Wednesday, April 10, 2013

ಎಸ್ ಪಿ.... ಎಸ್ ಪಿ... ಹ್ಯಾಪಿ ಬರ್ತ್ಡೇ!!!

"ಅಗೋ ನೋಡು ಆ ನದಿಯಲ್ಲಿ ಒಂದು ಎತ್ತರದ ಅಟ್ಟಣಿಗೆ ಕಾಣುತ್ತಿದೆಯಾ ? ಅಲ್ಲಿ ಕಾಲು ಇಳಿ ಬಿಟ್ಟು ಕುಳಿತರೆ ಪಾದ ಮುಳುಗುವಷ್ಟು ನೀರು ಕಾಲಿಗೆ ತಾಕುತ್ತೆ"

ಅಚಾನಕ್ಕಾಗಿ ಧ್ವನಿ ಬಂದ ಕಡೆ ತಿರುಗಿತು ಕಣ್ಣುಗಳು.  ಅನತಿ ದೂರದಲ್ಲಿ ಪಟ ಪಟ ಹೆಜ್ಜೆ ಹಾಕುತ್ತ ಒಂದು ಪುಟಾಣಿ ಬರುತ್ತಿತ್ತು . ಸರಿ ನೋಡೋಣ ಏನು ಮಾಡುತ್ತಾರೆ ಅಂತ ಅಲ್ಲೇ ಮರದ ಬದಿಯಲ್ಲಿದ್ದ ಒಂದು ಒಂಟಿ ಬೆಂಚಿನ ಮೇಲೆ ಕುತೂಹಲ ಭರಿತ ಕಣ್ಣುಗಳಿಂದ ಆ ಪುಟಾಣಿಯ ಚಲನವಲನ ನೋಡುತ್ತಾ ಕುಳಿತೆ!

ಆ ಸುಂದರ ಪರಿಸರ, ದಿನವಿಡೀ ಸುತ್ತಾಡಿ ಇನ್ನು ಇಲ್ಲೇ ಇದ್ದು ಬಿಡುತ್ತೇನೆ ಎನ್ನುವ ಹಾಗೆ ಕುಳಿತ ಪ್ರಕೃತಿ ಮಾತೆಯ ಸೌಂದರ್ಯ ರಾಶಿಯೇ ಅಲ್ಲಿ ಇಳಿ ಬಿದ್ದಿತ್ತು. ಎತ್ತ ನೋಡಿದರೂ ಹಸಿರು, ಜುಳು ಜುಳು ಹರಿವ ಝರಿಗಳು, ಚಿಲಿ ಪಿಲಿ  ಸದ್ದು ಮಾಡುತ್ತಾ ಅಲ್ಲಿನ ವಾತಾವರಣಕ್ಕೆ ಸಂಗೀತಮಯ ಹಿಮ್ಮೇಳ ಒದಗಿಸುತ್ತಿತ್ತು.

ಚಿತ್ರಕೃಪೆ - ಅಂತರ್ಜಾಲ
ನನಗೆ ಆಶ್ಚರ್ಯ!...  ಪುಟಾಣಿ ನಿಧಾನವಾಗಿ ಅಟ್ಟಣಿಗೆಯ ತನಕ ನೆಡೆದು ಹೋಗಿ, ಕೂತು.. ಪಾದ ಮುಳುಗುವಷ್ಟು ನೀರಿನಲ್ಲಿ ಕಾಲನ್ನು ಬಡಿಯುತ್ತ ಗಿಲಿ ಗಿಲಿ ನಗುತ್ತಾ ಕೈಬೀಸಿತು!

ಅಲ್ಲೇ ಆಡುತ್ತಿದ್ದ ಆ ಪುಟಾಣಿಯ ತಮ್ಮ... "ಒಹ್ ಅಕ್ಕ ಕರೆಯುತ್ತಿದ್ದಾಳೆ... ಬಂದೆ ಅಕ್ಕಾ!" ಎನ್ನುತ್ತಾ ಓಡುತ್ತಾ ಬಂದಿತು.

"ಏನಕ್ಕಾ ಕರೆದೆಯಲ್ಲ?" ಎಂದಿತು ಆ ಮರಿ ಪುಟಾಣಿ!
ಚಿತ್ರ ಕೃಪೆ - ಅಂತರ್ಜಾಲ

"ಏನಿಲ್ಲ ಕಣೋ!...ಇಲ್ಲಿ ಕೂತು, ಸೂರ್ಯ ಹುಟ್ಟುವುದನ್ನು ನೋಡುತ್ತಾ... ದೂರದೆ ಆಗಸದೆ ತೇಲಿ ಬರುವ ಮೋಡಗಳಲ್ಲಿ ನಮ್ಮ ಕನಸುಗಳನ್ನು ಹೇಳಿಕೊಂಡು, ಅದು ನಮ್ಮತ್ತ ಸಾಗಿ ಬರುವುದನ್ನು ನೋಡುವುದು ಒಂದು ಖುಷಿ... ನೀನು ಜೊತೆಯಿರು ಅಂತ ಕರೆದೆ" ಅಂದಳು ಆ ಪುಟ್ಟಿ!

ಚಿತ್ರಕೃಪೆ - ಅಂತರ್ಜಾಲ 
"ಓಹ್ ಅಷ್ಟೇನಾ!.. ಸರಿ... ನಿನ್ನ ಜೊತೆಯಿದ್ದಾಗ ನೀನು ಆಡುವ ಪ್ರತಿಯೊಂದು ಪದವು ಒಂದು ಕಾವ್ಯ ಅಕ್ಕಾ"  ಅಂದಾ ಆ ಪುಟಾಣಿ ಹುಡುಗ!

ಆ ಪ್ರಶಾಂತ ವಾತಾವರಣವನ್ನು ಭೇಧಿಸಿ ಬರುವಂತೆ ದೂರದಲ್ಲಿ ಉಗಿಬಂಡಿಯ ನಾದ... ಹಸಿರು ಹೊದ್ದ ಪ್ರಕೃತಿ ಮಾತೆಯ ಗರ್ಭವನ್ನು ಸೀಳಿ ಬರುವಂತೆ ವೇಗವಾಗಿ ಹತ್ತಿರ ಬರುತಿತ್ತು.

ಚಿತ್ರಕೃಪೆ - ಅಂತರ್ಜಾಲ
ನಾ ಹೊತ್ತು ಕಳಿಸಿದ್ದ ಒಂದು ಪಾರ್ಸೆಲ್ ಇದೆ ರೈಲಿನಲ್ಲಿ ಬರಬೇಕಿತ್ತು.. ಹಾಗಾಗಿ ಅದನ್ನು ತರಲು ಎದ್ದು ನಿಂತೇ!

ಅಷ್ಟರಲ್ಲಿ ಆ ಪುಟಾಣಿ ಹುಡುಗ ಸ್ಟೇಷನ್ ಮಾಸ್ಟರ್ ಬಳಿ ಓಡಿ ಹೋಗಿ "ಸರ್ ನಾನೇ ಪದ್ಮನಾಭ... ಒಂದು ಪಾರ್ಸೆಲ್ ನನ್ನ ಹೆಸರಲ್ಲಿ ಬರಬೇಕಿತ್ತು.." ಎಂದನು!

ಸ್ಟೇಷನ್ ಮಾಸ್ಟರ್ "ಹೌದು ಮರಿ! ಬಂದಿದೆ... ಹಾಗೆಯೇ ನಿನ್ನ ಅಕ್ಕನನ್ನು ಕರೆ... ಅಕ್ಕನಿಗೆ ಒಂದು ದೊಡ್ಡ ಪಾರ್ಸೆಲ್ ಬಂದಿದೆ... ಅಗೋ ಅಲ್ಲಿ ಒಬ್ಬರು ಬರ್ತಾ ಇದ್ದಾರಲ್ಲ.. ಅವರು ಕೊಡುತ್ತಾರೆ.. ತೆಗೆದುಕೋ" ಅಂದರು!

ಅಷ್ಟರಲ್ಲಿ ನಾನು ನಿಧಾನವಾಗಿ ಹೆಜ್ಜೆ ಇಡುತ್ತಾ ಕಛೇರಿಗೆ ಬಂದೆ.. ಆ ಪುಟಾಣಿ ಹುಡುಗ.. "ಸರ್ ಸರ್ ಬೇಗ ಪಾರ್ಸೆಲ್ ಕೊಡಿ ಸರ್.. ಇದು ಅದರ ರಸೀತಿ.. " ಅಂದ

ಅಲ್ಲಿಯೇ ಇದ್ದ ಪಾರ್ಸೆಲ್ಗಳಲ್ಲಿ ಅವನ ಹೆಸರನ್ನು ಹುಡುಕಿ "ತಗೋ ಕಂದ... ನಿನ್ನ ಅಕ್ಕ ಎಲ್ಲಿ?"

"ಅಕ್ಕಾ.. ಅಕ್ಕಾ ಬೇಗ ಬಾ.. ನಿನ್ನ ಹೆಸರಲ್ಲಿ ಒಂದು ಪಾರ್ಸೆಲ್ ಇದೆಯಂತೆ...!" ಅಂತ ಕೂಗಿದ

"ಬಂದೆ ಕಣೋ.. ನಂಗೆ ಯಾರೋ ಪಾರ್ಸೆಲ್ ಕಳಿಸಿರೋದು?" ಎನ್ನುತ್ತಲೇ ನಿಧಾನವಾಗಿ ಓಡಿ ಬಂದಳು ಪುಟ್ಟಿ!

ನಾನು ಆ ಪುಟ್ಟಿಯ ಹೆಸರಲ್ಲಿದ್ದ ಪಾರ್ಸೆಲ್ ಕೊಟ್ಟೆ... ಅದನ್ನು ನೋಡುತ್ತಲೇ ಕೆನ್ನೆಯುಬ್ಬಿಸಿಕೊಂಡು
"ಬೇಡ ಬೇಡ ಎಂದರೂ... ಇವರೆಲ್ಲಾ ಸೇರಿ ಒಂದು ಪಾರ್ಸೆಲ್ ಕಳಿಸೇ ಬಿಟ್ರಾ... ಇರಲಿ ಇವರೆನ್ನೆಲ್ಲ ಒಂದು ಕೈನೋಡ್ಕೊತೀನಿ" ಅನ್ನುತ್ತಾ ತೋಳು ಮಡಿಸುತ್ತಾ ಇದ್ದಳು, ಅಷ್ಟರಲ್ಲಿ

"ಎಸ್ ಪಿ  ... ಹುಟ್ಟು ಹಬ್ಬದ ಶುಭಾಶಯಗಳು... " ಎನ್ನುತ್ತಾ ನಾನು ಒಂದು ದೊಡ್ಡ ಚಾಕ್ಲೆಟನ್ನು ಕೊಟ್ಟೆ..

ರೈಲ್ವೆ ಸ್ಟೇಷನ್ನಲ್ಲಿದ್ದವೆರಲ್ಲ ಹುಟ್ಟು ಹಬ್ಬದ ಶುಭಾಶಯಗಳು! ಎಂದು ಹಾರೈಸುತ್ತಾ ರೈಲನ್ನು ಹತ್ತಿ ನಿಂತರು.

ರೈಲು ಕೂಡ ಚುಕ್ ಬುಕ್ ಎನ್ನದೆ "ಎಸ್ ಪಿ....  ಎಸ್ ಪಿ... ಹ್ಯಾಪಿ ಬರ್ತ್ಡೇ... ಎಸ್ ಪಿ....  ಎಸ್ ಪಿ... ಹ್ಯಾಪಿ ಬರ್ತ್ಡೇ..... ಎಸ್ ಪಿ....  ಎಸ್ ಪಿ... ಹ್ಯಾಪಿ ಬರ್ತ್ಡೇ" ಎನ್ನುತ್ತಾ ಅಲ್ಲಿಂದ ಹೊರಟಿತು.

ಶುಭಾಶಯಗಳ ಕರತಾಡನ !
ಪುಟ್ಟಿ ನಿಧಾನವಾಗಿ ಹೆಜ್ಜೆ ಹಾಕುತ್ತಾ ಮತ್ತೆ ಅಟ್ಟಣಿಗೆಯ ಬಳಿ ನಡೆದಳು.. ಆಶ್ಚರ್ಯ ಬಜ್ಜಿಗರು ಗುಂಪಿನ ಪ್ರತಿಯೊಬ್ಬರೂ ಅಲ್ಲಿ ಚಪ್ಪಾಳೆ ತಟ್ಟುತ್ತ "ಸಂಧ್ಯಾ ಪುಟ್ಟಿಗೆ ಹುಟ್ಟು ಹಬ್ಬದ ಶುಭಾಶಯಗಳು!!!" ಎಂದು ಕೂಗುತ್ತಾ ಕುಣಿಯುತ್ತಿದ್ದರು!

ಸಂತಸದಿಂದ ಮೂಕಳಾದ ಆ ಪುಟ್ಟಿ ಅಲ್ಲಿಯೇ ಇದ್ದ ನನಗೆ ಒಂದು ಗುದ್ದು ಕೊಟ್ಟು "ಅಣ್ಣಾ ಇದೆಲ್ಲ ನಿಮ್ಮದೇ ಸಿದ್ಧತೇನಾ?..". ಅಂದಳು!

"ನಮ್ಮೆನ್ನೆಲ್ಲ ಅಣ್ಣ ಅಂತೀಯ... ನಿಮ್ಮ ಕುಟುಂಬದ ಒಂದು ಭಾಗವೇ ಆಗಿರುವಾಗ ಇದೆಲ್ಲ ನಮ್ಮ ಕರ್ತವ್ಯ ಅಲ್ಲವೇ ಎಸ್ ಪಿ"  ಎಂದೇ!

ಹೆಜ್ಜೆ ಇಡುತ್ತ ಬಂದ ಎಸ್ ಪಿ ಯ ಅಪ್ಪ, ಅಮ್ಮ,  ಅಕ್ಕ, ಭಾವ, ತಮ್ಮ,... "ಸನ್ ಪುಟ್ಟಾ... ಅದಕ್ಕೆ ಹೇಳಿದ್ದು ಬ್ಲಾಗ್ ಲೋಕ ನಿನಗೆ ಇನ್ನೊಂದು ಕುಟುಂಬವೇ ಆಗಿ ಬಿಟ್ಟಿದೆ... ನೋಡಿದೆಯ ನಮಗೂ ಹೇಳದೆ ಇದೆಲ್ಲ ಮಾಡಿದ್ದಾರೆ!!!" ಎಂದರು

ಆನಂದ ಭಾಷ್ಪ ಸುರಿಸುತ್ತಾ ಪುಟ್ಟಿ ಕೈ ಜೋಡಿಸಿದಳು... ಸ್ವಲ್ಪ ನಗು.. ಸ್ವಲ್ಪ ಮುನಿಸು.. ಸ್ವಲ್ಪ ಭಾವುಕಳಾದ
ಎಸ್ ಪಿ.. ಮುಖವನ್ನು ಆ ಕಡೆ ತಿರುಗಿಸಿಕೊಂಡು ಆನಂದ ಭಾಷ್ಪವನ್ನು ಸುರಿಸಿದಳು.. !

ಭಾವುಕಳಾದ ಎಸ್ ಪಿ !
ಅವಳ ಮೊಬೈಲ್ ನಲ್ಲಿ ಯಾವ ಜನ್ಮದ ಮೈತ್ರಿ ಈ ಜನ್ಮದಲ್ಲಿ ಬಂದು ನಮ್ಮೆಲ್ಲರನ್ನೂ ಮತ್ತೆ ಬಂಧಿಸಿಹುದೋ.... ಕಾಣೆ" ಹಾಡು ತಂಗಾಳಿಯಂತೆ ತೇಲಿ ಬರುತಿತ್ತು!

-----------------------------------------------------------------------------------------------------------

ಬ್ಲಾಗ್ ಲೋಕದ ಮಿತ್ರರು ಕರಿಘಟ್ಟಕ್ಕೆ ಪ್ರವಾಸ ಹೋದಾಗ, ಸದಾ ನಗು ನಗುತ್ತಿರುವ ಮುದ್ದು ಪುಟಾಣಿಯ ಪರಿಚಯ ಆಯಿತು. ಶ್ರೀ ಅಣ್ಣ ಅನ್ನುತ್ತಲೇ ಹತ್ತಿರವಾದ ಹುಡುಗಿ.. ತನ್ನ "ಸಂಧ್ಯೆಯಂಗಳದಿ" ಅಂಗಳದಲ್ಲಿ ಹಾಕಿದ  ಪ್ರತಿಯೊಂದು ರಂಗವಲ್ಲಿಯೂ  ಸೂರ್ಯನ  ಕಿರಣದಷ್ಟೇ ಬಣ್ಣಗಳನ್ನು, ಭಾವಗಳನ್ನು ಹೊತ್ತು ತರುತ್ತವೆ.  ನಿಧಾನವಾಗಿ ತೂಗಿ ಆಡುವ ಮಾತುಗಳಿಂದ ಗಮನ ಸೆಳೆಯುವ ಹುಡುಗಿ... ತಂಗಿ ಇದ್ದರೇ ಹೀಗೆ ಇರಬೇಕು ಎನ್ನುವಂತೆ ಆಪ್ತಳಾಗಿಬಿಡುತ್ತಾಳೆ. ಅವಳ ಮಾತುಗಳು, ಕಷ್ಟ ಸುಖಗಳನ್ನು ಹೇಳಿಕೊಳ್ಳುವ ಭಾವ,  ಪ್ರಾಯಶಃ ದೇವರು ನನಗಾಗಿ ಆರಿಸಿ ಕೊಟ್ಟ ಅನೇಕ ತಂಗಿಯರಲ್ಲಿ ಇವಳು ಒಬ್ಬಳು ಅನ್ನುವಂತೆ ಮಾಡುತ್ತದೆ. ಕಥೆ, ಕವನ, ಚಿತ್ರಕಲೆ, ಕಾಗದದಲ್ಲಿ ಬೊಂಬೆಗಳನ್ನು ಮಾಡುವುದು ಒಂದೇ ಎರಡೇ...
ಸಕಲಕಲಾವಲ್ಲಭೆ  ಎನ್ನಬಹುದು!.  ಭಾವಕ್ಕೆ ಅಭಾವ ಇಲ್ಲ ಅನ್ನುತ್ತಾರೆ.   ಎಸ್ ಪಿ ನಿಜಕ್ಕೂ ಅವರ ಮಾತಾ ಪಿತೃಗಳ ಒಂದು ಅನರ್ಘ್ಯ ರತ್ನವೇ ಸರಿ. ಊರಲ್ಲಿ ಅಪರೂಪದ ಮಂತ್ರ ಘೋಷಗಳ ಆಶೀರ್ವಾದ ಪಡೆದ ಈ ಪುಟ್ಟಿಯ ಎಲ್ಲಾ  ಕನಸುಗಳ ನನಸಾಗಲಿ.. ನನಸಾದ ಕನಸುಗಳು ಚಿಗುರೊಡೆಯಲಿ... ಸದಾ ನಗು ನಗುತಿರುವ ಈ ಪುಟ್ಟಿ,  ಸದಾ ಅರಳು ಮಲ್ಲಿಗೆಯಂತೆ ಘಮ ಘಮಿಸಲಿ ಎಂದು ಹಾರೈಸುತ್ತಾ ..  ಪ್ರೀತಿಯ ಎಸ್ ಪಿ ಗೆ ಹುಟ್ಟು ಹಬ್ಬದ ಶುಭಾಶಯಗಳು..

ಯುಗಾದಿಯ ದಿನದಂದೇ ಬಂದಿರುವ ಈ ಜನುಮ ದಿನ,  ಪುಟ್ಟಿಯ ಜೀವನದಲ್ಲಿ ಮಾವಿನ ಎಲೆಯಂತೆ ಹಸಿರಾಗಿ .. ಬೆಲ್ಲದಂತೆ ಸವಿಯಾಗಿ ಇರಲಿ!

ಎಸ್ ಪಿ ಹುಟ್ಟು ಹಬ್ಬದ, ಯುಗಾದಿಯ ಹಬ್ಬದ ಹಾಗೂ ಹೊಸ ವರ್ಷದ ಶುಭಾಶಯಗಳು!

(ಎಸ್ ಪಿ ಬರೆದ ಒಂದು ಲೇಖನದಲ್ಲಿ "ಅಗೋ ನೋಡು ಆ ನದಿಯಲ್ಲಿ ಒಂದು ಎತ್ತರದ ಅಟ್ಟಣಿಗೆ ಕಾಣುತ್ತಿದೆಯಾ ? ಅಲ್ಲಿ ಕಾಲು ಇಳಿ ಬಿಟ್ಟು ಕುಳಿತರೆ ಪಾದ ಮುಳುಗುವಷ್ಟು ನೀರು ಕಾಲಿಗೆ ತಾಕುತ್ತೆ" ಈ ಸಾಲುಗಳು ತುಂಬಾ ಕಾಡಿದ್ದವು.. ಅವಳ ಅನುಮತಿ ಪಡೆದು ಆ ಸಾಲುಗಳನ್ನು ಕೊಂಚ ಹಿಗ್ಗಿಸಿದ್ದೇನೆ.. ಈ ಲೇಖನದ ಆರಂಭಕ್ಕೆ ಸುಂದರ ಸಾಲುಗಳನ್ನು ಕೊಟ್ಟ ಎಸ್ ಪಿ ನಿನಗೆ ಧನ್ಯವಾದಗಳು)

14 comments:

  1. ಪ್ರೀತಿಯ ಸಂಧ್ಯಕ್ಕ....ನಿನ್ನಂಗಳದಲ್ಲಿ ನಾ ಓದಿದ ,ನೋಡಿದ ಭಾವ ಅದೆಷ್ಟೋ ...
    ಬ್ಲಾಗ್ ಎಂಬ ಪ್ರೀತಿಯ ಪುಟ್ಟರಮನೆಯಲ್ಲಿ ನೀ ನನ್ನ ಪುಟ್ಟಕ್ಕ :)
    ಬರಿಯ ಒಂದೆರಡು ಭಾವ ಓದಿ ಕೆಲವೊಂದಿಷ್ಟು ನೋವಿಗೆ ಜೊತೆಯಾದೆ!....ನಲಿವಿಗೆ ನಗುವಾದೆ.."ಯಾರೋ ಅನ್ನೋ ಮಾತಿಗೆ ಬೇಸರಿಸದಿರು ಪುಟ್ಟಿ ..ನೀ ಚೆನ್ನಾಗಿ ಬರೀತಿಯಾ ..ನಿನ್ನೊಟ್ಟಿಗೆ ನಾವಿದ್ದೀವಿ "ಅಂತ ಬೆನ್ನು ತಟ್ಟಿ ಬೇಸರ ಒರೆಸಿದೆ ನೀ ....ಪ್ರೀತಿಯ ಅಕ್ಕನಾದೆ ...ಎಲ್ಲವನ್ನ ಹಂಚಿಕೊಳ್ಳೋ ಗೆಳತಿಯಾದೆ ...ಬ್ಲಾಗ್ ಆತ್ಮೀಯತೆಗೆ ಆತ್ಮೀಯನಾದೆ...
    ನಿನ್ನೀ ಪ್ರೀತಿ ಆತ್ಮೀಯತೆಗೊಂದು ನಮನ :)
    ನಿನ್ನೀ ಪಯಣದಲ್ಲಿ ಮತ್ತೊಂದು ಹೊಸ ವರ್ಷದ ಆದಿ ಇವತ್ತು ...
    ನಿನ್ನೀ ಹೊಸ ವರ್ಷವೆ ನಮ್ಮೆಲ್ಲರಿಗೂ ಹೊಸದನ್ನು ತರೋ ಯುಗಾದಿ ಕೂಡಾ ಇವತ್ತು :೦

    ಖುಷಿಯ ,ಪ್ರೀತಿಯ ಬ್ಲಾಗಿಗರ ಮುದ್ದು ಸಂಧ್ಯಾ ಪುಟ್ಟಿ(ಎಸ್ ಪಿ) ನೀ ಅನ್ನೋಕೆ ಶ್ರೀಕಾಂತಣ್ಣನ ಈ ಭಾವ ಸಾಕು ....

    ಜನುಮ ದಿನದ ಪ್ರೀತಿಯ ಶುಭಾಶಯ ಸಂದ್ಯಕ್ಕ :)

    ನಿನ್ನೆಲ್ಲಾ ಕನಸುಗಳಿಗೆ ಬಣ್ಣ ಸಿಗಲಿ ...ಹೀಗೆ ಖುಶಿ ಖುಷಿಯಾಗಿರೋ ನಗು ಮೊಗ ಯಾವತ್ತೂ ನಿನ್ನದಾಗಲಿ :)
    ನಿನ್ನ ಪುಟ್ಟಿ ..

    ReplyDelete
  2. ಪ್ರೀತಿಯ ಸಂಧ್ಯಕ್ಕ....ನಿನ್ನಂಗಳದಲ್ಲಿ ನಾ ಓದಿದ ,ನೋಡಿದ ಭಾವ ಅದೆಷ್ಟೋ ...
    ಬ್ಲಾಗ್ ಎಂಬ ಪ್ರೀತಿಯ ಪುಟ್ಟರಮನೆಯಲ್ಲಿ ನೀ ನನ್ನ ಪುಟ್ಟಕ್ಕ :)
    ಬರಿಯ ಒಂದೆರಡು ಭಾವ ಓದಿ ಕೆಲವೊಂದಿಷ್ಟು ನೋವಿಗೆ ಜೊತೆಯಾದೆ!....ನಲಿವಿಗೆ ನಗುವಾದೆ.."ಯಾರೋ ಅನ್ನೋ ಮಾತಿಗೆ ಬೇಸರಿಸದಿರು ಪುಟ್ಟಿ ..ನೀ ಚೆನ್ನಾಗಿ ಬರೀತಿಯಾ ..ನಿನ್ನೊಟ್ಟಿಗೆ ನಾವಿದ್ದೀವಿ "ಅಂತ ಬೆನ್ನು ತಟ್ಟಿ ಬೇಸರ ಒರೆಸಿದೆ ನೀ ....ಪ್ರೀತಿಯ ಅಕ್ಕನಾದೆ ...ಎಲ್ಲವನ್ನ ಹಂಚಿಕೊಳ್ಳೋ ಗೆಳತಿಯಾದೆ ...ಬ್ಲಾಗ್ ಆತ್ಮೀಯತೆಗೆ ಆತ್ಮೀಯನಾದೆ...
    ನಿನ್ನೀ ಪ್ರೀತಿ ಆತ್ಮೀಯತೆಗೊಂದು ನಮನ :)
    ನಿನ್ನೀ ಪಯಣದಲ್ಲಿ ಮತ್ತೊಂದು ಹೊಸ ವರ್ಷದ ಆದಿ ಇವತ್ತು ...
    ನಿನ್ನೀ ಹೊಸ ವರ್ಷವೆ ನಮ್ಮೆಲ್ಲರಿಗೂ ಹೊಸದನ್ನು ತರೋ ಯುಗಾದಿ ಕೂಡಾ ಇವತ್ತು :೦

    ಖುಷಿಯ ,ಪ್ರೀತಿಯ ಬ್ಲಾಗಿಗರ ಮುದ್ದು ಸಂಧ್ಯಾ ಪುಟ್ಟಿ(ಎಸ್ ಪಿ) ನೀ ಅನ್ನೋಕೆ ಶ್ರೀಕಾಂತಣ್ಣನ ಈ ಭಾವ ಸಾಕು ....

    ಜನುಮ ದಿನದ ಪ್ರೀತಿಯ ಶುಭಾಶಯ ಸಂದ್ಯಕ್ಕ :)

    ನಿನ್ನೆಲ್ಲಾ ಕನಸುಗಳಿಗೆ ಬಣ್ಣ ಸಿಗಲಿ ...ಹೀಗೆ ಖುಶಿ ಖುಷಿಯಾಗಿರೋ ನಗು ಮೊಗ ಯಾವತ್ತೂ ನಿನ್ನದಾಗಲಿ :)
    ನಿನ್ನ ಪುಟ್ಟಿ ..

    ReplyDelete
  3. ಶ್ರೀಕಾಂತ್ ನೀವು ತುಂಬಾ different, ಸಕತ್ creative, ಪ್ರತಿಬಾರಿ ನಿಮ್ಮ ಬ್ಲಾಗ್ ಬರಹಗಳು ವಿಭಿನ್ನವಾಗಿರುತ್ತೆ. i like it. :-)

    ಪ್ರೀತಿಯ 'ಸಂಧ್ಯ' ಹುಟ್ಟುಹಬ್ಬದ ಶುಭಾಶಯಗಳು. ಖುಷಿಯಾಗಿರಿ. :-)

    ReplyDelete
  4. ಪ್ರೀತಿಯ ತಂಗ್ಯವ್ವ ಜನುಮದಿನದ ಹಾರ್ದಿಕ ಶುಭಾಶಯಗಳು, ಹಾಗು ಯುಗಾದಿ ಹಬ್ಬದ ಶುಭಾಶಯಗಳು.

    ReplyDelete
  5. ಹುಟ್ಟು ಹಬ್ಬದ ಶುಭಾಷಯಗಳು ಸಂಧ್ಯಕ್ಕಾ :) :)...
    ಶ್ರೀ...ನಿಮ್ಮ ಲೇಖನದ ಪೀಠಿಕೆಯಾವಾಗಲೂ ವಿಶೇಷ!!!!
    ಚೆನ್ನಾಗಿದೆ :)

    ReplyDelete
  6. ನಾನು ಅತ್ಯಂತ ಪ್ರೀತಿಯಿಂದ ಓದಲು ಮೊದಲು ಕೈಗೆತ್ತಿಕೊಳ್ಳುವ ಬ್ಲಾಗ್ ನನ್ನ ಪ್ರೀತಿಯ ಪುಟ್ಟಿಯದು. ಆಕೆಯ ಭಾಷಾ ಬಳಕೆ ಮತ್ತು ನಿರೂಪಣೆಯಲ್ಲಿಯ ಅಪ್ಪಟ ಪ್ರಾಮಾಣಿಕೆ ನನಗೆ ಬಲು ಇಷ್ಟ ಅಂತೆಯೇ ಆಕೆಯ ಮುಗ್ಧ ಮನಸ್ಸೂ ಸಹ.

    ಶ್ರೀಮಾನ್ ಆಕೆಯ ಜನುಮದಿನಕ್ಕೆ ಇಡಕಿಂತಲೂ ಮಸ್ತ್ ಉಡುಗೊರೆ ಮೂಲೋಕದಲ್ಲೂ ಸಿಗದು.

    ಪುಟ್ಟಿ, ನಿನಗೆ ಇದೋ ನನ್ನ ಜನುಮದಿನದ ಹಾರೈಕೆಗಳು. ಖುಷಿಯಾಗಿರು.
    "ಯುಗಾದಿಗೆ ಹುಟ್ಟಿದಳು ಪುಟ್ಟಿ
    ಕಾರಣ ಜನುಮಳು ಈಕಿ
    ಹೊತ್ತು ತರುವಳು ಅಕ್ಷರಗಳ
    ಬ್ಲಾಗಿನ ತುಂಬಾ..."

    ReplyDelete
  7. ಮೃದುಲ ಮಾತು
    ಪ್ರೀತಿ ತುಂಬಿ
    ಎಲ್ಲರನು ಬಂಧಿಸುವ
    ಈ ಸಂಧ್ಯೆ ಸದಾ ಸುಖವಾಗಿರಲಿ...

    ಸಂಧ್ಯಾ ಹುಟ್ಟು ಹಬ್ಬದ ಶುಭಾಶಯಗಳು ಚಿನ್ನ... ಸಂತೋಷ ತುಂಬಿ ತುಳುಕಲಿ...

    ReplyDelete
  8. ಹೊಸ ವರುಷದ ದಿನವೇ ನನ್ನ ಜೀವನದ ಹೊಸ ವಸಂತದ ಆರಂಭ. ಎಲ್ಲ ಸಂಭ್ರಮಗಳಿಗೆ ಕಾರಣರಾದವರು ನೀವೆಲ್ಲ. ಶ್ರೀಕಾಂತಣ್ಣ ಈ ಒಂದು ಬರಹಕ್ಕೆ ಅರ್ಹಳೋ ಇಲ್ಲವೋ ಗೊತ್ತಿಲ್ಲ..
    ನಿಮ್ಮೆಲ್ಲರ ಪ್ರೀತಿಯನ್ನು ಮೌನವಾಗಿ ಅನುಭವಿಸುವ ಖುಷಿಯೊಂದು ಬಿಟ್ಟರೆ ಬೇರೇನೂ ತಿಳಿಯುತ್ತಿಲ್ಲ.

    ಇದೆಲ್ಲ ಓದಿ ಮುಗಿಸಿದಾಗ ಮನಸ್ಸು ತುಂಬಿದ್ದು ನಿಮ್ಮೆಲ್ಲರ ಚಿತ್ರಗಳು ಹಾಗೂ ಕಣ್ಣಂಚಲ್ಲಿ ಜಿನುಗಿದ್ದು ಖುಷಿಯ ನೀರು ಅಷ್ಟೇ...

    ಯಾವ ಜನ್ಮದ ಮೈತ್ರಿ ... ಇದೆಲ್ಲ ??

    ನಿಮ್ಮ ಪ್ರೀತಿಗೆ ಅದರ ರೀತಿಗೆ
    ಕಣ್ಣ ಹನಿಗಳೇ ಕಾಣಿಕೆ ...

    Thank you All...:)

    ReplyDelete
  9. ಯಾವ ಜನ್ಮದ ಮೈತ್ರಿ ಈ ಜನ್ಮದಲ್ಲಿ ಬಂದು ನಮ್ಮೆಲ್ಲರನ್ನೂ ಮತ್ತೆ ಬಂಧಿಸಿಹುದೋ.... ಕಾಣೆ"


    ನಿಜಕ್ಕೂ ನಿಮ್ಮಂತಹವರ ಒಡನಾಟ ನಮ್ಮ ಭಾಗ್ಯ....


    ಹುಟ್ಟುಹಬ್ಬದ ಶುಭಾಶಯಗಳು ಸಂಧ್ಯಾ....

    ReplyDelete
  10. ಶುಭಾಷಯಗಳು ಸಂಧ್ಯಾ

    ReplyDelete
  11. ಓದಿದ ಹರಸಿದ ಎಲ್ಲ ಬ್ಲಾಗ್ ಲೋಕದ ಮಿತ್ರರಿಗೂ ಧನ್ಯವಾದಗಳು ಮತ್ತೊಮ್ಮೆ ಎಸ್ ಪಿ ಗೆ ಹುಟ್ಟು ಹಬ್ಬದ ಶುಭಾಶಯಗಳು

    ReplyDelete
  12. ಹಾಡು, ಫೋಟೋ ಮತ್ತೆ ಸಂದರ್ಭ ಲಿಂಕ್ ಮಾಡುವ ರೀತಿ ನನಗೆ ತುಂಬ ಇಷ್ಟ ಆಯ್ತು ಶ್ರೀಕಾಂತಣ್ಣ:)

    ReplyDelete
  13. ಅಣ್ಣಯ್ಯ.. ಕಣ್ಣುಗಳು ತೇವವಾಗಿದ್ದು ನಿಜ..
    ಇದಕ್ಕಿಂತ ಅಮೂಲ್ಯ ಗಿಫ್ಟ್ ಬೇರೆ ಯಾವುದೂ ಇರಲಾರದು ನಮ್ಮ ಸಂಧ್ಯಾಗೆ.. :)

    ReplyDelete