ನಮ್ಮ ಜೀವನವೇ ಒಂದು ಕೀಲಿ ಮಣೆ.. ಹೇಗೆ ಅಂತೀರಾ.. ನಡೆಯಿರಿ ಒಂದು ಹೆಜ್ಜೆ ಹೋಗಿ ಬರೋಣ.. !
ಚಿತ್ರ ಕೃಪೆ ಅಂತರ್ಜಾಲ |
ಮೊದಲನೇ ಸಾಲು function ಕೀಲಿಗಳು... ದೇವರಿದ್ದ ಹಾಗೆ.. ಪ್ರತಿ ಕೀಲಿಗಳು ಅದರದೇ ಜವಾಬ್ಧಾರಿಗಳನ್ನು ಹೊತ್ತಿರುತ್ತವೆ
ಅದರ ಕೆಳಗಿನ ಸಾಲು ಸಂಖ್ಯೆಗಳು ಮತ್ತು ಚಿನ್ಹೆಗಳು .. ಮಾಡಿದ ಪಾಪ ಪುಣ್ಯಗಳಿಗೆ ತಕ್ಕ ಹಾಗೆ shift ಒತ್ತಿದರೆ ಪುಣ್ಯದ ಚಿನ್ಹೆಗಳು, ಹಾಗೆಯೇ ಒತ್ತಿದರೆ ಅಂಕೆಗೆ ಒಳಪಡಬೇಕಾದ ಸಂಖ್ಯೆಗಳು
ಇನ್ನು ಜೀವನವನ್ನು ಹೊಂದಿಸಿಕೊಂಡು ಹೋಗಬೇಕು ಎಂಬ ನೀತಿ ಸಾರುವ ಅಕ್ಷರಗಳು ಹೇಗೋ ಹೇಗೋ ಒತ್ತಿಕೊಂಡು ಒತ್ತಿಕೊಂಡು ಕೂತಿರುತ್ತವೆ. ನಮಗೆ ಬೇಕಾದ ಅಕ್ಷರಗಳನ್ನು ಒತ್ತಿ ಒತ್ತಿ ಒಂದು ಸುಂದರ ಪದಗಳನ್ನು ಮಾಡಿಕೊಂಡ ಹಾಗೆ ಸರಿಯಾದ ಭಾವನೆಯನ್ನು, ಭಾವವನ್ನು ಜೋಡಿಸಿಕೊಂಡು ಜೀವನದ ಪದಗಳನ್ನು ಹುಡುಕಿಕೊಳ್ಳಬೇಕು
ಅದರ ಸುತ್ತ ಮುತ್ತಾ ಕ್ಯಾಪ್ಸ್ ಲಾಕ್ ಜೀವನವನ್ನು ದೊಡ್ಡದಾಗಿ ನೋಡಬೇಕು ಎಂದು ತೋರಿದರೆ, ಟ್ಯಾಬ್ ಗಳು ಸಂಕಷ್ಟಗಳು ಬಂದಾಗ ಒಂದು ಕಡೆಯಿಂದ ಇನ್ನೊಂದು ಕಡೆ ನೆಗೆ ಎಂದು ತೋರಿಸುತ್ತೆ. ಶಿಫ್ಟ್ ಕೀಲಿಗಳು ಒತ್ತಡ ಬಂದಾಗ ಸ್ವಲ್ಪ ಹೊತ್ತು ಪಕ್ಕಕ್ಕೆ ಸರಿಸಿ ಮುಂದೆ ಸಾಗು ಎಂದರೆ, ಜೀವನದ ಪಥವನ್ನು ನಿಯಂತ್ರಿಸು ಎಂದು control ಕೀಲಿ ಹೇಳುತ್ತೆ.
ಉಪಾಯಗಳು ಸರಿಯಾಗಿ ಬಾರದೆ.. ಮುಂದೇನು ಎಂದಾಗ.. ಇನ್ನೊಂದು ಬದಲಿ ಉಪಾಯ ಹುಡುಕು ಎನ್ನುವುದನ್ನು alt ಕೀಲಿ ಕೂಗಿಹೇಳುತ್ತೆ, ದುಃಖಗಳನ್ನು delete ಮಾಡು ಅಂತ ಹೇಳುತ್ತಾ ಕೆಲವೊಮ್ಮೆ ಹಿಂದೆ ಕಲಿತ ಪಾಠವನ್ನು ನೆನಪಿಸಿಕೋ ಎಂದು backspace ಕೀಲಿ ಸಾರುತ್ತೆ.
ಆಶಾವಾದಿಯಾಗಿರು ಎಂದು pageup ಹೇಳುತ್ತೆ.. ಏನೇ ಸುಖ ಬಂದರೂ ಅಹಂ ಕೆಳಗಿರಲಿ ಎಂದು pagedown ಹೇಳುತ್ತೆ,
ಮನೆಯೇ ಮೊದಲು ಎಂದು home, ಸ್ನೇಹಿತರನ್ನು ಸೇರಿಸಿಕೊ ಎಂದು insert, ಕೆಟ್ಟ ಘಟನೆಗಳಿಗೆ ಮುಕ್ತಾಯ ಅಂತ end ಹೇಳುತ್ತೆ,
ಕೆಲವೊಮ್ಮೆ ತಲೆ ಕೆಟ್ಟ ಹುಳುವಾದರೆ... ಸ್ವಲ್ಪ ಹೊತ್ತು ಇದರಿಂದ ಹೊರಗೆ ಹೋಗು ಎಂದು esc ಕೀಲಿ ಹೇಳುತ್ತೆ.
ಪ್ರತಿಯೊಂದಕ್ಕು, ಪ್ರತಿಯೊಬ್ಬರ ವಿಷಯದಲ್ಲೂ ಅಂತರ ಇಟ್ಟುಕೊಳ್ಳಬೇಕು ಎನ್ನುವ ಬೇಲಿಯನ್ನು spacebar ಹೇಳುತ್ತೆ.
ಇನ್ನು ಜೀವನ ಬೆಳಗಲು, ಸುತ್ತ ಮುತ್ತ ನೋಡಲು ಎಲ್ಲಾ ದಿಕ್ಕುಗಳಲ್ಲೂ ತಿರುಗುವ ಕೀಲಿಗಳು (arrow).
ಸುಂದರ ಜೀವನಕ್ಕೆ ರಹದಾರಿ ಎಂದು enter ಕೀಲಿ ಹೇಳಿದರೆ.. ಬೇಸರವಾದರೂ ಎಂದಿಗೂ ctrl alt del ಒತ್ತಬೇಡ ಎಂದು restart ಕೀಲಿ ಹೇಳುತ್ತೆ..
ಜೀವನವೇ ಒಂದು ನಾಟ್ಯ ರಂಗ.. ನಾವೆಲ್ಲಾ ಕುಣಿಯಲೇ ಬೇಕು.. ಯಾಕೆಂದರೆ mouse ಹಿಡಿದು ಓಡಾಡಿಸುವ ಸೂತ್ರಧಾರ pointer ಮೂಲಕ ನಮ್ಮನ್ನು ನಿಯಂತ್ರಿಸುತ್ತಿರುತ್ತಾನೆ.
ಜೀವನ laptop ಅಲ್ಲಾ.. ಜೀವನ desktop ಕೂಡ ಅಲ್ಲಾ.. ಜೀವನ ಒಂದು code ಇದ್ದ ಹಾಗೆ ಅದನ್ನು decode ಮಾಡಲು program ಭಾಷೆ ಬೇಕು.. ಅದುವೇ ನಗುವಿನ ಭಾಷೆ.. ಸ್ನೇಹದ ಭಾಷೆ.. ಅಲ್ಲವೇ
ಜೀವನದ ಸುಂದರ ಕ್ಷಣಗಳು ನಮ್ಮನ್ನು ಉಲ್ಲಸಿತವಾಗಿ ಇಡಲು ಪಣ ತೊಟ್ಟಾಗ.. ಬೇಡವಾದ ಚಿಂತೆಗಳನ್ನು, ಕಾಡುವ ಬೇಡದ ವ್ಯಸನಗಳನ್ನು ಹಿಡಿದು ಎಳೆದು ಎಳೆದು ತಂದು ಬಾಡುವ ಹೂವಾಗಿ ಏಕೆ ಮಾಡಿಕೊಳ್ಳಬೇಕು... !!!!