತ ಮಾತುಗಳು ಮುಗಿಯುವ ಹೊತ್ತಿಗೆ ಕೋಚ್ ಬಂದು.. "ಸರಿತಾ.. ಆಯ್ತಾ ನಿನ್ನ ಮಾಮೂಲಿ ಮಾತುಕತೆಗಳು .. ಹೋಗೋಣ್ವಾ.. "
"ಹಾ" ಎನ್ನುವ ಸೂಚನೆಯನ್ನು ತನ್ನ ಅದ್ಭುತ ಕಣ್ಣುಗಳಿಂದ ತಲುಪಿಸಿದಳು..
ಇಬ್ಬರೂ ನೆಡೆಯುತ್ತಾ ಸ್ಟೇಡಿಯಂ ಹತ್ತಿರದಲ್ಲಿದ್ದ ಹೋಟೆಲಿಗೆ ಹೋದಳು.. ನಿನ್ನೆ ಕೋಚ್ ಕಳಿಸಿದ್ದ ಸಂದೇಶ ಅವಳ ಮನದಲ್ಲಿ ಕೊರೆಯುತ್ತಲೇ ಇತ್ತು.. ಆದರೂ ಅದನ್ನು ತೋರಿಸಿಕೊಳ್ಳದೆ ಹೆಜ್ಜೆ ಹಾಕುತ್ತಿದ್ದಳು..
ಹೋಟೆಲಿಗೆ ಬಂದ ಮೇಲೆ.. "ಸರಿತಾ ಇವತ್ತು ಸ್ವೀಟ್ ತಿನ್ನೋಣ.. " ಎಂದು ಹಳದಿ ಬಣ್ಣದ ಬಾಸುಂದಿಗೆ ಆರ್ಡರ್ ಮಾಡಿದ..
ಸ್ವೀಟ್ ಬರುವ ತನಕ.. ಸರಿತಾ ಹಾಗೆ ತನ್ನ ತರಬೇತುದಾರನನ್ನ ನೋಡಿದಳು.... ರೇಷ್ಮೆಯಂತಹ ತಲೆಗೂದಲು.. ನೀಟಾಗಿ ಎಡಬದಿಗೆ ಕ್ರಾಪ್.. ಕುರುಚಲು ಫ್ರೆಂಚ್ ಗಡ್ಡ.. ಅದಕ್ಕೆ ಒಪ್ಪುವ ಕನ್ನಡಕ.. .. ಅವರ ಅಪರಿಮಿತ ಕನ್ನಡಾಭಿಮಾನಕ್ಕೆ ಸೋತಿದ್ದಳು.. ಆದರೂ ಮನದಲ್ಲಿ ಏನೋ ದುಗುಡ.. ಅದನ್ನೆಲ್ಲ ಪರಿಹರಿಸಿಕೊಳ್ಳೋಕೆ ಇಂದು ಮಾತಾಡಬೇಕು ಎಂದು ನಿರ್ಧರಿಸಿಕೊಂಡೆ ಬಂದಿದ್ದಳು..
"ನೀವು ಕಳಿಸಿದ ಸಂದೇಶ ನೋಡಿದೆ.. ಅದರ ಬಗ್ಗೆ ಮಾತಾಡಬೇಕಿತ್ತು... "
"ಓಕೇ... ಕೇಳಿ"
ಅಷ್ಟರಲ್ಲಿ ಬಾಸುಂದಿ ಬಂತು..
ಇಬ್ಬರೂ ಒಂದೊಂದು ಕಪ್ ತೆಗೆದುಕೊಂಡು.. ಅದನ್ನು ಮಿಕ್ಸ್ ಮಾಡುತ್ತಿದ್ದರು.. ಕೋಚ್ ಮೆಲ್ಲಗೆ ಒಂದು ಚಮಚದಲ್ಲಿ ಬಾಸುಂದಿ ತೆಗೆದುಕೊಂಡು "ಇದು ನಮ್ಮಿಬ್ಬರ ಗೆಳೆತನಕ್ಕೆ" ಎನ್ನುತ್ತಾ ಅವಳ ಬಾಯಿಗೆ ಹಿಡಿದ.. ಅದನ್ನು ನಿರೀಕ್ಷಿಸದೆ ಇದ್ದ ಸರಿತಾ.. ಅರಿವಿಲ್ಲದೆ ಬಾಯಿ ತೆಗೆದಳು..
ನಂತರ ಆಗಲೇ ಒಂದೆರಡು ಚಮಚ ತಿಂದಿದ್ದರೂ ಅದನ್ನು ತೋರಗೊಡದೆ ಒಂದು ಚಮಚ.. ಅವನಿಗೆ ತಿನ್ನಿಸಿದಳು ..ಬಾಸುಂದಿ ಬಾಯಲ್ಲಿಯೇ ಇಟ್ಟುಕೊಂಡು ಥ್ಯಾಂಕ್ಸ್ ಹೇಳಿದ್ದು ಅವಳಿಗೆ ಕೇಳಿಸಿತು..
"Thank you for accepting me". ಅರಿವಿಲ್ಲದೆ ಅವಳಿಂದ ಬಂದ ಮಾತು ಇವನಿಗೆ ಸಂತಸ ತಂದು... ಅವಳ ತಲೆಯನ್ನೊಮ್ಮೆ ತನ್ನ ಬಲಗೈಯಿಂದ ಒತ್ತಿ.. ಥ್ಯಾಂಕ್ ಯು ಎಂದ..
ಅವಳು ಹಲ್ಲು ಬಿಟ್ಟಳು.. ಮುದ್ದು ಕಣೋ ನೀನು ಎನ್ನುತ್ತಾ ಅವಳ ಗಲ್ಲವನ್ನೊಮ್ಮೆ ಸವರಿದ.. ನಾಚಿ ನೀರಾದಳು..
ತಾವಿಬ್ಬರೇ ಈ ಜಗತ್ತಿನಲ್ಲಿರುವುದು ಎನ್ನುವ ಭಾವ ಇಬ್ಬರದ್ದು... ಆದರೆ ಎಲ್ಲೇ ಮೀರಿರಲಿಲ್ಲ .. ತುಸು ದೂರವೇ ನಿಂತು ಮಾತಾಡುತ್ತಿದ್ದರು .. .
ಅವಳ ಮನದಲ್ಲಿದ್ದ ದುಃಖ,ಸಂಕಟ , ಸಂತೋಷದ ಎಲ್ಲಾ ವಿಚಾರಗಳನ್ನುಹೇಳಿಕೊಂಡಳು .. ಇವನು ತನ್ನ ಭಾವ ಲಹರಿಯನ್ನು ತೋಡಿಕೊಂಡ.... ಇಬ್ಬರ ಮನಸ್ಸು ಹಗುರಾಗಿತ್ತು..
ನಾನು ಇನ್ನೂ ಸ್ವಲ್ಪ ಹೇಳಬೇಕು ಎಂದಳು..
ಸರಿ ಮುಂದುವರೆಸು ಎಂದ ಇವ..
ಮಾತಾಡುತ್ತಾ ಮಾತಾಡುತ್ತ.. ಅವಳ ಕಣ್ಣಲ್ಲಿ ಮುತ್ತಿನ ಹನಿಗಳು ಉರುಳಿದವು.. ತಕ್ಷಣ ತನ್ನ ಕರವಸ್ತ್ರ ಕೊಟ್ಟ.. ಅವಳು ಕರವಸ್ತ್ರದಿಂದ ಕಣ್ಣುಗಳನ್ನುಒತ್ತಿಕೊಂಡಳು .. ಇಬ್ಬರ ಮಧ್ಯೆ ಇಪ್ಪತ್ತೈದು ಸೆಕೆಂಡುಗಳು ನೀರವ ಮೌನ..
ಆ ಕ್ಷಣವನ್ನು ತುಸು ತಿಳಿಗೊಳಿಸಲು .. "ಸರಿತಾ .. ಸರಿಯಾಗಿ ಕಣ್ಣುಗಳನ್ನು ಒರೆಸಿಕೋ.. ಕಣ್ಣಿಗೆ ಹಚ್ಚಿರುವ ಕಾಡಿಗೆ ಅತ್ತಿತ್ತ ಹೋಗಿ ಡ್ರಾಕುಲ ತರಹ ಆಗಿ ಬಿಟ್ಟೀಯೇ"
"ಹೋಯ್ತಾ.. ಸರಿಯಾಗಿದೆಯಾ"
"ಇಲ್ಲ ಕಣೋ ಆರಾಮಾಗಿದೆ.. ನಿನ್ನ ಮೊಗದಲ್ಲಿ ನಗು ತರಿಸಲು ಹೇಳಿದೆ ಅಷ್ಟೇ.. ಸರಿಯಾಗಿದೆ"
"ತಗೊಳ್ಳಿ" ಎಂದು ಕರವಸ್ತ್ರ ಕೊಟ್ಟಳು.
"ಇದನ್ನು ಆಸ್ತಿಯಾಗಿ ಕಾಪಾಡಿಕೊಳ್ಳುತ್ತೇನೆ..ಇದನ್ನು ವಾಷ್ ಮಾಡೋಲ್ಲ.. ಜೀವನದ ಆಸ್ತಿಯಾಗಿ ಕಾಪಾಡಿಕೊಳ್ಳುತ್ತೇನೆ.. ಮುತ್ತಿನ ಹನಿಗಳು ಇದರಲ್ಲಿವೆ.. ಇನ್ನೆಂದು ಮತ್ತೆ ನಿನ್ನ ಕಣ್ಣಿನಿಂದ ಮುತ್ತಿನ ಹನಿಗಳು ಜಾರಿ ಬೀಳದ ಹಾಗೆ ನೋಡಿಕೊಳ್ಳುತ್ತೇನೆ" ಎಂದು ಅವಳ ಕೈಯನ್ನೊಮ್ಮೆ ಹಿಡಿದು ಒತ್ತಿದ..
ಅವಳು ಕೂಡ ಮೆಲ್ಲಗೆ ಕೈಯನ್ನು ಒತ್ತಿಕೊಂಡಳು..
"ಸರ್.. ಹೆಚ್ಹು ಹೊತ್ತು ಕೂರುವ ಹಾಗಿಲ್ಲ ಇಲ್ಲಿ.. ಜನ ಕಾಯ್ಥ ಇದ್ದಾರೆ.. " ಹೋಟೆಲಿನವ ತುಸು ಗಟ್ಟಿ ದನಿಯಲ್ಲಿ ಹೇಳಿದ್ದು ಕೇಳಿಸಿತು..
"ಹಾ ಹೊರಡ್ತೀವಿ.. ಬಿಲ್ ಕೊಡಿ.. "
ಬಿಲ್ ಪಾವತಿ ಮಾಡಿ.. ಹೊರಬಂದು.. ಇಬ್ಬರೂ ಒಮ್ಮೆ ಮುಗುಳು ನಕ್ಕರು..
"ಸರಿ ಮತ್ತೆ ಸಿಗೋಣ" ಅಂತ ಇಬ್ಬರೂ ತಮ್ಮ ತಮ್ಮ ಹಾದಿ ಹಿಡಿದರು ..
ಇಬ್ಬರ ಮನದಲ್ಲಿ ಜಗತ್ತು ಹೊಸದಾಗಿದೆ ಎನ್ನುವ ಅನುಭವ.. ಯಾವುದೋ ಒಂದು ದೊಡ್ಡ ಭಾರ
ಮನದಿಂದ ಜಾರಿ ಹೋದ ಅನುಭವ..
ನೆಡೆಯುತ್ತಾ ಒಮ್ಮೆ ಅವಳು ಇವನತ್ತ ತಿರುಗಿ ನೋಡಿದಳು.. ಅವನು ತಿರುಗಿದ ..
ಎಳೆ ಬಿಸಿಲು.. ಅವಳ ಮೊಗದ ಮೇಲಿತ್ತು.. ಅವಳ ಪುಟ್ಟ ನಾಸಿಕದಲ್ಲಿದ್ದ ಮೂಗುತಿಯ ಮೇಲೆ ಬಿಸಿಲು ಬಿದ್ದು ಫಳ್ ಅಂತ ಹೊಳೆಯಿತು . ಅದರ ಜೊತೆಯಲ್ಲಿ ಒಂದು ಹಾರ್ಟ್ ಸ್ಟಾಪಿಂಗ್ ಸ್ಮೈಲ್..
ಅದನ್ನು ಕಂಡ ಕೋಚ್ ಗಾಳಿಯಲ್ಲಿಯೇ ಒಂದು ಮುತ್ತನ್ನು ತೇಲಿಬಿಟ್ಟು ಕೈಯಾಡಿಸಿ ವಿಕ್ಟರಿ ಚಿನ್ಹೆ ತೋರಿಸಿದ.. !!!!
ಚಿತ್ರ ಕೃಪೆ : ಗೂಗಲೇಶ್ವರ |

Very nice
ReplyDeleteThank you for giving such beautiful stories
Thank you Roopa...wonderful compliments
DeleteAnna nimminda maathra ishtu sundara preethiya kathegalannu bareyoke sadyaneno anisutthe..
ReplyDeletepreethiyannu idda haageye swikarisuva nimma katheyallina paathrgala mele nangu yelli love aaguttho annuva bhaya yaakandre bahu bega avaravara preethi avaravara balige kottubidtirala..
Chandaa chandaa e preethiya baravanigeye chanda 😍😍
DDP...What a great compliments...i bow my head to you...superb way you put the thoughts...
DeleteThank you DDP.
ಶ್ರೀಕಾಂತರೆ, ನಿಮ್ಮ ಕಥನಕೌಶಲ ಅಗಾಧವಾದದ್ದು. ತಲೆ ಬಾಗಿದ್ದೇನೆ ನಿಮಗೆ. ಇನ್ನೊಂದು ಮಾತು: ಸರಿತಾ ಓಡುತ್ತಿದ್ದ ರಸ್ತೆಯ ಫೋಟೋ ಹಾಕಿದ್ದೀರಲ್ಲ,ಡಾಂಬರು ಕಿತ್ತು ಹೋಗಿದ್ದು. ಅಣ್ಣಾ, ಇದು ಧಾರವಾಡದ ರಸ್ತೆಯೆ?
ReplyDeleteಗುರುಗಳೇ.. ನಿಮ್ಮ ಪ್ರತಿಕ್ರಿಯೆಗೆ ಶರಣು.. ನೀವು ಓದಿದ್ದೀರಿ ಎನ್ನೋದು ಖುಷಿ.. ಓದಿ, ಮೆಚ್ಚಿ ನನಗೆ ಆಶೀರ್ವಾದ ಮಾಡುವ ನಿಮ್ಮ ಪ್ರೀತಿಗೆ ನಾ ಶರಣಾದೆ..
Deleteಹ ಹ ಹ ಹ ಧಾರವಾಡದ ರಸ್ತೆಯಲ್ಲ..
ಸರಿತಾಳ ಬದುಕು ದುರಸ್ತಿಯಾಗುತ್ತಿದೆ ಎನ್ನುವ ಒಂದು ಪುಟ್ಟ ಸುಳಿವು ಆ ಚಿತ್ರದಲ್ಲಿದೆ.. !
ಧನ್ಯೋಸ್ಮಿ ಗುರುಗಳೇ!