ಯಥಾ ಪ್ರಕಾರ ದಿನಕರ ತನ್ನ ಮನೆಯಲ್ಲಿದ್ದ ದಿನಸೂಚಿಯ ಇನ್ನೊಂದು ಚೀಟಿಯನ್ನು ತಿರುವಿ ಹಾಕಿದ. ಅರೆ ಅರೆ ಎನುತ್ತಾ ನೋಡಿದಾಗ ಅವನ ದಿನವೇ ಮೂಡಿ ಬಂದಿತ್ತು ಬಂದಿತ್ತು.
ಕೈಲಾಸದಲ್ಲಿ ಗಣಪನಿಗೆ ಎಲ್ಲರೂ ಹುಡುಕಾಡುತ್ತಿದ್ದರು. ಗಣಪನು ಇರಲಿಲ್ಲ ಅವನ ವಾಹನವೂ ಕಾಣುತ್ತಿರಲಿಲ್ಲ. ಪಾರ್ವತಿ ಓಡುತ್ತಾ ಬಂದಾಗ ಶಿವ ತಡೆದು .. ಶಿವ ಹಸನ್ಮುಖನಾಗಿ,
"ತಡಿ ಪಾರ್ವತಿ..ಅಲ್ಲಿ ನೋಡು . ನಮ್ಮ ರಂಗಸ್ವಾಮಿಯವರ ವಂಶದ ಕುಡಿಗಳು ಒಂದೇ ಸೂರಿನಡಿ ಸಂಧಿಸುತ್ತಿವೆ. ಅದಕ್ಕಾಗಿ ಅವರಿಗೆ ಸ್ವಾಗತ ನೀಡಲು ಗಣಪ ಹಲಗೆಯ ಹಾಳೆಯ ಮೇಲೆ ತನ್ನ ಮೂಷಿಕವಾಹನವನ್ನು ಕೂರಿಸಿಕೊಂಡು ಮೂಡುತ್ತಿದ್ದಾನೆ"
---------------------------------------------------------------------------------
ನಿನ್ನೆ ಏಪ್ರಿಲ್ ೭ ೨೦೧೩ , ಹೊಸ ಸಂವತ್ಸರಕ್ಕೆ ಇನ್ನು ಕೇವಲ ನಾಲ್ಕೇ ದಿನಗಳು ಇದ್ದವು. ಆದರೆ ಕೋರವಂಗಲದ ಕುಟುಂಬದಲ್ಲಿ ಒಂದು ಹೊಸ ಸಂವತ್ಸರಕ್ಕೆ ನಾಂದಿ ಹಾಡಲು ದೊಡ್ಡಪ್ಪ, ಚಿಕ್ಕಪನವರ ಕುಟುಂಬಗಳು ಸಜ್ಜಾಗಿದ್ದವು.
ಕೋರವಂಗಲದ ಕುಡಿಗಳು ಸರಿ ಸುಮಾರು ೧೨ ಘಂಟೆಯ ಹೊತ್ತಿಗೆ ಒಂದೊಂದೇ ಕುಟುಂಬ ಸಾಗರದ ಅಲೆಗಳಂತೆ ಬಂದು ವಿಜಯನ ಮನೆಯಲ್ಲಿ ಸೇರುತ್ತಿದ್ದರು. ಅವನ ಲ್ಯಾಪ್-ಟಾಪ್ ನಲ್ಲಿ ಬೆರೆತ ಜೀವ ಚಿತ್ರದ ಹಾಡು ಮೆಲುದನಿಯಲ್ಲಿ ಕೇಳುತಿತ್ತು.
"ಒಂದಾಗಿ ಬಾಳುವ
ಕೈಲಾಸದಲ್ಲಿ ಗಣಪನಿಗೆ ಎಲ್ಲರೂ ಹುಡುಕಾಡುತ್ತಿದ್ದರು. ಗಣಪನು ಇರಲಿಲ್ಲ ಅವನ ವಾಹನವೂ ಕಾಣುತ್ತಿರಲಿಲ್ಲ. ಪಾರ್ವತಿ ಓಡುತ್ತಾ ಬಂದಾಗ ಶಿವ ತಡೆದು .. ಶಿವ ಹಸನ್ಮುಖನಾಗಿ,
ತಡಿ ಪಾರ್ವತಿ..ಅಲ್ಲಿ ನೋಡು |
ಗಣಪನನ್ನು ಮೂಡಿಸಿದ ವಿಷ್ಣು! |
ಕೋರವಂಗಲದ ಕುಟುಂಬಕ್ಕೆ ಸ್ವಾಗತ! |
ನಿನ್ನೆ ಏಪ್ರಿಲ್ ೭ ೨೦೧೩ , ಹೊಸ ಸಂವತ್ಸರಕ್ಕೆ ಇನ್ನು ಕೇವಲ ನಾಲ್ಕೇ ದಿನಗಳು ಇದ್ದವು. ಆದರೆ ಕೋರವಂಗಲದ ಕುಟುಂಬದಲ್ಲಿ ಒಂದು ಹೊಸ ಸಂವತ್ಸರಕ್ಕೆ ನಾಂದಿ ಹಾಡಲು ದೊಡ್ಡಪ್ಪ, ಚಿಕ್ಕಪನವರ ಕುಟುಂಬಗಳು ಸಜ್ಜಾಗಿದ್ದವು.
ಕೋರವಂಗಲದ ಕುಡಿಗಳು ಸರಿ ಸುಮಾರು ೧೨ ಘಂಟೆಯ ಹೊತ್ತಿಗೆ ಒಂದೊಂದೇ ಕುಟುಂಬ ಸಾಗರದ ಅಲೆಗಳಂತೆ ಬಂದು ವಿಜಯನ ಮನೆಯಲ್ಲಿ ಸೇರುತ್ತಿದ್ದರು. ಅವನ ಲ್ಯಾಪ್-ಟಾಪ್ ನಲ್ಲಿ ಬೆರೆತ ಜೀವ ಚಿತ್ರದ ಹಾಡು ಮೆಲುದನಿಯಲ್ಲಿ ಕೇಳುತಿತ್ತು.
"ಒಂದಾಗಿ ಬಾಳುವ
ಒಲವಿಂದ ಆಳುವ
ಸಹ ಜೀವನ ಸವಿ ಜೇನಿನ ಸದನ
ಒಂದಾಗಿ ಬಾಳುವ"
ಎಲ್ಲರೂ ಒಂದು.... ಎಲ್ಲರಲ್ಲೂ ಒಂದು ಎಂಬ ಭಾವವನ್ನು ಭಿತ್ತಿ ಬೆಳೆಸಿದ್ದ ರಂಗಸ್ವಾಮಿ ದಂಪತಿಗಳ ವಂಶದಲ್ಲಿ ಒಬ್ಬರನ್ನು ಒಬ್ಬರು ಭೇಟಿ ಮಾಡುವುದು, ಹರಟೆ ಹೊಡೆಯುವುದು ಮಾಮೂಲಿಯಾಗಿತ್ತು. ಆದರೆ ಎಲ್ಲರನ್ನೂ ಒಂದೇ ಛಾವಣಿಯ ಅಡಿಯಲ್ಲಿ ಸೇರಿಸಿ.. ಈ ಸುಸಂಧಿಯನ್ನು ನಿರಂತರ ಕಾರ್ಯಕ್ರಮವನ್ನಾಗಿ ಮಾಡಬೇಕೆನ್ನುವ ನಮ್ಮೆಲ್ಲರ ಹಂಬಲವನ್ನು ಕಾರ್ಯಕ್ಕೆ ಇಳಿಸಿದ ಕೀರ್ತಿ ವಿಜಯನಿಗೆ ಸೇರುತ್ತದೆ.
ಯಾವುದೇ ಒಂದು ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಹಿರಿಯರ ಆಶೀರ್ವಾದ ಮುಖ್ಯ... ಇದು ಎಲ್ಲರಿಗೂ ತಿಳಿದ ವಿಷಯ. ಆದರೆ ಆ ಕಾರ್ಯಕ್ರಮದ ಯಶಸ್ಸು ಮುಂದಿನ ತಲೆಮಾರಿಗೂ ಹರಿಯಬೇಕು ಎನ್ನುವುದಾದರೆ ಮುಂದಿನ ಪೀಳಿಗೆಯ ಹರಿಕಾರರಾದ ಪುಟಾಣಿಗಳು ನಲಿಯಬೇಕು. ಆ ಸಂತಸ ಹೊಳೆಯಲ್ಲಿ ಮಿಂದೆದ್ದ ಪುಟಾಣಿಗಳು ನಿಜಕ್ಕೂ ಈ ಶ್ರಮಕ್ಕೆ ಅದ್ಭುತ ಚಾಲನೆ ನೀಡಿದರು ಎಂದರೆ ತಪ್ಪಾಗದು.
ಕೆಲವೊಂದು ಸುಂದರ ಕ್ಷಣಗಳು ನಿಮಗಾಗಿ!
ಒಟ್ಟಾಗಿ ಕೂತು ಊಟ, ಹರಟೆ, ಕಷ್ಟ ಸುಖ ವಿಚಾರ ವಿನಿಮಯಗಳು, ಮುಂದಿನ ದಾರಿಯ ಬಗ್ಗೆ ಸೂಕ್ತ ಆಲೋಚನೆ ಹೀಗೆ ನಾನಾ ದಿಕ್ಕುಗಳಲ್ಲಿ ಯೋಚನಾ ಲಹರಿ ಸಾಗಿತ್ತು.
ಅಜ್ಜ ಅಜ್ಜಿ ಬೀಜ ಬಿತ್ತಿ, ನೀರು ಉಣಿಸಿ, ಆರೈಕೆ ಮಾಡಿ ಬೆಳೆಸಿದ ಈ ಕೋರವಂಗಲದ ವೃಕ್ಷದಲ್ಲಿ ಸದಾ ಹಸಿರು, ಉಸಿರಿನ ಹೂವು ಹಣ್ಣುಗಳು ಸದಾ ಚಿಗುರೊಡೆಯುತ್ತಾ ಇರಲಿ ಎನ್ನುವ ಆಶಯದೊಂದಿಗೆ ಇಂದಿನ ಒಂದೇ ಕಡೆಯಲ್ಲಿ ಎಲ್ಲರೂ ಎನ್ನುವ ಕಾರ್ಯಕ್ರಮ ಸುಸೂತ್ರವಾಗಿ ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತ ಹೊರಟಿತು!!!
---------------------------------------------------------------------------------
ಆರಾಮಾಗಿ ಸೀಟಿ ಹೊಡೆಯುತ್ತಾ ಇಲಿಯ ಮೇಲೆ ಕೈಲಾಸಕ್ಕೆ ಬಂದ ಗಣಪನನ್ನು ಕಂಡ ಮಾತೆ ಪಾರ್ವತಿ..
"ಮಗು ಹೇಗಿತ್ತಪ್ಪ ನಿನ್ನ ಭೂಲೋಕದ ಪಯಣ?"
"ಅಮ್ಮಾ ಏನು ಹೇಳಲಿ.. ಪ್ರತಿ ಬಾರಿ ಭಾದ್ರಪದ ಶುಕ್ಲದ ಚೌತಿಯಂದು ಮಾಡುವ ಭೂಲೋಕ ಪಯಣಕ್ಕಿಂತ.. ಈ ಪಯಣ ಖುಷಿಕೊಟ್ಟಿತು. ಇದೆ ರೀತಿಯ ಕಾರ್ಯಕ್ರಮ ಕೋರವಂಗಲದ ಈ ತುಂಬು ಕುಟುಂಬದಲ್ಲಿ ಸದಾ ನಡೆಯುತ್ತಿರಲಿ ಎನ್ನುವ ಆಶೀರ್ವಾದ ಮಾಡಿ ಬಂದಿದ್ದೇನೆ... ತುಂಬಾ ಖುಷಿಯಾಗುತ್ತಿದೆ ಅಮ್ಮಾ"
"ಮಗು ಮುಂದಿನ ಬಾರಿ ನಮ್ಮನ್ನು ಕರೆದುಕೊಂಡು ಹೋಗು.. ನಾವು ಬರುತ್ತೇವೆ"
"ಖಂಡಿತ ಅಮ್ಮಾ.. ಅಪ್ಪ ನಾನು ನೀನು ಸುಬ್ರಮಣ್ಯ ಎಲ್ಲರೂ ಕೂಡಿಯೇ ಹೋಗೋಣ... ಅರೆ ಅರೆ ನನ್ನ ಲ್ಯಾಪ್-ಟಾಪ್ ನಲ್ಲಿ ಆಗಲೇ ಒಂದು ಸಂದೇಶ ಬಂದಿದೆ... ಇರು ನೋಡ್ತೀನಿ"
To : Koravangala@onebigtree.com
Bcc: ganesh@kailaasa.com
ಆತ್ಮೀಯ ಸಹೋದರರಿಗೆ ಹಾಗೂ ಎಲ್ಲಾ ಕುಟುಂಬ ಸದಸ್ಯರಿಗೆ
ನಿಮ್ಮ ಅಮೂಲ್ಯವಾದ ಸಮಯವನ್ನು ನಮ್ಮೊಂದಿಗೆ ಕಳೆದಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು
Thanks & Regards
ವಿಜಯವಾಣಿ
Vijayanagar,
Bangalore - 560 040
"ಓಹ್ ಇದು ವಿಜಯನ ಸಂದೇಶ.. ನನಗೂ ಕಳಿಸಿದ್ದಾನೆ... ಮಗು ಶುಭವಾಗಲಿ.. ನಿನ್ನ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಸಿಗಲಿ.. ನಿಮ್ಮೆಲ್ಲರ ಕುಟುಂಬದ ಸಾಗರದಲ್ಲಿ ಸುಖ ಶಾಂತಿ ನೆಮ್ಮದಿಯ ಅಲೆಗಳು ಸದಾ ಬರುತ್ತಲೇ ಇರಲಿ!!!"
ಎಲ್ಲರೂ ಒಂದು.... ಎಲ್ಲರಲ್ಲೂ ಒಂದು ಎಂಬ ಭಾವವನ್ನು ಭಿತ್ತಿ ಬೆಳೆಸಿದ್ದ ರಂಗಸ್ವಾಮಿ ದಂಪತಿಗಳ ವಂಶದಲ್ಲಿ ಒಬ್ಬರನ್ನು ಒಬ್ಬರು ಭೇಟಿ ಮಾಡುವುದು, ಹರಟೆ ಹೊಡೆಯುವುದು ಮಾಮೂಲಿಯಾಗಿತ್ತು. ಆದರೆ ಎಲ್ಲರನ್ನೂ ಒಂದೇ ಛಾವಣಿಯ ಅಡಿಯಲ್ಲಿ ಸೇರಿಸಿ.. ಈ ಸುಸಂಧಿಯನ್ನು ನಿರಂತರ ಕಾರ್ಯಕ್ರಮವನ್ನಾಗಿ ಮಾಡಬೇಕೆನ್ನುವ ನಮ್ಮೆಲ್ಲರ ಹಂಬಲವನ್ನು ಕಾರ್ಯಕ್ಕೆ ಇಳಿಸಿದ ಕೀರ್ತಿ ವಿಜಯನಿಗೆ ಸೇರುತ್ತದೆ.
ಯಾವುದೇ ಒಂದು ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಹಿರಿಯರ ಆಶೀರ್ವಾದ ಮುಖ್ಯ... ಇದು ಎಲ್ಲರಿಗೂ ತಿಳಿದ ವಿಷಯ. ಆದರೆ ಆ ಕಾರ್ಯಕ್ರಮದ ಯಶಸ್ಸು ಮುಂದಿನ ತಲೆಮಾರಿಗೂ ಹರಿಯಬೇಕು ಎನ್ನುವುದಾದರೆ ಮುಂದಿನ ಪೀಳಿಗೆಯ ಹರಿಕಾರರಾದ ಪುಟಾಣಿಗಳು ನಲಿಯಬೇಕು. ಆ ಸಂತಸ ಹೊಳೆಯಲ್ಲಿ ಮಿಂದೆದ್ದ ಪುಟಾಣಿಗಳು ನಿಜಕ್ಕೂ ಈ ಶ್ರಮಕ್ಕೆ ಅದ್ಭುತ ಚಾಲನೆ ನೀಡಿದರು ಎಂದರೆ ತಪ್ಪಾಗದು.
ಕೆಲವೊಂದು ಸುಂದರ ಕ್ಷಣಗಳು ನಿಮಗಾಗಿ!
ನಮ್ಮನ್ನೆಲ್ಲ ಒಂದೇ ಕಡೆ ಸೇರಿಸಿಬಿಟ್ಟಿದ್ದಾರೆ ಹೆಂಗೋ ಗೊತ್ತಿಲ್ಲಪ್ಪಾ! |
ನಾವೆಲ್ಲರೂ ಒಂದು! |
ಚುನಾವಣೆಯಲ್ಲಿ ನಮ್ಮದೇ ಮತ ಇಲ್ಲವೇ ಮಠ! |
ನಾವೆಲ್ಲರೂ ನಮ್ಮೊಳಗೆಲ್ಲರು! |
ಹಲ್ಲು ಬಿಡೋದೇ ನಮ್ಮ ಕಾಯಕ! |
ಸರಸ್ವತಿ ನಗರದಲ್ಲಿ ರಂಗನಾಥ! |
ಅಜ್ಜ ಅಜ್ಜಿ ಬೀಜ ಬಿತ್ತಿ, ನೀರು ಉಣಿಸಿ, ಆರೈಕೆ ಮಾಡಿ ಬೆಳೆಸಿದ ಈ ಕೋರವಂಗಲದ ವೃಕ್ಷದಲ್ಲಿ ಸದಾ ಹಸಿರು, ಉಸಿರಿನ ಹೂವು ಹಣ್ಣುಗಳು ಸದಾ ಚಿಗುರೊಡೆಯುತ್ತಾ ಇರಲಿ ಎನ್ನುವ ಆಶಯದೊಂದಿಗೆ ಇಂದಿನ ಒಂದೇ ಕಡೆಯಲ್ಲಿ ಎಲ್ಲರೂ ಎನ್ನುವ ಕಾರ್ಯಕ್ರಮ ಸುಸೂತ್ರವಾಗಿ ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತ ಹೊರಟಿತು!!!
---------------------------------------------------------------------------------
ಆರಾಮಾಗಿ ಸೀಟಿ ಹೊಡೆಯುತ್ತಾ ಇಲಿಯ ಮೇಲೆ ಕೈಲಾಸಕ್ಕೆ ಬಂದ ಗಣಪನನ್ನು ಕಂಡ ಮಾತೆ ಪಾರ್ವತಿ..
"ಮಗು ಹೇಗಿತ್ತಪ್ಪ ನಿನ್ನ ಭೂಲೋಕದ ಪಯಣ?"
"ಅಮ್ಮಾ ಏನು ಹೇಳಲಿ.. ಪ್ರತಿ ಬಾರಿ ಭಾದ್ರಪದ ಶುಕ್ಲದ ಚೌತಿಯಂದು ಮಾಡುವ ಭೂಲೋಕ ಪಯಣಕ್ಕಿಂತ.. ಈ ಪಯಣ ಖುಷಿಕೊಟ್ಟಿತು. ಇದೆ ರೀತಿಯ ಕಾರ್ಯಕ್ರಮ ಕೋರವಂಗಲದ ಈ ತುಂಬು ಕುಟುಂಬದಲ್ಲಿ ಸದಾ ನಡೆಯುತ್ತಿರಲಿ ಎನ್ನುವ ಆಶೀರ್ವಾದ ಮಾಡಿ ಬಂದಿದ್ದೇನೆ... ತುಂಬಾ ಖುಷಿಯಾಗುತ್ತಿದೆ ಅಮ್ಮಾ"
"ಮಗು ಮುಂದಿನ ಬಾರಿ ನಮ್ಮನ್ನು ಕರೆದುಕೊಂಡು ಹೋಗು.. ನಾವು ಬರುತ್ತೇವೆ"
"ಖಂಡಿತ ಅಮ್ಮಾ.. ಅಪ್ಪ ನಾನು ನೀನು ಸುಬ್ರಮಣ್ಯ ಎಲ್ಲರೂ ಕೂಡಿಯೇ ಹೋಗೋಣ... ಅರೆ ಅರೆ ನನ್ನ ಲ್ಯಾಪ್-ಟಾಪ್ ನಲ್ಲಿ ಆಗಲೇ ಒಂದು ಸಂದೇಶ ಬಂದಿದೆ... ಇರು ನೋಡ್ತೀನಿ"
------------------------------------
From: Koravangala@affection.comTo : Koravangala@onebigtree.com
Bcc: ganesh@kailaasa.com
ಆತ್ಮೀಯ ಸಹೋದರರಿಗೆ ಹಾಗೂ ಎಲ್ಲಾ ಕುಟುಂಬ ಸದಸ್ಯರಿಗೆ
ನಿಮ್ಮ ಅಮೂಲ್ಯವಾದ ಸಮಯವನ್ನು ನಮ್ಮೊಂದಿಗೆ ಕಳೆದಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು
Thanks & Regards
ವಿಜಯವಾಣಿ
Vijayanagar,
Bangalore - 560 040
-----------------------------------------
"ಓಹ್ ಇದು ವಿಜಯನ ಸಂದೇಶ.. ನನಗೂ ಕಳಿಸಿದ್ದಾನೆ... ಮಗು ಶುಭವಾಗಲಿ.. ನಿನ್ನ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಸಿಗಲಿ.. ನಿಮ್ಮೆಲ್ಲರ ಕುಟುಂಬದ ಸಾಗರದಲ್ಲಿ ಸುಖ ಶಾಂತಿ ನೆಮ್ಮದಿಯ ಅಲೆಗಳು ಸದಾ ಬರುತ್ತಲೇ ಇರಲಿ!!!"
ಪುಟ್ಟರ ಈ ಸಮಾಗಮ ಯತ್ನಕ್ಕೆ ನನ್ನ ಶರಣು. ಈಗೀಗ ಒಂದಾಗಿ ಸೇರೋದೇ ಖರ್ಚಿನ ಬಾಬ್ತು ಎಂದು ಮೂಗು ಮುರಿಯುವವರ ಮದ್ಯೆ ಇದು ಅಪರೂಪದ ಕುಟುಂಬ ಸಮ್ಮಿಲನ. ಡ್ರಾಯಿಂಗೂ, ಚಿತ್ರಗಳೂ ಮತ್ತು ಬರಹವನ್ನು ತೆಗೆದುಕೊಂಡು ಹೋದ ರೀತಿಗಳಿಗೂ A++.
ReplyDeleteಧನ್ಯವಾದಗಳು ಬದರಿ ಸರ್. ಕೂಡಿ ಬಾಳೋಣ ಎಂದೆಂದೂ ಸೇರಿ ದುಡಿಯೋಣ ಎನ್ನುವ ಭಾವ ಬೆಳೆಸಿದ್ದು ನಮ್ಮ ಅಜ್ಜಯ್ಯ.. ಹಾಗೆ ಬೆಳೆದು ಬಂದು ಬಿಟ್ಟಿದೆ!
Deletesuper like koo annayya.. :)
ReplyDeleteThank you PS!
Deleteವಾಹ್ !!!....
ReplyDeleteಸುಂದರ ಚಿತ್ರಗಳು..ಅದಕ್ಕೆ ಇನ್ನೂ ಸುಂದರ sub titles...
ಇಷ್ಟವಾಯ್ತು:)
ಧನ್ಯವಾದಗಳು ಬಿ ಪಿ.. ಸುಂದರ ಪ್ರತಿಕ್ರಿಯೆ
Deleteಒಳ್ಳೆ ಆಪ್ತವಾದ ಬರವಣಿಗೆ, ನಿಮ್ಮ ಲೇಖನ ಸಂಭಂದಗಳ ಬೆಲೆಯನ್ನು ತಿಳಿಸಿಕೊಟ್ಟಿದೆ. ಯಾರೂ ಬೇಡ ನಮ್ಮ ಸಂಸಾರ ಇದ್ದಾರೆ ಸಾಕು ಎನ್ನುವ ಈ ಕಾಲದಲ್ಲಿ ಬನ್ನಿ ಎಲ್ಲಾ ಒಟ್ಟಿಗೆ ಸೇರೋಣ ಎನ್ನುವ ಮನೋಬಾವನೆ ಒಳ್ಳೆಯದು. ಶ್ರೀಕಾಂತ್ ನಿಮಗೆ ಅಭಿನಂದನೆಗಳು.
ReplyDeleteಬಿತ್ತುವುದೇ ಬೆಳೆಯುವುದು ಎನ್ನುವ ಹಾಗೆ ನನ್ನ ತಾತ ಸುಮಾರು ಎಪ್ಪತ್ತು ಎಂಬತ್ತು ವಯಸ್ಸಿನಲ್ಲೂ ಎಲ್ಲರ ಮನೆಗೂ ಹೋಗುತ್ತಿದ್ದರು, ಮನೆಗೆ ಬಂದಾಗ ಪ್ರೀತಿಯಿಂದ ಕಾಣುತಿದ್ದರು.. ಅದೇ ಮುಂದುವರಿಯುತ್ತಾ ಬಂದಿದೆ. ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು ಬಾಲೂ ಸರ್
Deletenice nice again. makkala chitragaLu ishta aaytu Shrikanth :-)
ReplyDeleteಮಕ್ಕಳೇ ಮುಂದಿನ ಪೀಳಿಗೆಗೆ ಹಿಡಿವ ಪಂಜುಗಳು. ಧನ್ಯವಾದಗಳು ಸಹೋದರಿ
Delete