Monday, September 18, 2017

ಪ್ರಥಮಂ ವಕ್ರತುಂಡಂಚ ......................ಮುಂದುವರೆದಿದೆ - ಮೂರನೇ ಭಾಗ

ಪ್ರಥಮಂ... ಮೊದಲನೇ ಭಾಗ
ದ್ವೀತೀಯಕಂ... ಎರಡನೇ ಭಾಗ

ಮುಂದೆ... ಮುಂದೆ... ಐದು ದಿನದ ಸುಂದರ ಕ್ಷಣಗಳನ್ನು ಬಚ್ಚಿಟ್ಟುಕೊಂಡ ಕಪಾಟನ್ನು ತೆರೆಯಲು ಕೀಲಿ ಕೈ ನನ್ನ ಕಣ್ಣ ಮುಂದೆ ಓಡಾಡುತ್ತಿತ್ತು... ಅದು ಕೈಗೆ ಬಂದ ಕ್ಷಣ.

"ತುಲಾ  ಮಾಸೇತು ಕಾವೇರಿ" ನನ್ನ ಮೊಬೈಲ್ ಅಲಾರಾಂ ಯಥಾಪ್ರಕಾರ ಬೆಳಿಗ್ಗೆ ೫ ಕ್ಕೆ ಕೂಗುತಿತ್ತು.. ಕಣ್ಣು ಬಿಟ್ಟೆ.. ಮಲಗುವಾಗ ಕತ್ತಲು ತುಂಬಿದ್ದ ಕೋಣೆಗೆ ಆಗಲೇ ಯಾರೋ ದಿನಕರನನ್ನು ತಂದು ಬಿಟ್ಟಹಾಗೆ.. ಪ್ರಕಾಶಮಾನವಾಗಿತ್ತು.. ಗಾಬರಿಯಾಯಿತು ಒಮ್ಮೆಲೇ..... ತಡವಾಯಿತೇನೋ ಅಂತ.. ಕಾರಣ.. ನನ್ನ ಸಹೋದ್ಯೋಗಿ ಹೋಟೆಲಿನ ಹತ್ತಿರ ಬಂದು ನನ್ನನ್ನು ಆಫೀಸಿಗೆ ಕರೆದೊಯ್ಯಲು ಬರುವವರಿದ್ದರು..

ಕಣ್ಣುಜ್ಜಿಕೊಂಡು ಎದ್ದೆ.. ಐದು ಘಂಟೆ.. ತತ್ ತೆರಿಕೆ... ಬರಿ ಇನ್ನೂ ಐದು ಘಂಟೆ... ಮತ್ತೆ ಒಂದು ಅರ್ಧ ಘಂಟೆ ಮಲಗಿ.. ನಂತರ ಲಗುಬಗೆಯಿಂದ ಹೊರಡಲು ತಯಾರಾದೆ.. ಇಷ್ಟವಾದ ತಿಳಿ ನೀಲಿ ಅಂಗಿ.. .. ಮನಸ್ಸು ತಂಪಾಗಿತ್ತು.. ಹಿಂದಿನ ದಿನದ ಆಯಾಸ ಮರೆಯಾಗಿತ್ತು...

ಹೋಟೆಲಿನ ಮುಂದೆ ಬಂದು ನಿಂತೇ.. ಅವರ  ಮುಖ ಪರಿಚಯವಿರಲಿಲ್ಲ... ಅವರಿಗೆ ನನ್ನ ಪಾಸ್ ಪೋರ್ಟ್ ನೋಡಿದ್ದರಿಂದ ಅವರಿಗೆ ಕಷ್ಟವಿರಲಿಲ್ಲ.. ಸರಿ ಬರುವ ಕಾರುಗಳನ್ನೆಲ್ಲ ನೋಡುತ್ತಿದ್ದೆ .. ಇವರಿರಬಹುದೇ... ಅವರಿರಬಹುದೇ... ಸ್ವಲ್ಪ ಹೊತ್ತು ಒಂದು ಬಿ ಎಂ ಡಬ್ಲ್ಯೂ ಕಾರು ಬಂದು ನಿಂತಿತು.... ನನ್ನ ಮನಸ್ಸು ಹೇಳಿತು.. ಶ್ರೀ ಇವರೇ ಕಣೋ..

ಕಾರಿನಿಂದ ಇಳಿದವರು ಹಾಯ್ ಶ್ರೀಕಾಂತ್ ಅಂದ್ರು... ಮನಸ್ಸು ಯಾವಾಗಲೂ ನನ್ನ ಕೈ ಹಿಡಿದಿತ್ತು.. ಇಂದು ಕೂಡ...

ಸುಯ್ ಅಂತ ಕಾರು ನಮ್ಮ ಆಫೀಸಿನ ಕಡೆಗೆ ಓಡಿತು.. ಹತ್ತೇ ನಿಮಿಷ..

ಮೊದಲ  ಬಾರಿಗೆ ನಮ್ಮ ಕೇಂದ್ರ ಕಚೇರಿಗೆ ಹೆಜ್ಜೆ ಇಡುವ ಸಂಭ್ರಮ.. ನವ ವಧುವಿನ ನಾಚಿಕೆ, ಸಂಕೋಚ.. ಹೆಮ್ಮೆ ಎಲ್ಲವೂ ಇತ್ತು.. ಬಲಗಾಲಿಟ್ಟು ಒಳಗೆ ಹೋದೆ.. ಅನೇಕ ಸಹೋದ್ಯೋಗಿಗಳ ಭೇಟಿ.. ಬರಿ  ಇ-ಮೇಲ್ ನಲ್ಲೆ ಇದ್ದ ಪರಿಚಯ... ಮುಖತಃ ಭೇಟಿ.. ನನ್ನನ್ನು ಅವರ ಹತ್ತಿರಕ್ಕೆ ಒಯ್ದಿತ್ತು...

ಅಂದು ಸೋಮವಾರ.. ನನ್ನ  ಕೆಲಸಗಳು ತುಂಬಾ ಇದ್ದವು.. ಜೊತೆಯಲ್ಲಿ ಮುಂದಿನ ದಿನಕ್ಕೆ ಸಿದ್ಧವಾಗಬೇಕಿತ್ತು.. ಎಲ್ಲವೂ ಸರಾಗವಾಗಿ ನೆಡೆಯಿತು... ಸಂಜೆ.. ಕೆಲಸ ಮುಗಿಸಿಕೊಂಡು ಹೋಟೆಲಿಗೆ ಹೋದೆ.. ಒಂದು ಪುಟ್ಟ ಸುತ್ತಾಟ ಎಂದು ಹೊರಗೆ ಬಂದೆ..

ಟ್ರಾಮ್ ಗಳು ಓಡಾಡುತ್ತಿದ್ದವು.. ಹೈವೇ ಸೊಗಸಾಗಿತ್ತು.. ಬರಿ ಚಲನ ಚಿತ್ರಗಳಲ್ಲಿ ನೋಡಿದ್ದ ರಸ್ತೆಗಳು ಈಗ ಕಣ್ಣ ಮುಂದೆ.. ರಸ್ತೆಯ ಅಂಚಿನ ತನಕ ಟಾರು... ಅಂಚಿನಲ್ಲಿ  ಎರಡೂ ಬದಿಯಲ್ಲಿ ಹುಲ್ಲುಗಾವಲು.. ಏನೋ ಒಂದು ರೀತಿಯ ಖುಷಿ..

ದಿನಕರ ವಿಶ್ರಮಿಸುವ ಹಂತಕ್ಕೆ ಬಂದೆ ಇರಲಿಲ್ಲ... ಕೋಣೆಗೆ ಬಂದು ಮನೆಗೆ ಕರೆ ಮಾಡಿದೆ.. ಗೃಹಪ್ರವೇಶ ಮುಗಿಸಿಕೊಂಡು ಬಂದಿದ್ದ ಸವಿತಾ ಶೀತಲ್ ತುಂಬಾ ಹೊತ್ತು ಮಾತಾಡಿದರು..

ಮಾರನೇ ದಿನಕ್ಕೆ ಮನಸ್ಸು ಸಿದ್ಧವಾಗಿತ್ತು.. ಬೆಳಿಗ್ಗೆ ಹೋಟೆಲಿನ ಮುಂಬಾಗದಲ್ಲಿ ಇನ್ನಷ್ಟು ಸಹೋದ್ಯೋಗಿಗಳು..

ಅರೆ ಶ್ರೀಕಾಂತ್.. ಹೇಗಿದೆ ಫ್ರಾಂಕ್ಫರ್ಟ್.. ಎಲ್ಲರೂ ಕೇಳಿದ ಮೊದಲ ಪ್ರಶ್ನೆ... ಬೇಸಿಗೆಯಾಗಿದ್ದ ಕಾರಣ.. ತಾಪಮಾನ ೩೫ ಇತ್ತು.. ಬೆಂಗಳೂರಿನ ತಾಪಮಾನವೇ.. ವಾಹನ ದಟ್ಟಣೆ.. ಬೆಂಗಳೂರಿನ ದಟ್ಟಣೆ ಅನುಭವಿಸಿದ ಮೇಲೆ.. ಮಿಕ್ಕವೂ ಮಾಮೂಲಿ ಅನಿಸಿತ್ತು.. ಬದಲಾವಣೆ ಎಂದರೆ ರೈಲು ಪ್ರಯಾಣ.. ಅದನ್ನೇ ಹೇಳಿದೆ.. ಅವರ ಹೃದಯದಲ್ಲಿ ತುಸು ಜಾಗ ಪಡೆಯಲು ಬಹುಶಃ ಈ ಮಾತುಗಳು ಸಾಕಾಗಿದ್ದವು ಅನ್ನಿಸುತ್ತೆ.. ನಾನು ಎಲ್ಲರೊಳು ಒಂದಾಗಿದ್ದೆ.. ಅವರು ನನ್ನೊಳಗೆ ಒಂದಾಗಿದ್ದರು..

ಟ್ರೈನಿಂಗ್  ಮಜವಾಗಿತ್ತು.. ನಾನು ಪ್ರಸ್ತುತ ಪಡಿಸಿದ್ದು ಎಲ್ಲರಿಗೂ ಇಷ್ಟವಾಗಿತ್ತು .. ಭಾಷೆ ಒಂದು ಸಮಸ್ಯೆ ಆಗಿತ್ತು .. ನಮ್ಮ ಆಂಗ್ಲ ಭಾಷೆ ಅಲ್ಲಿ ಅರ್ಥವಾಗಲು ತುಸು ಕಷ್ಟ..ಇರಲಿ .. ಇದೆಲ್ಲಾ ಮಾಮೂಲಿ..

ಸಂಜೆ ಕಾಸೆಲ್ ನಗರದ ಕೇಂದ್ರ ಭಾಗಕ್ಕೆ ನಾನು ಮತ್ತು ಹಂಗೇರಿಯ ಸಹೋದ್ಯೋಗಿ ಜೊತೆಯಲ್ಲಿ ಹೋದೆ.. ರಸ್ತೆಯಲ್ಲಿಯೇ ಓಡಾಡುವ ಬಸ್ಸು ಅದರ ಪಕ್ಕದಲ್ಲಿಯೇ ಟ್ರಾಮ್.. ಟ್ರೈನ್.. ಕಾರು ಬಸ್ಸುಗಳು.. ನಗರದ ಪರಿಚಯ ಸೊಗಸಾಗಿತ್ತು.. ಒಂದು ಅರಮನೆ.. ಉದ್ಯಾನವನ.. ಒಂದು ಪುಟ್ಟ ಸುತ್ತಾಟ.. ಚಿತ್ರಗಳು.. ಜರ್ಮನಿಯ ಪರಿಚಯ ಮಾಡಿಕೊಟ್ಟಿತು..
ಇಲ್ಲಿ ಹೊಗೆ ಬರುತ್ತಿದೆ ಎಂದರೆ ಡಾಕ್ಯುಮೆಂಟ ಚಾಲೂ ಅಂತ ಅರ್ಥ 
ಮಾರನೇ ದಿನ.. ಯಥಾಪ್ರಕಾರ ಟ್ರೈನಿಂಗ್ ಮುಗಿದ ಮೇಲೆ.. ಸಂಜೆಯ ಕಾರ್ಯಕ್ರಮ.. ಏನೂ ಎಂಬ ಕುತೂಹಲ ತಣಿಸಿದ್ದು ಡಾಕ್ಯೂಮೆಂಟಾ ೨೦೧೭ ಕ್ಕೆ ಭೇಟಿ..
ಪುಸ್ತಕಗಳಿಂದಲೇ ಮಾಡಿದ ಮಹಲು 

ಡಾಕ್ಯೂಮೆಂಟಾ ಈ ಕಾರ್ಯಕ್ರಮ ಐದು ವರ್ಷಗಳಿಗೊಮ್ಮೆ ಕಾಸೆಲ್ ನಲ್ಲಿ ನೆಡೆಯುತ್ತೆ .. ನೂರು ದಿನದ ಕಾರ್ಯಕ್ರಮ ಇದು.. ನಿಷೇದ ಮಾಡಿದ ಸಾಹಿತ್ಯ ಕೃತಿಗಳನ್ನು ಪ್ರಚುರ ಪಡಿಸುವ ಈ ಡೊಕ್ಯೂಮೆಂಟಾ ಕಾರ್ಯಕ್ರಮ.. ಈ ಬಾರಿ ಗ್ರೀಕ್ ದೇಶದ ಅಥೆನ್ಸ್ ನಲ್ಲಿ ಮೂಡಿ ನಂತರ ಕಾಸೆಲ್ ನಲ್ಲಿ ನೆಡೆದಿತ್ತು..
ಕಂಬದ ಹತ್ತಿರದ ನೋಟ 

ಇನ್ನೊಂದು ನೋಟ 
ಈ ಡಾಕ್ಯೂಮೆಂಟಾ ಕಾರ್ಯಕ್ರಮವನ್ನು ನಮಗೆ ಆಂಗ್ಲ ಭಾಷೆಯಲ್ಲಿ ಹೇಳಿದ ಅಮೇರಿಕಾದ ಗೈಡ್..  ಅಲ್ಲಿಯೇ ಪಕ್ಕದಲ್ಲಿದ್ದ ಮ್ಯೂಸಿಯಂ ಒಳಗೆ ಕರೆದುಕೊಂಡು ಹೋದರು.. ನಾಲ್ಕು ಮಹಡಿಯಲ್ಲಿದ್ದ ಅನೇಕ ವಸ್ತು ವಿನ್ಯಾಸಗಳನ್ನು ಪರಿಚಯಮಾಡಿಕೊಟ್ಟರು.. ನನಗೆ ಒಂದು ಬಗೆಯ ವಿಭಿನ್ನ ಆದರೆ ಮಿಶ್ರ ಅನುಭವ ನೀಡಿತು.. ಅದರ ಕೆಲವು  ಚಿತ್ರಗಳು ನಿಮಗಾಗಿ ..
ವಿಡಿಯೋ ತುಂಬಾ ಚೆನ್ನಾಗಿತ್ತು.. ತಾಂತ್ರಿಕವಾಗಿ 

ನಮ್ಮ ನಮ್ಮ ಅನಿಸಿಕೆ ನಮಗೆ 

ಮ್ಯೂಸಿಯಂ ಒಳಗಿನ ದೃಶ್ಯಗಳು 

ಮ್ಯೂಸಿಯಂ ಒಳಗಿನ ದೃಶ್ಯಗಳು 

ಪ್ರದರ್ಶನ.. ಇದರೊಳಗೆ  ವಾಸ ಮಾಡುತ್ತಾರೆ .. 

ಪ್ರದರ್ಶನ.. ಇದರೊಳಗೆ  ವಾಸ ಮಾಡುತ್ತಾರೆ .. 

ಸಂಜೆ ಊಟಕ್ಕೆ ಹೋದೆವು.. ರಾತ್ರಿ ಸುಮಾರು ಹನ್ನೆರಡಾಗಿತ್ತು ನಾವು ಅಲ್ಲಿಂದ ಹೊರಟಾಗ .. ಹೋಟೆಲಿಗೆ ಬಂದು ಮಲಗಿದ್ದೆ ಗೊತ್ತು .. ಬೆಳಿಗ್ಗೆ ಅಲಾರಾಂ ಕೊಡೆದುಕೊಳ್ಳುವ ತನಕ ಸೊಗಸಾದ ನಿದ್ದೆ ..

ಮರುದಿನ.. ಗ್ಲೋಬಲ್ ಸಪ್ಪ್ಲೈಯೆರ್ ಮೀಟ್ ಅಥವಾ ಜಾಗತಿಕ ಮಟ್ಟದ ಮಾರಾಟಗಾರರ ಸಮಾವೇಶ.. ಹಲವಾರು ಮಾರಾಟಗಾರರನ್ನು ಭೇಟಿ ಮಾಡಿದ ಅನುಭವ ಖುಷಿ ಕೊಟ್ಟಿತು.. ಜೊತೆಯಲ್ಲಿ ನಮ್ಮ ಆಫೀಸಿನ ದಿಗ್ಗಜರ ಜೊತೆಯಲ್ಲಿ ಚಿತ್ರ ತೆಗಿಸಿಕೊಂಡದ್ದು.. ಸಂತಸ ಕೊಟ್ಟಿತು.. ಇಡೀ ಕಾರ್ಯಕ್ರಮ ಜರ್ಮನ್ ಭಾಷೆಯಲ್ಲಿ ನೆಡೆದರೂ ನನ್ನ ಸಹೋದ್ಯೋಗಿಗಳು ಅದರ ಸಾರಾಂಶವನ್ನು ಆಂಗ್ಲ ಭಾಷೆಯಲ್ಲಿ ತರ್ಜುಮೆ ಮಾಡುತ್ತಿದ್ದರು..

ಊಟದ ಸಮಯದಲ್ಲಿಯೂ ಕೂಡ.. ನಾ ಶುದ್ಧ ಸಸ್ಯಾಹಾರಿ ಆಗಿದ್ದರಿಂದ ಹೋಟೆಲಿನಲ್ಲಿ ಸಸ್ಯಾಹಾರಿ ಆಹಾರವನ್ನು ಮೊದಲು ಅವರು ತಿಂದು ಧೃಢ ಪಡಿಸಿಕೊಂಡು ನಂತರ ನನಗೆ ತಿನ್ನಲು ಹೇಳುತ್ತಿದ್ದರು .. ನಾ ಮನೆಯಲ್ಲಿ ಇದ್ದೀನಿ ಅನ್ನುವ ಅನುಭವ ಕೊಟ್ಟಿದ್ದು ಈ ರೀತಿಯ ಹೃದಯಕ್ಕೆ ಹತ್ತಿರವಾದ ನನ್ನ ಸಹೋದ್ಯೋಗಿಗಳಿಂದ..  :-)

ಸಂಜೆ ಇನ್ನೊಂದು ಧಮಾಕ ಕಾದಿತ್ತು.. ಕಾಸೆಲ್ ನಗರದ ಅತಿ ಎತ್ತರದ ಪ್ರದೇಶಕ್ಕೆ ಹೋದೆವು.. ಹರ್ಕ್ಯುಲಸ್ ಎನ್ನುವ ಈ ಜಾಗ ಸುಂದರವಾಗಿತ್ತು.. ಮತ್ತು ನಾ  ಇಲ್ಲಿಯೇ ಮಂಗನಾಗಿದ್ದು.. ತಂಪಾಗಿದ್ದ ಜಾಗ.. ಮೋಡಗಳು ಫೋಟೋ ತೆಗೆಯಲು ಪ್ರಶಸ್ತವಾದ ವಾತಾವರಣ ಸಿದ್ಧವಾಗಿತ್ತು.. ಕ್ಯಾಮೆರಾ ತೆಗೆದೇ... ಕ್ಲಿಕ್ ಮಾಡಿದೆ.. ಕ್ಲಿಕ್ ಆಗ್ತಾ ಇಲ್ಲ .. ಬ್ಯಾಟರಿ ತೊಂದರೆಯೇ ಎಂದು ತೆಗೆದು ನೋಡಿದೆ.. ಸರಿಯಾಗಿತ್ತು.. ಜೂಮ್ ನೋಡಿದೆ ಸರಿಯಾಗಿತ್ತು... ಯಾಕೋ ಅನುಮಾನ ಬಂದು... ಮೆಮೊರಿ ಕಾರ್ಡ್ ನೋಡಿದೆ.. ಅದು ಅಲ್ಲೇ ಇರಲಿಲ್ಲ.. ಹಿಂದಿನ ದಿನ ತೆಗೆದ ಫೋಟೋಗಳನ್ನು ಲ್ಯಾಪ್ಟಾಪಿಗೆ ಹಾಕಿದ ಮೇಲೆ ಕಾರ್ಡನ್ನು ಅಲ್ಲಿಯೇ  ಬಿಟ್ಟಿದ್ದೆ.. ಕ್ಯಾಮೆರಾ ಹಿಡಿಯಲು ಶುರುಮಾಡಿದ ಮೇಲೆ ಮಾಡಿದ ಭಯಂಕರ ಮಂಗಾಟ.. :-(
ಈ  ದೃಶ್ಯವನ್ನು ತೆಗೆಯಲು ಹೋದಾಗ ಗೊತ್ತಾಯಿತು
ಮೆಮೊರಿ ಕಾರ್ಡ್ ಇಲ್ಲ ಅಂತ 

ಸುಂದರ ನೋಟ 

ಕಾಸೆಲ್  ನಗರದ ಸುಂದರ ನೋಟ 







ಮೊಬೈಲಿನಲ್ಲಿಯೇ ಹಲವಾರು ಚಿತ್ರ ತೆಗೆದೇ.. ಆದರೂ ನನ್ನ ಕ್ಯಾಮೆರಾದ ಸಹಾಯ ಪಡೆಯಲಿಲ್ಲ ಎನ್ನುವ ಬೇಸರ ತುಂಬಾ ಕಾಡಿತ್ತು.. ಒಂದು ಪುಟ್ಟ ಕರೆ ಮನೆಗೆ.. ಒಂದು ಪುಟ್ಟ ಮಾತು ಕತೆ.. ಮಡದಿ ಮಗಳು ಖುಷಿ ನಾನೂ ಖುಷಿ..

ಈ ಪ್ರದೇಶ ಕಾಸೆಲ್ ನಗರದಲ್ಲಿಯೇ ಎತ್ತರವಾದ ಪ್ರವಾಸಿ ಸ್ಥಳ ಎಂದು ಹೇಳುತ್ತಾರೆ.. ಅದಕ್ಕೆ ತಕ್ಕ ಹಾಗೆ ಈ ಬೆಟ್ಟವನ್ನು ಅಚ್ಚುಕಟ್ಟಾಗಿ ನೋಡಿಕೊಂಡಿರುವ ಬಗ್ಗೆಯೂ ಇಷ್ಟವಾಗುತ್ತದೆ.. ನಾವು ಹೋದಾಗ ಹರ್ಕ್ಯುಲೆಸ್ ಪ್ರತಿಮೆಯ ಸುತ್ತಾ ದುರಸ್ತಿ ಕೆಲಸ ನೆಡೆಯುತ್ತಿತ್ತು...ಸುಂದರವಾದ ಪ್ರತಿಮೆ ಅದು..

ಆ ಪ್ರತಿಮೆಯನ್ನು ಸುತ್ತಿ ಕೆಳಗೆ ಬಂದರೆ.. ಅಲ್ಲಿ ಇನ್ನಷ್ಟು ಮೂರ್ತಿಗಳು.. ಮತ್ತೆ ನೀರು ಹರಿದು ಹೋಗಲು ಮಾಡಿರುವ ವ್ಯವಸ್ಥೆ..
ನೀರಿನ ಆಟವನ್ನು ಆಡುತ್ತಾರೆ ಅಂತ ನನ್ನ ಸಹೋದ್ಯೋಗಿಗಳು ಹೇಳಿದರು.. ಆ ಪ್ರತಿಮೆಯ ಬುಡದಿಂದ.. ಕಣ್ಣಿಗೆ ಕಾಣುವಷ್ಟು ದೂರ ನೀರಿನ ಹಾದಿಗೆ ಜಲಪಾತದ ರೂಪ ಕೊಟ್ಟಿದ್ದಾರೆ.. ಮತ್ತೊಮ್ಮೆ ಅವಕಾಶ ಸಿಕ್ಕಿದರೆ.. ಆ ಸಮಯದಲ್ಲಿ ಹೋಗುವ ಬಯಕೆ ಇದೆ :-)

ಸುಮಾರು ಹೊತ್ತು ಕಚಪಚ ಮಾತಾಡುತ್ತಾ.. ಒಬ್ಬರನ್ನು ಇನ್ನೊಬ್ಬರು ರೇಗಿಸುತ್ತಾ ಕಾಲ ಕಳೆದೆವು.. ಅಲ್ಲಿಂದ ಹೊರಟು
ಊಟಕ್ಕೆ ಬಂದೆವು ನಗರದ ಮಧ್ಯ ಭಾಗಕ್ಕೆ.. ಎರಡು ಘಂಟೆಗಳು ಸುಯ್ ಅಂತ ಓಡಿ ಹೋಯಿತು..

ಆಗ ನನ್ನಿಷ್ಟದ ಮಳೆ.. ತನ್ನ ಚಮತ್ಕಾರವನ್ನು ತೋರಿಸಿತು.. ನಾ ಹೋದ ದಿನದಿಂದ ಎಲ್ಲರೂ ನನಗೆ ಹೇಳುತ್ತಿದ್ದರು.. ಶ್ರೀಕಾಂತ್ ನೀ ಒಬ್ಬನೇ ಬರಲಿಲ್ಲ.. ನಿನ್ನ ಜೊತೆ ಬೆಂಗಳೂರಿನಿಂದ ಸೂರ್ಯನನ್ನು ಕರೆದು ತಂದಿದ್ದೀಯ.. ನಮಗೆ ಸೆಕೆ ತಡೆಯಲಾಗುತ್ತಿಲ್ಲ.. ನೀ ಮಾತ್ರ ಆರಾಮಾಯಾಗಿ ಇದ್ದೀಯ ಎಂದು :-)...

ಅವರ ಆಪಾದನೆಯನ್ನು ನಗುತ್ತಾ ಸ್ವೀಕರಿಸಿದ ನಾನು ಅಂದಿನ ಮಳೆ ಬಂದು.. ಆ ಭೂ ಪ್ರದೇಶ ತಂಪಾದ ಮೇಲೆ ಮಾರನೇ ದಿನ ನಾ ಹೇಳಿದೆ.. ಹೌದು ನಾ ಸೂರ್ಯನನ್ನು ಕರೆತಂದಿದ್ದೆ.. ಈಗ ನಾ ವಾಪಾಸ್ ಹೋಗುವಾಗ ಕರೆದೊಯ್ಯುತ್ತಿದ್ದೇನೆ.. ಎಂದೇ..  ಸೂಪರ್ ಶ್ರೀ ಅಂದರು...

ಶುಕ್ರವಾರ.. ಸಂಜೆ ಕಾಸೆಲ್ ಬಿಡಬೇಕಿತ್ತು.. ಆಫೀಸಿನಲ್ಲಿ ನನ್ನ ಮಿತ್ರರಾದ ಸಹೋದ್ಯೋಗಿಗಳನ್ನು ಭೇಟಿ ಮಾಡಿ.. ನನ್ನ ಕೆಲಸವನ್ನೆಲ್ಲ ಪೂರೈಸಿದೆ.. ಸಂಜೆ ಕಾಸೆಲ್ ಬಿಡುವಾಗ.. ಯಾಕೋ ಮನಸ್ಸು ಭಾರವಾಗಿತ್ತು.. ಮೊದಲ ಭೇಟಿಗೆ ಕಾಸೆಲ್ ನನ್ನ ಮನಸ್ಸು ಗೆದ್ದಿತ್ತು.. !

ಸಂಜೆ ಜೆ ಎಂ ಗೆ ಕರೆ ಮಾಡಿದೆ.. ಇಷ್ಟು ಹೊತ್ತಿನ ಟ್ರೈನಿಗೆ ಹೋರಡುತ್ತಿದ್ದೇನೆ.. ಅಂದೇ.. ಅವ ನೀ ಅಲ್ಲಿ ಫ್ರಾಂಕ್ಫರ್ಟ್ ನಲ್ಲಿ ಇಳಿದು ಕರೆ ಮಾಡು.. ನಾ ಅಲ್ಲಿಗೆ ಬರುತ್ತೇನೆ.. ಎಂದಾ..

ವಾಪಾಸ್ ಬರುವಾಗ ಟ್ರೈನ್ ಹತ್ತಿದೆ.. ಅದು ದೂರ ಪ್ರಯಾಣ ಮಾಡುತ್ತಿದ್ದ ಟ್ರೈನ್.. ೨೦೦ ಕಿಮಿ ದಾಟುತ್ತಿತ್ತು.. ಕೆಲವೊಮ್ಮೆ ೨೫೦ - ೨೭೦ ದಾಟುತ್ತಿತ್ತು.. ಕೂರಲು ಸ್ಥಳವಿದ್ದರೂ.. ನಿಂತುಕೊಂಡೆ ಬಂದೆ.. ೨೦೦ ಕಿಮೀಗಳು ಒಂದೂವರೆ ತಾಸಿನಲ್ಲಿ ಮುಗಿಯುವ ಈ ಪಯಣವನ್ನು ನಿಂತುಕೊಂಡೆ ಆಸ್ವಾದಿಸಲು ಮನಸ್ಸು ಸಿದ್ಧವಾಗಿತ್ತು.. !!!

ಟಿಂಗ್ ಟಾಂಗ್.. ಟಿಂಗ್ ಟಾಂಗ್... ಜರ್ಮನ್ ಭಾಷೆಯಲ್ಲಿ ನಾ ಇಳಿಯುವ ಸ್ಥಳ ಬರಲಿದೆ ಎಂದು ಹೇಳುತ್ತಿತ್ತು.. ಜೊತೆಯಲ್ಲಿ ಫಲಕವೂ ಕೂಡ ಆ ವಿವರವನ್ನು ಸಾರುತ್ತಿತ್ತು... !!!

ಮುಂದೆ.. ನನ್ನ ಜೀವದ ಗೆಳೆಯನ ಜೊತೆ ಸುಮಾರು ೬೦-೭೦ ಘಂಟೆಗಳ ಸುಮಧುರ ಸಮಯ..

ಕ್ರೀಕ್ ಕ್ರೀಕ್.. ಫ್ರಾಂಕ್ಫರ್ಟ್ ಬಂತು.. ....!!!

13 comments:

  1. ಸುಂದರವಾದ ಬರವಣಿಗೆ ಶ್ರೀ felt that naave Germany pravasa maadeda haagoithu, beautiful related pictures wow really wonderful Sri hats off estu busy schedule nallu u wrote third part of Germanya pravasa ����������

    ReplyDelete
    Replies
    1. ಧನ್ಯವಾದಗಳು ಪಿಬಿಎಸ್ ಸೊಗಸಾದ ಪ್ರತಿಕ್ರಿಯೆ

      Delete
  2. ನೀವು ಇಲ್ಲಿನ ತಾಪಮಾನ ಕೊಂಡೂಯ್ದರೂ ಕಾಸಲ್ ನಗರ ವಿನ್ಯಾಸ ಅಲ್ಲಿನ ನೈರ್ಮಲ್ಯ, ರಸ್ತೆಗಳು, ಅರಮನೆ, ಉದ್ಯಾನವನ ಎಲ್ಲವೂ ಮನಸಿಗೆ ತಂಪೆರಚುವಂತೇ ಇದೆ..
    ಡಾಕ್ಯುಮೆಂಟಾ ಕಾರ್ಯಕ್ರಮದ ಚಿತ್ರ ಚೆನ್ನಾಗಿದೆ.. ಪುಸ್ತಕ ಕೂಡಾ ನಿಷೇಧಪಡಿಸುವ ವಿಷಯ ವಿಶೇಷ ಅನಿಸುತ್ತದೆ.. ( ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಅಂತಾ ಹಾದಿ ಬೀದಿಗೆ ಇಳಿದು ಕಿರುಚಾಡಲ್ವಾ?!!!
    ಅಂತಹ ಪುಸ್ತಕಗಳಿಗೆ ಪುಕ್ಕಟೆಯಾಗಿಯೇ ಪ್ರಚಾರ ಗಿಟ್ಟುವ ಗುಟ್ಟು ಈ ಮಾರ್ಗ ಅಂತ ಪಾಪ ಗೊತ್ತಿಲ್ಲವೇನೋ..)
    ಎತ್ತರದ ಹರ್ಕ್ಯುಲಸ್ ಪ್ರದೇಶ ಮನಮೋಹಕ.. ಲ್ಯಾಪ್ಟಾಪಲ್ಲಿ ಮರೆತು ಬಿಟ್ಟ ಕ್ಯಾಮೆರಾ ಮೆಮೊರಿಗಿಂತಾ ಲ್ಯಾಪ್ಟಾಪನೊಳಗೆ ಸ್ಥಳ, ಸಂಧರ್ಭ ಅಚ್ಚುಕಟ್ಟಾಗಿ ಮೂಡಿಸುವ ನಿಮ್ಮ ಇನ್ ಬಿಲ್ಟ ಮೆಮೋರಿ ಚಿಪ್ ಅದ್ಭುತ..
    ಕನಸಲ್ಲಾದರೂ ಒಮ್ಮೆ ಹೊಗಿ ಬರುವಂತಹ ಜಾಗ..
    ಪ್ರಸ್ತುತ ಪಡಿಸಿದ ಬರಹ ಇಷ್ಟವಾಯ್ತು..

    ReplyDelete
    Replies
    1. ಎಂ ಎಸ್. ಸೊಗಸಾಗಿದೆ ನೀ ಬರೆದ ಪ್ರತಿಕ್ರಿಯೆ... ಓದುಗರ ಈ ಪ್ರೋತ್ಸಾಹವೇ ಬರೆಯೋಕೆ ಶಕ್ತಿ ನೀಡುತ್ತೆ .. ಧನ್ಯವಾದಗಳು

      Delete
  3. ಪ್ರವಾಸ ಕಥನ, ಒಂದನೆಯ ಭಾಗಕ್ಕಿಂತ, ಎರಡನೆಯದು, ಎರಡನೆಯ ಭಾಗಕ್ಕಿಂತ ಮೂರನೆಯದು ಸುಂದರವಾಗಿ ಮೂಡಿಬಂದಿದೆ. ಶ್ರೀಯ ಜೊತೆಗಿನ ಜರ್ಮನಿ ಪ್ರವಾಸ ಅದ್ಬುತ ಅನುಭವ. ಮುಂದಿನ ಸಂಚಿಕೆ, ಮುಂದಿನ ಪಯಣದ ಅನುಭವಕ್ಕೆ ಕುತೂಹಲದಿಂದ ಕಾಯುವಂತಾಗಿದೆ! ಸೂಪರ್ ಶ್ರೀ!

    ReplyDelete
    Replies
    1. ಧನ್ಯವಾದಗಳು ಗೆಳೆಯ.. ಮನಸ್ಸಿಗೆ ಸಮಾಧಾನ ನೀಡುವುದು ನಿನ್ನ ಪ್ರತಿಕ್ರಿಯೆ

      Delete
  4. ಮೊಬೈಲ್‍ದಲ್ಲಿ ತೆಗೆದ ಚಿತ್ರಗಳೂ ಸಹ ಸುಂದರವಾಗಿವೆ. ನಿಮ್ಮ ಅನುಭವಕಥನ ಗೆಳೆಯನೊಬ್ಬನು ಹತ್ತಿರ ಕೂತು ಮಾತನಾಡಿದಂತೆ ಅನಿಸುತ್ತಿತ್ತು. ಅಭಿನಂದನೆಗಳು ಹಾಗು ಶುಭಾಶಯಗಳು.

    ReplyDelete
    Replies
    1. ಗುರುಗಳೇ ನಿಮ್ಮ ಪ್ರತಿಕ್ರಿಯೆಯೇ ಒಂದು ಉಡುಗೊರೆ.. ಧನ್ಯವಾದಗಳು

      Delete
  5. Well, am seeing the place through your writing. Very nice Sri..

    ReplyDelete
  6. ಶ್ರೀ..... ಸೂಪರ್....ಅಷ್ಟೇ ಹೇಳಿದರೆ ಏನೂ ಸಾಲದು.
    ನಿಮ್ಮ ಬರವಣಿಗೆಯ ವಿಶೇಷನೇ ಹೀಗೆ.ನಾವೇ ಪ್ರವಾಸ ಮಾಡಿದ ಅನುಭವ ಕೊಡುವಂತದ್ದು.
    ನಿಮ್ಮ ಮುಂದಿನ ಪ್ರವಾಸ ಎಲ್ಲಿಗೆ? ಯಾವಾಗ?ನಮಗೆ ಮತ್ತೂಂದು ದೇಶವನ್ನು ನಿಮ್ಮ ಬರವಣಿಗೆಯ ಮೂಲಕ ಸುತ್ತುವ ಮನಸ್ಸು.����������������

    ReplyDelete
    Replies
    1. ದೇವರ ಅನುಗ್ರಹ ಬರೆಯುತ್ತಾ ಹೋಗುತ್ತಿದೆ ಮನಸ್ಸು.. ಧನ್ಯವಾದಗಳು ಫ್ರೆಂಡ್

      Delete
  7. uttma chayarahanadondige nirupane tumba ishtawaytu..

    ReplyDelete