ಕಣ್ಣು ಬಿಟ್ಟು ನೋಡಿದೆ..ಸಂಜೆ ಸುಮಾರು ಏಳು ಘಂಟೆಯಾಗಿತ್ತು..
ಸ್ವಲ್ಪ ಘಂಟೆಗಳ ಹಿಂದೆ ಬಾಲು ಸರ್ ಕರೆ ಮಾಡಿದ್ದರು ಅವರ ಹತ್ತಿರ
ಮಾತಾಡಿದ್ದೆ...
ನಿದ್ದೆ ಮಾಡಲು ಮನಸಿಲ್ಲದೇ ಅಣ್ಣಾವ್ರ ಮೊದಲ ಖಳ ಪಾತ್ರದ ಹಾಗು ಮೊಟ್ಟ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಅಭಿನಯಿಸಿದ "ಸತಿ ಶಕ್ತಿ" ಚಿತ್ರವನ್ನು ಮೊದಲ ಬಾರಿಗೆ ಚಿತ್ರ ನೋಡ್ತಾ ಇದ್ದೆ..
"ಶ್ರೀಕಾಂತ...ಶ್ರೀಕಾಂತ.." ಯಾರೋ ಕೂಗಿದಂತಾಯಿತು..
ಆಚೆ ಈಚೆ ನೋಡಿದೆ...ಕಾಣಲಿಲ್ಲ..ಅಣ್ಣನ ಫೋಟೋ ನಗುತಿರುವಂತೆ ಭಾಸವಾಯಿತು..ಮತ್ತೊಮ್ಮೆ ನೋಡಿದೆ..
"ಶ್ರೀಕಾಂತ...ಕಿಂಕರರ ಜೊತೆ ಪಯಣಿಸುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ಅವರ ಲ್ಯಾಪ್ ಟಾಪ್ ನಲ್ಲಿ ನಿನ್ನ ಬ್ಲಾಗ್ ಅಪ್ಪನಿಲ್ಲದ ಗಣಪನ ಹಬ್ಬ! ತೋರಿಸಿದರು....ಯಾಕೋ ಮನಸು ಭಾರವಾದಂತೆನಿಸಿತು...ಮನೆಗೆ ಹೋಗು..ಗಣಪನನ್ನು ಮನೆಗೆ ಕಳಿಸಿದ್ದೇನೆ" ಎಂದ ಹಾಗೆ ಅನಿಸಿತು..
ತಡ ಮಾಡದೆ ಕ್ಯಾಮೆರ ತೆಗೆದುಕೊಂಡು ಓಡಿದೆ..ಆಶ್ಚರ್ಯ ಕಾದಿತ್ತು..ಅಮ್ಮನ ಮನೆಯ ಬಾಗಿಲಿನಲ್ಲಿ ಆಳೆತ್ತರದ ಗಣಪ ತಣ್ಣಗೆ ಚಳಿಯಲ್ಲಿ ಚಾದರ ಹೊದ್ದುಕೊಂಡು ಕುಳಿತಿದ್ದದು ಕಣ್ಣಿಗೆ ಬಿತ್ತು.." ಕಣ್ಣು ಉಜ್ಜಿಕೊಂಡೆ..ಉಹುಂ...ಉಹುಂ..
"ಕನಸೋ ಇದು ನನಸೋ ಇದು.." ಎದುರು ಅಂಗಡಿಯಲ್ಲಿ ಹಾಡು ತೇಲಿ ಬರುತಿತ್ತು...
ಗಣಪ ಅಚ್ಚುಕಟ್ಟಾಗಿ ಮನೆಯ ಕಾಂಪೌಂಡ್ನಲ್ಲಿ ಕುಳಿತಿದ್ದಾ..ಮನಸಿಗೆ ಬಹಳ ಸಂತಸವಾಯಿತು..
ಅಮ್ಮ "ಬಾ..ಬಾ..ನೋಡು ಗಣೇಶ ಎಷ್ಟು ಚೆನ್ನಾಗಿದೆ ಗೊತ್ತ..?" ಅಂದ್ರು..ಸರಿ ಗಣಪನ ಅನಾವರಣಕ್ಕೆ ಕಾಯುತ್ತ ಕುಳಿತೆ..
ಬೀದಿಯ ಹುಡುಗರೆಲ್ಲ ಬಂದರು..."ಗಣಪತಿ ಬಪ್ಪ ಮೌರ್ಯ...ಮಂಗಳ ಮೂರ್ತಿ ಮೌರ್ಯ.."ಧ್ವನಿ ತಾರಕದಲ್ಲಿತ್ತು..ನಿಧಾನಕ್ಕೆ ಎಲ್ಲ ಹುಡುಗರು ಕೈ ಹಾಕಿ ಗಣಪನನ್ನು ಮೇಲಕ್ಕೆ ಎತ್ತಿ ನಿಧಾನಕ್ಕೆ ಅದರ ಪೀಠಕ್ಕೆ ವರ್ಗಾಯಿಸಿದರು..
ಅಮ್ಮ..ಗಣಪನ್ನು ನೋಡುತ್ತಾ ಸುಮ್ಮನೆ ನಿಂತು ಬಿಟ್ಟಿದ್ದರು..ಅವರ ತಲೆಯೊಳಗೆ ಗತ ಕಾಲದ ಚಕ್ರ ಓಡುತ್ತಿತ್ತು..ಮುಖ ಭಾವ ಹೇಳುತಿತ್ತು......ಅವರು ಇದ್ದಾಗ ಹೆಂಗೆ ಇತ್ತು..ಹೀಗೆ ಯೋಚನಾ ಲಹರಿ ಸಾಗಿತ್ತು..
ಅಲ್ಲಿದ್ದ ಒಬ್ಬ ಹುಡುಗನನ್ನ ಕರೆದು "ನವೀನ..ಗಣಪನ್ನು ಒಮ್ಮೆ ತೋರಿಸಿ ಫೋಟೋ ತಗೊಳ್ತಾನೆ" ಅಂದ್ರು
ಹುಡುಗರೆಲ್ಲ.."ಬನ್ನಿ ಆಂಟಿ...ಒಳಗೆ ಬನ್ನಿ ಗಣಪನ್ನು ತೋರಿಸುತ್ತೇವೆ.." ಅಂದವು
ಗಣಪನ ಚಿತ್ರ ತೆಗೆದ ಮೇಲೆ..ಆ ಹುಡುಗರನೆಲ್ಲ..ನಿಲ್ಲಿಸಿ ಒಂದು ಫೋಟೋ ತೆಗೆದೇ..
ನಂತರ ಹುಡುಗರೆಲ್ಲ.."ಸಾರ್..ನೀವು ಅಮ್ಮನ ಜೊತೆ ನಿಲ್ಲಿ.. ನಿಮ್ಮ ಕ್ಯಾಮೆರಾದಲ್ಲಿ ಒಂದು ಫೋಟೋ ತೆಗೆಯುತ್ತೇನೆ ಅಂದ್ರು.."
ಒಂದು ಕ್ಷಣ..ಭಾವುಕನಾದೆ..ಅಮ್ಮ ಬರೋಲ್ಲ ಅಂದ್ರು..ನಾನು ಬಿಡಲಿಲ್ಲ...ಅದರ ಪ್ರಯತ್ನ..ಅಣ್ಣ ಕಳಿಸಿದ ಗಣಪನ ಜೊತೆ ಅಮ್ಮ ಮತ್ತು ನಾನು...
ಖುಷಿ ಪಟ್ಟು..ಕಣ್ಣೀರನ್ನು ಹಾಗೆಯೇ ಇಂಗಿಸಿಕೊಂಡು..ಮನೆಗೆ ಬಂದೆ...
ಅಣ್ಣ ಗೋಡೆಯಲ್ಲಿ ನಗುತ್ತ ನಿಂತಿದ್ದರು..
"ನೋಡಿದೆಯ..ನೀನು ಅಪ್ಪನಿಲ್ಲದ ಗಣಪ ಎಂದೇ..ನಾನು ಗಣಪನನ್ನೆ ನನ್ನ ಮನೆಗೆ ಕಳಿಸಿದೆ" ಆನಂದ ಭಾಷ್ಪ ಜಿನುಗುತ್ತಿರುವಂತೆ ಭಾಸವಾಯಿತು...!!!
Modalina mooru photos nodidaaga enu evru Ganeshananna muchhi bittiddare ankonde. Konege Ganeshana Dharushanavaaythu:)
ReplyDeleteನಿಜ ಶ್ರೀ...
ReplyDeleteಕೆಲವರು ಭೌತಿಕವಾಗಿ ದೂರವಾದರೂ..
ನಮ್ಮೊಂದಿಗೆ..
ನಮ್ಮ ಹತ್ತಿರ ಯಾವಾಗಲೂ ಇದ್ದುಬಿಡುತ್ತಾರೆ...
ನಿಮ್ಮ ಅಮ್ಮ ನಿಮ್ಮ ತಂದೆಯವರನ್ನು ಎಷ್ಟು ಮಿಸ್ ಮಾಡಿಕೊಂಡಿರಬಹುದು....
ನಿಜ ಹೇಳ್ತಿನಿ..
ಈ ಅಗಲಿಕೆ ಇರಬಾರದು ಅಲ್ವಾ?
ಲೇಖನ ಓದಿ ಹಳೆಯ ನೆನಪುಗಳು ಮತ್ತೆ ಉಕ್ಕಿದವು .....
ಅಮ್ಮನಿಗೆ ನನ್ನ ನಮಸ್ತೆ ತಿಳಿಸಿ....
ಸಾರ್, ಯಾವುದೋ ನೆನಪುಗಳನ್ನು ಮೀಟಿ ಹಾಕಿ, ಸುಮ್ಮನೆ ಅಳಿಸುತ್ತೀರಿ ನೀವು.
ReplyDeleteನನ್ನ ಅಪ್ಪ ತೀರಿಕೊಂಡಾಗ ನನಗೆ ೩ ವರ್ಷ ಅದಕೆ ಅವನ ದನಿ ಚಹರೆ ತಾಕು ನನಗೆ ಅಪರಿಚಿತ. ಹಾಗಾಗಿ ನನಗೆ ’ಪಿತೃ ಶೋಕಂ ನಿರಂತರಂ’.
ಇನ್ನು ನೀವು ನಿಮ್ಮ ತಂದೆಯವರನ್ನು ಬಹಳ ಹತ್ತಿರದಿಂದ ಕಂಡವರು, ಒಡನಾಡಿದವರು ಅವರ ಅಗಲಿಕೆ ನಿಮ್ಮ ಮನಸಿನಲ್ಲಿ ಮಾಡಿಟ್ಟು ಕೊರೆಯುತ್ತಿರುವ ನೋವು ನನಗೆ ಅರ್ಥವಾಗುತ್ತದೆ.
ಗಣಪ ತುಂಬಾ ಮುದ್ದಾಗಿದ್ದಾನೆ, ಆತನ ನಗುವು ನಿಮ್ಮ ತಂದೆಯವರ ನಗುವಿಗೆ ಹತ್ತಿರವಿದ್ದೀತು. ಇನ್ನು ನಿಮ್ಮ ತಾಯಿಯವರು ತುಂಬಿದ ಕೊಡ ಅನಿಸುತ್ತದೆ. ಮುಖದಲ್ಲಿ ದೈವಿಕ ಕಳೆ.
ಲೇಖನ ಓದಿ ಏನ್ ಹೇಳ್ಳಿ ಗೊತಾಗ್ತಿಲ್ಲಾ ಶ್ರೀ...ಇದು ಕಣ್ಣಿಗಿಂತ ಮನಸ್ಸನಲ್ಲಿ ಓದಿಕೊಂಡು ಹೋಗುವ ಲೇಖನ ಅಷ್ಟೇ....
ReplyDeleteನಮಸ್ತೆ
ಓದಿ ಮನಸ್ಸು ಭಾರ ಆಯಿತು ಸರ್... ನಿಮ್ಮ ತಂದೆ ನಿಮ್ಮ ಜೊತೆ ಭೌತಿಕವಾಗಿ ಇರದೇ ಇದ್ದರೂ ಮಾನಸಿಕವಾಗಿ ನಿಮ್ಮ ಜೊತೆಯಲ್ಲೇ ಇರುತ್ತಾರೆ....ಅವರ ಆಶೀರ್ವಾದ ಸದಾ ನಿಮ್ಮ ಮೇಲೆ ಇದ್ದೇ ಇರುತ್ತದೆ...
ReplyDeleteಧನ್ಯವಾದಗಳು ಎಸ್. ಎಸ್. ನಾವು ಕಣ್ಣು ಮುಚ್ಚಿಕೊಳ್ಳಬಹುದು ಆದ್ರೆ ದೇವರ ಕಣ್ಣು ಸದಾ ತೆರೆದೇ ಇರುತ್ತೆ ಅಲ್ವೇ..
ReplyDeleteಧನ್ಯವಾದಗಳು ಪ್ರಕಾಶಣ್ಣ..ಆ ಅಗಲಿಕೆಯ ನೋವು ಪದಗಳಲ್ಲಿ ಹೇಳುವುದಕ್ಕೆ ಸಾಕಾಗುವುದೇ ಇಲ್ಲ..ನಿನ್ನೆ ಅಮ್ಮ ಹೇಳ್ತಾ ಇದ್ರೂ..ನೀನು ಬ್ಲಾಗ್ ಬರೆದ ಮೇಲೆ ನಾನು ಯೋಚಿಸಿದೆ..ಏನು ಮಾಡಲಿ ಅಂತ..ಕಡೆಗೆ .ನಾನು ಗಣಪತಿಗೆ ಪ್ರಸಾದ ಅಂತ ಪುಳಿಯೋಗರೆ, ಕಡ್ಲೆ ಹಿಟ್ಟು ಮಾಡಿ ಅಲ್ಲಿಗೆ ಕೊಟ್ಟು ಬಂದೆ ಅಂತ..ಒಂದು ಕ್ಷಣ ಭಾವುಕವಾಗಿತ್ತು ಮನಸು..
ReplyDeleteಖಂಡಿತ ನಿಮ್ಮ ನಮನಗಳು ಮಾತೃಶ್ರೀಯನ್ನು ತಲುಪುತ್ತೆ..
ನಿಮ್ಮ ಭಾವುಕ ಮನಸನ್ನು ಕೊಂಚ ಅಳಿಸಿದ್ದಕ್ಕೆ ಕ್ಷಮೆ ಇರಲಿ..ಈ ಬ್ಲಾಗ್ ಅಚಾನಕ್ಕಾಗಿ ಹೊಳೆದದ್ದು..ಪೂರ್ವ ನಿಯೋಜಿತ ಅಲ್ಲ..ಮನೆಯ ಮುಂದೆ ಗಣಪ ಬಂದು ಕೂತಾಗ ತಕ್ಷಣ ಹೃದಯದಿಂದ ಕೀಲಿ ಮನೆಗೆ ಇಳಿಸಿದೆ..ನಿಮ್ಮ ಮನಸ್ಥಿತಿ ಅರ್ಥವಾಗುತ್ತದೆ..ಸಕಲ ಬೇಸರಗಳಿಗೂ ಸರಸಿಜಾಕ್ಷನೆ ಮದ್ದು ತರಬಲ್ಲ... ನಿಮ್ಮ ಅಭಿಮಾನಪೂರಿತ ಮಾತುಗಳಿಗೆ ನನ್ನ ಮನಸು ನಮನ ಹೇಳುತ್ತಿದೆ...
ReplyDeleteಧನ್ಯವಾದಗಳು ಚಿನ್ಮಯಿ ಭಟ್..ಮನಸಲ್ಲೂ ಪದಗಳು ಕೂತಾಗ..ಓದುವ ಸಂತಸ ಅನವರತ...
ReplyDeleteಧನ್ಯವಾದಗಳು ಅಶೋಕ್ ಸರ್...ನಿಮ್ಮ ಹಾರೈಕೆಗೆ ಚಿರ ಋಣಿ..
ReplyDeleteಆತ್ಮೀಯ ಶ್ರೀಕಾಂತ,
ReplyDeleteಚಂದದ ಫೋಟೋ ಜೊತೆಗೆ ಉತ್ತಮ ಪ್ರಸ್ತುತಿ.
ಧನ್ಯವಾದಗಳು ಚಿಕ್ಕಪ್ಪ.
ReplyDelete